Homeಮುಖಪುಟಪಠ್ಯ ಪರಿಷ್ಕರಣೆ ಕೈಬಿಡದಿದ್ದರೆ ಸಿಎಂ ಮನೆಗೆ ಮುತ್ತಿಗೆ: ದಸಂಸ ಒಕ್ಕೂಟ ಎಚ್ಚರಿಕೆ

ಪಠ್ಯ ಪರಿಷ್ಕರಣೆ ಕೈಬಿಡದಿದ್ದರೆ ಸಿಎಂ ಮನೆಗೆ ಮುತ್ತಿಗೆ: ದಸಂಸ ಒಕ್ಕೂಟ ಎಚ್ಚರಿಕೆ

- Advertisement -
- Advertisement -

ರೋಹಿತ್ ಚಕ್ರತೀರ್ಥ ಸಮಿತಿಯ ಪಠ್ಯ ಪುನರ್ ಪರಿಷ್ಕರಣೆ ಕೈಬಿಡದಿದ್ದರೆ ಸಿಎಂ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರಾದ ಗುರುಪ್ರಸಾದ್ ಕೆರಗೋಡು ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ದಸಂಸ ಒಕ್ಕೂಟ (ದಲಿತ ಸಂಘರ್ಷ ಸಮತಿ/ಸಂಘಟನೆಗಳ ಜಂಟಿ ವೇದಿಕೆ) ವತಿಯಿಂದ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, “ಶೂದ್ರ, ಹಿಂದುಳಿದ, ದಲಿತ-ದಮನಿತ, ಆದಿವಾಸಿ ಬುಡಕಟ್ಟು ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ವಿರೋಧಿಯಾದ, ಬ್ರಾಹ್ಮಣ್ಯ ತುಂಬಿಕೊಂಡಿರುವ ಪಠ್ಯ ಪರಿಷ್ಕರಣೆ ಮಾಡಿರುವ ರೋಹಿತ್ ಚಕ್ರತೀರ್ಥನನ್ನು ವಜಾಗೊಳಿಬೇಕು, ಅಸಮರ್ಥ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ರಾಜೀನಾಮೆ ನೀಡಬೇಕು” ಎಂದು ಒತ್ತಾಯಿಸಿದರು.

ರೋಹಿತ್ ಚಕ್ರತೀರ್ಥ ಸಮಿತಿಯ 7 ಜನ ಸದಸ್ಯರು ಸಹ ಬ್ರಾಹ್ಮಣ ಸಮುದಾಯದವರಾಗಿದ್ದು, ಇತರ ಸಮುದಾಯದ ಒಬ್ಬರೂ ಸದಸ್ಯರಿರುವುದಿಲ್ಲ. ಮಹಿಳೆಯರು ಸಹ ಆ ಸಮಿತಿಯಲ್ಲಿಲ್ಲ. ರೋಹಿತ್ ಚಕ್ರತೀರ್ಥ ಎಂಬ RSS ಕಾರ್ಯಕರ್ತ ಹೊರತು ಶಿಕ್ಷಣ ತಜ್ಞನಲ್ಲ. ಆತನಿಗೆ ಪಠ್ಯ ಪರಿಷ್ಕರಿಸುವ ಯಾವದೇ ಅರ್ಹತೆಯಿಲ್ಲ. ಅದರ ಫಲವಾಗಿಯೇ ಪರಿಷ್ಕರಣೆಗೊಂಡಿರುವ ಪಠ್ಯಗಳು ಬ್ರಾಹ್ಮಣ್ಯದಿಂದ ತುಂಬಿವೆ. ದಲಿತ-ದಮನಿತ-ಮಹಿಳಾ ವಿರೋಧಿಯಾಗಿವೆ. ಹಾಗಾಗಿ ಕೂಡಲೇ ಆ ಸಮಿತಿಯನ್ನು ವಜಾಗೊಳಿಸಿ ಪಠ್ಯ ಪರಿಷ್ಕರಣೆ ನಿಲ್ಲಿಸಬೇಕೆಂದು ಆಗ್ರಹಿಸಿದರು.

ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ಯ ಸಂಚಾಲಕರಾದ ಮಾವಳ್ಳಿ ಶಂಕರ್‌ರವರು ಮಾತನಾಡಿ, “ಮಾನವೀಯತೆ, ಶಾಂತಿ, ಪ್ರೀತಿ ಮತ್ತು ಮೈತ್ರಿ ಸಾರಿದ ಗೌತಮ ಬುದ್ದರವರ ಹೊಸ ಧರ್ಮಗಳ ಉದಯ ಪಠ್ಯವನ್ನು ಕೈಬಿಟ್ಟಿದ್ದಾರೆ. ಅಲ್ಲದೆ ಹಿರಿಯ ದಲಿತ ಸಾಹಿತಿ ಅರವಿಂದ ಮಾಲಗತ್ತಿಯವರ ಬುದ್ದರ ಕುರಿತು ಪದ್ಯ ಕೈಬಿಡಲಾಗಿದೆ. ದ್ವಿತೀಯ ಪಿ.ಯು.ಸಿ ಪಠ್ಯ ಸಹ ಕೈಡಲು ಮುಂದಾಗಿದ್ದಾರೆ. ಇದನ್ನು ನಾವು ಒಪ್ಪುವುದಿಲ್ಲ” ಎಂದರು.

“ಹೊಸದಾಗಿ ಸೇರಿಸಲಾದ 10 ಪಠ್ಯಗಳಲ್ಲಿ 09 ಪಠ್ಯಗಳು ಬ್ರಾಹ್ಮಣ ಲೇಖಕರದ್ದು. 06 ಪರಿಶಿಷ್ಟ ಹಾಗೂ ಹಿಂದುಳಿದ ವರ್ಗದ ಲೇಖಕರ ಪಠ್ಯ ಕೈಬಿಡಲಾಗಿದೆ. ನೂತನ ಪಠ್ಯದಲ್ಲಿ ಹೆಣ್ಣು ಮಕ್ಕಳನ್ನು ಕೀಳಾಗಿ ಕಾಣಲಾಗುತ್ತಿದೆ. ಅವರನ್ನು ಹಣಕ್ಕೆ ಹೋಲಿಸಿ, ಚಂಚಲೆ, ಒಬ್ಬರ ಬಳಿ ನಿಲ್ಲುವುದಿಲ್ಲ, ಎಲ್ಲರೂ ಆಕೆಯತ್ತ ಆಕರ್ಷಿತರಾದವರೆ. ಎಲ್ಲರೂ ಆಕೆಯಿಂದ ಮೋಸಹೋಗುವವರೇ. ಯಾವುದೇ ಒಬ್ಬನನ್ನು ನಿರ್ವಂಚನೆಯಿಂದ ಪ್ರೇಮಿಸುವುದು ಆಕೆಯ ಜಾಯಮಾನಕ್ಕೆ ಸಲ್ಲದು ಎಂಬು ಬಿಂಬಿಸಲಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿ.ನಾಗರಾಜುರವರು ಮಾತನಾಡಿ, “ಸ್ವಾಮಿ ವಿವೇಕಾನಂದರ ಪಠ್ಯ ತಿರುಚಲಾಗಿದೆ. ಜಾತೀಯತೆಯ ಅಪಾಯಗಳ ಬಗ್ಗೆ ಅವರು ಬರೆದಿದ್ದ ಪಠ್ಯವನ್ನು ಕೈಬಿಟ್ಟು ಆ ಜಾಗಕ್ಕೆ ಸಂಸ್ಕೃತಿ ವ್ಯಸನ ಹೇರುವ, ಸಂಸ್ಕೃತಿ ಇಲ್ಲದವರು ಕಾಡುಜನರು ಎಂಬ ಸಮಾಜ ವಿರೋಧಿ ಪಠ್ಯ ಸೇರಿಸಲಾಗಿದೆ. ಅಪ್ಪಟ ದೇಶಪ್ರೇಮಿ ಭಗತ್ ಸಿಂಗ್ರವರ ಪಠ್ಯ ಕೈಬಿಟ್ಟಿರುವುದು ಖಂಡನೀಯ” ಎಂದರು.

