Homeಮುಖಪುಟಲೋಕಸಭೆ ಭದ್ರತಾ ಲೋಪ ಪ್ರಕರಣ: ‘ಸಂದೇಶ’ ರವಾನಿಸುವುದೆ ಏಕೈಕ ಉದ್ದೇಶವಾಗಿತ್ತಾ?

ಲೋಕಸಭೆ ಭದ್ರತಾ ಲೋಪ ಪ್ರಕರಣ: ‘ಸಂದೇಶ’ ರವಾನಿಸುವುದೆ ಏಕೈಕ ಉದ್ದೇಶವಾಗಿತ್ತಾ?

- Advertisement -
- Advertisement -

‘ಭದ್ರತೆ ಉಲ್ಲಂಘಿಸಿ ಸಂಸತ್ ಪ್ರವೇಶಿಸುವ ಯೋಜನೆಯಲ್ಲಿ ಯಾವುದೇ ರೀತಿಯ ಭಯೋತ್ಪಾದನೆ ಉದ್ದೇಶವಿರಲಿಲ್ಲ, ಸರ್ಕಾರಕ್ಕೆ ಹಾಗೂ ಮಾಧ್ಯಮಗಳಿಗೆ ಸಂದೇಶ ರವಾನಿಸುವುದು ಮಾತ್ರ ಮುಖ್ಯವಾಗಿತ್ತು’ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಸಿಎನ್ಎನ್-ನ್ಯೂಸ್ ವರದಿ ಮಾಡಿದೆ.

ಬಿಗಿ ಭದ್ರತೆ ಉಲ್ಲಂಘಿಸಿ ಸಂಸತ್ ಭವನ ಪ್ರವೇಶಿಸಿ, ಹಳದಿ ಬಣ್ಣದ ‘ಕಲರ್ ಬಾಂಬ್’ ಸಿಡಿಸಿದ ಕೃತ್ಯವು ಕೇವಲ ಸಂದೇಶ ರವಾನಿಸುವುದಾಗಿತ್ತು ಎಂದು ಪ್ರಕರಣದ ಆರನೇ ಆರೋಪಿ ಹಾಗೂ ಮಾಸ್ಟರ್ ಮೈಂಡ್ ಲಲಿತ್ ಮೋಹನ್ ಝಾ ಅವರ ವಿಚಾರಣೆಯಲ್ಲಿ ತಿಳಿದುಬಂದಿದೆ ಎಂದು ವರದಿ ಮಾಡಿದೆ.

‘ಭದ್ರತೆ ಉಲ್ಲಂಘಿಸುವುದಕ್ಕೂ ಮೊದಲು ಝಾ ಅವರು ಸಂಸತ್ತು ಮತ್ತು ಅದರ ಸುತ್ತಮುತ್ತಲಿನ ಭದ್ರತಾ ವ್ಯವಸ್ಥೆಯನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಾರೆ. ಮಾಧ್ಯಮಗಳ ಗಮನ ಸೆಳೆಯಬೇಕಾದರೆ ‘ಮೂರ್ಖತನದ ಮಾರ್ಗ’ದ ಅಗತ್ಯವಿದೆ ಎಂಬುದು ಗುಂಪಿಗೆ ತಿಳಿದಿತ್ತು. ಇದೇ ಕಾರಣಕ್ಕೆ ಸಂಸತ್ತಿನಲ್ಲಿ ಗದ್ದಲ ಉಂಟು ಮಾಡಿ, ದೇಶಕ್ಕೆ ಹಾಗೂ ವ್ಯವಸ್ಥೆಗೆ ಸಂದೇಶ ರವಾನಿಸುವುದು ಅವರ ಏಕೈಕ ತಂತ್ರವಾಗಿತ್ತು ಎನ್ನಲಾಗಿದೆ.

