ದೆಹಲಿಯಲ್ಲಿ ಹಿಂದೂ ಯುವ ವಾಹಿನಿ ಸಂಘಟನೆಯು ಕಳೆದ ಡಿಸೆಂಬರ್‌ನಲ್ಲಿ ಕಾರ್ಯಕ್ರಮವೊಂದನ್ನು ಸಂಘಟಿಸಿ, ‘ಹಿಂದೂ ರಾಷ್ಟ್ರ ಕೊಲೆ ಮಾಡುವುದ’ಕ್ಕಾಗಿ ಕರೆ ನೀಡಿತ್ತು. ಆದರೆ ದೆಹಲಿ ಪೊಲೀಸರು ಈ ಕರೆ ‘ದ್ವೇಷ ಭಾಷಣವಲ್ಲ’ ಎಂದು ಕಳೆದ ವಾರ ಸುಪ್ರೀಂಕೋರ್ಟ್‌ಗೆ ತಿಳಿಸಿದ್ದರು. ದೆಹಲಿ ಪೊಲೀಸರ ಈ ಹೇಳಿಕೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ಅತೃಪ್ತಿ ವ್ಯಕ್ತಪಡಿಸಿದ್ದು, ‘ಉತ್ತಮ ಅಫಿಡವಿಟ್’ ಸಲ್ಲಿಸುವಂತೆ ಹೇಳಿದೆ.
ಡಿಸೆಂಬರ್ 19 ರಂದು ದೇಶದ ರಾಜಧಾನಿಯಲ್ಲಿ ನಡೆದ ‘ಧರ್ಮ ಸಂಸದ್’ನಲ್ಲಿ ಯಾವುದೇ ದ್ವೇಷದ ಭಾಷಣ ಮಾಡಲಾಗಿಲ್ಲ ಎಂದು ಹೇಳುವ ತನ್ನ ಅಫಿಡವಿಟ್ ಅನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದು ದೆಹಲಿ ಪೊಲೀಸರು ಸುಪ್ರೀಂ ಕೋರ್ಟ್ ಮುಂದೆ ಇಂದು ಒಪ್ಪಿಕೊಂಡಿದ್ದು, ಉತ್ತಮವಾದ ಅಫಿಡವಿಟ್ ಸಲ್ಲಿಸುವುದಾಗಿ ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಕಾರ್ಯಕ್ರಮದಲ್ಲಿ ಸುದರ್ಶನ ಸುದ್ದಿ ಟಿವಿ ಮುಖ್ಯ ಸಂಪಾದಕ ಸುರೇಶ್ ಚವ್ಹಾಂಕೆ, “ಈ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ನಾವೆಲ್ಲರೂ ಪ್ರತಿಜ್ಞೆ ಮಾಡುತ್ತೇವೆ. ಅದಕ್ಕಾಗಿ ನಾವು ಹೋರಾಡುತ್ತೇವೆ. ಅದಕ್ಕಾಗಿ ಸಾಯುತ್ತೇವೆ ಮತ್ತು ಅಗತ್ಯವಿದ್ದರೆ ಕೊಲ್ಲುತ್ತೇವೆ” ಎಂದು ಜನರಿಗೆ ಪ್ರತಿಜ್ಞೆ ಮಾಡಿಸಿದ್ದರು.
ಇದನ್ನೂ ಓದಿ: Exclusive: ಮಸೀದಿ ಸುತ್ತಲಿನ ಹಿಂದೂ ವ್ಯಾಪಾರಿಗಳ ಮನದ ಮಾತು
ಈ ಕಾರ್ಯಕ್ರಮವನ್ನು ಬಲಪಂಥೀಯ ಗುಂಪು ಹಿಂದೂ ಯುವ ವಾಹಿನಿ ಆಯೋಜಿಸಿತ್ತು.
“ಪ್ರತಿಜ್ಞೆ ಸ್ವೀಕರಿಸಿದವರ ಉದ್ದೇಶವು ಸಮುದಾಯದ ನೈತಿಕತೆಯನ್ನು ಉಳಿಸುವುದಾಗಿತ್ತು” ಎಂಬ ದೆಹಲಿ ಪೊಲೀಸರ ಅಫಿಡವಿಟ್ ಅನ್ನು ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಇಂದು ಉಲ್ಲೇಖಿಸಿದ್ದು, ಇದರ ಅರ್ಥವೇನು ಎಂದು ಸಿಬಲ್ ಪ್ರಶ್ನಿಸಿದ್ದಾರೆ.
“ಅಫಿಡವಿಟ್ ಅನ್ನು ಡೆಪ್ಯುಟಿ ಕಮಿಷನರ್ ಆಫ್ ಪೋಲಿಸ್ ಸಲ್ಲಿಸಿದ್ದಾರೆ. ಅವರು ಈ ನಿಲುವನ್ನು ಅನುಮೋದಿಸುತ್ತಾರೆಯೇ? ಅಥವಾ ಅವರು ಸಬ್ ಇನ್ಸ್‌ಪೆಕ್ಟರ್ ಮಟ್ಟದ ತನಿಖಾ ವರದಿಯನ್ನು ಮತ್ತೆ ತಯಾರಿಸುತ್ತಾರೆಯೆ” ಎಂದು ನ್ಯಾಯಮೂರ್ತಿ ಎ.ಎಮ್. ಖಾನ್ವಿಲ್ಕರ್ ಕೇಳಿದ್ದಾರೆ.
