Homeನ್ಯಾಯ ಪಥರಾಜಕಾರಣದ ಆಗಸದಲ್ಲಿ ಮಿನುಗುವ ನಕ್ಷತ್ರ ಅರಸು

ರಾಜಕಾರಣದ ಆಗಸದಲ್ಲಿ ಮಿನುಗುವ ನಕ್ಷತ್ರ ಅರಸು

- Advertisement -
- Advertisement -

ಸ್ವಾತಂತ್ರ್ಯಾನಂತರದ ಕರ್ನಾಟಕದಲ್ಲಿ ಹಲವಾರು ಮುಖ್ಯಮಂತ್ರಿಗಳು ಆಗಿಹೋಗಿದ್ದಾರೆ. ಆದರೆ ಇಲ್ಲಿನ ರಾಜಕೀಯಾಗಸದಲ್ಲಿ ದೇವರಾಜ ಅರಸು ಎಂದೆಂದೂ ಹೊಳೆಯುವ ನಕ್ಷತ್ರವಾಗುಳಿದಿರುವುದೊಂದು ವಿಶೇಷ. ಅರಸು ಯುಗವನ್ನು ಅಳೆದು ನೋಡಿದರೆ ಇದು ತಿಳಿಯುತ್ತದೆ.

ದೇವರಾಜ ಅರಸು ಬಿ.ಎಸ್ಸಿ ಪದವಿ ಮುಗಿಸಿದ ನಂತರ ಊರಿಗೆ ಹೋಗಿ ಬೇಸಾಯ ಮಾಡುತ್ತಾರೆ. ಬಲಿಷ್ಠವಾದ ಎತ್ತುಗಳೊಂದಿಗೆ ಅವರು ಹೊಲ ಉಳುವುದನ್ನ ನೋಡಿದವರಿದ್ದಾರೆ. ಆದರೆ ಅವರೆಂದಿಗೂ ಮಣ್ಣಿನ ಮಗನೆಂದು ಹೇಳಿಕೊಳ್ಳಲಿಲ್ಲ. ತಮ್ಮ 26ನೇ ವಯಸ್ಸಿಗೆ ರಾಜಕಾರಣ ಪ್ರವೇಶ ಮಾಡುತ್ತಾರೆ. ಒಕ್ಕಲಿಗರೇ ಬಹುಸಂಖ್ಯೆಯಲ್ಲಿರುವ ಹುಣಸೂರಿನಲ್ಲಿ ಒಕ್ಕಲಿಗರ ನಾಯಕನನ್ನೇ ಸೋಲಿಸಿ ಗೆದ್ದು ಬರುತ್ತಾರೆ. 1962ರಲ್ಲಿ ಅವರು ಅವಿರೋಧವಾಗಿ ಆಯ್ಕೆಯಾಗುತ್ತಾರೆ ಮತ್ತು ನಿಜಲಿಂಗಪ್ಪ ಸಂಪುಟದಲ್ಲಿ ಮಂತ್ರಿಯಾಗುತ್ತಾರೆ. ಅವರು ಕೇಳದಿದ್ದರು ನಿಜಲಿಂಗಪ್ಪನವರು ಅರಸುರನ್ನು ಸಾರಿಗೆ ಮಂತ್ರಿಯನ್ನಾಗಿ ಮಾಡುತ್ತಾರೆ. ಆಗ ಸಾರಿಗೆಯಲ್ಲಿದ್ದ ಮೂರುಸಾವಿರ ಕಾರ್ಮಿಕರ ಸಮಸ್ಯೆಯನ್ನು ಬಗೆಹರಿಸುತ್ತಾರೆ. ಅದು ಮಾಧ್ಯಮದವರಿಗೆ ಒಂದು ಸುದ್ದಿಯಾಗುವುದಿಲ್ಲ. ಅದಾಗಲೇ ಸಾಮಾಜಿಕ ನ್ಯಾಯದ ಬಗ್ಗೆ ಅರಿವು ಮೂಡಿಸಿಕೊಂಡು ಒಳಗೊಳಗೇ ಕುದಿಯುತ್ತಿದ್ದ ಅರಸು ತಮ್ಮ ಸುತ್ತಲೂ ಬಲಾಢ್ಯ ಜಾತಿಗಳ ಅಬ್ಬರ ನೋಡಿಕೊಂಡು ಸುಮ್ಮನಿದ್ದರು. ಸಾಮಾಜಿಕವಾಗಿ ಪರಿವರ್ತನೆಗೆ ತಯಾರಾಗಿ ನಿಂತಿದ್ದ ಅರಸುರವರಿಗೆ ಸುವರ್ಣಾವಕಾಶ ಎದುರಾದಂತೆ ರಾಷ್ಟ್ರಪತಿ ಚುನಾವಣೆ ಬಂತು. ವಿ.ವಿ. ಗಿರಿ ಮತ್ತು ಸಂಜೀವರೆಡ್ಡಿಯವರ ನಡುವಿನ ಪೈಪೋಟಿಯಲ್ಲಿ ಇಂದಿರಾಗಾಂಧಿ ವಿ.ವಿ ಗಿರಿಯವರನ್ನ ಬೆಂಬಲಿಸಿದ ಕಾರಣವಾಗಿ ಕಾಂಗ್ರೆಸ್ ಇಬ್ಭಾಗವಾಯ್ತು. ಆಗ ಅರಸು ಇಂದಿರಾಗಾಂಧಿಯನ್ನು ಬೆಂಬಲಿಸಿದ್ದರಿಂದ ಅರಸುರವರಿಗೆ ಕರ್ನಾಟಕ ಕಾಂಗ್ರೆಸ್ ಯಜಮಾನಿಕೆಯನ್ನು ಬಿಟ್ಟುಕೊಟ್ಟರು. 1971ರಲ್ಲಿ ಮಧ್ಯಂತರ ಚುನಾವಣೆ ಬಂತು. ಆಗ ಅರಸು ತಮ್ಮ ಬತ್ತಳಿಕೆಯಲ್ಲಿದ್ದ ಸಾಮಾಜಿಕ ಪರಿವರ್ತನೆಯ ಅಸ್ತ್ರಗಳನ್ನ ಒಂದೊಂದೇ ತೆಗೆಯತೊಡಗಿದ್ದರು. ಕರ್ನಾಟಕದಲ್ಲಿ ಮೇಲು ಜಾತಿಗಳನ್ನ ಒಂದು ತಕ್ಕಡಿಗೆ ಹಾಕಿ, ಹಿಂದುಳಿದ ಜಾತಿಗಳನ್ನ ಒಂದು ತಕ್ಕಡಿಗೆ ಹಾಕಿ ತೂಗಿ ನೋಡಿದರು. ಹಿಂದುಳಿದ ವರ್ಗದ ತಕ್ಕಡಿ ಮೇಲೇಳಲಿಲ್ಲ. ಅಲ್ಲಿಗೆ ಕರ್ನಾಟಕದ ಬಹುಸಂಖ್ಯಾತರೆಂದರೆ ಹಿಂದುಳಿದವರ ಓಟು ಪಡೆದ ಬಲಾಢ್ಯ ಜಾತಿವಂತರು ಎಲ್ಲಾ ಸವಲತ್ತುಗಳನ್ನ ಹಂಚಿಕೊಂಡು ಈ ಲೋಕ ಇರುವುದೇ ಹೀಗೆಂದು ಆರಾಮವಾಗಿದ್ದರು.

