Homeಕರ್ನಾಟಕಮುಸ್ಲಿಂ ಉದ್ಯಮಿ, ಲುಲು ಮುಖ್ಯಸ್ಥ ಯೂಸುಫ್ ಅಲಿ ಹೆಸರಿಸದ ಸಿಎಂ ಬೊಮ್ಮಾಯಿ!; ಸಂಘಪರಿವಾರದ ಭಯವೇ ಎಂದ...

ಮುಸ್ಲಿಂ ಉದ್ಯಮಿ, ಲುಲು ಮುಖ್ಯಸ್ಥ ಯೂಸುಫ್ ಅಲಿ ಹೆಸರಿಸದ ಸಿಎಂ ಬೊಮ್ಮಾಯಿ!; ಸಂಘಪರಿವಾರದ ಭಯವೇ ಎಂದ ನೆಟ್ಟಿಗರು

- Advertisement -
- Advertisement -

ಸ್ವಿಟ್ಸರ್ಲೆಂಡಿನ ದಾವೋಸ್‌ನಲ್ಲಿ ನಡೆಯುತ್ತಿರುವ ವರ್ಲ್ಡ್ ಎಕನಾಮಿಕ್ ಫೋರಮ್ ಭಾಗವಹಿಸಿರುವ ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿಯವರು ಕೇರಳ ಮೂಲದ ಮುಸ್ಲಿಂ ಉದ್ಯಮಿ, ಲುಲು ಕಂಪನಿ ಛೇರ್ಮನ್ ‘ಯೂಸುಫ್‌ಅಲಿ ಎಂ.ಎ.’ ಅವರೊಂದಿಗೆ ಹೂಡಿಕೆಯ ಬಗ್ಗೆ ಚರ್ಚೆ ನಡೆಸಿದ್ದು, ಎರಡು ಸಾವಿರ ಕೋಟಿ ರೂ. ಹೂಡಿಕೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಈ ಕುರಿತು ಫೇಸ್‌ಬುಕ್‌ನಲ್ಲಿ ಬರೆದಿರುವ ಸಿಎಂ ಬೊಮ್ಮಾಯಿಯವರು ಲುಲು ಛೇರ್ಮನ್ ಯೂಸುಫ್ ಅಲಿ ರವರ ಹೆಸರ ಕೈಬಿಟ್ಟು ಲುಲು ಅಂತರಾಷ್ಟ್ರೀಯ ನಿರ್ದೆಶಕ ‘ಎ.ವಿ.ಅನಂತ ರಾಮನ್’ ರವರ ಹೆಸರು ಮಾತ್ರ ಉಲ್ಲೇಖಿಸಿದ್ದಾರೆ. ಮುಖ್ಯಮಂತ್ರಿಯ ಅಧೀಕೃತ ಫೇಸ್‌ಬುಕ್‌ ಖಾತೆಯಲ್ಲಿ ಇದನ್ನು ಪೋಸ್ಟ್‌ ಮಾಡಲಾಗಿದೆ. ಮುಸ್ಲಿಂರೊಂದಿಗೆ ವ್ಯಾಪಾರ ಒಪ್ಪಂದವು ಚರ್ಚೆಗೆ ಗ್ರಾಸವಾಗುವುದನ್ನು ತಪ್ಪಿಸಲು ಈ ರೀತಿ ಬರೆದಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಷೇಪ ವ್ಯಕ್ತವಾಗಿದೆ.

ರಾಜ್ಯದಲ್ಲಿ ನಾಲ್ಕು ಮಾಲ್ ಗಳು ಮತ್ತು ಹೈಪರ್ ಮಾರ್ಕೆಟ್ ಗಳ ಮೂಲಕ 10,000 ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಎಂ.ಎ. ಯೂಸುಫ್ ಅಲಿ ಅವರು, ‘ಲುಲು ಗ್ರೂಪ್‌ ಇಂಟರ್‌ನ್ಯಾಷನಲ್‌’ ಕಂಪೆನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಲುಲು ಗ್ರೂಪ್ ಇಂಟರ್‌ನ್ಯಾಶನಲ್‌‌ನ ಪ್ರಧಾನ ಕಚೇರಿ ಯುಎಇಯ ಅಬುಧಾಬಿಯಲ್ಲಿದೆ. ಕಂಪೆನಿಯು ಹಲವಾರು ಹೈಪರ್‌ಮಾರ್ಕೆಟ್‌ಗಳು ಮತ್ತು ಮಾಲ್‌ಗಳನ್ನು ಹೊಂದಿದೆ. ತಿರುವನಂದಪುರಂನಲ್ಲಿರುವ ಲುಲು ಮಾಲ್‌ ಭಾರತದ 2 ನೇ ಅತೀ ದೊಡ್ಡ ಮಾಲ್‌ ಆಗಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಕೂಡಾ ಲುಲು ಮಾಲ್ ಪ್ರಾರಂಭವಾಗಿದೆ.

