HomeUncategorizedಭಾರತದಲ್ಲಿ ಶೇ.63 ರಷ್ಟು ಗರ್ಭಿಣಿಯರು ಹೆರಿಗೆಯಾಗುವ ಕೊನೆಯ ಸಮಯದವರೆಗೂ ಕೆಲಸ ಮಾಡುತ್ತಾರೆ: ಜಚ್ಚಾ-ಬಚ್ಚಾ ಸಮೀಕ್ಷೆ

ಭಾರತದಲ್ಲಿ ಶೇ.63 ರಷ್ಟು ಗರ್ಭಿಣಿಯರು ಹೆರಿಗೆಯಾಗುವ ಕೊನೆಯ ಸಮಯದವರೆಗೂ ಕೆಲಸ ಮಾಡುತ್ತಾರೆ: ಜಚ್ಚಾ-ಬಚ್ಚಾ ಸಮೀಕ್ಷೆ

- Advertisement -
- Advertisement -

ಸ್ತ್ರೀಗೆ ಹೆಣ್ತನ ವರದಾನ. ಮಗುವಿಗೆ ಜನ್ಮ ನೀಡುವುದು ಅಂದರೆ ತಾಯಿಯೇ ಪುನರ್ಜನ್ಮ ಪಡೆದಂತೆ. ಅಂತಹ ತಾಯಿ ಒಂಬತ್ತು ತಿಂಗಳವರೆಗೆ ಮಗುವನ್ನು ಹೊತ್ತು ಕನಸು ಕಟ್ಟುತ್ತಾಳೆ. ಮಗುವಿನ ಒದ್ದಾಟ, ಹೊರಳಾಟವನ್ನು ಅನುಭವಿಸಿ, ಬೇನೆ ತಿಂದು, ಜೀವವನ್ನೇ ಪಣಕ್ಕಿಟ್ಟು ತನ್ನ ಕರುಳ ಕುಡಿಯನ್ನು ಜಗತ್ತಿಗೆ ಪರಿಚಯಿಸುತ್ತಾಳೆ. ಇಂತಹ ತಾಯಿಯ ಹೆರಿಗೆಯ ಸಮಯ ಅದೆಷ್ಟು ಯಾತನಾಮಯ. ಆದರೆ ಇದ್ಯಾವುದನ್ನೂ ಲೆಕ್ಕಿಸದೇ, ಹೆರಿಗೆಯ ಸಮಯದವರೆಗೆ ಗರ್ಭಿಣಿ ಕೆಲಸ ಮಾಡುತ್ತಾಳಂತೆ.

ಹೌದು… ಶೇ. 63 ರಷ್ಟು ಗರ್ಭಿಣಿಯರು ಮಗುವಿನ ಹೆರಿಗೆಯ ಸಮಯದವರೆಗೆ ಕೆಲಸ ಮಾಡುತ್ತಾರೆ ಎಂದು ಜಚ್ಚಾ-ಬಚ್ಚಾ ಸಮೀಕ್ಷೆ ಹೇಳಿದೆ. ಉತ್ತರ ಭಾರತದ ರಾಜ್ಯಗಳಲ್ಲಿ ಸಮೀಕ್ಷೆ ನಡೆಸಿದ್ದ ಜಚ್ಚಾ-ಬಚ್ಚಾ ಗರ್ಭಿಣಿಯರು ಮಗುವಿಗೆ ಜನ್ಮ ನೀಡುವ ಕೊನೆಯ ಗಳಿಗೆಯವರೆಗೂ ಕೆಲಸ ಮಾಡುತ್ತಾರೆ ಎಂದು ತಿಳಿಸಿದೆ.

ಅರ್ಥಶಾಸ್ತ್ರಜ್ಞ ಜೀನ್ ಡ್ರೇಜ್ ನೇತೃತ್ವದ ಸಂಶೋಧನಾ ತಂಡ, ಛತ್ತೀಸ್ ಗಢ, ಜಾರ್ಖಂಡ್, ಒಡಿಶಾ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿತ್ತು. ಹಿಂದಿನ 6 ತಿಂಗಳಲ್ಲಿ ಮಗುವಿಗೆ ಜನ್ಮ ನೀಡಿದ ತಾಯಂದಿರನ್ನು ಮಾತನಾಡಿಸಿತ್ತು. 706 ಮಹಿಳೆಯರಲ್ಲಿ 342 ಗರ್ಭಿಣಿಯರು, 364 ಹೆರಿಗೆಯಾದ ತಾಯಂದಿರನ್ನು (ಶೂಶ್ರೂಷೆ ತಾಯಂದಿರನ್ನು) ಸಂದರ್ಶಿಸಿತ್ತು.

