Homeಅಂಕಣಗಳುಸ್ವಾತಂತ್ರ್ಯ ಸಂಗ್ರಾಮ ಮತ್ತು ಭಾರತದ ಮುಸ್ಲಿಂ ವೀರರು

ಸ್ವಾತಂತ್ರ್ಯ ಸಂಗ್ರಾಮ ಮತ್ತು ಭಾರತದ ಮುಸ್ಲಿಂ ವೀರರು

- Advertisement -
- Advertisement -

ಭಾರತದ ಸ್ವಾತಂತ್ರö್ಯ ಸಂಗ್ರಾಮದ ಚರಿತ್ರೆಯಲ್ಲಿ ಬ್ರಿಟಿಷರ ವಿರುದ್ಧ ತೊಡೆತಟ್ಟಿ ನಿಂತು ಬಡಿದಾಡಿದ ವೀರಕಲಿಗಳ ಬಗ್ಗೆ ನಾವೆಲ್ಲರೂ ಪಠ್ಯಪುಸ್ತಕಗಳಲ್ಲಿ ಓದಿದ್ದೆÃವೆ. ಗಾಂಧಿ, ನೆಹರೂ, ನೇತಾಜಿ ಇನ್ನಿತ್ಯಾದಿ ಜನಪ್ರಿಯ ಸ್ವಾತಂತ್ರö್ಯ ಹೋರಾಟಗಾರರ ಬಗ್ಗೆ ನಮಗೆಲ್ಲರಿಗೂ ಗೊತ್ತು. ಆದರೆ ಬ್ರಿಟಿಶರ ವಿರುದ್ಧದ ಹೋರಾಟಗಳಲ್ಲಿ ಭಾಗವಹಿಸಿಯೂ ನೇಪಥ್ಯಕ್ಕೆ ಸರಿಸಲ್ಪಟ್ಟ ಇದೇ ನೆಲದ ಮುಸ್ಲಿಂ ಹೋರಾಟಗಾರರ ಬಗ್ಗೆ ಭಾರತದ ಚರಿತ್ರಕಾರರು ಹೆಚ್ಚಾನೆಚ್ಚು ಬರೆದಿರುವುದು ದಾಖಲಿಸಿರುವುದು ತೀರಾ ಕಡಿಮೆ. ಜೊತೆಗೆ ಸಂಘ ಪರಿವಾರದ ಹಿನ್ನೆಲೆಯ ಪ್ರಕಟಣಾ ಸಂಸ್ಥೆಗಳು ಮುನ್ನೆಲೆಗೆ ಬಂದು ಪ್ರಕಟಿಸಿದ ಇತಿಹಾಸದ ಪುಸ್ತಕಗಳಲ್ಲಿ ಸ್ವಾತಂತ್ರö್ಯ ಹೋರಾಟಗಾರರೆಂದರೆ ಹಿಂದೂ ಸಂಘಟನೆಗಳ ಜೊತೆಗೆ ಗುರುತಿಸಿಕೊಂಡವರೆಂದು ತಪ್ಪಾಗಿ ತಿರುಚಿದ್ದೂ ಮುಸ್ಲಿಂ ಹೋರಾಟಗಾರರು ಹಿನ್ನೆಲೆಗೆ ಸರಿಯಲು ಕಾರಣವಾಗಿದೆ. ಹೀಗೆ ಹಿನ್ನೆಲೆಗೆ ಒತ್ತಲ್ಪಟ್ಟ ಮುಸ್ಲಿಂ ಸ್ವಾತಂತ್ರö್ಯ ಹೋರಾಟಗಾರರು ಮತ್ತು ಅವರು ಸ್ವಾತಂತ್ರö್ಯ ಸಂಗ್ರಾಮಕ್ಕೆ ಕೊಟ್ಟ ಕೊಡುಗೆಗಳು ಕಡಿಮೆಯೇನಲ್ಲ.
