“ನಾನು ಇನ್ನೊಬ್ಬರ ದೃಷ್ಟಿಕೋನವನ್ನು ಯಾಕೆ ತೆಗೆದುಕೊಳ್ಳಬೇಕು? ನಾನು ಏನು ಮಾಡಬೇಕು ಎಂಬ ಅಧಿಕಾರವನ್ನು ಚುನಾವಣೆ ಮೂಲಕ ನನಗೆ ನೀಡಲಾಗಿದೆ. ನನ್ನ ಮುಖ್ಯಮಂತ್ರಿ ನನಗೆ ಕೆಲಸ ಕೊಟ್ಟಿದ್ದಾರೆ, ನಾನು ಅದನ್ನು ಚೆನ್ನಾಗಿ ಮಾಡುತ್ತಿದ್ದೇನೆ. ನಾನು ಒಕ್ಕೂಟ ಸರ್ಕಾರಕ್ಕಿಂತ ಹೆಚ್ಚಿನ ಸಾಧನೆ ಮಾಡುತ್ತಿದ್ದೇನೆ. ನಾವು ಒಕ್ಕೂಟ ಸರ್ಕಾರದ ಖಜಾನೆಯ ದೊಡ್ಡ ಕೊಡುಗೆದಾರರಾಗಿದ್ದೇವೆ. ನಮ್ಮಿಂದ ನಿಮಗೆ ಇನ್ನೇನು ಬೇಕು? ನಾನು ನಿಮಗಾಗಿ ನನ್ನ ನೀತಿಯನ್ನು ಯಾವ ಆಧಾರದ ಮೇಲೆ ಬದಲಾಯಿಸಬೇಕು?” ಎಂದು ತಮಿಳುನಾಡು ಹಣಕಾಸು ಸಚಿವ ಡಾ.ಪಿ. ತ್ಯಾಗ ರಾಜನ್ ಅವರು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇಂಡಿಯಾ ಟುಡೆ ಮಾಧ್ಯಮದಲ್ಲಿ ನಡೆದ ಚರ್ಚೆಯೊಂದರಲ್ಲಿ ಭಾಗವಹಿಸಿ ಮಾತನಾಡಿದ ತ್ಯಾಗ ರಾಜನ್ ಅವರು ಮೋದಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನರಿಗೆ ಉಚಿತ ಸವಲತ್ತುಗಳು ನೀಡುವುದನ್ನು ‘ಪುಕ್ಕಟೆ ಕೊಡುಗೆ’ಗಳು ಎಂದು ಹೇಳುತ್ತಿರುವ ಮೋದಿ ನೇತೃತ್ವದ ಸರ್ಕಾರದ ನಿಲುವಿನ ಬಗ್ಗೆ ಅವರು ಮಾಡಿರುವ ವಾಗ್ದಾಳಿಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ರಾಜ್ಯ ಸರ್ಕಾರಗಳು ಏನು ಮಾಡಬಹುದು ಎಂಬುದನ್ನು ಒಕ್ಕೂಟ ಸರ್ಕಾರ ಯಾಕೆ ನಿರ್ಧರಿಸಬೇಕು ಎಂದು ತ್ಯಾಗ ರಾಜನ್ ಪ್ರಶ್ನಿಸಿದ್ದಾರೆ.
ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ತ್ಯಾಗ ರಾಜನ್, “ನೀವು ಹೇಳಿದ್ದನ್ನು ನಾವು ಕೇಳಬೇಕು ಎಂದು ಹೇಳುವುದಕ್ಕೆ ಒಂದೋ ನೀವು ಸಾಂವಿಧಾನಿಕ ಆಧಾರವನ್ನು ಹೊಂದಿರಬೇಕು ಅಥವಾ ನೀವು ವಿಷಯದಲ್ಲಿ ಪರಿಣತಿ ಹೊಂದಿದ್ದರೆ ಅಥವಾ ಅರ್ಥಶಾಸ್ತ್ರದಲ್ಲಿ ಡಬ್ಬಲ್ ಪಿಎಚ್‌ಡಿ ಹೊಂದಿದ್ದರೆ, ನೋಬೆಲ್ ಪ್ರಶಸ್ತಿ ಪಡೆದಿದ್ದರೆ, ನಮಗಿಂತ ಚೆನ್ನಾಗಿ ನೀವು ಕೆಲಸ ಮಾಡುತ್ತಿದ್ದರೆ, ನೀವು ಆರ್ಥಿಕತೆಯನ್ನು ಬೆಳೆಸಿದ್ದೀರಿ ಎಂದಾದರೆ, ಸಾಲವನ್ನು ಕಡಿಮೆ ಮಾಡಿದ್ದೀರಿ ಎಂದಾದರೆ, ನೀವು ಉದ್ಯೋಗಗಳನ್ನು ಸೃಷ್ಟಿಸಿದ್ಧೀರಿ ಎಂದು ತೋರಿಸುವ ಕೆಲವು ಕಾರ್ಯಕ್ಷಮತೆಯ ಹಿನ್ನಲೆಯನ್ನು ನೀವು ಹೊಂದಿದ್ದರೆ ನಾವು ನೀವು ಹೇಳುವುದನ್ನು ಕೇಳುತ್ತೇವೆ. ಆದರೆ ಇದು ಯಾವುದೂ ಇಲ್ಲದೆ, ನಾವು ಯಾಕೆ ಇನ್ನೊಬ್ಬರ ಅಭಿಪ್ರಾಯವನ್ನು ಕೇಳಬೇಕು?” ಎಂದು ಅವರು ಪ್ರಶ್ನಿಸಿದ್ದಾರೆ.
