Homeಕರ್ನಾಟಕತ್ರಿಭಾಷಾ ಶಿರೋಭಾರ ಇನ್ನೆಷ್ಟು ದಿನ?

ತ್ರಿಭಾಷಾ ಶಿರೋಭಾರ ಇನ್ನೆಷ್ಟು ದಿನ?

- Advertisement -
- Advertisement -

ಮೂಲ: ಕಾಂಚ ಐಲಯ್ಯ ಷೆಫರ್ಡ್

 

ಅನುವಾದ: ಅನಿಲ್ ಕುಮಾರ್ ಚಿಕ್ಕದಾಳವಟ್ಟ

ಕೇಂದ್ರದ ಬಿಜೆಪಿ ಸರ್ಕಾರ ಪ್ರತಿಪಾದಿಸಿದ ಹೊಸ ಶಿಕ್ಷಣ ನೀತಿ ಭಾರತ ದೇಶದ ಭಾಷಾ ವಿಧಾನದ ಬಗ್ಗೆ ಪ್ರಕಟಿಸಿದೆ. ಮೊಟ್ಟ ಮೊದಲನೆಯದಾಗಿ ಈ ನೀತಿ ದೇಶವೆಲ್ಲವನ್ನು ಹಿಂದಿ ಮಾತನಾಡುವ ದೇಶವಾಗಿ ಬದಲಾಯಿಸಬೇಕೆಂದು ಆಶಿಸಿದೆ. ಆದರೆ ದಕ್ಷಿಣ ಭಾರತದಲ್ಲಿ ತೀವ್ರವಾದ ಪ್ರತಿಭಟನೆಗಳ ನಂತರ ತಮಗೆ ಹಿಂದಿ ಬೇಡ ಎನ್ನುವ ರಾಜ್ಯಗಳ ಮೇಲೆ ಹಿಂದಿಯನ್ನು ಹೇರದ ಹಾಗೆ ಭಾಷಾ ನೀತಿ ತಿದ್ದಲ್ಪಟ್ಟಿತು. ಏನಾದರೂ ದೇಶದಲ್ಲಿರುವ ಮಕ್ಕಳೆಲ್ಲರೂ ಮೂರು ಭಾಷೆಗಳನ್ನು ಕಲಿಯಬೇಕಾಗುತ್ತದೆ. ಇಂಗ್ಲಿಷ್, ತಾವು ಹುಟ್ಟಿದ ರಾಜ್ಯದ ಭಾಷೆ, ಇತರೆ ರಾಜ್ಯಗಳಿಗೆ ಸೇರಿದ ಮತ್ತೊಂದು ಭಾಷೆ. ಹಿಂದಿ ಮಾತನಾಡುವ ರಾಜ್ಯಗಳಿಗಿಂತ ಹೆಚ್ಚಾಗಿ ಹಿಂದಿ ಮಾತನಾಡದ ರಾಜ್ಯಗಳೇ ಹೆಚ್ಚಾಗಿರುವುದರಿಂದ ಮೊಟ್ಟಮೊದಲನೆಯ ಬಾರಿಗೆ ಹಿಂದಿಯ ಜೊತೆಗೆ, ಹಿಂದಿಯೇತರ ಭಾಷೆಯನ್ನು ಕೂಡ ಮಕ್ಕಳು ಕಲಿಯಬೇಕಾಗುತ್ತದೆ ಎಂದು ಈ ನೀತಿ ಸ್ಪಷ್ಟಪಡಿಸುತ್ತದೆ. ಈ ನೀತಿಯ ಭಾಗವಾಗಿ ದಕ್ಷಿಣ ಭಾರತ ರಾಜ್ಯವಾದ ತಮಿಳುನಾಡು ಕೂಡ ಇಂಗ್ಲೀಷ್, ತಮಿಳಿನ ಜೊತೆಗೆ ಮತ್ತೊಂದು ರಾಜ್ಯಕ್ಕೆ ಸೇರಿದ ಭಾಷೆಯನ್ನು (ದಕ್ಷಿಣ ಭಾರತಕ್ಕೆ ಸೇರಿದ ಮಲಯಾಳಂ, ಕನ್ನಡ ಇಲ್ಲ ತೆಲುಗು ಅಥವಾ ಹಿಂದಿಯನ್ನೂ ಕೂಡ) ಕಲಿಯಬೇಕಾಗುತ್ತದೆ.

