Homeಮುಖಪುಟ15ನೇ ಹಣಕಾಸು ಆಯೋಗದ ಶಿಫಾರಸ್ಸುಗಳು: ರಾಜ್ಯಗಳ ತಲೆದಂಡ

15ನೇ ಹಣಕಾಸು ಆಯೋಗದ ಶಿಫಾರಸ್ಸುಗಳು: ರಾಜ್ಯಗಳ ತಲೆದಂಡ

- Advertisement -
- Advertisement -

(ಈ ಲೇಖನದಲ್ಲಿ ಹೊಸ ಬರಹವನ್ನು ಪ್ರಯೋಗಿಸಲಾಗಿದ್ದು ಮಹಾಪ್ರಾಣಗಳ ಬಳಕೆಯನ್ನು ಕಡಿತಗೊಳಿಸಲು ಪ್ರಯತ್ನಿಸಲಾಗಿದೆ)

ಪ್ರಸ್ತಾವನೆ

1951ರಲ್ಲಿ ಕಾನೂನು ಮಂತ್ರಿಯಾಗಿದ್ದ ಅಂಬೇಡ್ಕರ್ ಅವರು ಸಂವಿದಾನದ ಅನುಚ್ಚೇದ 280ರ ಅಡಿಯಲ್ಲಿ ಹಣಕಾಸು ಆಯೋಗ ಕಾಯಿದೆಯನ್ನು ರೂಪಿಸಿದರು. ಭಾರತದ ರಾಷ್ಟ್ರಪತಿಗಳು ಅದಕ್ಕೆ ಅನುಮೋದನೆ ನೀಡಿದರು ಮತ್ತು “ಭಾರತೀಯ ಹಣಕಾಸು ಆಯೋಗ” ರಚನೆಗೆ ಅಂಕಿತ ಮುದ್ರೆಯೊತ್ತಿದ್ದರು. ಪ್ರಜಾಪ್ರಬುತ್ವದಲ್ಲಿ ಒಕ್ಕೂಟ ವ್ಯವಸ್ಥೆಯನ್ನು ಸಮರ್ಥವಾಗಿ ಮುನ್ನಡೆಸಲು, ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವೆ ತೆರಿಗೆ ಹಂಚಿಕೆಗೆ, ವಿತ್ತೀಯ ವ್ಯತ್ಯಾಸಗಳನ್ನು ಸರಿಗೊಳಿಸಲು, ಅನುದಾನಕ್ಕೆ ಸಂಬಂದಿಸಿದಂತೆ ಯಾವುದೇ ಬಗೆಯ ತಾರತಮ್ಯ ಹಾಗೂ ಶೋಷಣೆಗಳು ನಡೆಯದಂತೆ ನೀತಿಗಳನ್ನು ರೂಪಿಸಲು ಶಿಫಾರಸ್ಸುಗಳನ್ನು ಮಾಡುವುದು ಈ ಆಯೋಗದ ಮೂಲ ಉದ್ದೇಶ. ಇಲ್ಲಿಯವರೆಗೆ ಐದು ವರ್ಶಗಳ ಅವದಿಗೆ ಅನುಗುಣವಾಗಿ 15ನೇ ಹಣಕಾಸು ಆಯೋಗಗಳು ರಚನೆಯಾಗಿವೆ. ಇಲ್ಲಿ ಒಬ್ಬ ಅದ್ಯಕ್ಷ ಮತ್ತು ನಾಲ್ವರು ಸದಸ್ಯರಿರುತ್ತಾರೆ ಮತ್ತು ಇವರೆಲ್ಲರೂ (ಜನಪರ) ಆರ್ಥಿಕ ಪರಿಣಿತರಾಗಿರುತ್ತಾರೆ ಎನ್ನುವುದು ನಮ್ಮ ನಂಬಿಕೆ, ಆದರೆ ಅದು ಒಂದು ಮಿಥ್ ಎನ್ನುವುದು ವಾಸ್ತವ. ಕೇಂದ್ರದಲ್ಲಿರುವ ಆಡಳಿತ ಪಕ್ಷದ ಹಿತಾಸಕ್ತಿಗೆ ಅನುಗುಣವಾಗಿ ಇವರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಮೋದಿ ನೇತೃತ್ವದ ಬಿಜೆಪಿ ಸರಕಾರ ಅದಿಕಾರಕ್ಕೆ ಬಂದ ನಂತರ ಈ ನೇಮಕಾತಿಗಳು ಸಂಪೂರ್ಣವಾಗಿ ವಿಶ್ವಾಸಾರ್ಹತೆ ಕಳೆದುಕೊಂಡಿವೆ. ಈ ಆಯೋಗಗಳ ಅದ್ಯಕ್ಷರು ಬಿಜೆಪಿ-ಆರೆಸ್ಸಸ್ ಪಕ್ಷದ ಪ್ರಣಾಳಿಕೆಗಳನ್ನು ಅನುಶ್ಟಾನಗೊಳಿಸಲು ಕಟಿಬದ್ದರಾಗಿಯೆ ಬಂದಿರುತ್ತಾರೆ.

