Homeಮುಖಪುಟವಲಸೆ ಕಾರ್ಮಿಕರ ಈ ಸ್ಥಿತಿಗೆ ಕಾರಣವೇನು? ಅವರ ವಿಮೋಚನೆಯ ದಾರಿ ಯಾವುದು?

ವಲಸೆ ಕಾರ್ಮಿಕರ ಈ ಸ್ಥಿತಿಗೆ ಕಾರಣವೇನು? ಅವರ ವಿಮೋಚನೆಯ ದಾರಿ ಯಾವುದು?

ಕರ್ನಾಟಕದ ಗಂಗಮ್ಮದಿಂದ ಹಿಡಿದು ಮಹಾರಾಷ್ಟ್ರದ ಕನ್ನಡಿಗ ಕಾರ್ಮಿಕರವರೆಗೂ ಜನ ಸಾಯುತ್ತಿದ್ದರೂ ಸರ್ಕಾರ ಕಣ್ಣೆತ್ತಿ ನೋಡುತ್ತಿಲ್ಲ ಏಕೆ? ಇವರು ಈ ಸ್ಥಿತಿಗೆ ಬರಲು ಕಾರಣವೇನು?

- Advertisement -
- Advertisement -

ನಿನ್ನೆ ಒಂದು ಧಾರುಣ ಘಟನೆ ಜರುಗಿತು. ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಕಾಲ್ನಡಿಗೆಯಲ್ಲಿ ತಮ್ಮೂರಿಗೆ ಹೊರಟಿದ್ದ 16 ಜನ ವಲಸೆ ಕಾರ್ಮಿಕರು ವಿಶ್ರಾಂತಿಗಾಗಿ ರೈಲ್ವೆ ಹಳಿಯ ಮೇಲೆ ಮಲಗಿದ್ದಾಗ ರೈಲು ಹರಿದು ಎಲ್ಲರ ಪ್ರಾಣ ತೆಗೆಯಿತು. ಲಾಕ್‌ಡೌನ್‌ ಕಾರಣಕ್ಕೆ ರೈಲುಗಳಿಲ್ಲ ಎಂದು ತಿಳಿದು ಕಾಲ್ನಡಿಗೆಯಲ್ಲಿ ಹೊರಟಿದ್ದ ಅವರನ್ನು ಅದೇ ರೈಲು ಹರಿದು ಕೊಂದಿರುವುದು ದುರಾದೃಷ್ಟಕರ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗಳು ಭುಗಿಲೆದ್ದಿವೆ. ಕೆಲವು ಜನರು ಅವರೇಕೆ ರೈಲು ಹಳಿಗಳ ಮೇಲೆ ಮಲಗಬೇಕಿತ್ತು? ಎಂಬ ಪ್ರಶ್ನೆಗೆ ಅವರು ನಡೆದು ಹೋಗಬೇಕಾದ ಪರಿಸ್ಥಿತಿ ಏಕೆ ಬಂತು ಎಂಬ ಪ್ರಶ್ನೆ ಹಾಕಿದ್ದಾರೆ. ಇದಕ್ಕೆ ಅವರ ಬಳಿ ಉತ್ತರಗಳಿಲ್ಲ.

ಇನ್ನು ಇವರ ಸಾವು ಆಳುವ ಸರ್ಕಾರಗಳಿಗೆ ದೊಡ್ಡ ಪ್ರಮಾದ ಎನ್ನಿಸಲೇ ಇಲ್ಲ. ಅವರ ಜೀವಕ್ಕೆ ತಲಾ 5 ಲಕ್ಷ ಬೆಲೆ ಕಟ್ಟಿ ಕೈತೊಳೆದುಕೊಂಡಿವೆ. ಅವರ ಸಾವಿಗೆ ಮಮ್ಮಲ ಮರುಗಿದ ನಾವು ಕೂಡ ಒಂದೆರೆಡು ದಿನಗಳಲ್ಲಿ ಅವರನ್ನು ಮರೆತು ಮುಂದಕ್ಕೆ ಹೋಗುತ್ತೇವೆ. ಏಕೀಗೆ? ಅವರ ನೋವು ಆಳುವವರಿಗೆ ತಟ್ಟುವುದಿಲ್ಲ ಏಕೆ? ಈ ಕುರಿತು ಕನಿಷ್ಠ ಯೋಚಿಸಬೇಕಲ್ಲವೇ?