ದಕ್ಷಿಣ ಭಾರತದಿಂದ ತಮ್ಮ ಸರ್ಕಾರಕ್ಕೆ ತೆಗೆದುಕೊಂಡ ಸ್ವಂತ ಪಕ್ಷದ ಮಂತ್ರಿಗಳು ಕೂಡ ಹಿಂದಿ ಅಷ್ಟೇನು ಮಾತನಾಡದ ಕಾರಣ ಬಿಜೆಪಿ, ಆರ್.ಎಸ್.ಎಸ್ ನಾಯಕರು ಗೊಂದಲಕ್ಕೆ ಒಳಗಾಗಿದ್ದಾರೆ. 2019ರ ಸಾರ್ವತ್ರಿಕ ಚುನಾವಣೆಯ ನಂತರ ಆಯ್ಕೆ ಆದ ಮಂತ್ರಿಗಳು ಪ್ರಮಾಣವಚನ ಸ್ವೀಕಾರ ಮಾಡಿದ ಸಂದರ್ಭವನ್ನು ಒಮ್ಮೆ ಪರಿಶೀಲಿಸಿ. ದಕ್ಷಿಣಕ್ಕೆ ಸೇರಿದ ನಿರ್ಮಲ ಸೀತಾರಾಮನ್, ಸದಾನಂದ ಗೌಡ ಇಂಗ್ಲಿಷ್‍ನಲ್ಲಿ ಪ್ರಮಾಣ ಸ್ವೀಕರಿಸಿದರು. ಅದಕ್ಕಾಗಿಯೇ ದೇಶದ ಎಲ್ಲಾ ರಾಜ್ಯಗಳ ಮೇಲೆ ಹಿಂದಿ ಹೇರಲು ಯೋಜನೆ ರೂಪಿಸಿದರು. ಆದರೆ ಸ್ವಲ್ಪಕಾಲದವರೆಗೂ ಈ ವಿಧಾನಕ್ಕೆ ಕೆಲವು ಅಡ್ಡಿ, ಆತಂಕಗಳು ತಪ್ಪುವ ಹಾಗಿಲ್ಲ. ಇವರು ಹಿಂದಿಯನ್ನು ಬಲವಂತವಾಗಿ ಹೇರುವ ಕಾರ್ಯಕ್ರಮದಿಂದ ಹಿಂದಕ್ಕೆ ಹೋಗಿದ್ದಾರೆ. ಆದರೂ ಭಾಷ ನೀತಿ ಮಾತ್ರ ತ್ರಿಭಾಷಾ ಸೂತ್ರದಂತೆಯೇ ಮುಂದುವರೆಯುತ್ತದೆ.

ಬಿಜೆಪಿ ಶಿಕ್ಷಣ ನೀತಿ ಮೊಟ್ಟಮೊದಲನೆಯ ಬಾರಿಗೆ ಇಂಗ್ಲೀಷನ್ನು ದೇಶದಲ್ಲಿರುವ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಬೋಧಿಸುವ ಬಗ್ಗೆ ಅಂಗೀಕರಿಸಿದೆ. ಆದರೆ, ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಒಂದು ವಿಷಯವಾಗಿ ಮಾತ್ರವೇ ಇರುತ್ತದೆ. ಬೋಧನಾ ಮಾಧ್ಯಮವಾಗಿ ಆ ರಾಜ್ಯಕ್ಕೆ ಸಂಬಂಧಿಸಿದ ಭಾಷೆಯೇ ಮುಂದುವರೆಯಲಿದೆ. ಖಾಸಗಿ ಶಾಲೆಗಳಲ್ಲಿ ಬೋಧನಾ ಭಾಷೆಯಾಗಿ ಇಂಗ್ಲೀಷ್ ಭಾಷೆಯೆ ಇರಲಿದೆ. ಅದೇ ಸಮಯದಲ್ಲಿ ಎರಡು ಭಾರತೀಯ ಭಾಷೆಗಳನ್ನು ಬೋಧಿಸುವ ವಿಧಾನ ಜಾರಿಗೆ ಬರುತ್ತದೆ. ಅಂದರೆ ಪ್ರೈವೆಟ್ ಕಂಪನಿಗಳಿಗೆ ಸೇರಿದ ‘ಖಾನ್ ಮಾರ್ಕೆಟ್ ಗ್ಯಾಂಗ್ಸ್’ ನಿರ್ವಹಿಸುವ ಶಾಲೆಗಳು ಹಿಂದೆ ಇಂಗ್ಲೀಷ್ ಜೊತೆ ಫ್ರೆಂಚ್, ಜರ್ಮನ್, ಇಟಾಲಿಯನ್ ಮೊದಲಾದ ವಿದೇಶಿ ಭಾಷೆಗಳನ್ನು ಒಂದು ವಿಷಯವಾಗಿ ಬೋಧಿಸುವ ಬದಲಿಗೆ ಇನ್ನು ಮುಂದೆ ಎರಡು ಇತರ ಬಾಷೆಗಳನ್ನು ಬೋಧಿಸಬೇಕಾಗಿರುತ್ತದೆ.

