Homeಅಂತರಾಷ್ಟ್ರೀಯರಿಶಿ ಸುನುಕ್ ಬಡತನ, ಜನಾಂಗೀಯವಾದ ಹೆಚ್ಚಿಸುತ್ತಾರೆ ಮತ್ತು ಹಿಂದೂತ್ವ ಫ಼್ಯಾಸಿಸಂ ಅನ್ನು ಗಟ್ಟಿಗೊಳಿಸುತ್ತಾರೆ!

ರಿಶಿ ಸುನುಕ್ ಬಡತನ, ಜನಾಂಗೀಯವಾದ ಹೆಚ್ಚಿಸುತ್ತಾರೆ ಮತ್ತು ಹಿಂದೂತ್ವ ಫ಼್ಯಾಸಿಸಂ ಅನ್ನು ಗಟ್ಟಿಗೊಳಿಸುತ್ತಾರೆ!

"ದಕ್ಷಿಣ ಏಶಿಯಾ ಸೌಹರ್ದ ಸಂಘಟನೆ" ಬಿಡುಗಡೆ ಮಾಡಿರುವ ಹೇಳಿಕೆಯನ್ನು ಚಿಂತಕ, ಹೋರಾಟಗಾರ ಶಿವಸುಂದರ್‌ವರವರು ಕನ್ನಡೀಕರಿಸಿದ್ದಾರೆ.

- Advertisement -
- Advertisement -

ಇನ್ಫೋಸಿಸ್ ನಾರಯಣಮೂರ್ತಿಯ ಅಳಿಯ ರಿಶಿ ಸುನುಕ್ ಬ್ರಿಟನ್ನಿನ ಪ್ರಧಾನಿಯಾಗಿದ್ದು ಭಾರತೀಯರ ಹೆಮ್ಮೆ ಎಂಬ ವಿವೇಚನೆರಹಿತ ಮಾಧ್ಯಮಗಳ ಆರ್ಭಟಗಳು ಈ ಸದ್ಯಕ್ಕೆ ಕಡಿಮೆಯಾಗುವ ಯಾವುದೇ ಸೂಚನೆ ಇಲ್ಲ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯ ಮೂಲದ ಅದರೆ ಆಫ಼್ರಿಕಾದಲ್ಲಿ ನೆಲಸಿದ್ದ ತಂದೆತಾಯಿಗಳು ಬ್ರಿಟನ್ನಿಗೆ ವಲಸೆ ಹೋದ ಮೇಲೆ ಜನಿಸಿದ ರಿಶಿಯವರು ಇನ್ಫೋಸಿಸ್ ನಾರಾಯಣಮೂರ್ತಿಯವರ ಮಗಳನ್ನು ಮದುವೆಯಾಗಿದ್ದಾರೆ. ಇಷ್ಟುಬಿಟ್ಟರೆ ಅವರ ಭಾರತೀಯ ಸಂಬಂಧಗಳು ಬೇರೆ ಏನೂ ಇಲ್ಲ.

ಅದೇನೇ ಇರಲಿ. ಅಪ್ಪಟ ಭಾರತೀಯಳಾದ ಕರ್ನಾಟಕದ ದಲಿತ ಯುವ ಪ್ರತಿಭೆ ಅಶ್ವಿನಿ ವಿಶ್ವಸಂಸ್ಥೆಯಲ್ಲಿ ಜನಾಂಗೀಯ ತಾರತಮ್ಯ ಅಧ್ಯಯನದ ಪ್ರಮುಖ ಸ್ಥಾನ ಪಡೆದಾಗ ಒಂದಕ್ಷರವನ್ನು ಬರೆಯದ ಪತ್ರಿಕೆಗಳು-ಮಾಧ್ಯಮಗಳು ಅಭಾರತೀಯ ರಿಶಿ ಸುನುಕ್ ಬ್ರಿಟನ್ನಿನ ಪ್ರಧಾನಿಯಾದರೆ ಭಾರತವು ಬ್ರಿಟನ್ನನ್ನು ವಶಪಡಿಸಿಕೊಂಡಿತೆಂಬಷ್ಟು ಉತ್ಪ್ರೇಕ್ಷೆ ಮಾಡುತ್ತಿವೆ.