ಇದೊಂದೆ ಘಟನೆಯಲ್ಲ. ಲಾಕ್‌ಡೌನ್‌ ಘೋಷಣೆಯಾದಾಗಿನಿಂದ ದೇಶದಲ್ಲಿರುವ ಕೋಟ್ಯಾಂತರ ವಲಸೆ ಕಾರ್ಮಿಕರನ್ನು ಶೋಷಿಸಲಾಗುತ್ತಿದೆ. ಅವರಿಗೆ ಸಮರ್ಪಕ ದಿನಸಿಗಳು, ಊಟ ಸಿಕ್ಕಿಲ್ಲ. ಸರಿ ತಮ್ಮ ಊರಿಗೆ ಹೋಗಲು ಸಾರಿಗೆ ಇಲ್ಲ. ಕರ್ನಾಟಕದ ಗಂಗಮ್ಮದಿಂದ ಹಿಡಿದು ಮಹಾರಾಷ್ಟ್ರದ ಕನ್ನಡಿಗ ಕಾರ್ಮಿಕರವರೆಗೂ ಜನ ಸಾಯುತ್ತಿದ್ದರೂ ಸರ್ಕಾರ ಕಣ್ಣೆತ್ತಿ ನೋಡುತ್ತಿಲ್ಲ ಏಕೆ? ಇವರು ಈ ಸ್ಥಿತಿಗೆ ಬರಲು ಕಾರಣವೇನು?

ರಾಜಕೀಯ ಭಾಗವಹಿಸುವಿಕೆ ತೀರಾ ಕಡಿಮೆ.

ಈ ಕುರಿತು ಯೋಚಿಸಿದಾಗ ನಮಗೆ ಕಾಡುವ ಒಂದು ಪದವೆಂದರೆ ಅದು ವಲಸಿಗ ಎಂಬುದಾಗಿದೆ. ವಲಸಿಗ ಎಂಬ ಪದದ ಅರ್ಥವೇ ನಮ್ಮವನಲ್ಲ ಎಂಬುದಾಗಿದೆ. ವಲಸೆ ಕಾರ್ಮಿಕರ ಈ ಪರಿಸ್ಥಿತಿಯನ್ನ ರಾಜ್ಯಶಾಸ್ತ್ರ ದೃಷ್ಟಿಯಿಂದ ಇಂದ ಅಧ್ಯಯನ ಮಾಡಿದರೆ ಇವರಿಗೆ ನಾವು stateless population ಎಂದು ಕರೆಯುತ್ತೇವೆ. ಅಂದರೆ ಈ ಕಾರ್ಮಿಕರು ನಮ್ಮದೇ ದೇಶದಲ್ಲಿ ಪರಕೀಯರಾಗಿ ಉಳಿದಿದ್ದಾರೆ.

ಈ ಕಾರ್ಮಿಕರು ನಮ್ಮ ದೇಶ ಕಟ್ಟುವಲ್ಲಿ ಬಹುಮುಖ್ಯ ಪಾತ್ರವಹಿಸುತ್ತಿದ್ದಾರೆ. ಇವರಿಲ್ಲದೇ ಅಭಿವೃದ್ದಿ ಎಂಬುದನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಬಡತನದ ಕಾರಣಕ್ಕಾಗಿ ಉದ್ಯೋಗ ಸಿಗದೇ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಲಸೆ ಬಂದಿರುವ ಇವರು ತಮ್ಮ ರಾಜ್ಯಕ್ಕೂ ಬೇಡವಾಗಿರುತ್ತಾರೆ ಮತ್ತು ತಾವಿರುವ ರಾಜ್ಯದಲ್ಲಿಯೂ ಸಹ ಅನ್ಯರಾಗಿರುತ್ತಾರೆ.