ಬಂಗಾಲದ ಮುಸ್ಲಿಂ ಅರಸ ಸಿರಾಜ್ ಉದ್ ದೌಲನ 1757ರ ಪ್ಲಾಸಿ ಕದನದಿಂದ ಶುರುವಾಗುವ ಬ್ರಿಟಿಶರ ವಿರುದ್ಧದ ಬಂಡಾಯವು ನಂತರದ ಕಾಲಘಟ್ಟದಲ್ಲಿ ಹಲವು ಕವಲುಗಳಾಗಿ ಬ್ರಿಟಿಶರೊಡನೆ ನಡೆದ ಸಂಘರ್ಷಗಳಿಗೆ ಮುನ್ನುಡಿ ಬರೆಯುತ್ತದೆ. 1857ರಿಂದ 58ರವರೆಗೆ ದೆಹಲಿ ಪ್ರಾಂತ್ಯದಲ್ಲಿ ಬ್ರಿಟಿಶರೆದುರು ಬಂಡೆದ್ದ ‘ಅಸ್ಗರಿ ಬೇಗಂ’ ಎಂಬ ಮುಸ್ಲಿಂ ಮಹಿಳೆ ಬ್ರಿಟಿಶರ ವಿರುದ್ಧ ಸಾರಿದ ವೀರೋಚಿತÀ ಯುದ್ಧದಲ್ಲಿ ಜೀವತ್ಯಾಗ ಮಾಡುತ್ತಾಳೆ. ಸೆರೆಸಿಕ್ಕ ‘ಅಸ್ಗರಿ ಬೇಗಂ’ಳನ್ನು ಬ್ರಿಟಿಶರು ಜೀವಂತವಾಗಿ ಸುಟ್ಟು ಹಾಕುತ್ತಾರೆ. ಈ ಯುದ್ಧದಲ್ಲಿ 27 ಸಾವಿರಕ್ಕೂ ಹೆಚ್ಚು ಮುಸ್ಲಿಂ ಬಂಡಾಯಗಾರರನ್ನು ಬ್ರಿಟಿಶರ ಸೇನೆ ಕೊಲ್ಲುತ್ತದೆ.
1857ರಲ್ಲಿ ‘ದೆಹಲಿ ಅಖಬಾರ್’ ಪತ್ರಿಕೆಯಲ್ಲಿ ಬ್ರಿಟಿಶರ ದಬ್ಬಾಳಿಕೆಗಳ ಬಗ್ಗೆ ಬರೆಯುತ್ತ ಸ್ವಾತಂತ್ರö್ಯ ಹೋರಾಟಕ್ಕೆ ಪ್ರೊÃತ್ಸಾಹ ನೀಡುತ್ತಿದ್ದ ಆ ಪತ್ರಿಕೆಯ ಸಂಪಾದಕ ‘ಮಹಮ್ಮದ್ ಬಖಾರ್’ ಎಷ್ಟರಮಟ್ಟಿಗೆ ಬ್ರಿಟಿಶರ ನಿದ್ದೆಗೆಡಿಸಿದ್ದರೆಂದರೆ ಅವರನ್ನು ನಿವಾರಿಸಿಕೊಳ್ಳದೆ ದೆಹಲಿಯಲ್ಲಿ ಉಳಿಯುವುದೇ ಬ್ರಿಟಿಶರಿಗೆ ಅಸಾಧ್ಯವೆನ್ನುವಷ್ಟರ ಮಟ್ಟಿಗೆ. ಕೊನೆಗೆ ಮಹಮ್ಮದ್ ಬಖಾರ್‌ರನ್ನು ‘ಜನರಲ್ ಹಡ್ಸನ್’ ಎಂಬ ಬ್ರಿಟಿಶ್ ಅಧಿಕಾರಿ ಮರಾಮೋಸದಿಂದ ಬಂಧಿಸಿ ಜೈಲಿಗೆ ಹಾಕುತ್ತಾನೆ. ‘ಬಖಾರ್’ ಬಿಡುಗಡೆಗೆ ಸ್ವಾತಂತ್ರö್ಯ ಸೇನಾನಿಗಳಿಂದ ಆಗ್ರಹ ಜಾಸ್ತಿಯಾದಾಗ ‘ಹಡ್ಸನ್’ ಬಖಾರ್‌ರನ್ನು ಜೈಲಿನಲ್ಲೆÃ ಗುಂಡಿಟ್ಟು ಕೊಲ್ಲುತ್ತಾನೆ. ಬ್ರಿಟಿಶರಿಗೆ ತಮ್ಮ ಲೇಖನಿ, ಲೇಖನಗಳಿಂದಲೇ ಸಿಂಹಸ್ವಪ್ನವಾಗಿದ್ದ ಬಖಾರ್ ಹೀಗೆ ಹುತಾತ್ಮರಾಗುತ್ತಾರೆ. ಇದೇ ಸಮಯದಲ್ಲಿ ದೇಶಾದ್ಯಂತ ಮುಸ್ಲಿಮ್ ಅರಸೊತ್ತಿಗೆಗಳು ಮತ್ತು ಹೋರಾಟಗಾರರು ಬ್ರಿಟಿಶರ ವಿರುದ್ಧ ಬಂಡಾಯದ ಬಾವುಟ ಹಾರಿಸಿ ಬ್ರಿಟಿಶರ ಸೈನ್ಯ, ಆಯುಧಾಗಾರ, ಅಧಿಕಾರಿಗಳ ಮೇಲೆ ಒಂದು ಕಡೆಯಿಂದ ಧಾಳಿಯಿಡಲು ಶುರುವಿಡುತ್ತಾರೆ. ಬ್ರಿಟಿಶರು ಈ ಕಾಲಘಟ್ಟದ ಬಂಡಾಯವನ್ನು ಮುಸ್ಲಿಂದಂಗೆಯೆಂದೇ ಕರೆಯುತ್ತಾರೆ.
