Homeಮುಖಪುಟಇವರ ಹೋರಾಟದ ಬದುಕಿಗೆ ನಮ್ಮದೊಂದು ಸಲಾಮ್

ಇವರ ಹೋರಾಟದ ಬದುಕಿಗೆ ನಮ್ಮದೊಂದು ಸಲಾಮ್

- Advertisement -
- Advertisement -

ನೀವೆಲ್ಲರೂ ಹಿಜಡಾ ಸಮುದಾಯದವರನ್ನು ಬಹಳ ಸಲ ನೋಡಿರುತ್ತೀರಿ. ಆದಾಗ್ಯೂ ನಮ್ಮ ಬಹುತೇಕ ಜನ ಈ ಲೆಸ್ಬಿಯನ್, ಗೇ, ಬೈಸೆಕ್ಷುವಲ್, ಟ್ರಾನ್ಸ್‍ಜೆಂಡರ್, ಕ್ವೀರ್ (LGBTQ) ನಂತಹ ಪದಗಳು ಪಾಶ್ಚಾತ್ಯದಿಂದ ಈಗತಾನೇ ಭಾರತದ ಸಂಸ್ಕøತಿಯೊಳಕ್ಕೆ ಕಾಲಿಡುತ್ತಿರುವ ಹೊಸ ಪರಿಕಲ್ಪನೆಗಳು ಅಂತಲೇ ಭಾವಿಸಿದ್ದಾರೆ.
ನನ್ನ ಈ ಲೇಖನಗಳ ಸರಣಿಯಲ್ಲಿ ಜಾಗತಿಕ ಮಟ್ಟದ ಐಉಃಖಿಕಿ ಸಮುದಾಯಗಳಿಗೂ, ನಮ್ಮದೇ ನೆಲದ ಸಾಂಸ್ಕøತಿಕ ರಚನೆಗಳಾದ ಹಿಜಡಾ ಬಳಗಗಳಿಗೂ ಇರುವ ರಾಜಕೀಯ ವ್ಯತ್ಯಾಸ ಹಾಗೂ ಸಂಬಂಧಗಳ ಬಗ್ಗೆ ವಿವರಿಸಲು ಪ್ರಯತ್ನಿಸುತ್ತೇನೆ. ಇವುಗಳ ನಡುವಿನ ಸಂಬಂಧ ಏನು ಅಂತಂದ್ರೆ, ಈ ಪರ್ಯಾಯ ಲಿಂಗಿಗಳನ್ನು ವಿವರಿಸಲು ನಮ್ಮಲ್ಲಿ ಬಳಸುವ ಬಹಳಷ್ಟು ಪದಗಳು ಇಂಗ್ಲಿಷ್‍ನಲ್ಲಿ ಇದೇ ಉದ್ದೇಶಕ್ಕೆ ಬಳಸಲಾಗುವ ಪದಗಳು ನೀಡುವ ಅರ್ಥವನ್ನೇ ಪ್ರತಿಫಲಿಸುತ್ತವೆ. ಇನ್ನು ಆ ವಿದೇಶಿ ಸಮುದಾಯಗಳಿಗೂ ನಮ್ಮ ಹಿಜಡಾ ಬಳಗಗಳಿಗೂ ಇರುವ ರಾಜಕೀಯ ವ್ಯತ್ಯಾಸ ಅಂದ್ರೆ, ನಮ್ಮ ಭಾರತೀಯ ಸಂಸ್ಕøತಿಯು ಈ ಜಗತ್ತನ್ನು ಲೈಂಗಿಕ ಅಭಿವ್ಯಕ್ತಿಯ ಚೌಕಟ್ಟಿನಲ್ಲಿ ನೋಡದೇ ಲಿಂಗತ್ವದ ಆಧಾರದಲ್ಲೇ ನೋಡುವುದಾಗಿದೆ. ಇದನ್ನು ಮುಂದಿನ ಬರಹಗಳಲ್ಲಿ ಚರ್ಚಿಸುತ್ತೇನೆ. ಸದ್ಯ ಈಗ ನಾನು ಹೇಳೋದಿಷ್ಟೆ; ಒಬ್ಬ ವ್ಯಕ್ತಿಯ ಜೈವಿಕ ಲಿಂಗ (ದೇಹ), ಲಿಂಗತ್ವ (ಲಿಂಗಕ್ಕೆ ಅನುಗುಣವಾದ ಸಾಮಾಜಿಕ ಪಾತ್ರ) ಮತ್ತು ಲೈಂಗಿಕತೆ (ಆ ವ್ಯಕ್ತಿ ಆಕರ್ಷಣೆಗೊಳ್ಳುವ ಲಿಂಗ/ಗಳು) ಇವೆಲ್ಲವುಗಳು ಒಂದೇ ಅಲ್ಲ! ಇವುಗಳ ನಡುವೆ ಅಪಾರ ವ್ಯತ್ಯಾಸವಿದೆ.