 

ಅಂತಹ ಸಮಯದಲ್ಲಿ ಇಂದಿರಾಗಾಂಧಿ ಹೆಸರಿನ ಧ್ವಜವನ್ನು ನೆಟ್ಟು ಸವಾಲೆಸೆದ ಅರಸು, ಅನಾಮಧೇಯರಿಗೆಲ್ಲಾ ಕಾಂಗೈ ಟಿಕೆಟ್ ಕೊಟ್ಟು 27 ಜನ ಎಂಪಿಗಳನ್ನ ಗೆಲ್ಲಿಸಿಕೊಂಡು ಬಂದರು. ಮುಂದೆ 1972ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಈವರೆಗಿನ ಸಂಪ್ರದಾಯವನ್ನ ಮುರಿದುಹಾಕಿದರು. 223 ವಿಧಾನಸಭಾ ಕ್ಷೇತ್ರಗಳ ಪೈಕಿ 170 ಜನ ಮೇಲು ವರ್ಗದವರು ಟಿಕೆಟ್ ಹಂಚಿಕೊಂಡು ಉಳಿದ 73 ಸೀಟುಗಳನ್ನು ಹಿಂದುಳಿದವರಿಗೆ ಪ್ರಸಾದದಂತೆ ಹಂಚುತ್ತಿದ್ದರು. ಆದರೆ ಅರಸು ಮೊದಲಬಾರಿಗೆ ಈ ಸಂಪ್ರದಾಯ ಮುರಿದು 133 ಮಂದಿ ಹಿಂದುಳಿದ ಜಾತಿ ನಾಯಕರನ್ನ ಗುರುತಿಸಿ ಟಿಕೆಟ್ ನೀಡಿದರು. ಇದು ಅರಸುರವರ ಒಂದು ಐತಿಹಾಸಿಕ ತೀರ್ಮಾನವಾಗಿತ್ತು. ಅದಷ್ಟೇ ಅಲ್ಲದೆ ಆ ಪೈಕಿ 92 ಮಂದಿ ಹಿಂದುಳಿದವರನ್ನ ಗೆಲ್ಲಿಸಿಕೊಂಡು ಬಂದರು. ಆ ನಂತರ ನಡೆದ ಸಂಪುಟ ರಚನೆಯಲ್ಲೂ ಅರಸು ಮೊಟ್ಟಮೊದಲ ಬಾರಿಗೆ ಹಿಂದುಳಿದವರಿಗೆ ಪ್ರಬಲ ಖಾತೆಗಳನ್ನು ಹಂಚಿದರು. ಹಾಗೆಂದು ಮೇಲುವರ್ಗದವರನ್ನೇನು ಕಡೆಗಣಿಸಲಿಲ್ಲ; ಅಲ್ಲಿಯೂ ಸಮರ್ಥರನ್ನು ಗುರುತಿಸಿದರು. ಸಿದ್ದವೀರಪ್ಪ, ಚನ್ನಬಸಪ್ಪ, ಕೆ.ಹೆಚ್ ಪಾಟೀಲ್, ಹುಚ್ಚಮಾಸ್ತಿಗೌಡ, ಶ್ರೀಕಂಠಯ್ಯ ಇವರಲ್ಲದೆ ಬ್ರಾಹ್ಮಣರ ಪೈಕಿ ಗುಂಡೂರಾವ್, ಕೆ. ಶ್ರೀನಿವಾಸ್, ಬದರಿನಾರಾಯಣ್, ರಮೇಶ್‌ಕುಮಾರ್ ಇದ್ದರು. ಜೊತೆಗೆ ಮೊದಲ ಬಾರಿಗೆ ಚಮ್ಮಾರ, ಈಡಿಗ, ಲಂಬಾಣಿ, ಭೋವಿ ಜಾತಿ ನಾಯಕರೆಲ್ಲಾ ಅರಸು ಜೊತೆಗಿದ್ದರು. ಹಾಗೆ ನೋಡಿದರೆ ಅರಸು ಮೇಲುಜಾತಿಯ ವಿರೋಧಿಗಳಾಗಿರದೆ, ಇಲ್ಲಿನ ಆಡಳಿತ ಮತ್ತು ಸಂಪತ್ತನ್ನು ಸಮನಾಗಿ ಹಂಚುವ ನಾಯಕರಾಗಿದ್ದರು. ಇದು ಕರ್ನಾಟಕದ ಜನಸ್ತೋಮ ಕೂಡ ಒಪ್ಪಿದ ನ್ಯಾಯದಾನವಾಗಿತ್ತು ಮತ್ತಾಗ ಯಾವ ಪ್ರತಿಭಟನೆಯೂ ನಡೆಯಲಿಲ್ಲ. ಆದರೂ ಮುಂದೆ 1972ರಲ್ಲಿ ನಡೆದ ಪ್ರತಿಭಟನೆ ಮತ್ತು ದೊಂಬಿಯನ್ನು ಸಮರ್ಥವಾಗಿ ನಿಭಾಯಿಸಿ, ಸಾಮಾಜಿಕ ನ್ಯಾಯದ ಸರಕಾರ ಅಂದರೆ ಏನೆಂಬುದನ್ನ ತೋರಿಸಿಕೊಟ್ಟರು. ಮುಖ್ಯಮಂತ್ರಿಯಾದ ಆರು ತಿಂಗಳಲ್ಲಿ ಸರಕಾರಿ ನೌಕರಿಗೆ ತಿದ್ದುಪಡಿ ಮಾಡಿ ಜಿಲ್ಲಾ ಮಟ್ಟದಲ್ಲೇ ಆಯ್ಕೆ ನಡೆಸುವ ಸಮಿತಿ ರಚಿಸಿದರು.

ಇದನ್ನೂ ಓದಿ:ದೇಶವ್ಯಾಪಿ ಹಬ್ಬಿದ ರೈತ ಚಳವಳಿ: ಭಾಗ-1

ಮುಂದಿನ ಮಹತ್ವದ ಹೆಜ್ಜೆ ಅಂದರೆ ಹಾವನೂರು ಕಮಿಷನ್ ನೇಮಕ ಮಾಡಿದ್ದು. ಅದಕ್ಕೆ ಸರಕಾರದ ಕರ್ಮಚಾರಿಗಳು ಸ್ಪಂದಿಸಲಿಲ್ಲ. ಆಗ ಅರಸು ಅಂತಹ ಅಧಿಕಾರಿಗಳನ್ನ ಶಿಕ್ಷಿಸುವ ಕಾನೂನು ತರಲು ಮುಂದಾದಾಗ ಎಲ್ಲವೂ ಸರಿಯಾಯ್ತು.

