Homeರಾಜಕೀಯ‘ನನಗೆ ಗುಂಡಿಟ್ಟಿದ್ದಕ್ಕೆ ನಾನು ಆತನನ್ನು ಕ್ಷಮಿಸಬಲ್ಲೆ. ಆದರೆ.......'

‘ನನಗೆ ಗುಂಡಿಟ್ಟಿದ್ದಕ್ಕೆ ನಾನು ಆತನನ್ನು ಕ್ಷಮಿಸಬಲ್ಲೆ. ಆದರೆ…….’

- Advertisement -
- Advertisement -

 

‘ಪರಶುರಾಮ ವಾಘ್ಮರೆ ನನ್ನನ್ನು ಕೊಂದ ವ್ಯಕ್ತಿ ಎಂದು ಹೇಳಲಾಗುತ್ತಿದೆ. ಅತ್ಯಂತ ನಿಷ್ಪಕ್ಷಪಾತ ತನಿಖೆ ನಡೆಯಲಿ ಎಂದು ಬಯಸುತ್ತೇನೆ. ಕೊಂದದ್ದು ಆತನೋ ಅಲ್ಲವೋ ಎಂಬ ಸಾಕ್ಷಿಯನ್ನು ಕೊಲೆಗೀಡಾದ ವ್ಯಕ್ತಿ ಹೇಳಲಾಗದು. ಹಾಗಾಗಿ ನನಗೆ ಗೊತ್ತಿರುವ ಸತ್ಯವನ್ನು ನಾನು ಹೇಳಲೂಬಾರದು. ತನಿಖೆ ನಡೆದು ಅದರಲ್ಲಿ ಸತ್ಯ ಹೊರಗೆ ಬರಲಿ. ಆದರೆ, ನಾನು ಕೆಲವು ಮಾತುಗಳನ್ನು ಹೇಳಲೇಬೇಕು. ಇಂದು ಆತನ ತಾಯಿ ರೋದಿಸುತ್ತಿರುತ್ತಾರೆ. ಮಗ ಏನು ಮಾಡಿರಬಹುದು ಎಂಬ ಕುರಿತು ಆಕೆಗೆ ಮಾಹಿತಿಯೂ ಇಲ್ಲದಿರಬಹುದು. ಅಂತಹ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಯಾವ ತಾಯಿಗೂ ಬರದಿರಲಿ ಎಂದು ನಾವು ಆಶಿಸಿದರೆ ಮಾತ್ರ ಇದು ಸರಿ ಹೋಗುವ ಖಾಯಿಲೆಯಲ್ಲ. ಬದಲಿಗೆ, ಸತ್ಯವನ್ನು ಸೂಕ್ತವಾದ ರೀತಿಯಲ್ಲಿ ವಿಶ್ಲೇಷಿಸಿ, ಕೊಲ್ಲುವ ಮನಸ್ಥಿತಿಯನ್ನು ಹುಟ್ಟು ಹಾಕುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಂಡು, ಆ ಜಾಗದಲ್ಲಿ ಪ್ರೀತಿಯನ್ನು ಬಿತ್ತಿದರೆ ಮಾತ್ರ ನಾವು ದೇಶವನ್ನು ಸುಭದ್ರವಾಗಿ ಕಟ್ಟಬಲ್ಲೆವು.

ಹಾಗಾಗಿಯೇ ನಾನೊಂದು ಮಾತನ್ನು ಇಲ್ಲಿ ಹೇಳಲೇಬೇಕು. ನನಗೆ ಗುಂಡಿಟ್ಟಿದ್ದಕ್ಕೆ ಆತನನ್ನು ನಾನು ಕ್ಷಮಿಸಬಲ್ಲೆ. ಆದರೆ, 2012ರ ಹೊಸ ವರ್ಷದ ಮುಂಜಾವಿನಲ್ಲಿ ಸಿಂಧಗಿಯಲ್ಲಿ ಈ 