ಕಾಂಗ್ರೆಸ್ ಸರ್ಕಾರದ ಕಾಲದ ಶಿಕ್ಷಣ ನೀತಿ ವಿದೇಶಿ ಭಾಷೆಗಳನ್ನು ಕಲಿಯುವ ಅವಕಾಶವನ್ನು ಖಾನ್ ಮಾರ್ಕೆಟ್ ಗ್ಯಾಂಗ್ಸ್ (ಶ್ರೀಮಂತರ ಮಕ್ಕಳು ಓದುವ) ಶಾಲೆಗಳಲ್ಲಿ ಮಾತ್ರವೇ ಕಲ್ಪಿಸಿದೆ. ಆದರೆ ಮಂಡಿ ಬಜಾರ್ (ಮಾಸ್) ಸರ್ಕಾರಿ ಶಾಲೆಗಳಲ್ಲಿ ಹಿಂದಿ ಅಥವಾ ಮತ್ತೊಂದು ಪ್ರಾಂತೀಯ ಭಾಷಾ ಮಾಧ್ಯಮದಲ್ಲಿಯೇ ಬೋಧಿಸಬೇಕಾಗಿರುತ್ತಿತ್ತು. ಸಾರಾಂಶದಲ್ಲಿ ಕೇಂದ್ರ ಸರ್ಕಾರ ಈಗ ಇಂಗ್ಲೀಷನ್ನು ಬೋಧಿಸಲೇಬೇಕಾದ ಅಗತ್ಯವಿರುವ ಪ್ರಧಾನ ಭಾಷೆಯಾಗಿ ಗುರ್ತಿಸಿದೆ. ಆದರೆ ಇಂಗ್ಲೀಷನ್ನು ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಒಳ್ಳೆಯ ಗುಣಮಟ್ಟದಲ್ಲಿ ಸಂಪೂರ್ಣವಾಗಿ ಬೋಧಿಸಲಿದ್ದಾರೆ. ಅದೇ ಖಾಸಗಿ ಶಾಲೆಗಳಲ್ಲಿ ಇಂಗ್ಲೀಷನ್ನು ಭಾಷಾ ವಿಷಯಗಳಲ್ಲಿ ಒಂದು ಭಾಷೆಯಾಗಿ ಬೋಧಿಸಲಿದ್ದಾರೆ. ಆದರೆ ನಿಸ್ಸಂದೇಹವಾಗಿ ಬಿಜೆಪಿ ಒಂದು ಪ್ರಗತಿಶೀಲವಾದ ಕೆಲಸವನ್ನು ಮಾಡಲು ಹೊರಟಿದೆ. ಅದೇನೆಂದರೆ ಭಾರತೀಯ ಶಾಲೆಗಳಲ್ಲಿ ಇಂಗ್ಲೀಷ್ ಬೋಧಿಸುವುದನ್ನು ಅನುಮತಿಸಿರುವುದು. ಶಿಕ್ಷಣವನ್ನು ಹಿಂದಿ ಅಥವಾ ಭಾರತೀಯ ಭಾಷೆಗಳಲ್ಲೇ ಬೋಧಿಸಬೇಕೆಂದು ಹೇಳುತ್ತಿರುವ ಲೋಹಿಯಾ ಸಂವಹನಾತ್ಮಕ ಸೋಷಲಿಸ್ಟ್ ಶಿಕ್ಷಣ ನೀತಿಯ ಜೊತೆ ಹೋಲಿಸಿದರೆ ಬಿಜೆಪಿ ಹೊಸ ಶಿಕ್ಷಣ ನೀತಿ ಸುಧಾರಿತವಾದದ್ದು. ಲೋಹಿಯಾ ಸೋಷಿಯಲಿಸಂ ಪ್ರಕಾರ ಬಡವರ ಮಕ್ಕಳು ಸ್ಥಳೀಯ ಭಾಷಾ ಮಾಧ್ಯಮಕ್ಕೆ ಸೀಮಿತವಾಗಬೇಕು. ಶ್ರೀಮಂತರ ಮಕ್ಕಳಿಗೆ ಕೇಳಿದಷ್ಟು ಹಣ ಇರುತ್ತದೆ. ಹಾಗಾಗಿ ಅವರು ಒಳ್ಳೆಯ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಓದಿಕೊಳ್ಳಬಹುದು.

