Homeಅಂಕಣಗಳು10% ಮೀಸಲಾತಿಯ ಹೆಸರಲ್ಲಿ  ಮೇಲ್ಜಾತಿ ಬಡವರಿಗೆ ಮೋದಿ ಮೋಸ

10% ಮೀಸಲಾತಿಯ ಹೆಸರಲ್ಲಿ  ಮೇಲ್ಜಾತಿ ಬಡವರಿಗೆ ಮೋದಿ ಮೋಸ

- Advertisement -
‘ಮೇಲ್ಜಾತಿಯ ಬಡವರಿಗೆ 10% ಮೀಸಲಾತಿ’ ಎಂಬ ಹೆಡ್‍ಲೈನ್ ಇಂದು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಮೀಸಲಾತಿಯ ವಿಚಾರದ ಒಳಹೊಕ್ಕು ನೋಡಿದರೆ ಇದು ವಾಸ್ತವದಲ್ಲಿ ಮೇಲ್ಜಾತಿಯ ಬಡವರಿಗೆ ಮಾಡುತ್ತಿರುವ ಮೋಸ ಎಂಬುದು ಸ್ಪಷ್ಟವಾಗಿ ಅರಿವಾಗುತ್ತದೆ. ಕಾನೂನಿನ ಮತ್ತು ಸಂವಿಧಾನದ ಪರೀಕ್ಷೆಯಲ್ಲಿ ಇದು ತೇರ್ಗಡೆ ಹೊಂದುವುದಿಲ್ಲವೆಂಬುದಷ್ಟೇ ಇದಕ್ಕೆ ಕಾರಣವಲ್ಲ. ನಿಜಕ್ಕೂ ಇದರಿಂದ ಮೇಲ್ಜಾತಿ ಬಡವರಿಗೆ ಹಲವು ರೀತಿಯ ಅನ್ಯಾಯಗಳಾಗಲಿವೆ.
ಸರ್ಕಾರದ ಅಥವಾ ಸಮಾಜದಲ್ಲಿ ಲಭ್ಯವಾಗುವ ಯಾವುದೇ ಸೌಲಭ್ಯಗಳನ್ನು ಮೊದಲು ಪಡೆದುಕೊಳ್ಳಲು ಶಕ್ತವಾಗುವುದು ಯಾರಿಗೆ? ಬಲಾಢ್ಯರಿಗೆ. ಇದು ಮೀಸಲಾತಿಗೂ ಅನ್ವಯವಾಗುತ್ತದೆ. ಇಂದು ಶೋಷಿತ ಜಾತಿಗಳಿಗೆ ನೀಡಲಾಗುತ್ತಿರುವ ಮೀಸಲಾತಿಗೂ ಇದೇ ವಾಸ್ತವವೇ? ಹೌದು, ಇದೇ ವಾಸ್ತವ. ಅಸಮಾನವಾದ, ಅಪ್ರಜಾತಾಂತ್ರಿಕವಾದ ಸಾಮಾಜಿಕ ವ್ಯವಸ್ಥೆಯಲ್ಲಿ ಇದು ಸಹಜ. ಆದರೂ, ಅದು ಆಯಾ ಜಾತಿಗಳಿಗೇ ಸಿಗುತ್ತದೆ ಮತ್ತು ಆ ಜಾತಿಯಲ್ಲಿ ಹುಟ್ಟಿದ ಕಾರಣಕ್ಕೆ ತಾರತಮ್ಯ, ಶೋಷಣೆ, ದಬ್ಬಾಳಿಕೆಯನ್ನು ಯಾವುದೋ ಪ್ರಮಾಣಕ್ಕೆ ಅನುಭವಿಸಿರುವ ಅವರು ಅದಕ್ಕೆ ಅಷ್ಟರಮಟ್ಟಿಗೆ ಅರ್ಹರಿರುತ್ತಾರೆ. ಆದರೆ ಬಡವರು ಎನ್ನುವ ವ್ಯಾಖ್ಯಾನವನ್ನು ಮಾಡುವುದರಲ್ಲೇ ಹಲವು ಸಮಸ್ಯೆಗಳಿರುತ್ತವೆ. ಅಂಥದ್ದರಲ್ಲಿ ಅಧಿಕೃತವಾಗಿಯೇ ತಿಂಗಳಿಗೆ 66.66 ಸಾವಿರ ಸಂಪಾದನೆಯಿರುವವರೆಲ್ಲರಿಗೂ ಇದು ಅನ್ವಯಿಸುತ್ತದೆ ಎಂದಮೇಲೆ ಕೇಳಬೇಕೇ? ಇದು ಹೆಚ್ಚಿನ ಮುಖಬೆಲೆಯ ನೋಟುಗಳಿದ್ದರೆ ಹೆಚ್ಚೆಚ್ಚು ಕಪ್ಪುಹಣ ಸಂಗ್ರಹಣೆ ಸಾಧ್ಯವೆಂದು 500 ರೂ. 1000 ರೂ.ಗಳ ನೋಟುಗಳನ್ನು ನಿಷೇಧಿಸಿ 2000 ರೂ.ಗಳ ನೋಟು ತಂದ ರೀತಿಯದ್ದು. ಅಂದರೆ ಈಗಾಗಲೇ ಹಲವು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದ ‘ಮೇಲ್ಜಾತಿಗಳ ಬಡವರು’ ಈಗ ಈ ಶೇ.10ರಿಂದಲೂ ವಂಚಿತರಾಗುತ್ತಾರೆ.