ಹಾವನೂರು ವರದಿಯ ಪ್ರಭಾವ ದೇಶದಲ್ಲೆಲ್ಲಾ ಹಬ್ಬಿತ್ತು. ಬಿಹಾರದಲ್ಲಿ ಕರ್ಪೂರಿ ಠಾಕೂರ್ ಇಂತದೇ ವರದಿ ರೂಪಿಸುವುದಕ್ಕೆ ಕೈಹಾಕಿದರು. ಮುಂದೆ ಮಂಡಲ ಕಮಿಷನ್ ನೇಮಕಕ್ಕೂ ಇದೇ ಪ್ರೇರಣೆಯಾಯ್ತು. ಅಂತೂ ಅರಸು ಮೀಸಲಾತಿ ಪಾಲು ಕೇಳುವ ಹಕ್ಕನ್ನು ದೇಶಕ್ಕೇ ಹಬ್ಬಿಸಿದ್ದರು. ಶ್ರೇಣಿಕೃತ ವ್ಯವಸ್ಥೆಗೆ ಒಗ್ಗಿಕೊಂಡು ತಮ್ಮ ಅದಮ್ಯ ಧೀಶಕ್ತಿಯನ್ನ ಅದುಮಿಕೊಂಡು ಬದುಕಿದ್ದ ಜನರನ್ನ ಮೇಲೆತ್ತುವುದು ಸಾಮಾನ್ಯ ಸಂಗತಿಯಲ್ಲ. ಅರಸುರವರ ಮುಂದಿನ ಕಾರ್ಯಕ್ರಮಗಳೆಲ್ಲಾ ಆ ದಿಸೆಯಲ್ಲೆ ಇದ್ದವು. ಮೊದಲನೆಯದಾಗಿ ಭೂ ಸುಧಾರಣೆ ಕಾಯ್ದೆ ತಂದು ಉಳುವವನೇ ಹೊಲದೊಡೆಯ ಎಂದರು. ಈ ಕಾನೂನಿಗೆ ಓಗೊಟ್ಟು ಅವರ ಆತ್ಮೀಯ ಗೆಳೆಯರಾಗಿದ್ದ ಆರ್.ಎಂ ದೇಸಾಯಿ ನಾಲ್ಕು ಎಕರೆ ಜಮೀನು ಬಿಟ್ಟುಕೊಡುತ್ತಾರೆ. ಹಿಂದುಳಿದ ವರ್ಗದವರಿಗೆ ಶಿಕ್ಷಣದಲ್ಲಿ ಮತ್ತು ಉದ್ಯೋಗದಲ್ಲಿ ಮೀಸಲಾತಿ ತರುತ್ತಾರೆ. ಅದಕ್ಕಾಗಿಯೇ ಹಿಂದುಳಿದ ವರ್ಗದ ಕಲ್ಯಾಣ ಇಲಾಖೆ ಸ್ಥಾಪನೆ ಮಾಡುತ್ತಾರೆ. ನೆನಸಿಕೊಳ್ಳಲು ಹೇಸಿಗೆಯಾಗುವ ಮಲಹೊರುವ ಪದ್ದತಿಯನ್ನು ಸಂಪುಟ ಸಚಿವ ಬಿ ಬಸವಲಿಂಗಪ್ಪನವರ ಮುಂದಾಳತ್ವದಲ್ಲಿ ನಿಷೇಧ ಮಾಡುತ್ತಾರೆ. ಅವರು ತಂದ ಜೀತ ಮುಕ್ತಿ ಕಾನೂನಿನ ಪರಿಧಿಗೆ 65ಸಾವಿರ ಜನ ಒಳಪಡುತ್ತಾರೆ. ಜೊತೆಗೆ ಹಿಂದುಳಿದ ವರ್ಗದ ಅಭಿವೃದ್ದಿ ನಿಗಮ ಸ್ಥಾಪಿಸುತ್ತಾರೆ. ವಿದ್ಯಾರ್ಥಿಗಳಿಗೆ ವಸತಿಶಾಲೆ ಮಹಿಳಾ ಕಲ್ಯಾಣ ಕೇಂದ್ರಗಳ ಸ್ಥಾಪನೆ, ಋಣ ಪರಿಹಾರ ಕಾಯ್ದೆ, ವೃದ್ಧಾಪ್ಯ ವೇತನ, ಅಂಗವಿಕಲರಿಗೆ ವೇತನ ಕೊಟ್ಟಿದ್ದಲ್ಲದೆ, ಅಂದು ಡಿಗ್ರಿ ಮುಗಿಸಿ ಮನೆಯಲ್ಲಿದ್ದ ಪದವೀಧರರಿಗೂ ನಿರುದ್ಯೋಗ ವೇತನ ಕೊಡುತ್ತಾರೆ. ಜೊತೆಗೆ ಪೌರಕಾರ್ಮಿಕರನ್ನು ಕಾಯಂ ಮಾಡಿ ಸರಕಾರ ಕರ್ತವ್ಯ ಏನೆಂಬುದನ್ನ ತೋರಿಸಿಕೊಡುತ್ತಾರೆ.

ಇದನ್ನೂ ಓದಿ:ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಶಿವಮೊಗ್ಗ: ಮತೋನ್ಮತ್ತ ರಣಕಣದಿಂದ ಈಶ್ವರಪ್ಪ ಕಡ್ಡಾಯ ನಿವೃತ್ತಿ?!

