ರಾಜ್ಯದ ಕಾನೂನು ಸಚಿವ ಮಾಧುಸ್ವಾಮಿ ಅವರ ಆಡಿಯೊವೊಂದು ಸೋರಿಕೆಯಾಗಿರುವ ಪರಿಣಾಮ ಬಿಜೆಪಿ ಸರ್ಕಾರ ತೀವ್ರ ಮುಜುಗರಕ್ಕೊಳಗಾಗಿದ್ದು ಸರ್ಕಾರದೊಳಗೆ ಆಕ್ರೋಶ ಭುಗಿಲೆದ್ದಿದೆ. ಆಡಿಯೊದಲ್ಲಿ ಅವರು, “ನಾವು ಸರ್ಕಾರವನ್ನು ನಡೆಸುತ್ತಿಲ್ಲ, ಮ್ಯಾನೇಜ್ ಮಾಡುತ್ತಿದ್ದು ತಳ್ಳಿಕೊಂಡು ಹೋಗುತ್ತಿದ್ದೇವೆ” ಎಂದು ಹೇಳಿದ್ದಾರೆ. ಆಡಿಯೊ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಅವರ ಹೇಳಿಕೆಯ ಬಗ್ಗೆ ಇತರ ಸಚಿವರು ಗೊಂದಲಕಾರಿ ಹೇಳಿಕೆ ನೀಡುತ್ತಿದ್ದಾರೆ.
ಸಚಿವ ಮಾಧುಸ್ವಾಮಿ ಅವರೊಂದಿಗೆ ಫೊನ್ ಕರೆಯಲ್ಲಿ ಮಾತನಾಡಿದ್ದ ಚನ್ನಪಟ್ಟಣದಿಂದ ಭಾಸ್ಕರ್ ಎಂಬ ಸಾಮಾಜಿಕ ಕಾರ್ಯಕರ್ತರೊಬ್ಬರು, ‘‘ರೈತರು ವಿಎಸ್‌ಎಸ್‌ಎನ್ ಬ್ಯಾಂಕಿನಿಂದ 50 ಸಾವಿರ ರೂ ಸಾಲ ತೆಗೆದುಕೊಂಡಿದ್ದರು. ಸಾಲ ಕಟ್ಟಲು ಹೋದರೆ ಸಾಲ ನವೀಕರಣದ ಹೆಸರಿನಲ್ಲಿ ಬ್ಯಾಂಕ್ ಸಿಬ್ಬಂದಿ 1300 ರೂ. ಪಡೆಯುತ್ತಿದ್ದಾರೆ. ಫುಲ್ ದುಡ್ಡನ್ನು ಅವರು ಪಡೆದು ಮತ್ತೆ ಬಡ್ಡಿಗೆ ಅಂತ ಹಾಕ್ತಾ ಇದ್ದಾರೆ. ಇದು ಇಡೀ ಕರ್ನಾಟಕದಲ್ಲಿ ನಡೆಯುತ್ತಿದೆ” ಎಂದು ಹೇಳಿಕೊಂಡಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಾಧುಸ್ವಾಮಿ, “ಏನಪ್ಪ ಮಾಡ್ಲಿ, ಇದೆಲ್ಲಾ ನನಗೆ ಗೊತ್ತು. ಎಲ್ಲವನ್ನೂ ಸಚಿವ ಸೋಮಶೇಖರ್ ಅವರ ಗಮನಕ್ಕೆ ತೆಗೆದುಕೊಂಡು ಹೋಗಿದ್ದೇವೆ. ಬಡ್ಡಿ ಹೊಡೆದುಕೊಂಡು ತಿಂತಾ ಇದ್ದಾರೆ. ಹೆಚ್ಚುವರಿ ಸೆಸ್ ಅಂತ ತೆಗೆದುಕೊಳ್ಳುತ್ತಿದ್ದಾರೆ. ಬಡ್ಡಿ ವಸೂಲಿ ಮಾಡ್ತಿದ್ದಾರೆ ಎಂದೂ ಹೇಳಿದ್ದೇನೆ. ಅವರೇನೂ ಕ್ರಮ ಜರುಗಿಸುತ್ತಿಲ್ಲ ಅಲ್ವಾ, ಏನು ಮಾಡೋಣ?” ಎಂದು ಕೇಳಿದ್ದಾರೆ.
