Homeನ್ಯಾಯ ಪಥಮೇಲ್ಜಾತಿಗಳಿಗೆ 10% ಮೀಸಲಾತಿಯೆಂಬುದು ಮಹಾ ವಂಚನೆ : ಬಿ. ಶ್ರೀಪಾದ ಭಟ್‌

ಮೇಲ್ಜಾತಿಗಳಿಗೆ 10% ಮೀಸಲಾತಿಯೆಂಬುದು ಮಹಾ ವಂಚನೆ : ಬಿ. ಶ್ರೀಪಾದ ಭಟ್‌

ಜಾತಿ ತಾರತಮ್ಯದ, ಅಸಮಾನತೆಯ ಭಾರತೀಯ ಸಮಾಜದಲ್ಲಿ ಶ್ರೇಣೀಕೃತ ಜಾತಿ ವ್ಯವಸ್ಥೆಯ ಕೆಳಸ್ತರದಲ್ಲಿರುವ ತಳ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಾರಿಗೊಂಡ ಮೀಸಲಾತಿ ಪರಿಕಲ್ಪನೆ ಇಂದು ರಾಜಕೀಯ ಪಕ್ಷಗಳ ನಡುವಿನ ಅದಿಕಾರ ಹಂಚಿಕೆಯ ಅಸ್ತ್ರಗಳಾಗಿವೆ. ಇಲ್ಲಿನ ಬ್ರಶ್ಟ ರಾಜಕಾರಣದಲ್ಲಿ ಈ ಸಮಾನತೆಯ ಆಶಯವು ನಾಶಗೊಳ್ಳುತ್ತಿದೆ.

- Advertisement -
- Advertisement -

ಮೀಸಲಾತಿ: ಕಣ್ಣಗಾಯಕ್ಕೊಂದು ಕನ್ನಡಿ

ಸರಣಿ ಸಂಪಾದಕರು: ವಿಕಾಸ್‌ ಆರ್‌ ಮೌರ್ಯ

ಪ್ರಸ್ತಾವನೆ
2014-19ರ ಸಂಸತ್ತಿನ ಕಡೆಯ ಚಳಿಗಾಲದ ಅದಿವೇಶನವು ಜನವರಿ 9, 2019ರಂದು ಕೊನೆಗೊಂಡಿತು. ಈ ಬಾರಿಯ ಅದಿವೇಶನ ಎಂದಿನಂತಿರಲಿಲ್ಲ. ಕಡೆಯ ಎರಡು ದಿನಗಳಲ್ಲಿ ಮೇಲ್ಜಾತಿಗಳಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವವರಿಗೆ (8 ಲಕ್ಷಕ್ಕಿಂತ ಕಡಿಮೆ ವಾರ್ಶಿಕ ವರಮಾನ), 5 ಎಕರೆಗಿಂತ ಕಡಿಮೆ ಕೃಷಿ ಭೂಮಿ ಹೊಂದಿರುವವರಿಗೆ, 10 ಚದುರಕ್ಕಿಂತಲೂ ಕಡಿಮೆ ಅಳತೆಯ ನಿವೇಶನ ಇರುವವರಿಗೆ ಶೈಕ್ಷಣಿಕ, ಔದ್ಯೋಗಿಕ ವಲಯಗಳಲ್ಲಿ ಶೇಕಡಾ 10 ಪ್ರಮಾಣದಲ್ಲಿ ಮೀಸಲಾತಿ ಕಲ್ಪಿಸುವ ಸಂವಿಧಾನದ (103ನೆ ತಿದ್ದುಪಡಿ) ಮಸೂದೆ 2019ಕ್ಕೆ ಬಹುಮತದ ಮೂಲಕ ಅಂಗೀಕರಿಸಲಾಗಿದೆ.

ಮೇಲ್ಜಾತಿಗಳಿಗೆ ಮೀಸಲಾತಿಯನ್ನು ಬೆಂಬಲಿಸುವುದರ ಮೂಲಕ (ಡಿಎಂಕೆ, ಆರ್‍ಜೆಡಿ, ಐಯುಎಂಎಲ್ ಪಕ್ಷಗಳನ್ನು ಹೊರತುಪಡಿಸಿ) ಇತರ ಎಲ್ಲಾ ಪಕ್ಷಗಳ ಸಂಸದರು ಪ್ರಜಾಪ್ರಭುತ್ವ, ಸಂವಿಧಾನ ಎಂಬ ಆಶಯಗಳಿಗೆ ಚರಮಗೀತೆ ಹಾಡಿದರು. ಸಂವಿಧಾನವನ್ನು ಬದಲಾಯಿಸಬೇಕೆನ್ನುವ ಆರೆಸ್ಸೆಸ್‍ನ ಮೂಲಸಿದ್ದಾಂತಕ್ಕೆ ಪೂರಕವಾಗಿ ಬಿಜೆಪಿ ಪಕ್ಷವು ಅದರ ಮೂಲಭೂತ ಹಕ್ಕುಗಳನ್ನು ತಿದ್ದುಪಡಿ ಮಾಡಲು ಹೊರಟಿರುವ ಸಂದರ್ಭದಲ್ಲಿ, ಅದಕ್ಕೆ ಮುನ್ನುಡಿಯಾಗಿ ಸಾಮಾಜಿಕ-ಸಾಂಸ್ಕೃತಿಕ ಆಧಾರದ ಮೇಲೆ ರೂಪುಗೊಂಡ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಆರ್ಥಿಕ ಸಬಲೀಕರಣದ ಸ್ವರೂಪಕ್ಕೆ ಬದಲಾಯಿಸಲಾಗಿದೆ. ಆದರೆ ಮೇಲ್ಜಾತಿಗಳಿಗೆ ಮೀಸಲಾತಿ ಕಲ್ಪಿಸುವ ಈ ಮಸೂದೆಯ ಕುರಿತಾದ ದೀರ್ಘ ಚರ್ಚೆ, ಸಂವಾದ ಪರಿಶೀಲನೆ ನಡೆಯಬೇಕಿತ್ತು. ಆದರೆ ಇವೆಲ್ಲವನ್ನು ಕೈಬಿಟ್ಟು ತರಾತುರಿಯಲ್ಲಿ ಕೇವಲ ಮೂರು ದಿನಗಳೊಳಗೆ ಈ ಮಸೂದೆಯನ್ನು ಜಾರಿಗೊಳಿಸಿದ ಮೋದಿ ಸರಕಾರದ ನೇತೃತ್ವದಲ್ಲಿ ನಡೆದ ಕ್ಷಿಪ್ರ ಘಟನೆಗಳು ಪ್ರಜಾಪ್ರಭುತ್ವದ ಬುನಾದಿಯನ್ನು ಸಡಿಲಗೊಳಿಸುವಂತಿವೆ.