ಭಾರತೀಯ ಕಮ್ಯೂನಿಸ್ಟರು ತಾವು ಆಡಳಿತ ನಡೆಸಿದ ರಾಜ್ಯಗಳೆಲ್ಲದರಲ್ಲೂ ಉಪ ರಾಷ್ಟ್ರದ ಸೆಂಟಿಮೆಂಟನ್ನು ಮಿಳಿತಗೊಳಿಸಿ ಈ ರೀತಿಯ ಭಾಷಾ ನೀತಿಯನ್ನು ಇನ್ನಷ್ಟು ಜಾರಿಮಾಡುತ್ತಾ ಬಂದರು. ಇದಕ್ಕೆ ಒಳ್ಳೆಯ ಉದಾಹರಣೆ 40 ಲಕ್ಷ ಜನಸಂಖ್ಯೆ ಇರುವ ತ್ರಿಪುರ ರಾಜ್ಯ. ಧಾರಾಳವಾಗಿ ಇಂಗ್ಲೀಷ್ ಮಾತನಾಡುವ ಕಾಮ್ರೇಡ್ ಮಾಣಿಕ್ ಸರ್ಕಾರ್ ಭಾರತ ದೇಶದಲ್ಲೇ ಅಲ್ಲದೇ, ಪ್ರಪಂಚದಾದ್ಯಂತ ಉದ್ಯೋಗಗಳನ್ನು ಕೈವಶ ಮಾಡಿಕೊಳ್ಳಲಾಗುವಂತಹ ಶ್ರೀಮಂತರಿಗೆ ಖಾಸಗಿ ಆಂಗ್ಲಮಾಧ್ಯಮ ಶಾಲೆಗಳಲ್ಲಿ ಓದುವ ಅವಕಾಶವನ್ನು ಕಲ್ಪಿಸಿದರು. ಅದೇ ಸಮಯದಲ್ಲಿ ಸರ್ಕಾರಿ ಶಾಲೆಗಳಲ್ಲಿ ತ್ರಿಪುರಿ ಮಾಧ್ಯಮದಲ್ಲಿ ಬೋಧನೆ ನಡೆಯುವ ರೀತಿ ನೋಡಿಕೊಂಡರು. 30 ವರ್ಷಗಳ ಆಡಳಿತದ ಉದ್ದಕ್ಕೂ ಇದೇ ರೀತಿ ನಡೆಯುತ್ತಾ ಬಂದಿದೆ.