ಇನ್ನು ಬಹುಮುಖ್ಯ ಕಾರಣ ಇವರ ರಾಜಕೀಯ ಭಾಗವಹಿಸುವಿಕೆ ತೀರಾ ಕಡಿಮೆಯಿದೆ. ಇವರುಗಳ ಮತದಾನದ ಗುರುತಿನ ಚೀಟಿ ತಮ್ಮ ಸ್ವಂತ ರಾಜ್ಯದಲ್ಲಿರುತ್ತದೆ. ಆದರೆ ದೂರದ ಇನ್ಯಾವುದೋ ರಾಜ್ಯದಲ್ಲಿ ಕೂಲಿ ಮಾಡಿಕೊಂಡು ಸ್ಲಂಗಳಲ್ಲಿ ವಾಸಿಸುತ್ತಿರುತ್ತಾರೆ. ಚುನಾವಣೆ ಬಂದಾಗ ತಮ್ಮ ಸ್ವಂತ ರಾಜ್ಯಕ್ಕೆ ತೆರಳಿ ಮತದಾನ ಮಾಡುವಷ್ಟ ಶಕ್ತಿ ಅವರಿಗೆ ಇರುವುದಿಲ್ಲ. ಇನ್ನು ಅವರಿರುವ ರಾಜ್ಯಗಳಲ್ಲಿ ಸಹ ಮತದಾನ ಮಾಡಲಾಗುವುದಿಲ್ಲ. ದೇಶದಲ್ಲಿ ಓಟು ಹಾಕುವ ರೈತರ ಬಗ್ಗೆಯೇ ಕಾಳಜಿ ವಹಿಸದ ಸರ್ಕಾರ ಇನ್ನು ಓಟೇ ಹಾಕದ ಇವರ ಮೇಲೆ ನಮ್ಮ ರಾಜಕಾರಣಿಗಳಿಗೆ, ಆಳುವವರಿಗೆ ಕಾಳಜಿ ಬರಲು ಹೇಗೆ ಸಾಧ್ಯ?

ಹೀಗಾಗಿಯೇ ಬೆಂಗಳೂರಿನಲ್ಲಿ ನಡೆದ ಒಂದೆರೆಡು ಘಟನೆಗಳನ್ನು ನೋಡಬೇಕಿದೆ. ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಹಣವನ್ನು ಕೋವಿಡ್‌ ಪರಿಹಾರಕ್ಕಾಗಿ ಬಳಸಬಹುದೆಂದು ಸರ್ಕಾರ ತೀರ್ಮಾನಿಸಿತು. ಅದಾದ ನಂತರ ಶಾಸಕರುಗಳ ನೇತೃತ್ವದಲ್ಲಿ ದಿನಸಿ ಮತ್ತಿತರ ಕಿಟ್‌ಗಳನ್ನು ಕೊಡಲು ನಿರ್ಧರಿಸಿದಾಗ ಬೆಂಗಳೂರಿನ ಮಹಾದೇವಪುರದ ಶಾಸಕ ಅರವಿಂದ ಲಿಂಬಾವಳಿಯವರು ಕಿಟ್‌ಗಳ ಮೇಲೆ ತಮ್ಮ ಮತ್ತು ಬಿಜೆಪಿಯ ಭಾವಚಿತ್ರವನ್ನು ಹಾಕಿಸಿಕೊಂಡರು. ಅಷ್ಟು ಮಾತ್ರವಲ್ಲದೇ ಅದನ್ನು ನಿಜಕ್ಕೂ ಅಗತ್ಯವಿದ್ದ ವಲಸೆ ಕಾರ್ಮಿಕರಿಗೆ ಕೊಡುವ ಬದಲು ತಮ್ಮ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಿಗೆ ಹಂಚಿದರು. ಏಕೆಂದರೆ ಅವರಿಗೆ ಸ್ಪಷ್ಟತೆಯಿದೆ ತನಗೆ ಓಟು ಹಾಕಿರುವವರು ಬಿಜೆಪಿ ಕಾರ್ಯಕರ್ತರೇ ಹೊರತು, ವಲಸೆ ಕಾರ್ಮಿಕರಲ್ಲ ಎಂಬುದಾಗಿದೆ.

