Homeಚಳವಳಿರಾಜಸ್ಥಾನದಲ್ಲಿ ಜಾತಿ ದೌರ್ಜನ್ಯದ ವಿರುದ್ದ ’ಆಪರೇಷನ್ ಸಮಾನತಾ’: ದಲಿತರ ಮದುವೆಯಲ್ಲಿ ಕುದುರೆ ಸವಾರಿಗೆ ಆಡಳಿತದ ಸಾಥ್!

ರಾಜಸ್ಥಾನದಲ್ಲಿ ಜಾತಿ ದೌರ್ಜನ್ಯದ ವಿರುದ್ದ ’ಆಪರೇಷನ್ ಸಮಾನತಾ’: ದಲಿತರ ಮದುವೆಯಲ್ಲಿ ಕುದುರೆ ಸವಾರಿಗೆ ಆಡಳಿತದ ಸಾಥ್!

ಆಪರೇಷನ್ ಸಮಂತ ಆರಂಭವಾದಾಗಿನಿಂದ ಹತ್ತಕ್ಕೂ ಹೆಚ್ಚು ದಲಿತರ ವಿವಾಹಗಳು ಶಾಂತಿಯುತವಾಗಿ ನಡೆದಿವೆ- ಪೊಲೀಸ್ ವರಿಷ್ಠಾಧಿಕಾರಿ

- Advertisement -
- Advertisement -

ಜಾತಿ ದೌರ್ಜನ್ಯ, ಜಾತಿಯ ಅಡೆತಡೆಗಳನ್ನು ಮುರಿದು, ರಾಜಸ್ಥಾನದ ದಲಿತ ಯುವಕರೊಬ್ಬರು ತನ್ನ ಮದುವೆಯ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡಿದ್ದಾರೆ. ದಲಿತರು ಕುದುರೆ ಸವಾರಿ ಮಾಡಬಾರದು ಎಂದು ಮೇಲ್ಜಾತಿಯವರ ನಿರ್ಬಂಧವನ್ನು ಧಿಕ್ಕರಿಸಿರುವ ಅವರು ಕುದುರೆ ಸವಾರಿ ಮಾಡುವುದೂ ನಮ್ಮ ಹಕ್ಕು ಎಂದಿದ್ದಾರೆ. ಅವರ ಈ ಪ್ರಯತ್ನಕ್ಕೆ ಆಡಳಿತವು ಬೆಂಬಲ ನೀಡಿದೆ.

ದಲಿತರು ತಮ್ಮ ಮದುವೆಯಲ್ಲಿ ಕುದುರೆ ಮೇಲೆ ಸವಾರಿ ಮಾಡದಂತೆ ಮೇಲ್ಜಾತಿಯವರು ತಡೆಯುವುದು. ತಡೆದು ಹಲ್ಲೆ ನಡೆಸಿರುವ ಘಟನೆಗಳು ಸಾಕಷ್ಟು ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ಜಾತಿ ತಾರತಮ್ಯವನ್ನು ಮೀರಿ, ಅಂಚಿಗೆ ತಳ್ಳಲ್ಪಟ್ಟ ಜನರಿಗೆ ಅವರ ಹಕ್ಕುಗಳನ್ನು ಮರಳಿ ತರಲು ಬುಂದಿ ಜಿಲ್ಲೆಯಲ್ಲಿ ಪೋಲೀಸ್ ಮತ್ತು ಸ್ಥಳೀಯ ಆಡಳಿತವು ಪ್ರಾರಂಭಿಸಿದ ‘ಆಪರೇಷನ್ ಸಮಾನತಾ (ಸಮಾನತೆ)’ ಅಭಿಯಾನವು ಈ ವಿವಾದ ಮೂಲಕ ಒಂದು ಹಂತಕ್ಕೆ ಯಶಸ್ವಿಯಾಗಿದೆ. ಆ ಅಭಿಯಾನವು ದಲಿತ ಯುವಜನರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ದಲಿತರು ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ಪಡೆದುಕೊಳ್ಳಲು. ಆ ಮೂಲಕ ತಮ್ಮ ಮದುವೆಯನ್ನು ಘನತೆಯಿಂದ ಮಾಡಿಕೊಳ್ಳಲು ಈ ಅಭಿಯಾನವು ಅನುವು ಮಾಡಿಕೊಟ್ಟಿದೆ. ಹಳ್ಳಿಗಳಲ್ಲಿನ ಪ್ರಭಾವಿ ಜನರನ್ನು ತಮ್ಮ ಸಹ ನಾಗರಿಕರನ್ನು ಗೌರವದಿಂದ ನಡೆಸಿಕೊಳ್ಳಬೇಕು ಮತ್ತು ಅವರ ಹಕ್ಕುಗಳನ್ನು ರಕ್ಷಿಸಬೇಕು ಎಂದು ಮನವೊಲಿಸುವಲ್ಲಿಯೂ ಈ ಅಭಿಯಾನ ಜಿಲ್ಲೆಯ ಕೆಲವೆಡೆ ಯಶಸ್ವಿಯಾಗಿದೆ.

