Homeಕರ್ನಾಟಕಮುಸ್ಲಿಂ ಜೊತೆ ಮದುವೆಯಾದರೆ ಬಹಿಷ್ಕರಿಸಿ ಎನ್ನುವ ಬಿಜೆಪಿ ಮುಖಂಡ, ‘ಅಂತರ್ಜಾತಿ ವಿವಾಹ’ ಎಂದರೆ ಉತ್ತರಿಸುವುದಿಲ್ಲ!

ಮುಸ್ಲಿಂ ಜೊತೆ ಮದುವೆಯಾದರೆ ಬಹಿಷ್ಕರಿಸಿ ಎನ್ನುವ ಬಿಜೆಪಿ ಮುಖಂಡ, ‘ಅಂತರ್ಜಾತಿ ವಿವಾಹ’ ಎಂದರೆ ಉತ್ತರಿಸುವುದಿಲ್ಲ!

ಎಸ್‌ಎಸ್‌ಕೆ ಸಮಾಜದ ಯಾರಾದರೂ ಮುಸ್ಲಿಮರೊಂದಿಗೆ ವಿವಾಹವಾದರೆ ಸಾಮಾಜಿಕ ಬಹಿಷ್ಕಾರ ಹಾಕಬೇಕೆಂದು ಸಲಹೆ ನೀಡಿರುವ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ್‌ ಕಲಬುರ್ಗಿ ಅವರನ್ನು ‘ನಾನುಗೌರಿ.ಕಾಂ’ ಸಂದರ್ಶಿಸಿದೆ.

- Advertisement -
- Advertisement -

ಸೋಮವಂಶ ಸಹಾಸ್ರಾರ್ಜುನ ಕ್ಷತ್ರಿಯ (ಎಸ್‌ಎಸ್‌ಕೆ) ಸಮಾಜದ ಮುಖ್ಯ ಧರ್ಮದರ್ಶಿಗೆ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ್‌ ಕಲಬುರ್ಗಿಯವರು ಪತ್ರ ಬರೆದಿದ್ದು, ಎಸ್‌ಎಸ್‌ಕೆ ಸಮಾಜದ ಹೆಣ್ಣು ಹಾಗೂ ಗಂಡು ಮಕ್ಕಳು ಮುಸ್ಲಿಂ ಸಮಾಜದ ಜೊತೆ ವಿವಾಹವಾದರೆ ಸಾಮಾಜಿಕ ಬಹಿಷ್ಕಾರ ಹಾಕಬೇಕೆಂದು ಸಲಹೆ ನೀಡಿದ್ದಾರೆ.

ಇತ್ತೀಚೆಗೆ ಎಸ್‌ಎಸ್‌ಕೆ ಸಮಾಜದ ಯುವತಿಯೊಬ್ಬರು ಮುಸ್ಲಿಂ ಸಮುದಾಯದ ಯುವಕನನ್ನು ವಿವಾಹವಾಗಿದ್ದರು. ಇದಕ್ಕೆ ‘ಲವ್‌ ಜಿಹಾದ್‌’ ಎಂದು ಕರೆದು ವಿವಾದ ಸೃಷ್ಟಿಸಲು ಯತ್ನಿಸಿದಾಗ, ಯುವತಿ ಸ್ಪಷ್ಟನೆ ನೀಡಿದ್ದಳು. ತಾನು ಇಷ್ಟಪಟ್ಟು ಮದುವೆಯಾಗಿದ್ದೇನೆಂದು ಯುವತಿ ಹೇಳಿದ್ದರಿಂದ, ವಿವಾದ ಸೃಷ್ಟಿಸಲು ಯತ್ನಿಸಿದವರಿಗೆ ಹಿನ್ನಡೆಯಾಗಿತ್ತು. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನಾಗೇಶ್ ಅವರ ಪತ್ರ ಹೊರಬಿದ್ದಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಸಮಾಜದ ಮುಖ್ಯ ಧರ್ಮದರ್ಶಿ ಹಾಗೂ ಕೇಂದ್ರ ಪಂಚ ಟ್ರಸ್ಟ್‌ ಕಮಿಟಿ ಸದಸ್ಯರಿಗೆ ಪತ್ರ ಬರೆದಿರುವ ಅವರು, “ಇತ್ತೀಚಿನ ದಿನಗಳಲ್ಲಿ ಮುಸ್ಲಿಂ ಸಮಾಜದ ಯುವಕರು ನಮ್ಮ ಸಮಾಜದ ಹೆಣ್ಣು ಮಕ್ಕಳನ್ನು ಟಾರ್ಗೆಟ್‌ ಮಾಡಿ ಲವ್‌ ಜಿಹಾದ್‌ನಲ್ಲಿ ಸಿಲುಕಿಸಿ ಮದುವೆ ಮಾಡಿಕೊಳ್ಳುತ್ತಿದ್ದಾರೆ. ಈಗ ಸಮಾಜ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ. ಯಾರು ಮುಸ್ಲಿಂ ಸಮಾಜದ ಯುವಕರನ್ನು, ಹೆಣ್ಣುಮಕ್ಕಳನ್ನು ಮದುವೆ ಆಗಿರುತ್ತಾರೋ ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು” ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.