ಮೀಸಲಾತಿಯೇ ಸಿಗದ ಜನರಲ್ ಕೆಟಗರಿಯವರಿಗೆ ಮಾತ್ರ ಈ ಶೇ.10 ಮೀಸಲಾತಿ ಎಂದು ಹೇಳಲಾಗುತ್ತಿದೆ. ಕರ್ನಾಟಕದಲ್ಲಿ ಅಂಥವರು ಎಷ್ಟಿರಬಹುದು? ಶೇ.10 ಮಾತ್ರ. ಏಕೆಂದರೆ, ಗ್ರಾಮೀಣ ಒಕ್ಕಲಿಗರು ಮತ್ತು ಲಿಂಗಾಯಿತ ಉಪಪಂಗಡಗಳಿಗೂ ಕಡಿಮೆ ಆದಾಯದ ಕುಟುಂಬಗಳಿಗೆ ಮೀಸಲಾತಿ ‘3 ಎ’ಯಲ್ಲಿ ಲಭ್ಯವಿದೆ. ಅಂದರೆ, ಒಕ್ಕಲಿಗರಲ್ಲಿ ಬಹುತೇಕರು ಮತ್ತು ಲಿಂಗಾಯಿತರಲ್ಲೂ ಗಣನೀಯ ಭಾಗ ಹೊಸ ಮೀಸಲಾತಿ (ಜಾರಿಗೆ ಬಂದರೆ)ಯಿಂದ ಹೊರಗೇ ಉಳಿಯುತ್ತಾರೆ. ಇದರರ್ಥ, ತಮ್ಮ ಜನಸಂಖ್ಯೆಗನುಗುಣವಾಗಿ ಮೀಸಲಾತಿಯನ್ನು ಪಡೆದುಕೊಳ್ಳಲಾಗದ ಹಿಂದುಳಿದ ವರ್ಗಗಳಿಗಿಂತ ಜನಸಂಖ್ಯೆಗನುಗುಣವಾದ ಮೀಸಲಾತಿಯನ್ನು ಈ ಶೇ.10ರಷ್ಟು ಸಮುದಾಯಗಳು ಪಡೆದುಕೊಳ್ಳುತ್ತಾರೆ.
ಮೇಲ್ಜಾತಿಗಳ ಬಡವರು ವಾಸ್ತವದಲ್ಲಿ ಕ್ರುದ್ಧರಾಗಿದ್ದಾರೆ. ಶೋಷಿತ ಜಾತಿಗಳ ಬಡವರೂ ಸಂಕಷ್ಟದಲ್ಲಿದ್ದಾರೆ. ಏಕೆಂದರೆ, ದೇಶದಲ್ಲಿ ಸಿಗುತ್ತಿರುವ ಉದ್ಯೋಗಾವಕಾಶಗಳು, ಶಿಕ್ಷಣಾವಕಾಶಗಳು ಕಡಿಮೆಯಾಗುತ್ತಿವೆ. ವಿವಿಧ ರೀತಿಯ ಸಾರ್ವಜನಿಕ ಸಂಪನ್ಮೂಲಗಳು ಹೆಚ್ಚೆಚ್ಚು ಶ್ರೀಮಂತರ ಪಾಲಾಗುತ್ತಿವೆ. ಹಾಗಾಗಿ ಶೋಷಿತ ಜಾತಿಗಳ ಬಡವರು ತಮ್ಮನ್ನೇ ಹಳಿದುಕೊಳ್ಳುತ್ತಾರೆ ಅಥವಾ ಇಡೀ ವ್ಯವಸ್ಥೆಯನ್ನೇ ಬೈದುಕೊಳ್ಳುತ್ತಾರೆ ಅಥವಾ ಎಲ್ಲಾ ಜಾತಿಗಳಲ್ಲಿನ ಬಲಾಢ್ಯರು ಅದನ್ನು ಕಬಳಿಸಿದ್ದಾರೆಂದು ಅಸಹನೆ ಮಾಡಿಕೊಳ್ಳಬಹುದು. ಆದರೆ, ಮೇಲ್ಜಾತಿಗಳ ಬಡವರಿಗೆ ಇದೆಲ್ಲಕ್ಕೂ ಶೋಷಿತ ಜಾತಿಗಳವರೇ ಕಾರಣವೆಂದು ನಂಬಿಸುವ ಪ್ರಯತ್ನ ನಡೆಯುತ್ತಿದೆ.
