Homeಅಂತರಾಷ್ಟ್ರೀಯಇಸ್ರೇಲ್‌ನ ಯುದ್ಧ ದಾಹಕ್ಕೆ ತಮ್ಮದೇ ದೇಶದ ಮೂವರು ನಾಗರಿಕರು ಬಲಿ; ಪ್ರಮಾದವಾಯ್ತೆಂದ ನೆತನ್ಯಾಹು

ಇಸ್ರೇಲ್‌ನ ಯುದ್ಧ ದಾಹಕ್ಕೆ ತಮ್ಮದೇ ದೇಶದ ಮೂವರು ನಾಗರಿಕರು ಬಲಿ; ಪ್ರಮಾದವಾಯ್ತೆಂದ ನೆತನ್ಯಾಹು

- Advertisement -
- Advertisement -

ಇಸ್ರೇಲ್‌ ಅ.7ರಿಂದ ಪ್ಯಾಲೆಸ್ತೀನ್‌ ಮೇಲೆ ನಿರಂತರ ಬಾಂಬ್‌ ದಾಳಿಯನ್ನು ನಡೆಸುತ್ತಿದೆ. ಈವರೆಗೆ ಗಾಝಾದಲ್ಲಿ 19,000ಕ್ಕೂ ಅಧಿಕ ನಾಗರಿಕರು ಸಾವನ್ನಪ್ಪಿದ್ದಾರೆ. ಇಸ್ರೇಲ್‌ ನಡೆಸುತ್ತಿರುವ ಯುದ್ಧವನ್ನು ಹಲವು ದೇಶಗಳು ಖಂಡಿಸಿ ತಕ್ಷಣದ ಕದನ ವಿರಾಮಕ್ಕೆ ಆಗ್ರಹಿಸಿತ್ತು. ಯುಎನ್‌ ಕೂಡ ಹಲವು ಬಾರಿ ಕದನ ವಿರಾಮಕ್ಕೆ ನಿರ್ಣಯ ಮಂಡಿಸಿದೆ. ಆದರೆ ಇಸ್ರೇಲ್‌ ಮಾತ್ರ ಪ್ಯಾಲೆಸ್ತೀನ್‌ನ ಮಕ್ಕಳು, ಮಹಿಳೆಯರು, ನಾಗರಿಕರ ಹತ್ಯಾಕಾಂಡವನ್ನು ಮುಂದುವರಿಸಿದೆ. ಇದೀಗ ಇಸ್ರೇಲ್‌ನ ಯುದ್ಧದಾಹಕ್ಕೆ ತನ್ನದೇ ದೇಶದ ಒತ್ತೆಯಾಳುಗಳನ್ನು ಇಸ್ರೇಲ್‌ ಮಿಲಿಟರಿ ಪಡೆ ಹತ್ಯೆ ಮಾಡಿದ್ದು, ಇಸ್ರೇಲ್‌ ಪ್ರಧಾನಿ ನೆತನ್ಯಾಹು ಇದು ತಿಳಿಯದೆ ನಡೆದ ದೊಡ್ಡ ಪ್ರಮಾದವೆಂದು ಹೇಳಿಕೊಂಡಿದ್ದಾರೆ.

ಹಮಾಸ್‌ ಜೊತೆಗಿನ ಸಂಘರ್ಷದ ವೇಳೆ ಮೂವರು ಇಸ್ರೇಲ್‌ನ ಒತ್ತೆಯಾಳುಗಳನ್ನು ಕೊಲ್ಲಲಾಯಿತು. ಗಾಝಾದಲ್ಲಿ ಯುದ್ಧದ ಸಮಯದಲ್ಲಿ ಮೂವರು ಇಸ್ರೇಲ್‌ ಒತ್ತೆಯಾಳುಗಳನ್ನು ತಮಗೆ ಅಪಾಯ ತರಬಹುದು ಎಂದು ತಪ್ಪಾಗಿ ಭಾವಿಸಿ ಇಸ್ರೇಲ್‌ ಸೇನೆ ಗುಂಡು ಹಾರಿಸಿ ಹತ್ಯೆ ಮಾಡಿದೆ. ಈ ಘಟನೆಯ ತನಿಖೆಯಲ್ಲಿ ಸಂಪೂರ್ಣ ಪಾರದರ್ಶಕತೆ ವಹಿಸಲಾಗುವುದು ಮತ್ತು ಮೃತರ ಕುಟುಂಬಕ್ಕೆ ಸಂತಾಪ ವ್ಯಕ್ತಪಡಿಸುವುದಾಗಿ ಇಸ್ರೇಲ್‌ ಮಿಲಿಟರಿ ಹೇಳಿದೆ.

ಮೃತ ಒತ್ತೆಯಾಳುಗಳಲ್ಲಿ ಕಿಬ್ಬುತ್ಜ್ ಕ್ಫಾರ್‌ನಿಂದ ಅಪಹರಿಸಲ್ಪಟ್ಟ ಯೋತಮ್ ಹೈಮ್, ಕಿಬ್ಬುತ್ಜ್ ನಿರ್ ಆಮ್‌ನಿಂದ ಅಪಹರಿಸಲ್ಪಟ್ಟ ಸಮರ್ ತಲಲ್ಕಾ ಮತ್ತು ಅಲೋನ್ ಶಮ್ರಿಜ್ ಎಂದು ಗುರುತಿಸಲಾಗಿದೆ. ಮೂವರು ಕೂಡ ಅಕ್ಟೋಬರ್ 7ರಿಂದ ಹಮಾಸ್‌ನ ವಶದಲ್ಲಿದ್ದರು. ಮೃತ ಯೋತಮ್ ಒಬ್ಬ ಪ್ರತಿಭಾನ್ವಿತ ಸಂಗೀತಗಾರನಾಗಿದ್ದ ಮತ್ತು ಸಮೀರ್ ಒಬ್ಬ ಸೈಕ್ಲಿಸ್ಟ್ ಆಗಿದ್ದ ಎಂದು ವರದಿ ತಿಳಿಸಿದೆ.