ಮೇಲ್ಜಾತಿಗಳಿಗೆ ಶೇಕಡಾ 10 ರಷ್ಟು ಮೀಸಲಾತಿಯನ್ನು ಪ್ರಶ್ನಿಸಿ ಉದ್ಯಮಿ ತೆಹಸೀನ ಪೂನವಾಲ ಅವರು ಮೀಸಲಾತಿಯನ್ನು ಆರ್ಥಿಕ ಆಧಾರದ ಮೇಲೆ ನಿರ್ದರಿಸಬಾರದು ಎಂದು ಸುಪ್ರೀಂಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಬಲಪಂಥೀಯ ಹಿನ್ನೆಲೆಯ ‘ಸಮಾನತೆಗಾಗಿ ಯುವಜನತೆ’ ಎನ್ನುವ ಸಂಘಟನೆಯು ಈ ಶೇಕಡಾ 10 ಪ್ರಮಾಣದ ಆರ್ಥಿಕ ಮೀಸಲಾತಿಯು ಶೇಕಡಾ 50 ಪ್ರಮಾಣದ ಮಿತಿಯನ್ನು ಮೀರುತ್ತದೆ ಎಂದು ತಕರಾರು ಅರ್ಜಿ ಸಲ್ಲಿಸಿದ್ದಾರೆ.

ಡಿಎಂಕೆ ಪಕ್ಷವು “ಹಿಂದುಳಿದ ವರ್ಗ, ಶೋಷಿತ ಸಮುದಾಯಗಳ ಪ್ರಾತಿನಿದ್ಯಕ್ಕಾಗಿ ಮೀಸಲಾತಿಯನ್ನು ಅಳವಡಿಸಿಕೊಳ್ಳಲಾಗಿದೆ. ಆದರೆ ಆರ್ಥಿಕ ಆಧಾರಿತ ಮೀಸಲಾತಿಯು ಇದಕ್ಕೆ ವಿರುದ್ದವಾಗಿದೆ. ಈ ಮಸೂದೆಯನ್ನು ಅನೂರ್ಜಿತಗೊಳಿಸಬೇಕು” ಎಂದು ಮೇಲ್ಮನವಿ ಸಲ್ಲಿಸಿದೆ. ಆದರೆ ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯಿ ನೇತೃತ್ವದ ಪೀಠವು ಸದ್ಯಕ್ಕೆ ಈ ಮೀಸಲಾತಿ ತಿದ್ದುಪಡಿ ಮಸೂದೆಗೆ ತಡೆ ನೀಡಲು ನಿರಾಕರಿಸಿದೆ.

