Homeಮುಖಪುಟಬಿಜೆಪಿಗೆ ‘ಶರಣಾದ’ ನಾಲ್ವರು ಟಿಡಿಪಿ ಎಂಪಿಗಳು. ಇವರಿಲ್ಲಿಬ್ಬರನ್ನು ‘ಆಂಧ್ರ ಮಲ್ಯಗಳು’ ಎಂದಿತ್ತು ಬಿಜೆಪಿ!

ಬಿಜೆಪಿಗೆ ‘ಶರಣಾದ’ ನಾಲ್ವರು ಟಿಡಿಪಿ ಎಂಪಿಗಳು. ಇವರಿಲ್ಲಿಬ್ಬರನ್ನು ‘ಆಂಧ್ರ ಮಲ್ಯಗಳು’ ಎಂದಿತ್ತು ಬಿಜೆಪಿ!

ಚಂದ್ರಬಾಬು ನಾಯ್ಡು ಎನ್‍ಡಿಎ ಜೊತೆಗಿದ್ದಾಗ ಚೌಧರಿ ಮತ್ತು ರಮೇಶರ ಮೇಲೆ ಯಾವ ಕೇಸುಗಳನ್ನು ಹಾಕಿರಲಿಲ್ಲ. ನಾಯ್ಡು ಎನ್‍ಡಿಎ ತೊರೆದ ನಂತರ ಸಿಬಿಐ, ಇ.ಡಿ ಮತ್ತು ಐಟಿ ಇಲಾಖೆಗಳು ಈ ಇಬ್ಬರು ಎಂಪಿ ಕಂ ಉದ್ಯಮಿಗಳ ಹಿಂದೆ ಬಿದ್ದವು.

- Advertisement -
- Advertisement -

ನಿನ್ನೆಯಷ್ಟೇ ಟಿಡಿಪಿಯ ನಾಲ್ವರು ರಾಜ್ಯಸಭಾ ಸದಸ್ಯರು ಬಿಜೆಪಿ ಸೇರಿದ್ದಾರೆ. ಇದರಲ್ಲಿ ಐ.ಸಿ.ಚೌಧರಿ ಮತ್ತು ಚಿ.ಎಂ ರಮೇಶ ಬಿಜೆಪಿಗೆ ಸೇರಿದ್ದಾರೆ ಎನ್ನುವುದಕ್ಕಿಂತ ಬಿಜೆಪಿಗೆ ಶರಣಾಗಿದ್ದಾರೆ ಅಥವಾ ಬಿಜೆಪಿ ಬ್ಲ್ಯಾಕ್‍ಮೇಲ್ ತಂತ್ರದಿಂದ ಈ ಇಬ್ಬರನ್ನು ಎಳೆದುಕೊಂಡಿದೆ ಎನ್ನುವುದೇ ಸೂಕ್ತ…. ಎನಿ ಹೌ ಥ್ಯಾಂಕ್ಸ್ ಟು ಸಿಬಿಐ, ಐಟಿ, ಇ,ಡಿ…… ತಿನ್ನಲ್ಲ, ತಿನ್ನಲು ಬಿಡಲ್ಲ ಅನ್ನುತ್ತಲೇ ತಿಂದು ಸಿಕ್ಕು ಹಾಕಿಕೊಂಡವರನ್ನು ಅಪ್ಪಿಗೊಳ್ಳುವ ಈ ವಿದ್ಯಾಮಾನ ಇನ್ನಷ್ಟು ವಿಸ್ತರಿಸುವ ಲಕ್ಷಣಗಳಿವೆ.