ಪರಶುರಾಮ ವಾಘ್ಮರೆ ಮತ್ತು ಆತನ ಇತರ ಆರು ಸಂಗಡಿಗರು ಪಾಕಿಸ್ತಾನದ ಧ್ವಜವನ್ನು ಹಾರಿಸಿ, ಅದನ್ನು ಇನ್ನೊಂದು ಕೋಮಿನ ವಿರುದ್ಧ ಬಳಸಲು ಯತ್ನಿಸಿದರಲ್ಲಾ… ಅದನ್ನು ನಾನು ಕ್ಷಮಿಸಲಾರೆ.’

ಗೌರಿ ಲಂಕೇಶರು ಪತ್ರಿಕೆಯ ಸಂಪಾದಕೀಯವನ್ನು ಬರೆಯಲು ಸಾಧ್ಯವಿದ್ದಿದ್ದರೆ ಈ ರೀತಿ ಬರೆಯುತ್ತಿದ್ದರು ಎನಿಸುತ್ತದೆ.

ನೆನಪಿರಲಿ, ಅಂದು ರಾಜ್ಯದಲ್ಲಿ ಆಳ್ವಿಕೆ ನಡೆಸುತ್ತಿದ್ದದ್ದು ಬಿಜೆಪಿ ಸರ್ಕಾರ. ಹಾಗಾಗಿ ಸುಳ್ಳು ಕೇಸು ಹಾಕಿದರು ಎಂದು ಹೇಳಲಾಗದು. ತನಿಖೆ ನಡೆಸಿದ ಪೊಲೀಸರು ಘಟನೆ ನಡೆದ ಮೂರು ದಿನಗಳಲ್ಲಿ 6ಜನರನ್ನು ಬಂಧಿಸಿದರು ಮತ್ತು ನಂತರ ಇನ್ನೂ ಒಬ್ಬ ವ್ಯಕ್ತಿಯನ್ನು ಬಂಧಿಸಿ ನ್ಯಾಯಾಲಯದಲ್ಲಿ ಹಾಜರುಪಡಿಸಿದರು. ಇವರೆಲ್ಲರೂ ಪಾಕಿಸ್ತಾನದ ಧ್ವಜವನ್ನು ಹಾರಿಸಿದವರು ಮತ್ತು ಇವರು ಶ್ರೀರಾಮಸೇನೆಗೆ ಸೇರಿದವರು ಎಂದು ಹೇಳಿದರು. ಪಾಕಿಸ್ತಾನದ ಧ್ವಜ ಹಾರಿಸಿ, ಅದನ್ನು ಇನ್ನೊಂದು ಕೋಮಿನ ಜನರ ತಲೆಗೆ ಕಟ್ಟಲು ಇವರು ಯೋಜಿಸಿದ್ದರು. ಮರುದಿನವೇ ಸಿಂಧಗಿ ಬಂದ್‍ಗೆ ಕರೆಕೊಟ್ಟು ಪ್ರತಿಭಟನೆಯಲ್ಲಿ ಇವರೂ ಭಾಗಿಯಾಗಿದ್ದರು!

 

