Homeಮುಖಪುಟಪ್ರಿಯಾಂಕಾ ವರ್ಸಸ್ ಮೋದಿ : ಸಿನೀಮಿಯ ಸಂಘರ್ಷ ಮತ್ತು ದೂರದೃಷ್ಟಿ

ಪ್ರಿಯಾಂಕಾ ವರ್ಸಸ್ ಮೋದಿ : ಸಿನೀಮಿಯ ಸಂಘರ್ಷ ಮತ್ತು ದೂರದೃಷ್ಟಿ

- Advertisement -
- Advertisement -

| ನೀಲಗಾರ |

ಅಲಹಾಬಾದ್‍ನಿಂದ ವಾರಣಾಸಿಗೆ ಗಂಗಾನದಿಯಲ್ಲಿ ದೋಣಿ ಪಯಣಿಸಿದ್ದು ಕೇವಲ 100 ಕಿ.ಮೀ.ಗಳಷ್ಟೇ ಆಗಿರಲಿಲ್ಲ. ಅದು ಭಾರತದ ರಾಜಕಾರಣದಲ್ಲಿ ಆದ ಬಹುಮುಖ್ಯ ಪ್ರಯಾಣವಾಗಿತ್ತು. ಅಲ್ಲಿನ ಫೋಟೋಗಳನ್ನು ನೋಡಿದರೆ ಅದು ಸುಲಭಕ್ಕೆ ಅರ್ಥವಾಗುತ್ತದೆ. ಆದರೆ, ಅದರ ಹಿಂದೆ ಇನ್ನೂ ಅನೇಕ ಮಹತ್ವದ ಸಂಗತಿಗಳಿವೆ.

  1. ಅಲಹಾಬಾದ್‍ನಿಂದ ಪ್ರಯಾಣ ಆರಂಭಿಸುವ ಮುನ್ನ ಆಕೆ ತಂಗಿದ್ದು, ಸ್ವರಾಜ್ ಭವನದಲ್ಲಿ. ಅದು ಜವಹರಲಾಲ್ ನೆಹರೂ ಅವರ ಮನೆ. ಅದೇ ಮನೆಯಲ್ಲಿ ಇಂದಿರಾಗಾಂಧಿ ಹುಟ್ಟಿದ್ದು. ಅಷ್ಟೇ ಅಲ್ಲದೇ, ಅದೇ ಸ್ವರಾಜ್ ಭವನದಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಬಹುಮುಖ್ಯ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿತ್ತು. ಸ್ವತಂತ್ರ ಸಂಗ್ರಾಮದ ಪರಂಪರೆಯನ್ನು ನಮಗಿಂತ ಹೆಚ್ಚು ಯಾರು ತಮ್ಮದೆಂದುಕೊಳ್ಳಲು ಸಾಧ್ಯ ಎಂಬ ಸಂದೇಶ ರವಾನಿಸುವ ಉದ್ದೇಶ ಅವರಿಗಿತ್ತೋ ಇಲ್ಲವೋ ಗೊತ್ತಿಲ್ಲ. ಏಕೆಂದರೆ ಆ ದಿನ ಪ್ರಿಯಾಂಕಾ ಮಾಡಿದ ಟ್ವೀಟ್‍ನಲ್ಲಿ ಅಜ್ಜಿ ಇಂದಿರಾಗಾಂಧಿಯ ವಾರಸುದಾರಿಕೆಯನ್ನು ಹೊತ್ತುಕೊಳ್ಳುವ ಮಾತುಗಳಿದ್ದವು. ‘ಸ್ವರಾಜ್ ಭವನದ ಅಂಗಳದಲ್ಲಿ ಕುಳಿತರೆ ನನ್ನ ಅಜ್ಜಿ ಹುಟ್ಟಿದ ಕೊಠಡಿ ಕಾಣುತ್ತಿದೆ. ನನ್ನಜ್ಜಿ ಮಲಗುವ ಮುನ್ನ ನನಗೆ ಜೋನ್ ಆಫ್ ಆರ್ಕ್ ಕಥೆಗಳನ್ನು ಹೇಳಿ, ಭಯ ಬಿಟ್ಟು ಧೈರ್ಯಶಾಲಿಯಾಗು ಎಲ್ಲವೂ ಸರಿ ಹೋಗಿಬಿಡುತ್ತದೆ ಎಂದು ಹೇಳುತ್ತಿದ್ದಳು’ ಎಂಬ ಟ್ವೀಟ್ ಅದು.

