Homeರಾಜಕೀಯಯುಪಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ವತಂತ್ರ ದೇವ್ ಸಿಂಗ್ ರಾಜೀನಾಮೆ

ಯುಪಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ವತಂತ್ರ ದೇವ್ ಸಿಂಗ್ ರಾಜೀನಾಮೆ

ರಾಜ್ಯ ಘಟಕದ ಮುಖ್ಯಸ್ಥರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಂಪ್ರದಾಯ ಬಿಜೆಪಿಯಲ್ಲಿ ಇಲ್ಲ

- Advertisement -
- Advertisement -

ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಸ್ವತಂತ್ರ ದೇವ್ ಸಿಂಗ್ ಅವರು ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಸ್ವತಂತ್ರ ದೇವ್‌ ಅವರು ಪ್ರತಿಕ್ರಿಯಿಸಲು ನಿರಾಕರಿಸಿದ್ದು, ಮೂರು ದಿನಗಳ ಹಿಂದೆ ಅವರು ಜೆಪಿ ನಡ್ಡಾ ಅವರಿಗೆ ರಾಜೀನಾಮೆ ನೀಡಿದ್ದಾರೆ ಎಂದು ಅವರ ನಿಕಟ ಮೂಲಗಳನ್ನು ಉಲ್ಲೇಖಿಸಿ ಟೈಮ್ಸ್‌ ಆಫ್ ಇಂಡಿಯಾ ವರದಿ ಮಾಡಿವೆ. ಅವರ ಮೂರು ವರ್ಷಗಳ ಅಧಿಕಾರಾವಧಿಯು ಜುಲೈ 16 ರಂದು ಕೊನೆಗೊಂಡಿತ್ತು.

ತಾನು ದಲಿತ ಎಂಬ ಕಾರಣಕ್ಕೆ ರಾಜ್ಯ ಸರ್ಕಾರವು ತನ್ನ ಮೇಲೆ ದುರುದ್ದೇಶ ಹೊಂದಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೂಲಕ ತಮ್ಮ ರಾಜೀನಾಮೆ ನೀಡಿದ್ದ ಕಿರಿಯ ಸಚಿವ ದಿನೇಶ್ ಖಾಟಿಕ್ ಅವರ ರಾಜೀನಾಮೆಯ ಕೆಲವೇ ದಿನಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜ್ಯದ ನೀರಾವರಿ ಸಚಿವರೂ ಆಗಿರುವ ಸ್ವತಂತ್ರ ದೇವ್‌ ಅವರು ರಾಜೀನಾಮೆ ನೀಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ನೀರಾವರಿ ಇಲಾಖೆಯ ಒಟ್ಟಾರೆ ಕಾರ್ಯನಿರ್ವಹಣೆ ಮಾಡುತ್ತಿದ್ದ ಸ್ವತಂತ್ರ ದೇವ್‌‌ ಮತ್ತು ಅವರ ಅಧಿಕಾರಿಗಳ ತಂಡದೊಂದಿಗೆ ಕಿರಿಯ ಸಚಿವರಾಗಿದ್ದ ದಿನೇಸ್‌ ಖಟಿಕ್ ಅಸಮಾಧಾನಗೊಂಡಿದ್ದರು ಎಂದು ವರದಿಯಾಗಿದೆ.

ದಿನೇಶ್‌ ಖಟಿಕ್ ಅವರು ಸಿಎಂ ಆದಿತ್ಯನಾಥ್ ಅವರನ್ನು ಭೇಟಿಯಾದ ನಂತರ ತಮ್ಮ ಭಿನ್ನಾಭಿಪ್ರಾಯಗಳನ್ನು ಹೊರಹಾಕಿದ್ದಾರೆ. ಆದರೆ ಆರ್‌ಎಸ್‌ಎಸ್‌ನೊಂದಿಗಿನ ಸ್ವತಂತ್ರ ದೇವ್‌ ಅವರ ನಿಕಟ ಸಂಬಂಧವು ಯುಪಿ ಬಿಜೆಪಿ ಹುದ್ದೆಯನ್ನು ಬಿಟ್ಟುಕೊಡುವಂತೆ ಮಾಡಿರುವ ಸಾಧ್ಯತೆಯಿದೆ ಎಂದು ಬಿಜೆಪಿ ಮೂಲಗಳನ್ನು ಉಲ್ಲೇಖಿಸಿ ಟೈಮ್ಸ್‌ ಆಫ್ ಇಂಡಿಯಾ ವರದಿ ಮಾಡಿದೆ.

