Homeಮುಖಪುಟಉಚಿತ ಬಸ್‌ ಪಾಸ್‌ - ದಿಲ್ಲಿ ಮಹಿಳೆಯರು ದಿಲ್‌ ಖುಷ್‌.. : ಮುಂದಿನ ಕೊಡುಗೆ ವಿದ್ಯಾರ್ಥಿಗಳು...

ಉಚಿತ ಬಸ್‌ ಪಾಸ್‌ – ದಿಲ್ಲಿ ಮಹಿಳೆಯರು ದಿಲ್‌ ಖುಷ್‌.. : ಮುಂದಿನ ಕೊಡುಗೆ ವಿದ್ಯಾರ್ಥಿಗಳು ಮತ್ತು ಹಿರಿಯ ನಾಗರಿಕರಿಗೆ…

ಉಚಿತ ಬಸ್ ಪ್ರಯಾಣವು ಮಹಿಳೆಯರಿಗೆ ಸ್ವಾತಂತ್ರ್ಯವನ್ನು ಮತ್ತು ಅವರ ಕನಸುಗಳನ್ನು ಈಡೇರಿಸುವ ಅವಕಾಶವನ್ನು ನೀಡುತ್ತದೆ...

- Advertisement -
- Advertisement -

ನಿನ್ನೆ ತಾನೇ ದಿಲ್ಲಿ ಮಹಿಳೆಯರಿಗೆ ಉಚಿತ ಬಸ್‌ ಪಾಸ್‌ ನೀಡುವ ಮೂಲಕ ಲಕ್ಷಾಂತರ ಜನರ ಮನಗೆದ್ದ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ವಿದ್ಯಾರ್ಥಿಗಳು ಮತ್ತು ಹಿರಿಯ ನಾಗರಿಕರಿಗೂ ಉಚಿತ ಬಸ್‌ ಪಾಸ್‌ ನೀಡಲು ಚಿಂತನೆ ನಡೆಸಿದ್ದಾರೆ.

ಉಚಿತ ಬಸ್‌ ಪ್ರಯಾಣ ಯೋಜನೆ ಜಾರಿಯಾದ 8 ಗಂಟೆಗಳಲ್ಲಿ 2.2 ಲಕ್ಷ ಮಹಿಳೆಯರು ಈ ಯೋಜನೆಯ ಪ್ರಯೋಜನೆ ಪಡೆದಿದ್ದಾರೆ. ಅವರಲ್ಲಿ ಕೆಲವರು ತಮ್ಮದೇ ಮಾತುಗಳನ್ನು ಯೋಜನೆಯ್ನು ಶ್ಲಾಘಿಸಿದ್ದಾರೆ. ಕೆಲವೊಂದು ಇಲ್ಲಿವೆ.

ದೆಹಲಿಯ ಬಸ್ಸುಗಳಲ್ಲಿ ಮಹಿಳೆಯರಿಗೆ ಪ್ರಯಾಣ ಮತ್ರ ಉಚಿತವಲ್ಲ, ಅವರ ಸುರಕ್ಷತೆಯೂ ಖಾತ್ರಿ ಇದೆ. ಹೇಗೆಂದರೆ ಪ್ರಯಾಣಿಕರ ಸುರಕ್ಷತೆ ಖಚಿತಪಡಿಸಿಕೊಳ್ಳಲು ಪ್ರತಿ ಬಸ್‌ಗಳಲ್ಲಿಯೂ ಸಹ ಮಾರ್ಷಲ್‌ಗಳನ್ನು ನಿಯೋಜಿಸಲಾಗಿದೆ ಎಂದು ದೆಹಲಿಯ ಶ್ವೇತ ಗೋಸ್ವಾಮಿಯವರು ಹರ್ಷ ವ್ಯಕ್ತಪಡಿಸಿದ್ದರೆ.

ಎಎಪಿ ದೆಹಲಿಯ ಉಚಿತ ಬಸ್ ಪ್ರಯಾಣದಿಂದ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂದರೆ “24 ವರ್ಷ ವಯಸ್ಸಿನ ವಿನಿತಾ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಾ ತಿಂಗಳಿಗೆ 12 ಸಾವಿರ ರೂ ಸಂಪಾದಿಸುತ್ತಾಳೆ. ಆದರೆ ಅದರಲ್ಲಿ ಎರಡೂವರೆ ಸಾವಿರ ರೂಗಳನ್ನು ಪ್ರಯಾಣಕ್ಕಾಗಿ ಖರ್ಚು ಮಾಡುತ್ತಿದ್ದಳು. ಈಗ ಆ ಹಣ ಉಳಿದಿದ್ದು ಅವಳು ಖುಷಿಯಾಗಿದ್ದಾಳೆ” ಎಂದು  ಸುಕೃತಿ ದ್ವಿವೇದಿ ಎಂಬುವವರು ಟ್ವೀಟ್‌ ಮಾಡಿದ್ದಾರೆ.