  1. ತ್ರಿವೇಣಿ ಸಂಗಮದಲ್ಲಿ ಪೂಜೆ ಸಲ್ಲಿಸಿ ಹೊರಟ ಪ್ರಿಯಾಂಕಾ, ವಿದ್ಯಾರ್ಥಿಗಳೊಂದಿಗೆ ‘ಬೋಟ್ ಪೆ ಚರ್ಚಾ’ ಮಾಡಿದರು. ಇದರಲ್ಲಿ ಮೋದಿ ನಡೆಸಿದ ಈವೆಂಟ್‍ನ ಪುನರಾವರ್ತನೆ ಅಲ್ಲದೇ ಇನ್ನೇನೂ ಹೆಚ್ಚುಗಾರಿಕೆ ಇರಲಿಲ್ಲ.
  2. ಆದರೆ, ಬಡೇ ಹನುಮಾನ್ ದೇವಸ್ಥಾನದಿಂದ ಆರಂಭಿಸಿ ಕಾಶಿಯ ವಿಶ್ವನಾಥ ದೇವಸ್ಥಾನದಲ್ಲಿ ನಡೆಸಿದ ಪೂಜೆಯವರೆಗೆ ಎಲ್ಲಾ ಕಡೆ ಕಾಂಗ್ರೆಸ್ ಪ್ರದರ್ಶಿಸಲಿಚ್ಛಿಸುತ್ತಿರುವ ‘ಧಾರ್ಮಿಕ ಒಲವಿನ’ ಪ್ರದರ್ಶನ ಇದ್ದೇ ಇತ್ತು. ಗಂಗಾ ಆರತಿಯೂ ಸೇರಿ ಇವೆಲ್ಲಾ ಆಚರಣೆಗಳು ಮೋದಿ ಅಥವಾ ರಾಹುಲ್ ಗಾಂಧಿಯ ಭಕ್ತಿ ಪ್ರದರ್ಶನಕ್ಕಿಂತ ಸಹಜವಾಗಿದ್ದವು. ರಾಹುಲ್ ಇದನ್ನು ತೋರಿಕೆಗೆ ಮಾಡುವಂತೆ, ಮೋದಿ ಅಹಂಕಾರದಿಂದ ಪ್ರದರ್ಶನಕ್ಕಾಗಿ ಮಾಡುವಂತೆ ಕಾಣುವ ಭಕ್ತಿ, ಆಚರಣೆಗಳು, ಪ್ರಿಯಾಂಕಾ ಮಾಡಿದಾಗ ಸಹಜ ಭಕ್ತಿಯಂತೆ ಕಾಣುತ್ತಿದ್ದವು. 3 ದಿನಗಳ ಪ್ರಯಾಣದಲ್ಲಿ ಮಧ್ಯೆ ಒಮ್ಮೆ ದರ್ಗಾಗೂ ಹೋಗಿದ್ದದ್ದು ಗಮನೀಯವಾದುದು.
  3. ಅಷ್ಟೇನೂ ದೊಡ್ಡದಲ್ಲದ, ಐಷಾರಾಮಿ ಸೌಲಭ್ಯಗಳಿಲ್ಲದ ಮತ್ತು ತ್ರಿವರ್ಣದ ಖಾದಿ ಬಟ್ಟೆಗಳಿಂದ ಸಿಂಗರಿಸಲ್ಪಟ್ಟಿದ್ದ ಬೋಟಿನಲ್ಲಿ ಪ್ರಿಯಾಂಕಾ ಪಯಣಿಸಿದರು. ನಿಧಾನಕ್ಕೆ ಜನರು ಇದನ್ನು ಮೋದಿ ಪಯಣಿಸಿದ ಸೀ ಪ್ಲೇನ್ ಜೊತೆ ಹೋಲಿಸಬಹುದು.