PC : Prajavani (ಎನ್.ಕೆ.ಸಿಂಗ್)

ಈ 15ನೇ ಹಣಕಾಸು ಆಯೋಗವನ್ನು 2017ರಲ್ಲಿ ರಚಿಸಲಾಯಿತು ಮತ್ತು ಅದಕ್ಕೆ ಯೋಜನಾ ಆಯೋಗದ ಮಾಜಿ ಸದಸ್ಯ ಎನ್.ಕೆ.ಸಿಂಗ್ ಅದ್ಯಕ್ಷರಾಗಿ ನೇಮಕಗೊಂಡರು ಮತ್ತು ಇದರ ಅವದಿ 2020-2025ರವರೆಗಿರುತ್ತದೆ. ಈ ಆಯೋಗವು 2021-22ರಿಂದ 2025-2026ರ 5 ವರ್ಶಗಳ ಅವದಿಗೆ ತನ್ನ ಶಿಫಾರಸ್ಸುಗಳನ್ನು ಮಾಡಿದೆ ಮತ್ತು ಇದನ್ನು ಕಳೆದ ವರ್ಶದ ನವೆಂಬರ್‌ನಲ್ಲಿ ಸಲ್ಲಿಸಿತು. ಕೇಂದ್ರ ಸರಕಾರವು 2021ರ ಫೆಬ್ರವರಿಯಂದು ಆ ವರದಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿದೆ. ಇನ್ನು ಮೋದಿ ಸರಕಾರವು ರಾಜ್ಯಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ಹಣಕಾಸು ಆಯೋಗದ ಎಲ್ಲಾ ಶಿಫಾರಸ್ಸುಗಳನ್ನು ಒಪ್ಪಿಕೊಳ್ಳುವುದಿಲ್ಲ/ ಒಪ್ಪಿಕೊಳ್ಳುತ್ತದೆ ಎಂದು ನಾವು ನಂಬಿದರೆ ನಮ್ಮ ಮೂರ್ಖತನ.

ಯಾಕೆಂದರೆ ಇವರು ತಮ್ಮ ರಾಜಕೀಯ ಲಾಭದ ಲೆಕ್ಕಾಚಾರದಲ್ಲಿ ಈ ಶಿಫಾರಸ್ಸುಗಳನ್ನು ಅಳೆದು ತೂಗುತ್ತಾರೆ ಮತ್ತು ಇಲ್ಲಿ ದೇಶದ ಮತ್ತು ಒಕ್ಕೂಟ ವ್ಯವಸ್ಥೆಯ ಹಿತಾಸಕ್ತಿ ಎಂದಿಗೂ ಪರಿಗಣಿಸಲ್ಪಡುವುದಿಲ್ಲ. ಏಕೆಂದರೆ 15ನೆ ಆಯೋಗವು ಆರೋಗ್ಯ, ಶಿಕ್ಷಣ, ಕೃಶಿ, ನ್ಯಾಯಾಂಗ, ಪ್ರದಾನಮಂತ್ರಿ ಗ್ರಾಮ ರಸ್ತೆ ಯೋಜನೆಯ ನಿರ್ವಹಣೆ ಮುಂತಾದವುಗಳಿಗಾಗಿ ಮುಂದಿನ 5 ವರ್ಶಗಳಲ್ಲಿ ರಾಜ್ಯಗಳಿಗೆ 1.3 ಲಕ್ಷ ಕೋಟಿಯಶ್ಟು ಅನುದಾನವನ್ನು ಬಿಡುಗಡೆ ಮಾಡಬೇಕೆಂದು ಶಿಫಾರಸ್ಸು ಮಾಡಿದೆ. ಆದರೆ ಇದಕ್ಕಾಗಿ ರಾಜ್ಯ ಸರಕಾರಗಳು ರಾಜ್ಯ ಹಣಕಾಸು ಆಯೋಗವನ್ನು ಸ್ಥಾಪಿಸಿರಬೇಕು ಮತ್ತು ಅನೇಕ ನಿಬಂದನೆಗಳನ್ನು ಪಾಲಿಸಿರಬೇಕು. ಆದರೆ ರಾಜ್ಯಗಳ ಕಾರ್ಯನಿರ್ವಹಣೆ ಬೇರೆಯ ಕತೆಯನ್ನು ಹೇಳುತ್ತದೆ. ಈ ವಾಸ್ತವದಾಚೆಗಿನ ಮತ್ತೊಂದು ವಾಸ್ತವವೆಂದರೆ ಮೋದಿ ಸರಕಾರ ಇದನ್ನು ಒಪ್ಪಿಕೊಳ್ಳಲು ಸಾದ್ಯವೇ ಇಲ್ಲ. ಈಗಾಗಲೇ ಶೇ. 9.9ರಶ್ಟಿರುವ ವಿತ್ತೀಯ ಕೊರತೆಯನ್ನು ಸರಿದೂಗಿಸಲು ಹೆಣಗುತ್ತಿದೆ ಮತ್ತು ಸುಮಾರು 131 ಕೇಂದ್ರ ಪ್ರಾಯೋಜಿತ ಯೋಜನೆಗಳಲ್ಲಿ ಕಾಲು ಬಾಗದಶ್ಟು ಕಡಿತಗೊಳಿಸಲು ಯೋಚಿಸುತ್ತಿದೆ. ಮತ್ತು ಶೇ.62.4ರಶ್ಟು ವೆಚ್ಚ ಮಾಡುವ ರಾಜ್ಯಗಳಿಗೆ ಕೊಡಬೇಕಾದ ಶೇ.42% ಪ್ರಮಾಣದ ತೆರಿಗೆಯ ಮೊತ್ತವನ್ನು ನಿಗದಿತವಾಗಿ ಪಾವತಿಸುತ್ತಿಲ್ಲ.