ಮೊದಲು ನಮ್ಮ ಹಿಜಡಾ ಸಮುದಾಯವನ್ನು ಅರ್ಥ ಮಾಡಿಕೊಳ್ಳೋಣ. ಸಾಮಾನ್ಯ ಗ್ರಹಿಕೆಯಲ್ಲಿ ಹಿಜಡಾ ವ್ಯಕ್ತಿಗಳನ್ನು ಅನೇಕ ಸಲ `ತೃತೀಯ ಲಿಂಗಿಗಳು’ ಎಂದು ಪರಿಗಣಿಸಲಾಗುತ್ತೆ. ಒಂದು ಮಗು ಹುಟ್ಟಿದಾಗ ವೈದ್ಯರು ಆ ಮಗುವನ್ನು ಗಂಡು ಅಥವಾ ಹೆಣ್ಣು ಎಂದು ಗುರುತಿಸುತ್ತಾರೆ. ಎಲ್ಲಾ ಹಿಜಡಾ ಸದಸ್ಯರ ದೇಹಗಳು ಹುಟ್ಟುವ ಸಂದರ್ಭದಲ್ಲೆ ಅತ್ತ ಗಂಡೂ ಅಲ್ಲದ, ಇತ್ತ ಹೆಣ್ಣೂ ಅಲ್ಲದಂತಹ ದೇಹ ರಚನೆಯನ್ನು ಹೊಂದಿರುತ್ತಾರೆ ಅನ್ನೋದು ಸಾಮಾನ್ಯವಾಗಿ ನಾವೆಲ್ಲರು ತಿಳಿದಿರುವ ತಪ್ಪು ಕಲ್ಪನೆ. ಇಂತಹ ದೇಹರಚನೆಯನ್ನು ವಿವರಿಸಲು ಇಂಗ್ಲಿಷಿನಲ್ಲಿ `Iಟಿಣeಡಿsex’ ಎಂಬ ಪದವಿದೆ. ಈ `ಇಂಟರ್‍ಸೆಕ್ಸ್’ ಬಗೆಯವರು ಮಾತ್ರ ಗಂಡಿನ ಅಥವಾ ಹೆಣ್ಣಿನ, ನಿರ್ದಿಷ್ಟ ಲಿಂಗದ ದೇಹ ಲಕ್ಷಣಗಳನ್ನು ಹೊಂದಿರುವುದಿಲ್ಲ. ಆದರೆ ಬಹಳಷ್ಟು ಹಿಜಡಾ ಸದಸ್ಯರು `ಇಂಟರ್‍ಸೆಕ್ಸ್’ ಬಗೆಗೆ ಸೇರುವವರಲ್ಲ! ಅಂದರೆ, ಅವರು ಹುಟ್ಟಿದಾಗಿನ ದೇಹ ಲಕ್ಷಣಗಳನ್ನು ಗಮನಿಸುವ ಸ್ವತಃ ವೈದ್ಯರೇ ಆ ಮಗುವನ್ನು `ಗಂಡು ಮಗು’ ಎಂದೇ ಘೋಷಿಸುತ್ತಾರೆ. ಅವರ ಹುಟ್ಟು ಅಷ್ಟು ಸಹಜವಾಗಿರುತ್ತೆ. ಹುಟ್ಟಿದಾಗ ಗಂಡು ಮಗು ಅಂತಲೇ ಗುರುತಿಸಿರಲಿ ಅಥವಾ ಇಂಟರ್‍ಸೆಕ್ಸ್ ಎಂದೇ ಐಡೆಂಟಿಫೈ ಮಾಡಿರಲಿ, ಪ್ರಪಂಚದ ಯಾವುದೇ ಭಾಗದ ಹಿಜಡಾ ಸದಸ್ಯರು `ಲಿಂಗಪರಿವರ್ತಿತ ಮಹಿಳೆ’ (Transgender woman)ಯ ಬದುಕನ್ನು ಹಾದು ಬರಲೇಬೇಕಾಗುತ್ತದೆ.