  4. ಈ ಅವಧಿಯಲ್ಲೇ ಬಂದ ಹೋಳಿ ಹಬ್ಬವನ್ನು ಪ್ರಿಯಾಂಕಾ ಅಲ್ಲಿನ ಸಾಮಾನ್ಯ ಜನರ ಜೊತೆ ಸೇರಿ ಆಚರಿಸಿದರು.
  5. ಅಂತಿಮವಾಗಿ ವಾರಣಾಸಿ ತಲುಪಿದ ನಂತರ ದೇವಸ್ಥಾನಗಳ ಭೇಟಿಯ ನಂತರ ನಡೆಸಿದ ಸಾರ್ವಜನಿಕ ಸಭೆಯಲ್ಲಿ ಪ್ರಿಯಾಂಕಾ ಮಾತಾಡಿದ್ದು ಮೋದಿಯವರು ತಮ್ಮ ಕ್ಷೇತ್ರಕ್ಕೆ ಕೊಟ್ಟಿದ್ದ ಭರವಸೆಗಳ ಕುರಿತು. ಅದರ ಪಟ್ಟಿಯನ್ನು ಇಟ್ಟುಕೊಂಡು ಅತ್ಯಂತ ಸರಳವಾಗಿ ಜನರ ಜೊತೆ ಸಂಭಾಷಣೆಯನ್ನು ಶುರು ಮಾಡಿದರು. ‘ಇದೇನು?’, ‘ಇದು ಮೋದಿಯವರು ಕೊಟ್ಟಿದ್ದ ಭರವಸೆಗಳು’, ‘ಇದು ಈಡೇರಿದೆಯಾ?’ “ಇಲ್ಲಾ”, ‘ಇದು?’ “ಇಲ್ಲಾ”, ‘ಇದು’ “ಅದೂ ಇಲ್ಲ”. ಮಾತಾಡುತ್ತಿರುವುದು ಎದುರಿಗಿರುವ ಕೆಲವು ಸಾವಿರ ಜನರಿಗಾದರೂ, ಅದು ಉತ್ತರ ಪ್ರದೇಶಕ್ಕೆ ಕೊಡಬೇಕಾದ ಸಂದೇಶ ಕೊಡುತ್ತದೆಂಬುದು ಆಕೆಗೆ ಗೊತ್ತಿತ್ತು.
  6. ಎಲ್ಲಕ್ಕಿಂತ ಮುಖ್ಯವಾಗಿ, ಮೇಲಿನ ಫೋಟೋದಲ್ಲಿರುವಂತೆ, ದೇವರ ತಿಲಕ ಮತ್ತು ವಿಭೂತಿಯನ್ನು ಹಚ್ಚಿಕೊಂಡು ಪ್ರಿಯಾಂಕಾ ವೇದಿಕೆಯ ಮೇಲೆ ಆಸೀನವಾಗಿದ್ದು. ಜೊತೆಗೆ ಕೊರಳಿಗೆ ರುದ್ರಾಕ್ಷಿ ಮಾಲೆಗಳು. ಅದೇ ವೇಷದಲ್ಲೇ ವೇದಿಕೆಯ ಭಾಷಣವನ್ನೂ ಮಾಡಿದ್ದು. ಇಂತಹ ವೇಷವನ್ನು ಮೊದಲು ಹಾಕಿದ್ದು ಮೋದಿ. ಆಗ, ದೇಶದ ಗಣನೀಯ ಸಂಖ್ಯೆಯ ಜನರ ಪುಣ್ಯಕ್ಷೇತ್ರದಿಂದ ಒಬ್ಬ ಹೊಸ ಸಮರ್ಥ ಸಾಧು ಮೇಲೆದ್ದು ಬಂದಂತೆ ಕಾಣಲು ಬೇಕಾದ ಕೊರಿಯೋಗ್ರಫಿ ನಡೆದಿತ್ತು. ಈಗ? ಈಗ ಸಿನೆಮಾಗಳಲ್ಲಿ ಕಾಣುವಂತಹ ಒಂದು ಸೀನ್ ಸೃಷ್ಟಿಸಲಾಗಿದೆ. ಧರ್ಮದ ಸೋಗಿನಲ್ಲಿ ವಂಚಿಸುವ ದುಷ್ಟನೊಬ್ಬನನ್ನು ಸಂಹರಿಸಲು ಎಳೆಯ ಬಾಲಕಿಯೊಬ್ಬಳು ದೈವ ಕೃಪೆಯನ್ನು ಪಡೆದುಕೊಂಡು ಎದುರು ನಿಂತರೆ ಹೇಗಿರುತ್ತೋ ಆ ರೀತಿಯ ಸೀನ್. ಪ್ರಿಯಾಂಕಾ ವೇದಿಕೆಯ ಮಧ್ಯಭಾಗದಲ್ಲಿ ಕೂತು ಆಶೀರ್ವದಿಸುವಂತೆ ಒಮ್ಮೆ ಕೈ ಮುಂದೆ ಮಾಡುತ್ತಾರೆ. ಅದು ಕಾಂಗ್ರೆಸ್ಸಿನ ಚಿಹ್ನೆಯೆಂಬುದೂ ಕಾರಣವಿರಬಹುದು. ಆದರೆ, ಆಕೆಯಲ್ಲಿ ದುರ್ಗೆ, ಕಾಳಿ ಇತ್ಯಾದಿಗಳನ್ನು ಸಾಮಾನ್ಯ ಜನರು ಕಾಣುವ ಸಾಧ್ಯತೆ ಇದೆ.
  7. ಭಾರತದ ರಾಜಕಾರಣದಲ್ಲಿ ಇಂತಹ ಇನ್ನೂ ಏನೇನನ್ನು ನಾವು ನೋಡಬೇಕಾಗುತ್ತೋ ಗೊತ್ತಿಲ್ಲ. ಆದರೆ, ಇಲ್ಲಿನ ಚುನಾವಣೆಗಳ ರಂಗನ್ನು ವಿಪರೀತವಾಗಿ ಏರಿಸಿದ ನರೇಂದ್ರ ಮೋದಿಗೆ ಅದೇ ರೀತಿಯಲ್ಲಿ ಹೋಳಿ ಎರಚುವ ಸಾಮಥ್ರ್ಯ ನಮಗೂ ಇದೆ ಎಂದು ವಿರೋಧ ಪಕ್ಷವು ತೋರಿಸುತ್ತಿದೆ. ಅಂತಹ ಮುಖಾಮುಖಿಯಲ್ಲಿ ರಾಹುಲ್‍ಗಿಂತ ಪ್ರಿಯಾಂಕಾಗೆ ಹೆಚ್ಚಿನ ಸಾಧ್ಯತೆಗಳಿವೆ ಎಂಬುದನ್ನು ಈ ‘ಗಂಗಾಪಯಣ’ ತೋರಿಸಿದೆ.
