Homeಮುಖಪುಟಈ ಸಾಮಾಜಿಕ ನಿಯಮಗಳು ನಿಮಗೆ ಸಹಕಾರಿಯಾಗಬಲ್ಲವು, ಪಾಲಿಸಲು ಪ್ರಯತ್ನಿಸಿ

ಈ ಸಾಮಾಜಿಕ ನಿಯಮಗಳು ನಿಮಗೆ ಸಹಕಾರಿಯಾಗಬಲ್ಲವು, ಪಾಲಿಸಲು ಪ್ರಯತ್ನಿಸಿ

ನಾವು ಸಾರ್ವಜನಿಕವಾಗಿ ಏನನ್ನು ಮಾಡಬಾರದು, ಏನನ್ನು ಮಾಡಬೇಕು ಎಂದು ಸರಳವಾಗಿ ಹೇಳುವ ನಿಯಮಗಳಿವು...

- Advertisement -
- Advertisement -

ಮೂಲ- ರಂಜನ್ ಮಿಶ್ರಾರವರ ಫೇಸ್‌ಬುಕ್ ವಾಲ್ ನಿಂದ

ಕನ್ನಡಕ್ಕೆ : ಮುತ್ತುರಾಜು

1.    ಯಾರಿಗೆ ಆಗಲಿ ಒಂದಕ್ಕಿಂತ ಹೆಚ್ಚು ಬಾರಿ ಪದೇ ಪದೇ ಫೋನ್ ಮಾಡಬೇಡಿ. ಅವರು ನಿಮ್ಮ ಫೋನ್ ರಿಸೀವ್ ಮಾಡಿಲ್ಲ ಎಂದರೆ ಅದಕ್ಕಿಂತಲೂ ಬಹುಮುಖ್ಯ ಕೆಲಸದಲ್ಲಿದ್ದಾರೆ ಎಂದು ಭಾವಿಸಿ.

2.    ಸಾಲ ಪಡೆದ ಹಣವನ್ನು ಅವರು ನೆನಪಿಸುವ ಮುನ್ನ ಅಥವಾ ಅವರು ಕೇಳುವ ಮುನ್ನವೇ ಹಿಂದಿರುಗಿಸಿಬಿಡಿ. ಇದು ನಿಮ್ಮ ಬದ್ಧತೆ ಮತ್ತು ವ್ಯಕ್ತಿತ್ವವನ್ನು ನಿರೂಪಿಸುತ್ತದೆ. ಇದು ಪೆನ್, ಕೊಡೆ, ಊಟದ ಡಬ್ಬಿ ಇತ್ಯಾದಿಗಳಿಗೂ ಅನ್ವಯಿಸುತ್ತದೆ.

3.    ಇತರರು ನಿಮಗೆ ಊಟ ಕೊಡಿಸುವ ಸಂದರ್ಭದಲ್ಲಿ ದುಬಾರಿ ತಿನಿಸುಗಳನ್ನು ಆರ್ಡರ್ ಮಾಡಬೇಡಿ.

4.    ಮುಜುಗರದ ಪ್ರಶ್ನೆಗಳನ್ನು ಎಂದಿಗೂ ಕೇಳಲೇಬೇಡಿ, ಉದಾಹರಣೆಗೆ: ನಿಮ್ಮಗಿನ್ನು ಮದುವೆಯಾಗಿಲ್ಲವೇ? ನಿಮಗೆ ಮಕ್ಕಳಾಗಿಲ್ಲವೇ? ನೀವು ಏಕೆ ಮನೆ ಖರೀದಿಸಿಲ್ಲ? ನೀವೇ ಏಕೆ ಕಾರು ತೆಗೆದುಕೊಂಡಿಲ್ಲ? ಇವು ಯಾವುವು ನಿಮ್ಮ ಸಮಸ್ಯೆಯಲ್ಲ ಎಂಬುದನ್ನು ಮರೆಯಬೇಡಿ.

5.    ನಿಮ್ಮ ಹಿಂದೆ ಬರುವವರಿಗೆ ಯಾವಗಲೂ ಬಾಗಿಲು ತೆರೆದಿಡಿ. ಅವರು ಹುಡುಗ ಅಥವಾ ಹುಡುಗಿಯಾಗಿರಲಿ, ಜೂನಿಯರ್ ಅಥವಾ ಸೀನಿಯರ್ ಆಗಿರಲಿ. ಸಾರ್ವಜನಿಕವಾಗಿ ಮತ್ತೊಬ್ಬರನ್ನು ಸಮಾನವಾಗಿ ಗೌರವದಿಂದ ನಡೆಸಿಕೊಳ್ಳುವುದರಿಂದ ನೀವು ಚಿಕ್ಕವರೆನಿಸಿಕೊಳ್ಳುವುದಿಲ್ಲ.

