HomeUncategorizedNDTV ಬಳಿಕ ಮತ್ತೊಂದು ಸುದ್ದಿ ಸಂಸ್ಥೆ ಅದಾನಿ ತೆಕ್ಕೆಗೆ!

NDTV ಬಳಿಕ ಮತ್ತೊಂದು ಸುದ್ದಿ ಸಂಸ್ಥೆ ಅದಾನಿ ತೆಕ್ಕೆಗೆ!

- Advertisement -
- Advertisement -

ಅದಾನಿ ಸಮೂಹದ ಅಂಗಸಂಸ್ಥೆಯಾದ AMG ಮೀಡಿಯಾ ನೆಟ್‌ವರ್ಕ್ಸ್ ಲಿಮಿಟೆಡ್ (AMNL) ಇಂಡೋ-ಏಷ್ಯನ್ ನ್ಯೂಸ್ ಸರ್ವಿಸ್  IANS ಸುದ್ದಿ ಸಂಸ್ಥೆಯಲ್ಲಿ 50.5% ಷೇರನ್ನು ಪಡೆದುಕೊಂಡಿದ್ದು,  IANS ಅದಾನಿ ತೆಕ್ಕೆಗೆ ಸೇರಿದೆ.

ಹಿಂದಿ ಮತ್ತು ಇಂಗ್ಲೀಷ್‌ ಸುದ್ದಿ ಸಂಸ್ಥೆ IANS ಈಗ NDTVಯಂತೆಯೇ AMNLನ ಅಂಗಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ. ಅದಾನಿ ಸಮೂಹದ AMN,L IANSನೊಂದಿಗೆ ಷೇರು ಒಪ್ಪಂದಕ್ಕೆ ಸಹಿ ಹಾಕಿದೆ ಮತ್ತು ಕಂಪನಿಯಲ್ಲಿ ಮತದಾನದ ಹಕ್ಕುಗಳನ್ನು ಕೂಡ ಪಡೆದುಕೊಂಡಿದೆ. ಎಲ್ಲಾ ಕಾರ್ಯಾಚರಣೆ ಮತ್ತು IANS ನ ನಿರ್ವಹಣಾ ನಿಯಂತ್ರಣದ ಅಧಿಕಾರವು AMNLಗೆ ಇರುತ್ತದೆ ಮತ್ತು ಅದಾನಿ ಸಮೂಹ ಸಂಸ್ಥೆಗೆ IANS  ನಿರ್ದೇಶಕರನ್ನು ನೇಮಿಸುವ ಅಧಿಕಾರ ಕೂಡ ಹೊಂದಿರುತ್ತದೆ.

IANS ಜೊತೆ ಷೇರು ಒಪ್ಪಂದಕ್ಕೆ AMNL ಸಹಿ ಹಾಕಿದೆ ಎಂದು IANSನ ಷೇರುದಾರರಲ್ಲಿ ಓರ್ವರಾದ ಸಂದೀಪ್ ಬಾಮ್‌ಜೈ ಅವರು ತಿಳಿಸಿದ್ದು, IANS ನ ನಿರ್ವಹಣಾ ನಿಯಂತ್ರಣದ ಅಧಿಕಾರವು AMNLಗೆ ಇದೆ ಎಂದು ಹೇಳಿದ್ದಾರೆ.

ಎನ್‌ಡಿಟಿವಿಯನ್ನು ಗೌತಮ್ ಅದಾನಿ ಸಮೂಹವು ಸ್ವಾಧೀನಪಡಿಸಿಕೊಂಡ ಸುಮಾರು ಒಂದು ವರ್ಷದ ನಂತರ ಈ ಬೆಳವಣಿಗೆ ನಡೆದಿದೆ. ಮ್ಯಾನೇಜ್‌ಮೆಂಟ್ ನೀತಿಗಳು, ಹೊಸ ನಿರೂಪಕರು, ಹಳೆಯ ನಿರೂಪಕರ ರಾಜೀನಾಮೆ ಮತ್ತು ವಿಷಯದಲ್ಲಿನ ವ್ಯತ್ಯಾಸದ ವಿಚಾರಕ್ಕೆ ಸಂಬಂಧಿಸಿ ಎನ್‌ಡಿಟಿವಿ ಅದಾನಿ ತೆಕ್ಕೆಗೆ ಸೇರಿದ ಬಳಿಕ ವೀಕ್ಷಕರನ್ನು ಕಳೆದುಕೊಂಡಿದೆ.