ಘಟನೆ ಬಗ್ಗೆ ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಮಾಹಿತಿ ನೀಡಿದ್ದು, ತಪ್ಪಿನಿಂದ ಪ್ರಮಾದವಾಗಿದೆ. ಇದು ನಮಗೆ ನೋವಿನ ಸಂಗತಿಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಪ್ರತಿಕ್ರಿಯಿಸಿದ್ದು, ಐಡಿಎಫ್‌ನಿಂದ ದೊಡ್ಡ ಪ್ರಮಾದ ನಡೆದುಹೋಗಿದೆ. ಎಲ್ಲಾ ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಮನೆಗೆ ಕರೆತರುವ ಪ್ರಯತ್ನವನ್ನು ಮುಂದುವರಿಸುತ್ತೇವೆ. ಇಡೀ ಇಸ್ರೇಲ್ ಜನರಿಗೆ ನಾನು ತಲೆಬಾಗುತ್ತೇನೆ ಮತ್ತು ಅಪಹರಣಕ್ಕೊಳಗಾದ ನಮ್ಮ ಮೂವರು ಪುತ್ರರ ಸಾವಿಗೆ ಸಂತಾಪ ಸೂಚಿಸುತ್ತೇನೆ. ನನ್ನ ಹೃದಯವು ಕಷ್ಟದ ಸಮಯದಲ್ಲಿ ದುಃಖಿತ ಕುಟುಂಬಗಳಿಗೆ ಜೊತೆಗೆ ನಿಲ್ಲುತ್ತದೆ ಎಂದು ಹೇಳಿದ್ದಾರೆ.

ಘಟನೆ ಬಗ್ಗೆ ಒತ್ತೆಯಾಳುಗಳು ಮತ್ತು ಕಾಣೆಯಾದ ವ್ಯಕ್ತಿಗಳ ಕುಟುಂಬಗಳನ್ನು ಪ್ರತಿನಿಧಿಸುವ ವೇದಿಕೆಯು ಖಂಡಿಸಿದೆ.

ಅಕ್ಟೋಬರ್ 7 ರಂದು ಹಮಾಸ್, ಇಸ್ರೇಲ್‌ ಪಟ್ಟಣಗಳಲ್ಲಿ ನಡೆಸಿದ ದಾಳಿಯಲ್ಲಿ 1,200 ಜನರ ಹತ್ಯೆ ನಡೆದಿತ್ತು. 240 ಒತ್ತೆಯಾಳುಗಳನ್ನು ಸೆರೆಹಿಡಿಯಲಾಗಿತ್ತು. ಇಸ್ರೇಲ್ ನಂತರ ಪ್ರತಿದಾಳಿಯನ್ನು ಪ್ರಾರಂಭಿಸಿ, ಈವರೆಗೆ ಗಾಝಾದಲ್ಲಿ 19,000 ಜನರನ್ನು ಇಸ್ರೇಲ್‌ ಮಿಲಿಟರಿ ಹತ್ಯೆ ಮಾಡಿದೆ ಎಂದು ಗಾಝಾದ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ.

ನವೆಂಬರ್ ಅಂತ್ಯದಲ್ಲಿ ಕದನ ವಿರಾಮದ ಸಮಯದಲ್ಲಿ 240 ಮಹಿಳೆಯರು ಮತ್ತು ಅಪ್ರಾಪ್ತರ ಬಿಡುಗಡೆಗೆ ಪ್ರತಿಯಾಗಿ ಹಮಾಸ್‌ 100ಕ್ಕೂ ಹೆಚ್ಚು ಇಸ್ರೇಲ್‌ ಮಹಿಳೆಯರು, ಮಕ್ಕಳು ಮತ್ತು ವಿದೇಶಿಯರನ್ನು ಬಿಡುಗಡೆ ಮಾಡಿತ್ತು. ಇಸ್ರೇಲ್ ಒತ್ತೆಯಾಳಾಗಿರಿಸಿದ್ದ ಗಾಝಾದ ನಾಗರಿಕರನ್ನು ಕ್ಷುಲ್ಲಕವಾಗಿ ಇಸ್ರೇಲ್‌ ಸೈನಿಕರ ಮೇಲೆ ಕಲ್ಲು ತೂರಾಟ ಸೇರಿ ಸಣ್ಣ ಅಪರಾಧಗಳಿಗಾಗಿ ಬಂಧಿಸಲಾಗಿತ್ತು. ತಾತ್ಕಾಲಿಕ ಕದನ ವಿರಾಮದ ಬಳಿಕ ಇಸ್ರೇಲ್‌ ಮತ್ತೆ ಯುದ್ಧ ಆರಂಭಿಸಿದಾಗ ಯುಎನ್‌ ವಿಶ್ವಸಂಸ್ಥೆಯಲ್ಲಿ ಕದನ ವಿರಾಮಕ್ಕೆ ಒತ್ತಾಯಿಸಿ ನಿರ್ಣಾಯವನನ್ನು ಅಂಗೀಕರಿಸಿತ್ತು. ಆದರೆ ಅಮೆರಿಕ ಇದನ್ನು ವಿಟೊ ಅಧಿಕಾರ ಬಳಸಿ ರದ್ದು ಮಾಡಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...