ಹಾಗಾದ್ರೆ ಈ `ಟ್ರಾನ್ಸ್‍ಜೆಂಡರ್ ಮಹಿಳೆ’ ಅಂದ್ರೆ ಯಾರು? ಹುಟ್ಟಿದಾಗ ಈ ಸಮಾಜ ಮತ್ತು ವೈದ್ಯರು ಯಾವ ಲಿಂಗದವರೆಂದು ನಿಗದಿಪಡಿಸುತ್ತೋ, ಅದೇ ಲಿಂಗದ ರೂಪದಲ್ಲೇ ಬದುಕುವುದಕ್ಕೆ ವಿಪರೀತ ದೈಹಿಕ ಮತ್ತು ಸಾಮಾಜಿಕ ಯಾತನೆ ಅನುಭವಿಸುವವರೇ ಟ್ರಾನ್ಸ್‍ಜೆಂಡರ್ ವ್ಯಕ್ತಿಗಳು. ಇನ್ನು ಹುಟ್ಟಿದಾಗ ಗಂಡು ಎಂದೋ ಅಥವಾ `ಇಂಟರ್‍ಸೆಕ್ಸ್’ ಎಂದೋ ಕರೆಯಲ್ಪಟ್ಟು, ಮುಂದೆ ಬೆಳೆಯುತ್ತಾ ಯಾರು ತಮ್ಮನ್ನು ತಾವು ಮಹಿಳೆಯಂತೆ ಉಪಚರಿಸಿಕೊಳ್ಳ ಬಯಸುತ್ತಾರೊ ಅವರೇ ಟ್ರಾನ್ಸ್‍ಜೆಂಡರ್ ಮಹಿಳೆಯರು. ಕೆಲವರು ತಮ್ಮನ್ನು ತಾವು `ಟ್ರಾನ್ಸ್‍ಜೆಂಡರ್ ಮಹಿಳೆ’ ಎಂದು ಕರೆದುಕೊಂಡರೆ ಮತ್ತೆ ಕೆಲವರು ಸಂಪೂರ್ಣವಾಗಿ `ಮಹಿಳೆ’ ಎಂದೂ, ಇನ್ನೂ ಕೆಲವರು `ತೃತೀಯ ಲಿಂಗಿ’ಗಳೆಂದೂ ತಮ್ಮನ್ನು ಗುರುತಿಸಿಕೊಳ್ಳುತ್ತಾರೆ. ಕರ್ನಾಟಕದಲ್ಲಿ ಇಂತವರನ್ನು ಮಂಗಳಮುಖಿ ಎಂತಲೂ, ತಮಿಳಿನಲ್ಲಿ ತಿರುನಂಗಾಯಿ ಅಥವಾ ಅರವಾಣಿ ಎಂತಲೂ, ಹಿಂದಿಯಲ್ಲಿ ಕಿನ್ನರ್ ಎಂದೂ ಆಯಾ ಭಾಗದ ಪ್ರಾದೇಶಿಕ ರೂಢಿ ನಾಮದೊಂದಿಗೆ ಗುರುತಿಸಲಾಗುತ್ತೆ.
