Homeಮುಖಪುಟಬ್ರಿಜ್‌ ಭೂಷಣ್ ನೀಡಿದ ಲೈಂಗಿಕ ಕಿರುಕುಳದ ಬಗ್ಗೆ 2021ರಲ್ಲೇ ಪ್ರಧಾನಿಗೆ ತಿಳಿಸಲಾಗಿತ್ತು: ಎಫ್‌ಐಆರ್‌ನಲ್ಲಿ ಉಲ್ಲೇಖ

ಬ್ರಿಜ್‌ ಭೂಷಣ್ ನೀಡಿದ ಲೈಂಗಿಕ ಕಿರುಕುಳದ ಬಗ್ಗೆ 2021ರಲ್ಲೇ ಪ್ರಧಾನಿಗೆ ತಿಳಿಸಲಾಗಿತ್ತು: ಎಫ್‌ಐಆರ್‌ನಲ್ಲಿ ಉಲ್ಲೇಖ

- Advertisement -
- Advertisement -

ಭಾರತದ ಕುಸ್ತಿ ಫೆಡರೇಶನ್ ಮುಖ್ಯಸ್ಥ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ನೀಡಿರುವ ಲೈಂಗಿಕ ಕಿರುಕುಳದ ಕುರಿತು 2021ರಲ್ಲೇ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಂತ್ರಸ್ತ ಕುಸ್ತಿಪಟುವೊಬ್ಬರು ತಿಳಿಸಿದ್ದರು ಎಂಬುದು ‘ಎಫ್‌ಐಆರ್‌’ನಲ್ಲಿ ಉಲ್ಲೇಖಗೊಂಡಿದೆ.

ಬ್ರಿಜ್‌ ಭೂಷಣ್ ವಿರುದ್ಧ ದಾಖಲಾಗಿರುವ ಎರಡು ಎಫ್‌ಐಆರ್‌ಗಳ ಪೈಕಿ ಒಂದನ್ನು ಉಲ್ಲೇಖಿಸಿ ‘ದಿ ಟ್ರಿಬ್ಯೂನ್‌’ ವರದಿ ಮಾಡಿದ್ದು ಪ್ರಧಾನಿಯವರಿಗೆ ಕುಸ್ತಿಪಟು ದೂರು ನೀಡಿರುವ ಕುರಿತು ಪ್ರಸ್ತಾಪಿಸಲಾಗಿದೆ.

“ಬ್ರಿಜ್‌ ಭೂಷಣ್‌ ತನ್ನ ಆಪ್ತ ಸಹಾಯಕರ ಸಹಕಾರದಿಂದ ಪದೇ ಪದೇ ಲೈಂಗಿಕ, ಭಾವನಾತ್ಮಕ, ಮಾನಸಿಕ, ದೈಹಿಕ ಕಿರುಕುಳ ನೀಡುತ್ತಿದ್ದಾನೆ. ನನ್ನನ್ನು ಸೇರಿದಂತೆ ಇತರ ಮಹಿಳಾ ಕುಸ್ತಿಪಟುಗಳಿಗೆ ನೀಡಲಾಗುತ್ತಿರುವ ಕಿರುಕುಳದ ಬಗ್ಗೆ ನಾನು ಪ್ರಧಾನಿ [ಮೋದಿ] ಅವರಿಗೆ ತಿಳಿಸಿದ್ದೆ” ಎಂದು ಕುಸ್ತಿಪಟುವೊಬ್ಬರು ಹೇಳಿರುವುದಾಗಿ ಎಫ್‌ಐಆರ್‌ನಲ್ಲಿ ಉಲ್ಲೇಖಗೊಂಡಿದೆ.

“ಕ್ರೀಡಾ ಸಚಿವಾಲಯವು ನಿಮ್ಮ ದೂರನ್ನು ಪರಿಶೀಲಿಸುತ್ತದೆ ಎಂದು ಪ್ರಧಾನಿಯವರು ಭರವಸೆ ನೀಡಿದ್ದರು” ಎಂದು ಕುಸ್ತಿಪಟು ಹೇಳಿರುವುದಾಗಿ ‘ನ್ಯೂಸ್‌ ಮಿನಿಟ್’ ವರದಿ ತಿಳಿಸಿದೆ.

“ಆರೋಪಿ ಹಾಗೂ ಅವರ ನಿಕಟ ಸಹಚರರು ಪದೇ ಪದೇ ಉಂಟುಮಾಡಿದ ಮಾನಸಿಕ ಆಘಾತದಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೆ. ಆದರೆ ಪ್ರಧಾನಿಯವರನ್ನು ಭೇಟಿಯಾದ ನಂತರ ಒಂದಿಷ್ಟು ಚೇತರಿಕೆ ಕಂಡು ಬಂತು. ಭಾರತಕ್ಕಾಗಿ ಆಡಲು ಸಾಧ್ಯವಾಗುತ್ತಿಲ್ಲ ಎಂಬ ಎಲ್ಲಾ ನಕಾರಾತ್ಮಕ ಆಲೋಚನೆ ಇಲ್ಲವಾದವು. ಆತ್ಮಹತ್ಯೆಯ ಆಲೋಚನೆಯಿಂದ ಹೊರಬಂದಿದ್ದೆ” ಎಂದು ತಿಳಿಸಿದ್ದಾರೆ.

