ಮಂಡ್ಯ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಹೊಟ್ಟೆಯಿಂದ ಕೆಳಭಾಗ ಕತ್ತರಿಸಿರುವ ಇಬ್ಬರು ಮಹಿಳೆಯರ ಮೃತದೇಹಗಳು ಪತ್ತೆಯಾಗಿವೆ. ಮಹಿಳೆಯರನ್ನು ಕೊಲೆ ಮಾಡಿ ಚೀಲದಲ್ಲಿ ಕಟ್ಟಿ ನಾಲೆಗೆ ಎಸೆದಿದ್ದು, ನಾಲೆಯಲ್ಲಿ ತೇಲಿ ಬಂದಿವೆ. ಇಂತಹ ಭಯಾನಕ ಕೊಲೆಗಳನ್ನು ಕಂಡು ಜಿಲ್ಲೆಯ ಜನತೆ ಬೆಚ್ಚಿ ಬಿದ್ದಿದ್ದಾರೆ.
ಪಾಂಡವಪುರ ಟೌನ್ ಪೊಲೀಸ್ ಹಾಗೂ ಶ್ರೀರಂಗಪಟ್ಟಣ ತಾಲೂಕಿನ ಅರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೃತದೇಹಗಳು ಪತ್ತೆಯಾಇದ್ದು, ಮಹಿಳೆಯರ ಗುರುತು ಇನ್ನು ಪತ್ತೆಯಾಗಿಲ್ಲ. ಹೊಟ್ಟೆ ಭಾಗದಿಂದ ಕೆಳಗೆ ಕತ್ತರಿಸಿದ ದೇಹದ ಭಾಗವನ್ನು ಚೀಲದಲ್ಲಿ ಕಟ್ಟಿ ನಾಲೆಗೆ ಎಸೆಯಲಾಗಿದೆ. ಎಲ್ಲಿಯೋ ಕೊಲೆ ಮಾಡಿ, ಮೃತದೇಹಗಳನ್ನು ನಾಲೆಗೆ ಎಸೆದಿರುವ ಶಂಕೆ ವ್ಯಕ್ತವಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದನ್ನೂ ಓದಿ: ಪ್ರವಾದಿ ನಿಂದನೆ ಮಾಡಿದವನಿಂದ ಪಠ್ಯಪರಿಷ್ಕರಣೆ; ರೋಹಿತ್ ಚಕ್ರತೀರ್ಥರ ಹಳೆಯ ಪೋಸ್ಟ್‌ಗಳು ವೈರಲ್
ಶ್ರೀರಂಗಪಟ್ಟಣ ತಾಲೂಕಿನ ಅರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಅರೆ ಕೆರೆ ಗ್ರಾಮದ ಬಳಿಯ ಚಿಕ್ಕದೇವರಾಜ ನಾಲೆಯಲ್ಲಿ 40 ರಿಂದ 45 ವರ್ಷ ವಯಸ್ಸಿನ ಮಹಿಳೆಯ ಮೃತದೇಹ ತೇಲಿ ಬಂದು ರೈತನ ಜಮೀನಿನಲ್ಲಿ ಸಿಕ್ಕಿದೆ. ಮತ್ತೊಂದು ಪಾಂಡವಪುರ ತಾಲೂಕಿನ ಬೇಬಿ ಕೆರೆ- ಕೆ.ಬೆಟ್ಟಹಳ್ಳಿ ಮಾರ್ಗ ಮಧ್ಯೆ ಇರುವ ಬೇಬಿ ಕೆರೆಯ ನಾಲೆಯಲ್ಲಿ 30 ರಿಂದ 35 ವರ್ಷದ ಮಹಿಳೆಯ ಶವ ದೊರೆತಿದೆ.
ನಾಲೆಗಳಲ್ಲಿ ಪತ್ತೆಯಾದ ಎರಡೂ ಶವಗಳನ್ನು ಅರ್ಧಭಾಗವನ್ನಾಗಿ ಕತ್ತರಿಸಿ ಚೀಲದಲ್ಲಿ ಹಾಕಿ ಎರಡು ಕಾಲುಗಳನ್ನು ಕಟ್ಟಿ ನೀರಿಗೆ ಎಸೆದಿದ್ದಾರೆ. ಪೊಲೀಸರು ಪ್ಲಾಸ್ಟಿಕ್ ಚೀಲದಿಂದ ದೇಹದ ಭಾಗಗಳನ್ನು ವಶಪಡಿಸಿಕೊಂಡು, ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪ್ರಕರಣದಲ್ಲಿ ಹತ್ಯೆಯಾಗಿರುವ ಇಬ್ಬರು ಮಹಿಳೆಯ ಬಗ್ಗೆ ಮಾಹಿತಿ ಕಲೆ ಹಾಕಿ ಈ ಪ್ರಕರಣ ಕಂಡುಹಿಡಿಯಲು ವಿಶೇಷ ಪೊಲೀಸ್ ತಂಡ ರಚಿಸಲಾಗಿದೆ.
ನಿನ್ನೆಯಷ್ಟೆ ದಲಿತ ಸಮುದಾಯದ ಹುಡುಗನನ್ನು ಪ್ರೀತಿಸಿದ್ದಕ್ಕಾಗಿ 17 ವರ್ಷದ ಬಾಲಕಿಯನ್ನು ಆಕೆಯ ತಂದೆಯೆ ಕತ್ತು ಹಿಸುಕಿ ಕೊಂದಿರುವ ಹೀನಾಯ ಘಟನೆ ಮೈಸೂರಿನ ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ಗ್ರಾಮದಿಂದ ವರದಿಯಾಗಿದೆ. ಮಗಳನ್ನು ಕೊಂದ ಬಂತರ ಆರೋಪಿ ಠಾಣೆಗೆ ತೆರಳಿ ಪೊಲೀಸರ ಮುಂದೆ ಶರಣಾಗಿದ್ದಾನೆ.
ಇದನ್ನೂ ಓದಿ: ಮೈಸೂರು: ದಲಿತ ಹುಡುಗನನ್ನು ಪ್ರೀತಿಸಿದ್ದಕ್ಕೆ ಮಗಳನ್ನೆ ಕತ್ತುಹಿಸುಕಿ ಕೊಂದ ತಂದೆ