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುರ ಟಿಡಿಪಿ ಪಕ್ಷದಿಂದ ಮೂವರು ರಾಜ್ಯಸಭಾ ಸದಸ್ಯರನ್ನು ಬಿಜೆಪಿ ಎಗರಿಸಿದೆ. ವೈ.ಎಸ್ ಚೌಧರಿ, ಸಿಎಂ. ರಮೇಶ, ಗರಿಕಪತಿ ಮೋಹನರಾವ್ ಮತ್ತು ಟಿ.ಜಿ. ವೆಂಕಟೇಶ ಟಿಡಿಪಿ ತೊರೆದು ಅಮಿತ್‍ಶಾ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದಾರೆ. ಇವರಲ್ಲಿ ವೈ.ಎಸ್, ಚೌಧರಿ ಮತ್ತು ಸಿ.ಎಂ. ರಮೇಶ ಉದ್ಯಮಿಗಳೂ ಆಗಿದ್ದು ವಿವಿಧ ಹಣಕಾಸು ಹಗರಣಗಳಲ್ಲಿ ಈಟಿ, ಸಿಬಿಐ ಮತ್ತು ಜಾರಿದಳದ ತನಿಖೆ ಎದುರುಸುತ್ತಿದ್ದಾರೆ.

7-8 ತಿಂಗಳ ಹಿಂದೆಯಷ್ಟೇ ಇವರನ್ನು ‘ಆಂಧ್ರ ಮಲ್ಯ’ಗಳು ಎಂದಿದ್ದ ಬಿಜೆಪಿ ಇವರಿಬ್ಬರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ರಾಜ್ಯಸಭಾದ ಮುಖ್ಯಸ್ಥರಿಗೆ ಪತ್ರ ಬರೆದು ಒತ್ತಾಯಿಸಿತ್ತು. ಈಗಲೂ ಈ ಇಬ್ಬರಿಗೆ ಯಾವ ಕ್ಲೀನ್‍ಚಿಟ್ ಸಿಕ್ಕಿಲ್ಲ. ಆದರೆ ಈ ‘ಆಂಧ್ರ ಮಲ್ಯಗಳನ್ನು’ ಬಿಜೆಪಿ ಸೇರಿಸಿಕೊಂಡಿದೆ. ಗೊತ್ತಿದ್ದೇ ಈ ಇಬ್ಬರು ಇನ್ನು ನಿರಾಳರಾಗಲಿದ್ದಾರೆ..ಸ್ವಲ್ಪದರಲ್ಲೇ ಆರೋಪಮುಕ್ತರೂ ಆಗಲಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ತನ್ನ ಎದುರಾಳಿ ಪಡೆಗಳಿಂದ ಎಂಎಲ್‍ಎ, ಎಂಪಿಗಳನ್ನು ಸೆಳೆಯಲು ಸಿಬಿಐ, ಐಟಿ ಮತ್ತು ಇ,ಡಿ ಇಲಾಖೆಗಳನ್ನು ಬಿಜೆಪಿ ಬಳಸಿಕೊಂಡು ಬಂದಿದ್ದು ಈಗಾಗಲೇ ಕಣ್ಣೆದುರೇ ಇದೆ. 330ರಷ್ಟು ಎನ್‍ಡಿಎ ಬಲವಿದ್ದರೂ ಬಿಜೆಪಿಗೆ ಎಂಪಿಗಳ ಅಗತ್ಯವಿದೆ. ಏಕೆಂದರೆ ಅದಕ್ಕೆ ಈಗ ತುರ್ತಾಗಿ ಬೇಕಿರುವುದು ರಾಜ್ಯಸಭೆಗಳಲ್ಲಿ ಬಹುಮತ ತಲುಪುವುದು. ಸಂಘ ಪರಿವಾರದ ಅಜೆಂಡಾಗಳನ್ನು ಮಸೂದೆ ರೂಪದಲ್ಲಿ ಅಂಗೀಕರಿಸಲು ರಾಜ್ಯಸಭೆಯಲ್ಲು ಬಹುಮತ ಬೇಕು. ಈಗ ಅದು ರಾಜ್ಯಸಭೆಯತ್ತ ಗಮನ ನೀಡಿದೆ. ಮುಂಬರುವ ಹಲವು ವಿಧಾನಸಭೆಗಳಲ್ಲಿ ಭಾರಿ ಪ್ರಮಾಣದಲ್ಲಿ ಗೆದ್ದರೆ, ರಾಜ್ಯಸಭೆಯಲ್ಲಿ ಬಹುಮತ ಪಡೆಯಲು ಸಾಧ್ಯ ಎಂಬ ಗುರಿಯೋಂದಿಗೆ ಅದು ಈಗಲೇ ಮುನ್ನುಗುತ್ತಿದೆ.