ಸಂವಿಧಾನದ ನೀತಿಸಂಹಿತೆ
ಸಂವಿಧಾನದ 340ನೆ ಪರಿಚ್ಛೇದದ ಅನುಸಾರ ಮೀಸಲಾತಿಗೆ ಸಾಮಾಜಿಕ, ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಮಾತ್ರ ಪರಿಗಣಿಸಬೇಕೆಂದು ಹೇಳಿದೆ. ಪರಿಚ್ಚೇದದ 15(4) ರ ಅನುಸಾರ ಸಾಮಾಜಿಕ, ಶೈಕ್ಷಣಿಕವಾಗಿ ದುರ್ಬಲವಾಗಿರುವ ಹಿಂದುಳಿದ ವರ್ಗಗಳು ಮತ್ತು ಪ.ಜಾತಿ/ಪ.ಪಂಗಡಗಳಿಗೆ ವಿಶೇಷ ಸೌಲಭ್ಯ ಕಲ್ಪಿಸಲು ಸರಕಾರಕ್ಕೆ ಸಂಪೂರ್ಣ ಅಧಿಕಾರವಿದೆ. ಪರಿಚ್ಚೇದದ 16(4)ರ ಅನುಸಾರ ಸೂಕ್ತ ಪ್ರಾತಿನಿದ್ಯವಿಲ್ಲದ ಸಾಮಾಜಿಕವಾಗಿ ಹಿಂದುಳಿದ ಸಮುದಾಯಗಳಿಗೆ ಉದ್ಯೋಗಗಳಲ್ಲಿ ಮೀಸಲಾತಿ ಕಲ್ಪಿಸಲು ಸರಕಾರಕ್ಕೆ ಅಧಿಕಾರವಿದೆ ಎಂದು ವಿವರಿಸಲಾಗಿದೆ. ಆದರೆ ಈ ಪರಿಚ್ಚೇದಗಳಲ್ಲಿ ಎಲ್ಲಿಯೂ ಆರ್ಥಿಕವಾಗಿ ದುರ್ಬಲವಾಗಿರುವ ಅಂಶವನ್ನು ಮೀಸಲಾತಿಗೆ ಪರಿಗಣಿಸಿಲ್ಲ. ಆದರೆ ಬಿಜೆಪಿ ಸರಕಾರವು ಸಂವಿಧಾನ ತಿದ್ದುಪಡಿ ಮಾಡಿ ಪರಿಚ್ಚೇದ 15(6), 16(6)ಗಳ ಮೂಲಕ ಆರ್ಥಿಕವಾಗಿ ದುರ್ಬಲವಾಗಿರುವ ಮೇಲ್ಜಾತಿಗಳು ಎಂದು ಸೇರಿಸಿದೆ. ಆದರೆ ಈ ತಿದ್ದುಪಡಿ ಮಾಡುವಾಗ ಉದ್ದೇಶಪೂರ್ವಕವಾಗಿ ‘ಸೂಕ್ತ ಪ್ರಾತಿನಿದ್ಯವಿಲ್ಲದ ಜಾತಿಗಳು ಎನ್ನುವ ಅಂಶವನ್ನು ಕೈಬಿಟ್ಟಿದೆ’. ಅಂದರೆ ಭರಪೂರ ಪ್ರಾತಿನಿದ್ಯವಿರುವ ಜಾತಿಗಳೂ ಸಹ ಆರ್ಥಿಕವಾಗಿ ದುರ್ಬಲರು ಎನ್ನುವ ಪತ್ರದ ಮೂಲಕ ಮೀಸಲಾತಿ ಪಡೆಯಬಹುದು.

ಪರಿಚ್ಚೇದ 46ರ ಅನುಸಾರ ‘ದುರ್ಬಲ ಜನರ ಅದರಲ್ಲೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನು ಸಾಮಾಜಿಕ ಅಸಮಾನತೆ ಮತ್ತು ಎಲ್ಲಾ ಬಗೆಯ ದೌರ್ಜನ್ಯಗಳಿಂದ ರಕ್ಷಿಸಬೇಕಿದೆ. ಪ್ರಭುತ್ವವು ಅವರ ಶೈಕ್ಷಣಿಕ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ಕಾಪಾಡಬೇಕು’ ಎಂದು ಹೇಳಿದೆ. ಇಲ್ಲಿ ಎಲ್ಲಿಯೂ ಮೇಲ್ಜಾತಿಗಳ ಉಲ್ಲೇಖವಿಲ್ಲ. ಮೀಸಲಾತಿ ನೀತಿಯನ್ನು ಸಂವಿಧಾನದಲ್ಲಿ ಮತ್ತು ಅದರ ಪೀಠಿಕೆಯಲ್ಲಿ ಪ್ರಸ್ತಾಪಿಸಲ್ಪಟ್ಟ ‘ಸಮಾನತೆಯ ತತ್ವಗಳಿಂದ’ ಅಳವಡಿಸಿಕೊಳ್ಳಲಾಗಿದೆ.

1973ರ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ‘ಸಂವಿಧಾನ ಪೀಠಿಕೆಯು ಸಂವಿಧಾನದ ಬುನಾದಿ ರಚನೆಯಾಗಿದೆ, ಈ ಬುನಾದಿ ರಚನೆಯನ್ನು ದುರುದ್ದೇಶಪೂರ್ವಕವಾಗಿ ಹಸ್ತಕ್ಷೇಪ ಮಾಡುವುದು, ತಿದ್ದುಪಡಿ ಮಾಡುವುದನ್ನು ಅಸಿಂಧು ಎಂದು ಪರಿಗಣಿಸಲಾಗುವುದು’ ಎಂದು ಸ್ಪಶ್ಟವಾಗಿ ಹೇಳಿದೆ. ಆದರೆ ಮೋದಿ ಸರಕಾರದ ಈ ದುರುದ್ದೇಶ ಹಸ್ತಕ್ಷೇಪವು ನ್ಯಾಯಾಂಗದ ಆದೇಶವನ್ನು ಮಾನ್ಯ ಮಾಡುವುದಿಲ್ಲ. ಇದು ನ್ಯಾಯಾಂಗದಲ್ಲಿ ಪ್ರಶ್ನಿಸಲ್ಪಡುತ್ತದೆ.

ಆದರೆ ಈ ಹಿಂದೆ 1992ರಲ್ಲಿ ‘ಇಂದಿರಾ ಸಹಾನಿ ವರ್ಸಸ್ ಕೇಂದ್ರ ಸರಕಾರ’ ಮೊಕದ್ದಮೆಯಲ್ಲಿ ಸುಪ್ರೀಂ ಕೋರ್ಟ್‍ನ 9 ನ್ಯಾಯಾಧೀಶರ ಪೀಠವು ಮೀಸಲಾತಿಯು ಶೇಕಡಾ 50 ಪ್ರಮಾಣದ ಗರಿಶ್ಟ ಮಿತಿಯನ್ನು ಮೀರುವಂತಿಲ್ಲ ಎಂದು ತೀರ್ಪು ಕೊಟ್ಟಿದೆ. ಈ ಮಿತಿಯನ್ನು ದಾಟುವುದು ಸಂವಿಧಾನ ವಿರೋಧಿ ಎಂದು ಸಹ ಹೇಳಿದೆ. ಜೊತೆಗೆ ಕೇವಲ ಆರ್ಥಿಕ ಹಿಂದುಳಿವಿಕೆಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದೂ ಸ್ಪಶ್ಟ ಪಡಿಸಿದೆ. \

