Homeಕರ್ನಾಟಕಇಂಧನ ಮತ್ತು ನಗದು ಬಿಕ್ಕಟ್ಟು: ಶಾಲೆಗಳಿಗೆ ರಜೆ ಘೋಷಿಸಿದ ಶ್ರೀಲಂಕಾ

ಇಂಧನ ಮತ್ತು ನಗದು ಬಿಕ್ಕಟ್ಟು: ಶಾಲೆಗಳಿಗೆ ರಜೆ ಘೋಷಿಸಿದ ಶ್ರೀಲಂಕಾ

- Advertisement -
- Advertisement -

ಭಾರಿ ಇಂಧನ ಮತ್ತು ಹಣದ ಬಿಕ್ಕಟ್ಟಿನಿಂದಾಗಿ ಶ್ರೀಲಂಕಾದ ಶಿಕ್ಷಣ ಸಚಿವಾಲಯವು ಎಲ್ಲಾ ಸರ್ಕಾರಿ ಮತ್ತು ರಾಜ್ಯ-ಅನುಮೋದಿತ ಖಾಸಗಿ ಶಾಲೆಗಳಿಗೆ ಜುಲೈ 4 ರಿಂದ ರಜಾ ವಾರವನ್ನು ಘೋಷಿಸಿದೆ. ಮುಂದಿನ ರಜೆಯ ಅವಧಿಯಲ್ಲಿ ಶಾಲೆಗಳು ಈ ಪಠ್ಯಗಳನ್ನು ಬೋಧಿಸಲಿದೆ ಎಂದು ಶ್ರೀಲಂಕಾದ ಶಿಕ್ಷಣ ಸಚಿವ ಹೇಳಿದ್ದಾರೆ.

“ದೀರ್ಘಕಾಲದ ವಿದ್ಯುತ್ ಕಡಿತದಿಂದಾಗಿ ಕೊಲಂಬೊ ನಗರ ಮಿತಿಗಳಲ್ಲಿನ ಎಲ್ಲಾ ಸರ್ಕಾರಿ ಮತ್ತು ಸರ್ಕಾರಿ-ಅನುಮೋದಿತ ಖಾಸಗಿ ಶಾಲೆಗಳು ಮತ್ತು ಇತರ ಪ್ರಾಂತ್ಯಗಳ ಇತರ ಪ್ರಮುಖ ನಗರಗಳಲ್ಲಿನ ಶಾಲೆಗಳನ್ನು ಮುಂದಿನ ವಾರದಲ್ಲಿ ಮುಚ್ಚಲಾಗುವುದು” ಎಂದು ಶಿಕ್ಷಣ ಸಚಿವಾಲಯವು ಭಾನುವಾರ ಪ್ರಕಟಿಸಿದೆ ಎಂದು ಡೈಲಿ ಮಿರರ್ ವರದಿ ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಶ್ರೀಲಂಕಾ ಸರ್ಕಾರವೂ ಈ ಹಿಂದೆ ಕೂಡಾ ಜೂನ್ 18 ರಂದು ಎಲ್ಲಾ ಶಾಲೆಗಳನ್ನು ಒಂದು ವಾರ ಮುಚ್ಚುವುದಾಗಿ ಘೋಷಿಸಿತ್ತು.

ಇದನ್ನೂ ಓದಿ: ಶ್ರೀಲಂಕಾ ಬಿಕ್ಕಟ್ಟಿನ ಬೀಜಗಳು

ಶ್ರೀಲಂಕಾ ಶಿಕ್ಷಣ ಸಚಿವಾಲಯದ ಕಾರ್ಯದರ್ಶಿ ನಿಹಾಲ್ ರಣಸಿಂಗ್ ಅವರು ಶಾಲೆಗಳಿಗೆ ಆನ್‌ಲೈನ್ ತರಗತಿಗಳನ್ನು ನಡೆಸುವಂತೆ ಕೇಳಿಕೊಂಡಿದ್ದು, “ಸಾರಿಗೆಯ ತೊಂದರೆಗಳು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪ್ರಾಂಶುಪಾಲರ ಮೇಲೆ ಪರಿಣಾಮ ಬೀರದ ಪರಿಸ್ಥಿತಿಗಳಲ್ಲಿ ವಿಭಾಗೀಯ ಮಟ್ಟದಲ್ಲಿ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳೊಂದಿಗೆ ತರಗತಿಗಳನ್ನು ನಡೆಸಲು ಅನುಮತಿಸಲಾಗುವುದು” ಎಂದು ಹೇಳಿದ್ದಾರೆ.

