Homeಮುಖಪುಟಬಿಜೆಪಿ ಉದ್ಯಮಿಗಳ ಸಾಲ ಮನ್ನಾ ಮಾಡುವುದನ್ನು ಕೂಡಾ ಉಚಿತ ಕೊಡುಗೆ ಎಂದು ಪರಿಗಣಿಸಿ: ಸುಪ್ರೀಂಗೆ ತಮಿಳುನಾಡು...

ಬಿಜೆಪಿ ಉದ್ಯಮಿಗಳ ಸಾಲ ಮನ್ನಾ ಮಾಡುವುದನ್ನು ಕೂಡಾ ಉಚಿತ ಕೊಡುಗೆ ಎಂದು ಪರಿಗಣಿಸಿ: ಸುಪ್ರೀಂಗೆ ತಮಿಳುನಾಡು ಸಿಎಂ ಸ್ಟಾಲಿನ್ ಅರ್ಜಿ

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆ ನೀಡುವ ಭರವಸೆಯನ್ನು ಪ್ರಶ್ನಿಸಿ ಬಿಜೆಪಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ

- Advertisement -
- Advertisement -

ಉಚಿತ ಯೋಜನೆಗಳ ಕುರಿತು ನಡೆಯುತ್ತಿರುವ ಪ್ರಕರಣದ ವಿಚಾರದಲ್ಲಿ ತಮಿಳುನಾಡಿನ ಆಡಳಿತಾರೂಢ ಡಿಎಂಕೆಯು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ‘ಉಚಿತ ಕೊಡುಗೆ’ ಎಂಬ ಪದದ ವ್ಯಾಪ್ತಿ ತುಂಬಾ ವಿಸ್ತಾರವಾಗಿದ್ದು, ‘ಇದರ ಬಗ್ಗೆ ಪರಿಗಣಿಸಬೇಕಾದ ಅಂಶಗಳು ಬಹಳ ಇವೆ’ ಎಂದು ವಾದಿಸಿದೆ. ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಅವರು ಸರ್ಕಾರಗಳ ಉಚಿತ ಕೊಡುಗೆಗಳ ಭರವಸೆಗಳನ್ನು ಪ್ರಶ್ನಿಸಿ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದರು.

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಭರವಸೆಯನ್ನು ಪ್ರಶ್ನಿಸಿ ಬಿಜೆಪಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ನಡೆಸುತ್ತಿದೆ. ಈ ರೀತಿಯ ಸಂಪ್ರದಾಯವು ರಾಜ್ಯವನ್ನು ಆರ್ಥಿಕವಾಗಿ ನಾಶಪಡಿಸುತ್ತದೆ ಎಂದು ಬಿಜೆಪಿ ಪ್ರತಿಪಾದಿಸಿದೆ. ತಮಿಳುನಾಡು ಸರ್ಕಾರ ಮಾತ್ರವಲ್ಲದೆ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ಕೂಡಾ ತಾನು ಆಳುವ ರಾಜ್ಯಗಳಲ್ಲಿ ಉಚಿತ ವಿದ್ಯುತ್ ಮತ್ತು ನೀರನ್ನು ಒದಗಿಸುವ ಭರವಸೆ ನೀಡಿ, ಅಧಿಕಾರಕ್ಕೆ ಬಂದ ಕೂಡಲೇ ಅವುಗಳನ್ನು ಈಡೇರಿಸಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ತಮಿಳುನಾಡು ಚುನಾವಣೆಯ ಸಮಯದಲ್ಲಿ ಸಾಂಪ್ರದಾಯಿಕವಾಗಿ ಎಲ್ಲಾ ಪಕ್ಷಗಳೂ ಉಚಿತ ಯೋಜನೆಗಳ ಭರವಸೆಯನ್ನು ನೀಡುತ್ತದೆ. ಅಲ್ಲದೆ ಚುನಾವಣೆಗೂ ಮುನ್ನ ಕೂಡಾ ಜನರಿಗೆ ಬಟ್ಟೆ, ಆಹಾರ, ಗೃಹೋಪಯೋಗಿ ವಸ್ತುಗಳನ್ನು ವಿತರಿಸಲಾಗಿದ್ದು, ಕೆಲವೊಮ್ಮೆ ನೀತಿ ಸಂಹಿತೆ ಉಲ್ಲಂಘಿಸಲಾಗಿತ್ತು.