2006ರಲ್ಲಿ ಈ ಶೇಕಡಾ 50 ಪ್ರಮಾಣದ ಗರಿಶ್ಟ ಪರಿಮಿತಿಯು ಬುನಾದಿ ರಚನೆಯ ಭಾಗವಾಗಿದೆಯೆ ಎಂದು ಪ್ರಶ್ನಿಸಲಾಯಿತು. ಆಗ ಸುಪ್ರೀಂ ಕೋರ್ಟ್ ‘ಶೇಕಡಾ 50 ಪ್ರಮಾಣದ ಗರಿಶ್ಟ ಮಿತಿ, ಕೆನೆ ಪದರದ ಪರಿಕಲ್ಪನೆ, ಹಿಂದುಳಿಯುವಿಕೆ ಮತ್ತು ಅಸಮರ್ಪಕ ಪ್ರಾತಿನಿದ್ಯ ಎಲ್ಲವೂ ಸಂವಿಧಾನಿಕ ಅಗತ್ಯಗಳಾಗಿವೆ ಮತ್ತು ಇವಲ್ಲದೆ ಸಮಾನತೆಯ ರಚನೆ ಕುಸಿದುಬೀಳುತ್ತದೆ’ ಎಂದು ಹೇಳಿದೆ.

ಈಗ 10 ಮೀಸಲಾತಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಬೇಕೆಂದರೆ ‘ಇಂದಿರಾ ಸಹಾನಿ ವರ್ಸಸ್ ಕೇಂದ್ರ ಸರಕಾರ’ ಮೊಕದ್ದಮೆಯಲ್ಲಿದ್ದ 9 ನ್ಯಾಯಾಧೀಶರಿಗಿಂತಲೂ ಹೆಚ್ಚಿನ ಸಂಖ್ಯೆಯ ಸಂವಿಧಾನ ಪೀಠವನ್ನು ರಚಿಸಬೇಕು. ನಂತರ ಅವರು ಈ ಮಸೂದೆಯ ಎಲ್ಲಾ ಮಗ್ಗಲುಗಳನ್ನು ಪರಿಶೀಲಿಸಬೇಕು, ನಂತರ ವಿಚಾರಣೆ ನಡೆಸಬೇಕು. ಇದು ವರ್ಶಗಟ್ಟಲೆ ನಡೆಯುವ ಸಾಧ್ಯತೆ ಇದೆ. ಈ ಎಲ್ಲಾ ಹಿನ್ನೆಲೆಗಳಲ್ಲಿ ಇದು ನ್ಯಾಯಾಲಯದಲ್ಲಿ ಊರ್ಜಿತವಾಗುವುದಿಲ್ಲ ಎಂದು ಕಾನೂನು ತಜ್ಞರು ಹೇಳುತ್ತಿದ್ದಾರೆ.

ಆರ್ಥಿಕ ಆಯಾಮ

ಈ 10ನೇ ಸಂವಿಧಾನ ತಿದ್ದುಪಡಿ 2019 ಮಸೂದೆಯಲ್ಲಿ 8 ಲಕ್ಷ ಗರಿಶ್ಟ ಆದಾಯ, 5 ಎಕರೆ ಗರಿಶ್ಟ ಭೂಮಿಯ ಮಿತಿಯನ್ನು ವಿಧಿಸಲಾಗಿದೆ. ತಮಾಶೆಯೆಂದರೆ ಸುಮಾರು ಶೇಕಡ 95 ಪ್ರಮಾಣದ ಮೇಲ್ಜಾತಿ ಜನಸಂಖ್ಯೆಯು ಮಸೂದೆಯ ಈ ಮಿತಿಯ ಅಡಿಯಲ್ಲಿ ಬರುತ್ತಾರೆ ಮತ್ತು ಇವರೆಲ್ಲ ಈ ಸೌಲಭ್ಯಕ್ಕೆ ಅರ್ಹರಾಗುತ್ತಾರೆ. ಶೇಕಡಾ 89 ಪ್ರಮಾಣದ ಮೇಲ್ಜಾತಿ ಜನಂಖ್ಯೆಯ ಬಳಿ 5 ಎಕರೆಗಿಂತಲೂ ಕಡಿಮೆ ಭೂಮಿ ಇದೆ. ಇವರೆಲ್ಲರೂ ಮೀಸಲಾತಿಗೆ ಅರ್ಹರಾಗುತ್ತಾರೆ. ಇನ್ನು ಉದ್ಯೋಗದಲ್ಲಿರುವವರಿಗೆ ವಾರ್ಶಿಕ ಆದಾಯ 2.5 ಲಕ್ಷ ದಾಟಿದರೆ ಆದಾಯ ತೆರಿಗೆ ಕಟ್ಟಬೇಕಾಗುತ್ತದೆ. ಹಾಗಿದ್ದಲ್ಲಿ ಮೇಲ್ಜಾತಿಗಳಲ್ಲಿ 8 ಲಕ್ಷಕ್ಕಿಂತ ಕಡಿಮೆ ಆದಾಯ ಇರುವವರು ಮತ್ತು ಆದಾಯ ತೆರಿಗೆ ಕಟ್ಟುತ್ತಿರುವವರನ್ನು ಆರ್ಥಿಕವಾಗಿ ದುರ್ಬಲರು ಎಂದು ಹೇಗೆ ಪರಿಗಣಿಸಲಾಗುತ್ತದೆ?