“ಮುಸ್ಲಿಮರೊಂದಿಗೆ ವಿವಾಹವಾದ ಕುಟುಂಬವನ್ನು ಸಮಾಜದಿಂದ ಹೊರಗಿಡುವುದು, ಆ ಕುಟುಂಬಕ್ಕೆ ಸಮಾಜದ ಯಾವುದೇ ದೇವಸ್ಥಾನದಲ್ಲಿ ಪ್ರವೇಶ ನಿರಾಕರಿಸುವುದು, ಸಮಾಜದ ಜನ ಯಾರೂ ಹೆಣ್ಣು ಕೊಡದಿರುವುದು ಮತ್ತು ತೆಗೆದುಕೊಳ್ಳದಿರುವುದು, ಸಮಾಜದ ಜನ ತಮ್ಮ ಮನೆಯ ಯಾವುದೇ ಕಾರ್ಯಕ್ರಮದಲ್ಲಿ ಕರೆಯದಿರುವುದು, ಅವರ ಮನೆಯಲ್ಲಿ ಭಾಗವಹಿಸದಿರುವುದು” ಎಂಬ ಸಲಹೆಗಳನ್ನು ನಾಗೇಶ್ ನೀಡಿದ್ದಾರೆ.

ಇದನ್ನೂ ಓದಿರಿ: ಮಾಜಿ ಸಿಎಂಗಳಾದ ಎಚ್‌ಡಿಕೆ, ಸಿದ್ದರಾಮಯ್ಯ, ಸಾಹಿತಿ ಕುಂವೀ ಸೇರಿ 61+ ಜನರಿಗೆ ಕೊಲೆ ಬೆದರಿಕೆ

“ಇಂತಹ ಕಠಿಣ ಕ್ರಮಕೈಗೊಳ್ಳುವುದರಿಂದ ಸಮಾಜದಲ್ಲಿ ಎಚ್ಚರಿಕೆ ಗಂಟೆ ಭಾರಿಸವುದು ಅನಿವಾರ್ಯವಾಗಿದೆ. ಈ ವಿಚಾರವಾಗಿ ಎಸ್‌ಎಸ್‌ಕೆ ಸಮಾಜದ ಕೇಂದ್ರ ಪಂಚ ಟ್ರಸ್ಟ್‌ ಕಮಿಟಿಯ ಸಭೆಯಲ್ಲಿ ದೀರ್ಘವಾಗಿ ಚರ್ಚಿಸಿ ಸಮಾಲೋಚಿಸಿ” ಎಂದು ಅವರು ವಿನಂತಿಸಿಕೊಂಡಿದ್ದಾರೆ.

