Homeಅಂಕಣಗಳುಮಾತು ಮರೆತ ಭಾರತ-26; ಪಾಯಲ್ ತಡ್ವಿ ಫೈಲ್: ವೈದ್ಯಳಾಗುವ ಕನಸು ಹೊತ್ತವಳನ್ನ ಸ್ಮಶಾನಕ್ಕೆ ಕಳಿಸಿದರು

ಮಾತು ಮರೆತ ಭಾರತ-26; ಪಾಯಲ್ ತಡ್ವಿ ಫೈಲ್: ವೈದ್ಯಳಾಗುವ ಕನಸು ಹೊತ್ತವಳನ್ನ ಸ್ಮಶಾನಕ್ಕೆ ಕಳಿಸಿದರು

- Advertisement -
- Advertisement -

ಮಹಾರಾಷ್ಟ್ರದ ಪಾಯಲ್ ತಡ್ವಿ ಎಂಬ 26 ವರ್ಷದ ಆದಿವಾಸಿ ಯುವತಿ ತಾನು ಮೆಡಿಕಲ್ ಸ್ನಾತಕೋತ್ತರ ಪದವಿ ಓದುತ್ತಿದ್ದ ಮುಂಬೈನ ಟೋಪಿವಾಲ ರಾಷ್ಟ್ರೀಯ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ಲಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಳು. ಮಹಾರಾಷ್ಟ್ರದ ಮೂಲೆಯೊಂದರ ಕುಗ್ರಾಮದ ಆದಿವಾಸಿ ಕುಡಿಯೊಂದರ ಕನಸು ಅಂದು ನೇಣಿಗೆ ಶರಣಾಗಿ ಅಸುನೀಗಿತು. ಪಾಯಲ್ ತಡ್ವಿಗೆ ತನ್ನ ಗ್ರಾಮದಲ್ಲಿ ಒಂದು ಆಸ್ಪತ್ರೆ ತೆರೆಯುವ ಆಸೆಯಿತ್ತು. ಆ ಆಸೆ ಆಸೆಯಾಗಿಯೇ ಉಳಿದುಹೋಯಿತು. ಇಂತಹ ಅನ್ಯಾಯಕ್ಕೆ ಮೂಲ ಕಾರಣ ಭಾರತದ ಜಾತಿಪದ್ಧತಿ. ಅದರಲ್ಲೂ ಸಂಸ್ಕಾರವಂತರೆನಿಸಿಕೊಂಡ ಮೆಡಿಕಲ್ ಕಾಲೇಜಿನ ಕ್ಯಾಂಪಸ್ಸಿನೊಳಗಿನ ಜಾತಿಪದ್ಧತಿ.

ಇಲ್ಲಿ ದುಃಖದಿಂದಲೇ ನೆನಪಿಸಿಕೊಳ್ಳಬೇಕಾದ ಮತ್ತೊಬ್ಬ ದಲಿತ ವಿದ್ಯಾರ್ಥಿ ರೋಹಿತ್ ವೇಮುಲ. ಅವನನ್ನು ಈ ದೇಶದ ಮೇಲ್ಜಾತಿ ರಾಜಕೀಯ-ಸಾಂಸ್ಥಿಕ ವ್ಯವಸ್ಥೆ ಬಲಿಪಡೆದಾಗ ಕಾಕತಾಳಿಯವೆಂಬಂತೆ ಅವನಿಗೂ 26 ವರ್ಷ ತುಂಬಿತ್ತು.

