ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಕ್ರೀಡಾಕೂಟದ ಎರಡನೇ ದಿನವಾದ ಇಂದು ಭಾರತಕ್ಕೆ ಎರಡನೇ ಪದಕ ಲಭಿಸಿದೆ. 61 ಕೆಜಿ ವಿಭಾಗದ ವೇಟ್ ಲಿಫ್ಟಿಂಗ್‌ನಲ್ಲಿ ಕುಂದಾಪುರದ ಗುರುರಾಜ್ ಪೂಜಾರಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.
ಸ್ನಾಚ್ ವಿಭಾಗದಲ್ಲಿ 118 ಕೆಜಿ ಭಾರ ಎತ್ತಿದ ಅವರು, ಕ್ಲೀನ್ ಅಂಡ್ ಜರ್ಕ್ ವಿಭಾಗದಲ್ಲಿ 151 ಕೆಜಿ ಭಾರ ಎತ್ತುವ ಮೂಲಕ ಒಟ್ಟು 269 ಕೆಜಿ ಭಾರ ಎತ್ತಿ ಕಂಚಿನ ಪದಕ ತಮ್ಮದಾಗಿಸಿಕೊಂಡರು.
ಇನ್ನು 55 ಕೆಜಿ ವಿಭಾಗದಲ್ಲಿ 113 ಕೆಜಿ ಭಾರ ಎತ್ತಿರುವ ಭಾರತದ ಸ್ಪರ್ಧೆಯಲ್ಲಿ ಸಂಕೇತ್ ಸರ್ಗರ್ ಕ್ಲೀನ್ ಅಂಡ್ ಜರ್ಕ್‌ನಲ್ಲಿ ಒಟ್ಟು 135 ಕೆಜಿ ಎತ್ತುವ ಮೂಲಕ ಬೆಳ್ಳಿ ಪದಕಕ್ಕೆ ಭಾಜನರಾದರು.
ಮಲೇಷ್ಯಾದ ಮೊಹಮ್ಮದ್ ಅನಿಕ್ ಕ್ಲೀನ್ ಮತ್ತು ಜರ್ಕ್‌ನಲ್ಲಿ 142 ಕೆಜಿ ಎತ್ತುವ ಮೂಲಕ ಚಿನ್ನದ ಪದಕ ತಮ್ಮದಾಗಿಸಿಕೊಂಡರು.
ಸಂಕೇತ್ ಸರ್ಗರ್ 139 ಕೆಜಿ ಭಾರ ಎತ್ತುವಾಗ ಸತತವಾಗಿ ಎರಡು ಬಾರಿ ಪೌಲ್ ಆದರು ಮತ್ತು ಗಾಯಕ್ಕೊಳಗಾಗಿದ್ದರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
22 ವರ್ಷದ ಸಂಕೇತ್ ಸರ್ಗರ್ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯವರು. ಬಹುಶಿಸ್ತೀನಿ ಸ್ಪರ್ಧೆಯಲ್ಲಿ ಇದು ಅವರ ಮೊದಲ ಪದಕವಾಗಿದೆ.
ಇಂದು ಸ್ಟಾರ್ ವೇಟ್ ಲಿಫ್ಟರ್ ಮೀರಾಭಾಯಿ ಚಾನು ರವರು ಭಾರತದ ಪರವಾಗಿ ಕಣಕ್ಕಿಳಿದಿದ್ದಾರೆ. ಟೋಕಿಯೋ ಒಲಂಪಿಕ್ಸ್ ನ ಬೆಳ್ಳಿ ವಿಜೇತೆ ಆಗಿರುವ ಚಾನು ಕಾಮನ್ ವೆಲ್ತ್ ನ ಪದಕವನ್ನು ಗೆಲ್ಲುವ ಫೆವರೀಟ್‌ಗಳಲ್ಲಿ ಒಬ್ಬರಾಗಿದ್ದಾರೆ.
ಭಾರತದ ಶ್ರೀ ಹರಿ ನಟರಾಜ್ ಪುರುಷರ ವಿಭಾಗದ 100 ಮೀ ಬ್ಯಾಕ್ ಸ್ಟ್ರೋಕ್ ಈಜು ಸ್ಪರ್ಧೆಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದು ಪದಕದ ಭರವಸೆ ಮೂಡಿಸಿದ್ದಾರೆ. ಶುಕ್ರವಾರದ ಪಂದ್ಯದಲ್ಲಿ 54.68. ಸೆ.ಗಳೊಂದಿಗೆ 3 ನೇ ಸ್ಥಾನ ಹಾಗೂ ಪಂದ್ಯದಲ್ಲಿ ಒಟ್ಟಾರೆ 5 ನೇ ಸ್ಥಾನ ಪಡೆದು ಸೆಮಿಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.
ಮಹಿಳಾ ಬಾಕ್ಸರ್ ಟೋಕಿಯೊ ಒಲಂಪಿಕ್ಸ್ ನಲ್ಲಿ ಕಂಚು ಮತ್ತು 2018 ಮತ್ತು 2019 ರ ವಿಶ್ವ ಚಾಂಪಿಯನ್ ಷಿಪ್ ನಲ್ಲಿ ಬೆಳ್ಳಿ ಪದಕ ಪಡೆದಿರುವ ಲವ್ಲೀನಾ ಬೊರ್ಗೊಹೈನ್ ಕಾಮನ್ ವೆಲ್ತ್ ಗೇಮ್ಸ್ ನ ಬಾಕ್ಸಿಂಗ್ ತಂಡದ ನೇತೃತ್ವ ವಹಿಸಿಕೊಂಡಿದ್ದು ಸ್ವರ್ಣ ಪದಕ ಗೆದ್ದುಕೊಡಬಲ್ಲ ನಿರೀಕ್ಷೆ ಹುಟ್ಟಿಸಿದ್ದಾರೆ.
ಇದನ್ನೂ ಓದಿ: ಭಾರತಕ್ಕೆ ಬಂತು ಮೊದಲ ಪದಕ: ವೇಟ್ ಲಿಫ್ಟಿಂಗ್‌ನಲ್ಲಿ ಸಂಕೇತ್ ಸರ್ಗರ್‌ಗೆ ಬೆಳ್ಳಿ