ಹಾಗಾಗಿಯೇ ಈ ಕಾರ್ಮಿಕರು ತಮ್ಮ ತಮ್ಮ ರಾಜ್ಯಗಳಿಗೆ ಹೋಗಲು ರೈಲು ವ್ಯವಸ್ಥೆ ಮಾಡಿದಾಗಲೂ ಕಾರ್ಮಿಕರಿಂದ ಟಿಕೆಟ್‌ಗಾಗಿ ಹಣ ವಸೂಲಿ ಮಾಡಲಾಗುತ್ತಿತ್ತು. ಆನಂತರ ಉಚಿತವಾದರೂ ಅದೇ ಸಮಯಕ್ಕೆ ಕರ್ನಾಟಕ ಸರ್ಕಾರ ಅವರು ಹೊರಟುಬಿಟ್ಟರೆ ಇಲ್ಲಿ ಚಟುವಟಿಕೆ ನಡೆಸುವುದು ಕಷ್ಟ ಎಂದು ರೈಲುಸೇವೆಯನ್ನೇ ರದ್ದುಗೊಳಿಸಿದರು. ಜನರ ಒತ್ತಡಕ್ಕೆ ಮಣಿದು ಅವರು ರೈಲುಸೇವೆಯನ್ನು ಪುನರ್‌ ಆರಂಭಿಸಿದಾಗ ಜಾರ್ಖಂಡ್‌, ಬಿಹಾರ, ಪಶ್ಚಿಮ ಬಂಗಾಳ ಮತ್ತು ಓಡಿಸ್ಸಾದಂತಹ ರಾಜ್ಯಗಳು ವಲಸೆ ಕಾರ್ಮಿಕರು ಸದ್ಯಕ್ಕೆ ನಮ್ಮ ರಾಜ್ಯಗಳಿಗೆ ಬರುವುದು ಬೇಡ ಎಂದು ರೈಲುಗಳಿಗೆ ಅನುಮತಿ ನಿರಾಕರಿಸಿವೆ.

ಇಲ್ಲಿಯೂ ಅದೇ ವಲಸೆ ನೀತಿ ಕೆಲಸ ಮಾಡಿದೆ. ಇಷ್ಟೊಂದು ದೊಡ್ಡ ಸಂಖ್ಯೆಯ ಕಾರ್ಮಿಕರು ಬಹಳಷ್ಟು ರಾಜ್ಯಗಳಿಂದ ತಮ್ಮ ರಾಜ್ಯಕ್ಕೆ ಒಟ್ಟಿಗೆ ಬಂದರೆ ಅವರನ್ನು ನಿಭಾಯಿಸುವುದು ಹೇಗೆ? ಮೊದಲನೇಯದು ಕೊರೊನಾ ಹರಡುವ ಭಯ. ಎರಡನೆಯದು ಕೊರೊನಾ ನಿಂತರೂ ಅವರಿಗೆ ಅನ್ನ ಆಹಾರ ಉದ್ಯೋಗ ನೀಡಲು ಸಾಧ್ಯವಿಲ್ಲ ಎಂಬ ಭಯ ಅವರನ್ನು ಕಾಡುತ್ತಿದೆ. ಅವರೇನಿದ್ದರೂ ನಮಗೆ ಓಟು ಹಾಕುವವರಲ್ಲವಲ್ಲ ಎಂಬ ಅಸಡ್ಡೆ ಬೇರೆ.

