ಶ್ರೀಲಂಕಾದಲ್ಲಿ ಪ್ರತಿಭಟನೆ ಮತ್ತೇ ತೀವ್ರಗೊಂಡಿದ್ದು, ರಾಜಧಾನಿ ಕೊಲಂಬೊದಲ್ಲಿ ಸಾವಿರಾರು ಪ್ರತಿಭಟನಾಕಾರರು ಪೊಲೀಸ್ ಬ್ಯಾರಿಕೇಡ್‌ಗಳನ್ನು ಭೇದಿಸಿ ಅಧ್ಯಕ್ಷರ ಅಧಿಕೃತ ನಿವಾಸಕ್ಕೆ ಶನಿವಾರ ಮುತ್ತಿಗೆ ಹಾಕಿದ್ದಾರೆ. ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರೂ, ಉದ್ರಿಕ್ತ ಜನರ ಗುಂಪ ಅಧ್ಯಕ್ಷೀಯ ನಿವಾಸವನ್ನು ಸುತ್ತುವರೆದಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಘಟನೆ ಸಂಕ್ಷಿಪ್ತ ಪಾಯಿಂಟ್‌ಗಳು ಇಲ್ಲಿವೆ.
- ಪರಿಸ್ಥಿತಿ ನಿಯಂತ್ರಣ ತಪ್ಪಲಿದೆ ಎಂಬ ಗುಪ್ತಚರ ವರದಿಗಳ ನಂತರ ದೇಶದ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರನ್ನು ಕಳೆದ ರಾತ್ರಿ ಸೇನಾ ಪ್ರಧಾನ ಕಛೇರಿಗೆ ಸ್ಥಳಾಂತರಿಸಲಾಗಿದೆ ಎಂದು ಸರ್ಕಾರದ ಉನ್ನತ ಮೂಲವೊಂದು ಎನ್‌ಡಿಟಿವಿಗೆ ತಿಳಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others - ವಿರೋಧ ಪಕ್ಷಗಳು, ನಾಗರೀಕ ಹಕ್ಕುಗಳ ಕಾರ್ಯಕರ್ತರು ಮತ್ತು ವಕೀಲರ ಸಂಘಗಳ ಕಾನೂನು ಹೋರಾಟದ ನಂತರ ಪೊಲೀಸರು ಕರ್ಫ್ಯೂ ಆದೇಶವನ್ನು ಹಿಂತೆಗೆದುಕೊಂಡಿದ್ದಾರೆ.
- ಕರ್ಫ್ಯೂ ಹಿಂತೆಗೆಯುತ್ತಿದ್ದಂತೆ ಶ್ರೀಲಂಕಾದ ಧ್ವಜಗಳು ಮತ್ತು ಹೆಲ್ಮೆಟ್‌ಗಳನ್ನು ಹಿಡಿದು ಸಾವಿರಾರು ಪ್ರತಿಭಟನಾಕಾರರು ಇಂದು ಬೆಳಿಗ್ಗೆ ಅಧ್ಯಕ್ಷರ ಅಧಿಕೃತ ನಿವಾಸವನ್ನು ಸುತ್ತುವರೆದಿದ್ದಾರೆ.
ಇದನ್ನೂ ಓದಿ: ಇಂಧನ ಮತ್ತು ನಗದು ಬಿಕ್ಕಟ್ಟು: ಶಾಲೆಗಳಿಗೆ ರಜೆ ಘೋಷಿಸಿದ ಶ್ರೀಲಂಕಾ
- ಈ ವೇಳೆ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದರಾದರೂ, ಉದ್ರಿಕ್ತ ಗುಂಪನ್ನು ಅಧ್ಯಕ್ಷೀಯ ನಿವಾಸವನ್ನು ಸುತ್ತುವರಿಯುವುದನ್ನು ತಡೆಯಲು ಸಾಧ್ಯವಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಸುದ್ದಿ ಸಂಸ್ಥೆ AFP ಗೆ ತಿಳಿಸಿದ್ದಾರೆ.
- “ವಿಫಲ ನಾಯಕನನ್ನು ಹೊರಹಾಕುವ ಏಕೈಕ ಗುರಿಯೊಂದಿಗೆ ದೇಶವು ಇಷ್ಟೊಂದು ಒಗ್ಗಟ್ಟಾಗಿರುವುದು ನಾನು ನನ್ನ ಇಡೀ ಜೀವ ಮಾನದಲ್ಲೇ ನೋಡಿಲ್ಲ. ಬರಹ ಈಗ ನಿಮ್ಮ ಅಧಿಕೃತ ಮನೆಯ ಗೋಡೆಯಲ್ಲಿದೆ. ದಯವಿಟ್ಟು ಶಾಂತಿಯಿಂದ ಹೋಗಿ” ಎಂದು ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ, ಮನಗೆ ಹೋಗಿ ಗೊಟಬಯ” ಎಂದು ಟ್ವೀಟ್ ಮಾಡಿದ್ದಾರೆ.
ये श्रीलंका के राष्ट्रपति निवास की तस्वीरें है,
श्रीलंका की सरकार ने पिछले कुछ सालों में देश को राष्ट्रवाद, कट्टरवाद की आग में धकेला था, आज उसके नतीजे सामने है । pic.twitter.com/U9OHzQHfGf
— Srinivas BV (@srinivasiyc) July 9, 2022
- ಶ್ರೀಲಂಕಾ ತೀವ್ರವಾದ ವಿದೇಶಿ ವಿನಿಮಯ ಕೊರತೆಯಿಂದ ನರಳುತ್ತಿದೆ. ಇದರಿಂದಾಗಿ ಇಂಧನ, ಆಹಾರ ಮತ್ತು ಔಷಧಿಗಳ ಅಗತ್ಯ ಆಮದುಗಳನ್ನು ಸೀಮಿತಗೊಂಡಿದೆ.
- ದೇಶವೂ ಏಳು ದಶಕಗಳಲ್ಲೇ ಅತ್ಯಂತ ಕೆಟ್ಟ ಆರ್ಥಿಕ ಪ್ರಕ್ಷುಬ್ಧತೆಯಲ್ಲಿ ಮುಳುಗಿಸಿದೆ.
ಇದನ್ನೂ ಓದಿ:ಅದಾನಿಗೆ ಗುತ್ತಿಗೆ ನೀಡಲು ಶ್ರೀಲಂಕಾ ಅಧ್ಯಕ್ಷರ ಮೇಲೆ ಮೋದಿ ಒತ್ತಡ; ಆರೋಪ ಮಾಡಿದ್ದ ಅಧಿಕಾರಿ ರಾಜೀನಾಮೆ
- ದೇಶದ ಅವನತಿಗೆ ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಅವರೇ ಕಾರಣ ಎಂದು ಹಲವರು ದೂಷಿಸುತ್ತಿದ್ದಾರೆ.
- ಶ್ರೀಲಂಕಾದಲ್ಲಿ ಮಾರ್ಚ್ ತಿಂಗಳಿನಿಂದಲೇ ಶಾಂತಿಯುತ ಪ್ರತಿಭಟನೆಗಳು ನಡೆಯುತ್ತಿದ್ದು ಅವರ ರಾಜೀನಾಮೆಗೆ ಒತ್ತಾಯಿಸಲಾಗುತ್ತಿವೆ.


