Homeಅಂಕಣಗಳುಮಾತು ಮರೆತ ಭಾರತ; ಬೆಲ್ಚಿ ಫೈಲ್: ಭಾರತವನ್ನು ಬೆಚ್ಚಿ ಬೀಳಿಸಿದ ದಲಿತರ ನರಮೇಧ

ಮಾತು ಮರೆತ ಭಾರತ; ಬೆಲ್ಚಿ ಫೈಲ್: ಭಾರತವನ್ನು ಬೆಚ್ಚಿ ಬೀಳಿಸಿದ ದಲಿತರ ನರಮೇಧ

- Advertisement -
- Advertisement -

ದಲಿತರು ಎಚ್ಚೆತ್ತು ತಿರುಗಿಬಿದ್ದರೆ ದಲಿತೇತರರ ದೃಷ್ಟಿಯಲ್ಲಿ ನಾಯಕರಾಗುವುದಿಲ್ಲ. ಖಳನಾಯಕರೋ ಅಥವಾ ಉಗ್ರವಾದಿಗಳೋ ಆಗಿಬಿಡುತ್ತಾರೆ. ಇಂತಹ ಒಂದು ಪ್ರಕರಣಕ್ಕೆ ಮುಖ್ಯ ಉದಾಹರಣೆ ಬೆಲ್ಚಿ. ಬಿಹಾರದ ಗಡಿ ಭಾಗದ ಪುಟ್ಟ ಹಳ್ಳಿಯೇ ಬೆಲ್ಚಿ. ಪಾಟ್ನಾದಿಂದ ಸುಮಾರು 90 ಕಿಮೀ ದೂರದಲ್ಲಿದೆ. ಇಂದಿಗೂ ಸಹ ಕಳೆಕಟ್ಟಿಕೊಳ್ಳದೆ ಕುಗ್ರಾಮವಾಗಿಯೇ ಉಳಿದಿದೆ. ಮೇ 27, 1977ರಂದು ದೇಶವನ್ನೇ ಬೆಚ್ಚಿಬೀಳಿಸಿದ ಘಟನೆಯೊಂದು ಇಲ್ಲಿ ನಡೆದಿತ್ತು. ಅಲ್ಲಿ ನಡೆದ ನರಮೇಧವು ಕರ್ನಾಟಕದ ಚಿಂತಾಮಣಿ ತಾಲ್ಲೂಕಿನ ಗೊಲ್ಲಹಳ್ಳಿ ಶಿವಪ್ರಸಾದ್ ಎಂಬ ಯುವಕನನ್ನೂ ಕಾಡಿತ್ತು. ಬೆಚ್ಚಿ ಬೀಳಿಸಿ ಆಕ್ರೋಶಭರಿತರನ್ನಾಗಿಸಿ ಪ್ರತಿಕ್ರಿಯಿಸುವಂತೆ ಮಾಡಿತ್ತು. ಆಗ ಮೂಡಿದ ಕವಿತೆಯೇ ಮುಂದೆ ಹಾಡಾಗಿ ಕೆಂಡವಾಯಿತು.

ಕಾಶಿ ಕಂಚಿ ಕಾಳಹಸ್ತಿ
ಕಾಣುವಂತ ಕಣ್ಣಿಗೆ
ಬೆಲ್ಚಿ ಪಿಪ್ರ ಕೆಸ್ತಾರ
ಕಾಣಲಿಲ್ಲ ಯಾಕೆ?

ಎಂಬ ಸಾಲುಗಳನ್ನು ಕವಿ ಗೊಲ್ಲಹಳ್ಳಿ ಶಿವಪ್ರಸಾದ್ ಅವರಿಂದ ಬರೆಸಿತ್ತು ಈ ಘಟನೆ. ಹಾಗಾದರೆ ಅಲ್ಲಿ ನಡೆದದ್ದಾದರೂ ಏನು?

