Homeಮುಖಪುಟಪೋಕ್ಸೋ ಆರೋಪಿ ಬ್ರಿಜ್‌ಭೂಷಣ್‌ ಬೆಂಬಲಕ್ಕೆ ‘ಸಂತರು’ ನಿಂತಿರುವುದೇಕೆ?

ಪೋಕ್ಸೋ ಆರೋಪಿ ಬ್ರಿಜ್‌ಭೂಷಣ್‌ ಬೆಂಬಲಕ್ಕೆ ‘ಸಂತರು’ ನಿಂತಿರುವುದೇಕೆ?

- Advertisement -
- Advertisement -

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಮತ್ತು ಪೋಕ್ಸೋ ಪ್ರಕರಣದ ಆರೋಪಿ, ಬಿಜೆಪಿ ಸಂಸದ, ಭಾರತೀಯ ಕುಸ್ತಿ ಫೆಡರೇಷನ್‌ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ಅವರು ಜೂನ್‌ 5ರಂದು ಅಯೋಧ್ಯೆಯ ರಾಮಕಥಾ ಪಾರ್ಕ್‌ನಲ್ಲಿ ಸಂತರ ನೇತೃತ್ವದಲ್ಲಿ ರ್‍ಯಾಲಿಯನ್ನು ನಡೆಸಲು ಮುಂದಾಗಿದ್ದರು. ಅಯೋಧ್ಯೆಯ ಸಂತರ ಬೆಂಬಲದ ಹೊರತಾಗಿಯೂ ರ್‍ಯಾಲಿಯನ್ನು ಮುಂದೂಡಲಾಗಿದೆ.

ಈ ನಿರ್ಧಾರದ ಹಿಂದೆ ಅನೇಕ ಕಾರಣಗಳಿವೆ ಎಂದು ನಿರ್ಧರಿಸಬಹುದು ಮತ್ತು ಚರ್ಚಿಸಬಹುದು. ಸ್ವಾಮೀಜಿ ಮತ್ತು ರಾಜಕಾರಣಿಗಳ ಈ ಹೊಂದಾಣಿ ಇದೆ. ಧರ್ಮ, ಪಿತೃ ಪ್ರಧಾನ ಶಕ್ತಿಗಳ ನಡುವೆ ಒಂದು ರೀತಿಯ ಗೊಂದಲವಿದ್ದರೂ ನಿರಾಕರಿಸಲಾಗದ ಸಂಬಂಧ ಇದೆ ಎಂಬುದು ತಿಳಿಯುತ್ತದೆ.

ಪಿತೃಪ್ರಭುತ್ವ ಮತ್ತು ಧರ್ಮವು ಸಾಮಾನ್ಯವಾಗಿ ಜೊತೆಜೊತೆಯಲ್ಲಿ ಸಾಗುತ್ತದೆ ಎಂದು ತಿಳಿದಿರುವವರು ಕುಸ್ತಿಪಟುಗಳ ಪ್ರತಿಭಟನೆಯ ಬಗ್ಗೆ ನರೇಂದ್ರ ಮೋದಿ ಸಂಪುಟದ ಮಹಿಳಾ ಮಂತ್ರಿಗಳು ಮೌನವಾಗಿರುವ ಕುರಿತು ಹೆಚ್ಚು ಆಶ್ಚರ್ಯಚಕಿತರಾಗಿದ್ದಾರೆ. ಹೊಸ ಸಂಸತ್ ಭವನದ ಉದ್ಘಾಟನಾ ಸಮಾರಂಭದಲ್ಲಿ, ಧಾರ್ಮಿಕ ಆಚರಣೆಗಳಲ್ಲಿ ಮಹಿಳಾ ಸದಸ್ಯರು ಅತ್ಯಲ್ಪ ಪ್ರಾತಿನಿಧ್ಯ ಹೊಂದಿದ್ದರು. ಬಹುತೇಕ ಇಲ್ಲವೇ ಎನ್ನುವಷ್ಟು ಪಾಲ್ಗೊಂಡಿದ್ದರು.

ಎಲ್ಲಾ ವಲಯಗಳಿಂದ ಟೀಕೆಗಳನ್ನು ಎದುರಿಸುತ್ತಿದ್ದರೂ ಮೋದಿ ಸರ್ಕಾರವು ಬ್ರಿಜ್‌ ಭೂಷಣ್‌ ಅವರನ್ನು ಹೇಗೆ ಸಮರ್ಥಿಸಿಕೊಳ್ಳುತ್ತಿದೆ ಎಂದು ಹಲವರು ಆಶ್ಚರ್ಯ ಪಡುತ್ತಾರೆ. ಆದರೂ ಆರೋಪಿ ಬ್ರಿಜ್‌ ಎಷ್ಟು ‘ಅಸುರಕ್ಷಿತ’ನಾಗಿದ್ದನೆಂದರೆ- ಸ್ತ್ರೀಯರ ವಿರುದ್ಧ ಧಾರ್ಮಿಕ ಶಕ್ತಿ ಹೇಗೆ ನಿಂತಿದೆ ಎಂಬುದನ್ನು ಪ್ರದರ್ಶಿಸುವುದಕ್ಕೂ ಯೋಚಿಸಿ ಸ್ವಾಮೀಜಿಗಳ ಬೆಂಬಲವನ್ನು ಪಡೆಯಬೇಕಾಗಿದೆ.