ಅರಸು ತಂದ ಕಾರ್ಯಕ್ರಮಗಳೆಲ್ಲಾ ಯಶಸ್ವಿಯಾದದ್ದು ತುರ್ತುಪರಿಸ್ಥಿತಿಯ ಕಾಲದಲ್ಲಿ. ಇಂದಿರಾಗಾಂಧಿ ಘೋಷಿಸಿದ 20 ಅಂಶದ ಕಾರ್ಯಕ್ರಮಗಳನ್ನ ಚಾಚೂತಪ್ಪದೆ ಅರಸು ಜಾರಿಗೆ ತಂದ ಫಲವಾಗಿ 1978ರ ಚುನಾವಣೆಯಲ್ಲಿ ಮುತ್ತೆ ಬಹುಮತದೊಂದಿಗೆ ಆರಿಸಿಬರುತ್ತಾರೆ. ಅಷ್ಟರಲ್ಲಾಗಲೇ ಕಾಂಗ್ರೆಸ್ ದೇಶದಾದ್ಯಂತ ಸೋತು ಇಂದಿರಾಗಾಂಧಿ ಮತ್ತು ಸಂಜಯಗಾಂಧಿ ಮನೆ ಸೇರಿರುತ್ತಾರೆ. ಆಗ ಅರಸು ದೆಹಲಿಯಲ್ಲಿ ಇಂದಿರಾಗಾಂಧಿಯವರನ್ನು ಭೇಟಿಯಾಗಲು ಅವರ ಮನೆಗೆ ಹೋದಾಗ, ಅವರು ರಾಹುಲ್‌ಗಾಂಧಿಯ ಬೆರಳಿಡಿದು ಸಾಮಾನ್ಯ ಮಹಿಳೆಯಂತೆ ಮನೆಯ ವರಾಂಡದಲ್ಲಿ ಮೊಮ್ಮಗನನ್ನು ತಿರುಗಾಡಿಸುತ್ತಿರುತ್ತಾರೆ. ನಮ್ಮ ನಾಯಕಿಗೆ ಇಂತಹ ಸ್ಥಿತಿ ಬಂದುಬಿಟ್ಟಿತೆ ಎಂದು ಒಂದು ಕ್ಷಣ ಅರಸುಗೆ ಮರುಕವುಂಟಾಗುತ್ತದೆ. ಇಂದಿರಾ ಗಾಂಧಿಯವರನ್ನು ಸಂತೈಸಿ, ನಿಮ್ಮನ್ನ ಕರೆದುಕೊಂಡುಹೋಗಿ ಕರ್ನಾಟಕದಲ್ಲಿ ಗೆಲ್ಲಿಸಿ ಮತ್ತೆ ಸಂಸತ್ ಪ್ರವೇಶ ಮಾಡಿಸುತ್ತೇನೆ, ನೀವು ಈಗಿಂದೀಗಲೇ ತಯಾರಾಗಿ ಬನ್ನಿ ಎಂದು ಹೊರಡುತ್ತಾರೆ. ಕರ್ನಾಟಕಕ್ಕೆ ಬಂದ ಅರಸು ತಮ್ಮ ಮೆಚ್ಚಿನ ಶಿಷ್ಯ ಡಿ.ಬಿ. ಚಂದ್ರೇಗೌಡನನ್ನು ಒಪ್ಪಿಸಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ರಾಜಿನಾಮೆ ಕೊಡಿಸಿ ಇಂದಿರಾಗಾಂಧಿ ಬಂದುನಿಲ್ಲುವಂತೆ ಮಾಡುತ್ತಾರೆ.

ಅರಸು ಕ್ರಮದಿಂದ ಬೆಚ್ಚಿದ ಜನತಾ ಪಕ್ಷದವರು, ’ನಿಮ್ಮ ಈ ಕ್ರಮದಿಂದ ಹಿಂದೆ ಸರಿದರೆ ನಿಮ್ಮ ಮೇಲಿರುವ ಆಪಾದನೆಗಳಿಗೆ ಕ್ರಮ ತೆಗೆದುಕೊಳ್ಳುವುದನ್ನು ಸ್ಥಗಿತಗೊಳಿಸತ್ತೇವೆ’ ಎಂದು ಜಾರ್ಜ್ ಫರ್ನಾಂಡಿಸ್ ಮುಖಾಂತರ ಸಂದೇಶ ರವಾನಿಸುತ್ತಾರೆ. ಆದರೆ ಅರಸು ಕೇರ್ ಮಾಡುವುದಿಲ್ಲ. ಬೆಂಗಳೂರಿಗೆ ಬಂದ ಇಂದಿರಾಗಾಂಧಿಯನ್ನು ಕರೆದುಕೊಂಡು ಚಿಕ್ಕಮಗಳೂರಲ್ಲಿ ನಾಮಪತ್ರ ಸಲ್ಲಿಸುವ ಸಲುವಾಗಿ ಬರುತ್ತಾರೆ. ಆ ಐತಿಹಾಸಿಕ ಚುನಾವಣೆಯಲ್ಲಿ ಇಂದಿರಾಗಾಂಧಿ ಗೆಲ್ಲುತ್ತಾರೆ. ಅವರ ಎದುರು ನಿಂತು ಸೋತ ವಿರೇಂದ್ರ ಪಾಟೀಲರು ಕೆಲವೇ ತಿಂಗಳಲ್ಲಿ ಇಂದಿರಾ ಕಾಂಗ್ರೆಸ್ ಸೇರುತ್ತಾರೆ. ಆ ಚುನಾವಣೆಯಲ್ಲಿ ಇಂದಿರಾಗಾಂಧಿಯವರನ್ನು ಸೋಲಿಸಲು ಹೋರಾಡಿದ್ದವರೆಲ್ಲಾ ಇಂದಿರಾ ಕಾಂಗ್ರೆಸ್ ಪಾಲಾಗುತ್ತಾರೆ. ಇಲ್ಲಿಂದ ಅರಸು ಪತನ ಆರಂಭವಾಗುತ್ತದೆ.