ಇದನ್ನೂ ಓದಿ: ಉತ್ತರ ಪ್ರದೇಶ: ದಲಿತ ಬಾಲಕಿಯರನ್ನು ಶಾಲಾ ಸಮವಸ್ತ್ರ ತೆಗೆಯುವಂತೆ ಒತ್ತಾಯಿಸಿದ ಶಿಕ್ಷಕರು

2014ರ ಲೋಕಸಭೆ ಚುನಾವಣೆಯ ನಂತರ ಬಿಜೆಪಿಯನ್ನು ಬೆಂಬಲಿಸುತ್ತಿರುವ ದಲಿತರು ಮತ್ತು ಸಾಮಾಜಿಕವಾಗಿ ತುಳಿತಕ್ಕೊಳಗಾದವರ ಬಗ್ಗೆ ಸೌಹಾರ್ದಯುತವಾಗಿ ವರ್ತಿಸುವ ಅಗತ್ಯವನ್ನು ಆರ್‌ಎಸ್‌ಎಸ್ ಇತ್ತೀಚೆಗೆ ಒತ್ತಿ ಹೇಳುತ್ತಿದೆ.

ಸ್ವತಂತ್ರ ದೇವ್‌ ಅವರಂತೆ, ದಿನೇಶ್‌ ಕಟಿಕ್ ಕೂಡಾ ಆರ್‌ಎಸ್‌ಎಸ್‌ ಜೊತೆಗೆ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದ್ದರು. 2017 ಮತ್ತು 2022 ರ ವಿಧಾನಸಭಾ ಚುನಾವಣೆಯಲ್ಲಿ ಮೀರತ್‌ನ ಹಸ್ತಿನಾಪುರ ಮೀಸಲು ಸ್ಥಾನದಿಂದ ಗೆದ್ದಿರುವ ಅವರ ಸಚಿವ ಸ್ಥಾನಕ್ಕೆ ಏರಿದ್ದರು. ದಿನೇಶ್‌ ಖಟಿಕ್‌ ಅವರ ಅಜ್ಜ ಬನ್ವಾರಿ ಖಟಿಕ್ ಮತ್ತು ತಂದೆ ದೇವೇಂದ್ರ ಕುಮಾರ್ ಕೂಡ ಆರ್‌ಎಸ್‌ಎಸ್ ಪದಾಧಿಕಾರಿಗಳಾಗಿದ್ದರು.

ವೈದ್ಯಕೀಯ ಮತ್ತು ಆರೋಗ್ಯ ಖಾತೆಯನ್ನು ಹೊಂದಿರುವ, ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್‌ ಮತ್ತು ಪಿಡಬ್ಲ್ಯೂಡಿ ಸಚಿವ ಜಿತಿನ್ ಪ್ರಸಾದ ಸೇರಿದಂತೆ ಇತರ ಹಲವು ಹಿರಿಯ ಸಚಿವರು, ತಮ್ಮ ಇಲಾಖೆಗಳಲ್ಲಿನ ಅಧಿಕಾರಿಗಳನ್ನು ವಿವಾದಾತ್ಮಕವಾಗಿ ವರ್ಗಾವಣೆ ಮಾಡಿದ್ದಾರೆ ಎಂದು ದಿನೇಶ್‌ ಖಟಿಕ್‌ ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: ದಲಿತ, ಒಬಿಸಿ ಅಥವಾ ಬ್ರಾಹ್ಮಣ: ಉತ್ತರ ಪ್ರದೇಶದ ಬಿಜೆಪಿ ಮುಖ್ಯಸ್ಥರು ಯಾರಾಗುತ್ತಾರೆ?

ವಿಶೇಷವೇನೆಂದರೆ, ರಾಜ್ಯ ಘಟಕದ ಮುಖ್ಯಸ್ಥರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಂಪ್ರದಾಯವನ್ನು ಬಿಜೆಪಿ ಹೊಂದಿಲ್ಲ. ಸ್ವತಂತ್ರ ದೇವ್‌ ಸಿಂಗ್ ಅವರಿಗಿಂತ ಮೊದಲು, ಕಲ್ರಾಜ್ ಮಿಶ್ರಾ ಮತ್ತು ಸೂರ್ಯ ಪ್ರತಾಪ್ ಶಾಹಿ ಅವರು ಕ್ರಮವಾಗಿ 2002 ಮತ್ತು 2012 ರಲ್ಲಿ ಯುಪಿ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು. ಆದರೆ ಅದು ಆಗ ನಡೆದ ರಾಜ್ಯ ಚುನಾವಣೆಯಲ್ಲಿ ಪಕ್ಷದ ಸೋಲಿನ ಕಾರಣಕ್ಕಾಗಿ ನಡೆದಿತ್ತು.

ಸ್ವತಂತ್ರ ಸಿಂಗ್ ಅಧಿಕಾರವಧಿಯಲ್ಲಿ ಬಿಜೆಪಿಯು ರಾಜ್ಯದ ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ ಮತ್ತೊಮ್ಮೆ ಸತತವಾಗಿ ಯುಪಿಯಲ್ಲಿ ಅಧಿಕಾರಕ್ಕೆ ಮರಳಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read