ಕೊರೊನಾ ವೈರಸ್‌ನ ಮೂಲ ಸ್ಥಾನವಾದ ಚೀನಾದ ನಗರವೊಂದರಲ್ಲಿ ಸಣ್ಣ ಪ್ರಮಾಣದಲ್ಲಿ ಕೊರೊನಾ ರೋಗಿಗಳು ಪತ್ತೆಯಾದ ಹಿನ್ನೆಲೆಯಲ್ಲಿ 5 ದಿನಗಳಲ್ಲಿ ಇಡೀ ನಗರವನ್ನೇ ಪರೀಕ್ಷೆಗೆ ಒಳಪಡಿಸುವ ಗುರಿಯನ್ನು ಹೊಂದಿದೆ ಎಂದು ಅಲ್ಲಿನ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಚೀನಾದ ಬಂದರು ನಗರವಾದ ಕಿಂಗ್ದಾವೊನಲ್ಲಿ ಸುಮಾರು 9 ಮಿಲಿಯನ್ (90 ಲಕ್ಷ) ಜನಸಂಖ್ಯೆಯಿದ್ದು, ಇಡೀ ನಗರವನ್ನೇ ಕೇವಲ 5 ದಿನಗಳಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇಲ್ಲಿ ಭಾನುವಾರ 6 ಪ್ರಕರಣಗಳು ದೃಢಪಟ್ಟಿದ್ದರಿಂದ ತ್ವರಿತವಾಗಿ ಪರೀಕ್ಷೆಗಳನ್ನು ನಡೆಸಬೇಕು ಎಂದು ನಗರದ ಪುರಸಭೆಯ ಆರೋಗ್ಯ ಸಮಿತಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 5 ಜಿಲ್ಲೆಗಳನ್ನು 3 ದಿನದಲ್ಲಿ ಮತ್ತು ಇಡೀ ನಗರವನ್ನು 5 ದಿನದಲ್ಲಿ ಇಡೀ ನಗರವನ್ನು ಪರೀಕ್ಷಿಸಿಲಾಗುವುದು ಎಂದು ತಿಳಿಸಿದೆ.
ಇದನ್ನೂ ಓದಿ: ಕೊರೊನಾ ಮಾರ್ಗಸೂಚಿ ಉಲ್ಲಂಘನೆ: ಬಿಜೆಪಿ ಸಂಸದೆ ಕಛೇರಿ ಸೀಲ್!
ಲಾಕ್‌ಡೌನ್ ಮತ್ತು ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿರುವ ಹಲವು ದೇಶಗಳು ಇದರಿಂದ ಬಳಲುತ್ತಿರುವಾಗ, ಜಗತ್ತಿನಲ್ಲಿ ಮೊದಲು ವೈರಸ್ ಕಾಣಿಸಿಕೊಂಡಿದ್ದ ಚೀನಾದಲ್ಲಿ ಸಾಂಕ್ರಾಮಿಕ ರೋಗ ಗಣನೀಯವಾಗಿ ನಿಯಂತ್ರಣಕ್ಕೆ ಬಂದಿದೆ. ಇದಕ್ಕೆ ಕಾರಣ ಚೀನಾ ತನ್ನ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿರುವುದು ಮತ್ತು ಅಲ್ಲಿನ ನಿರ್ದಿಷ್ಟ ಆರೋಗ್ಯ ಸೌಲಭ್ಯಗಳಿಂದ ಎಂದು ಹಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಜೂನ್‌ನಲ್ಲಿ ಬೀಜಿಂಗ್‌ನ ದೊಡ್ಡ ದೊಡ್ಡ ಪ್ರದೇಶಗಳು ಸಾಮೂಹಿಕ ಪರೀಕ್ಷೆಗಳಿಗೆ ಒಳಪಟ್ಟಿದ್ದವು. 20 ದಶಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಈ ನಗರಗಳು ಆಹಾರ ಮಾರುಕಟ್ಟೆಗೆ ಸಂಬಂಧಿಸಿವೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ: ಇನ್ನೂ ಹೆಚ್ಚಿನ ಕೊರೊನಾ ಪರಿಹಾರ ಸಾಧ್ಯವಿಲ್ಲ: ಸುಪ್ರೀಂಗೆ ಕೇಂದ್ರ ಸರ್ಕಾರ
ಕಳೆದ ವರ್ಷದ ಕೊನೆಯಲ್ಲಿ ವೈರಸ್ ಪತ್ತೆಯಾದಾಗ ಇಡೀ ದೇಶವನ್ನು ಲಾಕ್‌ಡೌನ್ ಮಾಡಿ, ಮತ್ತೆ ಪುಟಿದೇಳುವ ಮೂಲಕ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿರುವ ದೇಶವಾಗಿ ಹೊರಹೊಮ್ಮಿತ್ತು.
ದೇಶವು ಸಹಜ ಸ್ಥಿತಿಯತ್ತ ಮರಳಿದ ಪರಿಣಾಮ ಚೀನಾ ಸರ್ಕಾರವು, ಕಳೆದ ವಾರ ‘ಗೋಲ್ಡನ್ ವೀಕ್’ ರಜೆ ನೀಡಿದ್ದು, ನೂರಾರು ಮಿಲಿಯನ್ ಜನರು ಪ್ರಯಾಣ ಕೈಗೊಂಡಿದ್ದರು. ಹೆಚ್ಚುತ್ತಿರುವ ಪರೀಕ್ಷೆಗಳು ಮತ್ತು ಶೀಘ್ರ ಕೈಗೊಂಡ ಲಾಕ್‌ಡೌನ್‌ನಿಂದ ಕೊರೊನಾ ಸೋಂಕಿನ ಎರಡನೇ ಅಲೆಯನ್ನು ತಡೆಯುವಲ್ಲಿ ಚೀನಾವು ಯಶಸ್ವಿಯಾಗಿದೆ.
ಇದನ್ನೂ ಓದಿ: ಲಕ್ಷದ್ವೀಪ: 8 ತಿಂಗಳಾದರೂ ಒಂದೂ ಕೊರೊನಾ ಸೊಂಕಿತರಿಲ್ಲದ ಪ್ರದೇಶ!
ಇನ್ನು ಈಗಾಗಲೇ ಕೊರೊನಾ ಲಸಿಕೆ ತಯಾರಿಸುವಲ್ಲಿ ಸ್ಪರ್ಧೆಯಲ್ಲಿರುವ ದೇಶಗಳ ಪೈಕಿ ಬೀಜಿಂಗ್ ಕೂಡಾ ಕೊರೊನಾ ಲಸಿಕೆಯನ್ನು ರೂಪಿಸುವ ಕೊನೆಯ ಹಂತದಲ್ಲಿ ನಿರಾಶೆಗೊಂಡಿದೆ.
ಭಾರತದಲ್ಲಿ ಹೊಸದಾಗಿ 66,732 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ದೇಶದಲ್ಲಿ ಇದುವರೆಗೂ ಒಟ್ಟು 71,20,538 ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ: 10 ಕೋಟಿ ಜನರನ್ನು ತೀವ್ರ ಬಡತನಕ್ಕೆ ದೂಡಲಿದೆ ಕೊರೊನಾ: ವಿಶ್ವಬ್ಯಾಂಕ್


