ಭಾರೀ ಕುತೂಹಲ ಮೂಡಿಸಿದ್ದ 5ಜಿ ತರಂಗಾಂತರ ಹರಾಜು ಪ್ರಕ್ರಿಯೆಗೆ ತೆರೆಬಿದ್ದಿದೆ. ಒಟ್ಟು 1.5 ಲಕ್ಷ ಕೋಟಿ ರೂ ಗರಿಷ್ಟ ಬಿಡ್‌ಗೆ ಹರಾಜು ಮಾಡಲಾಗಿದೆ ಎಂದು ದೂರ ಸಂಪರ್ಕ ಸಚಿವ ಅಶ್ವಿನಿ ವೈಭವ್ ತಿಳಿಸಿದ್ದಾರೆ. ಈ ಬೆನ್ನಲ್ಲೆ 2007 ರಲ್ಲಿ ನಡೆದಿದ್ದ 2ಜಿ ತರಂಗಾಂತರ ಹರಾಜು ಪ್ರಕ್ರಿಯೆಯ ಚರ್ಚೆ ಮತ್ತೊಮ್ಮೆ ಮುನ್ನಲೆಗೆ ಬಂದಿದೆ. 5ಜಿ ಹರಾಜು ಕೇವಲ 1.5 ಲಕ್ಷ ಕೋಟಿ ರೂಗಳಿಗೆ ಆಗಿರುವಾಗ 15 ವರ್ಷಗಳ ಹಿಂದೆ ನಡೆದ 2ಜಿ ತರಂಗಾಂತರ ಹರಾಜು ಹಗರಣದಿಂದ ದೇಶಕ್ಕೆ 1.76 ಲಕ್ಷ ಕೋಟಿ ರೂ ನಷ್ಟವಾಯಿತು ಎಂದು ನಂಬಿ ನಾವು ಮೋಸ ಹೋದೆವು ಮತ್ತು ಅನ್ಯಾಯವಾಗಿ ಕೆಲವರನ್ನು ದೂರಿದೆವು ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆರಂಭಿಸಿದ್ದಾರೆ.
ವಿನೋದ್ ರಾಯ್ ಅವರ ಪ್ರತೀಕಾರದ ಕಲ್ಪನೆಯಿಂದ ಮಾರುಹೋಗಿದ್ದ ನಾವೆಲ್ಲರೂ ಆಗ ಎ.ರಾಜಾರವರು ಸೇರಿದಂತೆ ಹಲವರಿಗೆ ನೋವುಂಟು ಮಾಡಿದ್ದು, ಅವರ ಬಳಿ ಕ್ಷಮೆಯಾಚಿಸಬೇಕಾಗಿದೆ. 5G ಹರಾಜು ಕೇವಲ 1.5 ಲಕ್ಷ ಕೋಟಿ ರೂ ಪಡೆಯುತ್ತದೆ ಎಂದರೆ 15 ವರ್ಷಗಳ ಹಿಂದಿನ 2G ಹರಾಜು 1.76 ಲಕ್ಷ ಕೋಟಿ ರೂ ನಷ್ಟ ಹೆಗಾಯಿತು? ಎಂದು ಸಾಮಾಜಿಕ ಕಾರ್ಯಕರ್ತೆ ಮೀನಾ ಕಂದಸ್ವಾಮಿ ಟ್ವೀಟ್ ಮಾಡಿದ್ದಾರೆ.
All of us who got carried away by a figure conjured by Vinod Rai's vengeful imagination, owe an apology to this man, & others we off handedly demonised. 5G auction fetches only 1.5 lakh crore, how could the 2G auction 15 years ago have caused a notional loss of 1.76 lakh crore? pic.twitter.com/Lm55T10t38
— Dr Meena Kandasamy ¦¦ மீனா கந்தசாமி (@meenakandasamy) August 2, 2022
Vinod Rai came up with a report –
In 2008, govt would've earned ₹1.76 Lakh crore from 2G auction with 11 cr customer base.14 years later, govt couldn't fetch ₹1.5 Lakh crore from 5G auction with 120 cr customers.
— Black Hans (@alexiramish) July 31, 2022
In 2008-09, with almost 1/8 telecom user base, Media and then CAG came up with the theory of notional loss of 1.76 lac crore in 2G Spectrum.
14 years later, with 8 times more user base, Govt. have got bid of 1.5 lac crore for 5G spectrum. Will anyone come with notional loss now?