ನಗರಾಭಿವೃದ್ಧಿ ಪ್ರಾಧಿಕಾರದ ಲೆಟರ್‌ ಹೆಡ್‌ನಲ್ಲಿ ನಾಗೇಶ್‌ ಪಿ.ಕಲಬುರ್ಗಿಯವರು ಪತ್ರ ಬರೆದಿದ್ದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಪತ್ರವನ್ನು ಹೇಗಾದರೂ ಬರೆದಿರಲಿ, ಈ ರೀತಿಯ ಬಹಿಷ್ಕಾರ ಸಂವಿಧಾನ ಬಾಹಿರವಲ್ಲವೇ? ಎಂಬ ಪ್ರಶ್ನೆಯನ್ನು ಮುಖ್ಯವಾಗಿಟ್ಟುಕೊಂಡು ‘ನಾನುಗೌರಿ.ಕಾಂ’ ನಾಗೇಶ್ ಅವರನ್ನು ಸಂಪರ್ಕಿಸಿತು. ಹಲವಾರು ಪ್ರಶ್ನೆಗಳನ್ನು ಕೇಳಲಾಗಿದ್ದು, ಹಾರಿಕೆಯ ಉತ್ತರಗಳನ್ನು ನಾಗೇಶ್‌ ನೀಡಿದ್ದಾರೆ.

“ಇದು ಪ್ರಾಧಿಕಾರದಿಂದ ಬರೆದ ಅಧಿಕೃತ ಪತ್ರವಲ್ಲ” ಎಂದು ಅವರು ಮೊದಲಿಗೆ ಸ್ಪಷ್ಟಪಡಿಸಿದರು.

ನಾನುಗೌರಿ.ಕಾಂ: “ಅಧಿಕೃತ ಪತ್ರವೋ ಅಲ್ಲವೋ ಬದಿಗಿರಲಿ. ಜವಾಬ್ದಾರಿಯುತ ಸ್ಥಾನದಲ್ಲಿರುವ ನೀವು, ಈ ರೀತಿಯಲ್ಲಿ ಸಂವಿಧಾನ ಬಾಹಿರ ನಿಲುವು ತಾಳಬಹುದೇ? ಮದುವೆ ಎಂಬುದು ವೈಯಕ್ತಿಕ ಆಯ್ಕೆ. ಒಂದು ಕುಟುಂಬವನ್ನು ಬಹಿಷ್ಕರಿಸುವ ಅಧಿಕಾರ ನಿಮಗೆ ಇದೆಯೇ?’’

ನಾಗೇಶ್‌: ನಮ್ಮ ಸಮಾಜದ ಹುಡುಗಿ ಲವ್‌ ಜಿಹಾದ್‌ನಲ್ಲಿ ಸಿಲುಕಿ ರಿಜಿಸ್ಟ್ರಾರ್‌ ಮದುವೆ ಆಗಿದ್ದಾಳೆ. ‌ಇದನ್ನು ಸಮಾಜದ ಮುಖಂಡರು ವಿರೋಧಿಸಿದ್ದಾರೆ. ಹೀಗೇಕೆ ಆಗುತ್ತಿದೆ ಎಂದು ಧರ್ಮದರ್ಶಿಗಳು ಚರ್ಚೆ ಮಾಡಿದರು. ಸಮಾಜದಲ್ಲಿ ಸ್ವಲ್ಪ ಎಚ್ಚರಿಕೆ ಘಂಟೆ ಬಾರಿಸಬೇಕು. ಹಾಗಾದಾಗ ಮಾತ್ರ ಇಂಥವು ಕಡಿಮೆಯಾಗಬಹುದು ಎಂದು ಅವರಲ್ಲಿ ತಿಳಿಸಿದೆ. ಕೆಲವು ಸಲಹೆ ನೀಡುವಂತೆ ಧರ್ಮದರ್ಶಿಗಳು ಸೂಚಿಸಿದರು. ಹೀಗಾಗಿ ಐದು ಸಲಹೆಗಳನ್ನು ಕೊಟ್ಟಿದ್ದೇನೆ. ಅವುಗಳನ್ನು ಒಪ್ಪುವುದು, ಬಿಡುವುದು ಸಮಿತಿಗೆ ಬಿಟ್ಟಿದ್ದು.