ಚಂದ್ರಬಾಬು ನಾಯ್ಡು ಎನ್‍ಡಿಎ ಜೊತೆಗಿದ್ದಾಗ ಚೌಧರಿ ಮತ್ತು ರಮೇಶರ ಮೇಲೆ ಯಾವ ಕೇಸುಗಳನ್ನು ಹಾಕಿರಲಿಲ್ಲ. ನಾಯ್ಡು ಎನ್‍ಡಿಎ ತೊರೆದ ನಂತರ ಸಿಬಿಐ, ಇ.ಡಿ ಮತ್ತು ಐಟಿ ಇಲಾಖೆಗಳು ಈ ಇಬ್ಬರು ಎಂಪಿ ಕಂ ಉದ್ಯಮಿಗಳ ಹಿಂದೆ ಬಿದ್ದವು. ಆಗಲಿಂದಲೂ ಬಿಜೆಪಿ ಸೇರಿ ಪಾರಾಗಲು ಇವರ ಮೇಲೆ ಒತ್ತಡವಿತ್ತು. ಈಗ ಆಂಧ್ರದಲ್ಲಿ ಟಿಡಿಪಿ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಹೀನಾಯ ಸೋಲು ಕಂಡ ಮೇಲೆ ಈ ಇಬ್ಬರು ತನಿಖೆಯಿಂದ ಪಾರಾಗಲು ಬಿಜೆಪಿ ಸೇರಿದ್ದಾರೆ. ತನ್ನ ವಿರುದ್ಧ ವಿಪಕ್ಷಗಳನ್ನು ಒಗ್ಗೂಡಿಸಲು ಯತ್ನಿಸಿದ್ದ ನಾಯ್ಡು ಮೇಲೇಯೂ ಬಿಜೆಪಿ ಸೇಡು ತೀರಿಸಿಕೊಂಡಿದೆ.

ಆಂಧ್ರ ಮಲ್ಯಗಳ ಅಪ್ಪುಗೆ
ಕಳೆದ ನವಂಬರ್ ನಲ್ಲಿ ಬಿಜೆಪಿ ಎಂಪಿ ಮತ್ತು ವಕ್ತಾರ ಜಿವಿಎಲ್ ನರಸಿಂಹರಾವ್  ಈ ಇಬ್ಬರನ್ನು ‘ಆಂಧ್ರ ಮಲ್ಯಗಳು’ ಎಂದು ಅಪಾದಿಸಿ, ಇವರಿಬ್ಬರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಲಿ ಎಂದು ರಾಜ್ಯಸಭಾದ ನೀತಿಸಂಹಿತೆ ಸಮಿತಿಗೆ ಪತ್ರ ಬರೆದು ಒತ್ತಾಯಿಸಿದ್ದರು. ಈಗ ಅದೇ ಮಲ್ಯಗಳು ಬಿಜೆಪಿಯ ದೇಶಭಕ್ತರು! ಹಿಂದಿನ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಮತ್ತು ಅಂದಿನ ವಿಶೇಷಾಧಿಕಾರಿ ರಾಕೇಶ ಅಸ್ಥಾನಾ ನಡುವೆ ನಡಿದಿದ್ದ ಗದ್ದಲದಲ್ಲಿ ಟಿಡಿಪಿಯಲ್ಲಿದ್ದ ರಮೇಶ ಹೆಸರು ಕೇಳಿ ಬಂದಿತ್ತು. ಈತನ ಕಂಪನಿಯೊಂದರ ಮೇಲೆ ಐಟಿ ಇಲಾಖೆ ತನಿಖೆ ನಡೆಸುತ್ತಿತ್ತು. ಟಿಡಪಿಯಲ್ಲಿದ್ದ ಇನ್ನೊಬ್ಬ ಸದಸ್ಯ ಚೌಧರಿ ಮೇಲೆ ಬ್ಯಾಂಕುಗಳಿಗೆ ಮಾಡಿದ ಹಣಕಾಸು ವಂಚನೆಗಾಗಿ ಸಿಬಿಐ ಮತ್ತು ಇ.ಡಿ., ಸಂಸ್ಥೆಗಳು ಕಣ್ಣಿಟ್ಟಿದ್ದವು.

