Homeಅಂಕಣಗಳುನೀರನಡೆ | ಹುಡುಕಬೇಕಾದ ಹೊಸ ಹಾದಿ

ನೀರನಡೆ | ಹುಡುಕಬೇಕಾದ ಹೊಸ ಹಾದಿ

- Advertisement -
- Advertisement -

ಡಾ. ವಿನಯಾ ಒಕ್ಕುಂದ |

ಚುನಾವಣೆಯ ಫಲಿತಾಂಶ ಪ್ರಕಟವಾಯಿತು. ಚರಿತ್ರೆಯ ಅತ್ಯಂತ ನಿರ್ಣಾಯಕ ಕಾಲಘಟ್ಟದಲ್ಲಿ ಕರ್ನಾಟಕದ ಪ್ರಜ್ಞಾವಂತ ಸಮುದಾಯ ಸರಿಯಾದ ನಿರ್ಧಾರವನ್ನು ತೆಗೆದುಕೊಂಡಿತೇ? ಎಂಬ ಪ್ರಶ್ನೆ ಉಳಿಯಿತು. ಕನ್ನಡದ ಸಂಸ್ಕೃತಿ ಚಿಂತಕರಾಗಿದ್ದ ಡಿ.ಆರ್.ನಾಗರಾಜ ಹೇಳುತ್ತಾರೆ. “ಜನರಿಗೆ ಮಹಾ ಪ್ರಾಯೋಗಿಕವಾದ ನೈತಿಕ ಕ್ರಿಯಾಶೀಲತೆ ಅಂತಿಮವಾಗಿ ಇದ್ದೇ ಇರುತ್ತದೆ. ಆದರೆ ಜನರು ಅನೈತಿಕ ಭ್ರಷ್ಟತೆಗಳ ರಂಜಕ ಬೆಂಬಲಿಗರೂ ಆಗಬಲ್ಲರು. ಅಂಥ ಸ್ಥಿತಿಯಲ್ಲಿ ಜನರಿಗೆ ಕೊಲೆ ದರೋಡೆ ಪಾತಕತನಗಳೆಲ್ಲವೂ ಮನರಂಜನೆಗಳ ಹಾಗೆ ಕಾಣತೊಡಗುತ್ತದೆ.” ಈ ಮಾತು ಗಾಢವಾಗಿ ಕಲಕುತ್ತಿತ್ತು.

ಡಿ.ಆರ್.ನಾಗರಾಜ್

ಕಳೆದ ಐದು ವರ್ಷಗಳ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೆತಂದ ಜನಪ್ರಿಯವಾದರೂ ಜನಪರವಾದ ಯೋಜನೆಗಳು ನೆನಪಾದವು. ಅಧಿಕಾರ ವಹಿಸಿಕೊಂಡ ತಕ್ಷಣ ಘೋಷಿಸಿದ ಅನ್ನಭಾಗ್ಯಯೋಜನೆ, ಹಸಿವು-ಮುಕ್ತ ಕರ್ನಾಟಕದÀ ಕನಸು… ಯಾರು ಎಷ್ಟೇ ವ್ಯಂಗ್ಯ ಮಾಡಿದರೂ, ಅಂತಹ ಯೋಜನೆಗಳಿಗೆ ಹಿಂದೇಟು ಹಾಕದಿರುವ ದೃಢನಿರ್ಧಾರವನ್ನು ಸರ್ಕಾರ ಮಾಡಿತ್ತು. ಯೋಜನೆಗಳ ಫಲಾನುಭವಿ ಸಮುದಾಯ ಖಂಡಿತ ತಮ್ಮ ಕೈ ಹಿಡಿಯುತ್ತದೆ ಎಂಬ ಒಂದಿಷ್ಟು ಅಹಂಕಾರ ಮತ್ತು ಆತ್ಮವಿಶ್ವಾಸಗಳಲ್ಲಿ ಸಿದ್ದರಾಮಯ್ಯ ಇದ್ದರು. ಫಲಿತಾಂಶ ನೋಡುವಾಗ, ಜನರ ಮೇಲಿಟ್ಟ ಈ ನಂಬಿಕೆ ಸುಳ್ಳಾಗಿರುವುದು ಕಾಣುತ್ತಿದೆ.