ಎಪ್ಪತ್ತರ ದಶಕದಲ್ಲಿ ಹಲವು ರಾಜಕೀಯ ಸ್ಥಿತ್ಯಂತರಗಳು ನಡೆದವು. 1977ರಷ್ಟೊತ್ತಿಗೆ ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರವನ್ನು ಕಳೆದುಕೊಂಡಿತ್ತು. ಜನತಾ ಪಕ್ಷದ ಮೊರಾರ್ಜಿ ದೇಸಾಯಿಯವರ ಸರ್ಕಾರ ರಚನೆಯಾಗಿತ್ತು. ಬಿಹಾರದಲ್ಲಿ ಜನತಾ ಪಕ್ಷದ ಕರ್ಪೂರಿ ಠಾಕೂರ್ ಮುಖ್ಯಮಂತ್ರಿಯಾಗಿದ್ದರು. ಬೆಲ್ಚಿಯ ನರಮೇಧದ ನಂತರ ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಲು ಕುಗ್ರಾಮವಾದ ಬೆಲ್ಚಿಯನ್ನು ಆನೆಯ ಮೇಲೆ ಕುಳಿತು ಪ್ರವೇಶಿಸಿದ್ದ ಇಂದಿರಾಗಾಂಧಿಯವರು ದಿನಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸಿದ್ದರು.

ಬೆಲ್ಚಿಯಲ್ಲಿ ಎರಡು ಭೂಮಾಲೀಕ ತಂಡಗಳ ನಡುವೆ ವೈಷಮ್ಯವಿತ್ತು. ಒಂದು ಭೂಮಾಲೀಕ ತಂಡದ ನಾಯಕ ಮಹಾವೀರ್ ಹಾಗೂ ಮತ್ತೊಂದರ ನಾಯಕ ಪರಶುರಾಮ್. ಇಬ್ಬರೂ ಕುರ್ಮಿ ಜಾತಿಗೆ ಸೇರಿದವರು. ಇವರಿಬ್ಬರ ನಡುವೆಯೂ ಆಗಾಗ ಕಲಹಗಳು ಏರ್ಪಡುತ್ತಿದ್ದವು. ಇವರಿಬ್ಬರ ಬೆನ್ನಿಗೆ ರಾಜಕೀಯ ನಾಯಕರ ಬಲವೂ ಇತ್ತು. ಇವರಿಬ್ಬರದ್ದು ಭೂಮಾಲೀಕರ ನಡುವಿನ ಸಂಘರ್ಷವಾದರೇ ಬೆಲ್ಚಿಯ ದಲಿತ ಯುವತಿಯನ್ನು ಮದುವೆಯಾಗಿದ್ದ ಸಿದ್ದೇಶ್ವರ ಪಾಸ್ವಾನ್ ದಲಿತ ಕೂಲಿಗಳನ್ನು ಸಂಘಟಿಸುವ ಕೆಲಸಕ್ಕೆ ಇಳಿದು ಈ ಇಬ್ಬರು ಭೂಮಾಲೀಕರ ದ್ವೇಷ ಕಟ್ಟಿಕೊಂಡಿದ್ದನು. ಕಿಲ್ವೇನ್ಮಣಿಯಲ್ಲಿ ನಡೆದಂತೆ ಇಲ್ಲಿಯೂ ಸಹ ಕೃಷಿ ಕೂಲಿಗಳು ಕೂಲಿಯ ಹಣವನ್ನು ಹೆಚ್ಚು ಮಾಡಬೇಕೆಂದು ಆಗ್ರಹಿಸುತ್ತಿದ್ದರು.