ಮೇ 4 ರೊಳಗೆ ದೆಹಲಿ ಪೊಲೀಸರ ಹೊಸ ಅಫಿಡವಿಟ್ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
“ಜನಾಂಗೀಯ ಹತ್ಯೆಗೆ ಮುಕ್ತವಾಗಿ ಕರೆ ನೀಡಲಾಗುತ್ತಿದೆ ಎಂದು ಅರ್ಥೈಸುವ ಅಥವಾ ಅರ್ಥೈಸಬಹುದಾದ ಯಾವುದೇ ಪದಗಳ ಬಳಕೆ ಇದರಲ್ಲಿ ಇಲ್ಲ ಎಂದು ಕಂಡುಕೊಂಡಿದ್ದೇವೆ” ಎಂದು ಕಳೆದ ವಾರ ನಡೆದ ಆಪಾದಿತ ದ್ವೇಷ ಭಾಷಣದ ವೀಡಿಯೊ ಪ್ರಕರಣದ ವಿಚಾರಣೆಯಲ್ಲಿ ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದರು.
ಇದನ್ನೂ ಓದಿ: ಮಂಗಳೂರು: ಮಳಲಿಪೇಟೆಯ ಪ್ರಾಚೀನ ಮಸೀದಿಯನ್ನು ದೇವಸ್ಥಾನ ಎಂದು ಸುಳ್ಳು ಹಬ್ಬಿಸಿದ ಕನ್ನಡ ಮಾಧ್ಯಮಗಳು
ಪೊಲೀಸರು ತಮ್ಮ ಹೇಳಿಕೆಯಲ್ಲಿ, “ವೀಡಿಯೊ ಮತ್ತು ಇತರ ವಿಷಯಗಳ ಬಗ್ಗೆ ನಡೆದ ತೀವ್ರ ತನಿಖೆಯಲ್ಲಿ ಯಾವುದೇ ಸಮುದಾಯದ ವಿರುದ್ಧ ಯಾವುದೇ ದ್ವೇಷ ಭಾಷಣವನ್ನು ನೀಡಿಲ್ಲ ಎಂದು ಕಂಡುಬಂದಿದೆ. ಆದ್ದರಿಂದ, ಉದ್ದೇಶಿತ ವೀಡಿಯೊದ ತನಿಖೆ ಮತ್ತು ಮೌಲ್ಯಮಾಪನದ ನಂತರ, ಆಪಾದಿತ ಭಾಷಣವು ನಿರ್ದಿಷ್ಟ ಸಮುದಾಯದ ವಿರುದ್ಧ ಯಾವುದೇ ದ್ವೇಷದ ಭಾಷಣವನ್ನು ಹೊಂದಿಲ್ಲ ಎಂದು ತೀರ್ಮಾನಿಸಲಾಗಿದೆ” ಎಂದು ತಿಳಿಸಿದ್ದರು.
ಹರಿದ್ವಾರ ಮತ್ತು ದೆಹಲಿಯಲ್ಲಿ ನಡೆದ ಧರ್ಮ ಸಂಸದ್‌ಗಳಲ್ಲಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆದ ದ್ವೇಷ ಭಾಷಣಗಳ ಬಗ್ಗೆ ಸ್ವತಂತ್ರ ತನಿಖೆಗೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ.
ಹೈಕೋರ್ಟ್‌ನ ಮಾಜಿ ನ್ಯಾಯಾಧೀಶೆ ಮತ್ತು ಹಿರಿಯ ವಕೀಲೆ ಅಂಜನಾ ಪ್ರಕಾಶ್ ಮತ್ತು ಪತ್ರಕರ್ತ ಕುರ್ಬಾನ್ ಅಲಿ ಈ ಅರ್ಜಿಯನ್ನು ಸಲ್ಲಿಸಿದ್ದರು.
ಇದನ್ನೂ ಓದಿ: ರೈತರ ಕುರಿತ ಚರ್ಚೆಯಲ್ಲಿ ಮಂದಿರ v/s ಮಸೀದಿ ಚಿತ್ರ ಪ್ರಸಾರ ಮಾಡಿದ ಇಂಡಿಯಾ ಟಿ.ವಿ: ರಾಕೇಶ್ ಟಿಕಾಯತ್ ಆಕ್ರೋಶ
ಡಿಸೆಂಬರ್ 17 ಮತ್ತು 19 ರ ನಡುವೆ, ದೆಹಲಿಯಲ್ಲಿ (ಹಿಂದೂ ಯುವ ವಾಹಿನಿಯಿಂದ) ಮತ್ತು ಹರಿದ್ವಾರದಲ್ಲಿ (ಯತಿ ನರಸಿಂಹಾನಂದರಿಂದ) ಆಯೋಜಿಸಲಾದ ಎರಡು ಕಾರ್ಯಕ್ರಮಗಳಲ್ಲಿ ಮುಸ್ಲಿಮರ ವಿರುದ್ಧ ಹಿಂಸಾಚಾರಕ್ಕಾಗಿ ಬಹಿರಂಗ ಕರೆಗಳನ್ನು ಒಳಗೊಂಡಂತೆ ದ್ವೇಷದ ಭಾಷಣಗಳನ್ನು ಮಾಡಲಾಗಿತ್ತು.


