Homeಮುಖಪುಟಅಸಮಾನತೆ ಪೋಷಣೆಗೆ ಪೊಲೀಸರು

ಅಸಮಾನತೆ ಪೋಷಣೆಗೆ ಪೊಲೀಸರು

- Advertisement -
- Advertisement -

ಒಂದು ಊರಲ್ಲಿ ಅಣ್ಣ ಮತ್ತು ತಮ್ಮನ ಮಧ್ಯೆ ಎಂತಹದೋ ಗಲಾಟೆ. ಅಣ್ಣ ಹಣದಲ್ಲಿ ಮುಂದಿದ್ದ. ತಮ್ಮ ಕೂಲಿ ಕೆಲಸ. ತಮ್ಮನಿಗೆ ಬುದ್ಧಿ ಕಲಿಸಬೇಕು ಅಂತ ತನಗೆ ಗೊತ್ತಿರುವ ಪೊಲೀಸ್‌ಗೆ ಅಣ್ಣ ಒಂದಿಷ್ಟು ದುಡ್ಡು ಕೊಟ್ಟ. ಪೊಲೀಸರು ತಮ್ಮನನ್ನು ಜೀಪಲ್ಲಿ ಕರ್‍ಕೊಂಡು ಹೋದರು. ಏನು ಮಾಡಿದ್ರು ಗೊತ್ತಿಲ್ಲ. ಆದರೆ ಸ್ವಲ್ಪ ಹೊತ್ತಿನ ನಂತರ ತಮ್ಮನ ಹೆಂಡತಿಗೆ ಮಾಹಿತಿ ಬಂತು. ಅವರು ಪೊಲೀಸ್ ಸ್ಟೇಷನ್‌ಗೆ ಹೋಗಿ ನೋಡುವಷ್ಟರಲ್ಲಿ ಗಂಡ ರಕ್ತ ವಾಂತಿ ಮಾಡಿಕೊಂಡಿದ್ದರು. “ಏನೋ ತಿಂದು ಬಂದಿದಾನೆ. ಆಸ್ಪತ್ರೆಗೆ ಕರೆದುಕೊಂಡು ಹೋಗು” ಎಂದು ಪೊಲೀಸರು ತಾಕೀತು ಮಾಡಿದರು. ಆ ನಂತರ ಕೆಲವೇ ನಿಮಿಷಗಳಲ್ಲಿ ಆತನ ಪ್ರಾಣ ಹೋಯ್ತು.

ಇನ್ನೊಂದು ಊರಲ್ಲಿ ಒಂದು ಕೊಲೆ. ಆರೋಪಿಗಳ ಹುಡುಕಾಟದಲ್ಲಿ ಪೊಲೀಸರು. ಒಬ್ಬ ಅಧಿಕಾರಿಗೆ ಅಲ್ಲೊಬ್ಬನ ಮೇಲೆ ಅನುಮಾನ. ಕರೆದುಕೊಂಡು ಬಂದು ಸತತವಾಗಿ ಹದಿನೈದು ದಿನ ವಿಚಾರಣೆ ಮಾಡಿದರು. ಕೊಲೆಗೂ, ತನಗೂ ಏನೂ ಸಂಬಂಧ ಇಲ್ಲ ಅಂತ ಎಷ್ಟು ಬಡ್ಕೊಂಡರೂ ಪೊಲೀಸರು ಕೇಳಲಿಲ್ಲ. ಆಮೇಲೆ ಇನ್ನೊಬ್ಬ ಅಧಿಕಾರಿ ’ಇಲ್ಲಿದಾನೆ ನಿಜ ಆರೋಪಿ. ಅವನನ್ನು ಬಿಟ್ಟುಬಿಡಿ’ ಅಂದರು. ಆ ಹದಿನೈದು ದಿನ ಆ ಅಮಾಯಕ ಅನುಭವಿಸಿದ ಯಾತನೆ ಯಾವ ಪ್ರಾಣಿಗೂ ಬೇಡ.