ಈ ರೀತಿಯ ನೀತಿಯಿಂದ ತ್ರಿಪುರದಲ್ಲಿ ಗಿರಿಜನರು ಯಾರೂ ಒಳ್ಳೆಯ ಇಂಗ್ಲೀಷನ್ನು ಮಾತನಾಡದೇ ಮಾಕ್ರ್ಸ್, ಲೆನಿನ್ ಬಗ್ಗೆ ಮಾತನಾಡದೆ ಹೋದರು. ಇದರಿಂದಲೇ 34%ರಷ್ಟು ಗಿರಿಜನ ಜನಸಂಖ್ಯೆ ಇರುವ ತ್ರಿಪುರದಲ್ಲಿ ಒಬ್ಬ ಗಿರಿಜನ ಕೂಡ ಸಿ.ಪಿ.ಎಂ ಪಾಲಿಟ್ ಬ್ಯೂರೋ ಮುಖ್ಯಸ್ಥರಾಗದೇ ಹೋದರು. ಹಾಗೆಯೇ ಪಶ್ಚಿಮ ಬಂಗಾಳದಲ್ಲಿ ಕೂಡ ಶ್ರಮಿಕ ವರ್ಗದ ಜನರನ್ನು 34 ವರ್ಷಗಳವರೆಗೂ ಇಂಗ್ಲೀಷ್ ಶಿಕ್ಷಣದಿಂದ ದೂರವಿರಿಸುವ ರೀತಿಯ ಶಿಕ್ಷಣ ನೀತಿಯನ್ನು ಮುಂದುವರೆಸಲಾಗಿದೆ. ಈಗ ಬಿಜೆಪಿಗೆ ವಿರುದ್ಧವಾಗಿ ಮಾತನಾಡಲು ಇವರಿಗೆ ಏನು ಉಳಿದಿದೆಯೋ ಮತ್ತೆ? ಮತ್ತೊಂದು ಕಡೆ ಶ್ರೀಮಂತರಾದ ಭದ್ರಲೋಕದ ಕಾಮ್ರೇಡ್‍ಗಳು ಖಾಸಗಿ ಇಂಗ್ಲೀಷ್ ಮಾಧ್ಯಮದ ಶಾಲೆಗಳಲ್ಲಿ ಓದಿಕೊಂಡರು. ಇವರ ಹತ್ತಿರ ಖಾಸಗಿ ಶಾಲೆಯ ಶಿಕ್ಷಣಕ್ಕೆ ಕೊಡುವಷ್ಟು ದುಡ್ಡಿದೆ ಮತ್ತೆ. ಅದೇ ಸಮಯದಲ್ಲಿ ಬೆಂಗಾಲಿ ಮಾಧ್ಯಮದ ಜೊತೆ ಒಂದು ಇಂಗ್ಲಿಷ್ ವಿಷಯವನ್ನು ಕೂಡಿದ ಭಾಷಾ ನೀತಿಯನ್ನು ಹೇರಿದ್ದರಿಂದ ಪಶ್ಚಿಮ ಬಂಗಾಳದ ಗ್ರಾಮೀಣ ಭಾಗವೆಲ್ಲವನ್ನೂ ಹಿಂದುಳಿದಿರುವಿಕೆಯಲ್ಲಿ ಮುಳುಗೇಳಿಸಿದರು. ಈ ರಾಜ್ಯದ ಜನಸಂಖ್ಯೆಯಲ್ಲಿಯೂ 65%ರಷ್ಟು ಜನ ಎಸ್ಸಿ, ಎಸ್ಟಿ, ಓ.ಬಿ.ಸಿಗೆ ಸೇರಿದವರೇ ಇದ್ದಾರೆ. ಇವರಲ್ಲಿ ಯಾರಿಗೂ ಇಂಗ್ಲೀಷಲ್ಲಿ ಮಾತನಾಡುವ ಪ್ರತಿಭೆ ಇಲ್ಲವಾದ್ದರಿಂದ ಇವರಿಂದ ಒಬ್ಬ ಕಮ್ಯೂನಿಸ್ಟ್ ನಾಯಕ ಕೂಡ ಸಿ.ಪಿ.ಎಂ ಪಾಲಿಟ್‍ಬ್ಯೂರೋದೊಳಗೆ ಪ್ರವೇಶಿಸದೆ ಹೋದರು. ಸೈಂಟ್ ಸ್ಟೀಫನ್ ಕಾಲೇಜಿನಲ್ಲಿ ಓದಿಕೊಂಡು, ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾದ ರಾಹುಲ್ ಕೂಡ ಖಾಸಗಿ ಶಾಲೆಗಳಲ್ಲಿ ಏಕೀಕೃತ ಬೋಧನೆಯ ಭಾಷೆಯನ್ನು ಪರಿಚಯಿಸುತ್ತೇವೆಂದು ಆಶ್ವಾಸನೆ ನೀಡದೆ ಹೋದ. ಖಾಸಗಿ ವಲಯದಲ್ಲಿ ಆಂಗ್ಲ ಮಾಧ್ಯಮ ಮಾದರಿಯನ್ನು, ಸರ್ಕಾರಿ ರಂಗದಲ್ಲಿ ಪ್ರಾದೇಶಿಕ ಭಾಷಾ ಮಾಧ್ಯಮವನ್ನು ಪ್ರವೇಶಿಸುವುದು ನೆಹರು ಆಡಳಿತ ನೀತಿಯ ಭಾಗವೇ ಅಲ್ಲವೇ.