ಈ ಮುಸ್ಲಿಂದಾಳಿಗಳಿಂದ ತಪ್ಪಿಸಿಕೊಳ್ಳಲು ಮುಸ್ಲಿಮರನ್ನು ಭಾರತದ ಹಿಂದೂಗಳಿಂದ ಪ್ರತ್ಯೆÃಕಗೊಳಿಸುವುದೇ ಅತ್ಯುತ್ತಮ ಉಪಾಯವೆಂದೆಣಿಸಿದ ಬ್ರಿಟಿಶರು ಮುಸ್ಲಿಮರನ್ನು ಹಿಂದೂಗಳ ವಿರುದ್ಧ ಎತ್ತಿಕಟ್ಟುವ ಮೊದಲ ಪ್ರಯತ್ನಕ್ಕೆ ಕೈಯಿಡುತ್ತಾರೆ. ಬ್ರಿಟಿಶ್ ಅಧಿಕಾರಿ ‘ವಿಲಿಯಂ ಹಂಟ್’ ಈ ನಿಟ್ಟಿನಲ್ಲಿ ಮುಸ್ಲಿಮರು ಮತ್ತವರ ದೊರೆಗಳನ್ನು ಕೆಟ್ಟದಾಗಿ ಚಿತ್ರಿಸಿ ಅವರ ಆಳ್ವಿಕೆಯಲ್ಲಿ ಭಾರತ ನರಳುತ್ತಿತ್ತು, ಅವರಿಂದ ಮುಕ್ತಿ ಕೊಡಿಸಲು ಬ್ರಿಟನ್ನಿನಿಂದ ಬಂದ ದೈವಸಂಭೂತರಾಗಿ ಬ್ರಿಟಿಶರನ್ನು ಚಿತ್ರಿಸಿ ‘ಇಂಡಿಯನ್ ಮುಸ್ಲಿಮ್ಸ್’ ಎಂಬ ಪುಸ್ತಕವೊಂದನ್ನು ಬರೆದು ವಿಲಿಯಂ ಹಂಟ್ ಪ್ರಚಾರಕ್ಕೆ ಬಿಡುತ್ತಾನೆ. ಭಾರತದ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ದೊಡ್ಡಮಟ್ಟದಲ್ಲಿ ಬಿತ್ತಿದ ಚಾರಿತ್ರಿಕ ಅಪನಂಬಿಕೆಯ ಬೀಜವಿದು. ಇದೇ ವಾದ ಮತ್ತು ವಾದಸರಣಿಯನ್ನು ಬ್ರಿಟಿಶರ ಆಸ್ಥಾನ ಗುಲಾಮರಾಗಿ ಕಂಗೊಳಿಸುತ್ತಿದ್ದ ಸಂಘಿಗಳು ದೊಡ್ಡಮಟ್ಟದಲ್ಲಿ ಜನರ ನಡುವೆ ಹರಿಯಬಿಟ್ಟರು. ಬ್ರಿಟಿಶರ ವಿರುದ್ಧ ಹೋರಾಡಿ ನಿಮ್ಮ ಶಕ್ತಿ ವೇಸ್ಟ್ ಮಾಡಿಕೊಳ್ಳಬೇಡಿ ಅದನ್ನು ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು-ಕಮ್ಯುನಿಸ್ಟರ ವಿರುದ್ಧ ಹೋರಾಡಲು ಬಳಸಿ ಎಂದು ಬ್ರಿಟಿಶರ ಆಸ್ಥಾನ ಗುಲಾಮರಾಗಿದ್ದ ಸಂಘಿಗಳು ಕರೆಕೊಟ್ಟರು. ಸ್ವಾತಂತ್ರö್ಯ ಹೋರಾಟದೊಳಗೂ ಧರ್ಮದ ಆಧಾರದಲ್ಲಿ ಎರಡು ಗುಂಪಾಗಿ ಒಡೆಯುವಲ್ಲಿ ಬ್ರಿಟಿಶ್ ಮತ್ತವರ ಗುಲಾಮರ ಪಡೆ ಯಶಸ್ವಿಯಾಯಿತು.