ಇದನ್ನೂ ಓದಿ: ’ಉಚಿತ ಕೊಡುಗೆ’ ಒಂದು ರೋಗವೆ? ಸುಪ್ರೀಂ ಕೋರ್ಟಿನ ವಿಚಾರಣೆ ಮತ್ತು ಬಡ ಭಾರತದ ಪ್ರಜಾಪ್ರಭುತ್ವ

ಚುನಾವಣೆಯ ನಂತರ, ನಂತರದ ಸರ್ಕಾರಗಳು ಆಹಾರ ಮತ್ತು ಇತರ ವಸ್ತುಗಳ ಮೇಲೆ ಭಾರಿ ಸಬ್ಸಿಡಿಗಳನ್ನು ನೀಡಿವೆ. ಪ್ರತಿಪಕ್ಷ ಎಐಎಡಿಎಂಕೆಯ ದಿವಂಗತ ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ‘ಅಮ್ಮ ಕ್ಯಾಂಟೀನ್’ಗಳಿಗೆ ಹೆಸರುವಾಸಿಯಾಗಿದ್ದರು. ಈ ಕ್ಯಾಂಟೀನ್‌ಗಳಲ್ಲಿ ಕೆಲವೇ ರೂಪಾಯಿಗಳಲ್ಲಿ ಊಟವನ್ನು ಮಾಡಬಹುದಿತ್ತು.

ಪ್ರಕರಣದ ಕುರಿತು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪಕ್ಷವಾದ ಡಿಎಂಕೆಯು ರಾಜ್ಯ ಸರ್ಕಾರ ಪರಿಚಯಿಸಿದ ಕಲ್ಯಾಣ ಯೋಜನೆಯನ್ನು ಮಾತ್ರ ಉಚಿತ ಕೊಡುಗೆ ಎಂದು ವರ್ಗೀಕರಿಸಲು ಸಾಧ್ಯವಿಲ್ಲ ಎಂದು ವಾದಿಸಿದೆ.

“ಕೇಂದ್ರದ ಆಡಳಿತರೂಢ ಪಕ್ಷವೂ ವಿದೇಶಿ ಕಂಪನಿಗಳಿಗೆ ತೆರಿಗೆ ರಜೆ ನೀಡುವುದು, ಪ್ರಭಾವಿ ಕೈಗಾರಿಕೋದ್ಯಮಿಗಳ ಸುಸ್ತಿ ಸಾಲ ಮನ್ನಾ ಮಾಡುವುದು, ತಮಗೆ ಬೇಕಾದ ಕಂಪನಿಗಳಿಗೆ ಬಹುಮುಖ್ಯವಾದ ಗುತ್ತಿಗೆಗಳನ್ನು ನೀಡುವುದು ಇತ್ಯಾದಿಗಳನ್ನು ಕೂಡಾ ಉಚಿತ ಕೊಡುಗೆ ಎಂದು ಪರಿಗಣಿಸಬೇಕು” ಎಂದು ಡಿಎಂಕೆ ಅರ್ಜಿಯಲ್ಲಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಹೇಳಿದೆ.

ಇದನ್ನೂ ಓದಿ: ಭ್ರಷ್ಟ ಉದ್ಯಮಿಗಳ 10 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ: ಮೋದಿ ವಿರುದ್ಧ ಬಿಜೆಪಿ ಸಂಸದ ವರುಣ್ ಕಿಡಿ 

“ಸೂಕ್ಷ್ಮ ಮತ್ತು ಸ್ಥೂಲ ಮಟ್ಟದಲ್ಲಿ ಫಲಿತಾಂಶದ ಪರಿಣಾಮಗಳು ಮತ್ತು ಸಾಮಾಜ ಕಲ್ಯಾಣದ ಪ್ರಮಾಣವನ್ನು ಪರಿಗಣಿಸದೆ ಕೇಂದ್ರ ಹಾಗೂ ರಾಜ್ಯ ಶಾಸಕಾಂಗವು ಯಾವುದೇ ಯೋಜನೆ ಅಥವಾ ಕಾರ್ಯವನ್ನು ‘ಉಚಿತ ಕೊಡುಗೆ’ ಎಂದು ವರ್ಗೀಕರಿಸಲು ಗೌರವಾನ್ವಿತ ನ್ಯಾಯಾಲಯಕ್ಕೆ ಯಾವುದೇ ನಿರ್ಬಂಧಿತ ವಿಧಾನವನ್ನು ಹೊಂದಲು ಸಾಧ್ಯವಿಲ್ಲ” ಎಂದು ಡಿಎಂಕೆ ವಾದಿಸಿದೆ.