ಇದುವರೆಗೂ ಕಳೆದ ಏಳು ವರ್ಶಗಳ ಮೋದಿ ಆಡಳಿತದಲ್ಲಿ ಸರಾಸರಿ ಶೇ.30 ಪ್ರಮಾಣದಲ್ಲಿ ಮಾತ್ರ ರಾಜ್ಯಗಳಿಗೆ ಬರಬೇಕಾದ ನ್ಯಾಯಯುತವಾದ ತೆರಿಗೆ ಪಾಲನ್ನು ಕೊಟ್ಟಿದೆ. ಮಿಕ್ಕ 12% ತೆರಿಗೆ ಪಾಲು ರಾಮನ ಲೆಕ್ಕ, ಕ್ರಿಷ್ಣನ ಲೆಕ್ಕ!! ಇಂತಹ ಮನಸ್ಥಿತಿಯಿರುವ ಕೇಂದ್ರವು ರಾಜ್ಯಗಳಿಗೆ ಅನುದಾನ ನೀಡುತ್ತದೆ ಎಂದುಕೊಂಡರೆ ಅದು ನಮ್ಮ ದಡ್ಡತನ. ಅಲ್ಲದೆ ಶೇ.100ರಶ್ಟು ನೇರವಾಗಿ ತನ್ನ ಖಜಾನೆಯಲ್ಲಿ ತುಂಬಿಕೊಳ್ಳುವ ಸೆಸ್ ಮತ್ತು ಸರ್‌ಚಾರ್ಜ್ ತೆರಿಗೆಗಳನ್ನು ಹೆಚ್ಚಿಸುತ್ತಿದೆ ಮತ್ತು ಈ ಮೂಲಕ ರಾಜ್ಯಗಳಿಗೆ ನೇರವಾಗಿ ವಂಚಿಸುತ್ತಿದೆ. 2010-11ರಲ್ಲಿ ಶೇ.10ರಶ್ಟಿದ್ದ ಸೆಸ್ ಮತ್ತು ಸರ್‌ಚಾರ್ಜ್‌ನ ಪ್ರಮಾಣ 2019ರ ವೇಳೆಗೆ ಶೇ.19.9ಕ್ಕೇರಿದೆ. ರಾಜ್ಯಗಳಿಗೆ ಇದರಿಂದ ಬಿಡಿಕಾಸು ದೊರಕುವುದಿಲ್ಲ ಮತ್ತು ಇದು ಹಣಕಾಸು ಮುಗ್ಗಟ್ಟಿನಿಂದ ರಾಜ್ಯಗಳು ನರಳಲು ಕಾರಣವಾಗಿದೆ.