ಇದೇ ಅತ್ಯಂತ ಅಪಾಯಕಾರಿಯಾದ ಮತ್ತು ಆಘಾತಕಾರಿಯಾದ ಸಂಗತಿಯಾಗಿದೆ. ಆದರೆ ಇದಕ್ಕಿಂತ ಅಪಾಯಕಾರಿಯಾದ ಇನ್ನೊಂದು ಸಂಗತಿಯೂ ಇದೆ. ಅದೇನೆಂದರೆ, ಈ ಬಂಧನದ ನಂತರ ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪತ್ರಿಕಾಗೋಷ್ಠಿ ನಡೆಸಿ, ಈ ರೀತಿ ಬಾವುಟ ಹಾರಿಸಿದವರು ಶ್ರೀರಾಮಸೇನೆಯವರಲ್ಲ, ಆರೆಸ್ಸೆಸ್‍ನವರು ಎಂದು ಹೇಳಿದರು. ‘ಇವರು ಆರೆಸ್ಸೆಸ್‍ಗೆ ಸೇರಿದವರು ಎಂಬುದಕ್ಕೆ ನನ್ನಲ್ಲಿ ಪುರಾವೆ ಇದೆ. ಆಡಳಿತ ನಡೆಸುತ್ತಿರುವ ಬಿಜೆಪಿ ಪಕ್ಷದವರು ಆರೆಸ್ಸೆಸ್ ಹೆಸರು ಬರದಂತೆ ನೋಡಿಕೊಳ್ಳಲು ಶ್ರೀರಾಮಸೇನೆಯ ತಲೆಗೆ ಕಟ್ಟುತ್ತಿದ್ದಾರೆ’ ಎಂಬುದು ಅವರ ಆರೋಪವಾಗಿತ್ತು. ಶ್ರೀರಾಮಸೇನೆಯ ಮುಖಂಡರು ಸದರಿ ಆರೋಪಿಗಳು ಆರೆಸ್ಸೆಸ್‍ನವರು ಎಂದು ತೋರಿಸುವ ಚಿತ್ರಗಳನ್ನೂ ಬಿಡುಗಡೆ ಮಾಡಿದರು!!

ನಿಮಗೆ ಇನ್ನೂ ಒಂದು ಮಾತು ಹೇಳಬೇಕು. ಇದಾದ ನಂತರ ಅಂದು ಮಾಜಿ ಮುಖ್ಯಮಂತ್ರಿಗಳಾಗಿದ್ದ, ಇಂದು ಮುಖ್ಯಮಂತ್ರಿಗಳಾಗಿರುವ ಶ್ರೀ ಎಚ್.ಡಿ.ಕುಮಾರಸ್ವಾಮಿಯವರು ಖಚಿತ ಮಾತುಗಳಲ್ಲಿ ಇದನ್ನು ಪುಷ್ಟೀಕರಿಸಿದ್ದರು. ಅದೇ ಸಂದರ್ಭದಲ್ಲಿ ನಿಧನರಾಗಿದ್ದ ಮಾಜಿ ಮುಖ್ಯಮಂತ್ರಿ ಶ್ರೀ ಎಸ್.ಬಂಗಾರಪ್ಪನವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದ್ದರು. ‘ಈ ಕೃತ್ಯವನ್ನು ಆರೆಸ್ಸೆಸ್‍ನವರು ಮಾಡಿರುವ ಕುರಿತು ನನಗೆ ಮಾಹಿತಿಯಿದೆ. ಕೋಮು ದಳ್ಳುರಿ ಹಚ್ಚಲು ಇಂತಹ ಕೀಳುಮಟ್ಟದ ಕೃತ್ಯಕ್ಕೆ ಬಿಜೆಪಿ ಮತ್ತು ಆರೆಸ್ಸೆಸ್‍ನವರು ಇಳಿದಿರುವುದು ಖಂಡನೀಯ’ ಎಂದು ಹೇಳಿದ್ದರು.

