Homeಮುಖಪುಟವಿಧಾನ ಪರಿಷತ್ ಚುನಾವಣೆ: ಬಾಬೂರಾವ್ ಚಿಂಚನಸೂರ್‌ಗೆ ಬಿಜೆಪಿ ಟಿಕೆಟ್

ವಿಧಾನ ಪರಿಷತ್ ಚುನಾವಣೆ: ಬಾಬೂರಾವ್ ಚಿಂಚನಸೂರ್‌ಗೆ ಬಿಜೆಪಿ ಟಿಕೆಟ್

- Advertisement -
- Advertisement -

ಸಿ.ಎಂ ಇಬ್ರಾಹಿಂರವರು ರಾಜೀನಾಮೆ ನೀಡಿದ್ದರಿಂದ ತೆರವಾಗಿರುವ ವಿಧಾನ ಪರಿಷತ್ ಸದಸ್ಯತ್ವ ಸ್ಥಾನಕ್ಕೆ ಆಗಸ್ಟ್ 11 ರಂದು ಚುನಾವಣೆ ನಡೆಯಲಿದ್ದು, ಬಿಜೆಪಿ ಪಕ್ಷವು ಬಾಬೂರಾವ್ ಚಿಂಚನಸೂರ್‌ಗೆ ಟಿಕೆಟ್ ಘೋಷಿಸಿದೆ.

ಸಿಎಂ ಇಬ್ರಾಹಿಂರವರು ಕಾಂಗ್ರೆಸ್‌ನಿಂದ ವಿಧಾನಪರಿಷತ್ ಸದಸ್ಯರಾಗಿದ್ದರು. ಆ ನಂತರ ಕಾಂಗ್ರೆಸ್ ತೊರೆದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹಾಗಾಗಿ  ಆ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ನಾಮಪತ್ರ ಸಲ್ಲಿಸಲು ಆಗಸ್ಟ್ 1 ಕಡೆಯ ದಿನವಾಗಿದೆ.

ಕೋಲಿ ಸಮುದಾಯದವರಾದ ಚಿಂಚನಸೂರ್‌ರವರು ಪಕ್ಷದ ಒಳಗೆ ಭಿನ್ನಮತ ವ್ಯಕ್ತಪಡಿಸಿದ್ದರು. ವಿ.ಸೋಮಣ್ಣನವರ ಜೊತೆ ವಾಗ್ವಾದ ನಡೆಸಿ ಪಕ್ಷ ತ್ಯಜಿಸುವ ಸುಳಿವು ನೀಡಿದ್ದರು. ತಮ್ಮ ಹಳೆ ಪಕ್ಷ ಕಾಂಗ್ರೆಸ್‌ನತ್ತ ಚಿತ್ತ ನೆಟ್ಟಿದ್ದರು. ಈಗ ಅವರಿಗೆ ಟಿಕೆಟ್ ನೀಡಿ ಸಮಾಧಾನಪಡಿಸಲಾಗಿದೆ ಎನ್ನಲಾಗುತ್ತಿದೆ.

ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಇದುವರೆಗೂ ಅಭ್ಯರ್ಥಿಯನ್ನು ಘೋಷಿಸಿಲ್ಲ.

ಇದನ್ನೂ ಓದಿ: ಭಾರತಕ್ಕೆ ಬಂತು ಮೊದಲ ಪದಕ: ವೇಟ್ ಲಿಫ್ಟಿಂಗ್‌ನಲ್ಲಿ ಸಂಕೇತ್ ಸರ್ಗರ್‌ಗೆ ಬೆಳ್ಳಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿಯನ್ನು ಟೀಕಿಸಿದ್ದಕ್ಕೆ ಸ್ವಪಕ್ಷದ ನಾಯಕನ ಬಂಧನ: ಮೌನಕ್ಕೆ ಶರಣಾದ ಬಿಜೆಪಿ ಅಲ್ಪಸಂಖ್ಯಾತ ಘಟಕದ ನಾಯಕರು

0
ಪ್ರಧಾನಿ ನರೇಂದ್ರ ಮೋದಿ ಭಾರತದ ಮುಸ್ಲಿಮರನ್ನು ಅವಮಾನಿಸಬಾರದು. ದೇಶದ ಅಭಿವೃದ್ಧಿಯತ್ತ ಗಮನ ಹರಿಸಬೇಕು. ಈ ಬಗ್ಗೆ ಪ್ರಧಾನಿಯವರಿಗೆ ಪತ್ರ ಬರೆಯುವ ಬಗ್ಗೆ ಕೂಡ ಯೋಚನೆ ಮಾಡುತ್ತಿದ್ದೇನೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದ ಕಾರಣಕ್ಕೆ ಬಿಜೆಪಿ...