Homeಮುಖಪುಟಲಾಕ್‌ಡೌನ್‌: ಹಸಿವು, ಅಪಘಾತಗಳಿಂದ ಸಾವಿಗೀಡಾದವರ ಸಂಖ್ಯೆ 383!

ಲಾಕ್‌ಡೌನ್‌: ಹಸಿವು, ಅಪಘಾತಗಳಿಂದ ಸಾವಿಗೀಡಾದವರ ಸಂಖ್ಯೆ 383!

- Advertisement -
- Advertisement -

ಕೊರೊನಾ ಲಾಕ್‌ಡೌನ್‌ನಿಂದಾಗಿ ದೇಶದಾದ್ಯಂತ ರಸ್ತೆ ಮತ್ತು ರೈಲು ಅಪಘಾತಗಳಿಂದ ಹಿಡಿದು ಹಸಿವು, ವೈದ್ಯಕೀಯ ಚಿಕಿತ್ಸೆ ನಿರಾಕರಣೆ, ಪೊಲೀಸ್ ದೌರ್ಜನ್ಯ, ಬಳಲಿಕೆ ಮತ್ತು ಆತ್ಮಹತ್ಯೆ ಸೇರಿದಂತೆ ಒಟ್ಟು 383 ಜನರು ಸಾವನ್ನಪ್ಪಿದ್ದಾರೆ ದಿ ವೈರ್‌ ವರದಿ ಮಾಡಿದೆ.

ಶುಕ್ರವಾರ ಮಧ್ಯಪ್ರದೇಶದ 16 ವಲಸೆ ಕಾರ್ಮಿಕರನ್ನು ಸರಕು ರೈಲು ಹರಿದು ಮೃತಪಟ್ಟಿದ್ದರು. ಇವರು ರಸ್ತೆಗಳಲ್ಲಿ ಪೊಲೀಸರ ಭಯಕ್ಕೆ ಹಾಗೂ ರೈಲುಗಳು ಓಡುವುದಿಲ್ಲ ಎಂದು ಭಾವಿಸಿ ರೈಲು ಹಳಿಯ ಉದ್ದಕ್ಕೂ ನಡೆದುಕೊಂಡು ಹೋಗುತ್ತಿದ್ದರು. ಇವರು ಮಹಾರಾಷ್ಟ್ರದ ಜಲ್ನಾದಲ್ಲಿರುವ ಖಾಸಗಿ ಉಕ್ಕಿನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮಾರ್ಚ್ 24 ರಂದು ಲಾಕ್‌ಡೌನ್ ಪ್ರಾರಂಭವಾದಾಗಿನಿಂದ ಅವರಿಗೆ ಸಂಬಳ ನೀಡಲಾಗುತ್ತಿರಲಿಲ್ಲ. ಇದರಿಂದಾಗಿ ಹತಾಶರಾದ ಅವರು ಮರಳಲು ಬಯಸಿ ಕಾಲ್ನಡಿಗೆಯನ್ನು ಪ್ರಾರಂಭಿಸಿದ್ದರು.

ಶನಿವಾರ ರಾತ್ರಿ ನಡೆದ ಮತ್ತೊಂದು ಘಟನೆಯಲ್ಲಿ, ಮಧ್ಯಪ್ರದೇಶದಲ್ಲಿ ಪ್ರಯಾಣಿಸುತ್ತಿದ್ದ ಟ್ರಕ್ ಪಲ್ಟಿಯಾಗಿ ಐದು ವಲಸೆ ಕಾರ್ಮಿಕರು ಸಾವನ್ನಪ್ಪಿದರು. ಸುಮಾರು 18 ಕಾರ್ಮಿಕರು ತೆಲಂಗಾಣದ ಹೈದರಾಬಾದ್ ನಗರದಿಂದ ಉತ್ತರ ಪ್ರದೇಶದ ಆಗ್ರಾಗೆ ಮಾವಿನಹಣ್ಣನ್ನು ಸಾಗಿಸುತ್ತಿದ್ದ ಟ್ರಕ್‌ನಲ್ಲಿ ಪ್ರಯಾಣಿಸುತ್ತಿದ್ದರು.