ಸ್ನೇಹಿತರೇ,

ಗೌರಿಯವರನ್ನು ಗುಂಡಿಟ್ಟು ಕೊಂದದ್ದು – ಯಾವುದೇ ಮನುಷ್ಯರನ್ನು ಯಾರೇ ಕೊಲ್ಲುವುದು – ಅತ್ಯಂತ ಅಮಾನವೀಯವಾದ ಕೃತ್ಯ. ಅದನ್ನು ಖಂಡಿಸಬೇಕು; ನೆಲದ ಕಾನೂನಿನ ಪ್ರಕಾರ ತನಿಖೆ,ವಿಚಾರಣೆ ನಡೆದು ಶಿಕ್ಷೆಗೂ ಒಳಪಡಿಸಬೇಕು. ಆದರೆ, ತಾವೇ ಒಂದು ಕೃತ್ಯವನ್ನು ಮಾಡಿ, ಆ ಕೃತ್ಯವನ್ನು ಇನ್ನೊಂದು ಸಮುದಾಯದ ಮೇಲೆ ಹಾಕಿ, ಅವರನ್ನು ಬಂಧಿಸಿ ಎಂದು ಪ್ರತಿಭಟನೆ ಮಾಡಿ ದಳ್ಳುರಿ ಹಚ್ಚಲು ನೋಡುವುದಿದೆಯಲ್ಲಾ ಅದು ಕೊಲೆಗಿಂತ ಕಡಿಮೆಯಾದುದಲ್ಲ ಮತ್ತು ಇಂತಹದರ ಮೂಲಕ ಒಂದು ದೇಶವನ್ನೇ ದುರ್ಬಲಗೊಳಿಸುತ್ತಾ ಹೋಗುತ್ತಾರೆ. ಸುಳ್ಳಿನ ಮೇಲೆ ಸುಳ್ಳನ್ನು ಹೇಳಿ ಅದನ್ನೇ ಸತ್ಯವನ್ನಾಗಿಸುತ್ತಾ ಹೋಗುವುದರ ಕುರಿತು ದೇಶಪ್ರೇಮಿಗಳೆಲ್ಲರೂ ಅರಿತುಕೊಳ್ಳುವ ಸಂದರ್ಭ ಬಂದಿದೆ.

ಸ್ವತಃ ಆರೆಸ್ಸೆಸ್‍ನಲ್ಲಿದ್ದ, ಇಂದಿಗೂ ಆರೆಸ್ಸೆಸ್ ಪ್ರತಿಪಾದಿಸುತ್ತಿರುವ ದ್ವೇಷದ ರಾಜಕಾರಣವನ್ನೇ ಉಸಿರಾಗಿಸಿಕೊಂಡಿರುವ ಪ್ರಮೋದ್ ಮುತಾಲಿಕ್ ‘ಪಾಕಿಸ್ತಾನದ ಧ್ವಜ ಹಾರಿಸಿದವರು ಆರೆಸ್ಸೆಸ್‍ನವರೇ. ನನ್ನ ಹತ್ತಿರ ಸಾಕ್ಷಿಗಳಿವೆ’ ಎಂದಾಗಲೂ ಬಿಜೆಪಿ ಸರ್ಕಾರವು ಆ ತನಿಖೆಯನ್ನು ನಡೆಸಲಿಲ್ಲವೇಕೆ? ಅಂದು ಇದೇ ಮಾತುಗಳನ್ನು ಆಡಿದ ಶ್ರೀ ಎಚ್.ಡಿ.ಕುಮಾರಸ್ವಾಮಿಯವರು ಇಂದು ಮುಖ್ಯಮಂತ್ರಿಗಳಾಗಿದ್ದಾರೆ. ಇಂದಾದರೂ ಆ ತನಿಖೆ ನಡೆಯಬೇಕು ಎಂದು ನಾವು ಬಯಸುತ್ತೇವೆ.