ಸಹಜವಾಗಿಯೇ, ಸೋನಿಯಾ ಗಾಂಧೀಯವರ ವಿದೇಶಿ ಮೂಲವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಿದ್ದ ಬಿಜೆಪಿ ಈಗ ಹೇಗೆ ಬ್ರಿಟನ್ನಿನ್ನಲ್ಲಿ ರಿಶಿ ಪ್ರಧಾನಿಯಾದದ್ದನ್ನು ಸಂಭ್ರಮಿಸುತ್ತಾರೆ ಎಂಬ ಮುಜುಗರ ದ ಪ್ರಶ್ನೆಗೆ ಕಿವುಡಾಗಿದೆ…

ವಾಸ್ತವವಾಗಿ, ಬ್ರಿಟಿಷರು ಭಾರತವನ್ನು ಆಳುತ್ತಿರುವಾಗ ಬ್ರಿಟನ್ನಿನ ಹಡಗು ಹತ್ತಿಕೊಂಡು ವ್ಯಾಪಾರಿಗಳಾಗಿ, ಆಡಳಿತ ಸಹಾಯಕರಾಗಿ, ಜೀತಗಾರರಾಗಿ, ಕೂಲಿಗಳಾಗಿ, ವ್ಯಾಪಾರಿಗಳಾಗಿ, ಬ್ರಿಟಿಶ್ ಸಾಮ್ರಾಜ್ಯ ಇದ್ದಕಡೆಯೆಲ್ಲಾ ವಲಸೆ ಹೋದ ಭಾರತೀಯರು ಕಳೆದ ನೂರು ವರ್ಷಗಳಲ್ಲಿ ಆಯಾ ದೇಶಗಳ ಪ್ರಜಾತಾಂತ್ರಿಕ ರಾಜಕಾರಣದ ಭಾಗವಾಗಿ ವ್ಯಾಪಾರ, ರಾಜಕಾರಣ, ಉದ್ಯಮಗಳಲ್ಲಿ ಬೆಳೆದಿದ್ದಾರೆ.

ಕೆಲವು ವರ್ಗಗಳು ಅದರಲ್ಲು ಪಕ್ಕಾ ವ್ಯಾಪಾರಿ ವರ್ಗಗಳು ವಸಾಹತುಶಾಹಿಗಳ ಹಾಗೂ ಆಯಾ ದೆಶಗಳ ಶೋಷಕರ ಪರವಾಗಿದ್ದುಕೊಂಡು ಸ್ಥಳೀಯರ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ಅದನ್ನೇ ಬೆಳವಣಿಗೆ ಎಂದು ಮಾಧ್ಯಮಗಳು ಬಣ್ಣಿಸುತ್ತವೆ.

ಇನ್ನುಳಿದವರು ಅಲ್ಲಿಯ ದೇಶವಾಸಿಗಳೇ ಆಗಿ ನೋವು-ನಲಿವು-ಹೋರಾಟಗಳಲ್ಲಿ ಸರಿಸಮವಾಗಿ ಬೆರೆತುಹೋಗಿದ್ದಾರೆ. ಹೋರಾಟಗಳಲ್ಲಿ ಹುತಾತ್ಮರು ಆಗಿದ್ದಾರೆ. ಇದು ಮಾಧ್ಯಮಗಳಲ್ಲಿ ಸುದ್ದಿಯೂ ಅಗುವುದಿಲ್ಲ. ಇಂತಹ ಸಂದರ್ಭದಲ್ಲಿ ಬ್ರಿಟನ್ನಿನಲ್ಲಿ ಕಳೆದ ಹಲವಾರು ದಶಕಗಳಿಂದ ಕೆಲಸ ಮಾಡುತ್ತಿರುವ ಏಷಿಯಾ ದೇಶಗಳ ಮೂಲದ “South Asia Solidarity Group- ದಕ್ಷಿಣ ಏಶಿಯಾ ಸೌಹರ್ದ ಸಂಘಟನೆ” ಈ ಕುರಿತು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ. ಅದನ್ನು ಚಿಂತಕ, ಹೋರಾಟಗಾರ ಶಿವಸುಂದರ್‌ವರವರು ಕನ್ನಡೀಕರಿಸಿದ್ದಾರೆ. ನಾನುಗೌರಿ ಓದುಗರಿಗಾಗಿ ಅದನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ.