ಭದ್ರತೆ ಉಲ್ಲಂಘಿಸಿ ಲೋಕಸಭೆ ಪ್ರವೇಶಿಸಲು ನಿರ್ಧರಿಸಿದ ನಂತರ ಝಾ ಅವರು ನಾಲ್ವರನ್ನು ಒಳಗೊಂಡ ಎರಡು ಪ್ರತ್ಯೇಕ ತಂಡಗಳನ್ನು ರಚಿಸಿದ್ದರು. ಲೊಕಸಭೆಯ ಭಾರಿ ಭದ್ರತಾ ವ್ಯವಸ್ಥೆಗಳಿಂದಾಗಿ ಸದನ ಪ್ರವೇಶಿಸುವ ಯೋಜನೆ ವಿಫಲವಾದರೂ, ಪ್ರಬಲವಾದ ಸಂದೇಶ ಕಳುಹಿಸಲು ಆವರಣದ ಹೊರಗೆ ಮತ್ತಿಬ್ಬರು ಹಣದಿ ಬಣ್ಣದ ಸ್ಮೋಕ್ ಬಾಂಬ್ ಹಿಡಿದು ಪ್ರತಿಭಟನೆ ನಡೆಸಲು ಸಿದ್ಧರಾಗಿದ್ದರು. ಆ ಮೂಲಕ ಆಡಳಿತದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬ ಸಂದೇಶವನ್ನು ಶಾಸಕಾಂಗ ಮತ್ತು ಮಾಧ್ಯಮಗಳಿಗೆ ಅವರು ತಮ್ಮ ಪ್ರತಿಭಟನೆ ಮೂಲಕ ಹೇಳಿದ್ದಾರೆ ಎನ್ನಲಾಗಿದೆ.

ಲೋಕಸಭೆ ಹೊರಗೆ ನಡೆದ ಗದ್ದಲವನ್ನು ಇನ್ಸ್ಟ್ರಾಗ್ರಾಮ್ ಮೂಲಕ ಲೈವ್-ಸ್ಟ್ರೀಮ್ ಮಾಡಿದ ನಂತರ, ನನ್ನನ್ನು ಪೊಲೀಸರು ಬಂಧಿಸುತ್ತಾರೆ ಎಂಬುದನ್ನು ಅರಿತ ಝಾ, ಬಸ್ ಮೂಲಕ ರಾಜಸ್ಥಾನಕ್ಕೆ ತೆರಳಿದ್ದರು. ಅಲ್ಲಿ ತಮ್ಮ ಮೊಬೈಲ್‌ನಲ್ಲಿದ್ದ ಎಲ್ಲ ತಾಂತ್ರಿಕ ಪುರಾವೆಗಳನ್ನು ನಾಶಪಡಿಸಿದ್ದರು.

ಆರೋಪಿಗಳಿಗೆ ಯಾವುದೆ ವಿದೇಶಿ ಸಂಪರ್ಕವಿಲ್ಲ, ಅವರು ಹಣ ಪಡೆದುಕೊಂಡಿದ್ದಾರೆ ಎಂಬುದಕ್ಕೂ ಯಾವುದೆ ವಿವರಗಳು ಇಲ್ಲಿಯವರೆಗೆ ಸಿಕ್ಕಿಲ್ಲ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸಂಸತ್ ಆವರಣದಲ್ಲಿ ಗದ್ದಲವನ್ನು ಸೃಷ್ಟಿಸಲು ಅವರಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಯಾರಾದರೂ ಪ್ರಚೋದನೆ ನೀಡಿದ್ದಾರಾ ಅಥವಾ ಯಾವುದಾದರೂ ರಾಜಕೀಯ ಪಕ್ಷಗಳೊಂದಿಗೆ ಆರೋಪಿಗಳ ಒಡನಾಟ ಇತ್ತ ಎಂಬುದರ ಬಗ್ಗೆ ತನಿಖಾ ತಂಡಗಳು ಹುಡುಕಾಟ ನಡೆಸುತ್ತಿವೆ.