ಪಾಯಲ್ ತಡ್ವಿ ಮೆಡಿಕಲ್ ಕಾಲೇಜಿಗೆ 2018ರಲ್ಲಿ ದಾಖಲಾದಳು. ಅವಳಿಗೆ ಆ ಸದ್ಯಕ್ಕೆ ಯಾವ ರೂಮುಗಳೂ ಖಾಲಿ ಇಲ್ಲದ ಕಾರಣ ಆರಂಭಿಕ ಎರಡು ತಿಂಗಳನ್ನು ಹಿರಿಯ ಸಹಪಾಠಿಗಳಾದ ಅಂಕಿತ ಖಾಂಡೇವಾಲ ಮತ್ತು ಹೇಮಾ ಅಹುಜ ರೂಮಿನಲ್ಲಿ ಹೊಂದಾಣಿಕೆ ಮಾಡಿಕೊಂಡು ಕಳೆಯುವಂತಾಯಿತು. ಈ ಎರಡು ತಿಂಗಳ ಸಮಯದಲ್ಲಿ ತಡ್ವಿಗೆ ನರಕದರ್ಶನವಾಗಿತ್ತು. ಯಾವ ಜಾತಿ ತಾರತಮ್ಯಗಳೂ ಇಲ್ಲದೆ ಜೀವಿಸಿದ್ದ ಆದಿವಾಸಿ ಯುವತಿಗೆ ’ಸೋ ಕಾಲ್ಡ್ ಸಂಸ್ಕಾರವಂತರ’ ನೀಚತನದ ದರ್ಶನವಾಗಿತ್ತು. ಆ ರೂಮಿನಲ್ಲಿ ಅಹುಜ ಮತ್ತು ಖಾಂಡೇವಾಲರಿಗೆ ಮಲಗಲು ಹಾಸಿಗೆ ಇದ್ದವು. ಅವರಿಬ್ಬರೂ ಅದರ ಮೇಲೆ ಮಲಗುತ್ತಿದ್ದರು. ಆದರೆ ಪಾಯಲ್‌ಳಿಗೆ ಹಾಸಿಗೆ ವ್ಯವಸ್ಥೆಯನ್ನು ಮಾಡಿರದ ಕಾರಣ ಆಕೆ ನೆಲದ ಮೇಲೆ ಚಾಪೆ ಹಾಸಿಕೊಂಡು ಮಲಗುತ್ತಿದ್ದಳು. ದಲಿತ-ಆದಿವಾಸಿ ಮಕ್ಕಳಿಗೆ ಇದೇನು ಹೊಸದಲ್ಲ ಬಿಡಿ. ಇದೇನು ಪಾಯಲ್‌ಳಿಗೆ ಬೇಸರ ತರಿಸಲಿಲ್ಲ. ಆದರೆ ಯಾವಾಗ ಅಹುಜ ಮತ್ತು ಖಾಂಡೇವಾಲ ಶೌಚಾಲಯಕ್ಕೆ ಹೋಗಿ ಬಂದು ತಮ್ಮ ಕಾಲುಗಳನ್ನು ಪಾಯಲ್ ಚಾಪೆಗೆ ಒರೆಸಿಕೊಂಡು ನಗುತ್ತಿದ್ದರೋ ಆಗ ಪಾಯಲ್‌ಗೆ ಜಾತಿಪದ್ಧತಿಯ ಹಾಗೂ ಮೇಲ್ಜಾತಿಯವರ ಕ್ರೂರ ವರ್ತನೆ ಅರ್ಥವಾಗಿಹೋಗಿತ್ತು. ಬಂದಿರುವುದು ಓದಲಿಕ್ಕಾಗಿ ಅಲ್ಲವೇ ಎಂದುಕೊಂಡು ಆಗ ಕಣ್ಮುಚ್ಚಿ ಸಹಿಸಿಕೊಳ್ಳುತ್ತಿದ್ದಳು.

ಅಂಕಿತ ಖಾಂಡೇವಾಲ,ಭಕ್ತಿ ಮೆಹರೆ, ಹೇಮಾ ಅಹುಜ

ಅಂಕಿತ ಖಾಂಡೇವಾಲ ಮತ್ತು ಹೇಮಾ ಅಹುಜ ಇವರೊಟ್ಟಿಗೆ ಭಕ್ತಿ ಮೆಹರೆ ಎಂಬ ಮತ್ತೊಬ್ಬ ಮೇಲ್ಜಾತಿ ಯುವತಿ ಸೇರಿಕೊಂಡು ತಮ್ಮ ವಿಕೃತ ಮೇಲ್ಜಾತಿ ಮನಸ್ಸನ್ನು ಸಂತುಷ್ಟಗೊಳಿಸಿಕೊಳ್ಳಲು ಆರಂಭಿಸಿದರು. ಜಾತಿ ನಿಂದನೆ ಮಾಡುವುದು, ಮಾನಸಿಕ ಕಿರುಕುಳ ನೀಡುವುದನ್ನು ಮುಂದುವರಿಸಿದರು. ಅವಳ ಜಾತಿ ಹಿಡಿದು ಹೀಯಾಳಿಸುತ್ತಿದ್ದರು. ಈ ಕುರಿತು ಕಾಲೇಜಿನ ಆಡಳಿತಕ್ಕೆ ದೂರು ನೀಡಿದ್ದರೂ ಪ್ರಯೋಜನವಾಗಿರಲಿಲ್ಲ. ಪಾಯಲ್ ಗೈನೋಕಾಲಜಿಸ್ಟ್ ಆಗಿ ತರಬೇತಿ ಪಡೆಯುತ್ತಿದ್ದಳು. ಬರಬರುತ್ತಾ ಆಕೆಯನ್ನು ಆಪರೇಷನ್ ಥಿಯೇಟರ್ ಹೊರಗಡೆಯೇ ನಿಲ್ಲುವಂತೆ ಮೇಲ್ಜಾತಿಯ ಆ ಮೂವರು ಧಮಕಿ ಹಾಕುತ್ತಿದ್ದರು; ಸರ್ಜರಿ ಮಾಡದಂತೆ ಪಾಯಲ್‌ಳನ್ನು ನಿರ್ಬಂಧಿಸಿದ್ದರು. ನಿರ್ಬಂಧವನ್ನು ಉಲ್ಲಂಘಿಸಿದರೆ, ಎಲ್ಲರೂ ಒಟ್ಟಾಗಿ ಆಕೆಯ ಮೇಲೆ ಇಲ್ಲಸಲ್ಲದ ದೂರು ಹೇಳಿ ಸಸ್ಪೆಂಡ್ ಮಾಡಿಸುವುದಾಗಿ ಬೆದರಿಕೆ ಒಡ್ಡುತ್ತಿದ್ದರು. ಪಾಯಲ್ ಆತ್ಮಹತ್ಯೆ ಮಾಡಿಕೊಳ್ಳುವ ಮೂರು ದಿನದ ಮುಂಚೆ ಈ ಮೂವರೂ ಯುವತಿಯರು ಆಕೆಯನ್ನು ಆಸ್ಪತ್ರೆಯ ಕೆಳಹಂತದ ಕೆಲಸವೊಂದಕ್ಕೆ ಮೀಸಲಾಗುವಂತೆ ಮಾಡಿದ್ದರು.

