ಬಿಜೆಪಿ ಮಾಜಿ ಕಾರ್ಪೋರೇಟರೊಬ್ಬರ ಪತಿ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬರನ್ನು ಮುಸ್ಲಿಂ ಎಂದು ಶಂಕಿಸಿ ನಿರಂತವಾಗಿ ಥಳಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದೀಗ ವ್ಯಕ್ತಿಯು ಶವವಾಗಿ ಮಧ್ಯಪ್ರದೇಶದ ನೀಮುಚ್ ಜಿಲ್ಲೆಯಲ್ಲಿ ಶುಕ್ರವಾರ ಪತ್ತೆಯಾಗಿದ್ದಾರೆ.
ವ್ಯಕ್ತಿಯನ್ನು ಭವರ್ ಲಾಲ್ ಜೈನ್ ಎಂದು ಗುರುತಿಸಲಾಗಿದ್ದು, ಅವರು ಜೈನ ಸಮುದಾಯಕ್ಕೆ ಸೇರಿದವರಾಗಿದ್ದಾರೆ. 65 ವರ್ಷದ ಭವರ್ ಲಾಲ್ ಅವರು ಮಾನಸಿಕ ಅಸ್ವಸ್ಥರಾಗಿದ್ದು, ಐದು ದಿನಗಳಿಂದ ನಾಪತ್ತೆಯಾಗಿದ್ದರು ಎಂದು ಪಿಟಿಐ ವರದಿ ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಅವರಿಗೆ ಥಳಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅದರಲ್ಲಿ ವ್ಯಕ್ತಿಯೊಬ್ಬ ಭವರ್ ಲಾಲ್‌ಗೆ ಪದೇ ಪದೇ ಕಪಾಳಮೋಕ್ಷ ಮಾಡುವುದನ್ನು ಕಾಣಬಹುದು. ದುಷ್ಕರ್ಮಿಯು ಭವರ್ ಲಾಲ್ ಅವರ ಗುರುತನ್ನು ಕೇಳುವುದನ್ನು ಕಾಣಬಹುದಾಗಿದೆ. ಜೊತೆಗೆ ಕಪಾಳಮೋಕ್ಷ ಮಾಡುತ್ತಲೆ, ‘ನಿನ್ನ ಹೆಸರು ಮೊಹಮ್ಮದ್’ ಎಂದು ಕೇಳುತ್ತಾ ಆಧಾರ್ ಕಾರ್ಡ್ ತೋರಿಸಲು ಒತ್ತಾಯಿಸುತ್ತಿರುವುದು ಕಂಡುಬಂದಿದೆ.
A murder case has been registered in after a 65-year-old with mental illness was found dead and a video showed Dinesh Kushwaha, husband of an ex BJP corporator asking him if his “name is Mohammed” and repeatedly assaulting him as he struggled to answer @ndtv @ndtvindia pic.twitter.com/jWNDlLKpFb
— Anurag Dwary (@Anurag_Dwary) May 21, 2022
ಭವರ್ ಲಾಲ್ ಅವರಿಗೆ ಕಪಾಳಮೋಕ್ಷ ಮಾಡುತ್ತಿದ್ದ ವ್ಯಕ್ತಿಯನ್ನು ದಿನೇಶ್ ಕುಶವಾಹ ಎಂದು ಗುರುತಿಸಲಾಗಿದೆ ಎಂದು ಜಿಲ್ಲೆಯ ಮಾನಸ ಪೊಲೀಸ್ ಠಾಣೆಯ ಉಸ್ತುವಾರಿ ಕೆ.ಎಲ್.ಡಂಗಿ ತಿಳಿಸಿದ್ದಾರೆ. ಆರೋಪಿ ಕುಶ್ವಾಹಾ ಬಿಜೆಪಿಯ ಮಾಜಿ ಕಾರ್ಪೊರೇಟರ್ ಪತಿ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ: ರಹಸ್ಯ ಕಾರ್ಯಸೂಚಿಗಳನ್ನು ಒಳಗೊಂಡ ನೂತನ ಪಠ್ಯಪುಸ್ತಕಗಳು ಬೇಕೆ?
ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಮತ್ತು ಸೆಕ್ಷನ್ 304 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ನವಭಾರತ್ ಟೈಮ್ಸ್ ಪ್ರಕಾರ ಭವರ್ ಲಾಲ್ ಅವರು ರತ್ಲಂ ಜಿಲ್ಲೆಯ ಸರ್ಸಿ ಗ್ರಾಮದ ನಿವಾಸಿಯಾಗಿದ್ದರು. ರಾಜಸ್ಥಾನದ ಚಿತ್ತೋರ್‌ಗಢ ಜಿಲ್ಲೆಯಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕೆ ಭೇಟಿ ನೀಡಿದ ಬಳಿಕ ಅವರು ನಾಪತ್ತೆಯಾಗಿದ್ದರು.