ಚುನಾವಣೆಯ ರಿಸಲ್ಟ್ ದಿನ ನಾನು ನಮ್ಮೂರಿನಲ್ಲಿದ್ದೆ. ಕಡಲತಡಿಯ ನಮ್ಮೂರಿನದು ಬೆಸೆದ ಬದುಕು. ಊರುಬಿಟ್ಟು ದೂರ ಇರುವ ವರ್ಷಕ್ಕೊಂದಾವರ್ತಿ ಕಾಣಿಸಿಕೊಳ್ಳುವ ಮಕ್ಕಳು ಯಾರ ಮನೆಗೇ ಬಂದರೂ ಊರು ಗಲಗಲ ಅನ್ನುತ್ತದೆ. ಅಂಬಿಗರ ಕೇರಿಯಿಂದ ಫಳಫಳ ಹೊಳೆವ ಮೀನಬುಟ್ಟಿ, ಹಾಲಕ್ಕಿ ಒಕ್ಕಲಿಗರ ಕೇರಿಯಿಂದ ದಣೇ ಆಗ ಕಿತ್ತು ನೀರಹೊಂಡದಲ್ಲದ್ದಿ ಬಂದ ತರಕಾರಿ ಬುಟ್ಟಿ. ಆ ಮನೆ ಅಂಗಳಕ್ಕಿಳಿದು ಬಿಡುತ್ತವೆ. ನಾವಿದ್ದ ಜಾಗೆ ಬಿಡುವಾಗ ಇವರ್ಯಾರು ನೆನಪಾಗದೆ ಇವರಿಗಾಗಿ ಏನೂ ಒಯ್ಯದೆ ಹೋಗಿಬಿಟ್ಟವರು ಕಂಗಾಲಾಗುತ್ತೇವೆ. ನಮ್ಮ ಮನಸ್ಸಿನ ಭಣಭಣಕ್ಕೆ ನಾವೇ ಗಾಬರಿ ಬೀಳುವಂತೆ. ಮೊನ್ನೆಯೂ ಹಾಗಾಯಿತು. ಬೆಳಗ್ಗಿನ 10 ಗಂಟೆಯ ಹೊತ್ತಿಗೆ, ‘ಹೋಯ್‍ತಂಗಿ, ಯಾವಾಗ ಬಂದೆ’-ಅನ್ನುತ್ತ ತಳತಳ ಹೊಳೆವ ಮೀನು ಬುಟ್ಟಿ ಹಿಡ್ದು, ‘ಒಳಗ್ ತಕಂಡ ಹೋಗು ಹಿಡಿ’ ಅನ್ನುತ್ತ; ಎಷ್ಟು ಏನು ಎಂಬ ಯಾವ ರೇಟಿನ ಉಸಾಬರಿಗೂ ಹೋಗದ ಹಾಗೆ ಹೊರಡಲು ಅನುವಾದಳು ಅಂಬೇರ ಶಾಂತಿ. ಟಿ.ವಿ.ಯಲ್ಲಿ ‘ಸಿದ್ರಾಮಯ್ಯ ಹಿನ್ನಡೆ’ ಅಂತ ಬರುತ್ತಿತ್ತು. ‘ಶಾಂತಿ, ನೀವೆಲ್ಲ ಸಿದ್ರಾಮಯ್ಯನ ಪಕ್ಷಕ್ಕೆ ವೋಟು ಹಾಕಿದ್ರಾ ಇಲ್ವಾ? ಅಂತ ಕೇಳಿದ್ದೆ ಲೋಕಾಭಿರಾಮವಾಗಿ. ‘ಇಲ್ರಾ„’ ಅಂದಳು. ಸಹಜ ಕೇಳಿದವಳು ಗಾಬರಿಯಾದೆ. ಸಾಂಪ್ರದಾಯಿಕವಾಗಿ ಇವರೆಲ್ಲ ಆ ಪಕ್ಷದ ಮತದಾರರು ಮತ್ತು ಹತ್ತೆಂಟು ಯೋಜನೆಗಳ ಫಲಾನುಭವಿಗಳು. ಯಾಕೇ? ಎಂದೆ. ‘ನಮ್ಮ ಜಾತಿ ಪೋರನ ಹೊಡ್ದು ಕೊಂದಿರಕಡಾ-ಆದ್ರೂ ಆ ಸಿದ್ರಾಮಯ್ಯ ಒಂದ್ ಮಾತೂ ಹೇಳ್ನೆಲಾ ಕಡಾ. ಗುತ್ತಿತ್ರಾ?’ ಎಂದು ತಿರುಗಿ ಪ್ರಶ್ನಿಸಿದಳು. ಅವಳು ಪರೇಶ ಮೆಸ್ತಾನ ಸಾವಿನ ಸುದ್ದಿ ಪ್ರಸ್ತಾಪಿಸಿದ್ದಳು. ಅದು ಹಾಗಲ್ಲ ಮಾರಾಯ್ತಿ… ಎಂದು ಅವಳ ಮನಸ್ಸಿನಲ್ಲಿ ಬರೆದ ಬರಹ ಅಳಿಸಿ, ಮತ್ತೆ ಬೇರೆ ಬರೆಯಲು ಅವಳ ಬುಟ್ಟಿಯ ಮೀನು ಪುರಸೊತ್ತು ಕೊಡಲಿಲ್ಲ. “ಹಾಳಾಗ್ಲಿ ತಂಗಿ ಆ ಉಸಾಬರಿ… ನೀ ಹ್ಯಾಂಗಿವೆ? ಬರೂದೇ ಅಪರೂಪಾಯ್ತಲೆ” ಅನ್ನುತ್ತ ನಡೆದಳು.