ಬ್ರಿಜ್ ಭೂಷಣ್ ಸಿಂಗ್‌ನನ್ನು ಬೆಂಬಲಿಸುತ್ತಿರುವ ಸಂತರು

ಆರೋಪಿ ಬ್ರಿಜ್‌ಭೂಷಣ್ ಶರಣ್‌ಸಿಂಗ್‌ನನ್ನು ಬೆಂಬಲಿಸುತ್ತಿರುವವರಲ್ಲಿ, ಹಿಂದುತ್ವವಾದಿ ಮಣಿರಾಮ್ ದಾಸ್ ಶಿಬಿರದ ಮಹಂತ್ ಕಮಲನಯನ್ ದಾಸ್ ಮುಂಚೂಣಿಯಲ್ಲಿದ್ದಾರೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಅಧ್ಯಕ್ಷರಾದ ಮಹಂತ್ ನೃತ್ಯ ಗೋಪಾಲ್ ದಾಸ್ ಅವರ ಉತ್ತರಾಧಿಕಾರಿ ಎಂದೇ ಇವರನ್ನು ಗುರುತಿಸಲಾಗಿದೆ.

ಬ್ರಿಜ್ ಪರ ಅಭಿಯಾನದಲ್ಲಿ ಹೆಚ್ಚು ಸಕ್ರಿಯವಾಗಿರುವವರಲ್ಲಿ ಮಹಂತ್ ಮಿಥಿಲೇಶ ನಂದಿನಿ ಶರಣ್ ಒಬ್ಬರು. 2012ರಲ್ಲಿ ಪರಿಚಯಿಸಲಾದ ಪೋಕ್ಸೋ ಕಾಯ್ದೆಯಲ್ಲಿ ದೋಷಗಳಿವೆ ಎಂದು ಇವರು ಮಾತನಾಡುತ್ತಿದ್ದಾರೆ. ಈ ಕಾಯ್ದೆಯು ‘ಚಾರಿತ್ರ್ಯ ಹರಣ ಮಾಡುತ್ತದೆ, ಅನೇಕ ಗಣ್ಯರನ್ನು ಮಾಧ್ಯಮಗಳ ವಿಚಾರಣೆ ಒಳಪಡಿಸುತ್ತದೆ.  ಕಾಯ್ದೆಯ ನಿಬಂಧನೆಗಳಿಗೆ ತಿದ್ದುಪಡಿ ತರಬೇಕು’ ಎಂದು ಒತ್ತಾಯಿಸುತ್ತಿದ್ದಾರೆ.

ಪೋಕ್ಸೊ ಕಾಯ್ದೆಯಡಿ ಬ್ರಿಜ್‌ಭೂಷಣ್‌ ಶರಣ್‌ ಸಿಂಗ್ ವಿರುದ್ಧ ಎಫ್‌ಐಆರ್‌ ದಾಖಲಿಸುವ ಮೊದಲು, ಮಹಂತ್ ಶರಣ್ ಅವರು ಪೋಕ್ಸೋ ಕಾನೂನಿನಲ್ಲಿ ದೋಷವನ್ನು ಕಂಡಿರಲಿಲ್ಲ. ಆದರೆ ಈಗ ಏನು ಹೇಳುತ್ತಾರೆ? “ಸಾಧು ಸಂತರು ಅಪ್ರಾಪ್ತ ವಯಸ್ಕರಿಗೆ ಆರ್ಶೀವದಿಸಲು ತಲೆ ಮೇಲೆ ಕೈ ಇಟ್ಟರೂ ಕೆಟ್ಟದ್ದಾಗಿ ಕಾನೂನು ಪರಿಗಣಿಸಬಹುದು. ಸಂತರ ವಿರುದ್ಧ ಕ್ರಮ ಕೈಗೊಳ್ಳಬಹುದು” ಎನ್ನಲು ಶುರು ಮಾಡಿದ್ದಾರೆ.

ಪ್ರತಿಷ್ಠಿತ ಕಾಮತಾ ಪ್ರಸಾದ್ ಸುಂದರ್ ಲಾಲ್ ಸಾಕೇತ್ ಪಿಜಿ ಕಾಲೇಜಿನ ವಿದ್ಯಾರ್ಥಿ ಸಂಘಟನೆಯ ವಿದ್ಯಾರ್ಥಿ ನಾಯಕನಾಗಿ, ಪ್ರಬಲ ಹಿಂದುತ್ವದ ನಾಯಕನಾಗಿ ಬಂದವರು ಬ್ರಿಜ್ ಎಂದು ಈ ಭಾಗದಲ್ಲಿ ಮಾತನಾಡಿಕೊಳ್ಳಲಾಗುತ್ತಿದೆ. 1992ರಲ್ಲಿ ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬ್ರಿಜ್‌ ಆರೋಪಿಯಾಗಿದ್ದನು. “ಈ ಪ್ರಕರಣದಲ್ಲಿ ನನ್ನನ್ನು ಬಂಧಿಸಲಾಗಿತ್ತು” ಎಂದು ಬ್ರಿಜ್‌ ಹೆಮ್ಮೆಪಡುತ್ತಾನೆ.