ಬುಂಡಿ ಜಿಲ್ಲೆಯ ಚಾಡಿ ಗ್ರಾಮದಲ್ಲಿ 27 ವರ್ಷದ ಶ್ರೀರಾಮ್ ಮೇಘವಾಲ್ ಅವರು ಮೇರ್ (ಕುದುರೆ) ಮೇಲೆ ಸವಾರಿ ಸೇರಿದಂತೆ ಎಲ್ಲಾ ವಿಧಿವಿಧಾನಗಳನ್ನು ಅನುಸರಿಸಿ, ಮದುವೆಯಾದ ಮೊದಲ ದಲಿತರಾಗಿದ್ದಾರೆ. ಮೇಲ್ಜಾತಿಗೆ ಸೇರಿದವರ ಮನೆಗಳ ಹಿಂದೆ ಸಾಗಿದ ಅವರ ಮದುವೆ ಮೆರವಣಿಗೆಯು ಪೋಲೀಸ್ ಪಡೆಯ ರಕ್ಷಣೆಯಲ್ಲಿತ್ತು. ಮಕ್ಕಳು ಮತ್ತು ಮಹಿಳೆಯರು ಸಂಗೀತವನ್ನು ಹಾಡುತ್ತಾ, ನೃತ್ಯ ಮಾಡುತ್ತಾ ಮೆರವಣಿಗೆಯನ್ನು ನಡೆಸಿದ್ದಾರೆ.

ನಂತರದಲ್ಲಿ, ಮನೋಜ್ ಬೈರ್ವಾ ಎಂಬುವವರು ನೀಮ್ ಕಾ ಖೇಡಾ ಗ್ರಾಮದ ಕಿರಿದಾದ ಹಾದಿಯಲ್ಲಿ ಮೇರ್ ಸವಾರಿ ಮಾಡಿ ತನ್ನ ಮದುವೆಯ ಮೆರವಣಿಗೆಯನ್ನು ನಡೆಸಿದ್ದಾರೆ. ಮೂರು ದಶಕಗಳ ಹಿಂದೆ ಆತನ ಚಿಕ್ಕಪ್ಪ ಅದೇ ಗ್ರಾಮದಲ್ಲಿ ತನ್ನ ಮದುವೆಯ ದಿನ ಕುದುರೆ (ಮೇರ್) ಸವಾರಿ ಮಾಡಲು ಮುಂದಾದಾಗ ಗ್ರಾಮದ ಮೇಲ್ಜಾತಿಯ ಜನರು ಅವರನ್ನು ಥಳಿಸಿದ್ದರು. ಇದೀಗ, ಆ ಹಳ್ಳಿಯ ದಲಿತರಲ್ಲಿ ಧೈರ್ಯ ಮತ್ತು ಮೇಲ್ಜಾತಿಯವರಲ್ಲಿ ಜಾಗೃತಿ ಬೆಳೆದಿದೆ. ಆ ಗ್ರಾಮದ ಗ್ರಾಮಸ್ಥರು ಜಾತಿ ಭೇದ ಮರೆತು ಮನೋಜ್‌ಗೆ ಹೂಮಾಲೆ ಹಾಕಿ ಸ್ವಾಗತಿಸಿದ್ದಾರೆ.

ಸ್ಥಳೀಯ ಆಡಳಿತದ ‘ಆಪರೇಷನ್ ಸಮಾನತಾ (ಸಮಾನತೆ)’ ಅಭಿಯಾನವು ದಲಿತರ ವಿರುದ್ಧ ತಾರತಮ್ಯದ ಇತಿಹಾಸವನ್ನು ಹೊಂದಿರುವ ಗ್ರಾಮಗಳನ್ನು ಗುರುತಿಸಿ, ಆ ಹಳ್ಳಿಗಳಲ್ಲಿ ಜಾಗೃತಿಯನ್ನು ಮೂಡಿಸಲು ಯೋಜಿಸಿತ್ತು. ಅದಕ್ಕಾಗಿ, ದಲಿತ ಮತ್ತು ಉನ್ನತ ಜಾತಿಗಳಿಗೆ ಸೇರಿದ ಜನರೊಂದಿಗೆ ಸಂವಹನ ನಡೆಸಲು ‘ಸಮನತಾ ಸಮಿತಿ’ಗಳನ್ನು ನೇಮಿಸಿತ್ತು. ಈ ಸಮಿತಿಗಳ ಸದಸ್ಯರಲ್ಲಿ ಸರಪಂಚ್, ಗ್ರಾಮಾಭಿವೃದ್ಧಿ ಅಧಿಕಾರಿ, ಸ್ಟೇಷನ್ ಹೌಸ್ ಆಫೀಸರ್ ಮತ್ತು ಪ್ರತಿ ಸಮುದಾಯದ ಇಬ್ಬರು ಹಿರಿಯರು ಇರುತ್ತಾರೆ ಎಂದು ಬುಂಡಿ ಪೊಲೀಸ್ ವರಿಷ್ಠಾಧಿಕಾರಿ ಜೈ ಯಾದವ್ ತಿಳಿಸಿದ್ದಾರೆ.

