Homeಮುಖಪುಟಹಿಂಗಿದ್ದ ನಮ್ಮ ರಾಮಣ್ಣ-12; "ಶೈವ ಸಂಸ್ಕೃತಿಲಿ ನೀರೆ ಕಂಡ್ಲ ಪ್ರಧಾನ"

ಹಿಂಗಿದ್ದ ನಮ್ಮ ರಾಮಣ್ಣ-12; “ಶೈವ ಸಂಸ್ಕೃತಿಲಿ ನೀರೆ ಕಂಡ್ಲ ಪ್ರಧಾನ”

- Advertisement -
- Advertisement -

ನಮ್ಮೂರ ನಂಜುಂಡಯ್ಯ ನಿನಿಗೂ ಗೊತ್ತಲ್ಲ. ಅವುರ ಜೊತೆಲಿ ರಾಮಣ್ಣ ಕದಬಳ್ಳಿ, ಹಿರಿಸ್ಯಾವೆ ಇಲ್ಲಿಗ್ಯಲ್ಲ ಹೋಗಿ ಬರೋನು. ಕಲ್ಲಳ್ಳಿಲಿರೊ ನಮ್ಮ ಅಕ್ಕನ ಮನಿಗೂ ಹೋಗಿದ್ದ; ಅವುಳು ತನ್ನ ಮಗಳಿಗೆ ಒಂದು ಗಂಡು ನೋಡಕೇಳಿದ್ಲು. “ನಿನಿಗ್ಯಾಕಕ್ಕ ಮಗಳ ಮದುವೆ ಯೋಚನೆ. ಅವುಳಿಗೆ ಗಂಡು ನೋಡೋ ಜವಾಬ್ದಾರಿ ನನಿಗಿರ್ಲಿ ಅಂದಿದ್ದ. ಇಂತ ಮಾತು ಕೇಳಿದ್ರೆ ಯಾರಿಗೆ ಸಂತೋಷಾಗದಿಲ್ಲ ಹೇಳು. ಆ ಮಾತಂದ ಕೂಡ್ಳೆ ವಳ್ಳೆ ಅಡಗೆ ಮಾಡಿ ತುಪ್ಪ ಹಾಕಿ ಕಳಸೋಳು. ಊಟ ಅಂದ್ರೆ ಇನ್ನೇನು ನಾಟಿಕೋಳಿ. ಆ ಸಾರಿಗೆ ತುಪ್ಪ ಹಾಕಿದ್ರೆ ಕೇಳಿಯೇ. ರಾಮಣ್ಣ ಮನ ಮುಟ್ಟಂಗೆ ಮಾತಾಡೋನು. ಆದ್ರೆ ಒಬ್ಬ ಬಿಡುವಿಲ್ಲದ ವೈದ್ಯ ಮತ್ತೆ ಕತೆಗಾರನಿಗೆ ಗಂಡು ನೋಡೋ ಪುರುಸತ್ತೆಲ್ಲಿ? ಅದು ಗಂಡು ನೋಡಕ್ಕೇಳಿದೊರಿಗೆ ಗೊತ್ತಾಯ್ತು ಅನ್ಸುತ್ತೆ. ಅವುರ ದಾರಿ ಅವುರು ನೋಡಿಕಂಡ್ರು.