ರಿಶಿ ಸುನುಕ್ ಅವರು ಬಡತನ ಮತ್ತು ಜನಾಂಗೀಯವಾದವನ್ನು ಹೆಚ್ಚಿಸುತ್ತಾರೆ

ರಿಶಿ ಸುನುಕ್ ಅವರನ್ನು ಯುನೈಟೆಡ್ ಕಿಂಗ್‌ಡಂ (ಯು.ಕೆ.)ನ ಮೊಟ್ಟ ಮೊದಲ ಏಶಿಯನ್ ಪ್ರಧಾನಿ ಎಂದು ಕೊಂಡಾಡಲಾಗುತ್ತಿದೆ. ಹಾಗಿದ್ದಲ್ಲಿ ಆತನ ನಿಜವಾದ ಅಸ್ಮಿತೆ ಏನು ಮತ್ತು ಅದು ಆತನ ಗೃಹ ಹಾಗೂ ವಿದೇಶಿ ನೀತಿಗಳ ಮೇಲೆ ಯಾವ ರೀತಿಯ ಪ್ರಭಾವ ಬೀರಬಹುದು?

ರಿಶಿ ಸುನುಕ್ ಅವರು ಯು.ಕೆಯ ಸಂಸದರಲ್ಲೇ ಅತಿ ಶ್ರೀಮಂತ ಸಂಸದ. ಚಿಕ್ಕಂದಿನಲ್ಲಿ ಅತ್ಯಂತ ದುಬಾರಿ ಖಾಸಗಿ ಶಿಕ್ಷಣವನ್ನು ಪಡೆದುಕೊಂಡವರು ಮತ್ತು ಅ ನಂತರ ಅಕ್ಸ್‌ಫ಼ರ್ಡ್ ಮತ್ತು ಗೋಲ್ದ್‌ಮಾನ್ ಸಾಶ್ಸ್ ನಲ್ಲಿ ಕಲಿತವರು. ಇವೆಲ್ಲದರಿಂದ ಅವರು ಬ್ರಿಟಿಶ್ ಸಮಾಜದ ಪ್ರತಿಷ್ಟಿತ ವರ್ಗಗಳಲ್ಲಿ ಮನೆಮಾಡಿರುವ ದುರಹಂಕಾರಿ ಮೇಲರಿಮೆಗಳನ್ನು ಹಾಗೂ ಬಡವರು ಹಾಗೂ ದುರ್ಬಲರ ಬಗ್ಗೆ ತಿರಸ್ಕಾರ ಹಾಗೂ ದ್ವೇಷಗಳನ್ನು ಮೈಗೂಡಿಸಿಕೊಂಡಿದ್ದಾರೆ.

2008ರ ಹಣಕಾಸು ಕುಸಿತದ ಸಂದರ್ಭದಲ್ಲಿ ಬ್ರಿಟನ್ ಸರ್ಕಾರವು ಕಟ್ಟುನಿಟ್ಟಿನ ಆರ್ಥಿಕ ನೀತಿಗಳನ್ನು ಜಾರಿ ಮಾಡಿದ್ದರ ಪರಿಣಾಮವಾಗಿ ಯುನೈಟೆಡ್ ಕಿಂಗ್‌ಡಂ ನಲ್ಲಿ 3 ಲಕ್ಷಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದರು. ಆದರೆ ಅದೇ ಸಂದರ್ಭದಲ್ಲೇ ರಿಶಿ ಸುನುಕ್ ಅವರು ಅಪಾರ ಸಂಪತ್ತನ್ನು ಸಂಪಾದಿಸಿದರು.
ಕೋವಿಡ್ ಕಾಲದಲ್ಲಿ ಬ್ರಿಟನ್ ಸರ್ಕಾರದ ಹಣಕಾಸು ಮಂತ್ರಿಯಾಗಿದ್ದ (ಚಾನ್ಸಲರ್) ರಿಶಿ ಸುನುಕ್ ಅವರು ಕೋವಿಡ್ ಸಾಂಕ್ರಾಮಿಕದ ಸಂದರ್ಭವನ್ನು ನಿಭಾಯಿಸಲು ಅತ್ಯಂತ ಬಡಕುಟುಂಬಗಳಿಗೆ ಅನುಕೂಲಕಾರಿಯಾಗಿದ್ದ ಸಾರ್ವತ್ರಿಕ ಸಾಲ ಯೋಜನೆಯನ್ನು ವಾರಕ್ಕೆ 20 ಪೌಂಡುಗಳಷ್ಟು ಹೆಚ್ಚಿಸುವ ಯೋಜನೆಯನ್ನು ಸ್ಥಗಿತಗೊಳಿಸಿದ್ದರು.