15ನೇ ಹಣಕಾಸು ಆಯೋಗವು ಉತ್ತಮವಾಗಿ ಕಾರ್ಯನಿರ್ವಹಿಸುವ ರಾಜ್ಯಗಳಿಗೆ ರೆವಿನ್ಯೂ ಹಂಚಿಕೆಯನ್ನು ಕಡಿತಗೊಳಿಸುವ ಶಿಕ್ಷೆ ವಿದಿಸಿದೆ. ರಾಜ್ಯಗಳಿಗೆ ರೆವಿನ್ಯೂ ಹಂಚಿಕೆಯನ್ನು ನಿರ್ದರಿಸುವಾಗ ಈ ಹಿಂದಿನ 14ನೆ ಹಣಕಾಸು ಆಯೋಗವು 1971ರ ಜನಸಂಖ್ಯೆಗೆ 17.5% ಪ್ರಾಮುಖ್ಯತೆಯನ್ನು 2011ರ ಜನಸಂಖ್ಯೆಗೆ 10% ಪ್ರಾಮುಖ್ಯತೆಯನ್ನು ನೀಡಿತ್ತು. ಈಗಿನ ಹಣಕಾಸು ಆಯೋಗವು ತನ್ನ ಶಿಫಾರಸ್ಸಿನಲ್ಲಿ 1971ರ ಜನಗಣತಿಯನ್ನು ಕೈಬಿಟ್ಟು ಕೇವಲ 2011ರ ಜನಗಣತಿ ಪರಿಗಣಿಸಿ 10% ಪ್ರಾಮುಖ್ಯತೆಯನ್ನು ಪ್ರಸ್ತಾಪಿಸಿದೆ. ಅಂದರೆ ಜನಸಂಖ್ಯೆ ಪ್ರಮಾಣವನ್ನು ತಗ್ಗಿಸಿದ ತಪ್ಪಿಗೆ, ಭಾರತದ ಜನಸಂಖ್ಯೆಯಲ್ಲಿ ಶೇ.20.75ರಶ್ಟಿರುವ, 19.34% ವಿಸ್ತೀರ್ಣ ಹೊಂದಿರುವ ದಕ್ಷಿಣದ ರಾಜ್ಯಗಳಿಗೆ ಶೇಕಡಾವಾರು ಪ್ರಮಾಣದಲ್ಲಿ ಕಡಿಮೆ ರೆವಿನ್ಯೂ ಹಂಚಿಕೆಯಾಗುತ್ತದೆ. ಆದರೆ ದೇಶದ ಜನಸಂಖ್ಯೆಯಲ್ಲಿ ಶೇ.40ರಶ್ಟಿರುವ, 32.4%ರಶ್ಟು ವಿಸ್ತೀರ್ಣ ಹೊಂದಿರುವ ಬಿಹಾರ್, ಉತ್ತರ ಪ್ರದೇಶ, ಮದ್ಯಪ್ರದೇಶ, ರಾಜಸ್ತಾನ ಮತ್ತು ಜಾರ್ಖಂಡ್ ರಾಜ್ಯಗಳಿಗೆ ಶೇಕಡಾವಾರು ಪ್ರಮಾಣದಲ್ಲಿ ಹೆಚ್ಚಿನ ರೆವಿನ್ಯೂ ಹಂಚಿಕೆಯಾಗುತ್ತದೆ.

ರಕ್ಷಣಾ ನಿಧಿ

ಈ ಬಾರಿ 15ನೆ ಆಯೋಗವು ರಕ್ಷಣಾವಲಯಕ್ಕೆ ಸಂಬಂದಿಸಿದಂತೆ 5 ವರ್ಶಗಳ ಅವದಿಗೆ, ಕಾಲಾವಕಾಶದ ಮಿತಿ ಇಲ್ಲದ ಮತ್ತು ಆ ಇಲಾಖೆಯನ್ನು ಆದುನೀಕರಣಗೊಳಿಸಲು 2.38 ಲಕ್ಷ ಕೋಟಿಯ ಪ್ರತ್ಯೇಕ ರಕ್ಷಣಾ ನಿಧಿಯನ್ನು ಸ್ಥಾಪಿಸಲು ಶಿಫಾರಸ್ಸು ಮಾಡಿದೆ. ಕೇಂದ್ರ ಸರಕಾರವು ತಾತ್ವಿಕವಾಗಿ ಇದಕ್ಕೆ ಸಮ್ಮತಿ ಸೂಚಿಸಿದೆ. ಆದರೆ ನಿಧಿ ಸಂಗ್ರಹಣೆ ಕುರಿತಂತೆ ಆಯೋಗದ ಶಿಫಾರಸ್ಸುಗಳನ್ನು ಒಪ್ಪಿಕೊಂಡಿದೆಯೇ ಎನ್ನುವುದು ಗೊತ್ತಾಗಿಲ್ಲ. ಆಯೋಗದ ತಂಡವು ಹಣಕಾಸು ಕ್ರೋಡೀಕರಣಕ್ಕೆ ನಾಲ್ಕು ಮೂಲಗಳನ್ನು ಹೇಳಿದೆ. Consolidated Fund of Indiaದಿಂದ ಹಣದ ವರ್ಗಾವಣೆ, ರಕ್ಷಣಾ ವಲಯದ ಸಾರ್ವಜನಿಕ ಸಂಸ್ಥೆಗಳಲ್ಲಿ ಬಂಡವಾಳ ಹಿಂತಗೆತ, ಹೆಚ್ಚುವರಿ ರಕ್ಷಣಾ ನಿದಿಯ monetization ಮುಂದುವರಿಕೆ, ಮತ್ತು ರಕ್ಷಣಾ ಇಲಾಖೆಯ ಭೂಮಿಯ ಮಾರಾಟದಿಂದ ನಿಧಿ ಸಂಗ್ರಹ. ಇದನ್ನು ಆಳದಲ್ಲಿ ಬಗೆದು ನೋಡಿದರೆ 15ನೇ ಹಣಕಾಸು ಆಯೋಗದ ಶಿಫಾರಸ್ಸುಗಳು ರಾಜ್ಯಗಳ ಪಾಲನ್ನೂ ಕಸಿದುಕೊಂಡು ಕೇಂದ್ರ ಬುಟ್ಟಿ ತುಂಬಿಸಲು ಹುನ್ನಾರವಿರುವುದು ಗೊತ್ತಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ರಕ್ಷಣಾ ಇಲಾಖೆಯು ಸಂವಿದಾನದ 7ನೆ ಶೆಡ್ಯೂಲ್‌ನ ಅನುಸಾರ ಕೇಂದ್ರದ ಪಟ್ಟಿಯಲ್ಲಿ ಬರುತ್ತದೆ. ಮತ್ತು ಇದು ಮೊದಲ ಕ್ರಮಸಂಖ್ಯೆಯಲ್ಲಿದೆ. ಹಾಗಿದ್ದಲ್ಲಿ ಯಾವುದೇ ಸಂಬಂದವಿಲ್ಲದ ರಾಜ್ಯಗಳನ್ನು ಎಳೆದು ತರುವುದೇಕೆ? ಈ ಶಿಫಾರಸ್ಸು ಸಂವಿದಾನದ 7ನೇ ಶೆಡ್ಯೂಲ್‌ನ ನೀತಿಸಂಹಿತೆಗೆ ವಿರೋದವಾಗಿದೆ.