ಉದಾಹರಣೆಗೆ ಕೆಲವು ವರ್ಷಗಳ ಹಿಂದೆ ಕರ್ನಾಟಕದಲ್ಲಿ ವಿವಿಧ ಇಲಾಖೆಗಳಲ್ಲಿ ಗ್ರೂಪ್ ಬಿ ಮತ್ತು ಸಿ ವೃಂದದ 2,500 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಅದಕ್ಕೆ 18,60,000 ಜನರು ಅರ್ಜಿ ಹಾಕಿದರು. ಒಂದು ವೇಳೆ ಒಬ್ಬರಿಗೂ ಮೀಸಲಾತಿ ಸಿಗದೇ ಇದ್ದರೂ, 18,57,500 ಜನರಿಗೆ ಆ ಉದ್ಯೋಗ ಸಿಗುತ್ತಿರಲಿಲ್ಲ. ಆದರೆ, ಈ ದೊಡ್ಡ ಸಮೂಹದಲ್ಲಿನ ಮೀಸಲಾತಿ ರಹಿತ ಸಮುದಾಯಗಳು (ಕರ್ನಾಟಕದಲ್ಲಿ ಬಹುತೇಕರಿಗೆ ಒಂದಲ್ಲಾ ಒಂದು ರೀತಿಯ ಮೀಸಲಾತಿಯಿದ್ದರೂ, 3 ಎ ಯಲ್ಲಿ ಇರುವ ಪಂಗಡಗಳೂ ಸೇರಿದಂತೆ ಕೆಲವರು ತಮ್ಮನ್ನು ಈ ಗುಂಪಿನ ಜೊತೆಗೆ ಗುರುತಿಸಿಕೊಳ್ಳುತ್ತಾರೆ) ಅದಕ್ಕಾಗಿ ಮೀಸಲಾತಿ ಪಡೆಯುವ ಜಾತಿಗಳನ್ನು, ಅದರಲ್ಲೂ ಪರಿಶಿಷ್ಟ ಜಾತಿ/ಪಂಗಡದ ಸಮುದಾಯದವರನ್ನು ಬೈದುಕೊಳ್ಳುತ್ತಾರೆ. ಹಾಗೆ ನೋಡಿದರೆ, ಆ ಜಾತಿಗಳ ಲಕ್ಷ ಲಕ್ಷ ಅಭ್ಯರ್ಥಿಗಳಿಗೂ ಆ ಉದ್ಯೋಗ ಸಿಕ್ಕಿರುವುದಿಲ್ಲ!
ಹಾಗಾಗಿ ಮೀಸಲಾತಿಯೆಂಬುದು ಶೋಷಿತ ಸಮುದಾಯಗಳಿಗೆ ದಕ್ಕಿಸಿಕೊಟ್ಟಿರುವುದು ಬಹಳ ಕಡಿಮೆಯೇ ಆದರೂ, ಅಸಹನೆಯನ್ನಂತೂ ಹೆಚ್ಚೆಚ್ಚು ಅನುಭವಿಸಬೇಕಿದೆ. ಈ ಅಸಹನೆಯು ತನ್ನಂತೆ ತಾನೇ ಬಂದಿತೆನ್ನುವುದಕ್ಕಿಂತ, ಇದನ್ನು ವ್ಯವಸ್ಥಿತವಾಗಿ ಬೆಳೆಸಲಾಗುತ್ತಿದೆ. ಆ ಕೆಲಸ ಮಾಡಿದವರಲ್ಲಿ ಇಂದು 10% ಮೀಸಲಾತಿಯನ್ನು ತರಲು ಹೊರಟಿರುವವರದ್ದು ಪ್ರಧಾನ ಪಾಲಿದೆ. ಸಂವಿಧಾನ ತಿದ್ದುಪಡಿ ಮಾಡದೇ ತರಲು ಸಾಧ್ಯವಿರದ, ಸಂವಿಧಾನ ತಿದ್ದುಪಡಿ ಮಾಡಲು ಬೇಕಾದಷ್ಟು ಬಹುಮತ ಹೊಂದಿರದೇ ಪ್ರಸ್ತಾಪಿಸಲಾಗುತ್ತಿರುವ ಇದರ ಹಿಂದೆ ಚುನಾವಣೆಗೆ ಮುಂಚೆ ಒಂದಷ್ಟು ಧ್ರುವೀಕರಣವನ್ನು ತರುವ, ಸಮುದಾಯಗಳ ಮಧ್ಯೆ ಒಡಕುಂಟುಮಾಡಲು ಯತ್ನಿಸುವ ಉದ್ದೇಶದ ಬಗ್ಗೆ ಯಾರಿಗೂ ಅನುಮಾನವಿಲ್ಲ.