ವಾರದ ದಿನಗಳಲ್ಲಿ ಆನ್‌ಲೈನ್ ಬೋಧನೆಗೆ ಅನುಕೂಲವಾಗುವಂತೆ ಶ್ರೀಲಂಕಾದ ಲೋಕೋಪಯೋಗಿ ಆಯೋಗವು (PUCSL) ಬೆಳಗ್ಗೆ 8 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ವಿದ್ಯುತ್ ಕಡಿತಗೊಳಿಸದಿರಲು ಒಪ್ಪಿಕೊಂಡಿದೆ ಎಂದು ಅವರು ಘೋಷಿಸಿದ್ದಾರೆ ಎಂದು ಡೈಲಿ ಮಿರರ್ ವರದಿ ಮಾಡಿದೆ.

ಶ್ರೀಲಂಕಾ ಈ ಹಿಂದೆ ಮೇಲ್ಮಧ್ಯಮ ಆದಾಯದ ದೇಶವಾಗಿತ್ತು. 1948 ರಲ್ಲಿ ದೇಶವು ಸ್ವಾತಂತ್ರ್ಯ ಗಳಿಸಿದಾಗಿನಿಂದ ದಾಖಲೆಯ ಆರ್ಥಿಕ ಬಿಕ್ಕಟ್ಟಗೆ ಸಿಲುಕಿದೆ. ಕಳೆದ ಮಾರ್ಚ್‌ನಿಂದ ದೇಶದಲ್ಲಿ ತೀವ್ರ ಅರ್ಥಿಕ ಬಿಕ್ಕಟ್ಟು ಪ್ರಾರಂಭವಾಗಿದ್ದು, ಭಾರಿ ಪ್ರತಿಭಟನೆಗಳು ನಡೆಯುತ್ತಿವೆ.

ಇದನ್ನೂ ಓದಿ: ಅದಾನಿಗೆ ಗುತ್ತಿಗೆ ನೀಡಲು ಶ್ರೀಲಂಕಾ ಅಧ್ಯಕ್ಷರ ಮೇಲೆ ಮೋದಿ ಒತ್ತಡ; ಆರೋಪ ಮಾಡಿದ್ದ ಅಧಿಕಾರಿ ರಾಜೀನಾಮೆ

ತೀವ್ರ ಪ್ರತಿಭಟನೆಗಳು ರಾಜಕೀಯ ಅಶಾಂತಿಯನ್ನು ಹುಟ್ಟುಹಾಕಿದ್ದು, ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರ ಸಹೋದರ ಮಹಿಂದಾ ರಾಜಪಕ್ಸೆ ತಮ್ಮ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ಬದಲಾಗಿ ರನಿಲ್ ವಿಕ್ರಮಸಿಂಘೆ ಅವರನ್ನು ಮೇ ತಿಂಗಳಲ್ಲಿ ದೇಶದ ಪ್ರಧಾನಿಯಾಗಿ ನೇಮಿಸಲಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭಾ ಚುನಾವಣೆ: ಕರ್ನಾಟಕದ 14 ಕ್ಷೇತ್ರಗಳು ಸೇರಿದಂತೆ 13 ರಾಜ್ಯಗಳ 88 ಕ್ಷೇತ್ರಗಳಲ್ಲಿ ಇಂದು...

0
ಲೋಕಸಭಾ ಚುನಾವಣೆಯ ಹಿನ್ನೆಲೆ ಎರಡನೇ ಹಂತದಲ್ಲಿ ಕರ್ನಾಟಕ ಸೇರಿದಂತೆ ಒಟ್ಟು 13 ರಾಜ್ಯಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ಎರಡನೇ ಹಂತದಲ್ಲಿ ಕರ್ನಾಟಕದ 14 ಕ್ಷೇತ್ರಗಳು ಸೇರಿದಂತೆ ದೇಶದ 88 ಕ್ಷೇತ್ರಗಳಿಗೆ ಬೆಳಿಗ್ಗೆ 7ರಿಂದ  ಮತದಾನ...