ಸಮೀಕ್ಷೆ ವೇಳೆ, ಶೇ. 21 ರಷ್ಟು ಶುಶ್ರೂಷಾ ಗರ್ಭಿಣಿಯರಿಗೆ ಕೆಲಸದಲ್ಲಿ ಸಹಾಯ ಮಾಡಲು ಸಹಾಯಕರಿಲ್ಲ. ಕೆಲಸಕ್ಕಾಗಿ ಯಾವುದೇ ಸಹಾಯ ಲಭ್ಯವಿಲ್ಲ ಎಂದು ಸಮೀಕ್ಷೆ ತಿಳಿಸಿದೆ. ಅದರಲ್ಲಿ ಶೇ.49 ರಷ್ಟು ಮಹಿಳೆಯರು ಆಹಾರ ಮತ್ತು ವಿಶ್ರಾಂತಿ ಕೊರತೆಯಿಂದ ಬಳಲಿದ್ದಾರೆ ಮತ್ತು ದಣಿದಿದ್ದಾರೆ ಎಂದು ಮಾಹಿತಿಯನ್ನು ಸಮೀಕ್ಷೆ ಬಹಿರಂಗಪಡಿಸಿದೆ.  ದಾಗಿ ಗರ್ಭಾವಸ್ಥೆಯಲ್ಲಿ ಕ್ಷಾಮ ಮತ್ತು ದಣಿದಿದ್ದಾರೆ. ಭಾರತದಲ್ಲಿ ಸಂಭವಿಸುವ 3 ಮಕ್ಕಳ ಸಾವುಗಳಲ್ಲಿ 2 ಮಕ್ಕಳು ಅಪೌಷ್ಟಿಕತೆಯಿಂದ ಸಾವನ್ನಪ್ಪುತ್ತವೆ. ಇದು ಗ್ರಾಮೀಣ ಭಾಗಗಳಲ್ಲಿ ಅತಿಹೆಚ್ಚು ಪ್ರಮಾಣದಲ್ಲಿದೆ ಎಂದು ಸಮೀಕ್ಷೆ ದೃಢೀಕರಿಸಿದೆ.

ಸಾಮಾನ್ಯವಾಗಿ ನಾರ್ಮಲ್ ಶಿಶುಗಳ ಮಾಸ್ ಇಂಡೆಕ್ಸ್ ಹೊಂದಿರುವ ಗರ್ಭಿಣಿಯರ ತೂಕ 13 ರಿಂದ 18 ಕಿಲೋಗ್ರಾಂ ಇರುತ್ತದೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ಗ್ರಾಮೀಣ ಭಾಗದ ಮಹಿಳೆಯರಲ್ಲಿ 7 ಕಿಲೋ ಗ್ರಾಂ ತೂಕ ಹೆಚ್ಚಿರುತ್ತದೆ ಎಂದು ಸಮೀಕ್ಷೆ ತಿಳಿಸಿದೆ.

ಪ್ರಾಯೋಗಿಕವಾಗಿ, ಶುಶ್ರೂಷಾ ಮಹಿಳೆಯರು ಹೆರಿಗೆಗಾಗಿ ಸರಾಸರಿ 6,500 ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ. ಇದು ಒಬ್ಬ ಕಾರ್ಮಿಕನಿಗೆ ಇರುವ ಸಂಬಳಕ್ಕಿಂತ ದುಪ್ಪಟ್ಟು ಖರ್ಚಾಗಿದೆ. ಕಾರ್ಮಿಕರ ಮನೆಯ ಮೂರನೇ ಒಂದು ಭಾಗದಷ್ಟು ಮಹಿಳೆಯರು ವೆಚ್ಚವನ್ನು ಸರಿದೂಗಿಸಲು, ಸಾಲ ಮಾಡುತ್ತಾರೆ ಎಂದು ಸಮೀಕ್ಷೆಯ ವರದಿಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಮುಂಬೈನಲ್ಲಿ NCP – ಶಿವಸೇನೆ ಜಂಟಿ ಪತ್ರಿಕಾಗೋಷ್ಟಿ: NCP ಶಾಸಕಾಂಗ ನಾಯಕತ್ವದಿಂದ ಅಜಿತ್‌ ಪವಾರ್‌ ಉಚ್ಚಾಟನೆ