ಹಾಗಾಗಿ, ಲಿಂಗ ಪರಿವರ್ತಿತರು ಮತ್ತು ಇಂಟರ್‍ಸೆಕ್ಸ್ ಸಮುದಾಯದ ವ್ಯಕ್ತಿಗಳು ಒಟ್ಟಾಗಿ, ಪರಸ್ಪರ ಬೆನ್ನೆಲುಬಾಗಿ ಜೀವಿಸುವ ಒಂದು ಸಾಂಸ್ಕøತಿಕ ಸಮೂಹ ವ್ಯವಸ್ಥೆಯನ್ನೇ ಹಿಜಡಾ ಸಮುದಾಯ ಅಂತ ಕರೆಯಬಹುದು. ಅಲ್ಲಿ ಅವರು ತಮಗಿಷ್ಟವಾದ ಲಿಂಗತ್ವದ ರೂಪದಲ್ಲಿ ಬದುಕುತ್ತಾರೆ, ಮತ್ತು ತಾವೇ ಗುರುತಿಸಿಕೊಳ್ಳಲು ಬಯಸುವ ಲಿಂಗಕ್ಕೆ ಅನುಗುಣವಾಗಿ ತಮ್ಮ ದೇಹವನ್ನು ಸರ್ಜರಿ ಮಾಡಿಕೊಳ್ಳಲೂಬಹುದು. ಇವರು ತಮ್ಮದೇ ಮನೆಯವರಿಂದ, ಈ ಸಮಾಜದಿಂದ ತೀವ್ರ ಹಿಂಸೆ, ಬಹಿಷ್ಕಾರಗಳನ್ನು ಅನುಭವಿಸುತ್ತಾರೆ; ಮನೆ, ಆಸ್ಪತ್ರೆ ಸೌಲಭ್ಯ, ಶಿಕ್ಷಣ, ಉದ್ಯೋಗ ಹೀಗೆ ಎಲ್ಲಾ ಸವಲತ್ತುಗಳಿಂದ ಅವರನ್ನು ವಂಚಿಸಲಾಗುತ್ತೆ. ಕೊನೆಗೆ ತಮ್ಮ ಹೊಟ್ಟೆಪಾಡಿಗಾಗಿ ಸ್ವಯಂ-ಸಂಘಟಿತ ಭಿಕ್ಷಾಟನೆಯನ್ನೋ, ವೇಶ್ಯಾವಾಟಿಕೆಯನ್ನೋ ಅವರು ಅನಿವಾರ್ಯವಾಗಿ ಅವಲಂಭಿಸಬೇಕಾಗುತ್ತೆ. ಬಹಳಷ್ಟು ಲಿಂಗಪರಿವರ್ತಿತ ಮಹಿಳೆಯರು ಮತ್ತು ಇಂಟರ್‍ಸೆಕ್ಸ್ ವ್ಯಕ್ತಿಗಳು ಈ ಹಿಜಡಾ ವ್ಯವಸ್ಥೆಯ ಹೊರಗೂ ತಮ್ಮ ಜೀವನ ನಡೆಸುತ್ತಾರೆ.
