ಮುಸ್ಲಿಂ ವಿದ್ಯಾರ್ಥಿಯೊಬ್ಬರಿಗೆ ಮೌಖಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡಿದ ಆರೋಪದ ಮೇಲೆ ಬಿಜೆಪಿ ಬೆಂಬಲಿತ ಸಂಘಟನೆಯಾದ ಎಬಿವಿಪಿ ಕಾರ್ಯಕರ್ತನನ್ನು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವು ಅಮಾನತುಗೊಳಿಸಿದೆ ಎಂದು ‘ಮಕ್ತೂಬ್ ಮೀಡಿಯಾ’ ಸುದ್ದಿ ಮಾಡಿದೆ.
ಆರೋಪಿಯನ್ನು ರಿಷಿ ತಿವಾರಿ ಎಂದು ಗುರುತಿಸಲಾಗಿದ್ದು, ವಿಶ್ವವಿದ್ಯಾಲಯದಲ್ಲಿ ಎಂಎ ಡೆವಲಪ್‌ಮೆಂಟ್‌ನ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಯಾಗಿದ್ದಾನೆ. ಆರೋಪಿಯ ವಿರುದ್ಧ ಮುಸ್ಲಿಂ ವಿದ್ಯಾರ್ಥಿಯೊಬ್ಬರು ದ್ವೇಷ ಕಾರುವ ಮಾತುಗಳನ್ನು ಆಡಿದ್ದಾಗಿ ದೂರು ನೀಡಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ರಿಷಿ ತಿವಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ತಿವಾರಿ ಬಿಜೆಪಿ ಬೆಂಬಲಿತ ಸಂಘಟನೆಯಾದ ಎಬಿವಿಪಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ‘ಮಕ್ತೂಬ್’ ವಿದ್ಯಾರ್ಥಿಗಳ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿದೆ.
ಇದನ್ನೂ ಓದಿ: ಮುಸ್ಲಿಂ ಉದ್ಯಮಿ, ಲುಲು ಮುಖ್ಯಸ್ಥ ಯೂಸುಫ್ ಅಲಿ ಹೆಸರಿಸದ ಸಿಎಂ ಬೊಮ್ಮಾಯಿ!; ಸಂಘಪರಿವಾರದ ಭಯವೇ ಎಂದ ನೆಟ್ಟಿಗರು
ಘಟನೆಯು ಮೇ 1 ರಂದು ನಡೆದಿದ್ದು, ಮುಸ್ಲಿಂ ವಿದ್ಯಾರ್ಥಿ ಕೆಜಿಎ ಹಾಸ್ಟೆಲ್ ಬಳಿ ತನ್ನ ಉಪವಾಸ ತೊರೆಯಲು ತೆರಳಿದ್ದಾಗ ರಿಷಿ ತಿವಾರಿ ಅವರನ್ನು ನಿಂದಿಸಲು ಪ್ರಾರಂಭಿಸಿದ್ದನು. ಅಲ್ಲದೆ, ಅವರ ಮೇಲೆ ಆಹಾರವನ್ನು ಎಸೆದು, ಮುಖದ ಮೇಲೆ ಉಗುಳಿದ್ದನು.
ರಿಷಿ ತಿವಾರಿನ್ನು ಅಮಾನತು ಮಾಡಿದರೆ ಸಾಕಾಗುವುದಿಲ್ಲ ಎಂದು ವಿದ್ಯಾರ್ಥಿಗಳು ಹೇಳಿದ್ದು, “ಇದು ದ್ವೇಷಾಪರಾಧವಾಗಿದ್ದು ಅತ್ಯಂತ ಗಂಭೀರ ರೀತಿಯಲ್ಲಿ ಪರಿಗಣಿಸಿ ಆರೋಪಿಯನ್ನು ಶಿಕ್ಷೆಗೆ ಒಳಪಡಿಸಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಆರೋಪಿಯ ವಿರುದ್ಧ ‘ಗಂಭೀರ ದಂಡನಾತ್ಮಕ ಕ್ರಮ’ ತೆಗೆದುಕೊಳ್ಳಲಾಗಿದೆ ಎಂದು ವಿಶ್ವವಿದ್ಯಾನಿಲಯ ನಮಗೆ ತಿಳಿಸಿದೆ. ಆದರೆ ವಿದ್ಯಾರ್ಥಿ ಸಂಘಟನೆಯಾಗಿ ಇದನ್ನು ನಾವು ಒಪ್ಪುವುದಿಲ್ಲ” ಎಂದು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹೇಳಿದ್ದಾರೆ.
ಇದನ್ನೂ ಓದಿ: ಮುಸ್ಲಿಂ ಎಂದು ಶಂಕಿಸಿ ಹಲ್ಲೆಗೊಳಗಾದ ವ್ಯಕ್ತಿ ಶವವಾಗಿ ಪತ್ತೆ; ಬಿಜೆಪಿಯ ಮಾಜಿ ಕಾರ್ಪೋರೇಟ್ ಪತಿ ಆರೋಪಿ
“ಆರೋಪಿಯನ್ನು ವಿಶ್ವವಿದ್ಯಾಲಯದಿಂದ ಹೊರಹಾಕಬೇಕು ಅಥವಾ ಕನಿಷ್ಠ ಒಂದು ವರ್ಷದ ಪೂರ್ಣ ಅಮಾನತು ಮಾಡಬೇಕು” ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ತಿವಾರಿಯ ಕೃತ್ಯವನ್ನು ‘ಇಸ್ಲಾಮೋಫೋಬಿಕ್’ ಎಂದು ವಿದ್ಯಾರ್ಥಿಗಳು ಕರೆದಿದ್ದಾರೆ.
“ನಾವು ವಿಶ್ವವಿದ್ಯಾನಿಲಯಕ್ಕೆ ಸೇರುವ ಮೊದಲು ರ್‍ಯಾಗಿಂಗ್ ವಿರೋಧಿ ಅಫಿಡವಿಟ್‌ಗಳಿಗೆ ಸಹಿ ಮಾಡಿರುತ್ತೇವೆ. ಹೀಗಾಗಿ ತಿವಾರಿಯ ಈ ಕೃತ್ಯವನ್ನು ಆ್ಯಂಟಿ ರ್‍ಯಾಗಿಂಗ್ ಸೆಲ್ ರ್‍ಯಾಗಿಂಗ್ ಎಂದು ಪರಿಗಣಿಸಬೇಕು. ಅದರಂತೆ ಶಿಕ್ಷೆಗೆ ಒಳಪಡಿಸಬೇಕು” ಎಂದು ವಿದ್ಯಾರ್ಥಿಗಳು ಹೇಳಿಕೆ ತಿಳಿಸಿದ್ದಾರೆ.