ಮಹಿಳೆಯರಿಂದ ನೇರ ಪ್ರತಿಕ್ರಿಯೆ ಪಡೆಯಲು ನಾನು ಇದೀಗ ಕೆಲವು ಬಸ್‌ಗಳನ್ನು ಹತ್ತಿದ್ದೇನೆ. ವಿದ್ಯಾರ್ಥಿಗಳು, ದುಡಿಯುವ ಮಹಿಳೆಯರು, ಶಾಪಿಂಗ್‌ಗೆ ಹೋಗುವ ಮಹಿಳೆಯರು ಮಾತ್ರವಲ್ಲದೆ, ನಿಯಮಿತವಾಗಿ ಆಸ್ಪತ್ರೆಗೆ ಭೇಟಿ ನೀಡಬೇಕಾದ ಕೆಲವರನ್ನು ನಾನು ಭೇಟಿಯಾದೆ. ಅವರು ಸಹ ಸಂತೋಷವಾಗಿದ್ದಾರೆ ಎಂದು ಅರವಿಂದ್‌ ಕೇಜ್ರಿವಾಲ್‌ ಟ್ವೀಟ್‌ ಮಾಡಿದ್ದಾರೆ.

ಒಟ್ಟು ವರ್ಕ್‌ ಪೋರ್ಸ್‌‌ನಲ್ಲಿ ದಿಲ್ಲಿಯ ಮಹಿಳೆಯರ ಪಾಲು ತೀರಾ ಕಡಿಮೆಯಿದೆ. ಇದಕ್ಕೆ ಸುರಕ್ಷತೆ ಇಲ್ಲದಿರುವುದು ಸಹ ಕಾರಣವಾಗಿದೆ. ಹಾಗಾಗಿ ಮಹಿಳೆಯರಿಗೆ ದೆಹಲಿಯ ಬಸ್‌ ಮತ್ತು ಮೆಟ್ರೊಗಳಲ್ಲಿ ಉಚಿತ ಪ್ರಯಾಣದ ಜೊತೆಗೆ ಸಿಸಿಕ್ಯಾಮರ, ಮಾರ್ಷಲ್‌ಗಳನ್ನಿಟ್ಟು ಸುರಕ್ಷತೆಯನ್ನು ಖಾತ್ರಿಪಡಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಹೆಚ್ಚು ಮಹಿಳೆಯರು ಕೆಲಸಕ್ಕೆ ಮುಂದಾಗುತ್ತಾರೆ ಎಂಬ ವಿಶ್ವಾಸವಿದೆ ಎಂದು ಕೇಜ್ರಿವಾಲ್‌ ನುಡಿದಿದ್ದಾರೆ.

ಈ ಯೋಜನೆಗೆ ಮಹಿಳೆಯರು ತೋರಿದ ಪ್ರತಿಕ್ರಿಯೆಯ ಮುಂದುವರಿಕೆಯಾಗಿ ಹಿರಿಯ ನಾಗರಿಕರು ಮತ್ತು ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಡಲು ಚರ್ಚೆ ನಡೆಸುತ್ತೇವೆ ಎಂದಿದ್ದಾರೆ.

ತೀವ್ರ ಅಸಮಾನತೆ ಇರುವ ದೇಶದಲ್ಲಿ, ಮಹಿಳೆಯರು ಇನ್ನೂ ಪ್ರತಿ ಸಣ್ಣ ಖರ್ಚಿಗೆ ತಮ್ಮ ತಂದೆ, ಗಂಡ ಮತ್ತು ಪುತ್ರರಿಂದ ಹಣವನ್ನು ತೆಗೆದುಕೊಳ್ಳಬೇಕಾದರೆ, ಉಚಿತ ಬಸ್ ಪ್ರಯಾಣವು ಮಹಿಳೆಯರಿಗೆ ಸ್ವಾತಂತ್ರ್ಯವನ್ನು ನೀಡುತ್ತದೆ ಮತ್ತು ಅವರ ಕನಸುಗಳನ್ನು ಈಡೇರಿಸುವ ಅವಕಾಶವನ್ನು ನೀಡುತ್ತದೆ ಎಂದು ಆಪ್‌ ನಾಯಕಿ ಅತಿಶಿ ಅಭಿಪ್ರಾಯಪಟ್ಟಿದ್ದಾರೆ.

ದೆಹಲಿಯ ಮಹಿಳೆಯರು ಉಚಿತ ಬಸ್ ಪ್ರಯಾಣವನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಇಂದು ಒಟ್ಟು ಟಿಕೆಟ್ ಪಡೆದ ಪ್ರಯಾಣಿಕರಲ್ಲಿ 33% ಉಚಿತ ‘ಪಿಂಕ್ ಪಾಸ್’ ಪಡೆದ ಮಹಿಳೆಯರಾಗಿದ್ದಾರೆ. 1 ನೇ ದಿನದಿಂದಲೇ ಸುಗಮ ಅನುಷ್ಠಾನವನ್ನು ಖಚಿತಪಡಿಸಿದ ಡಿಟಿಸಿ ಮತ್ತು ಕ್ಲಸ್ಟರ್ ಬಸ್ ಸಿಬ್ಬಂದಿಯವರ ಶ್ರಮಕ್ಕೆ ಧನ್ಯವಾದಗಳು ಎಂದು ದೆಹಲಿಯ ಸಾರಿಗೆ ಮಂತ್ರಿ ಕೈಲಾಶ್‌ ಗೆಹ್ಲೋಟ್‌ ತಿಳಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...