ನಮ್ಮ ಎಚ್.ಎಲ್ ಕೇಶವಮೂರ್ತಿ ನಮ್ಮೂರಿನೋರೆಯ. ಇಂಜಿನಿಯರಿಂಗ್ ಓದಿ ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ಪ್ರೊಫೆಸರಾಗಿದ್ರು. ಎತ್ತರದಾಳು; ಗುಣದಲ್ಲೂ ಎತ್ತರವಾಗಿದ್ದೋರು. ಬರಿತಿದ್ದುದು ಮಾತ್ರ ’ಥೂ ಹಲ್ಕ’ ಕಾಲಂ. ಒಳ್ಳೆ ಹಾಸ್ಯ ಬರಿಯೋರು. RUM ಅಂದ್ರೆ ರಂಭಾ ಊರ್ವಶಿ ಮೇನಕೆ ಅಂತ ನಮಿಗ್ಯಲ್ಲ ತೋರಿದೋರೆ ಅವುರು. ತುಂಟಾಟದ ಜನಗಳ್ಯಲ್ಲ ಅವುರ ಕಾಲಂ ಓದೋರು. ಅದರಲ್ಲೂ ಲಂಕೇಶ್ ಪತ್ರಿಕೆಲಿ ಅವುರು ಬರದದ್ನೆಲ್ಲ ಬುಡದಂಗೆ ಓತ್ತಿದ್ದೊ. ಅವುರೊಂದು ಪುಸ್ತಕ ಬರದು ಪ್ರಕಟಿಸಿದ್ರು. ಅದ ಬಿಡುಗಡೆ ಮಾಡಬೇಕಲ್ಲಾ, ಯಾರಿಂದ ಮಾಡಸದು ಅಂತ ಯೋಚನೆ ಮಾಡಿ ಕೆ.ಹೆಚ್ ಶ್ರೀನಿವಾಸನ್ನ ಕರಸಿದ್ರು. ಶ್ರೀನಿವಾಸ ಭಾಳ ಬುದ್ಧಿವಂತ ರಾಜಕಾರಣಿ. ಸಾಹಿತ್ಯ ಸಂಗೀತದ ಬಗ್ಗೆ ಭಾಳ ಅಭಿರುಚಿ ಇದ್ದೋರು. ಶಿವಮೊಗ್ಗದಂತ ಸಾಂಸ್ಕೃತಿಕವಾದ ಊರಿಂದ ಗೆದ್ದು ಬರಕ್ಕೆ ಶ್ರೀನಿವಾಸನಂತ ವಿದ್ವಾಂಸನಿಗೆ ಸಾಧ್ಯ ಅಂತ ತಿಳಕಂಡಿದ್ದೊ. ಇದು ತಪ್ಪು ತಿಳಿವಳಿಕೆ ಅಂತ ಅಮ್ಯಾಲೆ ಗೊತ್ತಾತು. ಇರ್ಲಿ. ನಮ್ಮ ಕೇಶವಮೂರ್ತಿ ಬರದ ’ಯಂಗಾರ ಟಿಕೆಟ್ ಕೊಡಿ’ ಅನ್ನೊ ಪುಸ್ತಕ ಬಿಡುಗಡೆಗೆ ಶ್ರೀನಿವಾಸ ಬಂದ್ರು. ಈ ಪುಸ್ತಕದ ಒಂದು ಕತೆಲಿ ಪಾರ್ಟಿಯಿಂದ ಹಿರಿಯ ರಾಜಕಾರಣಿ ನನಿಗೆ ಟಿಕೆಟ್ ಕೊಡಿ ಅಂತನೆ. ಅಂದ್ರೆ ಹಿರಿತನ ಪರಿಗಣಿಸಿ ಕೊಡದಾದ್ರೆ ನನಿಕ್ಕೊಡಿ, ಯುವಕರನ್ನ ಪರಿಗಣಿಸೊದಾದ್ರೆ ನನ್ನ ಮಗನಿಗೆ ಕೊಡಿ, ಮಹಿಳೆಯರಿಗೆ ಕೊಡದಾದ್ರೆ ನನ್ನೆಡ್ತಿಗೆ ಕೊಡಿ ಇಲ್ಲ ನನ್ನ ಸೊಸಿಗೆ ಕೊಡಿ ಅಂತನೆ. ವಳ್ಳೆ ಇಂಟರೆಸ್ಟಿಂಗ್ ಕತೆ ಅದು.

“ಆ ಕತೆ ಈಗ ನಿಜವಾಗ್ಲು ನ್ಯಡಿತಾ ಅದಲ್ಲ ಹೇಳಣ್ಣ. ಕೆಲವು ಕತೆ ಕಾಲಜ್ಞಾನದ ಕತೆ ತರ ಇರತವೆ. ಅಂಥ ಕತೆ ಅದು. ನನ್ನ ಪಾರ್ಟಿಗೆ ನಾನೇ ಅಧ್ಯಕ್ಷ. ನನ್ನ ಮಕ್ಕಳು ಮರಿಗಳು ಸೊಸೆರು, ನಂಟ್ರು ಇಷ್ಟ್ರು ಬೀಗರು ಬಿಜ್ಜರಿಗ್ಯಲ್ಲ ಟಿಕೆಟ್ ಕೊಡನು ನಾನೆ ಅನ್ನಂಗಾಯ್ತಲ್ಲ ಹೇಳು”

ಅಗೆ ನೋಡಿದ್ರೆ ಕೇಶವಮೂರ್ತಿ ಸುಮಾರು ಕತೆ ನ್ಯಡಿತಾ ಅವೆ. ಬಿಡುಗಡೆ ಮಾಡಕ್ಕೆ ಬಂದ ಶ್ರೀನಿವಾಸ ಚನ್ನಾಗಿ ಮಾತಾಡಿದ, ಕಾರ್ಯಕ್ರಮನೂ ಚನ್ನಾಗಿತ್ತು. ಯಲ್ಲ ಸರಿ ರಾಮಣ್ಣನಿಗೆ ಉರಿಯತ್ತಿಗತ್ತು.

ನಾನವುನ ಕ್ವಾಟ್ರಸಿಗೋದಾಗ “ಏನ್ಲ ಆ ಶ್ರೀನಿವಾಸನ್ನ ಕರಸಿ ಕೇಶವಮೂರ್ತಿ ಪುಸ್ತಕ ಬಿಡುಗಡೆ ಮಾಡುಸ್ತಿ, ನಮ್ಮವ ಮಾಡಸಕ್ಕಾಗದಿಲವುಲ ನಿನಿಗೆ? ಒಂದೇ ಊರಿನೋರು ಸೇರಿಕಂಡು ಕಡಿಗೂ ನಿಮ್ಮಾಟ ತೋರೆಬುಟ್ರಲ್ಲ” ಅಂತ ರೇಗಿದ. ಕೆಲವು ಮಾತು ಹಳ್ಳಿಗರ ಸಣ್ಣತನದಲ್ಲೇ ಇರವು, ಯಾವ ಮುಚ್ಚುಮರೆ ಇಲ್ದೆ ಜಾಡಿಸಿಬುಡೋನು. ನಾನು ಇದೇನಿಂಗಂದನಲ್ಲ ಅಂತ ಅವುನ್ನೆ ನೋಡ್ತ ನಿಂತಗಂಡೆ. “ಮಕ ಏನ್ನೊಡ್ತಿ ಕೈ ತ್ವಳಕಲ ಉಣ್ಣುವೆ” ಅಂದ.