ನಮ್ಮ ದೇಶದಲ್ಲಿ ಘನತೆವೆತ್ತ ಜಾತ್ಯತೀತ, ಉದಾರವಾದಿ ಕಮ್ಯೂನಿಸ್ಟ್ ಮೇಧಾವಿಗಳು ಸಂಪೂರ್ಣವಾಗಿ ಈ ದ್ವಿಭಾಷಾ ನೀತಿಯನ್ನು ಅನುಮೋದಿಸಿದ್ದಾರೆಂಬುದನ್ನು ನಾವು ಮರೆಯಕೂಡದು. ನರೇಂದ್ರ ಮೋದಿ ಅಭಿಪ್ರಾಯದಲ್ಲಿ ಖಾನ್ ಮಾರ್ಕೆಟ್, ಮಂಡಿ ಬಜಾರ್ ಶಿಕ್ಷಣ ನೀತಿಗಳು ಎರಡೂ ಪ್ರತ್ಯೇಕವಾದವುಗಳು. ಬಡಾ ಬ್ಯೂಸಿನೆಸ್ ಸ್ಕೂಲ್‍ನಿಂದ ಇಟಲಿ, ಪ್ರೆಂಚ್ ಭಾಷೆಗಳನ್ನು ತೊಲಗಿಸಿ ಮತ್ತೊಂದು ಪ್ರಾದೇಶಿಕ ಬಾಷೆಯಲ್ಲಿ ಬೋಧಿಸಬೇಕೆಂದು ಹೇಳುವ ಮೂಲಕ ಈಗ ಬಿಜೆಪಿಯೂ ಸಹ ಅದೇ ನೀತಿಯನ್ನ ಸ್ವಲ್ಪ ಹೆಚ್ಚಾಗಿಯೋ ಅಥವಾ ಸ್ವಲ್ಪ ಕಮ್ಮಿಯಾಗಿಯೋ ಸ್ವೀಕರಿಸಿಬಿಟ್ಟಿದೆ. ಇದಕ್ಕೆ ಮುಂಚೆ ನೆಹ್ರುವಿಯನ್ ಶಿಕ್ಷಣ ನೀತಿಯನ್ನು ನಾವು ನೋಡಿದ್ದೇವೆ. ಈ ನೀತಿಯ ಪ್ರಕಾರ ಖಾನ್ ಮಾರ್ಕೆಟ್ ಶ್ರೀಮಂತರು ಆಂಗ್ಲ ಮಾಧ್ಯಮದಲ್ಲಿ, ಮಂಡಿ ಬಜಾರ್ ಸಾಧಾರಣ ಪ್ರಜೆಗಳು ಹಿಂದಿ ಮಾಧ್ಯಮದಲ್ಲಿ ಓದಿಕೊಳ್ಳುತ್ತಿದ್ದರು. ಈಗ ನಮಗೆ ಸ್ಮೃತಿ ಇರಾನಿ ಶಿಕ್ಷಣ ನೀತಿ ಇದೆ. ಇದರ ಪ್ರಕಾರವು ಸಹ ಸ್ಮೃತಿ ಮಕ್ಕಳು ಆಕೆಯ ಪ್ರತಿಸ್ಪರ್ಧಿ ಪ್ರಿಯಾಂಕ ಗಾಂಧಿ ಮಕ್ಕಳು ‘ಖಾನ್ ಮಾರ್ಕೆಟ್’ ಕಾಲೇಜ್ ಆದ ಸೈಂಟ್ ಸ್ಟಿಫನ್ಸ್‍ನಲ್ಲಿ ಓದಿಕೊಳ್ಳುತ್ತಾರೆ. ಇನ್ನು ನೋಡಿದರೆ ಮಂಡಿ ಬಜಾರ್ ಮಾಸ್ ಮಕ್ಕಳು ಸರ್ಕಾರಿ ಹಿಂದಿ ಮಾಧ್ಯಮದ ಕಾಲೇಜುಗಳಲ್ಲಿ ಓದಿಕೊಂಡು ಚೌಕಿದಾರ್, ಚಾಯ್‍ವಾಲ್‍ಗಳಾಗಿ ಆವತರಿಸುತ್ತಿದ್ದಾರೆ.