ಮೊದಲನೆಯ ಶಿಫಾರಸ್ಸನ್ನು ನೊಡೋಣ. Consolidated Fund of India ದಿಂದ ಹಣದ ವರ್ಗಾವಣೆ; Consolidated Fund of Indiaವನ್ನು ಅನುಚ್ಚೇದ 266 (1)ರ ಅಡಿಯಲ್ಲಿ ಸ್ಥಾಪಿಸಲಾಯಿತು. ನೇರ ತೆರಿಗೆ ಮತ್ತು ಪರೋಕ್ಷ ತೆರಿಗೆಯಿಂದ ಬರುವ ಎಲ್ಲಾ ವರಮಾನವನ್ನು, ಸಾಲವಾಗಿ ಪಡೆದ ಹಣವನ್ನು ಈ Consolidated Fund of Indiaಗೆ ವರ್ಗಾಯಿಸಲಾಗುತ್ತದೆ. ಹಾಗೆಯೇ ಸರಕಾರ ಮಾಡುವ ವೆಚ್ಚಗಳೂ ಸಹ ಈ ನಿಧಿಯಿಂದ ವಿತರಣೆಯಾಗುತ್ತದೆ. ಮತ್ತು ಇದಕ್ಕೆ ಸಂಸತ್ತಿನ ಅನುಮೋದನೆ ಬೇಕಾಗುತ್ತದೆ. ಈ ಹಣಕಾಸು ಆಯೋಗವು ರಕ್ಷಣಾ ನಿಧಿಗೆ ಈ Consolidated Fund of Indiaದಿಂದ ಹಣವನ್ನು ವರ್ಗಾಯಿಸಬೇಕು ಎಂದು ಹೇಳಿದೆ. ಸಂಗ್ರಹವಾದ ಮೊತ್ತವನ್ನು ಕೇಂದ್ರ, ರಾಜ್ಯ ಮತ್ತು ರಕ್ಷಣಾ ನಿದಿಯ ನಡುವೆ ಹಂಚಿಕೊಳ್ಳಬೇಕೆಂದು ಹೇಳುತ್ತದೆ. ಅಂದರೆ ರಾಜ್ಯದ ತೆರಿಗೆ ಪಾಲು ಶೇ.42 ಪ್ರಮಾಣದ ಮೊತ್ತವೂ ಸಹ ಈ ರಕ್ಷಣಾ ನಿಧಿಗೆ ವರ್ಗಾಯಿಸಲ್ಪಡುತ್ತದೆ. ರಾಜ್ಯಗಳು ತಮ್ಮ ಪಾಲಿನ ತೆರಿಗೆ ಮೊತ್ತವನ್ನು ಕೇಳಿದಾಗ ಕೇಂದ್ರವು ರಕ್ಷಣಾ ನಿಧಿಗೆ ಕೊಟ್ಟಿದ್ದೇನೆ ಎಂದು ಜಾರಿಕೊಳ್ಳುತ್ತದೆ. ಮುಖ್ಯವಾಗಿ ಫ್ಯಾಸಿಸ್ಟ್ ಸರಕಾರ ಆಡಳಿತ ನಡೆಸುತ್ತಿರುವುದರಿಂದ ತಮ್ಮ ಪಾಲಿನ ತೆರಿಗೆ ಮೊತ್ತವನ್ನು ರಕ್ಷಣಾ ನಿಧಿಗೆ ವರ್ಗಾಯಿಸುವುದನ್ನು ರಾಜ್ಯಗಳು ವಿರೋದಿಸಿದರೆ ಅವರಿಗೆ ದೇಶದ್ರೋಹಿಗಳು ಎಂದು ಆಪಾದನೆ ಹೊರಿಸುತ್ತದೆ. ಈ ಶಿಫಾರಸ್ಸು ಒಕ್ಕೂಟ ವ್ಯವಸ್ಥೆಗೆ ಅದರಲ್ಲೂ ರಾಜ್ಯಗಳಿಗೆ ಮಾರಕವಾಗಲಿದೆ.