ಇನ್ನು ಕೆಲವರು ಹುಟ್ಟಿದಾಗ ಈ ಸಮಾಜದಿಂದ `ಗಂಡು’ ಎಂದು ಕರೆಯಲ್ಪಟ್ಟು, ತನ್ನನ್ನು ತಾನು ಹೆಣ್ಣೆಂದು ಉಪಚರಿಸಿಕೊಂಡರೂ ಸರ್ಜರಿಯ ಮೂಲಕ ದೇಹವನ್ನು ಮಾರ್ಪಾಡಿಸಿಕೊಳ್ಳದೆ ಬದುಕುತ್ತಾರೆ. ಅಂತವರನ್ನು ನಮ್ಮ ದೇಶದಲ್ಲಿ ‘ಕೋಥಿ’ ಎಂದು ಕರೆಯಲಾಗುತ್ತೆ. ಇವರಲ್ಲಿ ಕೆಲವರ ಸ್ತ್ರೀ ಲಕ್ಷಣಗಳು ಅವರು ಧರಿಸುವ ಉಡುಪು ಮತ್ತು ಜೀವನಶೈಲಿಯ ಅಭಿವ್ಯಕ್ತಿವರೆಗೆ ವ್ಯಾಪಿಸಿರುತ್ತವೆ ಅಂತವರನ್ನು ‘ಸತ್ಲಾ ಕೋಥಿ’ ಎನ್ನಲಾಗುವುದು. ಇನ್ನು ಕೆಲವರು ಪ್ಯಾಂಟ್-ಶರ್ಟ್‍ನಂತಹ ಪುರುಷ ಸಹಜ ಧಿರಿಸಿ ನಲ್ಲಿದ್ದರೂ ಸ್ತ್ರೀ ಲಕ್ಷಣಗಳನ್ನು ಅಭಿವ್ಯಕ್ತಿಸುತ್ತಾರೆ. ಅಂತವರನ್ನು ‘ಪಂತಿ ಸತ್ಲಾ ಕೋಥಿ’ ಎಂದು ಗುರುತಿಸಲಾಗುತ್ತೆ. ಅಂತವರು ಪುರುಷರೊಂದಿಗಿನ ತಮ್ಮ ಸಂಬಂಧವನ್ನು ಒಪ್ಪಿಕೊಳ್ಳುವ ಮೂಲಕ ತಮ್ಮ ಸ್ತ್ರೀ ಲಿಂಗತ್ವವನ್ನು ಅನುಭವಿಸುತ್ತಾರೆ. ಕೆಲವು ಸಲ, ಇಂಗ್ಲಿಷ್ ಪದವಾದ ‘ಗೇ’ ಎಂದು ಗುರುತಿಸಿಕೊಳ್ಳುವವರನ್ನು ‘ಇಂಗ್ಲಿಷ್ ಕೋಥಿ’ ಎಂದೂ ಕರೆಯಲಾಗುವುದು. ಒಂದೊಮ್ಮೆ ನಾವು ‘ಗೇ’ ಅನ್ನೋದು ಪರಕೀಯ ಪದವೆಂದು ಕರೆಯುವುದಾದರೆ, ನಮ್ಮ ನೆಲದ ‘ಕೋಥಿ’ ಅದಕ್ಕೆ ಸಮನಾರ್ಥಕವಾದ ಪದವಾಗಿದೆ. ಇಲ್ಲಿರುವ ಒಂದೇ ವ್ಯತ್ಯಾಸವೇನೆಂದರೆ, ಕೋಥಿ ಎನ್ನುವುದು, ಹುಟ್ಟಿದಾರಭ್ಯ ನಿಗದಿಪಡಿಸಲಾದ `ಗಂಡು’ ಲಿಂಗತ್ವದಿಂದ ವ್ಯಕ್ತಿಯ `ಹೆಣ್ಣು’ ರೂಪಾಂತರದ ಲಿಂಗ ಆಯ್ಕೆಯನ್ನು ಒಪ್ಪಿಕೊಳ್ಳುವ ಒಂದು ಬಗೆಯ ಲಿಂಗ ಅನನ್ಯತೆಯಾದರೆ, ‘ಗೇ’ ಎನ್ನುವುದು ಆ ವ್ಯಕ್ತಿಯ ಲೈಂಗಿಕತೆಯನ್ನು ಬಿಂಬಿಸುತ್ತದೆ. ಕೋಥಿ-ಹಿಜಡಾ ದೃಷ್ಟಿಕೋನದ ಪ್ರಕಾರ, ಗಂಡಸರು ಯಾರೊಂದಿಗಾದರು ಸರಿ, ಯಾವುದರೊಂದಿಗಾದರು ಸರಿ ಕಾಮಾಸಕ್ತರಾಗಿರುತ್ತಾರೆ. ಗಂಡಸರತ್ತಲೇ ಲೈಂಗಿಕಾಸಕ್ತಿ ಹೊಂದಿರುವ ‘ಪುರುಷ ಗೇ’ ಎನ್ನುವುದಕ್ಕಾಗಲಿ, ಗಂಡು-ಹೆಣ್ಣಿನ ನಡುವಿನ heterosexualityಯನ್ನು ವಿವರಿಸುವುದಕ್ಕಾಗಲಿ, ಅಥವಾ ಗಂಡು ಇಲ್ಲವೇ ಹೆಣ್ಣು ಎರಡೂ ಲಿಂಗದ ಕಡೆ ಆಕರ್ಷಿತವಾಗುವ bisexualityಯನ್ನು ವಿವರಿಸುವುದಕ್ಕಾಗಲಿ ನಮ್ಮ ದೇಸಿ ನೆಲೆಗಟ್ಟಿನ ಪದಗಳು ಸಿಗುವುದಿಲ್ಲ.