ಭದ್ರತಾ ಉಲ್ಲಂಘನೆ ತನಿಖೆ ವಿಸ್ತರಣೆ:

ಗುಪ್ತಚರ ಇಲಾಖೆ ಉನ್ನತ ಮೂಲಗಳ ಪ್ರಕಾರ, ಆರೋಪಿಗಳ ಸಿದ್ಧಾಂತ ಮಾತ್ರ ಅವರನ್ನು ಈ ಮಟ್ಟಿಗೆ ಪ್ರೇರೇಪಿಸಲು ಸಾಧ್ಯವಿಲ್ಲ. ಆದ್ದರಿಂದ, ಲೋಕಸಭೆಯ ಭದ್ರತಾ ಉಲ್ಲಂಘನೆಯ ತನಿಖೆಯ ವ್ಯಾಪ್ತಿಯನ್ನು ವಿಸ್ತರಿಸಲು ತನಿಖಾ ತಂಡಗಳು ಚಿಂತನೆ ನಡೆಸಿವೆ ಎನ್ನಲಾಗಿದೆ.

ಆರು ಜನರ ಬಂಧನ:

ಪ್ರಕರಣದಲ್ಲಿ ಒಟ್ಟು ಆರು ಜನ ಪಾಲ್ಗೊಂಡಿದ್ದಾರೆ ಎನ್ನಲಾಗಿದ್ದು, ರಾಜಸ್ಥಾನದಲ್ಲಿ ಪತ್ತೆಯಾಗಿರುವ ಲಲಿತ್ ಝಾ ಈ ಗುಂಪಿನ ನಾಯಕ ಎನ್ನಲಾಗುತ್ತಿದೆ. ವೃತ್ತಿಯಲ್ಲಿ ಶಿಕ್ಷಕನಾಗಿರುವ ಲಲಿತ್ ಕೋಲ್ಕತ್ತಾದ ನಿವಾಸಿ. ಅವರೆಲ್ಲರೂ ‘ಭಗತ್ ಸಿಂಗ್ ಫ್ಯಾನ್ ಪೇಜ್’ ಅನ್ನು ನಿರ್ವಹಿಸುತ್ತಿದ್ದರು. ಹುತಾತ್ಮ ಭಗತ್ ಸಿಂಗನಂತೆ ಏನನ್ನಾದರೂ ಕ್ರಾಂತಿ ಮಾಡಲು ಬಯಸಿದ್ದರು ಎನ್ನಲಾಗಿದ್ದು, ಲಲಿತ್ ಝಾ, ಮನೋರಂಜನ್ ಡಿ, ಸಾಗರ್ ಶರ್ಮಾ, ನೀಲಂ ಆಜಾದ್, ಅಮೋಲ್ ಶಿಂಧೆ ಅವರು ಬುಧವಾರ ಸಂಸತ್ತಿನ ಆಸುಪಾಸಿನಲ್ಲಿದ್ದ ಸೆರೆಸಿಕ್ಕ ಪ್ರಮುಖ ಆರೋಪಿಗಳಾಗಿದ್ದಾರೆ.

ಇದನ್ನೂ ಓದಿ; ಲೋಕಸಭೆ ಭದ್ರತಾ ಲೋಪ; ಪ್ರತಾಪ್ ಸಿಂಹ ಅಡಗಿ ಕುಳಿತಿರುವುದೇಕೆ ಎಂದ ಕಾಂಗ್ರೆಸ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಹುಲ್ ಗಾಂಧಿಯಯವರನ್ನು ಕೋರ್ಟ್‌ಗೆ ಎಳೆದಿದ್ದಕ್ಕೆ ಬಿಎಸ್‌ವೈ ವಿರುದ್ಧ ಕಾಂಗ್ರೆಸ್ ಸೇಡು; ಬಿಜೆಪಿ ಆರೋಪ

0
'ರಾಜ್ಯದ ಕಾಂಗ್ರೆಸ್ ಸರ್ಕಾರವು ಮಾಜಿ ಮುಖ್ಯಮಂತ್ರಿ ಬಿ.ಎಸ್ ಒಳಗೊಂಡಿರುವ ಪೋಕ್ಸೋ ಪ್ರಕರಣದಲ್ಲಿ ಸೇಡಿನ ರಾಜಕಾರಣ ಮಾಡುತ್ತಿದೆ. ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿಯವರನ್ನು ಕೋರ್ಟ್‌ಗೆ ಎಳೆದಿದ್ದಕ್ಕೆ ಯಡಿಯೂರಪ್ಪ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದಾರೆ" ಎಂದು ರಾಜ್ಯ...