Homeಮುಖಪುಟತುಮಕೂರು: ಗುಣಮುಖನಾಗಿ ಹೊರಬಂದ ಕೊರೊನ ಶಂಕಿತ ವ್ಯಕ್ತಿ

ತುಮಕೂರು: ಗುಣಮುಖನಾಗಿ ಹೊರಬಂದ ಕೊರೊನ ಶಂಕಿತ ವ್ಯಕ್ತಿ

- Advertisement -
- Advertisement -

ಸೂರತ್ ನಿಂದ ತುಮಕೂರಿಗೆ ಬಂದಿದ್ದ ವ್ಯಕ್ತಿಯೊಬ್ಬರು ಕೊರೊನ ರೋಗದಿಂದ ಗುಣಮುಖರಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯಿಂದ ಇಂದು ಡಿಸ್ ಚಾರ್ಜ್ ಮಾಡಲಾಯಿತು. ಈ ವ್ಯಕ್ತಿಗೆ ನೆಗೆಟೀವ್ ವರದಿ ಬಂದಿತ್ತು. ಆದರೂ ರಾತ್ರೋರಾತ್ರಿ ಪಿ-447 ಶಂಕಿತ ಸೋಂಕಿತನನ್ನು ಜಿಲ್ಲಾಸ್ಪತ್ರೆಯಲ್ಲಿ ಇಟ್ಟಿದ್ದರು. 14 ದಿನಗಳ ಬಳಿಕ ಗುಣಮುಖನಾಗಿ ಹೊರಬಂದಿದ್ದಾರೆ.

ಪಿ.447 ಸೋಂಕಿತ ವ್ಯಕ್ತಿಯನ್ನು ಎರಡು ಅಂಬುಲೆನ್ಸ್ ವಾಹನಗಳಲ್ಲಿ ಕರೆದೊಯ್ದಿದ್ದಲ್ಲದೆ ಇಡೀ ಪಿ.ಎಚ್. ಕಾಲೋನಿಯನ್ನು ಸೀಲ್ ಡೌನ್ ಮಾಡಲಾಗಿತ್ತು. ಪೂರ್ ಹೌಸ್ ಕಾಲೋನಿಯನ್ನು ಸಂಪರ್ಕಿಸುವ ಪ್ರಮುಖ ಮಾರ್ಗಗಳನ್ನು ಶೀಟುಗಳು ಮತ್ತು ಬ್ಯಾರಿಕೇಡ್ ಗಳಿಂದ ಮುಚ್ಚಲಾಗಿತ್ತು. ಇದು ದೊಡ್ಡ ಸುದ್ದಿಯಾಗಿತ್ತಲ್ಲದೆ ಜನರಲ್ಲಿ ಆತಂಕವನ್ನು ಸೃಷ್ಟಿ ಮಾಡಿತ್ತು.

ಗುಜರಾತ್ ನ ಸೂರತ್ ನಿಂದ ಈ ವ್ಯಕ್ತಿ ತುಮಕೂರಿಗೆ ಬಂದಾಗಿನಿಂದಲೂ ಬೇರೆ ಯಾರ ಸಂಪರ್ಕವನ್ನು ಮಾಡಿರಲಿಲ್ಲ. ಆದರೆ ಏಪ್ರಿಲ್ 23ರಂದು ರಾತ್ರಿ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಇದಕ್ಕೂ ಮೊದಲು ಈ ವ್ಯಕ್ತಿಯಿಂದ ತೆಗೆದುಕೊಂಡ ರಕ್ತ ಮತ್ತು ಕಫಾ ಮಾಧರಿಯನ್ನು ಬೆಂಗಳೂರಿಗೆ ಕಳಿಸಿದ್ದಾಗಲೂ ಎರಡು ಬಾರಿ ನೆಗೆಟೀವ್ ವರದಿ ಬಂದಿತ್ತು.

ಈ ಕೊರೊನಾ ಶಂಕಿತ ವ್ಯಕ್ತಿಯನ್ನು ಜಿಲ್ಲಾಸ್ಪತ್ರೆಯಲ್ಲಿ 14 ದಿನಗಳ ಕಾಲ ಐಸೋಲೇಷನ್ ನಲ್ಲಿ ಇಡಲಾಗಿತ್ತು ಇಂದು ಅವರು ಗುಣಮುಖನಾಗಿರುವ ಹಿನ್ನೆಲೆಯಲ್ಲಿ ವ್ಯಕ್ತಿಗೆ ಹೂವಿನ ಹಾರ ಹಾಕಿ ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು.


ಇದನ್ನೂ ಓದಿ: 900 ಕಾರ್ಮಿಕರನ್ನು ಒಂದೇ ಗೋಡೌನ್‌ನಲ್ಲಿಟ್ಟು ನೋಂದಣಿ: ತುಮಕೂರಿನಲ್ಲಿ ಅಘಾತಕಾರಿ ಘಟನೆ


ವೀಡಿಯೋ ನೋಡಿ: ಸದ್ದು…ಈ ಸುದ್ದಿಗಳೇನಾದವು (ಸಂಚಿಕೆ 5 )


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಧ್ಯಪ್ರದೇಶ: ಆಸ್ಪತ್ರೆಗೆ ದಾಖಲಿಸಿಕೊಳ್ಳಲು ಅನುಮತಿ ನಿರಾಕರಿಸಿದ ವೈದ್ಯರು; ಆಟೋ ರಿಕ್ಷಾದಲ್ಲೆ ಹೆರಿಗೆ

0
ಮಧ್ಯಪ್ರದೇಶದ ನೀಮುಚ್ ಜಿಲ್ಲಾ ಆಸ್ಪತ್ರೆಯಲ್ಲಿ ಅರಿವಳಿಕೆ ವೈದ್ಯರ ಕೊರತೆಯಿಂದಾಗಿ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ವೈದ್ಯರು ನಿರಾಕರಿಸಿದ್ದು, 30 ವರ್ಷದ ಮಹಿಳೆಯೊಬ್ಬರು ಆಟೋ ರಿಕ್ಷಾದಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗುವನ್ನು ತರುವಾಯ ಆಸ್ಪತ್ರೆಗೆ...