ಮುಖ್ಯಮಂತ್ರಿ ತನ್ನ ಪೋಸ್ಟ್‌ನಲ್ಲಿ, “ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಇಂದು ಸ್ವಿಟ್ಸರ್ಲೆಂಡಿನ ದಾವೋಸ್ ನಲ್ಲಿ ನಡೆಯುತ್ತಿರುವ ವರ್ಲ್ಡ್ ಎಕನಾಮಿಕ್ ಫೋರಮ್ ಸಮಾವೇಶದಲ್ಲಿ ಮೆ: ಲುಲು ಗ್ರೂಪ್ ಇಂಟರ್ ನ್ಯಾಷನಲ್ ನ ನಿರ್ದೇಶಕ ಎ.ವಿ.ಅನಂತ ರಾಮನ್ ಅವರೊಂದಿಗೆ ಕರ್ನಾಟಕದಲ್ಲಿ ಹೂಡಿಕೆ ಮಾಡುವ ಕುರಿತು ಒಪ್ಪಂದಕ್ಕೆ ಸಹಿ ಮಾಡಲಾಯಿತು” ಎಂದು ಹೆಸರಿಸಿದ್ದಾರೆ.

“ರಾಜ್ಯದ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಲುಲು ಗ್ರೂಪ್ ರಾಜ್ಯದಲ್ಲಿ ಸುಮಾರು ಎರಡು ಸಾವಿರ ಕೋಟಿ ರೂ. ಹೂಡಿಕೆ ಮಾಡಲು ಮುಂದಾಗಿದ್ದು, 4 ಶಾಪಿಂಗ್ ಮಾಲ್ ಮತ್ತು ಹೈಪರ್ ಮಾರ್ಕೆಟ್ ಹಾಗೂ ರಫ್ತು ಆಧಾರಿತ ಆಹಾರ ಮಳಿಗೆಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಮೂಲಕ 10 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ” ಎಂದು ಸಿಎಂ ಬರೆದಿದ್ದಾರೆ.

ಮುಖ್ಯಮಂತ್ರಿ ಫೇಸ್‌ಬುಕ್‌ನಲ್ಲಿ ಬರೆದ ಪೋಸ್ಟ್‌‌

ಇದನ್ನೂ ಓದಿ: ವೈಯಕ್ತಿಕ ದ್ವೇಷದ ಪ್ರಕರಣಕ್ಕೆ ಕೋಮು ಆಯಾಮ ನೀಡಿ ‘ಮುಸ್ಲಿಂ ದ್ವೇಷ’ ಹರಡಿದ ದಿಗ್ವಿಜಯ & ಪಬ್ಲಿಕ್ ಟಿವಿ

ಇಷ್ಟೇ ಅಲ್ಲದೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ತನ್ನ ಪೋಸ್ಟ್‌ ಅನ್ನು ಇಂಗ್ಲಿಷ್‌ನಲ್ಲಿ ಕೂಡಾ ಬರೆದಿದ್ದು, ಆದರೆ ಅದರಲ್ಲಿ ಉದ್ಯಮಿಯ ಹೆಸರನ್ನು ಉಲ್ಲೇಖಿಸಿಲ್ಲ. ಇಂ‌ಗ್ಲಿಷ್‌ನಲ್ಲಿ, “LuLu Group and Govt of Karnataka signed MoU for setting up of 4 Shopping Malls and Hypermarkets and 100% export oriented food stores for agricultural products processing. These malls are being targeted in Tier 2 cities in Karnataka. Rs 2000 Cr will be invested by Lulu Group in Karnataka and will generate 10,000+ employment opportunities” ಎಂದು ಬರೆದಿದ್ದಾರೆ.