ಇದನ್ನೂ ಓದಿರಿ: ಹರ್ಷ ಹತ್ಯೆಯ ನಂತರ ದ್ವೇಷ ಭಾಷಣ: ಸಚಿವ ಈಶ್ವರಪ್ಪ ವಿರುದ್ದ ಎಫ್‌ಐಆರ್‌‌

ನಾನುಗೌರಿ.ಕಾಂ: ಅಧಿಕೃತ ಪತ್ರವೋ, ಅಲ್ಲವೋ ಬೇರೆ ಪ್ರಶ್ನೆ. ನೀವು ಸಮಾಜವನ್ನು ನೋಡುತ್ತೀರೋ; ಜಾತಿ, ಧರ್ಮ ತಾರತಮ್ಯ ನಿರ್ಬಂಧಿಸಿರುವ, ಅಸ್ಪೃಶ್ಯತೆ ಆಚರಣೆ ಶಿಕ್ಷಾರ್ಹ ಅಪರಾಧ ಎಂದಿರುವ ಸಂವಿಧಾನವನ್ನು ಪಾಲನೆ ಮಾಡುತ್ತೀರೋ?

ನಾಗೇಶ್‌: ಸಮಾಜದವರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಅದಕ್ಕೆ ಬದ್ಧನಾಗಿರುತ್ತೇನೆ. ಸಮಾಜಕ್ಕಿಂತ ದೊಡ್ಡವನು ನಾನಲ್ಲ.

ನಾನುಗೌರಿ.ಕಾಂ: ಸಂವಿಧಾನ ದೊಡ್ಡದೋ ಸಮಾಜ ದೊಡ್ಡದೋ ತಿಳಿಸಿ.

ನಾಗೇಶ್‌: ಸಂವಿಧಾನವೂ ಬೇಕು, ಸಮಾಜವೂ ಬೇಕು. ಸಮಾಜದ ರಕ್ಷಣೆಯಾಗಬೇಕಲ್ಲ? ನಾನು ಸಲಹೆಗಳನ್ನು ನೀಡಿದ್ದೇನೆಯೇ ಹೊರತು, ಜಾರಿ ಮಾಡಲೇಬೇಕು ಎಂದು ಹಠ ಹಿಡಿದಿಲ್ಲ. ಸಂವಿಧಾನ ವಿರೋಧಿಯಾಗಿದ್ದರೆ ಸಮಾಜ ಸಲಹೆಗಳನ್ನು ಸಮಾಜ ನಿರಾಕರಿಸುತ್ತದೆ. ಸಂವಿಧಾನಕ್ಕಿಂತ ದೊಡ್ಡವರು ಯಾರು? ನಮ್ಮ ಸಮಾಜದ ಯುವತಿ ಮುಸ್ಲಿಂ ಸಮುದಾಯದವರನ್ನು ಮದುವೆಯಾದಲ್ಲಿ, ಇಡೀ ಕುಟುಂಬವೇ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಜಾಗೃತಿ ಮೂಡಿಸಲು ಪತ್ರ ಬರೆದಿದ್ದೇನೆ. ಇದನ್ನು ಜಾರಿ ಮಾಡಲೇಬೇಕೆಂದು ಹೇಳುತ್ತಿಲ್ಲ. ಸಮಾಜದಲ್ಲಿ ಹೆದರಿಕೆ ಹುಟ್ಟಿಲಿ ಎಂದು ಬರೆದಿದ್ದೇನೆ.

ನಾನುಗೌರಿ.ಕಾಂ: ಮದುವೆ ಎಂಬುದು ವೈಯಕ್ತಿಕ ನಿರ್ಧಾರವಾಗಿರುವಾಗ ಹೆದರಿಕೆ ಹುಟ್ಟಿಸಲು ನೀವ್ಯಾರು?

ನಾಗೇಶ್‌: ಸಮಾಜ ರಕ್ಷಣೆಯನ್ನು ನಾವು ಮಾಡಬೇಕಾಗುತ್ತದೆ.

ನಾನುಗೌರಿ.ಕಾಂ: ಸಂವಿಧಾನ ಬಾಹಿರವಾಗಿ ಸಮಾಜವನ್ನು ರಕ್ಷಣೆ ಮಾಡಬಾರದಲ್ಲ?