ಇದನ್ನೂ ಓದಿ: ಮಾತು ಮರೆತ ಭಾರತ-25; ಅರಿಯೂರು ಫೈಲ್: ಹಿಂದೂಗಳ ದೃಷ್ಟಿಯಲ್ಲಿ ’ದಲಿತರೆಂದಿಗೂ ಹಿಂದೂಗಳಲ್ಲ’

ಈ ಎಲ್ಲಾ ಕಿರುಕುಳಗಳನ್ನು ಸಹಿಸಲಾರದ ಮುಗ್ಧ ಮನಸ್ಸಿನ ಆದಿವಾಸಿ ಮಗಳು ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡುಬಿಟ್ಟಳು. ಆ ಪತ್ರದಲ್ಲಿ ಅಂಕಿತ ಖಾಂಡೇವಾಲ, ಹೇಮಾ ಅಹುಜ ಮತ್ತು ಭಕ್ತಿ ಮೆಹರೆಯನ್ನು ಉಲ್ಲೇಖಿಸಿದ್ದ ಕಾರಣ ಆ ಮೂವರನ್ನೂ ಬಂಧಿಸಲಾಯಿತು. ಈಗವರು ಜಾಮೀನಿನ ಮೇಲೆ ಹೊರಗಿದ್ದಾರೆ. ಆದರೆ, ಮೆಡಿಕಲ್ ಪರೀಕ್ಷೆ ಬರೆಯಲು ಬಾಂಬೆ ಹೈ ಕೋರ್ಟ್ ಅವಕಾಶ ಮಾಡಿಕೊಟ್ಟಿಲ್ಲ.