ಅವುನಂದ ಮಾತು ನನಿಗೆ ಕ್ವರಿತಿದ್ರಿಂದ “ಅದ್ಯಾವುದು ನಿನ್ನ ಪುಸ್ತಕ ಕೊಡಪ್ಪ, ಬಿಡುಗಡೆ ಮಾಡ್ಸನ, ಯಾರ್‍ನ ಕರಿಬೇಕೇಳು” ಅಂದೆ.

“ಈಗ್ಯಾವು ಇಲ್ಲ ಕಲ” ಅಂದ.

“ಮತ್ತೆ ಬರದು ಮಡಿಕಂಡಿರನಂಗೆ ಹೇಳ್ತಿ” ಅಂದೆ. ಏನೊ ಹೊಳದೋನಂಗೆ, ಲೇ ಒಂದು ಕ್ಯಲಸ ಮಾಡ್ಳ. ಯಂಗಿದ್ರು ನಮ್ಮ ಪ್ರೈಮರಿ ಹೆಲ್ತ್ ಸೆಂಟರ್ ಕಟ್ಟಡಕ್ಕೆ ನಲ್ಲಿ ಕನಕ್ಷನ್ ಕೊಡ್ತರೆ, ಆ ಕಾರ್ಯಕ್ರಮಕ್ಕೆ ನಿಮ್ಮ ಅಣ್ಣಯ್ಯನ ಕರಸು ಅಂದ. ಅಣ್ಣಯ್ಯ ಅಂದ್ರೆ ಹಿರಿಸ್ಯಾವೆ ಶ್ರೀಕಂಠಯ್ಯ. ಆಗವುರು ಜನಾಂಗದಲ್ಲಿ ಪ್ರಭಾವಿ ರಾಜಕಾರಣಿ. ಚುಂಚನಗಿರಿ ಬಹುತೇಕ ಕಟ್ಟಡದ ಶಿಲಾನ್ಯಾಸ ಪ್ರಾರಂಭೋತ್ಸವದಲ್ಲಿ ಅವುರೆಸರಿನ ಕಲ್ಲವೆ. ನಮ್ಮ ರಾಮಣ್ಣ ಅಂಥೋರಿಂದ ನಲ್ಲಿ ತಿರುಗಿಸಿದ್ರೆ ನಾನೊಬ್ಬ ಭಗೀರಥನಂಗಾಯ್ತಿನಿ ಅಂತ ತಿಳಕಂಡಿದ್ದ. ನಿಜವಾಗ್ಲು ಆಗವುನು ತುಂಬಾ ಕೆಲ್ಸ ಮಾಡಿದ್ದ. ಡಿ.ಹೆಚ್.ಓ ಪ್ರೊಗ್ರೆಸ್ ವರ್ಕ್‌ನ ಕೇಳೋನು. ಅದಕ್ಕಾಗಿ ರಾಮಣ್ಣ ತುಂಬಾ ಕೆಲಸ ಮಾಡೋನು. ಒಂಥರ ಹರದನಳ್ಳಿಲಿ ಮಾಡಿದ್ದ ಕ್ಯಲಸನ್ಯಲ್ಲ ಇಲ್ಲೂ ಮಾಡಿದ. ಅವುನೇ ಡ್ರಾಯಿಂಗಾಪಿಸರ್ರಾದ್ರಿಂದ ಜನಗಳಿಂದ ಕ್ಯಲಸ ತಗಿಯೋನು. ಆದ್ರಿಂದ ತನ್ನ ಸಾಧನೆ ಮಂತ್ರಿಗಳ ಗಮನಕ್ಕೆ ಬರ್ಲಿ ಅನ್ನೋದು ಅವುನಪೇಕ್ಷೆಯಾಗಿತ್ತು. ಆದ್ರಿಂದ ತಾನು ಬರದ ಕತೆ ಪುಸ್ತಕ ಬಿಡುಗಡೆಗಿಂತ ಹೆಲ್ತಸೆಂಟರ್‌ಗೆನಲ್ಲಿ ನೀರುಬರದು ಮುಖ್ಯವಾಗಿತ್ತು.