ಇದನ್ನೂ ಓದಿ: ದಲಿತ ವರನ ಕುದುರೆ ಸವಾರಿಗೆ ಅಡ್ಡಿಪಡಿಸಿದ್ದ 9 ಜನರಿಗೆ 5 ವರ್ಷ ಜೈಲು

“ಅಭಿಯಾನವು ನಾವು ಆರಂಭದಲ್ಲಿ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸಮುದಾಯ ಬೆಂಬಲವನ್ನು ಪಡೆದುಕೊಂಡಿದೆ. ಸಾಮರಸ್ಯವನ್ನು ಸೃಷ್ಟಿಸುವ ಹಾದಿಯಲ್ಲಿ ಮೇಲ್ಜಾತಿಗೆ ಸೇರಿದ ಪ್ರಭಾವಿ ಗ್ರಾಮಸ್ಥರನ್ನು ಸದಸ್ಯರನ್ನಾಗಿ ಒಳಗೊಳ್ಳುವುದು ಅಭಿಯಾನದ ಯಶಸ್ವಿಗೆ ಮತ್ತೊಂದು ಮೆಟ್ಟಿಲಾಗಿದೆ” ಎಂದು ಯಾದವ್ ಹೇಳಿದ್ದಾರೆ.

ಸಮಿತಿಯ ಸದಸ್ಯರು ನಿಯಮಿತವಾಗಿ ದಲಿತ ಕುಟುಂಬಗಳನ್ನು ಭೇಟಿಯಾಗಿ ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸುತ್ತಾರೆ. ನಂತರ, ಮೇಲ್ಜಾತಿಗಳಿಗೆ ಸೇರಿದ ಜನರಿಗೆ ಕಾನೂನಿನ ನಿಬಂಧನೆಗಳನ್ನು ವಿವರಿಸುತ್ತಾರೆ ಮತ್ತು ಸಾಂಪ್ರದಾಯದ ಹೆಸರಿನಲ್ಲಿ ನಡೆಸು ಆಚರಣೆಗಳನ್ನು ನಿಲ್ಲಿಸುವಂತೆ ಮನವಿ ಮಾಡುತ್ತಾರೆ ಎಂದು ಜೈ ಯಾದವ್ ವಿವರಿಸಿದ್ದಾರೆ.

ದಲಿತ ಕುಟುಂಬಗಳ ಮದುವೆಯ ಸಂದರ್ಭದಲ್ಲಿ ಯಾರಾದರೂ ತೊಂದರೆ ಕೊಡಬಹುದು ಎಂದು ಕಂಡುಬಂದರೆ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳುತ್ತಾರೆ. ಆಪರೇಷನ್ ಸಮಾನತಾ ಆರಂಭವಾದಾಗಿನಿಂದ ಹತ್ತಕ್ಕೂ ಹೆಚ್ಚು ದಲಿತರ ವಿವಾಹ ಕಾರ್ಯಕ್ರಮಗಳು ಶಾಂತಿಯುತವಾಗಿ ನಡೆದಿವೆ ಎಂದೂ ಅವರು ಮಾಹಿತಿ ಮಾಡಿದ್ದಾರೆ.

ಆದರೂ ಇತ್ತ, ಜಲಾವರ್ ಜಿಲ್ಲೆಯ ಗುರಾಡಿಯಾ ಭರ್ತಾ ಗ್ರಾಮದಲ್ಲಿ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ 23 ವರ್ಷದ ದಲಿತ ಯುವಕನ ಮದುವೆಯ ಮೆರವಣಿಗೆ ನಡೆಸುತ್ತಿದ್ದ ವೇಳೆ ಅಪರಿಚಿತ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದರು. ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ.

ಮೇಲ್ಜಾತಿಗಳಲ್ಲಿರುವ ಊಳಿಗಮಾನ್ಯ ಮನೋಭಾವವನ್ನು ಬದಲಾಯಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವವರೆಗೂ ದಲಿತರ ಮೇಲಿನ ದಾಳಿಗಳು ನಡೆಯುತ್ತಲೇ ಇರುತ್ತವೆ. ಜಲವಾರ್ ಘಟನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳ ಒಕ್ಕೂಟವು ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ಮುಂದೆ ಅರ್ಜಿ ಸಲ್ಲಿಸಿದೆ ಎಂದು ರಾಜಸ್ಥಾನದ ಸೆಂಟರ್ ಆಫ್ ದಲಿತ್ ರೈಟ್ಸ್ (ದಲಿತ ಹಕ್ಕುಗಳ ಕೇಂದ್ರ)ದ ಸಂಚಾಲಕ ಸತೀಶ್ ಕುಮಾರ್ ಹೇಳಿದ್ದಾರೆ.


ಇದನ್ನೂ ಓದಿ: ರಾಜಸ್ಥಾನ: ಪೊಲೀಸ್ ರಕ್ಷಣೆಯಲ್ಲಿ ದಲಿತ ಮಧುಮಗನ ಕುದುರೆ ಸವಾರಿ – ಮೊಳಗಿದ ಜೈಭೀಮ್ ಘೋಷಣೆಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...