ಈ ಜುಲೈನಲ್ಲಿ ಈ ಸಾರ್ವತ್ರಿಕ ಸಾಲ ಕಡಿತವನ್ನು ಘೋಶಿಸುವ ಹೊತ್ತಿನಲ್ಲಿ ರಿಷಿ ಸುನುಕ್ ಅವರು ತಮ್ಮ ಪತ್ನಿ ಅಕ್ಷತಾ ಮೂರ್ತಿಯೊಂದಿಗೆ ತಾವು 2015ರಲ್ಲಿ 1.5 ಮಿಲಿಯನ್ ಪೌಂಡ್ ಕೊಟ್ಟು ಯಾರ್ಕ್ ಶೈರ್ ನಲ್ಲಿ ಖರೀದಿಸಿದ್ದ ಐಶರಾಮಿ ವಿಲ್ಲಾದಲ್ಲಿ ಈಜುಕೊಳ, ಜಿಮ್ ಮತ್ತು ಟೆನ್ನಿಸ್ ಕೋರ್ಟನ್ನು ನಿರ್ಮಿಸುವ ಯೋಜನೆಯನ್ನು ರೂಪಿಸುತ್ತಿದ್ದರು. ರಿಶಿ ಅವರ ಹೆಂಡತಿ ಅಕ್ಷತಾ ಮೂರ್ತಿಯವರು ಕೋಟ್ಯಾಧಿಪತಿ ಮತ್ತು ಇನ್ಫೋಸಿಸ್ ನ ಸಹ ಸಂಸ್ಥಾಪಕರಾದ ನಾರಾಯಣಮೂರ್ತಿಯವರ ಮಗಳಾಗಿದ್ದು ಅದರ ವ್ಯವಹಾರದಲ್ಲೂ ಪಾಲುದಾರರಾಗಿದ್ದಾರೆ.

ಆಡಂ ಬೈಶಾಸ್ಕಿ ಯವರು ಬರೆಯುವಂತೆ ಸುನುಕ್ ಅವರು ಯುನೈಟೆಡ್ ಕಿಂಗ್‌ಡಂನ ಹಲವಾರು ಕಡೆ ಕೋಟ್ಯಾಂತರ ಪೌಂಡ್ ಬೆಲೆಬಾಲುವ ಐಷರಾಮಿ ಬಂಗಲೆಗಳನ್ನು ಹೊಂದಿರುವುದು ಮಾತ್ರವಲ್ಲದೆ ಕಪ್ಪುಹಣದ ಕೇಂದ್ರವಾಗಿರುವ ಕೇಮ್ಯಾನ್ ಐಲಾಂಡ್‌ ನಲ್ಲೂ ತಮ್ಮ ಅಪಾರ ಸಂಪತ್ತನ್ನು ಕೂಡಿಟ್ಟಿದ್ದಾರೆ.