ಇದನ್ನೂ ಓದಿ: ಎಸ್.ಆರ್.ಹಿರೇಮಠ ಸಂದರ್ಶನ| ಎಸಿಬಿ ರದ್ದಾಗಿದ್ದು ಐತಿಹಾಸಿಕ ಗೆಲುವು, ಆದರೆ…!
ಇದಕ್ಕೆ ಪ್ರತಿಕ್ರಿಸಿದ ಭಾಸ್ಕರ್ ಅವರು, “ನೋಡಿ ಸರ್, ಬ್ಯಾಂಕ್‌ನವರು ರೈತರನ್ನು ಮಂಗಗಳು ತರ ಮಾಡಿಬಿಟ್ಟಿದ್ದಾರೆ” ಎಂದು ಹೇಳುತ್ತಾರೆ.
ಇದಕ್ಕೆ ಮಾಧುಸ್ವಾಮಿ, ರೈತರು ಮಾತ್ರವಲ್ಲ ನಾನೇ ಕಟ್ಟಿದ್ದೇನೆ ಮಾರಾಯ. ನನ್ನಿಂದನೇ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದು, ‘ಇಲ್ಲಿ ಸರ್ಕಾರ ನಡೆಸುತ್ತಿಲ್ಲ, ಮ್ಯಾನೇಜ್‌ಮೆಂಟ್ ಮಾಡುತ್ತಿದ್ದೇವೆ ಅಷ್ಟೆ. ಇನ್ನು ಎಂಟು ತಿಂಗಳು ತಳ್ಳಿದರೆ ಸಾಕು ಎಂದು ತಳ್ಳುತ್ತಾ ಇದ್ದೇವೆ ಕಣಪ್ಪಾ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
KARNATAKA 'NO GOVT' LEAK
In a leaked audio clip, #Karnataka Law Minister JC Madhuswamy was purportedly heard saying, "We are not running a Govt here, we are only managing as there's just 7-8 months left." @NehaHebbs reports pic.twitter.com/JjBJEIBW02
— Mirror Now (@MirrorNow) August 16, 2022
ಸೋರಿಕೆಯಾದ ಆಡಿಯೊ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, “ತಳ್ಳಿಕೊಂಡು ಹೋಗ್ತಿರುವ ಬಿಜೆಪಿ ಸರ್ಕಾರದಲ್ಲಿ MMSಗಳು ಹೊರಬರುತ್ತಲೇ ಇರುತ್ತವೆ! ಬಿಜೆಪಿ ನಾಯಕರ ಅಶ್ಲೀಲ ಚಿತ್ರಗಳ MMSಗಳು ಒಂದೆಡೆಯಾದರೆ, #BJPvsBJP ಕಿತ್ತಾಟದಲ್ಲಿರುವ MMS ಮತ್ತೊಂದೆಡೆ! Mಮುನಿರತ್ನ, Mಮಾಧುಸ್ವಾಮಿ, Sಸೋಮಶೇಖರ್! ಈ ಕಿತ್ತಾಟ ನಿಲ್ಲಿಸಲಾಗದೆ ಕೈಲಾಡುವ ಗೊಂಬೆಯಂತೆ ‘ಮ್ಯಾನೇಜ್’ ಮಾಡುತ್ತಿದ್ದಾರೆ ಸಿಎಂ!” ಎಂದು ಹೇಳಿದೆ.
ಇದನ್ನೂ ಓದಿ: ಶಿವಮೊಗ್ಗ: ಸಾವರ್ಕರ್ ಫೋಟೋ ತೆರವು ಮಾಡಿಸಿದ ಜನತೆ; ವಿಡಿಯೊ ವೈರಲ್
ಈ ಮಧ್ಯೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಡ್ಯಾಮೇಜ್ ಕಂಟ್ರೋಲ್ ಮಾಡುವ ಪ್ರಯತ್ನ ಮಾಡಿದ್ದು, “ಸರ್ಕಾರದಲ್ಲಿ ಎಲ್ಲವೂ ಚೆನ್ನಾಗಿದೆ, ಯಾವುದೇ ತೊಂದರೆ ಇಲ್ಲ. ಹೇಳಿಕೆಯನ್ನು ವಿಭಿನ್ನ ಅರ್ಥದಲ್ಲಿ ಹೇಳಲಾಗಿದೆ” ಎಂದು ಹೇಳಿದ್ದಾರೆ.
