Homeಮುಖಪುಟಯುಪಿ: ತಿರಂಗ ಯಾತ್ರೆಯಲ್ಲಿ ಗಾಂಧಿ ಹಂತಕ ಗೋಡ್ಸೆಯ ಫೋಟೋ ಮೆರವಣಿಗೆ

ಯುಪಿ: ತಿರಂಗ ಯಾತ್ರೆಯಲ್ಲಿ ಗಾಂಧಿ ಹಂತಕ ಗೋಡ್ಸೆಯ ಫೋಟೋ ಮೆರವಣಿಗೆ

- Advertisement -
- Advertisement -

ಅಖಿಲ ಭಾರತೀಯ ಹಿಂದೂ ಮಹಾಸಭಾವು ಸೋಮವಾರ ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ನಾಥೂರಾಂ ಗೋಡ್ಸೆಯ ಫೋಟೋದೊಂದಿಗೆ ತಿರಂಗಾ ಯಾತ್ರೆಯನ್ನು ನಡೆಸಿದೆ.

ಗಾಂಧಿ ಹಂತಕ ಗೋಡ್ಸೆಯ ಭಾವಚಿತ್ರದೊಂದಿಗೆ ರಾಷ್ಟ್ರಧ್ವಜದ ಮೆರವಣಿಗೆ ಮಾಡಿರುವುದು ಟೀಕೆಗಳಿಗೆ ಕಾರಣವಾಗಿದೆ. ತಿರಂಗ ಯಾತ್ರೆಯ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ಸೋಮವಾರ ರಾತ್ರಿ ವೈರಲ್ ಆದ ನಂತರ ಈ ವಿಷಯ ಬೆಳಕಿಗೆ ಬಂದಿದೆ.

ದಾರ್ಸಲ್ ಹಿಂದೂ ಮಹಾಸಭಾದ ಕಾರ್ಯಾಧ್ಯಕ್ಷ ಯೋಗೇಂದ್ರ ವರ್ಮಾ ನೇತೃತ್ವದಲ್ಲಿ ಸೋಮವಾರ ಸಂಜೆ ತ್ರಿವರ್ಣ ಯಾತ್ರೆಯನ್ನು ನಡೆಸಲಾಗಿದೆ. ರಾಷ್ಟ್ರಧ್ವಜದ ಯಾತ್ರೆಯಲ್ಲಿ ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ನೇತಾಜಿ ಸುಭಾಷ್ ಚಂದ್ರ ಬೋಸ್ ಸೇರಿದಂತೆ ಹಲವು ಕ್ರಾಂತಿಕಾರಿಗಳ ಚಿತ್ರಗಳಿದ್ದರೂ ಅವುಗಳ ಜೊತೆಗೆ ಮಹಾತ್ಮ ಗಾಂಧಿ ಹಂತಕ ನಾಥೂರಾಂ ಗೋಡ್ಸೆಯ ಚಿತ್ರವನ್ನೂ ಅಳವಡಿಸಲಾಗಿತ್ತು.

ಹಿಂದೂ ಮಹಾಸಭಾ ಮುಖಂಡ ಯೋಗೇಂದ್ರ ವರ್ಮಾ ಮಾತನಾಡಿ, “ಸ್ವಾತಂತ್ರ್ಯ ದಿನಾಚರಣೆಯಂದು ತಿರಂಗ ಯಾತ್ರೆ ಹಮ್ಮಿಕೊಂಡಿದ್ದು, ರ್‍ಯಾಲಿ ಜಿಲ್ಲೆಯಾದ್ಯಂತ ಸಂಚರಿಸಿದೆ. ಎಲ್ಲಾ ಪ್ರಮುಖ ಹಿಂದೂ ಮುಖಂಡರು ಇದರಲ್ಲಿ ಭಾಗವಹಿಸಿದ್ದರು. ನಾವು ಹಲವಾರು ಕ್ರಾಂತಿಕಾರಿಗಳ ಛಾಯಾಚಿತ್ರಗಳನ್ನು ಹಾಕಿದ್ದೆವು. ಅವರಲ್ಲಿ ಗೋಡ್ಸೆ ಕೂಡ ಒಬ್ಬ” ಎಂದಿದ್ದಾರೆ.