ಯಾವುದೇ ತಯಾರಿ ಇಲ್ಲದೆ ದೇಶಾದ್ಯಂತ ಲಾಕ್‌ಡೌನ್ ಘೋಷಿಸಿದ ನಂತರ ದೆಹಲಿಯಿಂದ ಕಾರ್ಮಿಕರು ತಮ್ಮ ತವರು ಬಿಹಾರಕ್ಕೆ ಸೈಕಲ್ ತುಳಿಯುತ್ತಾ ಹೊರಟಿದ್ದರು. ಸಾಯೋದಾದ್ರೂ ನಾವು ಊರಿಗೆ ಹೋಗಿ ಅಪ್ಪ, ಅಮ್ಮಂದಿರ ಬಳಿಯೇ ಸಾಯೋಣ ಎಂಬ ನಿರ್ಧಾರ ಅವರದು. ಆದರೆ ಅಲ್ಲೊಂದು ಕಡೆ ಅವರನ್ನು ತಡೆದ ಪೊಲೀಸರು ಹಿಗ್ಗಾಮುಗ್ಗಾ ಬಾರಿಸಿದರು. ’ಲಾಕ್ ಡೌನ್ ಇದೆ. ಯಾಕೋ ಹೊರಗಡೆ ಬಂದ್ರಿ? ನಿಮ್ಮ ಅಮ್ಮಂದಿರಿಗೆ ಗಿರಾಕಿ ಹುಡುಕಿಕೊಂಡು ಹೊರಟಿರೇನೋ..?’ ಎನ್ನುತ್ತಾನೆ ಒಬ್ಬ ಪೊಲೀಸ್. ಇನ್ನೊಂದು ಕಡೆ ಜ್ವರದಿಂದ ಬಳಲುತ್ತಿದ್ದ ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಅಪ್ಪನನ್ನು ತಲೆ ಒಡೆದು ರಕ್ತ ಬರುವಂತೆ ಬಾರಿಸಿದರು. ಸಿಟ್ಟಿಗೆದ್ದು ಆತ ತಿರುಗಿಬಿದ್ದು ವಾದಿಸಿದಾಗ, ಪೊಲೀಸರಿಗೆ ಎದುರು ಮಾತನಾಡ್ತೀಯಾ ಎಂದು ಅವನನ್ನು ಬಲವಂತವಾಗಿ ಸ್ಟೇಷನ್‌ಗೆ ಕರೆದುಕೊಂಡು ಮತ್ತಷ್ಟು ಹಿಂಸೆ ನೀಡಿದರು. ಇವರನ್ನೆಲ್ಲಾ ಮನುಷ್ಯರೆನ್ನಬೇಕೆ?

ಹೀಗೆ ಹೇಳುತ್ತಾ ಹೋಗಲು ನೂರು ಘಟನೆಗಳಿವೆ. ಯಾವೂ ಸುಳ್ಳಲ್ಲ. ನಡೆದ ಘಟನೆಗಳಿವು. ನಿವೃತ್ತಿಯಾದ ಅಥವಾ ಆತ್ಮೀಯರಾದ ಕೆಲ ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿದರೆ ಪೊಲೀಸರ ಕ್ರೂರ ವರ್ತನೆ ಅನಾವರಣಗೊಳಿಸುವ ಮತ್ತಷ್ಟು ಕರಳು ಹಿಂಡುವ ಕತೆಗಳು ಗೊತ್ತಾಗಬಹುದು. ಇನ್ನೊಬ್ಬ ಅಧಿಕಾರಿ ಇದ್ದರು. ಪೊಲೀಸರ ಕೆಲಸಗಳಲ್ಲಿ ಒಂದು ಕಳ್ಳತನ ತಡೆಯುವುದು ತಾನೆ. ಆದರೆ ಆ ಮಹಾಶಯ ತಾನು ಕೆಲಸ ಮಾಡುತ್ತಿದ್ದ ಊರಿನ ಬಸ್ ಸ್ಟಾಂಡ್‌ನಲ್ಲಿ ಪಿಕ್‌ಪಾಕೆಟ್ ಮಾಡಲೆಂದು ನುರಿತ ಕಳ್ಳರಿಗೆ ಆಶ್ರಯ ನೀಡಿ ಸಾಕಿಕೊಂಡಿದ್ದರು. ಅವರು ದಿನವಿಡೀ ಪಿಕ್‌ಪಾಕೆಟ್ ಮಾಡಿ ತಂದಿದ್ದನ್ನು ಪೊಲೀಸ್ ಅಧಿಕಾರಿಗೆ ಕೊಟ್ಟು ತನ್ನ ಪಾಲನ್ನು ಪಡೆಯಬೇಕಿತ್ತು. ಇಂತಹ ಅಧಿಕಾರಿಗಳೂ ಇದ್ದಾರೆ ಎಂದರೆ ಅಚ್ಚರಿ ಪಡಬೇಕಿಲ್ಲ. ಅವರಲ್ಲಿ ಕೆಲವರು ಇನ್ನು ಕೆಲವೇ ವರ್ಷಗಳಲ್ಲಿ ಶಾಸಕರೋ, ಮಂತ್ರಿಗಳೋ ಆಗಿ ಆಯ್ಕೆಯಾಗಬಹುದು.