ಈ ದೇಶದಲ್ಲಿ ಜಾತಿಪದ್ದತಿ, ವರ್ಣಾಶ್ರಮವನ್ನು ಪ್ರೋತ್ಸಾಹಿಸುವ RSS ಸ್ಥಾಪಕ ಕೆ.ಬಿ ಹೆಡಗೇವಾರ್ ಪಠ್ಯ ಸೇರಿಸುವ ಮೂಲಕ ಮಕ್ಕಳಲ್ಲಿ ದ್ವೇಷ ಬಿತ್ತಲಾಗುತ್ತಿದೆ. ಜೀವನಪೂರ್ತಿ ಸುಳ್ಳು ಹೇಳಿಕೊಂಡು ತಿರುಗಿದ ಚಕ್ರವರ್ತಿ ಸೂಲಿಬೆಲೆ ಎಂಬ ಮಹಾನ್ ಸುಳ್ಳುಗಾರನ ಪಠ್ಯ ಸೇರಿಸುವುದರ ಅರ್ಥವೇನು? ಇದನ್ನು ಓದಿದರೆ ನಮ್ಮ ಮಕ್ಕಳ ಮನಸ್ಥಿತಿ ಏನಾಗುವುದು ಎಂದು ಪ್ರಶ್ನಿಸಿದರು.

ಮತ್ತೊಬ್ಬ ದಲಿತ ಹೋರಾಟಗಾರರಾದ ಲಕ್ಷ್ಮೀನಾರಾಯಣ ನಾಗವಾರರವರು ಮಾತನಾಡಿ, “ಕೂಡಲೇ ಈ ಬ್ರಾಹ್ಮಣಿಕೆಯ, ಬ್ರಾಹ್ಮಣರೇ ತುಂಬಿರುವ ಸಮಿತಿಯನ್ನು ವಜಾಗೊಳಿಸಬೇಕು. ಹಿಂದಿನ ಪಠ್ಯವನ್ನೇ ಬೋದಿಸಬೇಕು. ಅನರ್ಹ ರೋಹಿತ್ ಚಕ್ರತೀರ್ಥನನ್ನು ಐಐಟಿ-ಸಿಇಟಿ ಪ್ರೊಫೆಸರ್ ಎಂದು ಸುಳ್ಳು ಹೇಳಿಕೆ ನೀಡಿ ತಪ್ಪುಗಳನ್ನು ಸಮರ್ಥಿಸಿಕೊಳ್ಳುತ್ತಿರುವ, ಅಸಮರ್ಥ ಮತ್ತು ಹೊಣೆಗೇಡಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ರಾಜೀನಾಮೆ ನೀಡಬೇಕು” ಎಂದು ಒತ್ತಾಯಿಸಿದರು.

ಇದನ್ನೂ ಓದಿ: ನಾನು ಐಐಟಿ, ಸಿಇಟಿಗೆ ಪ್ರೊಫೆಸರ್ ಅಲ್ಲ: ರೋಹಿತ್ ಚಕ್ರತೀರ್ಥ ಸ್ಪಷ್ಟನೆ

ರಾಜ್ಯದಲ್ಲಿ ಇಂತಹ ಸಂವಿಧಾನ ವಿರೋಧಿ ಕೃತ್ಯಗಳು ನಡೆಯುತ್ತಿದ್ದರೂ ಸಿಎಂ ಬೊಮ್ಮಾಯಿಯವರು ಮೌನ ವಹಿಸಿದ್ದಾರೆ. ಅವರು ಒಂದು ವಾರದೊಳಗೆ ಪಠ್ಯಕ್ರಮ ಪರಿಷ್ಕರಣೆ ಕೈಬಿಟ್ಟು, ಹಿಂದಿನ ಪಠ್ಯ ಬೋಧಿಸಲು ಆದೇಶಿಸದಿದ್ದರೆ ಅವರ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ರೇವಣ್ಣ ಸಹಚರ ಸತೀಶ್ ಬಾಬಣ್ಣಗೆ ನ್ಯಾಯಾಂಗ ಬಂಧನ

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ ಬಯಲಾದ ಬೆನ್ನಲ್ಲಿ ಮೈಸೂರಿನಲ್ಲಿ ಮಹಿಳೆಯನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದ ಎರಡನೇ ಆರೋಪಿ ಸತೀಶ್ ಬಾಬಣ್ಣ ಬಂಧನವಾಗಿದ್ದು, ಅವರನ್ನು ನ್ಯಾಯಾಲಯ 14...