ಅಷ್ಟು ಮಾತ್ರವಲ್ಲ ಈ ಹಿಂದೆ ಲೇಬರ್ ಪಾರ್ಟಿಯು ಯು.ಕೆಯ ನಗರ ಪ್ರದೇಶಗಳಲ್ಲಿ ಬಡವರಿಗೆಂದು (ಅವರಲ್ಲಿ ಬಹಳಷ್ಟು ಜನ ಏಷಿಯನ್ನರು) ವಿತರಿಸಿದ್ದ ಸಂಪನ್ಮೂಲಗಳನ್ನು ಕಸಿದುಕೊಂಡು ವಿಲಾಸಿ ವರ್ಗಗಳ ಐಷಾರಾಮಕ್ಕೆ ಒದಗಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದು ತಮ್ಮ ವರ್ಗಮಿತ್ರರಿಗೆ ಭರವಸೆ ನೀಡಿದ್ದಾರೆ.

ರಿಶಿಯವರ ಟೋರಿ (ಕನ್ಸರ್ವೇಟಿವ್) ಪಕ್ಷವು ಸಮಾಜದ ವೈವಿಧ್ಯತೆಯನ್ನು ಎತ್ತಿ ಹಿಡಿಯುವ ತಮ್ಮ ನಿಲುವಿನ ಬಗ್ಗೆ ಎಷ್ಟೇ ಕೊಚ್ಚಿಕೊಂಡರೂ ರಿಶಿ ಸುನುಕ್ ಅವರು ಮಾತ್ರ ಇತರ ವರ್ಣೀಯರ ಸ್ನೇಹಿತರಂತೂ ಅಲ್ಲವೇ ಅಲ್ಲ.

ಬ್ರಿಟನ್ನಿನಲ್ಲಿ ಕಪ್ಪು ಜನರನ್ನು ಮತ್ತು ಮುಸ್ಲಿಮರನ್ನು ಗುರಿ ಮಾಡಿ ಬ್ರಿಟನ್ನಿನ ಪೊಲೀಸರು ನಡೆಸುವ ಜನಾಂಗೀಯ ಮತ್ತು ಹಿಂಸಾತ್ಮಕ Stop And Search ( ಬೇಕಾಬಿಟ್ಟಿ ತಡೆಯುವ, ಶೋಧಿಸುವ) ನೀತಿಗಳನ್ನು ಇನ್ನಷ್ಟು ಹೆಚ್ಚಿಸುವ ಭರವಸೆಯನ್ನು ನೀಡಿದಾರೆ. ರಾಜಕೀಯ ಸರಿತನಗಳು ತನ್ನ ದಾರಿಗೆ ಅಡ್ಡವಾಗುವುದಿಲ್ಲ ಎಂದು ಘೋಷಿಸಿರುವ ರಿಷಿಯವರು ಮುಸ್ಲಿಮರನ್ನು ವಿನಾಕಾರಣ ನಿಂದಿಸುವ ತೀವ್ರ ಬಲಪಂಥೀಯ ಹೇಳಿಕೆಗಳಾದ “ಹೆಚ್ಚು ಮಕ್ಕಳನ್ನು ಹೆರುವ ಮುಸ್ಲಿಮರು” ಎಂಬ ಹೇಳಿಕೆಯನ್ನು ಪದೇಪದೇ ಬಳಸುತ್ತಾರೆ.

ಇದರ ಜೊತೆಗೆ ಮುಸ್ಲಿಮರನ್ನು ಗುರಿಯಾಗಿರಿಸಿಕೊಂಡಿರುವ ಹಾಗೂ ತನ್ನ ಇಸ್ಲಾಮೋಫ಼ೋಬಿಕ್ (ಮುಸ್ಲಿಮರನ್ನು ದುರುಳೀಕರಿಸುವ) ಧೋರಣೆಯಿಂದಾಗಿ ತೀವ್ರ ಟೀಕೆಗೊಳಗಾಗಿದ್ದ PREVENT ಕಾರ್ಯಕ್ರಮವನ್ನು ಮತ್ತೆ ಪ್ರಾರಂಭಿಸುವ ಭರವಸೆಯನ್ನೂ ನೀಡಿದ್ದಾರೆ.