ಪ್ರಧಾನಿಯವರಿಗೆ ದೂರು ನೀಡಿರುವುದು ಬ್ರಿಜ್‌ ಭೂಷಣ್‌ಗೆ ತಿಳಿಯಿತು. ಈ ಹಿಂದೆ ನೀಡಲಾಗಿದ್ದ ಶೋಕಾಸ್ ನೋಟಿಸ್ ಅನ್ನು ಫೆಡರೇಶನ್ ಹಿಂಪಡೆಯಿತು ಎಂದು ಕುಸ್ತಿಪಟು ಹೇಳಿದ್ದಾರೆ.

ಭೂಷಣ್ ಮತ್ತು ಅವರ ಸಹಾಯಕರಿಂದಾಗುತ್ತಿದ್ದ ಒತ್ತಡವು ಸ್ವಲ್ಪ ಸಮಯದವರೆಗೆ ನಿಂತುಹೋಯಿತು, ಆದರೆ ನಂತರ ಪುನರಾರಂಭವಾಯಿತು ಎಂದು ಕುಸ್ತಿಪಟು ಆರೋಪಿಸಿದ್ದಾರೆ.

ಅಪ್ರಾಪ್ತ ಕುಸ್ತಿಪಟು ಸೇರಿದಂತೆ ಏಳು ದೂರುದಾರರು ಬ್ರಿಜ್‌ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ವೃತ್ತಿಪರ ಕೆಲಸಗಳಾಗಬೇಕಾದರೆ ಲೈಂಗಿಕವಾಗಿ ಸಹಕರಿಸಬೇಕು ಎಂದು ಬ್ರಿಜ್ ಭೂಷಣ್‌ ಒತ್ತಾಯಿಸುತ್ತಿದ್ದನು ಎಂದು ದೂರಿದ್ದಾರೆ.

ಲೈಂಗಿಕ ಕಿರುಕುಳದ 15 ಘಟನೆಗಳನ್ನು ಉಲ್ಲೇಖಿಸಲಾಗಿದೆ. ಕುಸ್ತಿಪಟುಗಳ ಉಸಿರಾಟವನ್ನು ಪರೀಕ್ಷಿಸುವ ನೆಪದಲ್ಲಿ ಅವರ ಎದೆ ಮತ್ತು ಹೊಟ್ಟೆಯನ್ನು ಬ್ರಿಜ್ ಭೂಷಣ್ ಸ್ಪರ್ಶಿಸುತ್ತಿದ್ದನು ಎಂದು ಮೂವರು ಕುಸ್ತಿಪಟುಗಳು ಆರೋಪಿಸಿದ್ದಾರೆ.

ಇದನ್ನೂ ಓದಿರಿ: ಪೋಕ್ಸೋ ಆರೋಪಿ ಬ್ರಿಜ್‌ಭೂಷಣ್‌ ಬೆಂಬಲಕ್ಕೆ ‘ಸಂತರು’ ನಿಂತಿರುವುದೇಕೆ?

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 (ಸ್ತ್ರೀ ನಮ್ರತೆಯನ್ನು ಆಕ್ರೋಶಗೊಳಿಸುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಬಲ ಪ್ರಯೋಗ), 354 ಎ (ಲೈಂಗಿಕ ಕಿರುಕುಳ), 354 ಡಿ (ಹಿಂಬಾಲಿಸುವಿಕೆ) ಮತ್ತು 34 (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಬ್ರಿಜ್ ವಿರುದ್ಧ ಒಂದು ಎಫ್‌ಐಆರ್‌ ದಾಖಲಾಗಿದೆ.

ಅಪ್ರಾಪ್ತ ಬಾಲಕಿಯ ತಂದೆಯ ದೂರಿನ ಮೇರೆಗೆ ಬ್ರಿಜ್‌ ವಿರುದ್ಧ ಪೋಕ್ಸೋ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಮತ್ತೊಂದು ಪ್ರಕರಣ ದಾಖಲಿಸಲಾಗಿದೆ.

ಒಲಿಂಪಿಕ್ ಮತ್ತು ಕಾಮನ್‌ವೆಲ್ತ್ ಕ್ರೀಡಾಕೂಟಗಳಲ್ಲಿ ಪದಕ ವಿಜೇತರು ಸೇರಿದಂತೆ ಹಲವಾರು ಕುಸ್ತಿಪಟುಗಳು ಬ್ರಿಜ್ ವಿರುದ್ಧ ಹೋರಾಡುತ್ತಿದ್ದಾರೆ. ಆತನನ್ನು ಬಂಧಿಸಿ, ಕುಸ್ತಿ ಫೆಡರೇಷನ್‌ನಿಂದ ಹೊರಹಾಕಬೇಕು ಎಂದು ಒತ್ತಾಯಿಸಿ ಕಳೆದ ಏಪ್ರಿಲ್‌ನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಆತನನ್ನು ಇನ್ನೂ ಬಂಧಿಸಲಾಗಿಲ್ಲ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. Yes it’s good escalation we will wait wt pm modi will take care and agenda having having about women safety in india , he will be most power man to take care women’s rights and safety he have launched already bhati padoo bhati bhachavo wait and see modi action

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...