ಇತ್ತೀಚಿನವರೆಗೆ ಅನುಸೂಚಿತ ಜಾತಿ/ಪಂಗಡದ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ ಪಡೆಯಲು ರೂ. 2.5 ಲಕ್ಷ ವಾರ್ಶಿಕ ಆದಾಯ ಗರಿಶ್ಟ ಮಿತಿಯನ್ನು ನಿಗದಿಪಡಿಸಲಾಗಿತ್ತು. ಈಗ ಅದನ್ನು ಸಡಿಲಿಸಿ 6 ಲಕ್ಷಕ್ಕೆ ವಿಸ್ತರಿಸಲಾಗಿದೆ. ಆದರೆ ಮೇಲ್ಜಾತಿಗಳಿಗೆ 8 ಲಕ್ಷ ಆದಾಯ ಮಿತಿಯನ್ನು ನಿಗದಿಪಡಿಸಿರುವುದು ಯಾವ ಮಾನದಂಡದಲ್ಲಿ? ಆದಾಯ ಮಿತಿಯನ್ನು ನಿಗದಿಪಡಿಸುವಲ್ಲಿಯೂ ಜಾತಿ ತಾರತಮ್ಯ ಮಾಡಲಾಗಿದೆ.

‘ಜಾಗತಿಕ ಅಸಮಾನತೆ ದತ್ತಾಂಶ ವೇದಿಕೆ’ಯು 2012ರಲ್ಲಿ ಪ್ರಕಟ ಮಾಡಿದ ವರದಿಯ ಅನುಸಾರ ಭಾರತದ ಒಟ್ಟಾರೆ ಜನಸಂಖ್ಯೆಯ ಸರಾಸರಿ ವಾರ್ಶಿಕ ಆದಾಯ ರೂ. 1,13,222. ಈ ಸರಾಸರಿ ಆದಾಯಕ್ಕಿಂತ ಶೇಕಡಾ 47 ಹೆಚ್ಚಿನ ಪ್ರಮಾಣದಲ್ಲಿ ಮೇಲ್ಜಾತಿಗಳಲ್ಲಿನ ಬ್ರಾಹ್ಮಣರ ಸರಾಸರಿ ಆದಾಯ ರೂ 1,67,222 ಇದೆ. ಮೇಲ್ಜಾತಿಗಳಲ್ಲಿನ ಬ್ರಾಹ್ಮಣೇತರರ ಆದಾಯವು ಶೇಕಡಾ 42 ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿದೆ (ರೂ 1,60,777). ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಜನಸಂಖ್ಯೆಯ ವಾರ್ಶಿಕ ಆದಾಯವು ಭಾರತದ ಒಟ್ಟಾರೆ ಜನಸಂಖ್ಯೆಯ ಸರಾಸರಿ ವಾರ್ಶಿಕ ಆದಾಯದ (ರೂ. 1,13,222) ಪ್ರಮಾಣಕ್ಕಿಂತಲೂ ಶೇಕಡ 37/34 ಪ್ರಮಾಣದಷ್ಟು (ರೂ. 71,222) ಕಡಿಮೆ ಇದೆ. ಹಿಂದುಳಿದ ವರ್ಗಗಳ ಜನಸಂಖ್ಯೆ ಅದಾಯವು ಭಾರತದ ಒಟ್ಟಾರೆ ಜನಸಂಖ್ಯೆಯ ಸರಾಸರಿ ವಾರ್ಶಿಕ ಆದಾಯದ (ರೂ. 1,13,222) ಪ್ರಮಾಣಕ್ಕಿಂತಲೂ ಶೇಕಡ 8 ಪ್ರಮಾಣದಷ್ಟು (ರೂ. 1,03722) ಕಡಿಮೆ ಇದೆ.

ಇನ್ನು ಶೇ.50 ಪ್ರಮಾಣದ ಸಾಮಾನ್ಯ ಕೆಟಗರಿಯ ಮೂಲಕವು ಅನುಸೂಚಿತ ಜಾತಿ/ ಪಂಗಡ ಮತ್ತು ಹಿಂದುಳಿದ ವರ್ಗಗಳು ಶೈಕ್ಷಣಿಕ, ಉದ್ಯೋಗವಕಾಶಗಳನ್ನ ಪಡೆಯಬಹುದಾಗಿತ್ತು. ಆದರೆ ಈಗ ಈ ಶೇ.10 ಪ್ರಮಾಣದ ತಿದ್ದುಪಡಿ ಮಸೂದೆ ಜಾರಿಗೊಂಡರೆ ತಳ ಸಮುದಾಯಗಳಿಗೆ ಆ ಅವಕಾಶವು ಶೇ. 40 ಪ್ರಮಾಣಕ್ಕಿಳಿಯುತ್ತದೆ. ಅಂದರೆ ಕರ್ನಾಟಕದಲ್ಲಿ 101 ಪರಿಶಿಷ್ಟ ಜಾತಿ ಸಮುದಾಯಗಳಿಗೆ ಶೇ. 15%, 49 ಪರಿಶಿಷ್ಟ ಪಂಗಡ ಸಮುದಾಯಗಳಿಗೆ ಶೇ. 3%, 286 ಹಿಂದುಳಿದ, ಅತಿ ಹಿಂದುಳಿದ ಉಪಜಾತಿಗಳಿಗೆ (ಪ್ರವರ್ಗ 1 : 4%, ಪ್ರವರ್ಗ 2ಎ : 15 %, ಪ್ರವರ್ಗ 2ಬಿ: 4%, ಪ್ರವರ್ಗ 3ಎ (ಮುಸ್ಲಿಂ) : 4%, ಪ್ರವರ್ಗ 3ಬಿ : 5%) ಶೇ. 32 ಪ್ರಮಾಣದ ಮೀಸಲಾತಿ ದೊರೆತರೆ ಕೇವಲ ಶೇ. 5 ಕ್ಕಿಂತ ಕಡಿಮೆ ಇರುವ ಬ್ರಾಹ್ಮಣ, ವೈಶ್ಯ ಸಮುದಾಯದ ಮೇಲ್ಜಾತಿಗಳಿಗೆ ಶೇ. 10 ರಷ್ಟು ಮೀಸಲಾತಿ ದೊರಕುತ್ತದೆ. ಇದು ಮತ್ತೊಮ್ಮೆ ಸಾಮಾಜಿಕ ಅಸಮಾನತೆಯನ್ನು ಹುಟ್ಟುಹಾಕುತ್ತದೆ.