ಮಹಾವೀರ್ ಮಹತೋ ಹಾಗೂ ಪರಶುರಾಮ್ ಅವರ ಭೂಮಿಯಲ್ಲಿ ಕೆಲಸ ಮಾಡುತ್ತಿದ್ದ ದಲಿತರನ್ನೂ ಹಾಗೂ ಹಿಂದುಳಿದ ಜಾತಿಯ ಸೋನಾರರನ್ನೂ ಆ ಭೂಮಾಲೀಕರು ಶೋಷಿಸುತ್ತಿದ್ದರು. ಮಹಾವೀರನ ದಬ್ಬಾಳಿಕೆ ಬಹಳವೇ ಹೆಚ್ಚಾದಾಗ ಕೃಷಿ ಕೂಲಿಗಳ ರಕ್ಷಣೆಗೆ ಸಿದ್ದೇಶ್ವರ ಪಾಸ್ವಾನ್ ಧಾವಿಸುತ್ತಿದ್ದನು. ಇದೇ ರೀತಿ ಹಲವು ಸಂಘರ್ಷಗಳು ಏರ್ಪಟ್ಟು ಮಹಾವೀರ್ ಮತ್ತು ಪರಶುರಾಮ್ ಎದುರು ದಿನಬೆಳಗಾಗುವುದರೊಳಗಾಗಿ ಸಿದ್ದೇಶ್ವರ ಪಾಸ್ವಾನ್ ಪ್ರಭಾವ ಬೆಳೆಸಿಕೊಂಡಿದ್ದ. ಕೃಷಿಕೂಲಿಗಳು ಅವನನ್ನು ’ಸಿಂಗ್ವ’ ಎನ್ನುವಷ್ಟು ಎತ್ತರಕ್ಕೆ ಬೆಳೆದನು. ತನ್ನ ವೈರಿಗಳ ಹಿಂದೆ ಬಲಿಷ್ಠ ರಾಜಕಾರಣಿಗಳಿರುವುದನ್ನು ಅರಿತು ತನ್ನದೇ ತಂಡವನ್ನು ಕಟ್ಟಿಕೊಂಡನು. ಹೇಗಿದ್ದರೂ ಪೊಲೀಸ್ ವ್ಯವಸ್ಥೆ ಯಾವಾಗಲೂ ಮೇಲ್ಜಾತಿ ಪರವೇ ಇರುವುದರಿಂದ ಇಲ್ಲಿ ಸಿಂಗ್ವ ಮೇಲೆಯೂ ಕೇಸುಗಳು ದಾಖಲಾದವು. ಹಾಗಂತ ಸಿಂಗ್ವ ಕೈಕಟ್ಟಿ ಕೂತವನೂ ಅಲ್ಲ. ಏಟಿಗೆ ಎದಿರೇಟು ಕೊಟ್ಟವನೇ. ಜಗಳಕ್ಕೆ ಕಾಲು ಕೆರೆದು ನಿಲ್ಲುತ್ತಿದ್ದವನೇ. ಭೂಮಾಲೀಕರ ಬಂದೂಕುಗಳ ವಿರುದ್ಧ ತಾನೂ ಬಂದೂಕಿನ ತಂಡ ಕಟ್ಟಿದವನೇ. ಈ ಹಿಂದೆ ಅವನ ಮೇಲೆ ಎರಡು ಬಾರಿ ಆಕ್ರಮಣವಾಗಿತ್ತಾದರೂ ಎದುರಿಸಿ ನಿಂತಿದ್ದನು. ಹಾಗಾಗಿ ಬಿಹಾರದ ಆಸ್ತಾಮ ತಾಲ್ಲೂಕಿನಲ್ಲಿ ಮೂರನೆಯ ಹೆಸರೂ ಕೇಳಿಬಂದಿತು. ಆ ಹೆಸರೇ ಸಿಂಗ್ವ. ಈತನ ಪ್ರಾಬಲ್ಯ ಅದೆಷ್ಟರ ಮಟ್ಟಿಗೆ ಬೆಳೆಯಿತೆಂದರೆ ಆಸ್ತಾಮದ ಶಾಸಕ ಇಂದ್ರದೇವ್ ಚೌಧರಿ ಹಾಗೂ ಮತ್ತೊಬ್ಬ ರಾಜಕಾರಣಿ ಅರುಣ್ ಚೌಧರಿ ಈತನನ್ನು ತಮ್ಮ ಪರವಾಗಿ ಕೆಲಸ ಮಾಡಲು ಆಹ್ವಾನಿಸುವಷ್ಟು! ಆದರೆ ಈ ಇಬ್ಬರ ಗೆಳೆತನದ ಆಹ್ವಾನವೂ ಅನುಮಾನಾಸ್ಪದವಾದ್ದು ಎಂಬುದು ಸಿಂಗ್ವನಿಗೆ ಅರ್ಥವಾಗದೇ ಹೋದದ್ದು ವಿಪರ್ಯಾಸ.