— Anshuman Sail (@AnshumanSail) August 1, 2022
2007ರಲ್ಲಿ ಯುಪಿಎ ಸರ್ಕಾರದಲ್ಲಿ ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದರು. ಎ.ರಾಜಾ ದೂರ ಸಂಪರ್ಕ ಸಚಿವರಾಗಿದ್ದರು. ಆ ಸಂದರ್ಭದಲ್ಲಿ 2ಜಿ ತರಂಗಾಂತರಗಳ ಹರಾಜು ಪ್ರಕ್ರಿಯೆ ನಡೆದಿತ್ತು. ಆ ನಂತರ 2011ರಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ, ಕಿಕ್‌ಬ್ಯಾಕ್ ಪಡೆದು ಕಡಿಮೆ ಮೊತ್ತಕ್ಕೆ ಹರಾಜು ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಸಿಎಜಿ ವಿನೋದ್ ರಾಯ್‌ರವರು ಇದರಿಂದ ದೇಶಕ್ಕೆ 1.76 ಲಕ್ಷ ಕೋಟಿ ರೂ ನಷ್ಟವಾಗಿದೆ ಎಂದು ವಾದಿಸಿದ್ದರು. ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಈ ಹಗರಣವನ್ನು ಹೊರತಂದಿದ್ದು ನಾನು ಎಂದು ಎಲ್ಲೆಡೆ ಹೇಳಿಕೊಂಡಿದ್ದರು. ಮಾಧ್ಯಮಗಳು ಅದನ್ನು ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಿದ್ದವು. ಇದು ಯುಪಿಎ ಸರ್ಕಾರಕ್ಕೆ ಭಾರೀ ಮುಜುಗರ ತಂದಿತ್ತು. ಎ.ರಾಜಾ ಮತ್ತು ಡಿಎಂಕೆ ಸಂಸದೆ ಕನಿಮೋಳಿಯವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಸಿಬಿಐ ಮತ್ತು ಸಿಎಜಿ ತನಿಖೆ ನಡೆಸಿತ್ತು. ಆದರೆ ದೆಹಲಿಯ ವಿಶೇಷ ನ್ಯಾಯಾಲಯ 2ಜಿ ಸ್ಪೆಕ್ಟ್ರಮ್ ಹಗರಣ ನಡೆದಿಲ್ಲ, ಇದೊಂದು ಕಟ್ಟುಕಥೆ ಇಂದು 2017ರಲ್ಲಿ ತೀರ್ಪಿತ್ತಿತ್ತು. ವಿನೋದ್ ರಾಯ್ ಕ್ಷಮೆ ಕೇಳಿದ್ದರು. ಅಷ್ಟರಲ್ಲಿ ಯುಪಿಎ ಸರ್ಕಾರವನ್ನು ಇಳಿಸಿ ಎನ್‌ಡಿಎ ಅಧಿಕಾರಕ್ಕೇರಿತ್ತು.
ಈಗ 5ಜಿ ಸ್ಪೆಕ್ಟ್ರಮ್ ಹರಾಜು ಪ್ರಕ್ರಿಯೆಯು 2ಜಿ ಸ್ಕಾಮ್ ನಡೆದಿರಲಿಲ್ಲ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದೆ. ಆದರೆ ಆಗ ದೇಶವೇ ಮುಳುಗಿಹೋಯಿತು ಎಂದು ಕೂಗಾಡಿದ ಬಿಜೆಪಿ ಅಧಿಕಾರದಲ್ಲಿದ್ದರೂ ಮೌನ ವಹಿಸಿದೆ. ಆಗ ಅಬ್ಬರಿಸಿ ಬೊಬ್ಬಿರಿದವರೂ ಎನ್‌ಡಿಎ ಸರ್ಕಾರದ ಆರ್ಥಿಕ ಅಧಃಪತನವನ್ನು ಪ್ರಶ್ನಿಸುತ್ತಿಲ್ಲವೇಕೆ? ಇವರ ವಿರೋಧ ಸೆಲಕ್ಟಿವ್ ಆಗಿರುವುದೇಕೆ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ಇದನ್ನೂ ಓದಿ: ಯುಪಿ: ನಾಲ್ಕು ಧರ್ಮಗಳ ಪ್ರಾರ್ಥನೆ ಮಾಡಿಸುತ್ತಿದ್ದ ಶಾಲೆಯ ಮ್ಯಾನೇಜರ್ ಮೇಲೆ ಎಫ್‌ಐಆರ್; ಮತಾಂತರ ಆರೋಪ



ಈ ಗೋದಿ ಪತ್ರಿಕೆ ಯಾವಾಗಲು ಸುಳ್ಳು ಹೇಳೋದು,ಜನರನ್ನು ದಾರಿ ತಪ್ಪಿಸೋದೆ ಅನಿಸುತ್ತೇ ಹಗರಣದ ಸೂತ್ರದಾರ ಎ ರಾಜ ಎಲ್ಲೋ ಈ ಪತ್ರಿಕೆಗೆ ಎಂಜಲು ಹಾಕಿರಬೇಕು