ಸಿಎಂ ಬೊಮ್ಮಾಯಿ ಅವರ ಫೇಸ್‌ಬುಕ್‌ ಖಾತೆಯಲ್ಲಿನ ಪೋಸ್ಟ್‌

ಇತ್ತೀಚೆಗೆ ಕರ್ನಾಟಕದಲ್ಲಿ ಮುಸ್ಲಿಂ ವಿರೋಧಿ ದ್ವೇಷ ಅಭಿಯಾನ ಆರಂಭವಾಗಿತ್ತು. ಮುಸ್ಲಿಮರ ವ್ಯಾಪಾರಕ್ಕೆ ಬಹಿಷ್ಕಾರ ಮಾಡಲಾಗಿತ್ತು. ಅದನ್ನು ಸಿಎಂ ಬೊಮ್ಮಾಯಿ ಖಂಡಿಸದೆ ಪರೋಕ್ಷವಾಗಿ ಬೆಂಬಲಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈಗ ತಾವೇ ಮುಸ್ಲಿಮರೊಟ್ಟಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ, ಇದು ಇಬ್ಬಗೆ ನೀತಿ ಎಂಬ ಟೀಕೆ ತಪ್ಪಿಸಲು ಮುಖ್ಯಮಂತ್ರಿಯ ಅವರು ಕರ್ನಾಟಕ ಮುಖ್ಯಮಂತ್ರಿ ಅಧೀಕೃತ ಫೇಸ್‌ಬುಕ್ ಪೇಜ್‌ನಲ್ಲಿ ಉದ್ಯಮಿಯ ಹೆಸರನ್ನು ಉದ್ದೇಶಪೂರ್ವಕವಾಗಿ ಕೈಬಿಟ್ಟಿದ್ದಾರೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಕ್ಲಬ್‌ಹೌಸ್‌ನಲ್ಲಿ ಮುಸ್ಲಿಂ ಮಹಿಳೆಯರ ವಿರುದ್ಧ ದ್ವೇಷ ಭಾಷಣ: ಮುಂಬೈನಲ್ಲಿ ಮೂರು ಜನರ ಬಂಧನ

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಾಮಾಜಿಕ ಕಾರ್ಯಕರ್ತ ವಿನಯ್ ಕಸ್ವೆ ಅವರು, “ಮುಖ್ಯಮಂತ್ರಿಗಳ ಅಧಿಕೃತ ಹ್ಯಾಂಡಲ್ ನಲ್ಲಿ ಒಂದು ಸೂಕ್ಷ್ಮ ಗಮನಿಸಿ. ಮುಸ್ಲಿಂ ಉದ್ಯಮಿ ಯೂಸುಫ್ ಅಲಿ ಮಾಲೀಕತ್ವದ ಲುಲು ಗ್ರೂಪ್ ನೊಂದಿಗೆ ರಾಜ್ಯದಲ್ಲಿ 2000 ಕೋಟಿ ಹೂಡಿಕೆಯ ಒಪ್ಪಂದಕ್ಕೆ ಸಹಿ ಹಾಕಿದ್ದಾರಂತೆ. ಸಿಎಂ ಅವರು ಯೂಸುಫ್ ಅಲಿಯವರನ್ನು ಭೇಟಿಯಾಗಿದ್ದಾರೆ, ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ, ಫೋಟೋದಲ್ಲೂ ಯೂಸುಫ್ ಅಲಿ ಇದ್ದಾರೆ. ಆದರೆ ಕನ್ನಡದಲ್ಲಿ ನಿರ್ದೇಶಕ ಅನಂತ್ ರಾಮನ್ ಹೆಸರನ್ನು ಮಾತ್ರ ಹಾಕಿದ್ದಾರೆ. ಯೂಸುಫ್ ಅಲಿ ಹೆಸರು ಹಾಕಲು ಹಿಂದೇಟು ಹಾಕಿದ್ದಾರೆ… ಯಾಕೆ ನಾಚಿಕೆಯೇ? ಸಂಘಪರಿವಾರದ ಬೆಂಬಲಿಗರು ಬೇಸರಿಕೊಂಡಾರು ಎಂಬ ಹಿಂಜರಿಕೆಯೇ? ಮುಗಿಬಿದ್ದಾರು ಎಂಬ ಭಯವೇ” ಎಂದು ಪ್ರಶ್ನಿಸಿದ್ದಾರೆ.

