Homeಮುಖಪುಟಕುಸ್ತಿಪಟುಗಳ ಪ್ರತಿಭಟನೆಗೆ ಬಿಜೆಪಿ ಸಂಸದೆಯರಾದ ಮೇನಕಾ ಗಾಂಧಿ, ಪ್ರೀತಮ್ ಮುಂಡೆ ಬೆಂಬಲ

ಕುಸ್ತಿಪಟುಗಳ ಪ್ರತಿಭಟನೆಗೆ ಬಿಜೆಪಿ ಸಂಸದೆಯರಾದ ಮೇನಕಾ ಗಾಂಧಿ, ಪ್ರೀತಮ್ ಮುಂಡೆ ಬೆಂಬಲ

- Advertisement -
- Advertisement -

ಭಾರತೀಯ ಕುಸ್ತಿ ಫೆಡರೇಶನ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಒಂದು ತಿಂಗಳಿನಿಂದ ಕ್ರೀಡಾಪಟುಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಗೆ ಹರಿಯಾಣದ ಬಿಜೆಪಿ ಸಂಸದ ಬ್ರಿಜೇಂದ್ರ ಸಿಂಗ್ ಬೆಂಬಲ ವ್ಯಕ್ತಪಡಿಸಿದ ನಂತರ ಇದೀಗ ಮಹಾರಾಷ್ಟ್ರದ ಬಿಜೆಪಿ ನಾಯಕಿ ಪ್ರೀತಮ್ ಮುಂಡೆ ಹಾಗೂ ಬಿಜೆಪಿಯ ಹಿರಿಯ ಸಂಸದೆ ಮೇನಕಾ ಗಾಂಧಿ ಅವರು ಬೆಂಬಲ ನೀಡಿದ್ದಾರೆ.

ಬಿಜೆಪಿಯ ಮಹಿಳಾ ಸಂಸದರೂ ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಕುಸ್ತಿಪಟುಗಳಿಗೆ ಪರ ನಿಂತು ನ್ಯಾಯ ಕೇಳಿದ್ದಾರೆ. ಮಹಾರಾಷ್ಟ್ರದ ಬಿಜೆಪಿಯ ಲೋಕಸಭಾ ಸಂಸದೆ ಪ್ರೀತಮ್ ಮುಂಡೆ ಪ್ರತಿಭಟನಾ ನಿರತ ಕುಸ್ತಿಪಟುಗಳನ್ನು ಬೆಂಬಲಿಸಿದ್ದಾರೆ. ಇದಾದ ಒಂದು ದಿನದ ನಂತರ, ಪಕ್ಷದ ಹಿರಿಯ ಸಂಸದೆ ಮೇನಕಾ ಗಾಂಧಿ ಅವರು ಕುಸ್ತಿಪಟುಗಳಿಗೆ ನ್ಯಾಯ ಸಿಗಬೇಕೆಂದು ಒತ್ತಾಯಿಸಿದ್ದಾರೆ.

ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಹೋರಾಟದಲ್ಲಿ ಕುಸ್ತಿಪಟುಗಳಿಗೆ ನ್ಯಾಯ ಸಿಗಬೇಕೆಂದು ಅವರು ಒತ್ತಾಯಿಸಿದ್ದಾರೆ. ”ಅವರಿಗೆ ( ಕುಸ್ತಿಪಟುಗಳಿಗೆ ) ಕೊನೆಯಲ್ಲಿ ನ್ಯಾಯ ಸಿಗುತ್ತದೆ ಎಂಬುದು ನನಗೆ ಖಾತ್ರಿಯಿದೆ” ಎಂದು ಕಾಶ್ಮೀರದ ಶ್ರೀನಗರದಲ್ಲಿ ಮಾಧ್ಯಮಗಳಿಗೆ ಮನೇಕಾ ಗಾಂಧಿ ತಿಳಿಸಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿರುವ ಸಂಸದೆ ಪ್ರೀತಮ್ ಮುಂಡೆ ಅವರು, ”ಮಹಿಳೆಯೊಬ್ಬರು ಈ ರೀತಿಯ ಗಂಭೀರ ದೂರು ನೀಡಿದಾಗ ಅದನ್ನು ನಿಸ್ಸಂದೇಹವಾಗಿ ನಿಜವೆಂದು ಪರಿಗಣಿಸಬೇಕು” ಎಂದು ಪ್ರೀತಮ್ ಮುಂಡೆ ಹೇಳಿದ್ದಾರೆ.

