Homeಅಂಕಣಗಳುನೂರುನೋಟ | ಚುನಾವಣಾ ಆಯೋಗವನ್ನು ಸರಿಪಡಿಸುವುದು ಬಹಳ ಮುಖ್ಯ

ನೂರುನೋಟ | ಚುನಾವಣಾ ಆಯೋಗವನ್ನು ಸರಿಪಡಿಸುವುದು ಬಹಳ ಮುಖ್ಯ

- Advertisement -
- Advertisement -

ಎಚ್.ಎಸ್.ದೊರೆಸ್ವಾಮಿ |

ಕರ್ನಾಟಕ 2018ರ ವಿಧಾನಸಭಾ ಚುನಾವಣೆಗಳು ಮುಗಿದಿದೆ. ಈ ಚುನಾವಣೆಯ ಫಲಿತಾಂಶವನ್ನು ಅವಲೋಕನ ಮಾಡುವುದರ ಅಗತ್ಯತೆ ಇದೆ. ಭಾಜಪ ಚುನಾವಣೆಯಲ್ಲಿ 104 ಸ್ಥಾನಗಳನ್ನು ಕಾಂಗ್ರೆಸ್ 78 ಸ್ಥಾನಗಳನ್ನು ಜನತಾದಳ (ಜಾತ್ಯತೀತ) 38 ಸ್ಥಾನಗಳನ್ನು ಪಕ್ಷೇತರರು 2 ಸ್ಥಾನಗಳನ್ನು ಗಳಿಸಿದ್ದಾರೆ.ಅಂದರೆ ಯಾವ ಪಕ್ಷಕ್ಕೂ ಬಹುಮತ ದೊರೆತಿಲ್ಲ.ಈ ಸಂದರ್ಭದಲ್ಲಿ ರಾಷ್ಟ್ರಿಯ ಕಾಂಗ್ರೆಸ್ ನಾಯಕರು ದೇವೇಗೌಡರನ್ನು ಸಂಧಿಸಿ ನಮ್ಮ ಬೆಂಬಲ ನೀಡುತ್ತೇವೆ ಜಾತ್ಯತೀತ ಜನತಾದಳ ಸರ್ಕಾರ ರಚಿಸಲಿ ಎಂದು ತಿಳಿಸಿದ್ದಾರೆ.

ಒಟ್ಟಿನಲ್ಲಿ ಭಾರತೀಯ ಜನತಾಪಕ್ಷಕ್ಕೆ ಸರ್ಕಾರ ರಚಿಸಲು ಅವಕಾಶ ನೀಡದಂತೆ ತಾವೇ ಸರ್ಕಾರ ರಚಿಸುವ ನಿರ್ಧಾರಕ್ಕೆ ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳ ಬಂದಿವೆ. ಕರ್ನಾಟಕದಲ್ಲಿ ಭಾಜಪ ಸರ್ಕಾರವನ್ನು ಅಸ್ತಿತ್ವಕ್ಕೆ ತರುವ ಮೋದಿಯವರ ಮಹತ್ವಾಕಾಂಕ್ಷೆಗೆ ಕೊಡಲಿ ಪೆಟ್ಟು ಬಿದ್ದಿದೆ. 2019ರ ಲೋಕಸಭೆಯ ಚುನಾವಣೆಯ ಮೇಲೆ ಬಿಜೆಪಿಯ ಈ ಹಿನ್ನಡೆ ತನ್ನ ಪ್ರಭಾವ ಬೀರುವುದೆಂಬುದು ಶತಃಸಿದ್ದ

2019ರ ಲೋಕಸಭಾ ಚುನಾವಣೆಗಳಲ್ಲಿ ಮೋದಿ ಮತ್ತು ಭಾರತೀಯ ಜನತಾಪಕ್ಷಗಳನ್ನು ಪರಾಭವಗೊಳಿಸಲು ವಿರೋಧಪಕ್ಷಗಳು ಈಗಾಗಲೇ ಧ್ರುವೀಕರಣದ ಮಾತುಕತೆಗಳನ್ನು ಆರಂಭ ಮಾಡಿವೆ. ಒಂದು ಕಡೆ ಪ್ರಾಂತೀಯ ಪಕ್ಷಗಳೆಲ್ಲ ಒಂದಾಗಿ ಬಿಜೆಪಿಯನ್ನು ಎದುರಿಸುವ ನಿರ್ಧಾರ ಮಾಡಿದ್ದಾರೆ. ರಾಷ್ಟ್ರಮಟ್ಟದ ರಾಜಕೀಯ ಪಕ್ಷಗಳೆಲ್ಲ ಕೂಡಿಕೊಂಡು ಬಿಜೆಪಿಯನ್ನು ಪರಾಭವಗೊಳಿಸುವ ಬಗೆಗೆ ಮಾತುಕತೆ ನಡೆಯುತ್ತಿದೆ.

