ಬಿಲ್ಲವ ಮುಖಂಡ, ಸಂಘ ಪರಿವಾರದ ಮಾಜಿ ಕಾರ್ಯಕರ್ತ ಸುನೀಲ್ ಬಜಿಲಕೇರಿಯವರನ್ನು ಫೇಸ್‌ಬುಕ್ ಪೋಸ್ಟ್ ಒಂದಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶುಕ್ರವಾರ ತಡರಾತ್ರಿ ಅವರನ್ನು ಬಂಧಿಸಿ ಕರೆದೊಯ್ದಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗಿದೆ.
ನಮೀಬಿಯಾದಿಂದ ತರಿಸಿದ್ದ ಚೀತಾ ಗರ್ಭಿಣಿಯಾಗಿರುವ ಹಿನ್ನೆಲೆಯಲ್ಲಿ ಸುನೀಲ್ ಬಜಲಕೇರಿಯವರು ಸೀಮಂತ ಮಾಡುವ ಕಾರ್ಯಕ್ರಮದ ಬಗ್ಗೆ ಫೇಸ್‌ಬುಕ್‌ನಲ್ಲಿ ವ್ಯಂಗ್ಯಭರಿತ ಪೋಸ್ಟ್ ಹಾಕಿದ್ದರು. ಈ ಕುರಿತು ಅವರ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು ಎನ್ನಲಾಗಿದೆ.
ಶುಕ್ರವಾರ ರಾತ್ರಿ 11 ಗಂಟೆಗೆ ಸುನೀಲ್ ಬಜಿಲಕೇರಿ ಅವರ ಮನೆಗೆ ತೆರಳಿ ವಶಕ್ಕೆ ಪಡೆದಿದ್ದಾರೆ. ಆಗ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಆನಂತರ ಅವರನ್ನು ಉರ್ವ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.
ಸಂಘಪರಿವಾರದ ನಾಯಕರಾಗಿದ್ದ ಸುನೀಲ್ ಬಜಿಲಕೇರಿಯವರು ಸದ್ಯ ಅದರಿಂದ ಹೊರಬಂದು ಪ್ರಗತಿಪರ ಸಂಘಟನೆಗಳ ಜೊತೆ ಗುರುತಿಸಿಕೊಂಡಿದ್ದಾರೆ. ಅಲ್ಲದೆ ಸಂಘ ಪರಿವಾರವು ತಮ್ಮ ರಾಜಕೀಯ ಅಧಿಕಾರಕ್ಕಾಗಿ ಶೂದ್ರರನ್ನು ಬಲಿಕೊಟ್ಟು ದ್ವೇಷ ರಾಜಕೀಯ ಮಾಡುತ್ತಿದೆ ಎಂದು ಟೀಕಿಸುತ್ತಿದ್ದರು. ಅಲ್ಲದೆ ಹಿಂದುತ್ವದಿಂದ ಬಂಧುತ್ವದೆಡೆಗೆ ಎಂಬ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರ ಮೇಲಿನ ರಾಜಕೀಯ ದ್ವೇಷದ ಕಾರಣಕ್ಕೆ ಬಂಧನ ನಡೆದಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇದನ್ನೂ ಓದಿ: ಹರ್ಷನ ಜೀವಕ್ಕಿರುವ ಬೆಲೆ ದಲಿತ ವ್ಯಕ್ತಿ ದಿನೇಶನ ಜೀವಕ್ಕಿಲ್ಲವೇ?: ಸುನಿಲ್ ಬಜಿಲಕೇರಿ
ಶಿವಮೊಗ್ಗದ ಹರ್ಷ ಕೊಲೆ, ಮಂಗಳೂರಿನ ಪ್ರವೀಣ್ ನೆಟ್ಟಾರು ಕೊಲೆ ಕುರಿತು ಸುನೀಲ್ ಬಜಿಲಕೇರಿ ದನಿಯೆತ್ತಿದ್ದರು. ಬಿಜೆಪಿಯಿಂದ ನಾರಾಯಣಗುರುಗಳಿಗಾದ ಅವಮಾನ ಮರೆಸಲು ಹಿಜಾಬ್ ಗಲಭೆ ಸೃಷ್ಟಿಸಲಾಗಿದೆ ಎಂದು ಆರೋಪಿಸಿದ್ದರು. ಈ ಎಲ್ಲಾ ಕಾರಣಗಳಿಗಾಗಿ ಅವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ, ಮಧ್ಯರಾತ್ರಿ ಜೈಲಿಗಟ್ಟಲಾಗಿದೆ ಎಂದು ಆರೋಪಿಸಲಾಗಿದೆ.