ಅಂದು ಮೇ 27, 1977. ಸಿಂಗ್ವನ ತಿರುಗಿ ಬೀಳುವಿಕೆಯನ್ನು ತಡೆದುಕೊಳ್ಳಲಾಗದೇ ಪರಿತಪಿಸುತ್ತಿದ್ದ ಮಹಾವೀರ್ ಹಾಗೂ ಪರಶುರಾಮ್ ಆತನನ್ನು ರಾಜಿ ಸಂಧಾನಕ್ಕೆ ಮನೆಗೆ ಕರೆಯುತ್ತಾರೆ. ಇವರ ಸಂಚನ್ನು ತಿಳಿದೇ ಮಹಾವೀರನ ಮನೆಗೆ ಬರುವ ಸಿಂಗ್ವನ ಜೊತೆಗೆ ಹತ್ತು ಮಂದಿ ಕೃಷಿಕೂಲಿಗಳೂ ಇರುತ್ತಾರೆ. ಅವರ ಬಳಿಯೂ ಶಸ್ತ್ರವಿರುತ್ತದೆ. ಆದರೆ ರಾಜಿ ಸಂಧಾನಕ್ಕೆ ಶಸ್ತ್ರಗಳನ್ನು ಕೆಳಗಿಡುವಂತೆ ಮಾತುಕತೆಯಾಗುತ್ತದೆ. ಬಳಿಕ ಸಿಂಗ್ವನ ತಂಡ ನಿಶ್ಯಸ್ತ್ರವಾಗಿ ನಿಲ್ಲುತ್ತದೆ. ಇದೇ ಸಮಯವನ್ನು ಬಳಸಿಕೊಂಡು ಪರಶುರಾಮನ ತಂಡ ತನ್ನ 40 ಬಂದೂಕುಧಾರಿಗಳೊಂದಿಗೆ ಗುಟ್ಟಾಗಿ ಒಳಬಂದು ಸಿಂಗ್ವನನ್ನೂ ಹಾಗೂ ಆತನ ಹತ್ತು ಸ್ನೇಹಿತರನ್ನೂ ಮರಗಳಿಗೆ ಕಟ್ಟಿ ಹಾಕುತ್ತಾರೆ. ಕುರ್ಮಿ ಜನಾಂಗದ ಮಹಿಳೆಯರು ಹಾಗೂ ಮಕ್ಕಳು ಅವರನ್ನು ಸುಡುವ ಸಲುವಾಗಿ ಒಣಗಿದ ಸೌದೆಗಳನ್ನು ಹೆಕ್ಕಿ ತರುತ್ತಾರೆ. ಬಂದೂಕಿನ ನಳಿಕೆಯನ್ನು ತಲೆಯ ಬಳಿ ಇಟ್ಟು ಆ ಹನ್ನೊಂದು ಕೃಷಿ ಕೂಲಿಗಳನ್ನೂ ಕೊಂದುಹಾಕುತ್ತಾರೆ. ನಂತರ ಅವರ ದೇಹಗಳಿಗೆ ಬೆಂಕಿ ಹಚ್ಚುತ್ತಾರೆ. ಸತ್ತ 11 ಕೃಷಿಕೂಲಿಗಳಲ್ಲಿ 9 ಜನ ದಲಿತರೂ ಹಾಗೂ ಮೂವರು ಹಿಂದುಳಿದ ಜಾತಿಯವರೂ ಇರುತ್ತಾರೆ. ಸತತ ಐದು ವರ್ಷಗಳ ಕೃಷಿಕೂಲಿಗಳ ಹೋರಾಟಕ್ಕೆ ಬೃಹತ್ ಹಿನ್ನಡೆಯಾಗುತ್ತದೆ. ಅಂದು ಆ ಘಟನೆ ನಡೆಯುವಾಗ ಇಂದ್ರದೇವ್ ಚೌಧರಿ ಹಾಗೂ ಅರುಣ್ ಚೌಧರಿ ಅಲ್ಲಿಯೇ ಇರುತ್ತಾರೆ.