என்னா அடி! இது கருணையே இல்லாத கொலை, ஏசப்பா! 🤣 @ptrmadurai pic.twitter.com/fR6fCX1RaT
— Azhagiri Sadhasivam (@SadhaaAzhagiri) August 17, 2022
ಇದನ್ನೂ ಓದಿ: ಎಐಎಡಿಎಂಕೆ ಅಧಿಕಾರ ಕಿತ್ತಾಟ: ಇ.ಪಳನಿಸ್ವಾಮಿಗೆ ಸುಪ್ರೀಂಕೋರ್ಟ್‌ನಲ್ಲಿ ಭಾರೀ ಹಿನ್ನಡೆ
ತಮಿಳುನಾಡು ಸರ್ಕಾರವು ಒಕ್ಕೂಟ ಸರ್ಕಾರದ ಸಾಧನೆಗಿಂತ ಹೆಚ್ಚಿನ ಸಾಧನೆ ಮಾಡಿದೆ ಎಂದು ತ್ಯಾಗ ರಾಜನ್ ಅವರು ಪ್ರತಿಪಾದಿಸಿದ್ದಾರೆ.
“ನಾನು ಯಾರದೊ ದೃಷ್ಟಿಕೋನವನ್ನು ಯಾಕೆ ತೆಗೆದುಕೊಳ್ಳಬೇಕು? ಅದು ದೇವರ ವಾಕ್ಯವೇ? ನಾನು ದೇವರನ್ನು ನಂಬುತ್ತೇನೆ, ಆದರೆ ಮನುಷ್ಯನೊಬ್ಬ ದೇವರು ಎಂದು ನಾನು ನಂಬುವುದಿಲ್ಲ. ಇನ್ನೊಬ್ಬರ ದೃಷ್ಟಿಕೋನವನ್ನು ನಾನು ಯಾಕೆ ತೆಗೆದುಕೊಳ್ಳಬೇಕು? ನಾನು ಏನು ಮಾಡಬೇಕು ಎಂಬ ಅಧಿಕಾರವನ್ನು ಚುನಾವಣೆ ಮೂಲಕ ನನಗೆ ನೀಡಲಾಗಿದೆ. ನನ್ನ ಮುಖ್ಯಮಂತ್ರಿ ನನಗೆ ಕೆಲಸ ಕೊಟ್ಟಿದ್ದಾರೆ, ಅದನ್ನು ಚೆನ್ನಾಗಿ ಮಾಡುತ್ತಿದ್ದೇನೆ” ಎಂದು ಅವರು ಹೇಳಿದ್ದಾರೆ.
“ನಾನು ಒಕ್ಕೂಟ ಸರ್ಕಾರಕ್ಕಿಂತ ಹೆಚ್ಚಿನ ಸಾಧನೆ ಮಾಡುತ್ತಿದ್ದೇನೆ. ಮುಂದಿನ ಮೂರು ವರ್ಷವೂ ನಾನು ಚೆನ್ನಾಗಿ ಕೆಲಸ ಮಾಡುತ್ತೇನೆ ಎಂಬುವುದನ್ನು ಖಚಿತಪಡಿಸುತ್ತೇನೆ. ನಾವು ಒಕ್ಕೂಟ ಸರ್ಕಾರದ ಖಜಾನೆಗೆ ದೊಡ್ಡ ಕೊಡುಗೆದಾರರಾಗಿದ್ದು, ಅದಕ್ಕೆ ದೊಡ್ಡ ಮೊತ್ತವನ್ನು ನೀಡುತ್ತಿದ್ದೇವೆ. ಉದಾಹರಣೆಗೆ ಒಂದು ರುಪಾಯಿ ನಾವು ಒಕ್ಕೂಟ ಸರ್ಕಾರಕ್ಕೆ ನೀಡಿದರೆ ಅದು ನಮಗೆ 33-35 ಪೈಸೆ ಅಷ್ಟೆ ವಾಪಾಸು ನೀಡುತ್ತಿದೆ. ಇನ್ನೂ ನಮ್ಮಿಂದ ನಿಮಗೆ ಏನು ಬೇಕು?” ಎಂದು ಅವರು ಕಿಡಿ ಕಾರಿದ್ದಾರೆ.