ಕಳ್ಳರನ್ನು, ಕೊಲೆಗಡುಕರನ್ನು ಹಿಡಿದು ನ್ಯಾಯಾಲಯಕ್ಕೆ ಒಪ್ಪಿಸಬೇಕಾದ ಇವರೇ ಕ್ರಿಮಿನಲ್‌ಗಳಾಗಿದ್ದಾರೆ. ಅಲ್ಲಲ್ಲಿ ಸಣ್ಣಪುಟ್ಟ ಕಳ್ಳತನ ಮಾಡುವವರನ್ನು ಹಿಡಿದು ಫೋಟೋ ತೆಗೆಸಿಕೊಳ್ಳುವ ಇವರು, ಮತ್ತಾರದೋ ಹಣ ಲಪಟಾಯಿಸಿ ಅದನ್ನೇ ರಾಜಕಾರಣಿಗಳಿಗೆ ಒಪ್ಪಿಸಿ ಆಯಕಟ್ಟಿನ ಜಾಗಕ್ಕೆ ಬರುತ್ತಾರೆ. ಕೆಲವು ತಿಂಗಳುಗಳ ಹಿಂದೆ ಒಂದು ಆಡಿಯೋ ವೈರಲ್ ಆಗಿತ್ತು. ಅದರಲ್ಲಿ ಉತ್ತಮ ಜಾಗಕ್ಕಾಗಿ ಕಾಯುತ್ತಿದ್ದ ಒಬ್ಬ ಅಧಿಕಾರಿ ಹೇಳಿದ್ದು, “ಈಗಿನ ಶಾಸಕರು ಈ ಹಿಂದೆ ಕೇವಲ ಕಾರ್ಯಕರ್ತರಾಗಿದ್ದಾಗ ಒಂದು ಪ್ರಕರಣದಲ್ಲಿ ನಾನು ಸಹಾಯ ಮಾಡಿದ್ದೆ. ಹಾಗಾಗಿ ನನಗೆ ಆ ಸ್ಟೇಷನ್ ಮಾಡಿಸಿಕೊಡ್ತೀನಿ ಎಂದು ಮಾತು ಕೊಟ್ಟಿದ್ದಾರೆ”. ಆ ಆಡಿಯೋ ಸರಕಾರದ ಗಮನಕ್ಕೆ ಬಂತು. ಆದರೆ ಏನಾಯ್ತು? ಕೆಲವೇ ದಿನಗಳಲ್ಲಿ ಆ ಅಧಿಕಾರಿ ತಾನು ನಿರೀಕ್ಷಿಸಿದ್ದ ಅದೇ ಠಾಣೆಗೆ ನೇಮಕಗೊಂಡರು.