ದಲಿತ, ಆದಿವಾಸಿ ಮತ್ತು ಹಿಂದುಳಿದ ಜಾತಿಗಳ ವಿದ್ಯಾರ್ಥಿಗಳು ಮೆಡಿಕಲ್ ಕಾಲೇಜಿನ ಕ್ಯಾಂಪಸ್ಸಿಗೆ ಪ್ರವೇಶ ಪಡೆದೊಡನೆ ಇತರೆ ಮೇಲ್ಜಾತಿ ವಿದ್ಯಾರ್ಥಿಗಳು ಅವರನ್ನು ಕೇಳುವ ಮೊದಲ ಪ್ರಶ್ನೆ ’ನಿನ್ನ ನೀಟ್ ಅಂಕಗಳೆಷ್ಟು?’ ಎಂಬುವುದಾಗಿರುತ್ತದೆ. ಉತ್ತರ ಪಡೆದ ನಂತರ ಅವರು ಮಾಡುವ ಮೊದಲ ಕೆಲಸ ’ಮೀಸಲಾತಿ ಪಡೆದವರು’ ಮತ್ತು ’ಸಾಮಾನ್ಯ ವಿದ್ಯಾರ್ಥಿಗಳು’ ಎಂದು ಪ್ರತ್ಯೇಕಿಸುವುದಾಗಿದೆ. ಲೈವ್‌ಮಿಂಟ್ ವರದಿಯೊಂದು ತಿಳಿಸುವ ಮಾಹಿತಿ ಭಯಾನಕವಾಗಿದೆ. ಅದು ಪ್ರಕಟಿಸಿದಂತೆ 2019ರ ಸಂಸತ್ತಿನ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಗಳಿಸಿದ ಸ್ಥಾನಗಳನ್ನು (303) ಸಾಮಾನ್ಯ ಅಭ್ಯರ್ಥಿಗಳಿಗೂ, ಕಾಂಗ್ರೆಸ್ ಗಳಿಸಿದ ಸ್ಥಾನಗಳನ್ನು (52) ’ಮೀಸಲಾತಿ ಪಡೆದ ವಿದ್ಯಾರ್ಥಿ’ಗಳಿಗೂ ಹೋಲಿಸಿ ಆಡಿಕೊಳ್ಳುವುದನ್ನೂ ಕ್ಯಾಂಪಸ್ಸಿನ ಮೇಲ್ಜಾತಿ ವಿದ್ಯಾರ್ಥಿಗಳು ಆರಂಭಿಸಿದ್ದಾರೆ. ’ನೀವು ಪ್ರತಿಭಾವಂತ ವಿದ್ಯಾರ್ಥಿಯ ಸ್ಥಾನವನ್ನು ಕಳ್ಳತನ ಮಾಡಿಕೊಂಡಿದ್ದೀರಿ; ನೀವು ಓದಿ ಆಸ್ಪತ್ರೆ ಕ್ಲಿನಿಕ್ ತೆರೆದಾಗ ಅದರ ಬಾಗಿಲಿಗೆ ನಿಮ್ಮ ಜಾತಿ ಪ್ರಮಾಣ ಪತ್ರವನ್ನೂ ಅಂಟಿಸಿಕೊಳ್ಳಿ’ ಎಂದು ಎಲ್ಲರೆದುರು ಹೀಯಾಳಿಸಲಾಗುತ್ತದೆ.

ಉನ್ನತ ಶಿಕ್ಷಣದಲ್ಲಿ ಜಾತಿತಾರತಮ್ಯ ಎಂಬುದು ತೀರ ಸಾಮಾನ್ಯ ವಿಷಯವಾಗಿದೆ. ಅದನ್ನು ಸಹಿಸಿಕೊಂಡು ಬದುಕುವ ದಲಿತ-ಆದಿವಾಸಿಗಳು ಬದುಕುಳಿಯುತ್ತಾರೆ. ಆದರೆ ಸ್ವಾಭಿಮಾನಿಗಳಾಗಿ ಸಿಡಿದು ಬಿದ್ದವರು ರೋಹಿತ್ ವೇಮುಲಗಳಾಗುತ್ತಾರೆ. ಸಹಿಸಿಕೊಳ್ಳದೆ ಖಿನ್ನತೆಗೆ ಜಾರುವವರು ಪಾಯಲ್ ತಡ್ವಿಯರಾಗುತ್ತಾರೆ.

2010ರಲ್ಲಿ ದೆಹಲಿಯ ಮೆಡಿಕಲ್ ಸೈನ್ಸ್ ಕಾಲೇಜಿನಲ್ಲಿ ಆತ್ಮಹತ್ಯೆ ಮಾಡಿಕೊಂಡು ಅಸುನೀಗಿದ ದಲಿತ ಯುವಕ ಬಲ್ಮಕುಂದ್ ಭಾರ್ತಿಯನ್ನು ಅಲ್ಲಿನ ಪ್ರೊಫೆಸರ್ ’ಏಯ್ ಕೋಟಾ ಸ್ಟೂಡೆಂಟ್’ ಎಂದು ಕರೆಯುತ್ತಿದ್ದನು. ಇದು ಉನ್ನತ ಶಿಕ್ಷಣದಲ್ಲಿ ಬೇಲಿಯೇ ಎದ್ದು ಹೊಲ ಮೇಯುತ್ತಿರುವ ಪರಿಯಾಗಿದೆ.