ಈ ಎರಡೂ ಬಣಗಳು ಒಟ್ಟಾಗಿ ಕೂಡಿಕೊಂಡು ಭಾರತೀಯ ಜನತಾಪಕ್ಷವನ್ನು ಎದುರಿಸುದಾದರೆ ಮೋದಿಯನ್ನು ಮಣಿಸುವುದು ಮತ್ತಷ್ಟು ಸುಲಭವಾಗಬಹುದು. ಅವು ಬೇರೆ ಬೇರೆಯಾಗಿ ಚುನಾವಣೆಯನ್ನು ಎದುರಿಸುವ ಸಂದರ್ಭ ಏರ್ಪಟ್ಟರೂ ಮೋದಿ ಮತ್ತು ಬಿಜೆಪಿಯನ್ನು ಪರಾಭವಗೊಳಿಸುವುದು ಈ ಎರಡೂ ತಂಡಗಳ ಏಕೈಕಗುರಿಯಾಗಿರುವುದರಿಂದ ಅದು ಸ್ವಾಗತಾರ್ಹವೇ.

2019ರ ಚುನಾವಣಾ ಹೋರಾಟದ ರಾಜಕೀಯದಲ್ಲಿ ಬದಲಾವಣೆ ತರಲು ಬಯಸುವ ನಮ್ಮ ಪಾತ್ರವೇನು ಎಂಬುವುದನ್ನ ಕುರಿತು ವಿಚಾರ ವಿನಿಮಯ ಮಾಡಿಕೊಳ್ಳುವುದು ಅಗತ್ಯ.

ಕರ್ನಾಟಕದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮೋದಿಯನ್ನು ಎದುರಿಸಲು ಕೋಮುಸೌಹಾರ್ದವೇದಿಕೆಯ ನೇತೃತ್ವದಲ್ಲಿ ನಡೆದ ಸಂಘಟಿತ ಪ್ರಯತ್ನ ತುಂಬಾ ಪರಿಣಾಮಕಾರಿಯಾಗಿತ್ತು. ಈ ಸಂದರ್ಭದಲ್ಲಿ ಕೈಜೋಡಿಸಿದ ಎಲ್ಲಕೋಮುವಿರೋದಿ üಸಂಸ್ಥೆಗಳಿಗೆ ನನ್ನ ಮೆಚ್ಚುಗೆಯನ್ನು ಸೂಚಿಸುತ್ತೇನೆ. ಈ ಸಂಘಟಿತ ಪ್ರಯತ್ನದಲ್ಲಿ ಪ್ರಮುಖಪಾತ್ರ ವಹಿಸಿದ ಜನತೆಯ ಪರವಾಗಿ ಕೈಗೊಂಡ ಈ ಮತದಾರರ ಜಾಗೃತಿ ಕಾರ್ಯಕ್ರಮ ಲೋಕಸಭಾ ಚುನಾವಣೆ ಇನ್ನೂ ಒಂದು ವರ್ಷ ಅವಧಿ ಇರುವಾಗಲೇ ಕರ್ನಾಟಕದಲ್ಲಿ ಮುಂದುವರಿಯಬೇಕಲ್ಲದೆ ಉತ್ತರ ಭಾರತದಲ್ಲೂ ಈ ಪ್ರಚಾರಕಾರ್ಯ ನಡೆಸಬೇಕಿದೆ. ಕರ್ನಾಟಕದಲ್ಲಿ ಈಗಾಗಲೇ ರೂಪಿತವಾಗಿರುವ ಪ್ರಭಾವಿ ವ್ಯಕ್ತಿಗಳ ತಂಡ ಉತ್ತರಭಾರತದ ಎಲ್ಲ ರಾಜ್ಯಗಳಿಗೂ ಭೇಟಿಕೊಟ್ಟು ಅಲ್ಲಿಯೂ ಇಂತಹ ಮೋದಿ ವಿರೋಧಿ ಸಂಸ್ಥೆಗಳನ್ನು ಅಸ್ತಿತ್ವಕ್ಕೆ ತರಲು ಕೂಡಲೇ ಕಾರ್ಯೋನ್ಮುಖವಾಗಬೇಕು. ಹೀಗೆ ಅಲ್ಲಿ ಅಸ್ತಿತ್ವದಲ್ಲಿರುವ ಮೋದಿ ವಿರೋಧಿ ಸಂಸ್ಥೆಗಳು ಸಮರೋಪಾದಿಯಲ್ಲಿ ಮತದಾರರಮಧ್ಯೆ ಕೆಲಸ ಮಾಡುವುದಾದರೆ ಬಿಜೆಪಿಯ ಹಾಗೂ ಮೋದಿಯ ಪ್ರಭಾವವನ್ನು ಪರಿಣಾಮಕಾರಿಯಾಗಿ ಕುಗ್ಗಿಸಲು ಬರುತ್ತದೆ.