ಕನಿಷ್ಟ ಲಜ್ಜೆ ಇಲ್ಲದ ಹಾಗೂ ಈ ನೆಲದ ಕಾನೂನಿಗೆ ಗೌರವ ಕೊಡದ ತುಂಬಾ ಮಂದಿ ಈ ಇಲಾಖೆಯಲ್ಲಿದ್ದಾರೆ. ಒಂದು ಬೈಕ್ ಕಳೆದುಕೊಂಡವರು ದೂರು ಕೊಡಲು ಹೋದಾಗ ಅನುಭವಿಸುವ ಯಾತನೆ ಯಾರಿಗೂ ಬೇಡ. ಆ ಬೈಕ್ ಮತ್ತೆ ಸಿಕ್ಕ ನಂತರ ಅದನ್ನು ಹಿಂಪಡೆಯುವುದು ಇನ್ನೊಂದು ದಾರುಣ ಕತೆ. ಬೈಕ್ ಕಳ್ಳನಿಂದ ಸುಸ್ಥಿತಿಯಲ್ಲಿ ಸಿಕ್ಕಿದ್ದರೂ ಪೊಲೀಸರು ಹಿಂತಿರುಗಿಸುವಾಗ ಯಾವ ಸ್ಪೇರ್ ಪಾರ್‍ಟ್ಸ್ ಇಲ್ಲದಂತೆ ನೋಡಿಕೊಂಡಿರುತ್ತಾರೆ.

ನಿವೃತ್ತರಾಗಿರುವ ಪೊಲೀಸ್ ಅಧಿಕಾರಿಗಳು ಆಗಾಗ ಟಿವಿ ಚರ್‍ಚೆಗಳಲ್ಲಿ ಭಾಗವಹಿಸಿ ಮಾತನಾಡುವುದನ್ನು ನೋಡಿ. ಅವರ ಮಾತುಗಳಲ್ಲಿ ವೃತ್ತಿ ಕಾಲದ ತಮ್ಮ ಯಾವ ನಡೆಯ ಬಗ್ಗೆಯೂ ಅವರು ವಿಷಾದ ತೋರುವುದಿಲ್ಲ. ಬದಲಿಗೆ ತಮ್ಮ ’ಶೌರ್ಯವನ್ನು’ ವೀರಾವೇಶದಿಂದ ಹೇಳಿಕೊಳ್ಳುತ್ತಾರೆ. ಪೊಲೀಸ್ ಆಡಳಿತ ಸುಧಾರಣೆ ಬಗ್ಗೆ ಮಾತನಾಡುವುದಿಲ್ಲ. ಅಲ್ಲೊಬ್ಬ, ಇಲ್ಲೊಬ್ಬ ನಿಷ್ಠಾವಂತ, ಪ್ರಾಮಾಣಿಕ ಅಧಿಕಾರಿಗಳಿದ್ದಾರೆ ಎಂಬ ಮಾತು ಕೇಳುತ್ತೇವೆ. ಆದರೆ ಅವರು ವ್ಯವಸ್ಥೆಯ ಸುಧಾರಣೆ ಕಡೆ ಯೋಚನೆ ಮಾಡಿದ್ದು ಕಡಿಮೆ. ಪ್ರತಿಷ್ಠಿತ ತರಬೇತಿ ಸಂಸ್ಥೆಗಳಲ್ಲಿ ಭಾರತೀಯ ಪ್ರಜಾಪ್ರಭುತ್ವ, ಬಹುತ್ವದ ಪಾಠ ಕೇಳಿಕೊಂಡು ಫೀಲ್ಡ್‌ಗೆ ಬಂದವರು ತೀರಾ ಅಲ್ಪರಂತೆ ವರ್ತಿಸುತ್ತಾರೆ. ಹಾಗಾಗಿ ತರಬೇತಿ ವ್ಯವಸ್ಥೆಯೇ ಅಮೂಲಾಗ್ರವಾಗಿ ಬದಲಾಗಬೇಕು ಎಂದು ಹೇಳುವವರು ಹಲವರಿದ್ದಾರೆ.