ಪಾಕಿಸ್ತಾನದ ಧ್ವಜ ಹಾರಿಸಿದ ಕೇಸಿನಲ್ಲಿ ಸಿಕ್ಕಿ ಹಾಕಿಕೊಂಡವರು ಶ್ರೀರಾಮಸೇನೆಯವರಲ್ಲ, ಆರೆಸ್ಸೆಸ್‍ನವರು ಮತ್ತು ಇದನ್ನು ಬಿಜೆಪಿ ಮುಚ್ಚಿ ಹಾಕುತ್ತಿದೆ ಎಂದು ಬಹಿರಂಗವಾಗಿ, ಆರೆಸ್ಸೆಸ್‍ನ ಸಹವರ್ತಿಯೇ ಹೇಳಿದಾಗ ಬಿಜೆಪಿಯವರು ಮಾತೇ ಆಡಿರಲಿಲ್ಲ. ಇಂದೂ ಅವರು ಸುಮ್ಮನಿರಬಹುದು. ಆದರೆ ಪ್ರಜಾತಂತ್ರದಲ್ಲಿ, ಸತ್ಯದಲ್ಲಿ ನಂಬಿಕೆಯಿರುವ ಯಾರೂ ಸುಮ್ಮನಿರಬಾರದು. ಈ ಪ್ರಶ್ನೆಗಳನ್ನು ಕೇಳುತ್ತಿರಲೇಬೇಕು.

ಕೆಲವು ಘಟನೆಗಳು ನಡೆದಾಗ ಮಾಧ್ಯಮಗಳು ಅದರ ಒಳಹೊಕ್ಕು ನೋಡುವ ಕೆಲಸ ಮಾಡುತ್ತಾರೆ. ತುಂಬಾ ಒಳಹೊಕ್ಕು ನೋಡುವ ಅಗತ್ಯವಿಲ್ಲ. ಮೇಲೆ ಹೇಳಲಾದ ಸಂಗತಿಗಳು ಸೂರ್ಯಸ್ಪಷ್ಟವಾಗಿ ಕೇವಲ 6 ವರ್ಷಗಳ ಕೆಳಗೆ ಈ ರಾಜ್ಯದಲ್ಲೇ ನಡೆದಂಥವಾಗಿವೆ. ಇವು ಸುದ್ದಿಯಾಗದಿದ್ದರೆ, ಮಾಧ್ಯಮಗಳು ಏಕಪಕ್ಷೀಯವಾಗಿವೆ ಎಂದು ಅರ್ಥ. ಗೌರಿಯವರ ಕೊಲೆ ನಡೆದಾಗ ಕೆಲವು ಸಂಘಟನೆಗಳನ್ನೇ ಗುರಿ ಮಾಡಿ ಏಕೆ ಮಾತಾಡಲಾಗುತ್ತಿದೆ ಎಂದು ಕೆಲವರು ಕೇಳಿದ್ದರು. ಮೇಲಿನ ಎಲ್ಲಾ ಪುರಾವೆಗಳು ಆ ಸಂಘಟನೆಗಳತ್ತಲೇ ಬೆರಳು ತೋರಿಸುತ್ತಿವೆ. ಈಗಲಾದರೂ ಅವರೆಲ್ಲರೂ ಆ ಸಂಘಟನೆಗಳನ್ನು ಪ್ರಶ್ನಿಸುವ ಧೈರ್ಯ ಮತ್ತು ನಿಯತ್ತು ತೋರಿಸುತ್ತಾರೆಯೇ?