ಈ ಎರಡು ಅಪಘಾತಗಳಲ್ಲಿ ಸಾವನ್ನಪ್ಪಿದ ಕಾರ್ಮಿಕರು ಮಾತ್ರವಲ್ಲದೆ ಇತರ ಕಾರಣಗಳಿಂದಾಗಿ ಕೂಡಾ ಲಾಕ್‌ಡೌನ್ ಸಮಯದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಸಂಶೋಧಕರಾದ ತೇಜೇಶ್ ಜಿಎನ್, ಕನಿಕಾ ಶರ್ಮಾ ಮತ್ತು ಅಮನ್ ಅವರ ಪ್ರಕಾರ, ಶನಿವಾರದವರೆಗೆ ರೋಗವನ್ನು ಹೊರತುಪಡಿಸಿ ಇತರ ಕಾರಣಗಳಿಂದಾಗಿ ಲಾಕ್‌ಡೌನ್‌ ವಿಧಿಸಿದಾಗಿನಿಂದ 378 ಜನರು ಸಾವನ್ನಪ್ಪಿದ್ದಾರೆ. ಅವರಲ್ಲಿ, 69 ಜನರು ತಮ್ಮ ಮನೆಗಳಿಗೆ ಹೊರಟಾಗ ರೈಲು ಅಥವಾ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ.

“ಲಾಕ್ ಡೌನ್ ಆದ ತಕ್ಷಣ, ನಾವು ಸಾವಿನ ವರದಿಗಳನ್ನು ನೋಡಲಾರಂಭಿಸಿದೆವು. ಮನೆಗೆ ಹಿಂದಿರುಗುವಾಗ ಜನರು ಸಾಯುತ್ತಿದ್ದಾರೆ, ಆರೋಗ್ಯ ರಕ್ಷಣೆಯ ನಿರಾಕರಣೆಯಿಂದ ಮಹಿಳೆಯರು ಸಾಯುತ್ತಿದ್ದಾರೆ. ಈ ಸಾವುಗಳು ತುಂಬಾ ದುಃಖಕರವಾಗಿದ್ದವು ”ಎಂದು ಯುನೈಟೆಡ್ ಸ್ಟೇಟ್ಸ್ ಆಫ್ ಅಟ್ಲಾಂಟಾದ ಎಮೋರಿ ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರದಲ್ಲಿ ಪಿಎಚ್‌ಡಿ ಓದುತ್ತಿರುವ ಶರ್ಮಾ ತಿಳಿಸಿದ್ದಾರೆ.

ಇವರ ಸಂಗ್ರಹಿಸಿದ ಮಾಹಿತಿಗೆ ಅನುಗುಣವಾಗಿ ಔರಂಗಾಬಾದ್‌ನಲ್ಲಿ 16 ವಲಸೆ ಕಾರ್ಮಿಕರ ಸಾವು ಒಂದೇ ದಿನದಲ್ಲಿ ಸಾವಿಗೀಡಾದವರ ಅತೀ ದೊಡ್ಡ ಘಟನೆಯಾಗಿದೆ. ಮಾರ್ಚ್ 28 ರಂದು ಲಾಕ್‌ಡೌನ್ ಘೋಷಿಸಿದ ಕೆಲವು ದಿನಗಳ ನಂತರ, ಕರ್ನಾಟಕದ ರಾಯಚೂರಿನಲ್ಲಿ ರಸ್ತೆ ಅಪಘಾತಕ್ಕೊಳಗಾಗಿ ಎಂಟು ಮಂದಿ ವಲಸಿಗ ಕಾರ್ಮಿಕರು ಸಾವನ್ನಪ್ಪಿದ್ದಾರೆ.