ಮೋದಿಯನ್ನು ಪರಾಭವಗೊಳಿಸುವುದು ಎಷ್ಟು ಮುಖ್ಯವೋ ಚುನಾವಣಾ ಆಯೋಗವನ್ನು ಪರಿಣಾಮಕಾರಿಯಾಗಿ ಕಾರ್ಯತತ್ಪರವಾಗುವಂತೆ ಮಾಡುವುದು ಅಷ್ಟೇ ಮುಖ್ಯ. ಚುನಾವಣಾ ಆಯೋಗ ಭಾರತದಂತಹ ದೊಡ್ಡ ರಾಷ್ಟ್ರದಲ್ಲಿ ಶಾಂತಿಯುತವಾಗಿ ಚುನಾವಣೆಗಳನ್ನು ನಡೆಸುತ್ತಿರುವುದಕ್ಕೆ ತನ್ನಬೆನ್ನನ್ನು ತಾನೇತಟ್ಟಿಕೊಳ್ಳುತ್ತಿದೆ.

ಚುನಾವಣೆಯಿಂದ ಚುನಾವಣೆಗೆ ರಾಜಕೀಯ ಭ್ರಷ್ಟಾಚಾರ ಹೆಚ್ಚುತ್ತಿದೆ. ಹಣ,ಹೆಂಡ, ಬಟ್ಟೆ ಸೀರೆ,ತಾಳಿ,ಬೆಳ್ಳಿ ಸಾಮಾನುಗಳೆಲ್ಲವನ್ನು ಮತದಾರರಿಗೆ ಹಂಚುವ ಪ್ರಯತ್ನ ಹೆಚ್ಚುಹೆಚ್ಚಾಗಿ ಬೆಳೆಯುತ್ತಿದೆ. ಈಗ ನಡೆದ ಚುನಾವಣೆಯಲ್ಲಿ 50-60 ಕೋಟಿರೂ.ಗಳನ್ನು ಹಂಚುವುದರಿಂದ ಆಯೋಗ ವಶಪಡಿಸಿಕೊಂಡಿದೆ.ಇದಕ್ಕೆ ಶೇ.100ರಷ್ಟು ಹಣ ಮತದಾರರಲ್ಲಿಗೆ ರಾಜಕೀಯ ಪಕ್ಷಗಳು ಹಂಚಿದ್ದಾರೆ. ಕರ್ನಾಟಕ ಚುನಾವಣಾ ಆಯೋಗದ ಮುಖ್ಯಸ್ಥರನ್ನು ಕೇಳಿದರೆ ಜಫ್ತಿಮಾಡಲಾದ ಎಲ್ಲ ಹಣವನ್ನು ಹುಜೂರ್ ಟ್ರಜರಿಗೆ ಕಟ್ಟಿದ್ದೇವೆ. ವಶಪಡಿಸಿಕೊಂಡ ಕುಡಿತಗಳನ್ನೆಲ್ಲ ನಾಶ ಮಾಡಿದ್ದೇವೆ ಎನ್ನುತ್ತಾರೆ.