ಇದನ್ನೂ ಓದಿ: ಮಾತು ಮರೆತ ಭಾರತ-24; ಧರ್ಮಾಪುರಿ ಫೈಲ್: ಒಂದು ದುರಂತ ಪ್ರೇಮಕಥೆ

ಉನ್ನತ ಶಿಕ್ಷಣದಲ್ಲಿ ಜಾತಿ ತಾರತಮ್ಯಗಳ ಬಗ್ಗೆ 2007ರಲ್ಲಿಯೇ ಅಧ್ಯಯನವಾಗಿತ್ತು. ಈ ಸಮಿತಿಯ ಅಧ್ಯಕ್ಷರು ಪ್ರಖ್ಯಾತ ಸಮಾಜ ಶಾಸ್ತ್ರಜ್ಞ ಸುಖದೇವ್ ಥೋರಟ್. ಆಲ್ ಇಂಡಿಯಾ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನಲ್ಲಿ ಸಮೀಕ್ಷೆ ಮಾಡಿದ ಸುಖದೇವ್ ಥೋರಟ್‌ರವರಿಗೆ ಭಯಾನಕ ಸಂಗತಿಗಳು ಬಿಚ್ಚಿಕೊಂಡಿದ್ದವು. ಅವರು ನೀಡಿದ ವರದಿಯ ಪ್ರಕಾರ ಶೇ.69 ದಲಿತ ವಿದ್ಯಾರ್ಥಿಗಳಿಗೆ ಕಾಲೇಜಿನ ಶಿಕ್ಷಕ ವೃಂದದಿಂದ ಸಂಪೂರ್ಣ ಸಹಕಾರ ಸಿಗುವುದಿಲ್ಲ. ಶೇ.76 ದಲಿತ ವಿದ್ಯಾರ್ಥಿಗಳು ಹೇಳಿವಂತೆ ಅವರ ಉತ್ತರ ಪತ್ರಿಕೆಗಳನ್ನು ಸರಿಯಾಗಿ ಮೌಲ್ಯಮಾಪನ ಮಾಡುವುದಿಲ್ಲ. ಶೇ.84ರಷ್ಟು ವಿದ್ಯಾರ್ಥಿಗಳ ಮೌಖಿಕ ಪರೀಕ್ಷೆಯನ್ನು ನ್ಯಾಯಯುತವಾಗಿ ನೆರವೇರಿಸುವುದಿಲ್ಲ. ಶೇ.84 ದಲಿತ ವಿದ್ಯಾರ್ಥಿಗಳು ಹೇಳುವಂತೆ ಅವರ ಅಂಕಶ್ರೇಣಿಯನ್ನು ಅವರವರ ಜಾತಿಗಳು ನಿರ್ಧರಿಸುತ್ತವೆ. ಈ ವರದಿಯು ಹಾಸ್ಟೆಲ್, ಖಾಸಗಿ ಮೆಸ್‌ಗಳಲ್ಲಿನ ಜಾತಿತಾರತಮ್ಯದ ಕುರಿತೂ ಹೇಳುತ್ತದೆ.

ಎದುರಾಗುವ ನೂರಾರು ಅಡಚಣೆಗಳನ್ನು, ಸಂಕಷ್ಟಗಳನ್ನು ಮೀರಿ ಮುಂದುವರಿಯುವ ದಲಿತ-ಆದಿವಾಸಿ ವಿದ್ಯಾರ್ಥಿಗಳಿಗೆ ಇನ್ನೇನು ಹಣ್ಣು ಕೈಗೆ ದಕ್ಕುವ ಸ್ಥಿತಿ ಬರುವಷ್ಟರಲ್ಲಿ ಉನ್ನತ ಶಿಕ್ಷಣದ ಕ್ಯಾಂಪಸ್ಸಿನ ಜಾತಿ ಮನಸ್ಸುಗಳು ಅದನ್ನೂ ದಕ್ಕದಂತೆ ಮಾಡಿಬಿಡುತ್ತವೆ. ಇಂತಹ ಪರಿಸ್ಥಿತಿಯಲ್ಲಿ ದಲಿತ-ಆದಿವಾಸಿ-ಹಿಂದುಳಿದ ಜಾತಿಗಳ ವಿದ್ಯಾರ್ಥಿಗಳನ್ನು ಕಾಪಾಡುವವರಾರು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಆಟೋ ಚಾಲಕನಾಗಿ ಕೆಲಸ ಮಾಡುವ ತಂದೆಯೊಬ್ಬರು ಕೈಯಲ್ಲಿ ಸಿಹಿ ತಿಂಡಿಯ ಪೆಟ್ಟಿಗೆಯೊಂದಿಗೆ ಮನೆಗೆ ಹೆಜ್ಜೆ ಹಾಕುತ್ತಾರೆ. ಅದನ್ನು ನೋಡಿದ ಮಗಳು, "ಏನಪ್ಪಾ ವಿಶೇಷ, ಇವತ್ತು ಹುಟ್ಟುಹಬ್ಬನಾ, ಹಬ್ಬನಾ ಅಥವಾ ಕುಟುಂಬದ ಸಂಭ್ರಮನಾ?" ಎಂದು...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...