ಇನ್ನು ನಿರಾಶ್ರಿತ ವಲಸೆಗಾರರ ಪ್ರಶ್ನೆಗೆ ಬರುವುದಾದರೆ ಅವರನ್ನು ರವಾಂಡಾ ದೇಶದ ಮೃತ್ಯು ಸದೃಶ ಶಿಬಿರಗಳಿಗೆ ಅಟ್ಟಿಬಿಡಬೇಕೆಂಬ ಪ್ರೀತಿ ಪಟೇಲರ ಫ಼್ಯಾಸಿಸ್ಟ್ ನೀತಿಯನ್ನು ಅಪ್ಪಿಕೊಳ್ಳಲು ಅವರು ತುದಿಗಾಲಲ್ಲಿ ನಿಂತಿದ್ದಾರೆ.

ವಿಪರ್ಯಾಸವೆಂದರೆ ರಿಶಿ ಸುನುಕರ ಪೂರ್ವಜರೇ ನಿರಾಶ್ರಿತರಾಗಿ ಯುನೈಟೆಡ್ ಕಿಂಗ್‌ಡಂ ಗೆ ಬಂದಿದ್ದರು. ಮತ್ತು ಈ ರವಾಂಡಾ ನೀತಿಯು ದುಬಾರಿಯಾಗಿದ್ದು ಪರಿಣಾಮಕಾರಿಯಾಗಿಲ್ಲವೆಂಬುದು ಈಗಾಗಲೇ ರುಜುವಾತಾಗಿದೆ.

ಇದಲ್ಲದೆ ರಿಷಿ ಸುನುಕ್ ಅವರು ಮೋದಿ ಅಳ್ವಿಕೆಗೆ ಸನಿಹವಾಗಿರುವುದು ಕೂಡ ಸ್ಪಷ್ಟವಾಗಿದೆ. ಜಗತ್ತಿನಾದ್ಯಂತ ಹಿಂದೂತ್ವವಾದಿ ಶಕ್ತಿಗಳೊಂದಿಗೆ ಮಿತ್ರತ್ವ ಹೊಂದಿರುವ ಇಸ್ರೇಲಿನೊಂದಿಗೆ ಅವರಿಗಿರುವ ಸ್ನೇಹ ಎಲ್ಲರಿಗೂ ಗೊತ್ತಿರುವ ಸಂಗತಿಯೇ.

ರಿಷಿ ಸುನುಕ್ ಅವರು ಜೆರುಸೊಲೆಮ್ ಅನ್ನು ಇಸ್ರೇಲಿನ ರಾಜಧಾನಿಯಾಗಿ ಜಗತ್ತು ಒಪ್ಪಿಕೊಳ್ಳಬೇಕೆಂಬುದನ್ನು ಬೆಂಬಲಿಸುತ್ತಾರೆ.

ಅಲ್ಲದೇ ಇಸ್ರೇಲಿನ ಘಾತುಕತನವನ್ನು ಜಗತ್ತಿನಾದ್ಯಂತ ಬಯಲು ಮಾಡುತ್ತಿರುವ Boycott, Disinvest, Sanction(BDS)- (ಇಸ್ರೇಲನ್ನು-ಬಹಿಷ್ಕರಿಸಿ, ಹೂಡಿಕೆ ಹಿಂತೆಗೆದುಕೊಳ್ಳಿ ಮತ್ತು ನಿರ್ಬಂಧ ವಿಧಿಸಿ) ಚಳವಳಿಯ ಮೇಲೆ ಶಾಸನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವ ಭರವಸೆಯನ್ನೂ ನೀಡಿದ್ದಾರೆ.

ಅವರ ಮಾವ ನಾರಾಯಣಮೂರ್ತಿ ಸ್ಥಾಪಿಸಿರುವ ಇನ್‌ಫ಼ೋಸಿಸ್ ಸಂಸ್ಥೆಯು ಇಸ್ರೇಲಿನಲ್ಲಿ ಸಾಕಷ್ಟು ಹೂಡಿಕೆಗಳನ್ನು ಮಾಡಿದ್ದು ಅದರ ಸಹ ಉಸ್ತುವಾರಿಯನ್ನು ಇಸ್ರೇಲಿನ ಮಿಲಿಟರಿ ಬೇಹುಗಾರಿಕೆ ಸಂಸ್ಥೆ ಘಟಕ-8200ರ ಭಾಗವಾಗಿದ್ದ ಉರಿ ಲೆವಿನ್ ನಿರ್ವಹಿಸುತ್ತಾರೆ.