ಪೊಲೀಸ್‍ ವರಿಷ್ಠರ ಕಚೇರಿಯ ಮುಖ್ಯಸ್ಥರನ್ನು ಕೇಳಿದರೆ ವಶ ಪಡಿಸಿಕೊಂಡ ಉಳಿದ ವಸ್ತುಗಳು ಆಯಾ ಪೊಲೀಸ್ ಠಾಣೆಯ ವಶದಲ್ಲಿದ್ದು ಅವರುಕಳ್ಳದಾಸ್ತಾನುದಾರರು ಕಳ್ಳಸಾಗಾಣಿಕೆದಾರರ ಕೇಸು ಹಾಕಿದ್ದಾರೆಎನ್ನುತ್ತಾರೆ.ಇದರ ಮಾಹಿತಿಯನ್ನು ನಮಗೆಕೊಡಲು ಎಸ್ಪಿಗಳಿಗೆ ಚುನಾವಣಾಧಿಕಾರಿಗಳು ಸುತ್ತೋಲೆ ಕಳಿಸಿದರೂ ಕೆಲದಿನಗಳನಂತರ ಇಬ್ಬರು ಎಸಿಪಿಗಳು ನಮ್ಮಜಿಲ್ಲೆಗಳಲ್ಲಿ ಅಂತಹದ್ದೇನುಪ್ರಸಂಗಗಳು ನಡೆದಿಲ್ಲ ಎಂದು ಬರೆದರು. ಉಳಿದ ಜಿಲ್ಲೆಗಳ ಎಸ್ಪಿಗಳು ಮೌನತಾಳಿದರು. ಉತ್ತರ ಬರೆಯುವ ಗೋಜಿಗೆ ಹೋಗಲಿಲ್ಲ.

ಈ ಭ್ರಷ್ಟಾಚಾರವನ್ನು ತೊಡೆದುಹಾಕಲು ಕಠಿಣ ಕ್ರಮಕೈಗೊಳ್ಳಿ, 2008 ಮತ್ತು 2013ರಲ್ಲಿ ನಡೆದಿರುವ ಎರಡು ಚುನಾವಣೆಗಳಲ್ಲಿ ಸಂಭವಿಸಿರುವ ಅವ್ಯವಹಾರಗಳ ವಿವರ, ಅದನ್ನು ಯಾವಪಕ್ಷದವರು ಎಸಗಿದ್ದಾರೆ, ಯಾರು ಮಾಡಿದ್ದಾರೆ ಎಂಬವವರ ಮೇಲೆಯಾವಾಗ ಕಟ್ಲೆ ಹೂಡಲಾಯಿತು, ಏನು ಶಿಕ್ಷೆಯಾಯಿತು, ಹಾಗೆ ಹಿಡಿದ ಸಾಮಗ್ರಿಗಳು ಯಾರು ವಶದಲ್ಲಿವೆ ಇವೆಲ್ಲದರ ವಿವರಗಳನ್ನೊಳಗೊಂಡ ಒಂದು ಶ್ವೇತಪತ್ರವನ್ನು 3ತಿಂಗಳೊಳಗೆ ಹೊರಡಿಸಬೇಕೆಂದು ಚುನಾವಣಾಧಿಕಾರಿಗಳನ್ನು ಒತ್ತಾಯ ಮಾಡಲು ಒಂದು ಅನಿರ್ದಿಷ್ಟ ಕಾಲದ ಧರಣಿಯನ್ನು ಅವರಕಚೇರಿಯ ಮುಂದೆ ನಡೆಸಬೇಕು.