ಇದು ರಾಜ್ಯಸರ್ಕಾರಗಳ ಕಥೆಯಾದರೆ ಕೇಂದ್ರ ಸರ್ಕಾರದ್ದು ಅದಕ್ಕಿಂತ ಕ್ರೂರವಾದುದ್ದು. ಲಾಕ್‌ಡೌನ್‌ ಮಾಡಿದಾಗ ಕೇವಲ 4 ಗಂಟೆ ಸಮಯ ಕೊಟ್ಟ ಸರ್ಕಾರ ವಲಸೆ ಕಾರ್ಮಿಕರ ಜೀವನೋಪಾಯಕ್ಕೆ ಬಿಡಿಗಾಸನ್ನೂ ಬಿಚ್ಚಲಿಲ್ಲ. ಆಗಲೇ ಹೇಳಿದ ಹಾಗೆ ರೈಲು ದರಕ್ಕೂ ಕಾರ್ಮಿಕರಿಂದ ವಸೂಲಿಗಿಳಿದ ಕೇಂದ್ರ, ಅವರನ್ನು ನಿಭಾಯಿಸಲು ರಾಜ್ಯ ಸರ್ಕಾರಗಳಿಗೆ ನಯಾಪೈಸೆ ಕೊಡಲಿಲ್ಲ. ಪಿಎಂ ಕೇರ್ಸ್‌‌ಗೆ 30 ಸಾವಿರ ಕೋಟಿಗೂ ಅಧಿಕ ಹಣ ಹರಿದುಬಂದಿದ್ದರೂ ಅದರಿಂದ ಪ್ರಧಾನಿಗಳು ಒಂದು ರೂಪಾಯಿ ಸಹ ಖರ್ಚು ಮಾಡಿದ ಉದಾಹರಣೆಯಿಲ್ಲ. ಕೋವಿಡ್‌ಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಹಸಿವಿನಿಂದ ಕಾರ್ಮಿಕರು ಸಾಯುತ್ತಿರುವಾಗ ಖರ್ಚು ಮಾಡದೇ ಇನ್ಯಾವಾಗ ಮಾಡುತ್ತಾರೆ?

ಪರಿಹಾರವೇನು?

ವಲಸೆ ಕಾರ್ಮಿಕರು ಅಸಂಘಟಿತ ವಲಯಕ್ಕೆ ಬರುತ್ತಾರೆ. ಕಾರ್ಮಿಕ ಸಂಘಟನೆಗಳು ಇವರನ್ನು ಸಂಘಟಿಸಲು ಪ್ರಯತ್ನಸಿದರೂ ದೊಡ್ಡ ಮಟ್ಟದಲ್ಲಿ ಸಾಧ್ಯವಾಗಿಲ್ಲ. ಇವರನ್ನು ದೊಡ್ಡ ಮಟ್ಟದಲ್ಲಿ ಸಂಘಟಿಸಿ ಅವರೊಂದು ರಾಜಕೀಯ ಶಕ್ತಿಯನ್ನಾಗಿ ಮಾಡಬೇಕಾದ ಅನಿವಾರ್ಯತೆ ಇದೆ. ಅದು ಮಾತ್ರವೇ ಈ ಸಂಕಷ್ಟದಿಂದ ವಲಸೆ ಕಾರ್ಮಿಕರನ್ನು ಪಾರು ಮಾಡುತ್ತದೆ. ಕಾರ್ಲ್‌‌ಮಾರ್ಕ್ಸ್‌‌ರವರು ಹೇಳಿದಂತೆ ಕಾರ್ಮಿಕರು ಈಗ ಕಳೆದುಕೊಳ್ಳಲು ಸಂಕೋಲೆಯನ್ನು ಹೊರತಪಡಿಸಿ ಕಳೆದುಕೊಳ್ಳಲು ಮತ್ತೇನೂ ಇಲ್ಲ. ಅದೇ ರೀತಿ ಬುದ್ದ ನಮ್ಮ ಅಂದರೆ ಕಾರ್ಮಿಕರ ವಿಮೋಚನೆ ನಮ್ಮಿಂದಲೇ ಸಾಧ್ಯ ಹೊರತು ಮತ್ಯಾರಿಂದಲೂ ಅಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...