ಕೇಂದ್ರವು ಮುಂಚಿನಿಂದಲೂ ರಕ್ಷಣಾ ವಲಯಕ್ಕೆ ಸಂಬಂದಿಸಿದಂತೆ ರಾಜ್ಯಗಳು ಜವಾಬ್ದಾರಿಯನ್ನು ಹಂಚಿಕೊಳ್ಳಬೇಕು ಎಂದು ಹೇಳುತ್ತಾ ಬಂದಿದೆ. ಹಣಕಾಸು ಆಯೋಗದ ಮೇಲಿನ ಶಿಫಾರಸ್ಸು ದಾಳಿ ಮಾಡುವವನ ಕೈಗೆ ಕತ್ತಿಯನ್ನು ಕೊಟ್ಟಂತಾಗಿದೆ. ಮತ್ತೊಂದೆಡೆ ಮೋದಿ ನೇತೃತ್ವದ ಸರಕಾರವು ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ರಾಜ್ಯಗಳ ಪಟ್ಟಿಯಲ್ಲಿ ಬರುವ ಅನೇಕ ಇಲಾಖೆಗಳಿಗೆ ಹೆಚ್ಚಿನ ವೆಚ್ಚವನ್ನು ಮಾಡುತ್ತಿದೆ. ಆದರೆ ತನ್ನದೇ ಪಟ್ಟಿಯಲ್ಲಿ ಬರುವ ರಕ್ಷಣ ಇಲಾಖೆಗೆ ಸಂಬಂದಿಸಿದಂತೆ ಆರ್ಥಿಕ ಮುಗ್ಗಟ್ಟಿನ ನೆಪವೊಡ್ಡಿ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದೆ. ಅಂದರೆ ತನ್ನ ತಟ್ಟೆ ತುಂಬಿದ್ದರೂ ಸಹ ಅದನ್ನು ಮುಟ್ಟದೆ ಪಕ್ಕದವನ ಅರ್ದ ತಟ್ಟೆಗೆ ಕೈ ಹಾಕಿದಂತೆ!! ಈಗ ಈ ಆಯೋಗದ ಶಿಫಾರಸ್ಸು ತೂಕಡಿಸುವವನಿಗೆ ಹಾಸಿಗೆ ಹಾಸಿ ಕೊಟ್ಟಂತಾಗಿದೆ. ತನ್ನದೇ ರಕ್ಷಣಾ ಇಲಾಖೆಗೆ ಆರ್ಥಿಕ ನೆರವು ನೀಡಲು ಇನ್ನುಮುಂದೆ ರಾಜ್ಯಗಳ ಪಾಲನ್ನು ಕಿತ್ತುಕೊಳ್ಳುವುದಕ್ಕೆ ಈ ಪರಿಣಿತರ ಅಂಗೀಕಾರವೂ ದೊರಕುತ್ತದೆ. ಮತ್ತು ಇದನ್ನು ವಿರೋದಿಸುವವರು ಫ್ಯಾಸಿಸ್ಟರ ಪ್ರಕಾರ ದೇಶದ್ರೋಹಿಗಳು.

PC : PMIndia

ಇದರ ಬದಲಿಗೆ ರಾಜ್ಯಗಳ ಪಟ್ಟಿಯಲ್ಲಿ ಬರುವ ಅನೇಕ ಇಲಾಖೆಗಳಿಗೆ ಕೇಂದ್ರ ಸರಕಾರವು ಮಾಡುತ್ತಿರುವ ವೆಚ್ಚವನ್ನು ಕಡಿತಗೊಳಿಸಿ ಅದರ ಜವಾಬ್ದಾರಿಗಳನ್ನು ರಾಜ್ಯಕ್ಕೆ ವರ್ಗಾಯಿಸಿದರೆ ಸಾಕಶ್ಟು ಮೊತ್ತದ ಹಣವನ್ನು ಉಳಿಸಬಹುದು ಮತ್ತು ಈ ಉಳಿಕೆಯ ಮೊತ್ತದಿಂದ ರಕ್ಷಣಾ ಇಲಾಖೆಯ ಆದುನೀಕರಣಕ್ಕೆ ವಿನಿಯೋಗಿಸಬಹುದು ಎಂದು ಆರ್ಥಿಕತಜ್ಞರು ಅಬಿಪ್ರಾಯಪಡುತ್ತಾರೆ.

