Homeರಂಜನೆಕ್ರೀಡೆಭಾರತ - ವೆಸ್ಟ್ ಇಂಡೀಸ್ ಮೂರನೇ ಟಿ20 ಪಂದ್ಯವೂ ಒಂದೂವರೆ ತಾಸು ವಿಳಂಬ: ಕಾರಣ?

ಭಾರತ – ವೆಸ್ಟ್ ಇಂಡೀಸ್ ಮೂರನೇ ಟಿ20 ಪಂದ್ಯವೂ ಒಂದೂವರೆ ತಾಸು ವಿಳಂಬ: ಕಾರಣ?

- Advertisement -
- Advertisement -

ವಾರ್ನರ್ ಪಾರ್ಕ್‌ನಲ್ಲಿರುವ ಬ್ರಿಯಾನ್ ಲಾರಾ ಸ್ಟೇಡಿಯಂ, ಬ್ಯಾಸೆಟೆರೆ, ಸೇಂಟ್ ಕಿಟ್ಸ್‌ನಲ್ಲಿ ನಿನ್ನೆ ನಡೆದ ಭಾರತ – ವೆಸ್ಟ್ ಇಂಡೀಸ್ ನಡುವಿನ ಎರಡನೇ ಟಿ20 ಪಂದ್ಯ ಬರೋಬ್ಬರಿ 3 ಗಂಟೆಗಳ ಕಾಲ ತಡವಾಗಿ ನಡೆದಿತ್ತು. ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಆರಂಭವಾಗಬೇಕಿದ್ದ ಪಂದ್ಯ ಕೊನೆಗೆ ರಾತ್ರಿ 11 ಗಂಟೆಗೆ ಆರಂಭವಾಗಿತ್ತು. ಅದಕ್ಕೆ ಕಾರಣ ಮೊದಲ ಪಂದ್ಯ ನಡೆದ ಟ್ರಿನಿಡಾಡ್‌ ನಿಂದ ಎರಡನೇ ಪಂದ್ಯ ನಡೆದ ಸ್ಥಳಕ್ಕೆ ಕ್ರಿಕೆಟ್ ಸಾಮಾಗ್ರಿಗಲು ತಲುಪುವುದು ತಡವಾಗಿತ್ತು. ಹಾಗಾಗಿ ಮೊದಲು 2 ಗಂಟೆ ಕಾಲ ತಡವಾಗಿ ಆರಂಭವಾಗುವುದಾಗಿ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ತಿಳಿಸಿತ್ತು. ಆನಂತರ ಮತ್ತೆ ಒಂದು ಗಂಟೆಗಳ ಕಾಲ ತಡವಾಗಿ ಆರಂಭಿಸಿ ಭಾರತೀಯ ಕಾಲಮಾನ ರಾತ್ರಿ 11 ಕ್ಕೆ ಪಂದ್ಯ ಶುರುವಾಗಿತ್ತು. ಆ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 5 ವಿಕೆಟ್‌ಗಳ ಅಂತರದಿಂದ ಜಯ ಗಳಿಸಿತ್ತು.

ಇಂದು ನಡೆಯಲಿರುವ ಎರಡನೇ ಪಂದ್ಯ ಸಹ ಒಂದೂವರೆ ಗಂಟೆ ತಡವಾಗಿ ಆರಂಭವಾಗಲಿದೆ. ಇದಕ್ಕೆ ಕಾರಣ ನಿನ್ನೆ ತಾನೇ ವಿಳಂಬವಾಗಿ ಆರಂಭವಾದ ಪಂದ್ಯ ಮುಗಿದಿರುವುದರಿಂದ ಆಟಗಾರರಿಗೆ ವಿಶ್ರಾಂತಿ ಅಗತ್ಯವಿದೆ ಎಂಬುದಾಗಿದೆ. ನಿನ್ನೆ ಪಂದ್ಯ ಸಮಯಕ್ಕೆ ಸರಿಯಾಗಿ ಆರಂಭಗೊಂಡಿದ್ದರೆ ಇಂದು ಸಹ ಸಮಯಕ್ಕೆ ಸರಿಯಾಗಿ ಆರಂಭಿಸಬಹುದಿತ್ತು. ಆದರೆ ನಿನ್ನೆ ತಡವಾದ ಕಾರಣ ಇಂದು ಸಹ ತಡವಾಗಿ ಆರಂಭವಾಗಿದೆ. ಎರಡು ದಿನಗಳಲ್ಲಿ ಸತತ ಎರಡು ಪಂದ್ಯಗಳು ನಡೆಯುತ್ತಿರುವುದರಿಂದ ಮದ್ಯ ಬಿಡುವು ಇಲ್ಲದಿರುವುದರಿಂದ ಈ ಸಮಸ್ಯೆ ತಲೆದೋರಿದೆ.

ನಾಲ್ಕನೇ ಮತ್ತು ಐದನೇ ಟಿ20 ಪಂದ್ಯಗಳು ಸಹ ಇದೇ ರೀತಿ ಆಗಸ್ಟ್ 6 ಮತ್ತು 7 ರಂದು ನಡೆಯಲಿವೆ. ಆಗಲೂ ಸಹ ಪಂದ್ಯ ತಡವಾಗಿ ಆರಂಭವಾಗುವ ಸಾಧ್ಯತೆಯಿದೆ.

ಇದನ್ನೂ ಓದಿ; 2ಜಿ ಸ್ಪೆಕ್ಟ್ರಮ್ ಹಗರಣ ನಡೆದೇ ಇಲ್ಲ ಎಂಬುದನ್ನು ನಿರೂಪಿಸಿದ 5ಜಿ ಹರಾಜು ಪ್ರಕ್ರಿಯೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...