ಇಲ್ಲಿಯವರೆಗೆ ಅತಿ ಹೆಚ್ಚು ಸಂಖ್ಯೆಯ ಕೊರೊನಾ ವೈರಸ್ ಅಲ್ಲದ ಸಾವುಗಳು ಕೊರೊನಾ ವೈರಸಿನ ಭಯದ ಕಾರಣಕ್ಕಾಗಿ ಆತ್ಮಹತ್ಯೆ, ಮದ್ಯದ ಚಟವಿರುವವರು ಹಾಗೂ ಉದ್ಯೋಗ ನಷ್ಟ ಹೊಂದಿರುವ 83 ಜನರು ಮೃತಪಟ್ಟಿದ್ದಾರೆ. ಹಸಿವಿನಿಂದ, ಮನೆಗೆ ತೆರಳುವಾಗ, ಪಡಿತರ ಹಾಗೂ ಹಣಕ್ಕಾಗಿ ಸಾಲಿನಲ್ಲಿ ನಿಂತ ಬಳಲಿಕೆಯ ಕಾರಣದಿಂದ ಹೆಚ್ಚಿನ ಸಂಖ್ಯೆಯ ಜನರು ಸಾವನ್ನಪ್ಪಿದ್ದಾರೆ.

“ನಾವು ಗೂಗಲ್ ಹುಡುಕಾಟಗಳನ್ನು ಮಾಡುತ್ತೇವೆ ಹಾಗೂ ಜನರು ನಮಗೆ ವರದಿಗಳನ್ನು ಕಳುಹಿಸುತ್ತಿದ್ದಾರೆ. ನಾವು ಅವುಗಳನ್ನು ಪರಿಶೀಲಿಸುತ್ತೇವೆ. ಅವುಗಳನ್ನು ಭಾಷಾಂತರಿಸಲು ಸ್ವಯಂಸೇವಕರು ನಮಗೆ ಸಹಾಯ ಮಾಡುತ್ತಾರೆ” ಎಂದು ಶರ್ಮಾ ಹೇಳುತ್ತಾರೆ. ವಿಶ್ವಾಸಾರ್ಹ ಸುದ್ದಿ ಮೂಲಗಳಿಂದ ವರದಿಯಾದ ಸಾವುಗಳನ್ನು ಮಾತ್ರ ಈ ಸಂಶೋಧಕರು ಗಣನೆಗೆ ತೆಗೆದುಕೊಳ್ಳುತ್ತಾರೆ.

45 ದಿನಗಳ ಪೂರ್ವ ತಯಾರಿ ಇಲ್ಲದ ಲಾಕ್ ಡೌನ್ ನ ಕಾರಣಕ್ಕೆ ಮೃತರಾದವರ ಸಂಖ್ಯೆ : 383 ಜನರು

ಹಸಿವು ಮತ್ತು ಆರ್ಥಿಕ ಮುಗ್ಗಟ್ಟು- 47
ಹಸಿವಿನಿಂದ ಕಾಲ್ನಡಿಗೆಯಲ್ಲಿ ನಡೆದು ನಿತ್ರಾಣದಿಂದ – 26
ಪೋಲೀಸ್ ಮತ್ತು ಪ್ರಭುತ್ವದ ದೌರ್ಜನ್ಯ -12
ಸೂಕ್ತ ವೈದ್ಯಕೀಯ ಸೌಲಭ್ಯದ ಕೊರತೆ – 40
ಖಿನ್ನತೆ, ಆತಂಕದ ಕಾರಣಕ್ಕೆ ಆತ್ಮಹತ್ಯೆ – 83
ವಲಸೆ ಕಾರ್ಮಿಕರ ಕಾಲ್ನಡಿಗೆಯಲ್ಲಿ ರೈಲು, ವಾಹನ ಆಕ್ಸಿಡೆಂಟ್ ದುರಂತ – 74
ಲಾಕ್ ಡೌನ್ ಸಂದರ್ಭದ ಅಪರಾಧ – 14
ಮದ್ಯದ ಐಟದಿಂದಾಗಿ ಆತ್ಮಹತ್ಯೆ ಹಾಗೂ ಸಾವಿಗೀಡಾದವರು – 46
ಯಾವುದೇ ಮಾಹಿತಿ ಇಲ್ಲ – 41


ಇದನ್ನೂ ಓದಿ: ವಲಸೆ ಕಾರ್ಮಿಕರ ಈ ಸ್ಥಿತಿಗೆ ಕಾರಣವೇನು? ಅವರ ವಿಮೋಚನೆಯ ದಾರಿ ಯಾವುದು?


ವಿಡಿಯೊ ನೋಡಿ, ನಮ್ಮ ನಾನು ಗೌರಿ ಯೂಟ್ಯೂಬ್ ಚಾನೆಲ್‌ನಲ್ಲಿ


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...