”ಯಾವುದೇ ಸರ್ಕಾರ ಅಥವಾ ಯಾವುದೇ ಪಕ್ಷವಾಗಿರಬಹುದು, ಈ ಮಟ್ಟದ ಚಳುವಳಿಯನ್ನು ಗಮನಿಸದೆ ಹೋದರೆ ಅದು ನ್ಯಾಯೋಚಿತವಲ್ಲ. ಇಂತಹ ಪ್ರತಿಭಟನೆಗಳು ನಡೆದಾಗ ಸರ್ಕಾರಗಳು ಗಮನಿಸದೆ ಇರಬಾರದು, ಅದರ ಬಗ್ಗೆ ಅಗತ್ಯ ಗಮನ ನೀಡಬೇಕು” ಎಂದು ಪ್ರೀತಮ್ ಮುಂಡೆ ಹೇಳಿದರು.

”ನಾನು ಈ ಸರ್ಕಾರದ ಭಾಗವಾಗಿದ್ದರೂ, ನಾವು ಕುಸ್ತಿಪಟುಗಳೊಂದಿಗೆ ಸಂವಹನ ನಡೆಸಬೇಕಾದ ರೀತಿಯಲ್ಲಿ ನಡೆದಿಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕು” ಎಂದು ಪ್ರೀತಮ್ ಮುಂಡೆ ಹೇಳಿದರು.

ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಹೋರಾಟದಲ್ಲಿ ಕುಸ್ತಿಪಟುಗಳಿಗೆ ನ್ಯಾಯ ಸಿಗಬೇಕೆಂದು ಅವರು ಒತ್ತಾಯಿಸಿದ್ದಾರೆ. ‘ಅವರಿಗೆ ( ಕುಸ್ತಿಪಟುಗಳಿಗೆ ) ಕೊನೆಯಲ್ಲಿ ನ್ಯಾಯ ಸಿಗುತ್ತದೆ ಎಂಬುದು ನನಗೆ ಖಾತ್ರಿಯಿದೆ’ ಎಂದು ಕಾಶ್ಮೀರದ ಶ್ರೀನಗರದಲ್ಲಿ ಮಾಧ್ಯಮಗಳಿಗೆ ಮನೇಕಾ ಗಾಂಧಿ ತಿಳಿಸಿದ್ದಾರೆ.

ಇದನ್ನೂ ಓದಿ: ಬ್ರಿಜ್‌ಭೂಷಣ್ ಸಿಂಗ್ ವಿರುದ್ಧದ ಎಫ್‌ಐಆರ್‌ನಲ್ಲಿ ಕ್ರೀಡಾಪಟುಗಳು ಉಲ್ಲೇಖಿಸಿದ ಅಂಶಗಳು ಇಲ್ಲಿವೆ..

ಪ್ರೀತಮ್ ಮುಂಡೆಗಿಂತ ಮುಂಚಿತವಾಗಿ ಕ್ರೀಡಾಪಟುಗಳಿಗೆ ಹರಿಯಾಣದ ಬಿಜೆಪಿ ಸಂಸದ ಬ್ರಿಜೇಂದ್ರ ಸಿಂಗ್ ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಕ್ರೀಡಾಪಟುಗಳು ಪ್ರತಿಭಟನೆಯ ಭಾಗವಾಗಿ ತಮ್ಮ ಪದಕಗಳನ್ನು ಹರಿದ್ವಾರದ ಗಂಗಾದಲ್ಲಿ ಎಸೆಯಲು ಹೋದಾಗ, ಇದು ‘ಸಂಪೂರ್ಣ ಹೃದಯವಿದ್ರಾವಕ’ ಎಂದು ಬ್ರಿಜೇಂದ್ರ ಸಿಂಗ್ ಕರೆದರು. ರೈತ ಸಂಘದ ನಾಯಕ ನರೇಶ್ ಟಿಕಾಯತ್ ಅವರು ಈ ವೇಳೆ ಕ್ರೀಡಾಪಟುಗಳನ್ನು ತಡೆದರು.

ಪ್ರೀತಮ್ ಮುಂಡೆ ಕುಸ್ತಿಪಟುಗಳ ಪ್ರತಿಭಟನೆಯ ಬಗ್ಗೆ ಪಕ್ಷದ ನಿಲುವಿನಿಂದ ಭಿನ್ನವಾಗಿದ್ದರೆ, ಅವರ ಸಹೋದರಿ ಪಂಕಜಾ ಮುಂಡೆ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ಪ್ರೀತಮ್ ಅವರು ಬಿಜೆಪಿಗೆ ಸೇರಿದವರು, ಬಿಜೆಪಿಯೇ ಅವರಿಗೆ ಸೇರಿಲ್ಲ ಎಂದು ಹೇಳಿದರು.