ಬಹುಪಾಲು ದುಡಿವ ವರ್ಗದ ಸಾಮಾನ್ಯ ಜನರೇ ತುಂಬಿರುವ ಸಮಾಜದಲ್ಲಿ, ಜನರ ಮನಸ್ಸಿನಲ್ಲಿ ವಿಷಾನಿಲ ತುಂಬಿದರೆ… ಏನು ಆಗಬಹುದೋ ಅದು ಆಗುತ್ತಿದೆ. ಪರೇಶ ಮೆಸ್ತಾ ಎಂಬ ಎಳೆಯ ಹುಡುಗನ ಅನ್ಯಾಯದ ಸಾವಾಗಿದೆ. ನಿಜಕ್ಕೂ ಅದು ಹತ್ಯೆಯಾಗಿದ್ದರೆ, ಹತ್ಯೆ ಮಾಡಿದವರಿಗೆ ಶಿಕ್ಷೆ ಆಗಲೇಬೇಕು. ಪ್ರಕರಣ ಸಿಬಿಐನಲ್ಲಿದೆ. ಆದ್ರೆ ಊರೂರುಗಳಲ್ಲಿ ಆ ಹುಡುಗನ ಕಟೌಟುಗಳು, ಪ್ರಚೋದಕ ಬರಹಗಳು ನೀತಿಸಂಹಿತೆ ಜಾರಿಯಾಗುವವರೆಗೂ ರಾರಾಜಿಸಿದವು. ಕಾನೂನು ಉಲ್ಲಂಘನೆಯ ಇಂತಹ ಕ್ರಮಗಳನ್ನು ಸರ್ಕಾರ ನಿರ್ಲಕ್ಷಿಸಿತು. ಚುನಾವಣೆಯ ಹಿಂದಿನ ದಿನ ಬಹಿರಂಗ ಪ್ರಚಾರ ಮತ್ತು ಜಾಹೀರಾತುಗಳಿಗೆ ತಡೆಬಿದ್ದ ಮಾರನೆಯ ದಿನವೂ ಬಹುತೇಕ ಎಲ್ಲ ಕನ್ನಡ ಇಂಗ್ಲಿಷ್ ದಿನಪತ್ರಿಕೆಗಳ ಮೊದಲಿಡೀ ಪುಟದಲ್ಲಿ ಒಂದು ಪಕ್ಷದ ಜಾಹೀರಾತು ರಾರಾಜಿಸಿತು. ಇದು ಮುಖ್ಯ ವಿಷಯ ಅನ್ನಿಸದಷ್ಟು ರಾಜಾರೋಷವಾಗಿ ಕಾನೂನು ಉಲ್ಲಂಘನೆ ನಡೆಯಿತು. ಒಂದು ಪಕ್ಷದವರನ್ನು ಗುರಿಯಾಗಿಟ್ಟುಕೊಂಡು ಚುನಾವಣೆಯ ಹಿಂದಿನ ದಿನದವರೆಗೂ ಐಟಿ ದಾಳಿ ನಡೆಯಿತು. ಇನ್ನೊಂದು ಪ್ರಬಲ ಪ್ರತಿಸ್ಪರ್ಧಿ ಪಕ್ಷದವರು ಶುದ್ಧಹಸ್ತರು. ಅವರ ಬಳಿ ಭ್ರಷ್ಟ ಹಣದ ವಹಿವಾಟು ನಡೆಯಲೇ ಇಲ್ಲವೆಂದು ಬಿಂಬಿಸುವಷ್ಟು.