ಈಗ ನಮಗೆ ಎದುರಾಗುತ್ತಿರುವ ಪ್ರಾಥಮಿಕ ಪ್ರಶ್ನೆ ಏನೆಂದರೆ, ಇಂಗ್ಲೀಷ್ ಭಾರತ ದೇಶದೆಲ್ಲೆಡೆ ಜಾರಿ ಇರುವಂತಹ ಭಾಷೆಯಾಗಿರುವಾಗ ಅದನ್ನು ಭಾರತ ರಾಷ್ಟ್ರೀಯ ಭಾಷೆಯಾಗಿ ಗುರ್ತಿಸಿ ಸರ್ಕಾರಿ ಶಾಲೆಗಳಲ್ಲಿ ಮತ್ತಷ್ಟು ವಿಷಯಗಳಲ್ಲಿ ಇಂಗ್ಲಿಷ್ ಬೋಧನೆಯನ್ನು ಏಕೆ ವಿಸ್ತರಿಸಬಾರದು ಎಂಬುವುದಾಗಿದೆ. ಇಂಗ್ಲಿಷ್ ಜೊತೆ ಹೋಲಿಸಿದರೆ ನಮ್ಮ ಪ್ರಾದೇಶಿಕ ಭಾಷೆಗಳು ಹೊಲದಲ್ಲಿ ಕೆಲಸ ಮಾಡುವ ಕೂಲಿಗಳ ಮಾತೃಭಾಷೆಯಾಗಿ ಮಾತ್ರ ಇರುತ್ತಿವೆ. ಈಗ ಸಂಘಪರಿವಾರಕ್ಕೆ ಸೇರಿದವರು ಅತ್ಯಧಿಕ ಸಂಖ್ಯೆಯಲ್ಲಿ ವಿಮಾನ ಪ್ರಯಾಣಿಕರಾಗಿ ಇರುತ್ತಿದ್ದಾರೆ. ಇವರ ಮಕ್ಕಳೆಲ್ಲ ಆಂಗ್ಲಮಾಧ್ಯಮದ ಖಾಸಗಿ ಶಾಲೆಗಳಲ್ಲಿ ಓದುತ್ತಿದ್ದಾರೆ. ತಳಮಟ್ಟದಲ್ಲಿ ಇಂತಹ ಪರಿಸ್ಥಿತಿ ಇರುತ್ತಿರುವಾಗ. ನಾವು ಧ್ವಿಭಾಷಾ ನೀತಿಯನ್ನು (ಇಂಗ್ಲೀಷ್ ಒಂದು ಪ್ರಾದೇಶಿಕ ಭಾಷೆ) ಏಕೆ ಮಾಡಕೂಡದು?. ಇಂಗ್ಲೀಷನ್ನು ಗಿರಿಜನ ಪ್ರದೇಶಗಳಲ್ಲಿನ ಮಕ್ಕಳಿಗೂ ಕೂಡ ವಿಸ್ತೃತವಾದ ಹಂತಗಳಲ್ಲಿ ಯಾಕೆ ಬೋಧಿಸಬಾರದು?.