ಬಿಹಾರ: ನಕಲಿ ದಾಖಲೆ ನೀಡಿ ಕೆಲಸ ಗಿಟ್ಟಿಸಿದ್ದ 3,000ಕ್ಕೂ ಹೆಚ್ಚು ಶಿಕ್ಷಕರು ವಜಾ!

ನಕಲಿ ಪದವಿ ಹಾಗೂ ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ನೀಡಿ ಸರ್ಕಾರಿ ಶಾಲೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ 3,000ಕ್ಕೂ ಹೆಚ್ಚು ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಲು ಬಿಹಾರ ಸರ್ಕಾರ ನಿರ್ಧರಿಸಿದೆ. ಈ ಕುರಿತು ಶುಕ್ರವಾರ ಅಧಿಕೃತ ಪ್ರಕಟಣೆ...

TMC ತೊರೆದು BJP ಸೇರಿದ ಮಾಜಿ ಸಂಸದರಿಗೆ ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ರಾಜ್ಯಸಭಾ ಸ್ಥಾನಗಳಿಗೆ ರಾಜೀನಾಮೆ ನೀಡಿದ ಕೆಲವೇ ವಾರಗಳಲ್ಲಿ, ಆ ಮೂವರು ಮಾಜಿ ಸಂಸದರು ಈಗ ಬೇರೆ ಬಣ್ಣದ (BJP) ಶಾಲು ಧರಿಸಿ ಮತ್ತೆ...

ಪಶ್ಚಿಮ ಬಂಗಾಳ: ಟಿಎಂಸಿ ಖಾತೆ ಫ್ರೀಜ್ ಮಾಡಿದ್ದ ಪೊಲೀಸರಿಗೆ ಕಲ್ಕತ್ತಾ ಹೈಕೋರ್ಟ್ ತರಾಟೆ!

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಹಲವು ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದ ಪಕ್ಷದ ಮೂರು ಬ್ಯಾಂಕ್...

ಬಂಗಾಳದ ಬಿಸಿಯೂಟ ಇಸ್ಕಾನ್‌ಗೆ ಹಸ್ತಾಂತರವಿಲ್ಲ: ಸರ್ಕಾರದ ಸ್ಪಷ್ಟನೆ, ಕಲ್ಕತ್ತಾ ಹೈಕೋರ್ಟ್‌ನಿಂದ ಅಫಿಡವಿಟ್‌ಗೆ ನಿರ್ದೇಶನ 

ಕೋಲ್ಕತ್ತಾ: ರಾಜ್ಯದ ಶಾಲೆಗಳಲ್ಲಿ ಜಾರಿಯಲ್ಲಿರುವ ಪಿಎಂ-ಪೋಷಣ್ (ಮಧ್ಯಾಹ್ನದ ಬಿಸಿಯೂಟ) ಯೋಜನೆಯ ನಿರ್ವಹಣೆಯನ್ನು ಇಸ್ಕಾನ್ ಸಂಸ್ಥೆಗೆ ಹಸ್ತಾಂತರಿಸುವ ಯಾವುದೇ ಅನುಮೋದಿತ ಪ್ರಸ್ತಾಪ ಸರ್ಕಾರಕ್ಕಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರ ಸ್ಪಷ್ಟಪಡಿಸಿದೆ. ಈ ಕುರಿತು ಅಫಿಡವಿಟ್...