ಎರಡನೆಯ ಮತ್ತು ನಾಲ್ಕನೆಯ ಶಿಫಾರಸ್ಸಿನ ಪ್ರಕಾರ ರಕ್ಷಣಾ ಇಲಾಖೆಯ ಸಾರ್ವಜನಿಕ ಉದ್ಯಮಗಳಲ್ಲಿ ಬಂಡವಾಳ ಹಿಂತೆಗೆತ, ಭೂಮಿ ಮಾರಾಟ ಮತ್ತು ಆ ಹಣವನ್ನು ಈ ರಕ್ಷಣಾ ನಿಧಿಗೆ ವರ್ಗಾವಯಿಸಬೇಕು. ರಕ್ಷಣಾ ಇಲಾಖೆಯು ಮುಂದಿನ 5 ವರ್ಶಗಳಲ್ಲಿ ತನ್ನ ಜಮೀನು ಮಾರಾಟ ಮಾಡುವುದರ ಮೂಲಕ 18000 ಕೋಟಿಯ ವರಮಾನ ನಿರೀಕ್ಷಿಸುತ್ತಿದೆ. ಮತ್ತು ಬಂಡವಾಳ ಹಿಂತಗೆತೆದಿಂದ 5000 ಕೋಟಿ ಆದಾಯ ಅಂದಾಜಿಸುತ್ತಿದೆ. ಮತ್ತು ಪ್ರದಾನಮಂತ್ರಿಗಳು ’ಉದ್ಯಮಗಳನ್ನು ನಡೆಸುವುದು ಸರಕಾರದ ಕೆಲಸವಲ್ಲ, ಅದು ಖಾಸಗಿಯವರಿಗೆ ಸೇರಿದ್ದು’ ಎಂದು ಹೇಳಿದ್ದಾರೆ. ಆತ್ಮನಿರ್ಬರದ ಹೆಸರಿನಲ್ಲಿ ಸಂಪೂರ್ಣ ಖಾಸಗೀಕರಣದ ಇವರ ಉದ್ದೇಶವು ಸ್ಪಶ್ಟವಾಗಿ ಗೊತ್ತಾಗುತ್ತದೆ. ಜೊತೆಗೆ ಹಣಕಾಸು ಆಯೋಗದ ಶಿಫಾರಸ್ಸುಗಳು ಆರ್ಥಿಕ ನೀತಿಗಳ ಮತ್ತು ವಿತ್ತೀಯ ನೀತಿಗಳ ಕೇಂದ್ರೀಕರಣಕ್ಕೆ ಪ್ರೋತ್ಸಾಹ ಕೊಡುತ್ತಿದೆ. ಜೊತೆಗೆ ಕೇಂದ್ರವು ರಾಜ್ಯ ಸರಕಾರಗಳ ಆಡಳಿತದಲ್ಲಿ, ಆರ್ಥಿಕ ನೀತಿಗಳಲ್ಲಿ ಹಸ್ತಕ್ಷೇಪ ಮಾಡಲು ಮುಕ್ತ ಅವಕಾಶ ಕಲ್ಪಿಸುತ್ತಿದೆ.

ಕಡೆಯದಾಗಿ ಹಣಕಾಸು ಆಯೋಗದ ಈ ನಿರ್ದಾರವು ಮುಂದಿನ ದಿನಗಳಲ್ಲಿ ಬೇರೆ ಇಲಾಖೆಗಳೂ ಸಹ ತಮಗೂ ಪ್ರತ್ಯೇಕ ನಿಧಿ ಸ್ಥಾಪಿಸಬೇಕು ಎನ್ನುವ ಬೇಡಿಕೆಗೆ ಕಾರಣವಾಗುತ್ತದೆ. ಉದಾಹರಣೆಗೆ ರೈಲ್ವೆ ಇಲಾಖೆಯು ಆದುನೀಕರಣಕ್ಕೆ ರೈಲ್ವೇ ನಿಧಿ ಸ್ಥಾಪಿಸಲು ಅನುಮತಿ ಕೇಳಬಹುದು. ಆಗ ರೈಲ್ವೇ ಇಲಾಖೆಗೂ ರಾಜ್ಯದ ಪಾಲಿನ ಮೊತ್ತವನ್ನು ವರ್ಗಾಯಿಸಬಹುದು. ಇದು ಉತ್ಪ್ರೇಕ್ಷೆಯಲ್ಲ. ಇದರ ದುಷ್ಪರಿಣಾಮಗಳು ರಾಜ್ಯಗಳ ಮೇಲಾಗುತ್ತದೆ ಮತ್ತು ಇದು ಸಾಂವಿದಾನಿಕ-ರಾಜಕೀಯ-ಆರ್ಥಿಕ ಬಿಕ್ಕಟ್ಟುಗಳಿಗೆ ಕಾರಣವಾಗಲಿದೆ.