ಇದನ್ನೂ ಓದಿ: ’ಉಚಿತ ಕೊಡುಗೆ’ ಒಂದು ರೋಗವೆ? ಸುಪ್ರೀಂ ಕೋರ್ಟಿನ ವಿಚಾರಣೆ ಮತ್ತು ಬಡ ಭಾರತದ ಪ್ರಜಾಪ್ರಭುತ್ವ
“ಇಷ್ಟೆಲ್ಲಾ ಆಗಿಯೂ ನಾನು ಯಾಕೆ ನಿಮ್ಮ ಮಾತನ್ನು ಪಾಲಿಸಬೇಕು? ನಿಮ್ಮ ಮಾತನ್ನು ನಾನು ಪಾಲಿಸಬೇಕು ಎಂಬುವುದಕ್ಕೆ ಯಾವ ಆಧಾರವಿದೆ? ಸಾಂವಿಧಾನಿಕ ಆಧಾರವಿಲ್ಲ, ನೀವು ಆರ್ಥಿಕ ತಜ್ಞರಲ್ಲ, ನಿಮಗೆ ನೊಬೆಲ್ ಪ್ರಶಸ್ತಿ ಬಂದಿದೆಯೆ? ನೀವು ನಮಗಿಂತ ಚೆನ್ನಾಗಿ ಕೆಲಸ ಮಾಡುತ್ತಿಲ್ಲ. ಆದರೂ ನಿಮಗಾಗಿ ನನ್ನ ನೀತಿಯನ್ನು ಯಾವ ಆಧಾರದ ಮೇಲೆ ಬದಲಾಯಿಸಬೇಕು? ದೇವಲೋಕದಿಂದ ಹೆಚ್ಚುವರಿ ಸಾಂವಿಧಾನಿಕ ಆದೇಶಗಳೇನಾದರೂ ಬರುತ್ತಿದೆಯೆ? ನೀವು ಏನು ಹೇಳುತ್ತಿದ್ದೀರಿ?” ಎಂದು ಡಾ.ಪಿ. ತ್ಯಾಗ ರಾಜನ್ ಅವರು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
‘ಉಚಿತ ಕೊಡುಗೆ’ ಸಂಸ್ಕೃತಿಯ ಚರ್ಚೆ ಇತ್ತೀಚೆಗೆ ರಾಜಕೀಯ ಚರ್ಚೆಯನ್ನು ಪಡೆದುಕೊಂಡಿದೆ. ಕಳೆದ ವಾರದ ಆರಂಭದಲ್ಲಿ ಒಕ್ಕೂಟ ಸರ್ಕಾರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯ ಸರ್ಕಾರದ ಹಣಕಾಸಿನ ಬಲವನ್ನು ಪರೀಕ್ಷಿಸಿ ಅದಕ್ಕೆ ಅನುಗುಣವಾಗಿ ಬಜೆಟ್ ನಿಬಂಧನೆಗಳನ್ನು ಮಾಡಿ ‘ಪುಕ್ಕಟೆ ಕೊಡುಗೆ’ಗಳ ನೀಡುವಂತೆ ರಾಜ್ಯಗಳಿಗೆ ಕೇಳಿಕೊಂಡಿದ್ದರು.
ಈ ಮಧ್ಯೆ, ಹಲವಾರು ಉನ್ನತ ರಾಜಕೀಯ ನಾಯಕರು ‘ಉಚಿತ ಕೊಡುಗೆ’ ನೀತಿಯನ್ನು ಬೆಂಬಲಿಸಿದ್ದು, ಇದು ಜನ ಕಲ್ಯಾಣಕ್ಕಾಗಿ ನೀಡಲಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಬಿಜೆಪಿ ಉದ್ಯಮಿಗಳ ಸಾಲ ಮನ್ನಾ ಮಾಡುವುದನ್ನು ಕೂಡಾ ಉಚಿತ ಕೊಡುಗೆ ಎಂದು ಪರಿಗಣಿಸಿ: ಸುಪ್ರೀಂಗೆ ತಮಿಳುನಾಡು ಸಿಎಂ ಸ್ಟಾಲಿನ್
ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಉಚಿತ ಶಿಕ್ಷಣ ಮತ್ತು ಆರೋಗ್ಯ ‘ಉಚಿತ ಕೊಡುಗೆ’ಯಲ್ಲ ಎಂದು ಪ್ರತಿಪಾದಿಸಿದ್ದು, ಇವುಗಳು ಜನರಿಗೆ ಸಿಕ್ಕರೆ ಭಾರತವು ವಿಶ್ವದ ಅಗ್ರ ರಾಷ್ಟ್ರವಾಗಬಹುದು ಎಂದು ಹೇಳಿದ್ದಾರೆ.
Tamil Nadu Finance Minister @ptrmadurai on revdi culture, "Why should I take somebody's prospective. On what basis should I change my policy for you."#BJP spokesperson @NarendraTaneja calls it 'arrogance'. #freebies #Newstrack | @rahulkanwal pic.twitter.com/Y34KyCKH8Y
— IndiaToday (@IndiaToday) August 17, 2022