ಆದರೆ, ಇದರಲ್ಲಿ ಮೇಲ್ಜಾತಿ ಬಡವರ ವಿರುದ್ಧದ ಹುನ್ನಾರವೇನು? ಮೇಲೆ ಹೇಳಿರುವ ಕಾರಣವಲ್ಲದೇ ಇನ್ನೊಂದು ಮುಖ್ಯ ಕಾರಣವಿದೆ. ಎಲ್ಲಾ ಬಡವರಿಗೂ ದಕ್ಕಲೇಬೇಕಾದ ಶಿಕ್ಷಣ, ಆರೋಗ್ಯ, ವಸತಿ ಇತ್ಯಾದಿ ಮೂಲಭೂತ ಅಗತ್ಯಗಳನ್ನು ಕಲ್ಪಿಸಲು ಒದಗಿಸಬೇಕಾದ ಅನುದಾನವನ್ನು ಸರ್ಕಾರಗಳು ಕಡಿಮೆ ಮಾಡುತ್ತಲಿವೆ. ಆ ವಿಚಾರದಲ್ಲಿ ಮೋದಿ ಸರ್ಕಾರವು ಮಿಕ್ಕೆಲ್ಲರಿಗಿಂತ ಒಂದು ಕೈ ಹೆಚ್ಚು ಜನವಿರೋಧಿಯಾಗಿದೆ. ದುಡಿಯುತ್ತಿರುವ ಸಮುದಾಯಗಳಿಗೆ ಸಾಮಾಜಿಕ ಭದ್ರತೆ ಕಲ್ಪಿಸುವ, ಉದ್ಯೋಗ ಭದ್ರತೆ ಕಲ್ಪಿಸುವ ವಿಚಾರದಲ್ಲೂ ಈ ಸರ್ಕಾರವು ಜನವಿರೋಧಿಯೇ ಆಗಿದೆ. ರೈತರ ವಿಚಾರದಲ್ಲಂತೂ ಕೇಂದ್ರ ಸರ್ಕಾರವು ಬಹಳ ಕಟುವಾಗಿ ವರ್ತಿಸಿದೆ. ಇವೆಲ್ಲವನ್ನೂ ಸರಿಯಾಗಿ ಮಾಡಿದ್ದೇ ಆಗಿದ್ದಲ್ಲಿ ಮತ್ತು ಉದ್ಯೋಗ ಸೃಷ್ಟಿಗೆ ಬೇಕಾದ ಕ್ರಮಗಳನ್ನು ಕೈಗೊಂಡಿದ್ದಲ್ಲಿ ಮೇಲ್ಜಾತಿಗಳ ಬಡವರಿಗೆ ಬದುಕು ಕಟ್ಟಿಕೊಳ್ಳುವ ಅವಕಾಶಗಳು ಹೆಚ್ಚಾಗುತ್ತಿದ್ದವು.
ಅದನ್ನು ಮಾಡದ ಸರ್ಕಾರ ಏನು ಮಾಡಬೇಕು? ಜನರ ಗಮನವನ್ನು ಬೇರೆಡೆಗೆ ತಿರುಗಿಸಬೇಕು. ಹುಸಿ ಶತ್ರುಗಳನ್ನು ಸೃಷ್ಟಿಸಿ ಮಿಕ್ಕವರನ್ನು ಎತ್ತಿಕಟ್ಟಬೇಕು. ಈಗ ಅದನ್ನೇ ಮಾಡಲು ಹೊರಟಿದೆ. ಬಹುಶಃ ಇದು ಇಲ್ಲಿಗೇ ನಿಲ್ಲುವುದಿಲ್ಲ. ಜನರನ್ನು ಒಡೆಯಲು, ಪರಸ್ಪರ ಎತ್ತಿಕಟ್ಟಲು ಒಂದಾದ ನಂತರ ಒಂದು ಕ್ರಮಗಳು ಕೇಂದ್ರವನ್ನು ಆಳುತ್ತಿರುವ ಪಕ್ಷ ಮತ್ತು ಅದರ ಪರಿವಾರದಿಂದ ಬರುತ್ತಲೇ ಇರುತ್ತವೆ. ಚುನಾವಣೆಗೆ ಮೊದಲು ಮತ್ತು ನಂತರ ಹರಿದುಬರುವ ಈ ಕುತ್ಸಿತ ಹುನ್ನಾರಗಳನ್ನು ಎದುರಿಸಲು ಬೇಕಾದ ತಯಾರಿಯನ್ನು ದೇಶದ ಪ್ರಜ್ಞಾವಂತ ಜನರು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಿಕೊಳ್ಳಬೇಕಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...