ನಾಗೇಶ್‌: ನನ್ನ ಸಲಹೆಗಳು ಜಾರಿಯೇನೂ ಆಗಿಲ್ಲವಲ್ಲ.

(ಕೇಂದ್ರ ಸರ್ಕಾರ ಲವ್‌ ಜಿಹಾದ್ ಕುರಿತು ಸಂಸತ್ತಿನಲ್ಲಿ ನೀಡಿರುವ ಹೇಳಿಕೆಯನ್ನು ಅವರ ಗಮನಕ್ಕೆ ತರಲಾಯಿತು. “ಇದುವರೆಗೂ ‘ಲವ್ ಜಿಹಾದ್’ ಪ್ರಕರಣವನ್ನು ಯಾವುದೇ ಕೇಂದ್ರ ಏಜೆನ್ಸಿಗಳು ವರದಿ ಮಾಡಿಲ್ಲ” ಎಂದು ಸರ್ಕಾರ ಹೇಳಿರುವುದನ್ನು ವಿವರಿಸಲಾಯಿತು.)

ನಾನುಗೌರಿ.ಕಾಂ: ಮುಸ್ಲಿಂ ವಿರುದ್ಧ ಮಾತನಾಡುತ್ತಿದ್ದೀರಿ. ಇರಲಿ, ಈಗ ನಿಮ್ಮ ಸಮಾಜದವರು ಹಿಂದೂ ಧರ್ಮದಲ್ಲೇ ಬರುವ ದಲಿತ ಹಾಗೂ ಇತರ ಜಾತಿಯವರನ್ನು ಮದುವೆಯಾದರೆ ನಿಮ್ಮ ನಿಲುವು ಏನಾಗಿರುತ್ತದೆ?

ನಾಗೇಶ್‌: ನಾನು ಸ್ಪಷ್ಟವಾಗಿ ಹೇಳುತ್ತಿರುವುದು ಮುಸ್ಲಿಂ ಬಗ್ಗೆ ಮಾತ್ರ. ಹಿಂದೂ ಸಮಾಜ ಜಾಗೃತಿಯಾಗಬೇಕಿದೆ.

ನಾನುಗೌರಿ.ಕಾಂ: ದಲಿತರೊಂದಿಗೆ ವಿವಾಹವಾದರೂ ನಿಮ್ಮ ಸಮಾಜಕ್ಕೆ ಇಂಥದ್ದೇ ಸಲಹೆ ನೀಡುತ್ತೀರಾ?

ನಾಗೇಶ್‌: ಲವ್‌ ಜಿಹಾದ್‌ ಬಗ್ಗೆ ಹೇಳುತ್ತಿದ್ದೇನೆ.

ನಾನುಗೌರಿ.ಕಾಂ: ಹಾಗಾದರೆ ಬೇರೆ ಜಾತಿಯವರನ್ನು ಮದುವೆಯಾಗಬಹುದಲ್ಲವೇ?

ನಾಗೇಶ್‌: ಇಲ್ಲಿ ಲವ್‌ ಜಿಹಾದ್‌- ಮಾತ್ರ ವಿರೋಧಿಸುತ್ತಿದ್ದೇನೆ. ಮೊನ್ನೆ ನಡೆದ ಘಟನೆ ಬೇಜಾರಾಗಿದೆ.

ಅಂತರ್‌ಜಾತಿ ವಿವಾಹದ ಕುರಿತು ಎಷ್ಟೇ ಪ್ರಶ್ನಿಸಿದರೂ ನಾಗೇಶ್ ಅವರ ಉತ್ತರ ಬದಲಾಗಲೇ ಇಲ್ಲ. ಅಂತರ್ಜಾತಿ ವಿವಾಹವು ಸಂವಿಧಾನದಲ್ಲಿ ಮಾನ್ಯವಾಗಿದೆ ಎಂದು ಪದೇ ಪದೇ ಉಲ್ಲೇಖಿಸಿದರೂ, ‘ಲವ್‌ ಜಿಹಾದ್‌, ಲವ್ ಜಿಹಾದ್‌’ ಎನ್ನುತ್ತಾ ಮಾತು ಮುಗಿಸಿದರು.