6.    ನಿಮ್ಮ ಸ್ನೇಹಿತರೊಂದಿಗೆ ಕ್ಯಾಬ್/ಆಟೋದಲ್ಲಿ ಹೋದಾಗ ಅವರು ಬಿಲ್ ಪೆ ಮಾಡಿದರೆ ಮುಂದಿನ ಬಾರಿ ನೀವು ಬಿಲ್ ಪೆ ಮಾಡಲು ಯತ್ನಿಸಿ

7.    ಭಿನ್ನ ರೀತಿಯ ಅಭಿಪ್ರಾಯಗಳನ್ನು ಗೌರವಿಸಿ. ನೆನಪಿಡಿ ನಿಮಗೆ 6 ಎಂದು ಕಾಣುವುದು ನಿಮ್ಮ ಎದುರಿದ್ದವರಿಗೆ 9 ಎಂದು ಕಾಣಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಎರಡನೇ ಅಭಿಪ್ರಾಯ ಪಡೆಯುವುದು ಸೂಕ್ತ.

8.    ಮತ್ತೊಬ್ಬರು ಮಾತನಾಡುವಾಗ ಮಧ್ಯದಲ್ಲಿ ಬಾಯಿ ಹಾಕಬೇಡಿ. ಅವರು ಪೂರ್ತಿ ಹೇಳಲು ಅವಕಾಶ ಮಾಡಿಕೊಡಿ. ಎಲ್ಲವನ್ನು ಕೇಳಿಸಿಕೊಳ್ಳಿ ಮತ್ತು ನಿಮಗೆ ಬೇಕಾದುದ್ದನ್ನು ಮಾತ್ರ ತೆಗೆದುಕೊಳ್ಳಿ

9.    ನೀವು ಯಾರನ್ನಾದರೂ ರೇಗಿಸಿದಾಗ ಅವರು ಆಗ ಖುಷಿಪಡದಿದ್ದರೆ, ಅದನ್ನು ಅಲ್ಲಿಗೆ ನಿಲ್ಲಿಸಿ ಮತ್ತು ಮತ್ತೆ ಪುನಾರಾವರ್ತಿಸಬೇಡಿ. ಇದು ಮತ್ತೊಬ್ಬರು ಹಾಗೆ ಮಾಡದಂತೆ ತಡೆಯುತ್ತದೆ.

10. ಯಾರಾದರೂ ನಿಮಗೆ ಸಹಾಯ ಮಾಡಿದಾಗ ಥ್ಯಾಂಕ್ಯೂ ಎಂದು ಹೇಳಿ.

11. ಯಾರನ್ನಾದರೂ ಸಾರ್ವಜನಿಕವಾಗಿ ಹೊಗಳಿ ಆದರೆ ಟೀಕೆಗಳಿದ್ದರೆ ಅದನ್ನು ಅವರಿಗೆ ವಯಕ್ತಿಕವಾಗಿ ಹೇಳಿ

12. ಮತ್ತೊಬ್ಬರ ದೇಹ ತೂಕದ ಬಗ್ಗೆ ಮಾತನಾಡಲು ನಿಮಗೆ ಹಕ್ಕು ಇಲ್ಲ. ನೀವು ಚೆನ್ನಾಗಿ ಕಾಣುವಿರಿ ಎಂದಷ್ಟೆ ಹೇಳಿ. ಅವರು ತೂಕ ಇಳಿಸಲು ಬಯಸಿದರೆ ಅವರಾಗಿಯೇ ನಿಮ್ಮೊಡನೆ ಮಾತನಾಡುತ್ತಾರೆ. ನೀವಾಗಿಯೇ ಸಲಹೆ ಕೊಡಲು ಹೋಗಬೇಡಿ

13. ಯಾರಾದರೂ ತಮ್ಮ ಮೊಬೈಲ್‌ನಲ್ಲಿ ನಿಮ್ಮ ಫೋಟೊ ತೋರಿಸಿದರೆ ನೋಡಿ. ಆದರೆ ಆ ಕಡೆ, ಈ ಕಡೆ ಸ್ವೈಪ್ ಮಾಡಬೇಡಿ. ಅಲ್ಲಿ ಏನಿದೆ ಎಂಬುದು ನಿಮಗೆ ಗೊತ್ತಿರುವುದಿಲ್ಲ ಮತ್ತು ಗೊತ್ತು ಮಾಡಿಕೊಳ್ಳುವ ಅವಶ್ಯಕತೆ ಸಹ ನಿಮಗಿರುವುದಿಲ್ಲ.