ನನಗೆ ತಿಳಿದಿರುವ ಮಟ್ಟಿಗೆ, ಒಂದು ಹೆಣ್ಣು ಮತ್ತೊಂದು ಹೆಣ್ಣಿನತ್ತ ಆಕರ್ಷಿತವಾಗುವುದನ್ನು ಉಲ್ಲೇಖಿಸುವ `ಲೆಸ್ಬಿಯನ್’ ಪದಕ್ಕೆ ಸಮನಾರ್ಥಕವಾದ ಪದ ಭಾರತದ ಯಾವ ಭಾಷೆಯಲ್ಲೂ ಕಾಣಸಿಗದು. ಇದಕ್ಕೆ ನಮ್ಮ ಜಾತಿ ಮತ್ತು ಪಿತೃಪ್ರಧಾನ ವ್ಯವಸ್ಥೆಯ ಮನಸ್ಥಿತಿ ಕಾರಣವಾಗಿರಬಹುದು. ನಮ್ಮ ದೇಶದಲ್ಲಿ ಮಹಿಳೆಯ ಲೈಂಗಿಕ ಒಲವಿಗೆ ಮನ್ನಣೆ ಸಿಕ್ಕಿದ್ದು ತುಂಬಾ ವಿರಳ; ಇಲ್ಲವೇ ಇಲ್ಲ ಅನ್ನಬಹುದೇನೊ. ಕಾರಣ ಸ್ಪಷ್ಟ. ಜಾತಿ ಪದ್ಧತಿ ಮತ್ತು ಆಸ್ತಿ ಹಸ್ತಾಂತರ ವ್ಯವಸ್ಥೆಯನ್ನು ಕಾಪಿಟ್ಟುಕೊಳ್ಳಬೇಕೆಂದರೆ ಈ ಪುರುಷ ಅಧಿಪತ್ಯದ ಸಮಾಜಕ್ಕೆ ಆಕೆಯ ಲೈಂಗಿಕತೆಯನ್ನು ನಿರ್ಬಂಧಿಸಿ, `ನಿಶ್ಚಯಿಸಿದ ಮದುವೆಗೆ’ ಆಕೆಯನ್ನು ಬಿಗಿಯುವುದು ಅನಿವಾರ್ಯವಾಗಿತ್ತು.
ಅದೇರೀತಿ, ಹುಟ್ಟಿದಾಗ ಹೆಣ್ಣು ಎಂದು ಘೋಷಿಸಲ್ಪಟ್ಟು, ಬೆಳೆಯುತ್ತಾ ತನ್ನನ್ನು ಗಂಡಾಗಿ ಉಪಚರಿಸಿಕೊಳ್ಳಲು ಬಯಸುವ `ಲಿಂಗಪರಿವರ್ತಿತ ಪುರುಷ’ರನ್ನು ಉಲ್ಲೇಖಿಸುವುದಕ್ಕೂ ನಮ್ಮ ದೇಶೀ ಭಾಷೆಗಳಲ್ಲಿ ಹೆಚ್ಚು ಪದಗಳಿಲ್ಲ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಬಳಸಲಾಗುವ ‘ಗಂಡುಬಸಕ’ ಎನ್ನುವ ಪದ ತುಂಬಾ ಅವಹೇಳನಾತ್ಮಕವಾದುದು. ಇನ್ನು ‘ಶಿಖಂಡಿ’ ಕೂಡ ಅಷ್ಟೇ ಅವಹೇಳನಕಾರಿ. ಈ ಲಿಂಗಪರಿವರ್ತಿತ ಪುರುಷರಿಗಿರುವ ಏಕಮಾತ್ರ ಗೌರವಯುತ ಪದವೆಂದರೆ ‘ತಿರುನಂಬಿ’. ಈ ಪದ ತಮಿಳುನಾಡಿನಲ್ಲಿ ನಡೆದ ಪೆರಿಯಾರ್‍ವಾದಿ ಆತ್ಮ-ಗೌರವ ಚಳವಳಿಯ ಕೊಡುಗೆ.