ಇವತ್ತು ಇದೇ ಸಂಘಿ ಗುಲಾಮರ ಪಡೆಯು ಹೆಮ್ಮೆಯಿಂದ ಜಪಿಸುವ ರಾಷ್ಟಿçÃಯತೆಯ ದ್ಯೊÃತಕಗಳಾದ ಘೋಷಣೆಗಳನ್ನೂ ಸಹ ಹುಟ್ಟು ಹಾಕಿದ್ದು ಮತ್ತು ಸ್ವಾತಂತ್ರö್ಯ ಹೋರಾಟಗಾರರ ನಡುವೆ ಅದನ್ನು ಜನಪ್ರಿಯಗೊಳಿಸಿದ್ದು ಮುಸ್ಲಿಮರು ಎಂಬುದಕ್ಕೆ ಇತಿಹಾಸದಲ್ಲೆà ಹಲವಾರು ಸಾಕ್ಷಿಗಳಿವೆ. ‘ಜೈ ಹಿಂದ್’ ಈ ಘೋಷಣೆಯಿಲ್ಲದೆ ಅಕ್ಷರಶಃ ಯಾವ ಭಾಷಣವೂ ಮುಕ್ತಾಯವಾಗುವುದಿಲ್ಲ. ಈ ಜೈಹಿಂದ್ ಘೋಷಣೆಯನ್ನು ದೇಶಕ್ಕೆ ಕೊಟ್ಟಿದ್ದು ನೇತಾಜಿ ಸುಭಾಶ್ ಚಂದ್ರ ಬೋಸ್ ಎಂದೇ ಮುಕ್ಕಾಲುಪಾಲು ಭಾರತೀಯರು ನಂಬಿದ್ದಾರೆ. ಆದರೆ ಸತ್ಯ ವಿಷಯ ಬೇರೆಯದೇ ಇದೆ. ಜೈ ಹಿಂದ್ ಘೋಷಣೆಯನ್ನು ದೇಶದ ಸ್ವಾತಂತ್ರö್ಯ ಸಂಗ್ರಾಮಕ್ಕೆ ಕೊಡುಗೆಯಾಗಿ ಕೊಟ್ಟಿದ್ದು ನೇತಾಜಿಯ ‘ಆಜಾದ್ ಹಿಂದ್ ಫೌಜ್’ ಸೇನೆಯಲ್ಲಿದ್ದ ಓರ್ವ ಮುಸ್ಲಿಂ ವ್ಯಕ್ತಿ. ಇವರ ಹೆಸರು ‘ಅಬೀದ್ ಹಸನ್ ಸಫ್ರಾನಿ’. ಜರ್ಮನಿಯಲ್ಲಿ ಎಂಜಿನಿಯರಿಂಗ್ ಕಲಿಯುತ್ತಿದ್ದ ‘ಸಫ್ರಾನಿ’ ಭಾರತದ ಸ್ವಾತಂತ್ರö್ಯ ಹೋರಾಟಕ್ಕೆ ಜರ್ಮನ್ನರ ನೆರವು ಬಯಸಿ ಜರ್ಮನಿಯಲ್ಲಿದ್ದ ನೇತಾಜಿಯವರ ವಿಚಾರಧಾರೆಯನ್ನು ಒಪ್ಪಿ ಓದುತ್ತಿದ್ದ ಎಂಜಿನಿಯರಿಂಗ್ ಪದವಿಯನ್ನು ತ್ಯಜಿಸಿ ನೇತಾಜಿಯವರ ಸೆಕ್ರೆಟರಿ ಮತ್ತು ಭಾಷಾಂತರಕಾರರಾಗಿ ಭಾರತಕ್ಕೆ ಬರುತ್ತಾರೆ. ನಂತರ ನೇತಾಜಿಯವರ ಆಪ್ತವಲಯಕ್ಕೆ ಸೇರುವ ಸಫ್ರಾನಿ ನೇತಾಜಿಯವರ ಸೈನ್ಯದಲ್ಲಿ ಮೇಜರ್ ಆಗಿ ಸೇವೆ ಸಲ್ಲಿಸುತ್ತಾರೆ. ಈ ಸಂದರ್ಭದಲ್ಲಿ ಪರಸ್ಪರರನ್ನು ಗ್ರಿÃಟ್ ಮಾಡಲು ನೇತಾಜಿಯವÀರ ಸೈನ್ಯಕ್ಕೆ ‘ಜೈಹಿಂದ್’ ಘೋಷವನ್ನು ಪರಿಚಯಿಸುತ್ತಾರೆ. ಇದು ನಂತರ ಸ್ವಾತಂತ್ರö್ಯ ಹೋರಾಟಗಾರರ ನೆಚ್ಚಿನ ಘೋಷಪದವಾಗಿ ಜನಪ್ರಿಯಗೊಳ್ಳುತ್ತದೆ. ಇವತ್ತಿಗೂ ಜನಪ್ರಿಯವಾಗಿರುವ ಈ ‘ಜೈಹಿಂದ್’ ಘೋಷಪದದ ಮೂಲಕರ್ತೃ ‘ಅಬಿದ್ ಹಸನ್ ಸಫ್ರಾನಿ.’
‘ಸಾರೇ ಜಹಾಂಸೆ ಅಚ್ಛಾ’ ಯಾರಿಗೆ ತಾನೇ ಗೊತ್ತಿಲ್ಲ. ಧರ್ಮ, ಗಡಿ, ಪ್ರಾಂತ್ಯಗಳಾಚೆಗೂ ಪ್ರತಿಯೊಬ್ಬರೂ ಹಾಡುವ ಗುನುಗುವ ದೇಶಭಕ್ತಿ ಗೀತೆಯಿದು. ಈ ಗೀತೆಯನ್ನು ಬರೆದವರು ‘ಮಹಮ್ಮದ್ ಇಕ್ಬಾಲ್’ ಎಂಬ ಮುಸ್ಲಿಂ ಉರ್ದು ಕವಿ. ಅಲ್ಲಾಮ ಇಕ್ಬಾಲ್ ಎಂದೂ ಹೆಸರಾಗಿರುವ ಈ ಕವಿ ಪರ್ಶಿಯನ್ ಮತ್ತು ಉರ್ದು ಭಾಷೆಯಲ್ಲಿ ಕವಿತೆಗಳನ್ನು ಬರೆಯುತ್ತಿದ್ದವರು. ದೇಶ ವಿಭಜನೆಯಾದ ನಂತರ ಪಾಕಿಸ್ತಾನ ಸರ್ಕಾರವು ಇವರನ್ನು ರಾಷ್ಟಿçÃಯಕವಿ ಎಂದು ಕರೆಯಿತು. 1906ನೇ ಇಸವಿಯಲ್ಲಿ ಯೂನಿವರ್ಸಿಟಿ ಆಫ್ ಕೇಂಬ್ರಿಡ್ಜ್ನಲ್ಲಿ ಆರ್ಟ್ಸ್ ವ್ಯಾಸಂಗ ಮುಗಿಸಿದ್ದ ಇಕ್ಬಾಲರು ನಂತರ ಲುಡ್ವಿಗ್‌ನ ಮ್ಯಾಕ್ಸ್ ಮಿಲನ್ ವಿವಿಯಲ್ಲಿ ಡಾಕ್ಟರ್ ಆಫ್ ಫಿಲಾಸಫಿ ವ್ಯಾಸಂಗ ಮಾಡಿದವರು. ವ್ಯಾಸಂಗ ಮುಗಿದ ನಂತರ ಭಾರತಕ್ಕೆ ಬಂದ ಇಕ್ಬಾಲ್ ಸಾಗರೋಪಾದಿಯಲ್ಲಿ ನಡೆಯುತ್ತಿದ್ದ ಸ್ವಾತಂತ್ರö್ಯ ಹೋರಾಟವನ್ನು ಉತ್ತೆÃಜಿಸುವ ಹಲವಾರು ಗೀತೆಗಳನ್ನು ಬರೆದು ಜನರ ನಡುವೆ ಜನಪ್ರಿಯಗೊಳಿಸಿದರು. ಅವುಗಳಲ್ಲಿ ಮುಖ್ಯವಾದ ಕವಿತೆಯೇ ‘ಸಾರೇ ಜಹಾಂಸೆ ಅಚ್ಛ, ಹಿಂದೂಸ್ಥಾನ್ ಹಮಾರ’ ಕವಿತೆ.