ಈ ಮಧ್ಯೆ ಮಾಧುಸ್ವಾಮಿ ಅವರ ಹೇಳಿಕೆಯಿಂದ ಅಸಮಾಧಾನಗೊಂಡಿದ್ದು, ಸಚಿವ ಸೋಮಶೇಖರ್ ಅವರು,“ಮಾಧುಸ್ವಾಮಿ ಅವರು ತಾನೊಬ್ಬನೇ ಮೇಧಾವಿ ಎಂದು ತಿಳಿದುಕೊಂಡಿದ್ದಾರೆ” ಎಂದು ಆಕ್ರೋಶ ವ್ಯಕ್ತವಾಗಿದೆ.
ಸರಕಾರದ ಸಚಿವರುಗಳ ಈ ಜಗಳದಲ್ಲಿ ವಾಸ್ತವ ಹೊರಬರುತ್ತಿದೆ. ಒಬ್ಬರು ಇನ್ನೊಬ್ಬರ ಮೇಲೆ ಆರೋಪ- ಪ್ರತ್ಯಾರೋಪ ಮಾಡುತ್ತಿದ್ದಾರೆ.
-ಸಹಕಾರ ಸಚಿವರು ಕೆಲಸ ಮಾಡುತ್ತಿಲ್ಲ – ಮಾಧುಸ್ವಾಮಿ
-ಕಾನೂನು ಸಚಿವರು ಕೆಲಸ ಮಾಡುತ್ತಿಲ್ಲ – ಸೋಮಶೇಖರ್
-ಮಾಧುಸ್ವಾಮಿ ರಾಜೀನಾಮೆ ಕೊಡಲಿ – ಮುನಿರತ್ನಇವರ ದುರಾಡಳಿತಕ್ಕೆ ಸಿಲುಕಿ ಜನರು ಪರದಾಡುವಂತಾಗಿದೆ.! pic.twitter.com/9VN2w4XUU3
— Dr Rajaram KB (@drRajaramkb) August 16, 2022
ಮತ್ತೊಬ್ಬ ಸಚಿವ ಮುನಿಸ್ವಾಮಿ ಅವರು ಮಾಧುಸ್ವಾಮಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಈ ನಡುವೆ ಸಚಿವ ಅಶ್ವಥ್‌ನಾರಾಯಣ ಅವರು ಮಾತ್ರ ಆಡಿಯೊ ನಕಲಿ ಎಂದು ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ: ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ನೆಹರೂ ಫೋಟೋ- ಪರಿಚಯ ಕಿತ್ತೆಸೆದ ಬಿಜೆಪಿ ಸರ್ಕಾರ; ಜನಾಕ್ರೋಶ
ಮಾಧುಸ್ವಾಮಿ ಆಡಿಯೊ ನಕಲಿ: ಸಚಿವ ಅಶ್ವತ್ಥನಾರಾಯಣ ಸಮರ್ಥನೆ#madhuswamy #ashwathnarayan pic.twitter.com/Ng1LhvtKhk
— Prajavani (@prajavani) August 15, 2022
ಮಾಧುಸ್ವಾಮಿ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿರುವ ಇತರ ಸಚಿವರೊಂದಿಗೂ ಮಾತುಕತೆ ನಡೆಸಿದ್ದೇನೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ. “ಸಂಬಂಧಿಸಿದ ಎಲ್ಲರೊಂದಿಗೆ ಮಾತನಾಡುತ್ತೇನೆ ಮತ್ತು ಸಮಸ್ಯೆಯನ್ನು ಇತ್ಯರ್ಥಪಡಿಸುತ್ತೇನೆ” ಎಂದು ಅವರು ತಿಳಿಸಿದ್ದಾರೆ.



Statment by Madswamy is 100 percent correct
ಮಾಧುಸ್ವಾಮಿಯವರು ಆಡಿಯೊ ನಿನ್ನದೆ ಅನ್ನುತ್ತಿರುವಾಗ ಅವ್ಯವಸ್ಥೆ ನಾರಾಯಣರೂ ಆಡಿಯೊ ನಕಲಿ ಎನ್ನುತ್ತಿದ್ದಾರೆ