ಲೈಂಗಿಕ ಅಭಿವ್ಯಕ್ತಿಯ ವೈವಿಧ್ಯತೆಗಳನ್ನು ವಿವರಿಸುವ ಇಂಗ್ಲಿಷ್ ಸಂಕ್ಷೇಪವಾದ ‘ಐಉಃಖಿಕಿ’ ಎನ್ನುವುದಕ್ಕೆ ಭಾರತೀಯ ಭಾಷೆಗಳಲ್ಲಿ ಹೆಚ್ಚೇನು ಸಮಾನ ಪದಗಳು ಸಿಗುವುದಿಲ್ಲ. ತನ್ನದೇ ಲಿಂಗದ ಇನ್ನೊಬ್ಬ ವ್ಯಕ್ತಿಯತ್ತ ಆಕರ್ಷಣೆ ಹೊಂದುವುದನ್ನು ಸೂಚಿಸುವುದಕ್ಕೆ ಇತ್ತೀಚೆಗೆ ‘ಸಮಲೈಂಗಿಕ’ ಎನ್ನುವ ಕೃತಕ ಪದವನ್ನು ಬಳಸಲಾಗುತ್ತಿದೆ. ಇಂಗ್ಲಿಷ್ ಭಾಷೆಯಲ್ಲೂ ಈ ಐಉಃಖಿಕಿ ಎನ್ನುವ ಪದಗಳು ಇತ್ತೀಚಿನವೇ ಎನ್ನುವುದೂ ಗಮನಾರ್ಹ.
ಆದಾಗ್ಯೂ, ಲಿಂಗ ವೈವಿಧ್ಯತೆಯನ್ನು ವಿವರಿಸಲು ಭಾರತೀಯ ಭಾಷೆಗಳಲ್ಲಿ ಅಪಾರ ಪದಗಳ ಸಂಪತ್ತಿದೆ; ಆದರೆ ಇಂಗ್ಲೀಷಿನಲ್ಲಿ ಇದಕ್ಕೆ ಇರೋದು `ಟ್ರಾನ್ಸ್‍ಜೆಂಡರ್’ ಎನ್ನುವ ಪದವೊಂದೇ. ಇದಕ್ಕೆ ಕಾರಣವೇನೆಂದರೆ, ಹಿಜಡಾ ಸಮುದಾಯವು ಭಾರತದ ಐತಿಹಾಸಿಕ ಹೆಜ್ಜೆಗಳಲ್ಲಿ ತನ್ನದೇ ಆದ ನಾಯಕತ್ವಗಳ ಛಾಪು ಮೂಡಿಸಿದೆ. ಇಂತಹ ಇತಿಹಾಸ ಪಾಶ್ಚಾತ್ಯ ದೇಶಗಳಲ್ಲಿಲ್ಲ. ತಾರತಮ್ಯ, ಹಿಂಸೆ, ನಿಂದನೆಯ ವಿರುದ್ಧ ದಿನನಿತ್ಯವೂ ಸಂಘಟನಾತ್ಮಕ ಹೋರಾಟ ನಡೆಸುತ್ತಾ ಬಂದ ಈ ಸಂಪದ್ಭರಿತ ಇತಿಹಾಸಕ್ಕೆ ನಮ್ಮದೊಂದು ದೊಡ್ಡ ಸಲಾಮ್.

– ಕಾರ್ತಿಕ್ ಬಿಟ್ಟು
ಕನ್ನಡಕ್ಕೆ: ರಾಜಶೇಖರ್ ಅಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...