ಗೌರಿ ಲಂಕೇಶರು ಈ ನಾಡಿನ ಎಲ್ಲ ಬಗೆಯ ಜನಸಾಮಾನ್ಯರ ಸಂಕಷ್ಟಗಳಿಗೆ ಬರಹದಲ್ಲೂ, ಬದುಕಿನಲ್ಲೂ ಮಿಡಿದಂತಹ ದಿಟ್ಟ ಮಹಿಳೆ ಮತ್ತು ಪತ್ರಕರ್ತೆ. ಸತ್ಯವನ್ನು ನಿಷ್ಠುರವಾಗಿ ಬಯಲಿಗೆಳೆಯಬೇಕು ಮತ್ತು ಅದನ್ನು ಎಷ್ಟೇ ಬಲಿಷ್ಠರಾಗಿದ್ದರೂ ಅವರೆದುರು ಅದನ್ನು ಹೇಳಬೇಕು ಎಂಬುದು ಅವರ ಧ್ಯೇಯವಾಗಿತ್ತು. ಮೇಲೆ ಹೇಳಲಾಗಿರುವ ಸಂಘಟನೆಗಳು ಜನಸಾಮಾನ್ಯರ ಯಾವ ದಿನನಿತ್ಯದ ಸಮಸ್ಯೆಗೂ ಸ್ಪಂದಿಸದೇ, ಸುಳ್ಳಿನ ಮೇಲೆ ಸುಳ್ಳು ಹೇಳುತ್ತಾ ದ್ವೇಷ ಬಿತ್ತುವ ಕೆಲಸ ಮಾಡುತ್ತಿದ್ದಾಗ ಅದನ್ನೂ ಅವರು ಬಯಲಿಗೆಳೆಯುವ ಕೆಲಸ ಮಾಡಿದ್ದರು. ಇಂತಹವರನ್ನು ಬಿಟ್ಟರೆ ಮತ್ಯಾರೂ ಗೌರಿಯವರ ಶತ್ರುಗಳಾಗಿರಲಿಲ್ಲ. ಹಾಗಿದ್ದರೂ ತನಿಖೆಯನ್ನು ದಿಕ್ಕುತಪ್ಪಿಸುವ ಕೆಲಸವನ್ನು ಹಲವು ಶಕ್ತಿಗಳು ಪದೇ ಪದೇ ಮಾಡಿದ್ದರು. ಇದೀಗ ಪೊಲೀಸರು ತನಿಖೆಯನ್ನು ಮುಗಿಸಿ, ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದ ಮುಂದೆ ಇರಿಸಿದ್ದಾರೆ. ಈಗ ಮಾಡಬೇಕಿರುವ ಕೆಲಸವೇನೆಂದರೆ, ಯಾರು ಈ ವ್ಯಕ್ತಿಗಳ ತಲೆಯಲ್ಲಿ ದ್ವೇಷವನ್ನೂ, ಕೊಲೆ ಮಾಡುವ ಮನಸ್ಥಿತಿಯನ್ನು ತುಂಬಿದರೋ ಅವರತ್ತ ಗಮನ ಹರಿಸಬೇಕು. ಅಂತಹ ಸಂಘಟನೆಗಳ ಮೇಲೂ ಕ್ರಮವಾಗಬೇಕು; ಪ್ರಮುಖ ವ್ಯಕ್ತಿಗಳ ಮೇಲೂ ಕ್ರಮವಾಗಬೇಕು. ಆ ನಿಟ್ಟಿನಲ್ಲಿ ನಾವೆಲ್ಲರೂ ಜೊತೆಗೂಡಿ ಶ್ರಮಿಸೋಣ.

(ಅಂದು ಕನ್ನಡ ಪತ್ರಿಕೆಗಳು, ಇಂಗ್ಲಿಷ್ ಪತ್ರಿಕೆಗಳು, ವೆಬ್ ಪೋರ್ಟಲ್‍ಗಳು ಮಾತ್ರವಲ್ಲಾ ಬಿಬಿಸಿ ಸಹಾ ಇದನ್ನು ಸುದ್ದಿ ಮಾಡಿದ್ದವು. ಅವುಗಳ ಲಿಂಕ್‍ಗಳನ್ನು ಈ ಕೆಳಗೆ ಕೊಡಲಾಗಿದೆ. ಆಸಕ್ತರು ಓದಿಕೊಳ್ಳಬಹುದು.)

http://www.thehindu.com/news/national/pakistani-flag-hoisting-was-a-hindutva-plot-to-foment-strife-police-say/article2790960.ece

https://www.bbc.com/news/world-asia-india-16424473

http://www.daijiworld.com/news/newsDisplay.aspx?newsID=126614

https://timesofindia.indiatimes.com/city/hubballi/Accused-youths-dont-belong-to-Sene-Mutalik/articleshow/11394349.cms

https://www.indiatoday.in/mail-today/story/sri-ram-sene-activists-pakistani-flag-88639-2012-01-06

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...