  8. ಹಾಗೆ ನೋಡಿದರೆ ರಾಹುಲ್‍ಗಾಂಧಿ ರೈತರ ಸಂಕಷ್ಟ, ನಿರುದ್ಯೋಗ, ರಾಫೇಲ್ ಭ್ರಷ್ಟಾಚಾರ ಇತ್ಯಾದಿ ಅಸಲಿ ಸಂಗತಿಗಳ ಕುರಿತು ಮಾತನಾಡುತ್ತಿರುವುದಕ್ಕೇ ಹೆಚ್ಚಿನ ಮಹತ್ವ ಇರಬೇಕಿತ್ತು. ಆದರೆ, ರಾಜಕಾರಣವು ಒಂದು ಜನರ ಮನಸ್ಸಿನ ಮೇಲೆ ಪರಿಣಾಮ ಬೀರುವ ವಿವಿಧ ಸಿನೀಮಿಯ ದೃಶ್ಯಗಳಿಂದ ಜನರನ್ನು ಮರುಳುಗೊಳಿಸುವ ಆಟವಾಡುತ್ತದೆ. ಇಂತಹ ಬಿಂಬಗಳು ಬಹುಬೇಗನೇ ಅಸಲಿ ಸಮಸ್ಯೆಗಳನ್ನು ಮಸುಕುಗೊಳಿಸುತ್ತವೆ. ಅದೇನೇ ಇರಲಿ, ಈ ಆಟದಲ್ಲಿ ಪ್ರಿಯಾಂಕಾ ಪ್ರವೇಶದಿಂದ ಮೋದಿ ಭಕ್ತ ಪಡೆಯು ಗಲಿಬಿಲಿಗೊಳ್ಳುವುದರಲ್ಲಿ ಸಂಶಯವಿಲ್ಲ.
  9. ಇಂದಿಗೆ 10 ವರ್ಷಗಳ ನಂತರ ಎಲ್ಲರೂ ಹೌದಲ್ಲಾ ಎಂದುಕೊಳ್ಳಬಹುದಾದ ಇನ್ನೊಂದು ಸಂಗತಿಯಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಉತ್ತರ ಪ್ರದೇಶದಲ್ಲಿ ಹೆಚ್ಚಿನ ಸೀಟು ಗಳಿಕೆ ಆಗಲಾರದು. ಪ್ರಿಯಾಂಕಾ ಗಾಂಧಿಯ ರಾಜಕೀಯ ಪ್ರವೇಶವು ಕಾಂಗ್ರೆಸ್ ಪಕ್ಷದ ದೀರ್ಘಕಾಲಿಕ ಹೂಡಿಕೆಯಾಗಿದೆ. 1990ಕ್ಕೆ ಮುಂಚೆ ಉತ್ತರ ಪ್ರದೇಶದ ಮೇಲೆ ಇಟ್ಟುಕೊಂಡಿದ್ದ ಹಿಡಿತವೇ ಆ ಪಕ್ಷಕ್ಕೆ ದೇಶವನ್ನಾಳುವ ಶಕ್ತಿ ತಂದುಕೊಡುತ್ತಿತ್ತು. ಉತ್ತರ ಪ್ರದೇಶದ ಮುಖ್ಯಮಂತ್ರಿ ವಿ.ಪಿ.ಸಿಂಗ್ ನಂತರ ರಾಜೀವ್‍ಗಾಂಧಿ ಸಂಪುಟದಿಂದ ಹೊರನಡೆದ ಮೇಲೆ ಅದು ಕುಸಿಯಿತು. ಅಲ್ಲಿಂದ ಇಲ್ಲಿಯವರೆಗೆ ಕಾಂಗ್ರೆಸ್ ಮತ್ತೆ ಅಲ್ಲಿ ಅಧಿಕಾರಕ್ಕೆ ಬಂದಿಲ್ಲ. ವಿ.ಪಿ.ಸಿಂಗರ ನಂತರ ಬಿಜೆಪಿ, ಎಸ್‍ಪಿ, ಬಿಎಸ್‍ಪಿಗಳ ನಡುವಿನ ಸಂಘರ್ಷದಲ್ಲಿ ಕಾಂಗ್ರೆಸ್ ಮಂಕಾಗುತ್ತಾ ಬಂದಿತ್ತು. ಮರಳಿ ಉತ್ತರ ಪ್ರದೇಶ ಪಡೆದುಕೊಳ್ಳಲು ಬೇಕಾದ ಬಲವಾದ ಅಸ್ತ್ರವಾಗಿ ಪ್ರಿಯಾಂಕಾರನ್ನು ರಂಗಕ್ಕಿಳಿಸಲಾಗಿದೆ. ಈ ಸದ್ಯ ರಂಗಪ್ರವೇಶವಂತೂ ಯಶಸ್ವಿಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...