14. ನನಗೆ ಡಾಕ್ಟರ್ ಅಪಾಯಿಂಟ್‌ಮೆಂಟ್ ಇದೆ ಎಂದು ನಿಮ್ಮ ಸಹೋದ್ಯೊಗಿ ಹೇಳಿದಾಗ ಏತಕ್ಕೆ ಎಂದು ಕೇಳಲೇಬೇಡಿ. ನೀವು ಚೆನ್ನಾಗಿ ಆಗುತ್ತಿರಿ ಎಂಬ ನಂಬಿಕೆಯಿದೆ ಎಂದು ಮಾತ್ರ ಹೇಳಿ. ಅವರ ಖಾಸಗಿ ಆನಾರೋಗ್ಯದ ಬಗ್ಗೆ ನೀವಾಗಿ ಕೇಳಬೇಡಿ. ಹೇಳಬೇಕು ಅನಿಸಿದರೆ ಅವರೆ ಹೇಳುತ್ತಾರೆ.

15. ನೀವು ಸಿಇಓಗೆ ಯಾವ ಗೌರವ ನೀಡುತ್ತಿರೋ ಅದೇ ಗೌರವ ಕಚೇರಿ ಸ್ವಚ್ಚಗೊಳಿಸುವವರಿಗೂ ನೀಡಿ. ನೀವು ನಿಮಗಿಂತ ಕೆಳಗಿನವರ ಜೊತೆ ಗೌರವದಿಂದ ನಡೆದುಕೊಂಡರೆ ಅದು ಇತರರಿಗೂ ಮಾದರಿಯಾಗುತ್ತದೆ.

16. ಯಾರಾದರೂ ನಿಮ್ಮನ್ನು ಉದ್ದೇಶಿಸಿ ಮಾತನಾಡುವಾಗ ನೀವು ಮೊಬೈಲ್ ನಲ್ಲಿ ನೋಡುತ್ತಿದ್ದರೆ ಅದು ಅನುಚಿತ ಎನಿಸಿಕೊಳ್ಳುತ್ತದೆ. ಹಾಗೆಯೇ ನೀವು ಮಾತನಾಡುವಾಗ ಸನ್ ಗ್ಲಾಸ್ ಧರಿಸಬೇಡಿ. ಕಣ್ಣು ಸಹ ಸಂವಹನದ ಪ್ರಮುಖ ಸಾಧನ ಎಂಬುದನ್ನು ಮರೆಯಬೇಡಿ.

17. ಯಾರಾದರೂ ಅವರಾಗಿಯೇ ಕೇಳುವ ಮುನ್ನ ಯಾವುದೇ ಸಲಹೆ ನೀಡಲು ಹೋಗಬೇಡಿ

18. ಬಹಳ ದಿನಗಳ ನಂತರ ನಿಮ್ಮ ಸ್ನೇಹಿತರು ಅಥವಾ ಯಾರನ್ನಾದರೂ ಭೇಟಿಯಾದಾಗ ಅವರ ವಯಸ್ಸು ಮತ್ತು ಸಂಬಳದ ಬಗ್ಗೆ ಕೇಳಬೇಡಿ. ಬೇಕಾದರೆ ಅವರಾಗಿಯೇ ಹೇಳುತ್ತಾರೆ.

19. ನಿಮಗೆ ಸಂಬಂಧವಿಲ್ಲದ ಕೆಲಸಗಳಲ್ಲಿ ತಲೆ ಹಾಕಬೇಡಿ. ನಿಮ್ಮನ್ನು ಅದು ಎಳೆದುಕೊಂಡಾಗ ಮಾತ್ರ ವ್ಯವಹರಿಸಿ.

20. ನಿಮ್ಮ ಶ್ರೀಮಂತಿಗೆ ಕುರಿತು ಮಾತನಾಡಬೇಡಿ, ವಿಶೇಷವಾಗಿ ಬಡವರ ನಡುವೆ. ಅದೇ ರೀತಿ ನಿಮ್ಮ ಮಕ್ಕಳ ಬಗ್ಗೆ ಮಾತನಾಡಬೇಡಿ, ವಿಶೇಷವಾಗಿ ಮಕ್ಕಳಿಲ್ಲದವರ ನಡುವೆ.

21. ನೀವು ಸ್ನೇಹಿತರೊಟ್ಟಿಗೆ ಇರುವಾಗ ಮನೆ ಕೆಲಸಗಳನ್ನು ಹಂಚಿಕೊಳ್ಳಿ, ಹಾಗೆಯೇ ಖರ್ಚುಗಳನ್ನು ಸಹ.

22. ಉತ್ತಮ ಸಂದೇಶ ಓದಿದ ಬಳಿಕೆ ಧನ್ಯವಾದ ಹೇಳಲು ಪ್ರಯತ್ನಿಸಿ.


ಇದನ್ನೂ ಓದಿ: ಅಂಬೇಡ್ಕರ್‌‌ ವಿಚಾರಧಾರೆಯೇ ಪ್ರೇರಣೆ: ಮೈಸೂರು ವಿವಿಯಲ್ಲಿ ಪಿಎಚ್‌.ಡಿ ಮಾಡುತ್ತಿರುವ ಟ್ರಾನ್ಸ್‌ಜೆಂಡರ್‌ ಮಹಿಳೆಯ ಮನದಾಳ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...