ಕಳೆದ ಅಕ್ಟೋಬರ್‍ನಲ್ಲಿ ರಮೇಶನಿಗೆ ಸಂಬಂಧಿಸಿದ ಕಂಪನಿ ರಿತ್ವಿಕ್ ಪ್ರಾಜೆಕ್ಟ್ಸ್‍ನಲ್ಲಿ ನೂರು ಕೋಟಿ ಮೌಲ್ಯದ ಸಂಶಯಾಸ್ಪದ ವಹಿವಾಟನ್ನು ಐಟಿ ಇಲಾಖೆ ಪತ್ತೆ ಹಚ್ಚಿತ್ತು. ಅದರಲ್ಲಿ ಗುರುತಿಸಲಾಗದ ವಹಿವಾಟಿನಿಂದ 75 ಕೋಟಿಗಳನ್ನು ಮತ್ತು ಸಂಶಯಾಸ್ಪದ 27 ಕೋಟಿಗಳ ಅಪರಾ ತಪರಾ ನಡೆದಿರುವುದನ್ನು ಐಟಿ ಗುರುತಿಸಿತ್ತು. ಕಳೆದ ಅಕ್ಟೋಬರ್ 12ರಂದು ರಮೇಶನ ಕಡಪಾ ಮನೆ ಮತ್ತು ಹೈದರಾಬಾದ್ ಕಚೇರಿ ಮೇಲೆ ಐಟಿ ದಾಳಿ ನಡೆಸಿತ್ತು. ಸಿಬಿಐನ ಅಧಿಕಾರಿಗಳ ಜಗಳದಲ್ಲಿ ಈ ಎಂಪಿ ರಮೇಶನ ವಿಷಯವೂ ಬಂದು, ಈತ ಆ ಅಧಿಕಾರಿಗಳನ್ನು ‘ಫಿಕ್ಸ್’ ಮಾಡಲು ಯತ್ನಿಸಿದ್ದಾನೆ ಎಂದು ಸಾಕ್ಷಿಯೊದು ಆಪಾದಿಸಿತ್ತು.

ಟಿಡಿಪಿ ಮೋದಿ-1 ಸರ್ಕಾರಕ್ಕೆ ಬೆಂಬಲ ಹಿಂತೆಗೆದುಕೊಳ್ಳುವ ಮೊದಲು ಚೌಧರಿ ಎನ್‍ಡಿಎ ಸರ್ಕಾರದಲ್ಲಿ ರಾಜ್ಯ ಸಚಿವರಾಗಿದ್ದರು. ನಂತರ ಈ ಚೌಧರಿಯ ಮೇಲೆ ಸಿಬಿಐ ಮೂರು ಎಫ್‍ಐಆರ್‍ ಗಳನ್ನು ದಾಖಲಿಸಿದೆ. ಚೌಧರಿಗೆ ಸೇರಿದ ವಿದ್ಯುತ್ ತಯಾರಿಸುವ ಬೆಸ್ಟ್ ಕ್ರಾಂಪ್ಟನ್ ಕಂಪನಿಯು ಬ್ಯಾಂಕಿಂಗ್ ವಲಯದಿಂದ 360 ಕೋಟಿ ಸಾಲ ಪಡೆದು ವಂಚಿಸಿದೆ ಎಂದು ಎಫ್‍ಆರ್‍ಐನಲ್ಲೆ ಆರೋಪಿಸಲಾಗಿದೆ. ಸಿಬಿಐ ಮಾಹಿತಿಯ ಆಧಾರದಲ್ಲಿ ಇ.ಡಿ ಕೂಡ ಚೌಧರಿ ಮೇಲೆ ಕೇಸು ದಾಖಲಿಸಿ ತನಿಖೆ ನಡೆಸುತ್ತಿದೆ. ಕಳೆದ ಅಕ್ಟೋಬರರ್ 2ರಂದು ಹೈದಾರಾಬಾದ್‍ನ ಚೌಧರಿ ಮನೆ ಮತ್ತು ಕಚೇರಿಗಳ ಮೇಲೆ ದಾಳಿ 12 ವಂಚಕ ಕಂಪನಿಗಳ ಸೀಲ್‍ಗಳು ಮತ್ತು ದಾಖಲೆಗಳನ್ನು ವಶ ಮಾಡಿಕೊಂಡಿತ್ತು. ಚೌಧರಿಯ ಸುಜನಾ ಕಂಪನಿಯ ಮೇಲೂ 5,700 ಕೋಟಿಗಳ ವಂಚನೆಯ ಕುರಿತೂ ಇ.ಡಿ ತನಿಖೆ ನಡೆಸುತ್ತಿದೆ.