ಇದರ ನಂತರ ಮಾನಸ ಪೊಲೀಸ್ ಠಾಣೆಯು ಅವರು ಕಾಣೆಯಾಗಿರುವ ಬಗ್ಗೆ ನೋಟಿಸ್ ಅನ್ನು ಬಿಡುಗಡೆ ಮಾಡಿತ್ತು. ಭವರ್ ಲಾಲ್ ಅವರ ಮೃತದೇಹವು ನೀಮುಚ್‌ನ ರಾಂಪುರ ರಸ್ತೆಯಲ್ಲಿರುವ ಕಾರ್ ಶೋ ರೂಂ ಎದುರು ಪತ್ತೆಯಾಗಿದೆ.
ಭವರ್ ಲಾಲ್ ಅವರ ಮೃತದೇಹ ಪತ್ತೆಯಾದ ನಂತರ, ಅವರ ಕುಟುಂಬ ಸದಸ್ಯರು, ಅವರ ಗ್ರಾಮದ ನಿವಾಸಿಗಳು ಮತ್ತು ಜೈನ ಸಮುದಾಯದ ಸದಸ್ಯರು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಪೊಲೀಸ್ ಠಾಣೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ: ರೋಹಿತ್ ಚಕ್ರತೀರ್ಥ ಆಯ್ಕೆಯ ಮಾನದಂಡಗಳೇನು?: ಬಹಿರಂಗ ಪತ್ರ ಬರೆದ ಶಿಕ್ಷಣ ತಜ್ಞರು
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಕಮಲ್ ನಾಥ್, “ಮಧ್ಯಪ್ರದೇಶದ ಅಪರಾಧಿಗಳು ಅಷ್ಟೊಂದು ಧೈರ್ಯ ಯಾಕೆ ಹೊಂದಿದ್ದಾರೆ” ಎಂದು ಪ್ರಶ್ನಿಸಿದ್ದಾರೆ. “ರಾಜ್ಯ ಸರ್ಕಾರವು ಈವೆಂಟ್ ಮ್ಯಾನೇಜ್‌ಮೆಂಟ್‌ನಲ್ಲಿ ಮಾತ್ರ ಆಸಕ್ತಿ ಹೊಂದಿದೆ” ಎಂದು ಆಕ್ರೊಶ ವ್ಯಕ್ತಪಡಿಸಿದ್ದಾರೆ.
“ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಎಲ್ಲಿದೆ?” ಎಂದು ಕೇಳಿರುವ ಅವರು, “ಎಲ್ಲಿಯವರೆಗೆ ಜನರು ಈ ರೀತಿ ಕೊಲ್ಲಲ್ಪಡುತ್ತಾರೆ?” ಎಂದು ಪ್ರಶ್ನಿಸಿದ್ದಾರೆ.
सिवनी की तरह यहाँ भी आरोपी का जुड़ाव भाजपा से जुड़ा होना सामने आ रहा है…
प्रदेश की क़ानून व्यवस्था आख़िर कहाँ है , कब तक लोगों को यूँ ही मारा जाता रहेगा…?
अपराधियों के हौसले इतने बुलंद क्यों है…?
सरकार का ध्यान तो सिर्फ़ इवेंट में है..— Kamal Nath (@OfficeOfKNath) May 21, 2022
ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯ ಕಾರ್ಯದರ್ಶಿ ರಜನೀಶ್ ಅಗರವಾಲ್, “ಘಟನೆಯು ದುರದೃಷ್ಟಕರ” ಎಂದು ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಇದನ್ನೂ ಓದಿ: ಪುಸ್ತಕದಲ್ಲಿ ಹೆಡಗೇವಾರ್ ಪಠ್ಯ ಸೇರ್ಪಡೆಗೆ ಸ್ವಪಕ್ಷೀಯರಿಂದಲೆ ವಿರೋಧ: ಸರ್ಕಾರಕ್ಕೆ ಚಾಟಿ ಬೀಸಿದ ಎಚ್.ವಿಶ್ವನಾಥ್
“ಆರೋಪಿಯು ಆರೋಪಿಯಾಗಿದ್ದು, ಅದಕ್ಕೂ ಪಕ್ಷ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ” ಎಂದು ಅವರು ಹೇಳಿದ್ದು, ಇಂತಹ ಕೃತ್ಯದಲ್ಲಿ ಭಾಗಿಯಾಗಿರುವ ಯಾವುದೇ ವ್ಯಕ್ತಿಯನ್ನು ರಾಜ್ಯ ಸರ್ಕಾರ ಬಿಡುವುದಿಲ್ಲ, ನಮ್ಮ ಪಕ್ಷವು ಕಾನೂನಿನ ಆಳ್ವಿಕೆಯಲ್ಲಿ ನಂಬಿಕೆ ಹೊಂದಿದೆ ಎಂದು ತಿಳಿಸಿದ್ದಾರೆ.
ಹಿಂದಿನ ಕಾಂಗ್ರೆಸ್ ಸರ್ಕಾರಗಳು ಅಪರಾಧಿಗಳನ್ನು ರಕ್ಷಿಸುವಲ್ಲಿ ನಿರತವಾಗಿದ್ದವು ಎಂದು ಅಗರವಾಲ್ ಆರೋಪಿಸಿದ್ದಾರೆ.
Shame on these so called criminals, who given right for this criminals to check others identity.