ಕಲ್ಯಾಣ ಯೋಜನೆಗಳನ್ನು ಸಂವಿಧಾನದ 38 ನೇ ವಿಧಿಯ ಅಡಿಯಲ್ಲಿ ಸಾಮಾಜಿಕ ಸುವ್ಯವಸ್ಥೆ ಮತ್ತು ಆರ್ಥಿಕ ನ್ಯಾಯವನ್ನು ಭದ್ರಪಡಿಸುವ ಉದ್ದೇಶದಿಂದ ‘ಆದಾಯ, ಸ್ಥಾನಮಾನ, ಸೌಲಭ್ಯಗಳು ಮತ್ತು ಅವಕಾಶಗಳಲ್ಲಿನ ಅಸಮಾನತೆಗಳನ್ನು ಕಡಿಮೆ ಮಾಡಲು’ ಉಚಿತ ಸೇವೆಯನ್ನು ಪರಿಚಯಿಸಲಾಗಿದೆ ಎಂದು ಡಿಎಂಕೆ ಅರ್ಜಿಯಲ್ಲಿ ತಿಳಿಸಲಾಗಿದೆ.

“ಯಾವುದೇ ಕಾರಣಕ್ಕೂ ಇದನ್ನು ‘ಉಚಿತ ಕೊಡುಗೆ’ ಎಂದು ಅರ್ಥೈಸಲು ಸಾಧ್ಯವಿಲ್ಲ” ಎಂದು ಡಿಎಂಕೆ ಸಲ್ಲಿಸಿದ ಅರ್ಜಿಯಲ್ಲಿ ಹೇಳಲಾಗಿದೆ.

ಈ ಹಿಂದೆ ನಡೆದ ವಿಚಾರಣೆಯೊಂದರಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ನೇತೃತ್ವದ ಪೀಠವು, ಉಚಿತ ಕೊಡುಗೆಗಳನ್ನು ಒದಗಿಸುವುದು ಗಂಭೀರ ಆರ್ಥಿಕ ಸಮಸ್ಯೆಯಾಗಿದ್ದು, ಚುನಾವಣಾ ಸಮಯದಲ್ಲಿ ಘೋಷಿಸಿದುವ “ಉಚಿತ ಬಜೆಟ್” ಸಾಮಾನ್ಯ ಬಜೆಟ್‌ಗಿಂತ ಹೆಚ್ಚಾಗಿರುತ್ತದೆ ಎಂದು ಹೇಳಿದ್ದರು.

ಇದನ್ನೂ ಓದಿ: ಉಚಿತ ಬಸ್‌ ಪಾಸ್‌ – ದಿಲ್ಲಿ ಮಹಿಳೆಯರು ದಿಲ್‌ ಖುಷ್‌.. : ಮುಂದಿನ ಕೊಡುಗೆ ವಿದ್ಯಾರ್ಥಿಗಳು ಮತ್ತು ಹಿರಿಯ ನಾಗರಿಕರಿಗೆ  

ಈ ವಿಚಾರದಲ್ಲಿ ಮಾರ್ಗಸೂಚಿ ರೂಪಿಸುವಂತೆ ಚುನಾವಣಾ ಆಯೋಗಕ್ಕೆ ಪೀಠ ಸೂಚಿಸಿತ್ತು. ಆದರೆ ಯಾವುದೇ ಕಾನೂನುಗಳು ಇಲ್ಲದೆ ಇರುವುದರಿಂದ ಅಧಿಕಾರಕ್ಕೆ ಬಂದರೆ ಉಚಿತ ಕೊಡುಗೆಗಳನ್ನು ನೀಡುವ ರಾಜಕೀಯ ಪಕ್ಷಗಳ ಭರವಸೆಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗ ಪ್ರತಿಕ್ರಿಯಿಸಿತ್ತ೮.

ಅರವಿಂದ್ ಕೇಜ್ರಿವಾಲ್ ಅವರ ಎಎಪಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಡಿಎಂಕೆಯಂತೆಯೇ ವಾದ ಮಂಡಿಸಿದೆ. ಅರ್ಹ ಮತ್ತು ಹಿಂದುಳಿದ ಜನಸಾಮಾನ್ಯರ ಸಾಮಾಜಿಕ-ಆರ್ಥಿಕ ಕಲ್ಯಾಣಕ್ಕಾಗಿ ಯೋಜನೆಗಳನ್ನು “ಉಚಿತ ಕೊಡುಗೆ” ಎಂದು ವಿವರಿಸಲು ಸಾಧ್ಯವಿಲ್ಲ ಎಂದು ಎಎಪಿ ತನ್ನ ಅರ್ಜಿಯಲ್ಲಿ ಪ್ರತಿಪಾದಿಸಿದೆ. ಅರ್ಜಿದಾರರಾದ ಅಶ್ವಿನಿ ಉಪಾಧ್ಯಾಯ ಅವರು ಕಾನೂನು ವಿಧಾನಗಳ ಮೂಲಕ ರಾಜಕೀಯ ಕಾರ್ಯಸೂಚಿಯನ್ನು ಮುಚ್ಚಿಡಲು ಪ್ರಯತ್ನಿಸುತ್ತಿದ್ದಾರೆ ಎಂದು ಅದು ಆರೋಪಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...