ಉಪಸಂಹಾರ

ಚಿಂತಕ ಪ್ರಬಾತ್ ಪಟ್ನಾಯಕ್ ಹೇಳುವಂತೆ ಮಸಲ ರಕ್ಷಣಾ ವಲಯದ ನಿಧಿಗೆ ರಾಜ್ಯಗಳ ಪಾಲನ್ನು ವರ್ಗಾಯಿಸಲೇಬೇಕು ಎನ್ನುವ ಹಠತೊಟ್ಟರೆ ರಾಜ್ಯಗಳು ಸಹ ’ರಕ್ಷಣಾ ವಲಯವನ್ನು ಸಮವರ್ತಿ ಪಟ್ಟಿಯಲ್ಲಿ ಸೇರಿಸಬೇಕು ಮತ್ತು ಪ್ರಮುಖ ಸಬೆಗಳು, ನಿರ್ಣಾಯಕ ನಿರ್ದಾರಗಳನ್ನು ತೆಗೆದುಕೊಳ್ಳುವ ಸಂದರ್ಬದಲ್ಲಿ ರಾಜ್ಯಗಳನ್ನು ಸಹ ಒಳಗೊಳ್ಳಬೇಕು ಮತ್ತು ಅವರ ಅಬಿಪ್ರಾಯವೂ ಸಹ ಪರಿಗಣಿಸಲ್ಪಡಬೇಕು’ ಎನ್ನುವ ಹಕ್ಕೊತ್ತಾಯ ಮಂಡಿಸಬೇಕು. ಉದಾಹರಣೆಗೆ ಯುದ್ದ ವಿಮಾನ ಖರೀದಿಯ ಸಂದರ್ಬದಲ್ಲಿ ಕೇಂದ್ರ ಮತ್ತು ರಾಜ್ಯಗಳ ಸಹಬಾಗಿತ್ವದಲ್ಲಿ ಎಲ್ಲಾ ಸಬೆ, ಸಂದಾನಗಳು ನಡೆಯಬೇಕು. ಇದು ಕಡ್ಡಾಯಗೊಳಿಸಬೇಕು. ತನ್ನ ಸರ್ವಾದಿಕಾರಿ ಆಡಳಿತದ ಮೂಲಕ ಇಲ್ಲಿನ ಒಕ್ಕೂಟ ವ್ಯವಸ್ಥೆಯನ್ನು ನಾಶಗೊಳಿಸಲು ಮುಂದಾಗಿರುವ ಫ್ಯಾಸಿಸ್ಟರಿಗೆ ಇದು ಒಪ್ಪಿತವೇ.

ಬಿ. ಶ್ರೀಪಾದ ಭಟ್

ಬಿ. ಶ್ರೀಪಾದ ಭಟ್
ವೃತ್ತಿಯಲ್ಲಿ ಇಂಜಿನಿಯರ್ ಆದ ಬಿ.ಶ್ರೀಪಾದ್ ಭಟ್ ಹಿರಿಯ ಚಿಂತಕ, ಬರಹಗಾರ. ಹಲವು ಸಾಮಾಜಿಕ ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಸಮಾಜದ ಆಗುಹೋಗುಗಳಿಗೆ ನಿರಂತರ ಸ್ಪಂದಿಸುವ ಇವರು ಸಮಾನ ಶಿಕ್ಷಣಕ್ಕಾಗಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.


ಇದನ್ನೂ ಓದಿ: ಅರ್ನಾಬ್ ಗೋಸ್ವಾಮಿಯ ರಿಪಬ್ಲಿಕ್ ಟಿವಿ ಟ್ವೀಟ್ ಅನ್ನು ‘ಲೈಕ್’ ಮಾಡಿದ ಪುದುಚೇರಿ ಮುಖ್ಯ ಚುನಾವಣಾಧಿಕಾರಿ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಹೊಸ ಬರಹದಲ್ಲಿ, ಮೊದಲಿಗೆ ಮಹಾಪ್ರಾಣದ ಬರಿಗೆ(font)ಗಳು, ಐ,ಔ,ಃ,ಙ,ಞ,ಷ,೯ ಗಳನ್ನು ಕಯ್ ಬಿಡಬೇಕು.
    ಆದರೂ ಹಲವೆಡೆ ಹಾಗೆ ಮಾಡಿಲ್ಲ.
    ಹೊಸಬರಹದಲ್ಲಿ ಮೇಲಿನ ಬರಿಗೆಗಳನ್ನು ಹೊರತುಮಾಡಿ ೩೨ ಬರಿಗೆಗಳನ್ನು ಬಳಸಬೇಕು.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...