ಇಂತಹ ಗಂಭೀರ ಆರೋಪ ಎದುರಿಸುತ್ತಿರುವ ಚೌಧರಿ ಮತ್ತು ರಮೇಶರ ಮೇಲಿನ ತನಿಖೆ ಇನ್ನೂ ಮುಗಿದಿಲ್ಲ. ಆಗ ‘ಆಂಧ್ರ ಮಲ್ಯ’ಗಳಾಗಿದ್ದ ಇವರಿಬ್ಬರೂ ಈಗ ದೇಶಭಕ್ತರಾಗಿ ಬದಲಾಗಿದ್ದಾರೆಯೇ ಎಂಬ ಪ್ರಶ್ನೆಗೆ ‘ಜೈ ಶ್ರೀರಾಮ್’ ಎಂಬ ಉತ್ತರವೇ ಬರಬಹುದೇನೋ?

ಸಿಬಿಐ, ಇಡಿ ಮತ್ತು ಐಟಿ ಇಲಾಖೆಗಳನ್ನು ಬಳಸಿಕೊಂಡು ವಂಚಕ ಜನಪ್ರತಿನಿಧಿಗಳನ್ನು ತನ್ನತ್ತು ಸೆಳೆಯುವ ‘ಮೋಡಸ್ ಆಪರೆಂಡಿ’ಯನ್ನು ಬಿಜೆಪಿ ಅನುಸರಿಸುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಶಾರದಾ ಚಿಟ್ ಹಗರಣದಲ್ಲಿ ಪ್ರಮುಖ ಆರೋಪಿಗಳಾಗಿದ್ದ ಟಿಎಂಸಿಯ ಮುಕುಲ್‍ರಾಯ್ ಮತ್ತು ಇತರರನ್ನು ಸೇರಿಸಿಕೊಂಡ ಬಿಜೆಪಿ ನಂತರದಲ್ಲಿ ಅವರನ್ನೇ ಬಳಸಿಕೊಂಡು ಪಶ್ಚಿಮ ಬಂಗಾಳದಲ್ಲಿ ಮಮತ ವಿರುದ್ಧ ತನ್ನ ನೆಲೆಯನ್ನು ಗಟ್ಟಿ ಮಾಡಿಕೊಂಡಿತ್ತು. ಹೀಗೆ ಬಿಜೆಪಿ ಸೇರುವ ಮಲ್ಯಗಳು ತನಿಖೆಗಳಿಂದ ಬಚಾವಾಗುತ್ತಲಿದ್ದಾರೆ, ಮುಂದೆ ಸಂಪೂರ್ಣ ಆರೋಪಮುಕ್ತರೂ ಆಗುತ್ತಾರೆ.

ವಿಜಯ ಮಲ್ಯ, ನೀರವ್ ಮೋದಿ ಬಿಜೆಪಿಗೆ ಸೇರ್ಪಡೆಗೊಂಡರೆ ದೇಶಭಕ್ತರಾಗುವ ಅವಕಾಶಗಳು ಉಂಟೇನೋ?
(ಆಧಾರ: ಇಂಡಿಯನ್ ಎಕ್ಸ್‍ಪ್ರೆಸ್)

ಇದನ್ನು ಓದಿ: ರಿಯಲ್ ಎಸ್ಟೇಟ್ ಹಗರಣದ ಕೇಸಿನಿಂದ ಬಚಾವಾಗಲು ಬಿಜೆಪಿ ಸೇರಿದರಾ ಗೌತಮ್ ಗಂಭೀರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...