ಮೇಲಿನ ಅಂಕಿಸಂಖ್ಯೆಗಳನ್ನು ಈಗ ಮೋದಿ-ಆರೆಸ್ಸೆಸ್ ತರಲು ಹೊರಟಿರುವ ಮೇಲ್ಜಾತಿಗಳಿಗೆ ಮೀಸಲಾತಿಯೊಂದಿಗೆ ಹೋಲಿಸಿ ನೋಡಿ. ಈ ಶೇ. 10 ಪ್ರಮಾಣದ ಮೀಸಲಾತಿ ಏನಾದರೂ ಜಾರಿಗೊಂಡರೆ ಮುಂದಿನ 15 ವರ್ಶಗಳಲ್ಲಿ ಸರಕಾರಿ ಉದ್ಯೋಗಳಲ್ಲಿ ಶೇ. 100 ಪ್ರಮಾಣದಲ್ಲಿ ಮೇಲ್ಜಾತಿಗಳು (ಅದರಲ್ಲೂ ಬ್ರಾಹ್ಮಣರು) ನೇಮಕಗೊಳ್ಳುತ್ತಾರೆ. ದಲಿತರಿಗೆ, ತಳಸಮುದಾಯಗಳಿಗೆ ಭಾರಿ ಹಿನ್ನಡೆ ಉಂಟಾಗಲಿದೆ. ಸಾಮಾಜಿಕ ನ್ಯಾಯವು ಹಠಾತ್ತಾಗಿ 70 ವರ್ಶಗಳ ಹಿಂದಕ್ಕೆ ಚಲಿಸುತ್ತದೆ. ತಳಸಮುದಾಯಗಳ ಪ್ರಾತಿನಿದ್ಯ ಶೂನ್ಯಕ್ಕೆ ಕುಸಿಯುತ್ತದೆ.

ಉದ್ಯೋಗ ಅವಕಾಶಗಳು
ಸಾರ್ವಜನಿಕ ವಲಯ, ಇಲಾಖೆಗಳಲ್ಲಿ ಯಾವ ರೀತಿಯಲ್ಲಿ ಲೆಕ್ಕಾಚಾರ ಮಾಡಿದರೂ ಮೇಲ್ಜಾತಿಗಳ ಪ್ರಾತಿನಿದ್ಯವು ಗರಿಶ್ಟ ಮಟ್ಟದಲ್ಲಿದೆ. ಉದಾಹರಣೆಗೆ ಈಗಾಗಲೆ ಬಾರತೀಯ ಮಾದ್ಯಮರಂಗದಲ್ಲಿ ಶೇ. 97 ಪ್ರಮಾಣದಲ್ಲಿ ಮೇಲ್ಜಾತಿಗಳಿದ್ದಾರೆ. ಇದರಲ್ಲಿ ಬ್ರಾಹ್ಮಣರು ಶೇ. 85 ಪ್ರಮಾಣದಲ್ಲಿದ್ದಾರೆ. ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳಿಂದ ಶೇ. 3 ಪ್ರಮಾಣದಲ್ಲಿದ್ದಾರೆ.

ರಾಶ್ಟ್ರೀಕೃತ ಬ್ಯಾಂಕುಗಳಲ್ಲಿ ಮತ್ತು ಸಾರ್ವಜನಿಕ ಉದ್ದಿಮೆಗಳಲ್ಲಿ ಪರಿಶಿಷ್ಟ ಜಾತಿ ಶೇ. 18 ಪ್ರಮಾಣದಲ್ಲಿ, ಪರಿಶಿಷ್ಟ ಪಂಗಡ ಶೇ. 8 ಪ್ರಮಾಣದಲ್ಲಿ ಹಿಂದುಳಿದ ವರ್ಗ ಶೇ. 25 ಪ್ರಮಾಣದಲ್ಲಿ ಮತ್ತು ಮೇಲ್ಜಾತಿಗಳು ಶೇ. 55 ಪ್ರಮಾಣದಲ್ಲಿದ್ದಾರೆ.