ದೇವರಾಜ ಅರಸು ದೈತ್ಯರಾಗಿ ಬೆಳೆದಿದ್ದಾರೆ. ಮುಂದೆ ನಮಗೆ ಅವರಿಂದ ಅಪಾಯವಾಗಬಹುದೆಂದು ಗುಂಡೂರಾವ್ ಸಂಜಯಗಾಂಧಿಗೆ ಹೇಳಲಾಗಿ, ಅದಾಗಲೇ ಸನ್‌ಸ್ಟ್ರೋಕಿಗೆ ಒಳಗಾಗಿದ್ದ ಇಂದಿರಾಗಾಂಧಿ ಅದನ್ನು ನಂಬಲಾಗಿ, ಆಕೆಯ ಮಗನ ಗೆಳೆಯ ಗುಂಡೂರಾವ್‌ರವರನ್ನು ಕರ್ನಾಟಕದ ಮುಖ್ಯ ಮಂತ್ರಿಯಾಗಿ ಹೇರಲಾಗುತ್ತದೆ. ಚಿಕ್ಕಮಗಳೂರಿನ ಚುನಾವಣೆಯಲ್ಲಿ ಕೇಳಲಸಾಧ್ಯವಾದ ಬೈಗುಳಗಳನ್ನು ಇಂದಿರಾಗಾಂಧಿ ವಿರುದ್ಧ ತಿರುಗಿಸಿದ್ದ ಸಿ.ಎಂ ಇಬ್ರಾಹಿಂ ಗುಂಡೂರಾಯರ ಸಂಪುಟದಲ್ಲಿ ಮಂತ್ರಿಯಾಗುತ್ತಾರೆ. ಕರ್ನಾಟಕದ ಜನಸ್ತೋಮಕ್ಕೆ ರಾಜಕಾರಣಿಗಳು ಅಚ್ಚರಿ ಹುಟ್ಟಿಸಿದ ಸಮಯ ಅದು. ರಾಷ್ಟಮಟ್ಟದಲ್ಲೂ ಕೂಡ ಇಂದಿರಾಗಾಂಧಿಯನ್ನು ಸೋಲಿಸಿದ್ದ ರಾಜನಾರಾಯಣ, ಮೊರಾರ್ಜಿಯವರನ್ನು ಇಳಿಸಿ ಚರಣ್ ಸಿಂಗ್‌ರನ್ನು ಪ್ರಧಾನಿ ಮಾಡುತ್ತೇವೆ ಬೆಂಬಲ ಕೊಡುತ್ತೀರಾ ಎಂದು ಸಂಜಯ್‌ಗಾಂಧಿಗೆ ಕೇಳುತ್ತಾರೆ. ಈ ವಿಷಯವನ್ನು ಸಂಜಯ್ ಗಾಂಧಿಯಿಂದ ತಿಳಿದುಕೊಂಡ ಇಂದಿರಾಗಾಂಧಿ ಅಚ್ಚರಿಗೊಂಡು ತಮ್ಮ ಬೆಂಬಲವಿದೆ ಎಂಬ ಸಂದೇಶ ಕಳಿಸುತ್ತಾರೆ. ಅದರಂತೆ ಚರಣ್‌ಸಿಂಗ್ ಪ್ರಧಾನಿಯಾದ ನಂತರ ಇಂದಿರಾಗಾಂಧಿ ನೀಡಿದ್ದ ಬೆಂಬಲ ವಾಪಾಸ್ ಪಡೆದು ಜನತಾಪಕ್ಷ ಪತನಗೊಳಿಸುತ್ತಾರೆ.