ಮೋದಿ ಸರ್ಕಾರದ ಬಗೆಗಿನ ಯಾವುದೇ ವಿಮರ್ಶೆಯನ್ನು ಅಥವಾ ಬ್ರಿಟನ್ನಿನಲ್ಲಿರುವ ಹಿಂದುತ್ವ ಫ಼್ಯಾಸಿಸ್ಟರ ಯಾವುದೇ ಶಾಖೆಗಳ ಮೇಲಿನ ವಿಮರ್ಶೆಯನ್ನು – ಹಿಂದೂಫ಼ೋಬಿಯ- ಹಿಂದುಗಳನ್ನು ದುರುಳಿಕರಿಸುವ
-ತಂತ್ರ ಎಂದು ಪ್ರಚಾರ ಮಾಡುವ ಹಿಂದೂತ್ವ ಫ಼್ಯಾಸಿಸ್ಟರ ಪ್ರಯತ್ನಗಳನ್ನು ರಿಶಿ ಸುನುಕ್ ಅವರು ಬೆಂಬಲಿಸುವ ಎಲ್ಲಾ ಸಾಧ್ಯತೆಗಳಿವೆ.

ಕಳೆದ ಹಲವಾರು ವರ್ಷಗಳಿಂದ ಹೆಚ್ಚೆಚ್ಚು ಪಾಶ್ಚಿಮಾತ್ಯ ರಾಜಕಾರಣಿಗಳು ಮತ್ತು ವಿಶ್ಲೇಷಕರು ಮೋದಿಯವರ ನರಮೇಧ ನೀತಿಗಳನ್ನು ಟೀಕಿಸುವುದು ಹೆಚ್ಚುತ್ತಿದ್ದಂತೆ ಮೋದಿ ಸರ್ಕಾರದ ವಿದೇಶಿ ಕಚೇರಿಗಳು ಅವನ್ನು ನಗಣ್ಯಗೊಳಿಸುವ ಹತಾಷ ಪ್ರಯತ್ನದಲ್ಲಿ ತೊಡಗಿಕೊಂಡಿವೆ.

ಹಿಂದೂಫ಼ೋಬಿಯಾ- ಹಿಂದು ದುರುಳೀಕರಣ ಎಂಬುದು Black Lives Matter Movement – ಕಪ್ಪು ಜನರ ಜೀವಕ್ಕೂ ಬೆಲೆ ಇದೆ ಎಂಬ ಚಳವಳಿಯನ್ನು ನಗಣ್ಯಗೊಳಿಸಲು ಹುಟ್ಟಿಕೊಂಡ ’ White Lives Matter’- ಬಿಳಿ ಜೀವಕ್ಕೆ ಬೆಲೆ ಇದೆ -ಎಂಬ ಬಿಳಿಯ ಶ್ರೇಷ್ಟತೆಯನ್ನು ಪ್ರತಿಪಾದಿಸುವ ಬಿಳಿ ದುರಭಿಮಾನಿ ಜನಾಂಗೀಯ ಪ್ರತಿಕ್ರಿಯೆಗೆ ಸಮಾನವಾದದ್ದು ಎಂಬುದನ್ನು ನಾವು ಸೂಚಿಸುತ್ತಲೇ ಬಂದಿದ್ದೇವೆ. ಇದು ತನ್ನಂತೆಯೇ ಒಂದು ನವನಾಜಿ ಚಳವಳಿಯಾಗಿ ಬೆಳೆಯುತ್ತಿದೆ.

ಭಾರತದಲ್ಲಿರುವ ಹಿಂದೂ ಬಹುಸಂಖ್ಯಾತರು ಅಲ್ಲಿನ ಅಲ್ಪಸಂಖ್ಯಾತರಿಂದ ಯೋಜಿತ ದಾಳಿಗೆ ತುತ್ತಾಗುತ್ತಿದ್ದಾರೆ ಎಂಬ ಹಿಂದೂಫ಼ೋಬಿಯಾದ ತಿಳವಳಿಕೆಯು ಪಾಶ್ಚಿಮಾತ್ಯ ಸಂದರ್ಭದಲ್ಲಿ ಬಿಳಿಯರಿಗೆ ಅನ್ವಯವಾಗುತ್ತದೆ.