ಆರ್‍ಬಿಐನಲ್ಲಿ ಪರಿಶಿಷ್ಟ ಜಾತಿ ಶೇ. 16 ಪ್ರಮಾಣದಲ್ಲಿ, ಪರಿಶಿಷ್ಟ ಪಂಗಡ ಶೇ. 6.5 ಪ್ರಮಾಣದಲ್ಲಿ ಹಿಂದುಳಿದ ವರ್ಗ ಶೇ. 11.5 ಪ್ರಮಾಣದಲ್ಲಿ ಮತ್ತು ಮೇಲ್ಜಾತಿಗಳು ಶೇ. 65 ಪ್ರಮಾಣದಲ್ಲಿದ್ದಾರೆ.

ಭಾರತದ 43 ಕೇಂದ್ರೀಯ ವಿಶ್ವವಿದ್ಯಾಲಯಗಳ ಪೈಕಿ 42 ವಿಶ್ವವಿದ್ಯಾಲಯಗಳಲ್ಲಿ ಮೇಲ್ಜಾತಿ ಉಪಕುಲಪತಿಗಳಿದ್ದಾರೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶೇ. 56.8 ಮೇಲ್ಜಾತಿ ಪ್ರಾಧ್ಯಾಪಕರು, ಶೇ. 32.8 ಹಿಂದುಳಿದ ವರ್ಗಗಳ ಪ್ರಾಧ್ಯಾಪಕರು, ಶೇ. 8.6 ಪರಿಶಿಷ್ಟ ಜಾತಿಯ ಪ್ರಾಧ್ಯಾಪಕರು, ಶೇ. 2.27 ಪ್ರಮಾಣದಲ್ಲಿ ಪರಿಶಿಷ್ಟ ಪಂಗಡದ ಪ್ರಾಧ್ಯಾಪಕರಿದ್ದಾರೆ.

ಪದವಿ, ಸ್ನಾತಕೋತ್ತರ ಕಾಲೇಜುಗಳಲ್ಲಿ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ಸಂಖ್ಯೆ ಶೇ. 22.2, ಪರಿಶಿಷ್ಟ ಜಾತಿ ವಿದ್ಯಾರ್ಥಿನಿಯರ ಸಂಖ್ಯೆ ಶೇ. 21.4 ರಷ್ಟಿದೆ. ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಸಂಖ್ಯೆ ಶೇ. 17, ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿಯರ ಸಂಖ್ಯೆ ಶೇ.15 ರಷ್ಟಿದೆ. ಮೇಲ್ಜಾತಿಗಳ ವಿದ್ಯಾರ್ಥಿಗಳ ಸಂಖ್ಯೆ ಶೇಕಡಾ 65 ರಶ್ಟಿದೆ. ಮುಸ್ಲಿಂ ಸಮುದಾಯದ ವಿದ್ಯಾರ್ಥಿ/ವಿದ್ಯಾರ್ಥಿನಿಯರ ಪ್ರಮಾಣ ಶೇ.4.7 ರಷ್ಟಿದೆ.

ಈ ಅಂಕಿಸಂಖ್ಯೆಗಳನ್ನು ವಿಶ್ಲೇಷಿಸಿದಾಗ ಶೈಕ್ಷಣಿಕ ವಲಯದಲ್ಲಿ ಈಗಾಗಲೆ ಮೇಲ್ಜಾತಿಗಳ ಪ್ರಾತಿನಿದ್ಯ ಹೆಚ್ಚಿನ ಪ್ರಮಾಣದಲ್ಲಿದೆ. ಈ ಸಮುದಾಯಕ್ಕೆ ಮತ್ತೆ ಮೀಸಲಾತಿ ಕೊಡುವ ಅಗತ್ಯವೆ ಇರುವುದಿಲ್ಲ.

ಸಾಮಾಜಿಕ ಅಸಮಾನತೆ, ಪ್ರತ್ಯೇಕತೆ, ತಾರತಮ್ಯ

ಅಸಮಾನತೆ, ಜಾತಿ ಪ್ರತ್ಯೇಕತೆಯನ್ನು ಕೊನೆಗಾಣಿಸಲು ರಚನೆಯಾದ 2008ರ ಬಾಲಕ್ರಿಶ್ಣ ರೇಣಕೆ ಆಯೋಗವು ಅಲೆಮಾರು ಬುಡಕಟ್ಟು ಸಮುದಾಯಗಳಿಗೆ ಪ್ರತ್ಯೇಕ ಮೀಸಲಾತಿ ನೀಡಬೇಕೆಂದು ಶಿಫಾರಸ್ಸು ಮಾಡಿದೆ. ಅವಿಭಜಿತ ಆಂದ್ರಪ್ರದೇಶದಲ್ಲಿ ಅನುಸೂಚಿತ ಜಾತಿಗಳಿಗೆ ಒಳಮೀಸಲಾತಿ ನೀಡಬೇಕೆಂದು 2009ರಲ್ಲಿ ಉಶಾ ಮೆಹತ ಸಮಿತಿ ಶಿಫಾರಸ್ಸು ಮಾಡಿದೆ. ಆದರೆ ಇಂದಿಗೂ ಈ ಶಿಫಾರಸ್ಸುಗಳು ಜಾರಿಯಾಗಿಲ್ಲ. ಸಾಮಾಜಿಕ ನ್ಯಾಯದ ಮೂಲಕ ತಳಸಮುದಾಯಗಳಿಗೆ ಪ್ರಾತಿನಿದ್ಯ ಕಲ್ಪಿಸುವ ಈ ಶಿಫಾರಸ್ಸುಗಳನ್ನು ಅನುಮೋದಿಸುವುದನ್ನು ಮತ್ತು ಸಾಂವಿದಾನಿಕ ಮಾನ್ಯತೆ ಕಲ್ಪಿಸುವುದನ್ನು ಬಿಟ್ಟು ಮೋದಿ-ಆರೆಸ್ಸಸ್ ಸರಕಾರವು ಈಗಾಗಲೆ ಎಲ್ಲಾ ವಲಯಗಳಲ್ಲಿ ಅದಿಕಾರ ಸ್ಥಾನಗಳಲ್ಲಿರುವ ಮೇಲ್ಜಾತಿಗಳಿಗೆ ಮೀಸಲಾತಿ ಕೊಡಲು ಮುಂದಾಗಿದೆ.