“ಅಲ್ಲೊ ಮಾರಾಯ ಆಸುಪತ್ರೆ ವಳಗಾಕಿರೊ ನಲ್ಲಿ ತಿರುಗ್ಸಕ್ಕೆ ಮಿನಿಸ್ಟ್ರ ಕರಸು ಅಂತಿಯಲ್ಲಾ, ನಿನಿಗೇನೇಳನ. ಮನುಷ್ಯ ಇಷ್ಟು ಸಣ್ಣದಾಗಿ ಯೋಚನೆ ಮಾಡಬಾರ್ದು” ಅಂದೆ. “ನಿನಿಗೇನು ಗೊತ್ಲ ನೀರಿತ ಮಹತ್ವ. ಆಸ್ಪತ್ರೆ ಉದ್ಘಾಟನೆ ಆಯ್ತು ಅಂತ್ಲೆ ಇಟಗೊ. ನೀರಿಲ್ದೆ ಅಲ್ಲೇನು ಮಾಡಿಲ. ನದಿ ಪಕ್ಕದಲ್ಲೆ ನಾಗರಿಕತೆ ಹುಟ್ಟಿರದು ತಿಳಕೊ. ಅದು ಮಿನಿಷ್ಟ್ರಿಗೂ ಗೊತ್ತು. ನೀನು ಸುಮ್ಮನೆ ಕರಿಲ” ಅಂದ.

ಇದನ್ನೂ ಓದಿ: ಹಿಂಗಿದ್ದ ನಮ್ಮ ರಾಮಣ್ಣ-11; ’ನಾಗೇಗೌಡ್ರ ದೊಡ್ಡಮನೆ ನೋಡಬೇಕು ಕಲ’ ಅಂದ-ಅವುನ ಕಲ್ಪನೆಯ ದೊಡ್ಡಮನೆ ಅಲ್ಲಿರಲಿಲ್ಲ

ನಾನು ಸುಮ್ಮನಾದೆ. ಆಗ ತಿರುಗ “ನೋಡ್ಲ ನಮ್ಮ ಜನಕೆ ನೀರಿನ ಮಹತ್ವನೇ ಗೊತ್ತಿಲ್ಲ. ಶೈವ ಸಂಸ್ಕೃತಿಲಿ ನೀರೆ ಕಂಡ್ಲ ಪ್ರಧಾನ. ಮಳೆಹನಿ ಬಿದ್ದಾಗ್ಲೆ ಭೂಮಿ ಕೆಲಸ ಶುರುವಾಗದು. ನೀರಿದ್ದ ಜಾಗ ಸಮೃದ್ಧವಾಗಿರತವೆ. ಇಲ್ಲದ ಜಾಗ ಬರಡಾಗಿರತವೆ. ಮನುಸ ಸತ್ತಾಗ ಬಾಯಿಗೆ ನೀರು ಬುಡ್ತರೆ ಕಲ. ನೀರಿಲ್ದೆಯಿದ್ರೆ ಜಗತ್ತು ಒಂದು ಕ್ಷಣನೂ ಇರಲ್ಲ ಕಲ. ಮಿನಿಸ್ಟ್ರಿಂದ ನಲ್ಲಿ ಉದ್ಘಾಟನೆಯಾಗ್ಲಿ. ಜನಕೆ ನೀರಿನ ಮಹತ್ವ ಏನು ಅನ್ನದ ಹೇಳನ ಅಂತ ನೀರಾವಾರಿ ಎಕ್ಸ್‌ಪರ್ಟ್ ತರ ಮಾತಾಡಿದ. ಆ ಕ್ಷಣಕೆ ಅವುನ ಬಗ್ಗೆ ಅಭಿಮಾನ ಬತ್ತು. ಆದ್ರೆ ನಲ್ಲಿ ಉದ್ಘಾಟನೆಗೆ ಮಿನಿಸ್ಟ್ರು ಕರಿಯೋ ಅಂತ ಹುಡುಗಾಟಿಕೆ ಕ್ಯಲಸಕ್ಕೆ ಹೋಗಲಿಲ್ಲ.