ಪಂಕಜಾ ಮತ್ತು ಪ್ರೀತಮ್ ಮುಂಡೆ ಅವರು, ಈ ಹಿಂದೆ 2014ರಲ್ಲಿ ಕಾರು ಅಪಘಾತದಲ್ಲಿ ನಿಧನರಾದ ಮಾಜಿ ಕೇಂದ್ರ ಸಚಿವ ಗೋಪಿನಾಥ್ ಮುಂಡೆ ಅವರ ಪುತ್ರಿಯರು. ಪ್ರೀತಮ್ ಮುಂಡೆಗೆ ಕೇಂದ್ರದಲ್ಲಿ ಮಂತ್ರಿಗಿರಿ ಸಿಗಲಿಲ್ಲ, ಏಕನಾಥ್ ಶಿಂಧೆ-ದೇವೇಂದ್ರ ಫಡ್ನವಿಸ್ ಸಂಪುಟದಲ್ಲಿ ಪಂಕಜಾ ಅವರನ್ನು ಕಡೆಗಣಿಸಲಾಯಿತು.

ಈ ವಿಚಾರವಾಗಿ ಸಾರ್ವಜನಿಕರು, ರೈತ ಮುಖಂಡರು ಹಾಗೂ ವಿರೋಧ ಪಕ್ಷಗಳ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನ್ಯಾಯ ಸಿಗುವವರೆಗೂ ಕುಸ್ತಿಪಟುಗಳ ಬೆಂಬಲಕ್ಕೆ ನಿಲ್ಲುವುದಾಗಿ ಹೇಳಿದ್ದಾರೆ. ಒಲಿಂಪಿಕ್ಸ್‌ ಮೆಡಲ್‌ಗಳನ್ನು ಗೆದ್ದಿರುವ ಕುಸ್ತಿಪಟುಗಳಿಗೆ ಈ ಸ್ಥಿತಿ ಬಂದಿರುವುದಕ್ಕೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ದೇಶದ ಅಗ್ರ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ಭಜರಂಗ್ ಪುನಿಯಾ ಮತ್ತು ವಿನೇಶ್ ಫೋಗಟ್ ತಮ್ಮ ಬೆಂಬಲಿಗರೊಂದಿಗೆ ಹರಿದ್ವಾರಕ್ಕೆ ತೆರಳಿದ್ದರು. ತಮ್ಮ ಪದಕಗಳನ್ನು ಗಂಗಾ ನದಿಗೆ ಎಸೆಯಲು ಹೋಗಿದ್ದರು. ಖಾಪ್‌ಗಳು ಮತ್ತು ರೈತ ಮುಖಂಡರು ಅದನ್ನು ತಡೆಯಲು ಯಶಸ್ವಿಯಾದರು. ಕೇಂದ್ರ ಸರ್ಕಾರಕ್ಕೆ ಐದು ದಿನಗಳ ಕಾಲ ಗಡುವು ನೀಡಿದರು. ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ದೆಹಲಿ ಪೊಲೀಸರು ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಮೊದಲ ಎಫ್‌ಐಆರ್ ಅಪ್ರಾಪ್ತ ಕುಸ್ತಿಪಟುವಿನ ಆರೋಪಗಳಿಗೆ ಸಂಬಂಧಿಸಿದೆ ಇದೆ. ಇದು ಪೋಕ್ಸೊ ಕಾಯ್ದೆಯಡಿಯಲ್ಲಿ ದಾಖಲಾಗಿದೆ. ಎರಡನೆಯದು ಕುಸ್ತಿಪಟುಗಳ ಆರೋಪದ ಮೇಲೆ ದಾಖಲಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ವಿಜಯಪುರ: ಗೋ ಸಾಗಾಟಗಾರನ ಮೇಲೆ ಬಜರಂಗದಳದಿಂದ ಥಳಿತ

0
ರಾಜ್ಯದಲ್ಲಿ ಮತ್ತೆ ಗೂಂಡಾಗಿರಿ ವರದಿಯಾಗಿದ್ದು, ದನ-ಕರುಗಳನ್ನು ಸಾಗಾಟ ಮಾಡುವಾಗ ವಾಹನ ತಡೆದು ಯುವಕನಿಗೆ ಬಜರಂಗದಳ ಕಾರ್ಯಕರ್ತರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲ್ಲೂಕಿನ ಸಾರವಾಡ ಬ್ರಿಡ್ಜ್ ಬಳಿ ನಡೆದಿದೆ. ಬಂದೇನವಾಝ್‌...