ಆದಾಗ್ಯೂ, ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿನ ಎಲ್ಲಾ ಮಹಿಳೆಯರಿಗೆ ಯಾವುದೇ ವೆಚ್ಚವಿಲ್ಲದೆ ಸಾಂಸ್ಥಿಕ ವಿತರಣೆ ನೀಡಬೇಕಾಗಿದೆ. ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯಲ್ಲಿ ಕೇವಲ 4 ಕಿಲೋಗ್ರಾಂಗಳಷ್ಟು ಕಡಿಮೆ ಸರಾಸರಿ ತೂಕ ದಾಖಲಾಗಿದೆ ಎಂದು ಅಧ್ಯಯನಗಳು ತಿಳಿಸಿವೆ. ಸೋನಭದ್ರದಲ್ಲಿ ಸಂದರ್ಶನ ಮಾಡಿದ 64 ಗರ್ಭಿಣಿಯರಲ್ಲಿ  ಶೇ. 48 ರಷ್ಟು ಗರ್ಭಿಣಿಯರು ಕಡಿಮೆ ತೂಕ ಹೊಂದಿದ್ದಾರೆ. ಗರ್ಭಾವಸ್ಥೆಯಲ್ಲಿ ಏನು ತಿನ್ನಬೇಕು ಎಂಬುದರ ಅರಿವು ಇವರಿಗಿಲ್ಲ. ಹೀಗಾಗಿ ಸರಾಸರಿಗಿಂತ ಕಡಿಮೆ ತೂಕ ದಾಖಲಿಸಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

ತಾಯಿ ಆರೋಗ್ಯ ಕಾರ್ಯಕ್ರಮ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಹಲವು ಯೋಜನೆಗಳಿವೆ. ಇವುಗಳ ಮೂಲಕ ಗ್ರಾಮೀಣ ಮಹಿಳೆಯರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಮತ್ತು ಪೂರಕ ವ್ಯವಸ್ಥೆ ಮಾಡಲಾಗಿದೆ. ಹೀಗಿರುವಾಗಲೂ ಗ್ರಾಮೀಣ ಭಾಗದ ಕೆಳಮಟ್ಟದ ಮಹಿಳೆಯರಲ್ಲಿ ಅನಾರೋಗ್ಯ ಕಾಡುತ್ತಿದೆ.

ದೈಹಿಕ ದೌರ್ಬಲ್ಯ, ಶಕ್ತಿ ಕುಂದುವಿಕೆ, ಪಾದಗಳಲ್ಲಿ ಸೆಳೆತ, ಹಗಲು ದೃಷ್ಟಿ ದೋಷ, ಮೈ-ಕೈ ಸೆಳತ, ಗರ್ಭಿಣಿಯರಲ್ಲಿ ಕಂಡು ಬರುವ ಅನಾರೋಗ್ಯಕರ ಅಂಶಗಳಾಗಿವೆ. ಅದರಲ್ಲೂ ಶೇ. 41 ರಷ್ಟು ಪಾದಗಳಲ್ಲಿ ಸೆಳೆತ, ದೃಷ್ಟಿ ದೌರ್ಬಲ್ಯ ಶೇ. 17 ರಷ್ಟು ಶೇ.9 ರಷ್ಟು ಮಹಿಳೆಯರಲ್ಲಿ ಸೆಳೆತದ ಲಕ್ಷಣಗಳು ಕಂಡು ಬರುತ್ತವೆ ಎಂದು ಸಮೀಕ್ಷೆ ಹೇಳಿದೆ.

ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳ ಯೋಜನೆಯ ವ್ಯಾಪ್ತಿಯ ತುಲನಾತ್ಮಕ ಅಂಕಿ-ಅಂಶಗಳನ್ನು ಗಮನಿಸಿದರೆ, ಒಡಿಶಾದಲ್ಲಿ ಗರ್ಭಿಣಿಯರು ಚೆನ್ನಾಗಿದ್ದಾರೆ. ಇಲ್ಲಿನ 3 ರಿಂದ 6 ವರ್ಷದೊಳಗಿನ ಅಂಗನವಾಡಿ ಮಕ್ಕಳು ವಾರಕ್ಕೆ ಐದು ಬಾರಿ ಮೊಟ್ಟೆ ಪಡೆಯುತ್ತಾರೆ. ಕಿರಿಯ ಮಕ್ಕಳು, ಗರ್ಭಿಣಿ ಮತ್ತು ಹೆರಿಗೆಯಾದ ಮಹಿಳೆಯರಿಗೆ ಪಡಿತರ ಭಾಗವಾಗಿ ಮೊಟ್ಟೆಗಳನ್ನು ವಿತರಿಸಲಾಗುತ್ತಿದೆ ಎಂದು ಸಮೀಕ್ಷೆ ವರದಿಯಲ್ಲಿ ತಿಳಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...