ಕೋಮು ವಿದ್ರೋಹಕ್ಕೆ ಬಳಕೆಗೊಂಡ ಪರೇಶ್ ಮೇಸ್ತನ ಸಾವು

‘ತೊಂಡೆಕಾಯಿ ಲಾಯಕ್ಕೀತು. ನಿಮ್ಮೂರಲ್ ಸಿಗಾಕಲಾ. ತಕಂಡ ಹೋಗ್ ಮಗಾ’ ಎಂಬ ಅಕ್ಕರಾತಿಯ ಸ್ವರದೊಂದಿಗೇ ನಮ್ಮೂರ ತುಳಸಜ್ಜಿ ಬಂದಳು. ಅವಳ ಹಾಲಕ್ಕಿ ಒಕ್ಕಲಗಿತ್ತಿಯ ನಿಲುವಿಗೆ ಕ್ಯಾಮರಾ ಹಿಡಿದು ಓಡಿಬಂದಳು ಮಗಳು. ‘ಫೋಟೊವಾ? ಇಕಾ’ ಅಂತ ಜಬರ್ದಸ್ಥ ಫೋಸು ಕೊಟ್ಟಳು. ತಲೆಮೇಲೆ ಸಿಂಬಿ ಇಟ್ಟುಕೊಂಡೇ ನಿಂತಳು. ನೀನೂ ಬಾ ಅಂತ ನನ್ನೂ ಎಳಕೊಂಡಳು. ‘ಸಿಂಬಿ ಇಟ್ಟಕಂಡ್ರೆ ತಲಿ ಹಣ್‍ಕೂದ್ಲು ಕಾಣುಕಲಾ. ನೋಡು ಹ್ಯಾಂಗ್ ಬಂದೀದು… ಎಂದು ಜೀವತುಂಬಿ ನಕ್ಕಳು. ವೋಟಿನ ಮಾತಾಡಿದರೆ ತುಳಸಜ್ಜಿ ಕೊಟ್ಟ ಸ್ಪಷ್ಟೀಕರಣವೇ ಬೇರೆ.“ಮನೀಗೆ ಒಬ್ನೇ ಯಜಮಾನ ಮನಸ್ಯಾ ಇರಾಕು ಹೌದಾ. ಅಂವ ಕೊಟ್ಟೀನಕಂಡಾ. ಇವ್ರು ಹಂಚತೀರಕಂಡಾ. ಕೊಟ್ಟವರಿಗೆ ಹಾಕಾಕೋ… ಹಂಚೋರಿಗೆ ಹಾಕಾಕೋ…” ಎಂದು ನನ್ನೇ ದಂಗುಬಡಿಸಿದಳು. ತುಳಸಜ್ಜಿಯ ಪ್ರಕಾರ ಮೋದಿ ಎಂಬ ದೇವರು ಎಲ್ಲವನ್ನೂ ಕರುಣಿಸುತ್ತಿದ್ದಾನೆ. ಆ ಕರುಣೆಯ ಪ್ರಸಾದವನ್ನು ಮುಖ್ಯಮಂತ್ರಿಯೋ ಮತ್ತ್ಯಾರೋ ಹಂಚುತ್ತಾರೆ. ಜನರು ಪ್ರಸಾದ ಕರುಣಿಸುವ ದೇವರನ್ನು ಆರಾಧಿಸಬೇಕೋ, ಪ್ರಸಾದ ಹಂಚುವ ಪೂಜಾರಿಯನ್ನೋ? ತುಳಸಜ್ಜಿಯಂಥವರ ತಲೆಯಲ್ಲಿ ಹೀಗೆ ಅಚ್ಚೊತ್ತಿಸಿದ ಅಭಿಪ್ರಾಯವನ್ನು ಯಾವ ಕೈಯಿಂದ ಅಳಿಸಲಿ? ತಿಳಿಯಲಿಲ್ಲ. ಪೇಪರು, ಟಿ.ವಿ. ಉಸಾಬರಿಗೆ ಹೋಗದ ಈ ದುಡಿವ ಹೆಣ್ಣಿನ ಮನಸ್ಸಿನಲ್ಲಿ ಸುಳ್ಳು ಅಭಿಪ್ರಾಯವನ್ನು ಸರಿ ಎಂಬ ಧಿಮಾಕಿನಲ್ಲಿ ವ್ಯವಸ್ಥಿತವಾಗಿ ಹರಡಿದ ನೆಟ್‍ವರ್ಕ್ ಬಗ್ಗೆ ಗಾಬರಿ ಬಿದ್ದಿದ್ದೆ.