ಇತ್ತ ದೇವರಾಜ್ ಅರಸು ಚರಣ್‌ಸಿಂಗ್‌ರವರ ಬೆಂಬಲಕ್ಕೆ ನಿಲ್ಲುತ್ತಾರೆ. ಅಂದು ನಡೆದ ಚುನಾವಣೆಯಲ್ಲಿ ನಿಲ್ಲಿಸಿದ್ದ ಅವರ ಎಲ್ಲಾ ಅಭ್ಯರ್ಥಿಗಳು ಸೋತುಹೋಗುತ್ತಾರೆ. ಏಕೆಂದರೆ ಅರಸು ಸಾಧನೆಯಲ್ಲಾ ಇಂದಿರಾಗಾಂಧಿ ಖಾತೆಗೆ ವರ್ಗಾವಣೆಯಾಗಿ ಅವರು ಬರಿಗೈಯಾಗಿದ್ದರು. ಆದರೂ ಕರ್ನಾಟಕ ಕ್ರಾಂತಿರಂಗ ಸ್ಥಾಪಿಸಿ ಹೋರಾಟ ಮುಂದುವರಿಸಿದ್ದರು. ಅವರೇ ಗುರುತಿಸಿ ಬೆಳಸಿದ ನಾಯಕರೆಲ್ಲಾ ಕೈಕೊಟ್ಟು ಪಲಾಯನ ಮಾಡಿ ಗುಂಡೂರಾಯರ ಆಸ್ಥಾನ ಸೇರಿದ್ದರು. ಇದು ಅರಸುಗೆ ಆಘಾತ ತರುವ ವಿಷಯವೇನಾಗಿರಲಿಲ್ಲ; ತಾವು ಗುರುತಿಸಿದ ಯುವ ನಾಯಕರಿಗೆ, ನಿಮ್ಮ ಭವಿಷ್ಯ ಎಲ್ಲಿದೆ ಅಲ್ಲಿಗೆ ಹೋಗಿ ಎಂದಿದ್ದರು. ಅರಸು ಗುರುತಿಸಿದವರಲ್ಲಿ ಮೂರು ಜನ ಮುಖ್ಯಮಂತ್ರಿಗಳಾದರು. ಅಂದು ಅರಸು ಹುಟ್ಟುಹಾಕಿದ ಪರಂಪರೆಯ ಪರಿಣಾಮವನ್ನು ಇನ್ನೂ ಗುರುತಿಸಬಹುದಾಗಿದೆ. ಅರಸು ಯುಗದ ರಾಜಕಾರಣದ ವರಸೆಯಿಂದ ಕರ್ನಾಟಕದ ಚಿತ್ರಣವೇ ಬದಲಾಗಿದೆ.

ಪ್ರಸ್ತುತ ಸರಕಾರಕ್ಕಂತೂ ಅರಸು ಅವರ ಜನ್ಮದಿನಾಚರಣೆ ಬೇಕಿಲ್ಲದ ಆಚರಣೆಯಾಗಿ ಕಾಟಾಚಾರಕ್ಕೆಂಬಂತೆ ಜರುಗುತ್ತಿದೆ. ಆದರೆ ಕರ್ನಾಟಕದ ಚರಿತ್ರೆಯಲ್ಲಿ ಅರಸು ಯುಗವನ್ನು ಅಳಿಸಲು ಅಸಾಧ್ಯ. ಅವರ ಸಾಧನೆಗಳ ಪೈಕಿ ಕರ್ನಾಟಕ ಎಂದು ನಾಮಕರಣ ಮಾಡಿದ್ದೊಂದು ಐತಿಹಾಸಿಕ ಘಟನೆ. ಇಂತಹ ಹಲವು ಘಟನೆ ಮತ್ತು ದಾಖಲೆಗಳು ಅವರ ಹೆಸರಿನಲ್ಲಿವುದುದರಿಂದ ಅವರು ಎಂದೂ ಕರ್ನಾಟಕ ರಾಜಕೀಯಾಗಸದಲ್ಲಿ ಮಿನುಗುವ ನಕ್ಷತ್ರ.

ಒಂದು ಜಾತಿ, ಒಂದು ಮತ, ಒಂದೇ ದೇವರು ಎಂಬ ಸಂದೇಶ ಸಾರಿದ ಸಂತ ನಾರಾಯಣ ಗುರುಗಳು…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

NICE ನಲ್ಲಿ ‘ನೈಸ್’ ಎನ್ನುವಂತಹದ್ದು ಏನೂ ಇಲ್ಲ: ರಾಜ್ಯದ ಅತಿದೊಡ್ಡ ಹಗರಣ ಎಂದ ಹೈಕೋರ್ಟ್

ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ (ಬಿಎಂಐಸಿಪಿ) ಅಥವಾ 'ನೈಸ್' ಯೋಜನೆ ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಗರಣಗಳಲ್ಲಿ ಒಂದಾಗಿ ಕಾಣಿಸುತ್ತಿದೆ ಎಂದು ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್...

ಪ್ರತಿಭಟನೆಗೆ ಹೋಗುವ ಮಹಿಳೆಯರು ಗ್ಯಾಂಗ್‌ರೇಪ್‌ ಆನಂದಿಸುತ್ತಾರೆ ಎಂದಿದ್ದ ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಎಫ್‌ಐಆರ್‌ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಿರುವನಂತಪುರಂ ಸಿಟಿ...