ಇದನ್ನೂ ಓದಿರಿ: ಕುಸ್ತಿಪಟುಗಳ ಪ್ರತಿಭಟನೆಗೆ ಬಿಜೆಪಿ ಸಂಸದೆಯರಾದ ಮೇನಕಾ ಗಾಂಧಿ, ಪ್ರೀತಮ್ ಮುಂಡೆ ಬೆಂಬಲ

ಅಯೋಧ್ಯೆಯಲ್ಲಿನ ಸುದೀರ್ಘ ಒಡನಾಟದಿಂದಾಗಿ ಬ್ರಿಜ್‌ ಭೂಷಣ್‌ಗೆ ಋಣಿ ಎಂದು ಭಾವಿಸುವ ಜನರಿಗೆ ಕೊರತೆಯಿಲ್ಲ. ಆತನಿಗೆ ಆಪ್ತರು ಎಂದು ಹೇಳಿಕೊಳ್ಳುವ ಅನೇಕರು ಸಹ ಈಗ ಮುಂದೆ ಬರುತ್ತಿದ್ದಾರೆ. ಬ್ರಿಜ್‌ ಭೂಷಣ್‌ನ ಊರು ಸರಯುವಿನ ಒಂದು ಕಡೆ ಇದ್ದರೆ ಅಯೋಧ್ಯೆ ಇನ್ನೊಂದು ಬದಿಯಲ್ಲಿದೆ. ಆತ ಬಿಜೆಪಿಯ ಒಳಗೆ ಮತ್ತು ಹೊರಗೆ ಎರಡೂ ಕಡೆಗಳಲ್ಲಿ ಅನೇಕ ಹಿತೈಷಿಗಳನ್ನು ಹೊಂದಿದ್ದಾನೆ.

ಅಯೋಧ್ಯೆಯ ಸ್ವಾಮೀಜಿಗಳು ಸಿಂಗ್‌ಗೆ ಏಕೆ ಬೆಂಬಲ ನೀಡುತ್ತಿದ್ದಾರೆ? ಸ್ವಾಮೀಜಿಗಳು ಮತ್ತು ಬ್ರಿಜ್‌ ಇಬ್ಬರೂ ಪರಸ್ಪರ ಅವಲಂಬಿಸಿರುವುದರ ಪರಿಣಾಮ ಇದೆಂದು ಕೆಲವು ತಜ್ಞರು ಹೇಳುತ್ತಾರೆ. ಏಕೆಂದರೆ ಅವರು ಪರಸ್ಪರ ಆಶ್ರಯವನ್ನು ಪಡೆಯುತ್ತಾರೆ ಮತ್ತು ಅಗತ್ಯವಿದ್ದಾಗ ಪರಸ್ಪರ ಪ್ರಭಾವದ ಲಾಭವನ್ನೂ ಪಡೆಯುತ್ತಾರೆ.

ಬ್ರಿಜ್‌ಗೆ ಬೆಂಬಲ ನೀಡಿರುವವರನ್ನು ‘ಸಂತರು’ ಎಂದು ಮಾಧ್ಯಮಗಳು ಉಲ್ಲೇಖಿಸುತ್ತಿರುವುದಕ್ಕೆ ಭಾರತೀಯ  ಕಮ್ಯುನಿಸ್ಟ್ ಪಕ್ಷದ ಸ್ಥಳೀಯ ಮುಖಂಡ ಸೂರ್ಯಕಾಂತ್ ಪಾಂಡೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ಇವರನ್ನು ಸಂತರು ಎಂದು ಬಿಂಬಿಸುವ ಬದಲು ಹುಸಿ ಸಂತರು ಎಂದು ಏಕೆ ಉಲ್ಲೇಖಿಸುವುದಿಲ್ಲ”  ಎಂದು ಪ್ರಶ್ನಿಸಿದ್ದಾರೆ. “ರಾಮಚರಿತಮಾನಸದಲ್ಲಿ ಗೋಸ್ವಾಮಿ ತುಳಸಿದಾಸರು ಪಟ್ಟಿ ಮಾಡಿರುವ ನಿಜವಾದ ಸಂತರ ಗುಣಗಳು ಮತ್ತು ಗುಣಲಕ್ಷಣಗಳ ಬಗ್ಗೆ ಇವರು ಓದಿಲ್ಲ” ಎಂದು ಟೀಕಿಸಿದ್ದಾರೆ.

ಮಾಹಿತಿ ಕೃಪೆ: ದಿ ವೈರ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...