ಮತ್ತೊಂದೆಡೆ ಶಿಕ್ಷಣ ಮತ್ತು ಆರೋಗ್ಯ ಸಂಪೂರ್ಣ ಖಾಸಗೀಕರಣಗೊಂಡಿವೆ. ಆದರೆ ಖಾಸಗಿ ಕ್ಷೇತ್ರಗಳಲ್ಲಿ ಮೀಸಲಾತಿ ಇನ್ನೂ ಜಾರಿಗೊಂಡಿಲ್ಲ. ಬಡ್ತಿ ಮೀಸಲಾತಿ ಗೊಂದಲ ಬಗೆಹರಿದಿಲ್ಲ. ಒಳಮೀಸಲಾತಿ ಬಿಕ್ಕಟ್ಟು ಪರಿಹಾರವಾಗಿಲ್ಲ. ದಲಿತರ ಮೇಲಿನ ದೌರ್ಜನ್ಯ ಮುಂದುವರೆಯುತ್ತಲೆ ಇದೆ. ಆದರೆ ಈ ಗೊಂದಲ, ಬಿಕ್ಕಟ್ಟುಗಳಿಗೆ ಸೂಕ್ತ ಪರಿಹಾರ ಮಾರ್ಗಗಳನ್ನು ಕಂಡುಹಿಡಿಯಲು ವಿಫಲವಾಗಿರುವ ಮೋದಿ ಸರಕಾರವು ಮೇಲ್ಜಾತಿಗಳಿಗೆ ಮೀಸಲಾತಿ ಕೊಡುವುದರ ಮೂಲಕ ಸಾಮಾಜಿಕ ನ್ಯಾಯದ ಆಶಯವನ್ನೆ ಬುಡಮೇಲು ಮಾಡ ಹೊರಟಿದೆ.

ಭಾರತದಲ್ಲಿ ಜಾತಿ ಪ್ರತ್ಯೇಕತೆ, ತಾರತಮ್ಯಕ್ಕೆ ಸಾವಿರಾರು ವರ್ಶಗಳ ಇತಿಹಾಸವಿದೆ. ಗತಕಾಲದ ಈ ಅಮಾನವೀಯ ಮನಸ್ಥಿತಿ, ಆಚರಣೆಗಳು ಇಂದಿಗೂ ಮುಂದುವರೆಯುತ್ತಿವೆ. ಅಮತ್ರ್ಯ ಸೇನ್ ಅವರು ‘ಗಟ್ಟಿಗೊಂಡ ಸಾಮಾಜಿಕ ಅನಿಶ್ಟ ಪದ್ದತಿಗಳನ್ನು ಕರಗಿಸಲು ಬಳಸುವ ಮಾರ್ಗಗಳನ್ನು ಆರ್ಥಿಕ ಸಮಾನತೆಗೆ ಅನ್ವಯಿಸಲು ಸಾದ್ಯವಿಲ್ಲ. ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸಲು ಆರ್ಥಿಕ ಸುದಾರಣೆ ಮಾರ್ಗಗಳನ್ನೆ ಬಳಸಬೇಕೆ ಹೊರತು ಸಾಮಾಜಿಕ ಸುದಾರಣೆ ಮಾರ್ಗಗಳನ್ನಲ್ಲ’ ಎಂದು ಹೇಳುತ್ತಾರೆ.

ಜಾತಿ ತಾರತಮ್ಯದ, ಅಸಮಾನತೆಯ ಭಾರತೀಯ ಸಮಾಜದಲ್ಲಿ ಶ್ರೇಣೀಕೃತ ಜಾತಿ ವ್ಯವಸ್ಥೆಯ ಕೆಳಸ್ತರದಲ್ಲಿರುವ ತಳ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಾರಿಗೊಂಡ ಮೀಸಲಾತಿ ಪರಿಕಲ್ಪನೆ ಇಂದು ರಾಜಕೀಯ ಪಕ್ಷಗಳ ನಡುವಿನ ಅದಿಕಾರ ಹಂಚಿಕೆಯ ಅಸ್ತ್ರಗಳಾಗಿವೆ. ಇಲ್ಲಿನ ಬ್ರಶ್ಟ ರಾಜಕಾರಣದಲ್ಲಿ ಈ ಸಮಾನತೆಯ ಆಶಯವು ನಾಶಗೊಳ್ಳುತ್ತಿದೆ. ಈ ಆರ್ಥಿಕ ಆಧಾರಿತ ಮೀಸಲಾತಿ ಜಾರಿಗೊಂಡರೆ ಅಸಮಾನತೆಯ ಅಂತರ ಮತ್ತಶ್ಟು ಹೆಚ್ಚಾಗಲಿದೆ. ಆಗ ಉಂಟಾಗುವ ಜಾತಿ ಪ್ರತ್ಯೇಕತೆ, ತಾರತಮ್ಯದ ಪ್ರಮಾಣ ಊಹೆಗೂ ನಿಲುಕುವುದಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...