“ಇಂಗ್ಲಿಷ್ ಅನುವಾದದಲ್ಲಿ ಯಾರ ಹೆಸರನ್ನೂ ಹಾಕಿಲ್ಲ…ಮಾಲೀಕನ ಹೆಸರು ಬಿಟ್ಟು ನಿರ್ದೇಶಕನ ಹೆಸರು ಹಾಕಿದ್ದಾರೆ ಎಂಬ ವಿವಾದ ಆಗದಿರಲಿ ಎಂದೇ? ಅಲ್ಲಿಯವರು ಇಂಗ್ಲಿಷ್ ನಲ್ಲಿ ಓದಿಕೊಂಡು ತರಾಟೆಗೆ ತೆಗೆದುಕೊಳ್ಳದಿರಲಿ ಎಂದೇ?” ಎಂದು ಅವರು ಪ್ರಶ್ನಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

3 COMMENTS

  1. ಮತದಾರರು ಮೋಸ ಹೋಗುತ್ತಲೇ ಇದ್ದಾರೆ….. ಅದರಲ್ಲೂ ಶೂದ್ರರು. ದಲಿತರು ಅತೀ ಹೆಚ್ಚು. ….. ಅವರೆಲ್ಲರೂ
    RSS ನಿಂದ ಈಗಲಾದರೂ ಹೊರಗೆ ಬರಲಿ.

  2. RSS/ BJP ಗೆ ವಾಸ್ತವ ಸಂಗತಿ ಯನ್ನು ಜನರಲ್ಲಿ ತಿಳಿಸುವ ಧೈರ್ಯ ಇಲ್ಲದ ಹಾಗೂ ಸುಳ್ಳು ಪ್ರಚಾರಕ್ಕೆ ದೇಶದ ಜನತೆ ಯನ್ನೂ ಮೋಸ ಮಾಡಿ ರಾಜಕಾರಣ ಮಾಡುವ ಪಕ್ಷ ಒಂದು ಇದ್ದರೆ ಅದು ಖಂಡಿತ BJP ಅಂತ ಮಾನ್ಯ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ ಹೊರತು ಇಂಗ್ಲಿಷ್ ನಲ್ಲಿ ಲುಲು ಮಾಲಕರ ಹೆಸರು ಸಂಘ್ಹಿ ಬೊಮ್ಮಾಯಿ ಬರೆದು ಆರೆಸಸ್ ನ ಕಿರಿಕ್ ಬೇಡ ಅಷ್ಟೇ. ಯೂಸುಫ್ ಅಲೀ ಗೆ ಯಾವ ಪರಿಚಯ ದ ಅವಶ್ಯಕತೆಯೂ ಇಲ್ಲ.

LEAVE A REPLY

Please enter your comment!
Please enter your name here

- Advertisment -

Must Read

ರಾಷ್ಟ್ರದ ಭದ್ರತೆಗೆ ಬೆದರಿಕೆಯಾಗಿರುವ ನೂಪುರ್ ಶರ್ಮಾ ಇಡೀ ದೇಶದ ಎದುರು ಕ್ಷಮೆ ಕೇಳಬೇಕು: ಸುಪ್ರೀಂ

0
ಪ್ರವಾದಿ ಮೊಹಮ್ಮದ್‌ರವರನ್ನು ನಿಂದಿಸಿದ್ದ ಬಿಜೆಪಿಯ ಉಚ್ಛಾಟಿತ ನಾಯಕಿ ನೂಪುರ್ ಶರ್ಮಾ ಇಡೀ ರಾಷ್ಟ್ರದ ಎದುರು ಕ್ಷಮೆ ಕೇಳಬೇಕೆಂದು ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ. ತನ್ನ ಮೇಲೆ ದೇಶಾದ್ಯಂತ ದಾಖಲಾಗಿರುವ ಪ್ರಕರಣಗಳನ್ನು ಒಂದೇ ಎಫ್‌ಐಆರ್‌ಗೆ ವರ್ಗಾಹಿಸುವಂತೆ...