ರಾಮಣ್ಣ ನಾಗಮಂಗಲದಲ್ಲಿ ಇದ್ದಾಗ ಬತ್ತಿದ್ದ ಸಾಹಿತಿಗಳು ಬೆಳ್ಳೂರಿಗೆ ಬಂದಮ್ಯಾಲೆ ಕಡಿಮಾದ್ರು. ರಾಮಣ್ಣನಿಗೂ ಇಲ್ಲಿ ಕೆಲಸ ಜಾಸ್ತಿಯಾಗಿತ್ತು. ಅವುನ ವರ್ಗಾವಣೆ ಸಮಸ್ಯೆಗಿಂತ ನನ್ನ ವರ್ಗಾವಣೆ ಸಮಸ್ಯೆ ಎದುರಾಯ್ತು. ಅವುನ ವರ್ಗಾವಣೆ ಅರಸು ಕಾಲದ್ದು. ನನ್ನ ವರ್ಗಾವಣೆ ಜೆ.ಹೆಚ್ ಪಟೇಲ್ರ ಕಾಲದ್ದು. ಅವುರು ಯಲ್ಲಾಕ್ಕು ಬಿ.ಎಸ್ ಪಾಟಿಲನ ಕಡೆ ಕೈ ತೋರತಿದ್ರು. ಆದ್ರೆ ಆ ಪಾಟೀಲನೆ ನನ್ನ ಗಾಂಧಿನಗರಕ್ಕೆ ಹಾಕಿದ್ದು. ಪಟೇಲ್ರಿಗೆ ನಮ್ಮಣ್ಣ ತುಂಬ ಪರಿಚಯ ಇದ್ದಿದರಿಂದ ಅಣ್ಣನ್ನ ಕರಕಂಡು ಪಟೇಲ್ರತ್ರಕ್ಕೆ ಹೋದೆ. ಈ ಪಟೇಲ್ರು ಸೋಷಲಿಸ್ಟರು. ಅವುರು ನಿರುದ್ಯೋಗ ಬಗ್ಗೆ ಚಿಂತೆ ಮಾಡೋರೆ ವರತು ವರ್ಗಾವಣೆ ಬಗ್ಗೆ ಯೋಚನೆ ಮಾಡೋರಲ್ಲ. ಕ್ಯಲಸ ಸಿಕ್ಕಿದ ಮ್ಯಾಲೆ ಎಲ್ಯಾದರೇನು ಹೋಗಿ ಮಾಡಬೇಕು. ಅದು ಬುಟ್ಟು ವಳ್ಳೆ ಜಾಗನೆ ಬೇಕು ಅಂದ್ರೆ ಸೋಷಲಿಸ್ಟ ಮನಸು ಒಪ್ಪತಿರಲಿಲ್ಲ. ಅದ್ಕಕಿಂತ್ಲೂ ವರ್ಗಾವಣೆದೆ ಒಂದು ದಂಧೆಯಾದ್ರೆ ಯಾರೂ ಕ್ಯಲಸ ಮಾಡದೆ ಬರೀ ವರ್ಗಾ ಮಾಡಿಸಿಗಳದ್ರಲ್ಲೇ ಇರತರೆ ಅದ್ರಿಂದ ನಮ್ಮಣ್ಣನ ಕರಕಂಡೋದಾಗ್ಲು ಪಟೇಲ್ರು “ಏ ಪಾಟೀಲ ಅದೇನ್ ನೋಡು. ಕೃಷ್ಣಪ್ಪನೋರು ಬಂದವುರೆ” ಅಂತ ವಳ್ಳೆ ಮಾತಾಡಿ ಕಳಿಸಿದ್ರು. ಆದ್ರು ಏನೂ ಆಗಲಿಲ್ಲ. ಹೆಚ್.ಎನ್. ನಂಜೇಗೌಡ್ರು ಬಸವನಗುಡಿಲಿದ್ರು; ಇವ್ಯಲ್ಲ ಸುಲಭವಾಗಿ ಸಿಗೊ ಜಾಗಲ್ಲ ಅಂತ ತಿಳಿದು, ಆಗ ಇನ್ನೇನು ಮಾಡದು ಅಂತ ವರ್ಗಾವಣೆ ದಂದೆಗಿರೊ ಮಾರ್ಗನೆ ಹಿಡಿಬೇಕಾಯ್ತು. ಆಗ ವಿ.ಸೋಮಣ್ಣ ನಮ್ಮ ಕಾರ್ಪೊರೇಟ್ರು. ಮುಂದೆ ಆತ ಇನ್‌ಚಾರ್ಜ್ ಮಂತ್ರಿಯಾದ್ರು; ಹಳೆಬಾಂಧವ್ಯ ಹೇಳಿದಾಗ ಬಸವನಗುಡಿಲಿ ನಮ್ಮ ಜನ ಜಾಸ್ತಿಯವರೆ ಅಂತ ತಿಳಿದು ನಂಜೇಗೌಡ್ರ ಶಿಫಾರಸ್ಸಿಗೆ ಆರ್ಡರ್ ಇಶ್ಯೂ ಮಾಡಿದ್ರು. ನಾನೊಬ್ಬ ಮಾಜಿಮಂತ್ರಿ ತಮ್ಮ ಅನ್ನದು ಯಾವ ಕ್ಯಲಸನೂ ಮಾಡಲಿಲ್ಲ. ಏನು ಬೇಕೊ ಅದ ಮಾಡಿದಾಗ್ಲೆ ಆರ್ಡರು ಕೈಗೆ ಬತ್ತು. ಇದು ಯರಡು ದಶಕದ ಹಿಂದಿನ ಮಾತು. ಈಗಂತೂ ಮಾತಾಡಂಗೇಯಿಲ್ಲ ಬುಡು. ರಾಮಣ್ಣನ ಕ್ಯಲಸನ ಮುಖ್ಯಮಂತ್ರಿಯಿಂದ್ಲೇ ಮಾಡಿಸಿದ ನಾನು, ನನ್ನ ಕ್ಯಲಸಕ್ಕೆ ಕಷ್ಟ ಪಟ್ಟಿದ್ದೂ ಅಲ್ದೆ ಅನ್ಯಮಾರ್ಗ ಹಿಡಿಬೇಕಾಯ್ತು.