ಇನ್ನುಳಿದ ನಮ್ಮೂರು… ನಿವೃತ್ತ ಮಾಸ್ತರ ಮಂದಿಯಿಂದ ತುಂಬಿದ ಹೈಜಾನಿಕ್-ಹೈಟೆಕ್ ವ್ಯವಸ್ಥೆಯಿರುವ ವೃದ್ಧಾಶ್ರಮದಂತಿದೆ. ಬೆಳಗಿನ ತಿಂಡಿಗೆ ಪೇಪರ್, ಮಧ್ಯಾಹ್ನದೂಟಕ್ಕೆ ಟಿ.ವಿ. ಸುದ್ದಿ ನೋಡುವ ಮಧ್ಯಮ ವರ್ಗದ ಗೌರವಾನ್ವಿತರ ಮನಸ್ಸಿನ ಚಿಂತನೆಗಳು ಈ ಎರಡು ಗಡಿಗಳಾಚೆ ಎಂದೂ ಇಣುಕುವುದಿಲ್ಲ. ಈ ಮಾಧ್ಯಮಗಳೇ ಬಹುತೇಕ ರಾಜಕೀಯ ಪಕ್ಷ-ಸಿದ್ಧಾಂತಗಳಿಗೆ ಮಾರಿಕೊಂಡಿವೆ ಎಂಬುದು ಅವರೊಳಗೆ ಇಳಿಯುವುದಿಲ್ಲ. ನಮ್ಮೂರ ಚಹದಂಗಡಿಯ ಕಿಣಿ ಈಗಲೂ ಸೈಕಲ್ಲಿನಲ್ಲೇ ಓಡಾಡುವುದು. ಹಿಂದಿನ ಮನೆಯ ಬಾಗಿಲಲ್ಲಿ ನಿಂತ ಅವನ ಜರ್ಬಿನ ಮಾತು ಕೇಳಿಸ್ತಿತ್ತು. “ಹೋ ಮಾಸ್ತರೆ… ನಾಳೆ ನಾನೂ ಹೊಂಟೆ ಪ್ರಮಾಣವಚನದ ಕಾರ್ಯಕ್ರಮಕ್ಕೆ. ಪೆಟ್ಟಿಗಿ-ಕೀಲಿ ಎರಡೂ ನಮ್ಮಕಡೆಗೇ ಬಂತಲ್ರೋ…” ಎನ್ನುತ್ತಿದ್ದ. ಅವನ ಅಂಗಡಿಯ ಉಂಡಿ-ಮೈಸೂರ ಪಾಕಗಳಿಗೆ ಮಾಪಿಳ್ಳೆ ಮಕ್ಕಳೇ ಮುಖ್ಯ ಗಿರಾಕಿಗಳು. ಆದರವನಿಗದು ಮುಖ್ಯ ಅನ್ನಿಸಿದಂತಿರಲಿಲ್ಲ. ಹಿಂದೂ ಎಂಬ ಪುಂಗಿ ಅವನ ಕಿವಿಯಾಲೆಗಳಲ್ಲಿ ಸದಾ ಮೊರೆಯುತ್ತಿತ್ತು. ಸುಳ್ಳು-ಭ್ರಮೆಗಳನ್ನು ವ್ಯವಸ್ಥಿತವಾಗಿ ಹರಡಿ ನಂಬಿಸಿದ್ದರಿಂದಾಗಿ ಅವು ಮತಗಳಾಗಿ ಬದಲಾಗಿದ್ದವು. ಉಳಿದ ಯಾವ ಜನಪರ ಯೋಜನೆಗಳಿಗೂ ಆ ನಿಬಿಡತೆಯಲ್ಲಿ ಜಾಗೆಯೇ ಇರಲಿಲ್ಲ.

ಗುಡಿ-ಮಸೀದಿಗಳು ಎದುರು ಬದುರು ಬಾಳ್ವೆ ಮಾಡಿಕೊಂಡು ಬಂದಿದ್ದ ನಮ್ಮೂರಿನಲ್ಲೀಗ ಈ ಎರಡೂ ಯದ್ವಾತದ್ವಾ ಬೆಳೀತಿವೆ. ಮೈಕ್ ಕಟ್ಟಿಕೊಂಡು ಅರಚುತ್ತಿವೆ. ಈ ಎರಡನ್ನೂ ಬಳಸಿಕೊಂಡ ಹೊಳೆ ಹರಿಯುತ್ತಿದೆ. ಎರಡರ ಮಧ್ಯೆ ಸರ್ಕಾರಿ ರಸ್ತೆ ಊರಿಂದೂರನ್ನು ಬೆಸೆಯುತ್ತಿದೆ. ಈ ಎಲ್ಲವೂ ಹೀಗೇ… ಇಷ್ಟಾದರೂ ಸಹನಶೀಲತೆಯಲ್ಲಿ ಉಳಿಯಬೇಕಾದರೆ ಜನರ ಮನಸ್ಸಿಗೆ ನಿಜವಾದ ವಿಚಾರಶಕ್ತಿಯನ್ನು ಕೊಡಬೇಕಿದೆ. ಸರಿ-ತಪ್ಪುಗಳನ್ನು, ನಿಜ-ಸುಳ್ಳುಗಳನ್ನು ಶೋಧಿಸಿ ನೋಡುವ ತ್ರಾಣವನ್ನು ನನ್ನ ಜನ ಪಡೆಯಬೇಕಿದೆ. ಆದರೆ ಹೇಗೆ? ಅವರನ್ನು ಯೋಚನೆಗೆ ಸನ್ನದ್ಧಗೊಳಿಸುವ, ದಾರಿಯನ್ನು ಹುಡುಕಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...