ಇದು ಸಾಕಾರವಾದಾಗ ಭಾರತ ದೇಶವ್ಯಾಪಿಯಾಗಿ ನಮ್ಮ ಪ್ರಜೆಗಳು ಭವಿಷ್ಯತ್ತಿನಲ್ಲಿ ಪರಸ್ಪರವಾಗಿ ಇಂಗ್ಲಿಷಿನಲ್ಲಿ ಮಾತಾಡಿಕೊಳ್ಳಬಲ್ಲರು. ತಮ್ಮ ರಾಜ್ಯ ಪರಿಧಿಯಲ್ಲಿ ಇವರು ಅತ್ತ ಇಂಗ್ಲಿಷಿನಲ್ಲಿ, ಇತ್ತ ಪ್ರಾದೇಶಿಕ ಭಾಷೆಯಲ್ಲಿ ಮಾತನಾಡಿಕೊಳ್ಳಬಹುದು. ತಮಿಳುನಾಡು ಮಾಡುತ್ತಿರುವುದು ಕೂಡ ಇದನ್ನೇ. ಆಂಧ್ರಪ್ರದೇಶ್ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಈಗಾಗಲೇ ಗ್ರಾಮೀಣ ಜನರಿಗೆ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳನ್ನು ಆಂಗ್ಲಮಾಧ್ಯಮಕ್ಕೆ ಬದಲಾಯಿಸುತ್ತೇನೆಂದು ವಾಗ್ದಾನ ಮಾಡಿದ್ದಾರೆ. ಒಂದು ವಿಷಯವನ್ನು ತಪ್ಪದೇ ತೆಲುಗಿನಲ್ಲಿ ಬೋಧಿಸುವ ಹಾಗೆ ಮಾಡುತ್ತೇನೆಂದು ಅವರು ಒತ್ತಿ ಹೇಳಿದ್ದಾರೆ. ಈ ಆಶ್ವಾಸನೆ ನೆರವೇರಿದ ದಿನ ಆಂಧ್ರಪ್ರದೇಶ ದೇಶಕ್ಕೆ ಮಾದರಿ ರಾಜ್ಯವಾಗಿ ಬದಲಾಗುತ್ತದೆ.

ಇದನ್ನು ಓದಿರಿ: ಹಿಂದಿ ಹೇರಿಕೆ ಅಷ್ಟೊಂದು ದೊಡ್ಡ ವಿಚಾರವಾ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಕಾಂತಿ ಐಲಯ್ಯ ಅವರ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿ ಇಂಗ್ಲಿಷ್ ಭಾಷೆಯ ಅಗತ್ಯವನ್ನು ಒಪ್ಪಿಕೊಂಡರೆ ದೇಶದಲ್ಲಿ ದ್ವಿಭಾಷಾ ನೀತಿ ಜಾರಿಗೆ ತರಬಹುದು.

  2. ದ್ವಿಬಾಷಾ ಸೂತ್ರಗಳು ಸರಿ ಹಾಗೆಯೇ ಅವರೇ ಇಷ್ಟಪಡುವುದಾದರೇ ಹತ್ತು ವಿದೇಶೀಯ ಬಾಷೆಯನ್ನು ಕಲಿಯಲೀ ಅದು ಅವರವರ ಭಾವಕ್ಕೆ ತಕ್ಕಂತೆ ಅಯಾ ಉತ್ತರವಿರಲೀ

LEAVE A REPLY

Please enter your comment!
Please enter your name here

- Advertisment -

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...

ಬರೇಲಿ: ಮುಸ್ಲಿಂ ಯುವಕರ ಮೇಲೆ ಹಲ್ಲೆ, ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಬಲವಂತ; ಪ್ರಮುಖ ಆರೋಪಿ ಬಂಧನ

ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆ, ಅವಮಾನ ಮತ್ತು ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಮುಖ ಆರೋಪಿ ರಿಷಭ್ ಠಾಕೂರ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಷ್ಟು ಬಂಧನಗಳು ನಡೆಯುವ...