ಗಾಂಧಿ ಅನುಸರಿಸಿದ ನೀತಿಗಳೇ ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡುವಂತೆ ಗೋಡ್ಸೆಯನ್ನು ಪ್ರೇರೇಪಿಸಿತು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿರಿ: ಬಿಲ್ಕಿಸ್‌ ಬಾನೋ ಸಾಮೂಹಿಕ ಅತ್ಯಾಚಾರ ಪ್ರಕರಣ; ಎಲ್ಲ ಅಪರಾಧಿಗಳಿಗೆ ಕ್ಷಮೆ ನೀಡಿ ಬಿಡುಗಡೆ ಮಾಡಿದ ಗುಜರಾತ್ ಸರ್ಕಾರ!

“ಗೋಡ್ಸೆ ತನ್ನದೇ ಆದ ಪ್ರಕರಣದಲ್ಲಿ ಹೋರಾಡಿದ್ದಾನೆ. ನ್ಯಾಯಾಲಯದಲ್ಲಿ ಆತ ಹೇಳಿದ ಎಲ್ಲವನ್ನೂ ಸರ್ಕಾರವು ಸಾರ್ವಜನಿಕಗೊಳಿಸಬೇಕು. ಗಾಂಧಿಯನ್ನು ಏಕೆ ಹತ್ಯೆ ಮಾಡಲಾಯಿತು ಎಂಬುದನ್ನು ಜನರಿಗೆ ತಿಳಿಸುವುದಕ್ಕೆ ಸರ್ಕಾರಕ್ಕೆ ಇಷ್ಟವಿಲ್ಲ” ಎಂದು ತಿಳಿಸಿದ್ದಾರೆ.

“ಗಾಂಧಿಯವರ ಕೆಲವು ನೀತಿಗಳು ಹಿಂದೂ ವಿರೋಧಿಯಾಗಿದ್ದವು. ವಿಭಜನೆಯ ಸಮಯದಲ್ಲಿ 30 ಲಕ್ಷ ಹಿಂದೂಗಳು ಮತ್ತು ಮುಸ್ಲಿಮರು ಕೊಲ್ಲಲ್ಪಟ್ಟರು. ಇದಕ್ಕೆ ಗಾಂಧಿಯೇ ಕಾರಣ” ಎಂದು ದೂರಿದ್ದಾರೆ.

ಗೋಡ್ಸೆ ಗಾಂಧಿಯನ್ನು ಹತ್ಯೆ ಮಾಡಿದ್ದಕ್ಕೆ ಮರಣದಂಡನೆ ಅನುಭವಿಸಿದ ಎಂದಿರುವ ಯೋಗೇಂದ್ರ ವರ್ಮಾ, “ಗಾಂಧಿ ನಮ್ಮ ಸ್ಫೂರ್ತಿ ಎಂದು ಕೆಲವರು ಭಾವಿಸುವಂತೆಯೇ, ಗೋಡ್ಸೆಯ ಮೇಲೆ ನಮಗೆ ಅಭಿಮಾನವಿದೆ” ಎಂದು ಸಮರ್ಥಿಸಿಕೊಂಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಗಾಂಧಿಯ ಸ್ಥಾನಕ್ಕೆ ಗೋಡ್ಸೆ ಬಂದಿದ್ದಾನೆ, ಈ ದೇಶಕ್ಕೆ ಏನೋ ಕೇಡುಗಾಲ ಕಾದಿದೆ ಎಂದೇ ಅರ್ಥ.

LEAVE A REPLY

Please enter your comment!
Please enter your name here

- Advertisment -

Must Read

ರಾಷ್ಟ್ರಪತಿಗೆ ಸ್ವಾಗತ ಕೋರುವ ಬ್ಯಾನರ್‌ನಲ್ಲಿ ತಪ್ಪು ಮಾಹಿತಿ: BJP ಶಾಸಕರ ಯಡವಟ್ಟು | Naanu Gauri

ರಾಷ್ಟ್ರಪತಿಗೆ ಸ್ವಾಗತ ಕೋರುವ ಬ್ಯಾನರ್‌ನಲ್ಲಿ ತಪ್ಪು ಮಾಹಿತಿ: BJP ಶಾಸಕರ ಯಡವಟ್ಟು

1
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಜ್ಯಕ್ಕೆ ಭೇಟಿ ನೀಡುತ್ತಿರುವ ಹಿನ್ನಲೆ, ಅವರಿಗೆ ಸ್ವಾಗತ ಕೋರಿ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಹಾಕಿರುವ ಬ್ಯಾನರ್‌ನಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ. ಬ್ಯಾನರ್‌ನಲ್ಲಿ ಮುರ್ಮು ಅವರನ್ನು ‘ದೇಶದ...