ಕೇಂದ್ರದ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಇಷ್ಟೊಂದು ಭ್ರಷ್ಟಾಚಾರ ಹತ್ತಾರು ವರ್ಷಗಳಿಂದ ನಡೆಯುತ್ತಿದ್ದರೂ ಅದಕ್ಕೆ ಪರಿಣಾಮಕಾರಿಯಾದ ಕಠಿಣ ಕ್ರಮ ಕೈಗೊಳ್ಳದಿರುವುದನ್ನು ಖಂಡಿಸಿ ಮುಂದಿನ ಚುನಾವಣೆ ವೇಳೆಗಾದರೂ ಹಣ, ಹೆಂಡ ಮತ್ತು ಇತರ ಸಾಮಗ್ರಿಗಳನ್ನು ಮತದಾರರಿಗೆ ಹಂಚುವ ರಾಜಕೀಯ ಪಕ್ಷಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿ ಈ ಕರ್ತವ್ಯವನ್ನು ನೀವು ನಿರ್ವಹಿಸದೆ ಕರ್ತವ್ಯ ಭ್ರಷ್ಟರಾದರೆ ಭ್ರಷ್ಟಾಚಾರಕ್ಕೆ ಅವಕಾಶ ಕೊಡದೆ ಚುನಾವಣೆ ನಡೆಸದಂತೆ ಕೇಂದ್ರಚುನಾವಣಾ ಕಮೀಷನ್ ವಿರುದ್ಧ ಶಾಂತಿಯುತ ಹೋರಾಟ ನಡೆಸುವುದಾಗಿ ಪತ್ರ ಬರೆಯಬೇಕು.

ಅಲ್ಲದೆ ಕೇಂದ್ರ ಸರ್ಕಾರಕ್ಕೆ ಹಾಗೂ ಕೇಂದ್ರ ಚುನಾವಣಾ ಆಯೋಗಕ್ಕೆ ಚುನಾವಣೆಗಳಲ್ಲಿ ನಡೆಯುವ ಎಲ್ಲಕ್ರಮಗಳನ್ನು ತಡೆಯಲು ಹಾಲಿ ಜಾರಿಯಲ್ಲಿರುವ ಎಲ್ಲ ಚುನಾವಣಾ ಕಾನೂನುಗಳನ್ನು ಮುಂಜಾಗ್ರತವಾಗಿ ಪರಿಷ್ಕರಿಸಿ ದ್ವೇಷಮುಕ್ತವಾದ ಕಾನೂನುಗಳನ್ನು ಜಾರಿಗೆ ಕೊಡಬೇಕೆಂದು ಒತ್ತಾಯಿಸುವ ಪತ್ರವನ್ನು ಬರೆಯಬೇಕು. ಈ ವರ್ಷ ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳು ಮತ್ತೆ ಮುಂದಿನ ಚುನಾವಣೆಗೆನಿಂತರೆಅವರು ಇದಕ್ಕೆಹಿಂದೆ ನಡೆದ ಚುನಾವಣೆಯ ವೇಳೆ ಕೊಟ್ಟ ತಮ್ಮ ಆಸ್ತಿಯ ವಿವರಗಳಿಗೂ ಈ ವರ್ಷ ಕೊಟ್ಟಿರುವ ವಿವರಗಳಿಗೂ ತುಂಬಾ ಅಂತರವಿದ್ದರೆ ಅದನ್ನು ನ್ಯಾಯಮಾರ್ಗದಲ್ಲಿ ಸಂಪಾದಿಸಿದ್ದಾರಾ ಇಲ್ಲವೆ ಅನ್ಯಾಯಮಾರ್ಗದಲ್ಲಿ ಸಂಪಾದಿಸಿದ್ದೀರಾ ಎಂಬುದನ್ನು ಪತ್ತೆ ಮಾಡಲು ಏನು ಕ್ರಮ ತೆಗೆದುಕೊಳ್ಳುತ್ತೀರಿ ಎಂದು ಚುನಾವಣಾ ಆಯೋಗದವರನ್ನು ಕೇಳಬೇಕು.

ಸ್ವತಂತ್ರ ಭಾರತದಲ್ಲಿ ಚುನಾವಣೆಗಳು ಕಳೆದ ಅರವತ್ತು ವರ್ಷಕ್ಕೆ ಮೇಲ್ಪಟ್ಟು ನಡೆಯುತ್ತಿದ್ದರೂ ಚುನಾವಣೆ ಕಾನೂನನ್ನು ಆಮೂಲಾಗ್ರವಾಗಿ ಪರಿಗಣಿಸುವ ಕೆಲಸ ಇಂದಿಗೂ ನಡೆದಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...