ಅಂತಾರ್ಜಾತಿ ವಿವಾಹವನ್ನು ಒಪ್ಪಲ್ಲ: ಎಸ್‌ಎಸ್‌ಕೆ ಸಮುದಾಯದ ಮುಖಂಡ

ಎಸ್‌ಎಸ್‌ಕೆ ಸಮಾಜ ಚಿಂತನ ಮಂಥನ ರಾಜ್ಯ ಸಮಿತಿಯ ಪ್ರಮುಖರಾದ ಹನುಮಂತ ಚಂದ್ರಕಾಂತ ನಿರಂಜನ ‘ನಾನುಗೌರಿ.ಕಾಂ’ ಸಂಪರ್ಕಕ್ಕೆ ಸಿಕ್ಕರು. ನಾಗೇಶ್ ಅವರಿಗೆ ಕೇಳಿದ ಪ್ರಶ್ನೆಗಳನ್ನೇ ಅವರಲ್ಲಿಯೂ ಪ್ರಸ್ತಾಪಿಸಲಾಯಿತು. “ಸಂವಿಧಾನ, ಕಾಯ್ದೆಗಳು ಒಂದು ಕಡೆ ಇದ್ದರೆ, ಸಮಾಜದ ಕಟ್ಟಳೆಗಳು ಬೇರೆ ಇವೆ” ಎಂದ ಅವರು, ನಾಗೇಶ್‌ ಅವರ ಪತ್ರವನ್ನು ಸಮರ್ಥಿಸಿಕೊಂಡರು.

ಹನುಮಂತ ಅವರು ಲವ್‌ ಜಿಹಾದ್‌ನಿಂದ ಮಾತು ಆರಂಭಿಸಿ ಹಿಜಾಬ್‌, ಮುಸ್ಲಿಮರ ಬಂದ್‌ ಇತ್ಯಾದಿಗಳನ್ನೆಲ್ಲ ಪ್ರಸ್ತಾಪಿಸಿದರು. “ಮುಸ್ಲಿಂ ಸಮುದಾಯವನ್ನು ಹೊರತುಪಡಿಸಿ ಹೇಳುವುದಾದರೆ ಹಿಂದೂ ಧರ್ಮದಲ್ಲಿನ ಇತರ ಜಾತಿಗಳೊಂದಿಗೂ ನಿಮ್ಮ ಸಮಾಜದವರು ವಿವಾಹ ಆಗುವುದನ್ನು ನೀವು ಒಪ್ಪುವುದಿಲ್ಲವೇ?” ಎಂದು ಪ್ರಶ್ನಿಸಲಾಯಿತು.

“ಅದನ್ನೂ ಕೂಡ ನಾವು ಸ್ವೀಕಾರ ಮಾಡಲ್ಲ. ಅಂತಾರ್ಜಾತಿ ವಿವಾಹವೂ ತಪ್ಪು” ಎಂದರು.

ಹುಬ್ಬಳ್ಳಿ–ಧಾರವಾಡದ ಎಸ್‌ಎಸ್‌ಕೆ ಸಮಾಜದ ಕೇಂದ್ರ ಪಂಚ ಸಮಿತಿಯ ಧರ್ಮದರ್ಶಿ ನೀಲಕಂಠ ಪಿ.ಜಡಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದೇವೆ. ಅವರ ಪ್ರತಿಕ್ರಿಯೆ ಸಿಕ್ಕಲ್ಲಿ ಅಪ್‌ಡೇಟ್‌ ಮಾಡಲಾಗುವುದು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿರಿ: ಕೊಲೆ ಬೆದರಿಕೆ ಸ್ವೀಕರಿಸಿರುವ ಚಿಂತಕರು ಏನಂತಾರೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಹಾಗಾದರೆ ಆರ್ ಎಸ್ ಎಸ್ ಮುಖಂಡರ ಮಕ್ಕಳ ಮದುವೆ ಬಗ್ಗೆ ಯೆನನ್ನುವೆ ನೀನು

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...