ಎಂದಿನಂತೆ ಬೇಕಂತಲೇ ತಡವಾಗಿ ಬಂದ ಪೊಲೀಸರು ಮಹಾವೀರ್ ಹಾಗೂ ಪರಶುರಾಮ್ ಮೇಲೆ ಕೇಸು ದಾಖಲಿಸುತ್ತಾರೆ. ಬೇಲ್ ಸಿಗುತ್ತದೆ. ನಂತರ ವಿಚಾರಣೆ ನಡೆದು, ಸೆಷನ್ ಕೋರ್ಟ್ ತೀರ್ಪನ್ನು ಎತ್ತಿಹಿಡಿದ ಹೈಕೋರ್ಟ್ ಮಹಾವೀರ್ ಮತ್ತು ಪರಶುರಾಮನಿಗೆ ಮರಣದಂಡನೆ ವಿಧಿಸುತ್ತದೆ. ಇತರೆ 13 ಜನರಿಗೂ ಜೀವಾವಧಿ ಶಿಕ್ಷೆ ವಿಧಿಸುತ್ತದೆ. ಆದರೆ ಮುಂದೆ ಅವರೆಲ್ಲರಿಗೂ ಸುಪ್ರೀಂ ಕೋರ್ಟ್ ಬೇಲ್ ನೀಡುತ್ತದೆ.

ರಂಗಕರ್ಮಿ ಸಿಜಿಕೆ ಅವರ ನೇತೃತ್ವದಲ್ಲಿ ಕರ್ನಾಟಕದಲ್ಲಿ ’ಬೆಲ್ಚಿ’ ಬೀದಿ ನಾಟಕ ರೂಪುಗೊಂಡು ಬಿಹಾರದ ಬೆಲ್ಚಿ ನರಮೇಧವನ್ನು ಕರ್ನಾಟಕಕ್ಕೆ ಪರಿಚಯಿಸಿತ್ತು. ಬೆಲ್ಚಿಯ ನರಮೇಧದ ವಿರುದ್ಧ ಕರ್ನಾಟಕದಲ್ಲಿಯೂ ದಲಿತ ಸಂಘರ್ಷ ಸಮಿತಿ ಹೋರಾಟ ರೂಪಿಸಿತ್ತು. ನಾಡೋಜ ಸಿದ್ದಲಿಂಗಯ್ಯನವರ ’ದೊಡ್ಡಗೌಡರ ಬಾಗಿಲಿಗೆ ನಮ್ಮ ಮೂಳೆಯ ತ್ವಾರಣ’ ಹಾಡು ಹೋರಾಟದ ಭಾಗವಾಗಿದ್ದು ಈ ನಾಟಕದಿಂದಲೇ ಆಗಿದೆ.


ಇದನ್ನೂ ಓದಿ: ಮಾತು ಮರೆತ ಭಾರತ; ಕಿಲ್ವೇನ್ಮಣಿ ಫೈಲ್: ಸ್ವತಂತ್ರ ಭಾರತದ ಭೀಕರ ಹತ್ಯಾಕಾಂಡ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಬೆಲ್ಚಿಯಂತಹ ದುರ್ಘಟನೆಯ ನಂತರವೂ ಈ ದೇಶದಲ್ಲಿ ದಲಿತರ ಮಾರಣಹೋಮ ನಿಂತಿಲ್ಲ. ಇದು ಈ ದೇಶದ ದುರಂತ.

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...