ಎರಡನ್ನೂ ಕೂಡ ಅಲ್ಪಸಂಖ್ಯಾತ ಹಾಗೂ ದಮನಿತ ಜನರ ಮೇಲೆ ತಾವು ನಡೆಸುವ ಜನಾಂಗೀಯ ಮತ್ತು ಫ಼್ಯಾಸಿಸ್ಟ್ ದಾಳಿಗಳ ವಿರುದ್ಧ ನಡೆಯುವ ಪ್ರತಿರೋಧಗಳ ವಿರುದ್ಧ ನೆಪವಾಗಿ ಹಾಗೂ ಪ್ರತಿಕ್ರಿಯೆಯಾಗಿ ಬಳಸಲಾಗುತ್ತದೆ.

ಕಳೆದ ತಿಂಗಳು ಲೈಸೆಸ್ಟರ್ ನಲ್ಲಿ ಮುಖವಾಡ ಧರಿಸಿದ ಸಶಸ್ತ್ರ ಹಿಂದೂತ್ವವಾದಿಗಳು ಏಶಿಯನ್ ಸಮುದಾಯಗಳ ವಸತಿ ಪ್ರದೇಶದಲ್ಲಿ ಮೆರವಣಿಗೆ ನಡೆಸಿದ್ದರ ಹಿಂದಿನ ಉದ್ದೇಶ ಮುಸ್ಲಿಮರನ್ನು ಪ್ರಚೋದಿಸಿ ತಮ್ಮ ಹಿಂದೂಫ಼ೋಬಿಯಾ ಎಂಬ ಕಥನವನ್ನು ಮತ್ತಷ್ಟು ಗಟ್ಟಿಗೊಳಿಸಿಕೂಳ್ಳುವುದೇ ಆಗಿತ್ತು.

ರಿಶಿ ಸುನುಕ್ ಅವರು ಪ್ರಧಾನಿಯಾಗುವುದರೊಂದಿಗೆ ಈ ಶಕ್ತಿಗಳು ಇನ್ನಷ್ಟು ಬಲಗೊಳ್ಳುತ್ತಾರೆ.

ಅಲ್ಲದೇ ಈ ಬಗೆಯ ಕೋಮುವಾದಿ ಹಿಂಸಾಚಾರವನ್ನು ದೇಶದ ಇತರ ಭಾಗಗಳಿಗೂ ವಿಸ್ತರಿಸುವ ಶಕ್ತಿಯನ್ನು ಪಡೆದುಕೊಳ್ಳುತ್ತಾರೆ. ಇದನ್ನು ತಡೆಗಟ್ಟಲೇಬೇಕು.

ಇದನ್ನೂ ಓದಿ; ರಾಜೀವ ತಾರಾನಾಥ: ಜಾತ್ಯತೀತ ಪರಂಪರೆಯ ಮಾತು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ರಿಶಿ ಸುಣಕವರು ಆರೆಸಸ್ ನ. ಅಜೆಂಡಾವನ್ನು ಪರೋಕ್ಷವಾಗಿ
    Uk ಯಲ್ಲಿ. ಜಾರಿಗೆ ತರುವ ಹುನ್ನಾರ ನಡೆಸಿದ್ದಾರೆಎನ್ನುವಿರೇನು
    ಅಂದರೆ. ಚಾತುರ್ವರ್ಣ ಸಿದ್ದಾಂತವನ್ನು ಅಲ್ಲಿಯೂ ಜಾರಿಗೆ ತರುವರೇನು.
    ಹಾಗಾದರೆ
    ಅಲ್ಲಿ bramañararu,. ವೈಸ್ಯರಾರು,. Kshatriya ಮತ್ತು. ಶೂದ್ರ ರಾರಗುವರು.

LEAVE A REPLY

Please enter your comment!
Please enter your name here

- Advertisment -

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...