ಆದರೆ ಇದೆಲ್ಲಕ್ಕಿಂತ ಪರಿಣಾಮಕಾರಿಯಾಗಿ ಈ ಪೊಲೀಸಿಂಗ್ ಕೊನೆಯಾಗಬೇಕೆಂದು ಗಟ್ಟಿಯಾಗಿ ಪ್ರತಿಪಾದಿಸಿದವರು ಅಮೆರಿಕಾದ ಅಲೆಕ್ಸ್ ವಿಠಾಲೆ. ಅವರ ಪುಸ್ತಕ ’ದಿ ಎಂಡ್ ಆಫ್ ಪೊಲೀಸಿಂಗ್’ ಪ್ರತಿಪಾದಿಸುವುದು ಪೊಲೀಸ್ ಆಡಳಿತ ಸುಧಾರಣೆಯನ್ನಲ್ಲ, ಬದಲಿಗೆ ಪೊಲೀಸ್ ವ್ಯವಸ್ಥೆಯ ಸಂಪೂರ್ಣ ಅಂತ್ಯ.

ನಾವು ಈಗ ನೋಡುತ್ತಿರುವ ಆಧುನಿಕ ಪೊಲೀಸ್ ವ್ಯವಸ್ಥೆ ಆರಂಭವಾಗಿದ್ದು ಇಂಗ್ಲೆಂಡ್‌ನಲ್ಲಿ 1820ರ ದಶಕದಲ್ಲಿ. ಆಗಿನಿಂದಲೂ ವ್ಯವಸ್ಥೆ ರೂಪುಗೊಂಡಿದ್ದು ಶ್ರೀಮಂತರನ್ನು ಬಡವರಿಂದ ರಕ್ಷಿಸಲು ಹಾಗೂ ಗುಲಾಮಗಿರಿಯನ್ನು ಪೋಷಿಸಲು. ಅಂದಿನಿಂದ ಪೊಲೀಸ್ ವ್ಯವಸ್ಥೆ ಸಮಾಜದಲ್ಲಿ ಅಸಮಾನತೆಯನ್ನು ಕಾಪಾಡಿಕೊಂಡು ಬಂದಿದೆ. ಇಂದಿಗೂ ಪೊಲೀಸರು ಮಾಡುತ್ತಿರುವ ಕೆಲಸ ಅದೇ.

ಹಾಗಾಗಿ ಅವರು ಶಿಫಾರಸ್ಸು ಮಾಡುವುದು ನಮ್ಮ ಪೊಲೀಸ್ ವ್ಯವಸ್ಥೆಯ ಅಂತ್ಯ. ಕಳ್ಳತನ, ಕೊಲೆ ಇನ್ನಿತರೆ ಅಪರಾಧಗಳನ್ನು ಹತ್ತಿಕ್ಕಲು ಆಡಳಿತ ವ್ಯವಸ್ಥೆ ರಾಜಕೀಯ ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ. ಎಲ್ಲರಿಗೂ ಸೂರು, ದುಡಿಯುವ ಕೈಗಳಿಗೆ ಸೂಕ್ತ ಉದ್ಯೋಗ, ಉದ್ಯೋಗ ಭದ್ರತೆ.. ಇಂತಹ ಪರಿಹಾರಗಳಿಂದ ಸಾಮಾಜಿಕ ವ್ಯವಸ್ಥೆ ಸಾಕಷ್ಟು ಸುಧಾರಣೆ ಆಗುತ್ತದೆ. ಈ ನಿಟ್ಟಿನಲ್ಲಿ ಪ್ರಗತಿಪರ ಸಮಾಜ ಆಲೋಚಿಸಬೇಕಿದೆ.


ಇದನ್ನೂ ಓದಿ: ಮರೀಚಿಕೆಯಾಗಿರುವ ಪೊಲೀಸ್ ಸುಧಾರಣೆ; ನಾಗರಿಕ ಸಮಾಜದ ಒಕ್ಕೊರಲಿನ ದನಿ ಬೇಕಿದೆ..

ಇದನ್ನೂ ಓದಿ: ಟ್ರಾಫಿಕ್‌ ಅಧಿಕಾರಿಯಿಂದ ವಿಕಲಾಂಗ ಮಹಿಳೆಗೆ ಥಳಿತ: ಬೆಂಗಳೂರಿನಲ್ಲಿ ಸದ್ಯಕ್ಕಿಲ್ಲ ಟೋಯಿಂಗ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...