ಆರ್‌ಆರ್‌ಪಿಆರ್‌ ಹೋಲ್ಡಿಂಗ್‌ ಪ್ರೈ. ಲಿ. ಎನ್‌ಡಿಟಿವಿಯಲ್ಲಿ ಶೇ. 29.18ರಷ್ಟು ಪಾಲನ್ನು ಹೊಂದಿದೆ. ಈ ಸಂಸ್ಥೆಯನ್ನು ವಿಶ್ವಪ್ರಧಾನ್‌ ಕಮರ್ಶಿಯಲ್‌ ಪ್ರೈವೇಟ್‌ ಲಿ.ನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಅದಾನಿ ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದರು.

NDTV ಭಾರತದಲ್ಲಿನ ವೀಕ್ಷಣೆಗಳು ಡಿಸೆಂಬರ್‌ನಲ್ಲಿ 45 ಮಿಲಿಯನ್‌ಗೆ ಇಳಿದಿದೆ ಎಂದು ನ್ಯೂಸ್‌ಲಾಂಡ್ರಿ ವರದಿ ಮಾಡಿದೆ. ಅಧಾನಿ ಸಮೂಹ ಅದನ್ನು ಸ್ವೀಕರಿಸುವ ಮೊದಲು  98 ಮಿಲಿಯನ್ ಇತ್ತು. ಇದು ಎನ್‌ಡಿಟಿವಿ ವೀಕ್ಷಕರಲ್ಲಿ 54 ಪ್ರತಿಶತದಷ್ಟು ಕಡಿತವಾಗಿರವುದನ್ನು ಸೂಚಿಸುತ್ತದೆ.

ಅದಾನಿ ಗುಂಪು ಮಾರ್ಚ್ 2022ರಲ್ಲಿ ಹಣಕಾಸು ಮಾಧ್ಯಮ ಸಂಸ್ಥೆ BQ ಕ್ವಿಂಟಿಲಿಯನ್ ಬಿಸಿನೆಸ್ ಮೀಡಿಯಾವನ್ನು ಕೂಡ ಖರೀದಿಸಿತ್ತು. ಅದಾನಿ ಸಮೂಹವು ಕ್ಯುಬಿಎಂಎಲ್‌ನಲ್ಲಿ ಶೇ 49ರಷ್ಟು ಷೇರುಗಳನ್ನು  ಮೊದಲು ಖರೀದಿಸಿತ್ತು. ಬಿಕ್ಯು ಪ್ರೈಮ್‌ಗೆ ಈ ಮೊದಲು ಬ್ಲೂಮ್‌ಬರ್ಗ್‌ ಕ್ವಿಂಟ್‌ ಎನ್ನುವ ಹೆಸರಿತ್ತು. ಅಮೆರಿಕದ ಬ್ಲೂಮ್‌ಬರ್ಗ್‌ ಮೀಡಿಯಾ ಮತ್ತು ರಾಘವ್ ಬಹ್ಲ್‌ ಒಡೆತನದ ಕ್ವಿಂಟಿಲಿಯನ್ ಮೀಡಿಯಾದ ಜಂಟಿ ಸಂಸ್ಥೆ ಇದಾಗಿತ್ತು.

ಇದನ್ನು ಓದಿ: ಇಸ್ರೇಲ್‌ನ ಯುದ್ಧ ದಾಹಕ್ಕೆ ತಮ್ಮದೇ ದೇಶದ ಮೂವರು ನಾಗರಿಕರು ಬಲಿ; ಪ್ರಮಾದವಾಯ್ತೆಂದ ನೆತನ್ಯಾಹು

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪತಂಜಲಿಯ ಪತನ ಶುರು: ‘ಸೋನ್ ಪಾಪ್ಡಿ’ಯಿಂದ ಮೂವರಿಗೆ ಜೈಲು ಶಿಕ್ಷೆ

0
ಪತಂಜಲಿ ನವರತ್ನ ಎಲೈಚಿ ಸೋನ್ ಪಾಪ್ಡಿ(ಸಾಂಪ್ರದಾಯಿಕ ಸಿಹಿತಿಂಡಿ) ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲವಾದ ಹಿನ್ನೆಲೆ ಉತ್ತರಾಖಂಡದ ನ್ಯಾಯಾಲಯವು ಪತಂಜಲಿ ಆಯರ್ವೇದ ಲಿಮಿಟೆಡ್‍ನ ಸಹಾಯಕ ವ್ಯವಸ್ಥಾಪಕ ಸೇರಿದಂತೆ ಮೂರು ಮಂದಿಗೆ ಆರು ತಿಂಗಳ ಜೈಲು ಶಿಕ್ಷೆ...