ನನಿಗೆ ದೇವೆಗೌಡ್ರ ಪರಿಚಯನೂ ಚನ್ನಾಗೇಯಿತ್ತು. ಅವುರೂ ಜನಗಳ ಕಷ್ಟಕ್ಕೆ ಸ್ಪಂದಿಸೊ ರಾಜಕಾರಣಿನೆ. ಅದ್ಕೆ ಅಲವ ಅವುರ ಮನೆ ಹತ್ರ ಜನಗಳಿರದು. ದೇವೇಗೌಡ್ರು ನಮ್ಮೂರಿಗೂ ಬತ್ತಿದ್ರು ಆಗ ನಮ್ಮೂರ ಹೆಚ್.ಬಿ ರಾಮೇಗೌಡ್ರ ಮುಖಾಂತರ ಪರಿಚಯ ಆಗಿದ್ರು. ಡಾ. ಕೃಷ್ಣನೂ ಬಂದು ಹೋಗನು. ಇವುರ್‍ಯಲ್ಲ ಪದೇಪದೆ ಬಂದು ಹೋಗದ್ರಿಂದ ಪರಿಚಯ ಆಗಿದ್ರು. ದೇವೇಗೌಡ್ರಂತೂ ನನ್ನನ್ನ ಎಲ್.ಕೆ ಅಡ್ವಾನಿಗೆ ಪರಿಚಯ ಮಾಡಿಸಿ, ಇರಾನ್‌ಗೆ ಕಳಿಸೋ ವ್ಯವಸ್ಥೆ ಮಾಡಿದ್ರು. ಆ ಟೈಮಲ್ಲಿ ವೆಸ್ಪಾ ಸ್ಕೂಟರ್‌ನ ಎಮ್ಮೆಲ್ಲೆ ಕೋಟಾದಲ್ಲಿ ಡಿಸ್‌ಕೌಂಟಿಗೆ ಕೊಡರು. ದೇವೇಗೌಡ್ರ ಕೇಳಿದ್ದೆ; ಆಗ ಅವುರ ಜೊತೆಯಿದ್ದ ಸಿ.ಎಂ ಇಬ್ರಾಹಿಂ ನನಿಗೆ ಬೇಕು ಅಂತ ಹಟ ಹಿಡಿದಿದ್ರು. ಹಾಗೆ ಒಂದಿನ ದೇವೇಗೌಡ್ರ ನೋಡಕ್ಕೋಗಿದ್ದೆ. ವಿಧಾನಸೌಧದ ಲಾಂಜಲಿದ್ರು. “ಏನು ಡಾಕ್ಟರೆ” ಅಂದ್ರು. “ಸ್ಕೂಟರ್ ಕೊಡಿಸಿ ಸಾರ್” ಅಂದೆ. ಅಂಗಂದ ಕೂಡ್ಲೆ ಸಿಟ್ಟಿನಿಂದ “ಹೋಗಪ್ಪ ಹೋಗು, ನಿಮ್ಮಣ್ಣ ಶ್ರೀಕಂಠಯ್ಯನೆ ಜೋಬಲ್ಲವುನೆ, ನೀನಿಲ್ಲಿ ಬಂದು ಸ್ಕೂಟರ್ ಕೇಳ್ತಿ” ಅಂತ ಮುಖ ತಿರುಗಿದ್ರು. ನಾನು ನಮ್ಮಣ್ಣನಿಗಿಂತ್ಲೂ ದೇವೇಗೌಡ್ರ ಅಭಿಮಾನಿಯಾಗಿದ್ದೆ. ದೇವರಾಜ ಅರಸು ಹೇಮಾವತಿ ನೀರನ್ನ ನಾಗಮಂಗಲಕ್ಕೆ ಕೊಡ್ತಿನಿ ಅನ್ನೊ ಆಶ್ವಾಸನೆ ಸಿಕ್ಕಿದ ಮೇಲೆ ನಮ್ಮಣ್ಣ ಕಾಂಗ್ರೆಸ್ ಸೇರಿದ್ದು. ಇಲ್ಲಿ ಸ್ವಹಿತಾಸಕ್ತಿಗಿಂತ ಬರಡು ತಾಲೂಕಿನ ನೀರಿನ ಸಮಸ್ಯೆ ನಮ್ಮಣ್ಣ ಪಾರ್ಟಿ ಬದಲಾಯ್ಸಂಗೆ ಮಾಡಿತ್ತು. ನನಿಗೆ ಲೀಡ್ರುಗಳು ಕಾಣತಿದ್ರೆ ವರತು ಪಾರ್ಟಿಗಳು ಕಾಣತಿರಲಿಲ್ಲ. ಅಂತ ಟೈಮಲ್ಲಿ ದೇವೇಗೌಡ್ರು ಮೂದಲಿಸಿದ್ರಿಂದ ತಿರಗ ಅವುರ ಕಡಿಕೆ ಸುಳಿಲಿಲ್ಲ.

ಹೇಳ್ದವ್ರು: ಡಾ. ಕಮಲಾಕ್ಷಣ್ಣ
ಬರ್ಕಂಡವ್ರು: ಬಿ ಚಂದ್ರೇಗೌಡ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇರಳ | ಆದಿವಾಸಿ ಯುವಕ ಮಧು ಗುಂಪು ಹತ್ಯೆ ಪ್ರಕರಣ : 12 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಹೈಕೋರ್ಟ್

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಕೇರಳದ ಆದಿವಾಸಿ ಯುವಕ ಮಧು ಗುಂಪು ಹಲ್ಲೆ ಮತ್ತು ಹತ್ಯೆ ಪ್ರಕರಣದ 12 ಜನ ಅಪರಾಧಿಗಳಿಗೆ ಹೈಕೋರ್ಟ್ ಸೋಮವಾರ (ಮೇ.25) ಜೀವಾವಧಿ ಶಿಕ್ಷೆ ಮತ್ತು ತಲಾ 2...

“ನನ್ನ ಅನುಮತಿ ಇಲ್ಲದೆ ನನ್ನ ಮಗುವನ್ನು ಸುಡಲಾಗಿದೆ”: ಕೊಲೆಯಾದ ಕೊಯಮತ್ತೂರು ಬಾಲಕಿಯ ತಾಯಿ ಅಳಲು

ಕೊಯಮತ್ತೂರು ಬಳಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಕೊಲೆಯಾದ 10 ವರ್ಷದ ಬಾಲಕಿಯ ತಾಯಿ, ತನ್ನ ಮಗಳ ಮೃತದೇಹದ ಅಂತ್ಯಸಂಸ್ಕಾರಕ್ಕೆ ತಾನು ಅನುಮತಿ ನೀಡಿರಲಿಲ್ಲ ಎಂದು ಹೇಳಿದ್ದಾರೆ. ಮಗುವಿನ ಮರಣೋತ್ತರ ಪರೀಕ್ಷೆಯ ನಂತರ, ತನ್ನ ಪತಿ...

ಅಷ್ಟೊಂದು ‘ಸೆಂಟಿಮೆಂಟ್’ ಬೇಡ: ‘ಕಾಕ್ರೋಚ್ ಅಭಿಯಾನ’ದ ವಿರುದ್ಧದ ಅರ್ಜಿಗೆ ಸಿಜೆಐ ಪ್ರತಿಕ್ರಿಯೆ

"ವ್ಯವಸ್ಥೆಯ ಮೇಲೆ ದಾಳಿ ಮಾಡುವವರ" ಕುರಿತು ತಾವು ನೀಡಿದ್ದ ಹೇಳಿಕೆಗೆ ವ್ಯಂಗ್ಯದ ರೂಪದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸೃಷ್ಟಿಯಾಗಿರುವ ‘ಕಾಕ್ರೋಚ್ ಜನತಾ ಪಾರ್ಟಿ’  ವಿವಾದವನ್ನು ಅಷ್ಟೊಂದು "ಭಾವನಾತ್ಮಕವಾಗಿ ತೆಗೆದುಕೊಳ್ಳಬೇಡಿ" ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ...

ನಾಳೆ ದಿ. ಎಚ್.ಎಸ್ ದೊರೆಸ್ವಾಮಿ ಅವರಿಗೆ ‘ಕರ್ನಾಟಕದ ಗೌರವಾರ್ಪಣೆ’

ಸ್ವಾತಂತ್ರ್ಯ ಸೇನಾನಿ ದಿ. ಎಚ್.ಎಸ್ ದೊರೆಸ್ವಾಮಿ ಅವರಿಗೆ 'ಕರ್ನಾಟಕದ ಗೌರವಾರ್ಪಣೆ' ಕಾರ್ಯಕ್ರಮವನ್ನು ನಾಳೆ, ಅಂದರೆ 2026 ಮೇ 26 ರಂದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಎಚ್.ಎಸ್‌ ದೊರೆಸ್ವಾಮಿ ಸ್ಮಾರಕ ಪ್ರತಿಷ್ಠಾನ,...

FACT CHECK : ಕಾಕ್ರೋಚ್ ಜನತಾ ಪಾರ್ಟಿಯ ಹೆಚ್ಚಿನ ಫಾಲೋವರ್ಸ್ ಪಾಕಿಸ್ತಾನದವರಾ?

ಇತ್ತೀಚೆಗೆ ಹುಟ್ಟಿಕೊಂಡ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಇನ್‌ಸ್ಟಾಗ್ರಾಮ್ ಪೇಜ್ ಕಾಂಗ್ರೆಸ್‌ನ 13 ಮಿಲಿಯನ್ ಮತ್ತು ಬಿಜೆಪಿಯ 9 ಮಿಲಿಯನ್ ಫಾಲೋವರ್ಸ್‌ಗಳ ಗಡಿಯನ್ನು ದಾಟಿದ್ದು, ಬರೋಬ್ಬರಿ 23 ಮಿಲಿಯನ್ (ಮೇ 24ರಂತೆ) ಫಾಲೋವರ್ಸ್‌...

ಬಾಂಗ್ಲಾ ಗಡಿಯಾಚೆಗೆ ತಳ್ಳಿದವರ ವಾಪಸಾತಿ: ಭಾರತೀಯರನ್ನೇ ಗಡಿಪಾರು ಮಾಡುತ್ತಿರುವ ಕೇಂದ್ರ?