ಸುನೀಲ್ ಬಜಿಲಕೇರಿಯವರ ಬಂಧನ ಅಕ್ರಮ ಮತ್ತು ಅನ್ಯಾಯದ ಪರಮಾವಧಿ ಎಂದು ಕರೆದಿರುವ ಡಿವೈಎಫ್ಐ ರಾಜ್ಯಾಧ್ಯಕ್ಷರಾದ ಮುನೀರ್ ಕಾಟಿಪಳ್ಳರವರು ಕೂಡಲೇ ಬಿಡುಗಡೆಗೆ ಆಗ್ರಹಿಸಿದ್ದಾರೆ. “ಮಂಗಳೂರು ನಗರದ ಶಾಸಕರುಗಳಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಟೀಕಾತೀತರಾ? ನರೇಶ್ ಶೆಣೈ ಸೂಪರ್ ಶಾಸಕರಾ? ಇವರ ವಿರುದ್ದ ಮಾತಾಡಿದರೆ ಮಧ್ಯ ರಾತ್ರಿ ಮನೆ ನುಗ್ಗಿ ಸೀದಾ ಜೈಲಿಗಟ್ಟುವುದಾ? ಅದಕ್ಕಾಗಿ ಇಲ್ಲದ ಪ್ರಕರಣ ಸೃಷ್ಟಿಸುವುದಾ? ಕೋರ್ಟಿಗೆ ರಜಾ ಇರುವ ದಿನಗಳನ್ನೇ ಬಂಧನಕ್ಕಾಗಿ ಆಯ್ದು ಕೊಳ್ಳುವುದಾ ? ಮಂಗಳೂರು ಪೊಲೀಸು ಇಲಾಖೆ ಅಂದರೆ ಬಿಜೆಪಿ ಶಾಸಕರ ಕಚೇರಿಯಿಂದ ಬಂದ ಸ್ಕ್ರಿಪ್ಟ್ ಆಧಾರದಲ್ಲಿ ಅವರ ವಿರೋಧಿಗಳ ಬಾಯಿ ಮುಚ್ಚಿಸುವ ಹೊರ ಗುತ್ತಿಗೆ ಏಜನ್ಸಿಯಾ ? ಇವರಿಗೊಂದು ಸ್ವಂತಿಕೆ ಇಲ್ಲವಾ? ಎಂದು ಅವರು ಪ್ರಶ್ನಿಸಿದ್ದಾರೆ.
ಸುನಿಲ್ ಬಜಿಲಕೇರಿ ಬಂಧನ ಅಕ್ರಮ, ಅನ್ಯಾಯದ ಪರಮಾವಧಿ. ಚೀತಾ ಗರ್ಭಿಣಿಯಾದ ವಿಷಯದಲ್ಲಿ ಯಾವುದೇ ರಾಜಕೀಯ ಉಲ್ಲೇಖ ಇಲ್ಲದ ಒಂದು ಸಾಮಾನ್ಯ ಹಾಸ್ಯ ಪೋಸ್ಟ್ ಹಾಕಿದರೆ ಹಿಡಿದು ಜೈಲಿಗೆ ತಳ್ಳುವುದು ಅಂದರೆ ಇದರ ಹುನ್ನಾರ ಅರ್ಥ ಆಗದೆ ಇರುವುದಿಲ್ಲ. ಇವರಿಗೆ ಭಯ ಹುಟ್ಟಿಸಲು ಒಂದು ನೆಪ ಬೇಕು ಅಷ್ಟೆ. ಇದು ಜನಸಾಮಾನ್ಯರಿಗೆ “ಬಾಯಿ ಮುಚ್ಚಿ ಕೂತುಕೊಳ್ಳಿ” ಎಂದು ಬಿಜೆಪಿ ಶಾಸಕರುಗಳು ಹಾಕಿದ ನೇರ ಬೆದರಿಕೆ. ಇದನ್ನು ಎಲ್ಲರೂ ಒಕ್ಕೊರಲಿನಿಂದ ವಿರೋಧಿಸಬೇಕು, ಪ್ರತಿಭಟಿಸಬೇಕು. ಇಂದು ಬಜಿಲಕೇರಿ. ನಾಳೆ ನಾವು, ನೀವು ಎಂದು ಅವರು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: ನಾರಾಯಣ ಗುರುಗಳಿಗಾದ ಅವಮಾನ ಮುಚ್ಚಿಹಾಕಲು ಹಿಜಾಬ್ ವಿವಾದ ಸೃಷ್ಟಿ: ಸಂಘ ಪರಿವಾರದ ಮಾಜಿ ನಾಯಕ ಸುನಿಲ್ ಬಜಿಲಕೇರಿ



ಈ ಬಂದನ ಕಂಡನಾರ್ಹ.
ಈ ಮಾನಗೇಡಿ ಚಡ್ಡಿಗಳ ಪಾದ ಸೇವಕರಾಗಿ ಮಾರ್ಪಟ್ಟಿರುವ ಕರ್ನಾಟಕ ಪೋಲೀಸ್ ಇಲಾಖೆಯವ್ರು ತಮಗೆ ವಿದ್ಯೆ, ಬುದ್ಧಿ, ವಿವೇಕ,ವಿವೇಚನೆ ಯಾವುವೂ ಇಲ್ಲವೆಂಬುದನ್ನು ಪದೇ ಪದೆ ಸಾಬೀತು ಪಡಿಸುತ್ತಿದ್ದಾರೆ. ಸರಕಾರಗಳು ಬದಲಾಗುತ್ತಿರುತ್ತವೆ ಎಂಬುದನ್ನು ಇವರು ನೆನಪಿಟ್ಟುಕೊಳ್ಳಲಿ.