ಫ್ರಾನ್ಸ್‌ನಲ್ಲಿ ಕೆಲಸದ ಸಮಯ ಟ್ರ್ಯಾಕಿಂಗ್ ಲೋಪ: ಇನ್ಫೋಸಿಸ್‌ಗೆ ₹1.9 ಕೋಟಿ ದಂಡ: ನಾರಾಯಣಮೂರ್ತಿಯವರ ‘70 ಗಂಟೆ ಶ್ರಮ’ದ ಮಾದರಿ ಟ್ರೋಲ್

ಭಾರತೀಯ ಐಟಿ ರಫ್ತು ಸೇವಾ ರಂಗದ ಬೃಹತ್ ಸಂಸ್ಥೆಯಾದ ಇನ್ಫೋಸಿಸ್‌ಗೆ ಫ್ರಾನ್ಸ್‌ನಲ್ಲಿ ಹಿನ್ನಡೆಯಾಗಿದೆ. ಉದ್ಯೋಗಿಗಳ ಕೆಲಸದ ಸಮಯವನ್ನು ದಾಖಲಿಸುವ ವ್ಯವಸ್ಥೆಯಲ್ಲಿನ ನ್ಯೂನತೆಗಳು ಹಾಗೂ ಸ್ಥಳೀಯ ಕಾರ್ಮಿಕ ನಿಯಮಾವಳಿಗಳ ಪಾಲನೆಯಲ್ಲಿ ಕಂಡುಬಂದ ಲೋಪಗಳ ಹಿನ್ನೆಲೆಯಲ್ಲಿ...

ವೋಟರ್ ಐಡಿ, ಬ್ಯಾಂಕ್ ಪಾಸ್‌ಬುಕ್, ಆಧಾರ್, ಜಮೀನಿನ ಹಕ್ಕು ಪತ್ರ ಇದ್ದ ಮಾತ್ರಕ್ಕೆ ಭಾರತೀಯ ಪ್ರಜೆಯಾಗಲ್ಲ: ಕಲ್ಕತ್ತಾ ಹೈಕೋರ್ಟ್

ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್ ಮತ್ತು ಪಿತ್ರಾರ್ಜಿತ ಜಮೀನಿನ ದಾಖಲೆಗಳು ಭಾರತೀಯ ಪೌರತ್ವವನ್ನು ನಿರೂಪಿಸಲು ಅಂತಿಮ ಅಥವಾ ನಿರ್ಣಾಯಕ ಪುರಾವೆಗಳಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಹತ್ವದ...

‘ನಿಮ್ಮ ಸಮಯ ಬಂದಿದೆ’: ಟೌನ್‌ಶಿಪ್ ಯೋಜನೆ ವಿರುದ್ಧದ ಪ್ರತಿಭಟನೆಗೆ 500 ದಿನ: ‘Gen-Z’ ಯುವಕರ ಬೆಂಬಲ ಕೋರಿದ ಬಿಡದಿ ರೈತರು

ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಕೃಷಿ ಭೂಮಿ ಉಳಿವಿಗಾಗಿ ನಡೆಯುತ್ತಿರುವ ರೈತರ ಸುದೀರ್ಘ ಹೋರಾಟವು ಇದೀಗ ಒಂದು ಪ್ರಮುಖ ಘಟ್ಟಕ್ಕೆ ಬಂದು ತಲುಪಿದೆ. ಭೂಸ್ವಾಧೀನದ ವಿರುದ್ಧ ಸತತವಾಗಿ ನಡೆಯುತ್ತಿರುವ ಈ...

ಕೊಡಗಿನ ಆದಿವಾಸಿ ಹಾಡಿಗಳಲ್ಲಿ ಎಸ್‌ಐಆರ್ ಅವ್ಯವಸ್ಥೆ : ಬಿಎಲ್‌ಒಗಳಿಗೆ ತರಬೇತಿಯ ಕೊರತೆ, ಇನ್ನೂ ತಲುಪದ ಗಣತಿ ಫಾರಂ

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಬಹಳ ಯಶಸ್ವಿಯಾಗಿ ನಡೆಯುತ್ತಿದೆ, ಮತದಾರರಿಗೆ ಎಲ್ಲಾ ರೀತಿಯ ಸಹಾಯಗಳನ್ನು ಒದಗಿಸಲಾಗುತ್ತಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಅವರು ಪದೇ...

SIR: ಉಡುಪಿಯಲ್ಲಿ ಕರ್ತವ್ಯನಿರತ BLO ಮೇಲೆ ಹಲ್ಲೆಗೆತ್ನಿಸಿದ ಮಾಜಿ ಪಂಚಾಯತ್ ಅಧ್ಯಕ್ಷ, FIR ದಾಖಲು

ಚುನಾವಣಾ ಮತದಾರರ ಪಟ್ಟಿ ಪರಿಷ್ಕರಣೆ (SIR) ಕರ್ತವ್ಯದಲ್ಲಿದ್ದ ಅಂಗನವಾಡಿ ಕಾರ್ಯಕರ್ತೆ ಹಾಗೂ ಬಿಎಲ್‌ಒ (BLO) ಮಹಿಳೆ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ ಗಂಭೀರ ಆರೋಪ ಉಡುಪಿ...

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...