ದಾಖಲೆರಹಿತ ವಲಸಿಗರೆಂದು ಆರೋಪಿಸಿ ಅಧಿಕಾರಿಗಳು ಬಾಂಗ್ಲಾದೇಶದ ಗಡಿಯಾಚೆಗೆ 'ತಳ್ಳಿದ್ದ' ಪಶ್ಚಿಮ ಬಂಗಾಳದ ನಿವಾಸಿಗಳನ್ನು ವಾಪಸ್ ಕರೆ ತರುವುದಾಗಿ ಕೇಂದ್ರ ಸರ್ಕಾರ ಶುಕ್ರವಾರ (ಮೇ 22,2026) ಸುಪ್ರೀಂ ಕೋರ್ಟ್‌ಗೆ ವಾಗ್ದಾನ ಮಾಡಿದೆ ಎಂದು ವರದಿಯಾಗಿದೆ....

SIR ಜಾರಿಯಾದ್ರೆ ಗ್ಯಾರಂಟಿಯನ್ನು ಕಳೆದುಕೊಳ್ತೀರಿ!

"ಬಡವರ ಮತಗಳನ್ನು ಪಟ್ಟಿಯಿಂದ ತೆಗೆಯಲು ಎಸ್‌ಐಆರ್ (SIR) ಮೂಲಕ ದೊಡ್ಡ ಸಂಚು ರೂಪಿಸಲಾಗಿದೆ. ನಾವೆಲ್ಲರೂ ಬಹಳ ಎಚ್ಚರಿಕೆಯಿಂದ ಇರಬೇಕು, ಇಲ್ಲದಿದ್ದರೆ ಮತ ಹಕ್ಕಿನ ಜೊತೆಗೆ ಶಕ್ತಿ, ಗೃಹಲಕ್ಷ್ಮಿಯಂತಹ ಗ್ಯಾರೆಂಟಿ ಯೋಜನೆಯನ್ನು ಕಳೆದುಕೊಳ್ಳಬೇಕಾಗುತ್ತದೆ" ಎಂದು...

ವೈಯಕ್ತಿಕ ಸ್ವಾತಂತ್ರ್ಯ Vs ಕಠಿಣ ಕಾಯ್ದೆ: ಯುಎಪಿಎ ಜಾಮೀನು ಭಿನ್ನಾಭಿಪ್ರಾಯಕ್ಕೆ ಸಿಗುವುದೇ ಸುಪ್ರೀಂ ಪರಿಹಾರ?

ಯುಎಪಿಎ ಅಡಿಯಲ್ಲಿ ದೀರ್ಘಕಾಲದ ಜೈಲುವಾಸದ ಹಿನ್ನೆಲೆ, ಜಾಮೀನು ನೀಡುವ ಕುರಿತು ಸುಪ್ರೀಂ ಕೋರ್ಟ್‌ನ ಎರಡು ನ್ಯಾಯಪೀಠಗಳ ನಡುವೆ ಭಿನ್ನಾಭಿಪ್ರಾಯ ಮೂಡಿದ ಕಾರಣ, ವಿಚಾರವನ್ನು ಸುಪ್ರೀಂ ಕೋರ್ಟ್‌ ವಿಸ್ತೃತ ಪೀಠಕ್ಕೆ ಶಿಫಾರಸು ಮಾಡಲಾಗಿದೆ ಎಂದು...

ತಾಯ್ತನ ಕ್ರೀಡೆಗೆ ಅಡ್ಡಿಯಾಗಬಾರದು: ಕುಸ್ತಿ ಒಕ್ಕೂಟಕ್ಕೆ ದೆಹಲಿ ಹೈಕೋರ್ಟ್ ಚಾಟಿ, ವಿನೇಶ್ ಫೋಗಟ್‌ಗೆ ಬಿಗ್ ರಿಲೀಫ್!

ಖ್ಯಾತ ಮಹಿಳಾ ಕುಸ್ತಿ ಪಟು ವಿನೇಶ್ ಫೋಗಟ್ ಅವರನ್ನು ದೇಶೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸದಂತೆ "ಅನರ್ಹ" ಎಂದು ಘೋಷಿಸಿದ್ದ ಭಾರತೀಯ ಕುಸ್ತಿ ಒಕ್ಕೂಟದ (WFI) ನಿರ್ಧಾರವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ....

ಗುಜರಾತ್: ಜಾನುವಾರು ಹತ್ಯೆ ಆರೋಪದಲ್ಲಿ ಬಂಧಿಸಿದ 70 ವರ್ಷದ ಮುಸ್ಲಿಂ ವ್ಯಕ್ತಿ ಸಾವು: ‘ತಂದೆಯನ್ನು ಕೊಂದರು’ ಎಂದು ಆರೋಪಿಸಿದ ಮಗ

ಗುಜರಾತ್‌ನ ಅಹಮದಾಬಾದ್ ನಗರದಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ 70 ವರ್ಷದ ಜಹೀರ್ ಶೇಖ್ ಎಂಬ ಮುಸ್ಲಿಂ ವೃದ್ಧರೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆಯು ಗುಜರಾತ್‌ನಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದು, ಕಸ್ಟಡಿ ನಿಂದನೆ, ಪೊಲೀಸರ ದೌರ್ಜನ್ಯ...