ಇವರಷ್ಟೆÃ ಅಲ್ಲದೆ ತಾವು ಬದುಕಿದ್ದ 95 ವರ್ಷಗಳಲ್ಲಿ 45 ವರ್ಷ ಬ್ರಿಟಿಶರ ಜೈಲುಗಳಲ್ಲೆÃ ಸೆರೆಯಾಳಾಗಿ ಕಳೆದ ಖಾನ್ ಅಬ್ದುಲ್ ಗಫಾರ್ ಖಾನ್, ಸ್ವಾತಂತ್ರö್ಯ ಹೋರಾಟದ ಹಣಕಾಸಿನ ನೆರವಿಗೆಂದು ಗಾಂಧಿಗೆ ತಮಗೆ ಎಷ್ಟು ಹಣದ ಅವಶ್ಯಕತೆಯಿದೆಯೋ ಅಷ್ಟು ಹಣವನ್ನು ಬರೆದುಕೊಳ್ಳಿ ಎಂದು ಬ್ಲಾಂಕ್ ಚೆಕ್ ಕೊಟ್ಟಿದ್ದ ಅಂದಿನ ಬಾಂಬೆಯ ಉದ್ಯಮಿ ಮತ್ತು ಕೋಟ್ಯಧಿಪತಿ ಉಮರ್ ಸುಭಾನಿ, ಹಲವಾರು ಸ್ವಾತಂತ್ರö್ಯ ಹೋರಾಟದ ಗೀತೆಗಳನ್ನು ಬರೆದ ಮೌಲಾನ ಹಸರತ್ ಮೊಹಾನಿ, ಮಜ್ನು ಷಾ ಫಕೀರ್ ನೇತೃತ್ವದಲ್ಲಿ ‘ಫಕೀರ್-ಸನ್ಯಾಸಿ ದಂಗೆ’ಯ ಮೂಲಕ ಬ್ರಿಟಿಶರ ವಿರುದ್ದ ಹೋರಾಡಿದ ಬೆಂಗಾಲಿ ಫಕೀರರು, 1921ರಲ್ಲಿ ಇಂಕ್ವಿಲಾಬ್ ಜಿಂದಾಬಾದ್ ಘೋಷಣೆ ಕೊಟ್ಟ ‘ಹಸ್ರತ್ ಮೊಹಾನಿ’, ಬ್ರಿಟಿಶರೇ ಭಾರತ ಬಿಟ್ಟು ತೊಲಗಿ ಘೋಷಣೆ ಪರಿಚಯಿಸಿದ ‘ಯೂಸುಫ್ ಮೆಹರ್ ಅಲಿ’, ಹೀಗೆ ನೂರಾರು-ಸಾವಿರಾರು ಹೆಸರುಗಳನ್ನು ಭಾರತ ಸ್ವಾತಂತ್ರö್ಯ ಸಂಗ್ರಾಮದಲ್ಲಿ ನಿಂತು ಬಡಿದಾಡಿದವರ ಹೆಸರುಗಳನ್ನು ಉಲ್ಲೆÃಖಿಸಬಹುದು. ಈ ಎಲ್ಲ ಮುಸ್ಲಿಂ ಹೋರಾಟಗಾರರ ವೀರೋಚಿತ ಹೋರಾಟ ಮತ್ತು ಅವರು ನೀಡಿದ ಸಾಹಿತ್ಯಿಕ ಕೊಡುಗೆಗಾಗಿ ನಾವು ಇವರೆಲ್ಲರನ್ನೂ ನೆನೆಯಲೇಬೇಕು.

– ಪರಿಮಳಾ ವಾರಿಯರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....